ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ. ಮುಂದುವರಿದು ಹೇಳುವುದೇನೆಂದರೆ: ಇದು ಉಮ್ರಾ ನಿರ್ವಹಿಸುವ ವಿಧಾನ, ನಿಯಮ ಮತ್ತು ಶಿಷ್ಟಾಚಾರಗಳ ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಉಮ್ರಾ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಇದನ್ನು ಅಲ್ಲಾಹನ ಗೌರವಾನ್ವಿತ ಮುಖವನ್ನು ಬಯಸಿ ಅವನಿಗಾಗಿ ಮೀಸಲುಗೊಳಿಸುವಂತೆ ಮತ್ತು ಇದರಿಂದ ಸರ್ವ ಮುಸ್ಲಿಮರಿಗೆ ಪ್ರಯೋಜನವಾಗುವಂತೆ ಮಾಡಲು ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ.
ಭಾಷೆ: lang_kn
ಸಿದ್ಧಪಡಿಸಿದವರು: ವಿವಿಧ ಭಾಷೆಗಳಲ್ಲಿ ಇಸ್ಲಾಮಿ ವಿಷಯಗಳ ಸೇವಾ ಸಮಿತಿಯ ಜ್ಞಾನ ಮಂಡಳಿ
ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
ಮುಂದುವರಿದು ಹೇಳುವುದೇನೆಂದರೆ:
ಇದು ಉಮ್ರಾ ನಿರ್ವಹಿಸುವ ವಿಧಾನ, ನಿಯಮ ಮತ್ತು ಶಿಷ್ಟಾಚಾರಗಳ ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಉಮ್ರಾ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ.
ಇದನ್ನು ಅಲ್ಲಾಹನ ಗೌರವಾನ್ವಿತ ಮುಖವನ್ನು ಬಯಸಿ ಅವನಿಗಾಗಿ ಮೀಸಲುಗೊಳಿಸುವಂತೆ ಮತ್ತು ಇದರಿಂದ ಸರ್ವ ಮುಸ್ಲಿಮರಿಗೆ ಪ್ರಯೋಜನವಾಗುವಂತೆ ಮಾಡಲು ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ.
ವಿವಿಧ ಭಾಷೆಗಳಲ್ಲಿ ಇಸ್ಲಾಮಿ ವಿಷಯಗಳ ಸೇವಾ ಸಮಿತಿಯ ಜ್ಞಾನ ಮಂಡಳಿ
ಮುನ್ನುಡಿ
ಮೊದಲನೆಯದಾಗಿ: ಆರಾಧನೆಯು ಸ್ವೀಕಾರವಾಗವ ಷರತ್ತುಗಳು:
ಅಲ್ಲಾಹನು ಆರಾಧನೆಯನ್ನು ಸ್ವೀಕರಿಸಬೇಕಾದರೆ ಅದು ಎರಡು ಷರತ್ತುಗಳನ್ನು ಪೂರೈಸಿರಬೇಕು:
ಎರಡನೆಯದಾಗಿ : ಉಮ್ರಾ ಮಾಡುವ ವಿಧಾನ ಮತ್ತು ಅದರ ನಿಯಮಗಳನ್ನು ಕಲಿಯುವುದರ ವಿಧಿ.
ಸರ್ವಶಕ್ತನಾದ ಅಲ್ಲಾಹನಿಗೆ ಆರಾಧನೆ ಸಲ್ಲಿಸಲು ಇಚ್ಛಿಸುವ ವ್ಯಕ್ತಿ ಪ್ರವಾದಿ (ಸ) ರವರ ಮಾರ್ಗದರ್ಶನವನ್ನು ಕಲಿಯಬೇಕಾದುದು ಅತ್ಯಗತ್ಯ; ಇದರಿಂದ ಅವನ ಕರ್ಮಗಳು ಸುನ್ನತ್ತಿನೊಂದಿಗೆ ಹೊಂದಿಕೊಳ್ಳುತ್ತದೆ. ಪ್ರವಾದಿ (ಸ) ರವರು ಸದಾ ಜನರನ್ನು ತನ್ನನ್ನು ಅನುಕರಣೆ ಮಾಡುತ್ತಾ ತನ್ನ ಮಾರ್ಗದರ್ಶನವನ್ನು ಅನುಸರಿಸಲು ಪ್ರೋತ್ಸಾಹಿಸುತ್ತಿದ್ದರು. ಮಾಲಿಕ್ ಬಿನ್ ಹುವೈರಿಸ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:"ನಾನು ನಮಾಝ್ ಮಾಡುವುದನ್ನು ನೋಡಿದಂತೆಯೇ ನೀವು ನಮಾಝ್ ಮಾಡಿರಿ." [5].(5) ಬುಖಾರಿ, ಸಂಖ್ಯೆ (6008).
ಜಾಬಿರ್ (ರ) ರಿಂದ ವರದಿ. ಅವರು ಹೇಳಿದರು:"ನಾನು ಪ್ರವಾದಿ (ಸ) ರವರನ್ನು ನೋಡಿದ್ದೇನೆ, ಅವರು ಯೌಮುನ್ನಹರ್ನ ದಿನ ತಮ್ಮ ಸವಾರಿಯಲ್ಲಿಯೇ ಕುಳಿತು ಕಲ್ಲುಗಳನ್ನು ಎಸೆಯುತ್ತಿದ್ದರು ಮತ್ತು ಹೇಳಿದರು: ನೀವು ನಿಮ್ಮ ಹಜ್ ವಿಧಿಗಳನ್ನು ಕಲಿಯಿರಿ; ಏಕೆಂದರೆ ನನಗೆ ಈ ಹಜ್ ನಂತರ ಮತ್ತೊಮ್ಮೆ ಹಜ್ ಮಾಡಲು ಸಾಧ್ಯವಾಗದಿರಬಹುದು." [6].[6] ಮುಸ್ಲಿಮ್, ಸಂಖ್ಯೆ (1297).
***
ಮೂರನೆಯದಾಗಿ: ಉಮ್ರಾದ ಶ್ರೇಷ್ಠತೆ
ಉಮ್ರಾಗೆ ಎರಡು ಶ್ರೇಷ್ಠತೆಗಳಿವೆ: ಒಂದು ಸಾಮಾನ್ಯ ಮತ್ತು ಇನ್ನೊಂದು ವಿಶೇಷ.
ಸಾಮಾನ್ಯ ಶ್ರೇಷ್ಠತೆ:
ಅಬೂ ಹುರೈರ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:"ಒಂದು ಉಮ್ರಾ ಮತ್ತೊಂದು ಉಮ್ರಾದ ನಡುವಿನ ಪಾಪಗಳನ್ನುತೊಲಗಿಸುವುದಕ್ಕೆ ಕಾರಣವಾಗುತ್ತದೆ, ಮತ್ತು ಮಕ್ಬೂಲ್ (ಸ್ವೀಕೃತ) ಹಜ್ ನ ಪ್ರತಿಫಲ ಸ್ವರ್ಗವೇ ಆಗಿದೆ." [7].[7] ಬುಖಾರಿ, ಸಂಖ್ಯೆ (1773), ಮುಸ್ಲಿಮ್, ಸಂಖ್ಯೆ (1349).
ವಿಶೇಷ ಶ್ರೇಷ್ಠತೆಯು ರಮದಾನ್ ತಿಂಗಳಿನಲ್ಲಿ ಇರುತ್ತದೆ. ಇಬ್ನು ಅಬ್ಬಾಸ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:"ರಮದಾನಿನಲ್ಲಿ ಮಾಡಿದ ಉಮ್ರಾ, ನನ್ನೊಂದಿಗೆ ಮಾಡಿದ ಹಜ್ ಗೆ ಸಮಾನವಾಗಿದೆ." [10][10] ಬುಖಾರಿ, ಸಂಖ್ಯೆ (1863), ಮುಸ್ಲಿಮ್, ಸಂಖ್ಯೆ (1256).
***
ಉಮ್ರಾದ ವಿಧಾನ:
ಮೊದಲನೆಯದಾಗಿ: ಮೀಖಾತ್ನ ನಿಯಮಗಳು:
ಮೀಖಾತ್: ಮೀಖಾತ್ ಎಂದರೆ ಹಜ್ ಅಥವಾ ಉಮ್ರಾ ನಿರ್ವಹಿಸಲು ಬಯಸುವವರು ಇಹ್ರಾಮ್ಗೆ ಪ್ರವೇಶಿಸಿಲು ಪ್ರವಾದಿ (ಸ) ರವರು ನಿಗದಿಪಡಿಸಿದ ಸ್ಥಳಗಳು.
ಹಜ್ ಅಥವಾ ಉಮ್ರಾ ಮಾಡಲು ಉದ್ದೇಶಿಸಿ ಯಾರಾದರೂ ಈ ಸ್ಥಳಗಳಲ್ಲಿ ಒಂದನ್ನು ತಲುಪಿದರೆ, ಅವರು ಅಲ್ಲಿಂದಲೇ ಇಹ್ರಾಮ್ಗೆ ಪ್ರವೇಶಿಸುವುದು ಕಡ್ಡಾಯವಾಗಿದೆ. ಇಹ್ರಾಮ್ಗೆ ಪ್ರವೇಶಿಸದೆ ಅದನ್ನು ದಾಟಲು ಅವರಿಗೆ ಅನುಮತಿಯಿಲ್ಲ.
ಈ ಮೀಖಾತ್ನ ಸ್ಥಳಗಳಿಗಿಂತಲೂ ಮಕ್ಕಾಗೆ ಹತ್ತಿರವಿರುವವರ ಮೀಖಾತ್ ಅವರು ಇರುವ ಸ್ಥಳಗಳಾಗಿವೆ. ಅವರು ಅಲ್ಲಿಂದಲೇ ಹಜ್ ಮತ್ತು ಉಮ್ರಾಕ್ಕಾಗಿ ಇಹ್ರಾಮ್ಗೆ ಪ್ರವೇಶಿಸಬೇಕು.
ಮಕ್ಕಾ ನಿವಾಸಿಗಳು ಅಥವಾ ಮಕ್ಕಾದಿಂದ ಇಹ್ರಾಮ್ ಮಾಡಲು ಉದ್ದೇಶಿಸಿರುವವರು: ಹಜ್ಜಿಗಾಗಿ ಮಕ್ಕಾದಲ್ಲಿಯೇ ಇಹ್ರಾಮ್ ಮಾಡಬೇಕು. ಆದರೆ ಉಮ್ರಾ ಸಲ್ಲಿಸಲು ಅವರು ಹರಮ್ನ ಗಡಿಯನ್ನು ದಾಟಿ, ಹೊರಗಿನ ಪ್ರದೇಶಕ್ಕೆ ಹೋಗಿ ಅಲ್ಲಿ ಇಹ್ರಾಮ್ ಮಾಡಬೇಕು. ಉದಾಹರಣೆಗೆ ತನ್ಈಂ ಮುಂತಾದ ಸ್ಥಳಗಳು.
ವಿಮಾನದಲ್ಲಿ ಪ್ರಯಾಣಿಸುವವರು ವಿಮಾನವು ಮೀಖಾತ್ಗೆ ಸಮೀಪಿಸಿದಾಗ ಇಹ್ರಾಮ್ಗೆ ಪ್ರವೇಶಿಸಬೇಕು. ಆದ್ದರಿಂದ ಅವರು ಮೀಖಾತ್ಗೆ ಸಮೀಪಿಸುವ ಮೊದಲೇ ಸಿದ್ಧರಾಗಿ ಇಹ್ರಾಮ್ನ ಬಟ್ಟೆಗಳನ್ನು ಧರಿಸಬೇಕು. ವಿಮಾನವು ಮೀಖಾತ್ಗೆ ಸಮಾನಾಂತರದಲ್ಲಿರುವಾಗ ತಕ್ಷಣವೇ ಇಹ್ರಾಮ್ನ ನಿಯ್ಯತ್ ಮಾಡಬೇಕು. ವಿಮಾನ ನಿಲ್ದಾಣದಲ್ಲಿ ಇಳಿಯುವವರೆಗೆ ಅದನ್ನು ವಿಳಂಬ ಮಾಡಲು ಅವರಿಗೆ ಅನುಮತಿ ಇಲ್ಲ. ವಿಮಾನದ ವೇಗದಿಂದಾಗಿ ಮೀಖಾತ್ನ ಸ್ಥಳವನ್ನು ಕಳೆದುಕೊಳ್ಳುವ ಭಯವಿದ್ದರೆ, ಅವರು ಮೀಖಾತ್ಗೆ ಸಮೀಪಿಸುವ ಮೊದಲೇ ತಲ್ಬಿಯಾ ಹೇಳುವ ಮೂಲಕ ಮುನ್ನೆಚ್ಚರಿಕೆ ವಹಿಸಬಹುದು.
ಎರಡನೆಯದಾಗಿ: ಇಹ್ರಾಮ್ ಪ್ರವೇಶಿಸುವ ವಿಧಾನ ಮತ್ತು ಅದರ ನಿಯಮಗಳು:
ಇಹ್ರಾಮ್ಗೆ ಪ್ರವೇಶಿಸಲು ಬಯಸುವವರು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು:
1. ಸ್ನಾನ ಮಾಡುವುದು (ಗುಸ್ಲ್): ಇದು ಪುರುಷರು ಮತ್ತು ಮಹಿಳೆಯರಿಗೆ - ಮುಟ್ಟಾದ ಮತ್ತು ಹೆರಿಗೆ ಸ್ರಾವವನ್ನು ಹೊಂದಿರುವ ಮಹಿಳೆಯರಿಗೂ ಸಹ - ಪ್ರಬಲ ಸುನ್ನತ್ ಆಗಿದೆ.
2. ಸುಗಂಧ ದ್ರವ್ಯ ಬಳಸುವುದು: ಊದ್ ಎಣ್ಣೆ ಮುಂತಾದ ಅತ್ಯುತ್ತಮವಾದ ಸುಗಂಧವನ್ನು ತಲೆ ಮತ್ತು ಗಡ್ಡಕ್ಕೆ ಹಚ್ಚಬೇಕು. ಇಹ್ರಾಮ್ಗೆ ಪ್ರವೇಶಿಸಿದ ನಂತರ ಅದರ ಸುಗಂಧ ಉಳಿದರೂ ಅದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಮಹಿಳೆಯರು ಸುಗಂಧ ದ್ರವ್ಯವನ್ನು ಹಚ್ಚಬಾರದು. ಏಕೆಂದರೆ ಅದಕ್ಕೆ ಪರಿಮಳವಿರುವುದರಿಂದ ಪರ ಪುರುಷರು ಅದನ್ನು ಅನುಭವಿಸುವ ಸಾಧ್ಯತೆಯಿದೆ.
3. ಇಹ್ರಾಮ್ನ ಬಟ್ಟೆಗಳನ್ನು ಧರಿಸುವುದು: ಇದು ಇಝಾರ್ (ಸೊಂಟದ ಕೆಳಗೆ ಧರಿಸುವ ಕೆಳವಸ್ತ್ರ) ಮತ್ತು ರಿದಾ (ಸೊಂಟದ ಮೇಲೆ ಧರಿಸುವ ಮೇಲ್ವಸ್ತ್ರ). ಇವೆರಡು ಬಿಳಿ ಬಣ್ಣದ್ದಾಗಿರುವುದು ಮತ್ತು ಸ್ವಚ್ಛವಾಗಿರುವುದು ಅಥವಾ ಹೊಸದಾಗಿರುವುದು ಸುನ್ನತ್ ಆಗಿದೆ. ಮಹಿಳೆಯರು ಅವರು ಇಷ್ಟಪಡುವ ಯಾವುದೇ ಬಟ್ಟೆಯನ್ನು ಧರಿಸಿ ಇಹ್ರಾಮ್ಗೆ ಪ್ರವೇಶಿಸಬಹುದು. ಆದರೆ ಅದು ಸೌಂದರ್ಯವನ್ನು ಪ್ರಕಟಿಸುವಂತಿರಬಾರದು. ಅದೇ ರೀತಿ, ಅವಳು ನಿಖಾಬ್ (ಮುಖದ ಮುಸುಕು) ಮತ್ತು ಕೈಗವಸುಗಳನ್ನು ಧರಿಸಬಾರದು. ಮುಖ ಮತ್ತು ಕೈಗಳನ್ನು ಬೇರೆ ಯಾವುದಾದರೂ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು.
4. ಯಾವುದಾದರೂ ನಮಾಝ್ ನಿರ್ವಹಿಸಿದ ನಂತರ ಇಹ್ರಾಮ್ಗೆ ಪ್ರವೇಶಿಸುವುದು: ಅದು ಫರ್ದ್ (ಕಡ್ಡಾಯ) ನಮಾಝ್ ಅಥವಾ ನಫಿಲ್ (ಐಚ್ಛಿಕ) ನಮಾಝ್ ಆಗಿರಬಹುದು. ಆದರೆ ಈ ನಿಯಮ ಕಡ್ಡಾಯವಲ್ಲ.
5. ಉಮ್ರಾ ನಿರ್ವಹಿಸುವವರು, "ಲಬ್ಬೈಕಲ್ಲಾಹುಮ್ಮ ಉಮ್ರತನ್" (ಓ ಅಲ್ಲಾಹ್, ನಾನು ನಿನ್ನ ಕರೆಗೆ ಉತ್ತರಿಸುತ್ತಿದ್ದೇನೆ, ಉಮ್ರಾದೊಂದಿಗೆ) ಎಂದು ಹೇಳುವುದು. ಅವನು ಇನ್ನೊಬ್ಬರ ಪರವಾಗಿ ಉಮ್ರಾ ಮಾಡುತ್ತಿದ್ದರೆ, ಹೀಗೆನ್ನಬೇಕು: 'ಲಬ್ಬೈಕಲ್ಲಾಹುಮ್ಮ ಉಮ್ರತನ್ ಅನ್ ಫುಲಾನ್' (ಓ ಅಲ್ಲಾಹ್, ನಾನು ನಿನ್ನ ಕರೆಗೆ ಉತ್ತರಿಸುತ್ತಿದ್ದೇನೆ, ಇಂತಿಂತಹವನ ಉಮ್ರಾದೊಂದಿಗೆ).
6. ಇಹ್ರಾಮ್ಗೆ ಪ್ರವೇಶಿಸಲು ಬಯಸುವವರು ತಮ್ಮ (ಹಜ್) ಕರ್ಮಗಳನ್ನು ಪೂರ್ಣಗೊಳಿಸುವುದಕ್ಕೆ ಏನಾದರೂ ಅಡ್ಡಿಯಾಗಬಹುದೆಂಬ ಭಯವಿದ್ದರೆ, ಇಹ್ರಾಮ್ಗೆ ಪ್ರವೇಶಿಸುವಾಗ ಷರತ್ತು ವಿಧಿಸಿ ಹೀಗೆ ಹೇಳಬಹುದು: "...ಲಬ್ಬೈಕಲ್ಲಾಹುಮ್ಮ ಉಮ್ರತನ್ ವ ಇನ್ ಹಬಸನೀ ಹಾಬಿಸುನ್ ಫಮಹಲ್ಲೀ ಹೈಸು ಹಬಸ್ತನೀ" (ಮತ್ತು ಯಾವುದಾದರೂ ಅಡ್ಡಿಯು ನನ್ನನ್ನು ತಡೆದರೆ, ನೀನು ನನ್ನನ್ನು ತಡೆದ ಸ್ಥಳವೇ ನನ್ನ ಇಹ್ರಾಮ್ನಿಂದ ಹೊರಬರುವ ಸ್ಥಳ). ಈ ಷರತ್ತು ವಿಧಿಸಿದವರಿಗೆ (ಹಜ್) ಕರ್ಮಗಳನ್ನು ಪೂರ್ಣಗೊಳಿಸುವುದಕ್ಕೆ ಏನಾದರೂ ಅಡ್ಡಿಯುಂಟಾದರೆ, ಅವನು ಇಹ್ರಾಮ್ನಿಂದ ಹೊರಬರಬಹುದು. ಅವರು ಏನೂ ಪ್ರಾಯಶ್ಚಿತ್ತವಾಗಿ ಕೊಡಬೇಕಾಗಿಲ್ಲ.
ನಂತರ ಹೆಚ್ಚು ಹೆಚ್ಚು ತಲ್ಬಿಯಾ ಹೇಳುವುದು: "ಲಬ್ಬೈಕಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್ ಹಮ್ದ ವನ್ನಿಅ್ಮತ ಲಕ ವಲ್ ಮುಲ್ಕ್ ಲಾ ಶರೀಕ ಲಕ್"[11]. ಪುರುಷರು ಧ್ವನಿಯನ್ನು ಎತ್ತಿ ಹೇಳಬೇಕು. ಹತ್ತಿರದಲ್ಲಿ ಪರ ಪುರುಷರು ಇಲ್ಲದಿದ್ದರೆ ಮಹಿಳೆಯರೂ ಸಹ ಧ್ವನಿಯನ್ನು ಎತ್ತಿ ಹೇಳಬೇಕು. ಇಹ್ರಾಮ್ನಲ್ಲಿರುವವರು ತಲ್ಬಿಯಾವನ್ನು ಹೆಚ್ಚು ಹೆಚ್ಚಾಗಿ ಹೇಳಬೇಕು. ವಿಶೇಷವಾಗಿ ಪರಿಸ್ಥಿತಿಗಳು ಮತ್ತು ಸಮಯಗಳು ಬದಲಾಗುವಾಗ. ಉದಾಹರಣೆಗೆ ಎತ್ತರವಾದ ಸ್ಥಳಕ್ಕೆ ಏರಿದಾಗ ಅಥವಾ ತಗ್ಗು ಪ್ರದೇಶಕ್ಕೆ ಇಳಿದಾಗ ಅಥವಾ ರಾತ್ರಿ ಅಥವಾ ಹಗಲು ಬಂದಾಗ.[11] "ಲಬ್ಬೈಕ್" ಎಂಬ ಪದದ ಅರ್ಥ: ಓ ನನ್ನ ಪರಿಪಾಲಕನೇ, ನಾನು ನಿನ್ನ ಕರೆಗೆ ಪದೇ ಪದೇ ಉತ್ತರಿಸುತ್ತಿದ್ದೇನೆ. ಇದರ ಅರ್ಥ ಮನುಷ್ಯನು ತನ್ನ ಪರಿಪಾಲಕನಿಗೆ ಉತ್ತರಿಸುವುದು ಮತ್ತು ಅವನ ವಿಧೇಯತೆಗಾಗಿ ಕಾರ್ಯೋನ್ಮುಖನಾಗುವುದು. "ಇನ್ನಲ್ ಹಮ್ದ ವನ್ನಿಅ್ಮತ ಲಕ ವಲ್ ಮುಲ್ಕ್" - "ಅಲ್-ಹಮ್ದ್" ಎಂದರೆ ಸ್ತುತಿಸಲ್ಪಡುವವನನ್ನು ಪ್ರೀತಿ ಮತ್ತು ಗೌರವದೊಂದಿಗೆ ಪರಿಪೂರ್ಣನೆಂದು ಬಣ್ಣಿಸುವುದು. ಇದನ್ನು ಮತ್ತೆ ಮತ್ತೆ ಹೇಳಿದರೆ ಅದು ಹೊಗಳಿಕೆಯಾಗುತ್ತದೆ. "ಅನ್ನಿಅ್ಮತ್" ಎಂದರೆ ಅಲ್ಲಾಹು ತನ್ನ ದಾಸರಿಗೆ ಅವರು ಬಯಸುವುದನ್ನು ಪಡೆಯಲು ಮತ್ತು ಅವರು ದ್ವೇಷಿಸುವುದನ್ನು ದೂರೀಕರಿಸಲು ದಯಪಾಲಿಸುವ ಅನುಗ್ರಹಗಳು. "ಅಲ್-ಮುಲ್ಕ್" ಎಂದರೆ ಆಧಿಪತ್ಯವು ನಿನಗೆ ಸೇರಿದೆ. ಅಲ್ಲಾಹು ಮಾತ್ರ ಮಾಲೀಕ. "ಲಾ ಶರೀಕ ಲಕ್" ಅಂದರೆ ಅಲ್ಲಾಹನಿಗೆ ಮಾತ್ರ ವಿಶೇಷವಾಗಿರುವ ಪರಿಪೂರ್ಣ ಗುಣಲಕ್ಷಣಗಳಾದ ಆಧಿಪತ್ಯ, ಸೃಷ್ಟಿ, ನಿರ್ವಹಣೆ, ದೈವಿಕತೆ ಮುಂತಾದವುಗಳಲ್ಲಿ ಅವನಿಗೆ ಯಾವುದೇ ಸಹಭಾಗಿಗಳಿಲ್ಲ. [ಉಸೈಮೀನ್ ರವರ ಮಜ್ಮೂಉ ಫತಾವಾ ವ ರಸಾಇಲ್ (22/96) ಸಂಕ್ಷಿಪ್ತ ರೂಪದಲ್ಲಿ].
ಉಮ್ರಾದಲ್ಲಿ ತಲ್ಬಿಯಾ ಪಠಿಸುವುದು ಇಹ್ರಾಮ್ ಪ್ರವೇಶಿಸುವ ಸಮಯದಿಂದ ತವಾಫ್ ಪ್ರಾರಂಭಿಸುವ ತನಕ ನಿಯಮಗೊಳಿಸಲಾಗಿದೆ.
ಇಹ್ರಾಮ್ನಲ್ಲಿರುವವರು ಇಹ್ರಾಮ್ನಿಂದ ಹೊರಬರುವವರೆಗೆ ಇಹ್ರಾಮ್ನ ನಿಷಿದ್ಧ ಕಾರ್ಯಗಳಲ್ಲಿ ಯಾವುದೂ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಕಡ್ಡಾಯವಾಗಿದೆ.
ಮೂರನೆಯದಾಗಿ: ತವಾಫ್ ಮಾಡುವ ವಿಧಾನ
ಹಜ್ಜ್ ಯಾತ್ರಿಕರು ಮಸ್ಜಿದುಲ್ ಹರಾಮ್ಗೆ ತಲುಪಿದರೆ, ತಮ್ಮ ಬಲಗಾಲನ್ನು ಮೊದಲು ಇಟ್ಟು ಮಸೀದಿಯನ್ನು ಪ್ರವೇಶಿಸುವುದು ಮತ್ತು ಮಸೀದಿಗೆ ಪ್ರವೇಶಿಸುವ ಪ್ರಾರ್ಥನೆಯನ್ನು ಹೇಳುವುದು ಸುನ್ನತ್ ಆಗಿದೆ. ಈ ವಿಷಯದಲ್ಲಿ ವರದಿಯಾದ ಅತ್ಯಂತ ಸಹೀಹಾದ ಪ್ರಾರ್ಥನೆ ಹೀಗಿದೆ: "ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್" (ಓ ಅಲ್ಲಾಹ್, ನನಗೆ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆದುಕೊಡು). ಈ ಪ್ರಾರ್ಥನೆಯನ್ನು ಯಾವುದೇ ಮಸೀದಿಗೆ ಪ್ರವೇಶಿಸುವಾಗಲೂ ಹೇಳಬಹುದು. ಇದು ಮಸ್ಜಿದುಲ್-ಹರಾಮ್ಗೆ ಮಾತ್ರ ಸೀಮಿತವಾದ ಪ್ರಾರ್ಥನೆಯಲ್ಲ.
ತವಾಫ್ ಮಾಡಲು ಬಯಸಿದರೆ ತಲ್ಬಿಯಾ ಪಠಿಸುವುದನ್ನು ನಿಲ್ಲಿಸಬೇಕು ಮತ್ತು ಇಧ್ತಿಬಾ ಮಾಡಬೇಕು. ಇಧ್ತಿಬಾ ಎಂದರೆ: ತನ್ನ ಮೇಲ್ವಸ್ತ್ರದ ಮಧ್ಯಭಾಗವನ್ನು ತನ್ನ ಬಲಗೈ ಕಂಕುಳಿನಲ್ಲಿಟ್ಟು ಅದರ ಎರಡು ತುದಿಗಳನ್ನು ತನ್ನ ಎಡ ಭುಜದ ಮೇಲೆ ಕಟ್ಟುವುದು. ತವಾಫ್ ಮುಗಿದ ನಂತರ, ಮೇಲ್ವಸ್ತ್ರವನ್ನು ತವಾಫ್ಗೆ ಮೊದಲು ಧರಿಸಿದಂತೆ ಧರಿಸಬೇಕು. ಏಕೆಂದರೆ ಇಧ್ತಿಬಾ ಕೇವಲ ತವಾಫ್ಗೆ ಮಾತ್ರ ಸಂಬಂಧಿಸಿದ್ದಾಗಿದೆ.
ನಂತರ ಹಜರುಲ್-ಅಸ್ವದ್ (ಕಪ್ಪು ಶಿಲೆ) ನ ಬಳಿಗೆ ಹೋಗಿ, ಬಲಗೈಯಿಂದ ಅದನ್ನು ಸ್ಪರ್ಶಿಸಿ ಚುಂಬಿಸಬೇಕು. ಅದನ್ನು ಚುಂಬಿಸಲು ಸಾಧ್ಯವಾಗದಿದ್ದರೆ, ಕೈಯಿಂದ ಸ್ಪರ್ಶಿಸಿ ಕೈಯನ್ನು ಚುಂಬಿಸಬೇಕು. ಕೈಯಿಂದ ಸ್ಪರ್ಶಿಸಲು ಸಾಧ್ಯವಾಗದಿದ್ದರೆ, ತನ್ನಲ್ಲಿರುವ ಕೋಲು ಮುಂತಾದ ವಸ್ತುವಿನಿಂದ ಅದನ್ನು ಸ್ಪರ್ಶಿಸಿ ಚುಂಬಿಸಬೇಕು. ಅದು ಕೂಡ ಸಾಧ್ಯವಾಗದಿದ್ದರೆ, ಅದರ ಕಡೆಗೆ ಮುಖ ಮಾಡಿ ಕೈಯಿಂದ ಸಂಜ್ಞೆ ಮಾಡಬೇಕು. ಆದರೆ ಕೈಯನ್ನು ಚುಂಬಿಸಬಾರದು. (ಅದನ್ನು ಚುಂಬಿಸುವುದಕ್ಕಾಗಿ ಅಥವಾ ಸ್ಪರ್ಶಿಸುವುದಕ್ಕಾಗಿ) ನೂಕುನುಗ್ಗಲು ಮಾಡಿಕೊಂಡು ಜನರನ್ನು ತಳ್ಳುವುದು ಮತ್ತು ಅವರಿಂದ ತೊಂದರೆ ಅನುಭವಿಸುವುದು ಶ್ರೇಷ್ಠವಾದ ರೀತಿಯಲ್ಲ.
ಅದನ್ನು ಸ್ಪರ್ಶಿಸುವಾಗ ಅಥವಾ ಅದರ ಕಡೆಗೆ ಸಂಜ್ಞೆ ಮಾಡುವಾಗ, "ಅಲ್ಲಾಹು ಅಕ್ಬರ್" (ಅಲ್ಲಾಹು ಅತ್ಯಂತ ದೊಡ್ಡವನು) ಎಂದು ಹೇಳಬೇಕು.
ನಂತರ ಬಲಕ್ಕೆ ತಿರುಗಿ ಕಅಬಾ ತನ್ನ ಎಡಭಾಗದಲ್ಲಿ ಬರುವಂತೆ ಅದಕ್ಕೆ ಪ್ರದಕ್ಷಿಣೆ ಮಾಡಬೇಕು. ರುಕ್ನುಲ್-ಯಮಾನಿಯನ್ನು ತಲುಪಿದಾಗ ಅದನ್ನು ಸ್ಪರ್ಶಿಸಬೇಕು. ಆದರೆ ಚುಂಬಿಸಬಾರದು. ಸ್ಪರ್ಶಿಸಲು ಸಾಧ್ಯವಾಗದಿದ್ದರೆ, ಅದಕ್ಕಾಗಿ ಜನರನ್ನು ತಳ್ಳಬಾರದು. ಅದರ ಕಡೆಗೆ ಸಂಜ್ಞೆಯನ್ನೂ ಮಾಡಬಾರದು.
ರುಕ್ನುಲ್-ಯಮಾನಿ ಮತ್ತು ಹಜರುಲ್-ಅಸ್ವದ್ ನ ನಡುವೆ ಇದನ್ನು ಪಠಿಸಬೇಕು: "ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ ವ ಫಿಲ್ ಆಖಿರತಿ ಹಸನತನ್ ವ ಕಿನಾ ಅಧಾಬನ್ನಾರ್" (ನಮ್ಮ ಪರಿಪಾಲಕನೇ, ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲಿ ಒಳಿತನ್ನು ದಯಪಾಲಿಸು, ಮತ್ತು ನಮ್ಮನ್ನು ನರಕದ ಶಿಕ್ಷೆಯಿಂದ ರಕ್ಷಿಸು).
ಹಜರುಲ್-ಅಸ್ವದ್ನ ಬಳಿಯಿಂದ ಹಾದುಹೋಗುವಾಗಲೆಲ್ಲಾ ತನ್ನ ಕೈಯಿಂದ ಸಂಜ್ಞೆ ಮಾಡಿ "ಅಲ್ಲಾಹು ಅಕ್ಬರ್" ಎಂದು ಹೇಳಬೇಕು.
ತವಾಫ್ನ ಉಳಿದ ಸಮಯದಲ್ಲಿ ತನಗೆ ಇಷ್ಟವಾದ ಯಾವುದೇ ಝಿಕ್ರ್ , ದುಆ ಮತ್ತು ಕುರ್ಆನ್ ಪಠಣವನ್ನು ಮಾಡಬಹುದು.
ಮೊದಲ ಮೂರು ಸುತ್ತುಗಳಲ್ಲಿ ಮಾತ್ರ ರಮಲ್ ಮಾಡುವುದು ಸುನ್ನತ್ ಆಗಿದೆ. ರಮಲ್ ಎಂದರೆ ಸಣ್ಣ ಸಣ್ಣ ಹೆಜ್ಜೆಗಳೊಂದಿಗೆ ವೇಗವಾಗಿ ನಡೆಯುವುದು. ಉಳಿದ ನಾಲ್ಕು ಸುತ್ತುಗಳಲ್ಲಿ ರಮಲ್ ಇಲ್ಲ. ಸಾಮಾನ್ಯವಾಗಿ ನಡೆಯುವಂತೆ ನಡೆಯಬೇಕು.
ನಂತರ ಕಅಬಾವನ್ನು ಅಥವಾ ಅದರ ದಿಕ್ಕನ್ನು ನೋಡುವವರೆಗೆ ಸಫಾ ಬೆಟ್ಟವನ್ನು ಹತ್ತಿ ಕಅಬಾದ ಕಡೆಗೆ ಮುಖ ಮಾಡಬೇಕು. ಅಲ್ಲಿ ಅಲ್ಲಾಹನ ಏಕದೇವತ್ವವನ್ನು ಮತ್ತು ಮಹಾನತೆಯನ್ನು ಘೋಷಿಸುತ್ತಾ ಹೀಗೆ ಹೇಳಬೇಕು:"ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು, ಲಹುಲ್ ಮುಲ್ಕು ವ ಲಹುಲ್ ಹಮ್ದ್, ವ ಹುವ ಅಲ ಕುಲ್ಲಿ ಶೈಇನ್ ಕದೀರ್. ಲಾ ಇಲಾಹ ಇಲ್ಲಲ್ಲಾಹು ವಹ್ದಹು, ಅಂಜಝ ವಅ್ದಹು, ವ ನಸರ ಅಬ್ದಹು, ವ ಹಝಮಲ್ ಅಹ್ಝಾಬ ವಹ್ದಹು" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಆಧಿಪತ್ಯ ಮತ್ತು ಸ್ತುತಿಗಳು ಅವನಿಗೆ ಸೇರಿದ್ದು. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನು ತನ್ನ ವಾಗ್ದಾನವನ್ನು ನೆರವೇರಿಸಿದನು, ತನ್ನ ದಾಸನಿಗೆ ಸಹಾಯ ಮಾಡಿದನು ಮತ್ತು ಒಂಟಿಯಾಗಿ ಸೈನ್ಯಗಳನ್ನು ಸೋಲಿಸಿದನು). ಇದನ್ನು ಮೂರು ಬಾರಿ ಪುನರಾವರ್ತಿಸಬೇಕು. ಇವುಗಳ ನಡುವೆ ಬೇರೆ ಪ್ರಾರ್ಥನೆಗಳನ್ನು ಪ್ರಾರ್ಥಿಸಬಹುದು.[13].[13] ಮುಸ್ಲಿಮ್, ಸಂಖ್ಯೆ (1218).
ನಂತರ ಸಫಾದಿಂದ ಇಳಿದು ಮರ್ವಾಕ್ಕೆ ನಡೆದುಕೊಂಡು ಹೋಗಬೇಕು. ಹಸಿರು ಗುರುತನ್ನು ತಲುಪಿದರೆ, ಎರಡನೇ ಹಸಿರು ಗುರುತನ್ನು ತಲುಪುವವರೆಗೆ ವೇಗವಾಗಿ ಓಡಬೇಕು. ನಂತರ ಎಂದಿನಂತೆ ನಡೆಯಬೇಕು. ವೇಗವಾಗಿ ಓಡುವುದು ಮಹಿಳೆಯರಿಗೆ ನಿಯಮ ಮಾಡಲಾಗಿಲ್ಲ.
ಮರ್ವಾಕ್ಕೆ ತಲುಪಿದಾಗ, ಸಫಾದಲ್ಲಿ ಮಾಡಿದ್ದನ್ನೇ ಮಾಡುವುದು ನಿಯಮವಾಗಿದೆ (ನೋಡಿ ಪ್ಯಾರಾ 2).
ನಂತರ ಮರ್ವಾದಿಂದ ಇಳಿದು ಸಫಾಕ್ಕೆ ನಡೆದುಕೊಂಡು ಹೋಗಬೇಕು. ಹಸಿರು ಗುರುತನ್ನು ತಲುಪಿದರೆ, ಎರಡನೇ ಹಸಿರು ಗುರುತನ್ನು ತಲುಪುವವರೆಗೆ ವೇಗವಾಗಿ ಓಡಬೇಕು. ನಂತರ ಎಂದಿನಂತೆ ನಡೆಯಬೇಕು.
ಹೀಗೆ ಏಳು ಸುತ್ತುಗಳನ್ನು ಪೂರ್ಣಗೊಳಿಸಬೇಕು. ಸಫಾದಿಂದ ಮರ್ವಾಕ್ಕೆ ಹೋಗುವುದು ಒಂದು ಸುತ್ತು, ಮತ್ತು ಮರ್ವಾದಿಂದ ಸಫಾಕ್ಕೆ ಹಿಂತಿರುಗುವುದು ಇನ್ನೊಂದು ಸುತ್ತು.
ಸಈ ಮಾಡುವಾಗ ತನಗೆ ಇಷ್ಟವಾದ ಯಾವುದೇ ಝಿಕ್ರ್, ದುಆ ಮತ್ತು ಕುರ್ಆನ್ ಪಠಣವನ್ನು ಮಾಡಬಹುದು.
ಐದನೆಯದಾಗಿ: ತಲೆ ಬೋಳಿಸುವ ಮತ್ತು ಕೂದಲು ಕತ್ತರಿಸುವ ವಿಧಾನ
ಉಮ್ರಾ ಮಾಡುವುದು ಪುರುಷನಾಗಿದ್ದರೆ, ತವಾಫ್ ಮತ್ತು ಸಈ ಮುಗಿಸಿದ ನಂತರ, ತನ್ನ ತಲೆಯನ್ನು ಬೋಳಿಸಿಕೊಳ್ಳುವುದು ಅಥವಾ ಕೂದಲನ್ನು ಕತ್ತರಿಸುವುದು ಕಡ್ಡಾಯವಾಗಿದೆ. ತಲೆ ಬೋಳಿಸುವುದಾದರೆ ಅಥವಾ ಕೂದಲು ಕತ್ತರಿಸುವುದಾದರೆ ಅದು ಸಂಪೂರ್ಣ ತಲೆಯನ್ನು ಒಳಗೊಂಡಿರುವುದು ಸುನ್ನತ್ ಆಗಿದೆ.
ಕೂದಲು ಕತ್ತರಿಸುವುದಕ್ಕಿಂತ ತಲೆ ಬೋಳಿಸುವುದು ಉತ್ತಮ. ಆದರೆ ಹಜ್ಜ್ನ ಸಮಯವು ಹತ್ತಿರದಲ್ಲಿದ್ದು, ತಲೆಗೂದಲು ಬೆಳೆಯಲು ಸಮಯವಿಲ್ಲದಿದ್ದರೆ, ಕೂದಲು ಕತ್ತರಿಸುವುದೇ ಶ್ರೇಷ್ಠ.
ಮಹಿಳೆಯು ತನ್ನ ಕೂದಲಿನ ತುದಿಗಳಿಂದ ಒಂದು ಬೆರಳಿನಷ್ಟು ಉದ್ದವನ್ನು ಕತ್ತರಿಸಬೇಕು.
ಇಹ್ರಾಮ್ನ ನಿಷಿದ್ಧಗಳು
ಇಹ್ರಾಮ್ನ ನಿಷಿದ್ಧಗಳು ಹೀಗಿವೆ:
1. ದೇಹದ ಯಾವುದೇ ಭಾಗದಿಂದ ಕೂದಲು ಕ್ಷೌರ ಮಾಡುವುದು, ಕತ್ತರಿಸುವುದು ಅಥವಾ ಕಿತ್ತುಹಾಕುವುದು.
2. ಕೈ ಅಥವಾ ಕಾಲುಗಳ ಎಲ್ಲಾ ಉಗುರಗಳನ್ನು ಅಥವಾ ಕೆಲವು ಉಗುರುಗಳನ್ನು ಕತ್ತರಿಸುವುದು.
3. ತಲೆಯನ್ನು ನೇರವಾಗಿ ಸ್ಪರ್ಶಿಸುವಂತೆ ಯಾವುದಾದರೂ ವಸ್ತುವಿನಿಂದ ತಲೆಯನ್ನು ಮುಚ್ಚುವುದು. ಉದಾಹರಣೆಗೆ: ಟೋಪಿ, ಗುತ್ರಾ (ತಲೆಯ ಮೇಲೆ ಧರಿಸುವ ಬಟ್ಟೆ), ರುಮಾಲು, ಮತ್ತು ಮೇಲಂಗಿಯನ್ನು ತಲೆಯ ಮೇಲೆ ಹಾಕುವುದು, ಅಥವಾ ಕರವಸ್ತ್ರ, ಹೊದಿಕೆ, ರಟ್ಟು ಅಥವಾ ಮುಚ್ಚುವ ಉದ್ದೇಶದಿಂದ ಬಳಸುವ ಬೇರೆ ಯಾವುದೇ ವಸ್ತುವನ್ನು ತಲೆಯ ಮೇಲೆ ಹಾಕುವುದು. ಇದು ವಿಶೇಷವಾಗಿ ಪುರುಷರಿಗೆ ಮಾತ್ರ ನಿಷೇಧಿಸಲಾಗಿದೆ. ಮಹಿಳೆಯರಿಗೆ ಅಲ್ಲ.
4. ಯಾವಾಗಲೂ ಧರಿಸುವ ರೀತಿಯಲ್ಲಿ, ದೇಹದ ಆಕಾರಕ್ಕೆ ತಕ್ಕಂತೆ ಕತ್ತರಿಸಿ ತಯಾರಿಸಿದ ದೈನಂದಿನ ಬಟ್ಟೆಗಳನ್ನು ಧರಿಸುವುದು. ಉದಾಹರಣೆಗೆ: ಹೊಲಿದ ನಿಲುವಂಗಿ, ಪ್ಯಾಂಟ್, ಅಂಗಿ, ಸಾಕ್ಸ್ ಮತ್ತು ಕೈಗವಸುಗಳು. ಇದು ವಿಶೇಷವಾಗಿ ಪುರುಷರಿಗೆ ಮಾತ್ರ ನಿಷೇಧಿಸಲಾಗಿದೆ. ಮಹಿಳೆಯರಿಗೆ ಅಲ್ಲ. ಏಕೆಂದರೆ ಮಹಿಳೆಯರಿಗೆ ಈ ಕೆಳಗಿನವುಗಳನ್ನು ಮಾತ್ರ ನಿಷೇಧಿಸಲಾಗಿದೆ:
5. ನಿಖಾಬ್, ಬುರ್ಖಾ ಅಥವಾ ನಿಖಾಬ್ ಅನ್ನು ಹೋಲುವ ಲಿಸಾಮ್ (ಮುಖದ ಮುಸುಕು) ಧರಿಸುವುದು ನಿಷೇಧಿಸಲಾಗಿದೆ. ಆದರೆ ಪರಪುರುಷರ ಮುಂದೆ ಸಾಮಾನ್ಯವಾಗಿ ಮುಖವನ್ನು ಮುಚ್ಚುವ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ. ಬಟ್ಟೆ ಮುಖವನ್ನು ಸ್ಪರ್ಶಿಸಿದರೂ ತೊಂದರೆಯಿಲ್ಲ. ಬಟ್ಟೆ ಮುಖವನ್ನು ಸ್ಪರ್ಶಿಸುವುದನ್ನು ತಡೆಯಲು ಅವಳು ತನ್ನ ತಲೆಯ ಮೇಲೆ ಬ್ಯಾಂಡೇಜ್ - ಅಥವಾ ಅದರಂತಹ ವಸ್ತುವನ್ನು - ಹಾಕಿಕೊಳ್ಳಬೇಕೆಂಬ ನಿಯಮವಿಲ್ಲ. ಏಕೆಂದರೆ ಅಂತಹ ಒಂದು ನಿಯಮವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
6. ಕೈಗಳಿಗೆ ಕೈಗವಸುಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಆದರೆ ಪರಪುರುಷರ ಮುಂದೆ ತನ್ನ ಕೈಗಳನ್ನು ತನ್ನ ಅಬಾಯ (ಪರ್ದಾ) ದೊಳಗೆ ಇಟ್ಟುಕೊಳ್ಳುವ ಮೂಲಕ ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ.
7. ದೇಹಕ್ಕೆ ಅಥವಾ ಇಹ್ರಾಮ್ನ ಬಟ್ಟೆಗಳಿಗೆ ಸುಗಂಧ ದ್ರವ್ಯವನ್ನು ಹಚ್ಚುವುದು.
8. ಕಾಡು ಪ್ರಾಣಿಗಳನ್ನು ಕೊಲ್ಲುವುದು ಅಥವಾ ಬೇಟೆಯಾಡುವುದು. ಅವುಗಳನ್ನು ಕೊಲ್ಲದಿದ್ದರೂ ಸಹ.
9. ತನ್ನ ಸ್ವಂತಕ್ಕಾಗಲಿ ಅಥವಾ ಬೇರೆಯವರಿಗಾಗಲಿ ವಿವಾಹ ಪ್ರಸ್ತಾಪ ಮಾಡುವುದು.
10. ವಿವಾಹ ಕರಾರು ಮಾಡಿಕೊಳ್ಳುವುದು.
11. ಯೋನಿಯ ಹೊರತಾದ ಭಾಗಗಳನ್ನು ಸ್ಪರ್ಶಿಸುವುದು. ಉದಾಹರಣೆಗೆ, ಚುಂಬಿಸುವುದು ಮತ್ತು ಕಾಮೋದ್ರೇಕದಿಂದ ಸ್ಪರ್ಶಿಸುವುದು ಇತ್ಯಾದಿ.
12. ಸಂಭೋಗ, ಅಂದರೆ ಯೋನಿಯಲ್ಲಿ ಲೈಂಗಿಕ ಸಂಭೋಗ ಮಾಡುವುದು.
ಉಮ್ರಾದ ಕರ್ಮಗಳ ಸಾರಾಂಶ.
1. ಸ್ನಾನ ಮಾಡುವುದು.
2. ಸುಗಂಧಗಳನ್ನು ಬಳಸುವುದು.
3. ಇಹ್ರಾಮ್ ವಸ್ತ್ರವನ್ನು ಧರಿಸುವುದು.
4. ಇಹ್ರಾಮ್ ಪ್ರವೇಶಿಸುವುದು. ಅಂದರೆ (ಹಜ್ಜ್ ಅಥವಾ ಉಮ್ರಾದ ಕರ್ಮಗಳಲ್ಲಿ) ಪ್ರವೇಶಿಸುವ ಉದ್ದೇಶ (ನಿಯ್ಯತ್) ಮಾಡುವುದು.
5. ತಲ್ಬಿಯಾ ಪಠಿಸುವುದು.
6. ಕಅಬಾಗೆ ತವಾಫ್ (ಪ್ರದಕ್ಷಿಣೆ) ಮಾಡುವುದು.
7. ಸಾಧ್ಯವಾದರೆ ಮಕಾಮ್ ಇಬ್ರಾಹೀಮ್ (ಇಬ್ರಾಹೀಮ್(ಅ) ನಿಂತ ಸ್ಥಳ) ಹಿಂದೆ ಎರಡು ರಕ್ಅತ್ ನಮಾಝ್ ಮಾಡುವುದು.
8. ಸಫಾ ಮತ್ತು ಮರ್ವಾ ನಡುವೆ ಸಈ ಮಾಡುವುದು.
9. ತಲೆ ಬೋಳಿಸುವುದು ಅಥವಾ ಕೂದಲು ಕತ್ತರಿಸುವುದು.ಅಲ್ಲಾಹು ಹೆಚ್ಚು ಬಲ್ಲವನು, ನಮ್ಮ ಪ್ರವಾದಿ ಮುಹಮ್ಮದ್ ರವರ ಮೇಲೆ ಅಲ್ಲಾಹು ಶಾಂತಿ ಮತ್ತು ಕರುಣೆಯನ್ನು ವರ್ಷಿಸಲಿ.
ಉಮ್ರಾ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ) ಉಮ್ರಾ ಮಾಡುವುದು ಹೇಗೆ? (ಸರಳ ಶೈಕ್ಷಣಿಕ ವಿಡಿಯೋ) ಈ ವೀಡಿಯೋ ಇಹ್ರಾಮ್ನಿಂದ ಹಿಡಿದು ತಹಲ್ಲುಲ್ವರೆಗಿನ ಉಮ್ರಾದ ವಿಧಿವಿಧಾನಗಳನ್ನು ಕ್ರಮಬದ್ಧವಾಗಿ ಸರಳವಾಗಿ ವಿವರಿಸುತ್ತದೆ. ವೀಡಿಯೋ ವೀಕ್ಷಿಸಿ ಉಮ್ರಾವನ್ನು ಸುಲಭವಾಗಿ ಮತ್ತು ಪರಿಪೂರ್ಣವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಯಿರಿ. ಉಮ್ರಾ ಮಾಡಲು ಉದ್ದೇಶಿಸುವವರು ನಿಗದಿತ ಮೀಖಾತ್ನಿಂದ ಇಹ್ರಾಮ್ ಕಟ್ಟುವುದು ಕಡ್ಡಾಯ. ಮೀಕಾತ್ಗಳು: ಹಜ್ ಅಥವಾ ಉಮ್ರಾಕ್ಕಾಗಿ ಇಹ್ರಾಮ್ ಕಟ್ಟಲು ಪ್ರವಾದಿಯವರು (ಸ) ನಿಗದಿಪಡಿಸಿದ ಸ್ಥಳಗಳು. ಹಜ್ ಅಥವಾ ಉಮ್ರಾ ಮಾಡಲು ಬಯಸುವವರು ಇಲ್ಲಿಂದ ಇಹ್ರಾಮ್ ಮಾಡಬೇಕು. ಹಜ್ ಅಥವಾ ಉಮ್ರಾದ ಉದ್ದೇಶದಿಂದ ಈ ಮೀಖಾತ್ಗಳಲ್ಲಿ ಯಾವುದಾದರೂ ಒಂದರ ಮೂಲಕ ಹಾದುಹೋಗುವವರು ಅಲ್ಲಿಂದಲೇ ಇಹ್ರಾಮ್ ಕಟ್ಟುವುದು…
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ. ಮುಂದುವರಿದು ಹೇಳುವುದೇನೆಂದರೆ: ಇದು ಹಜ್ನ ವಿವರಣೆಯ ಒಂದು ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಹಜ್ಜ್ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಅಲ್ಲಾಹು ಇದನ್ನು ತನ್ನ ಪವಿತ್ರ ಮುಖವನ್ನು ಮಾತ್ರ ಬಯಸುವ ಹಾಗೂ ಎಲ್ಲಾ ಮುಸ್ಲಿಮರಿಗೂ ಪ್ರಯೋಜನ ನೀಡುವ ಕೃತಿಯಾಗಿ ಮಾಡಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಮುನ್ನುಡಿ