Skip to content
ಅಲ್- ಬಕರ /

ಆಯತ್ 158

2 : 158

ಆಯತ್ 158 of ಅಲ್- ಬಕರ (2 : 158). This page carries the verse in the Uthmani script with a translation of its meaning, at a stable URL that can be cited on its own.

ಅಲ್- ಬಕರ ಆಯತ್‌ಗಳು 286
ಸೂರ · ಅಲ್- ಬಕರ
ಕನ್ನಡ · Hamza
2 : 158

۞ إِنَّ ٱلصَّفَا وَٱلۡمَرۡوَةَ مِن شَعَآئِرِ ٱللَّهِۖ فَمَنۡ حَجَّ ٱلۡبَيۡتَ أَوِ ٱعۡتَمَرَ فَلَا جُنَاحَ عَلَيۡهِ أَن يَطَّوَّفَ بِهِمَاۚ وَمَن تَطَوَّعَ خَيۡرٗا فَإِنَّ ٱللَّهَ شَاكِرٌ عَلِيمٌ

ನಿಶ್ಚಯವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಚಿಹ್ನೆಗಳಲ್ಲಿ ಒಳಪಟ್ಟದ್ದಾಗಿವೆ. ಆದ್ದರಿಂದ ಅಲ್ಲಾಹನ ಭವನಕ್ಕೆ ಹಜ್ ಅಥವಾ ಉಮ್ರಾ ಮಾಡುವವರು ಇವುಗಳಿಗೆ ಪ್ರದಕ್ಷಿಣೆ ಮಾಡುವುದರಲ್ಲಿ ಯಾವುದೇ ದೋಷವಿಲ್ಲ. ಸ್ವಯಂಪ್ರೇರಿತವಾಗಿ ಒಳಿತು ಮಾಡುವವರನ್ನು ಅಲ್ಲಾಹು ಮೆಚ್ಚುತ್ತಾನೆ ಮತ್ತು ಅವರ ಬಗ್ಗೆ ಅವನು ಚೆನ್ನಾಗಿ ತಿಳಿದಿದ್ದಾನೆ.

Explanation & meanings · 1
  1. ಇಸ್ಲಾಂ ಸ್ವೀಕರಿಸುವ ಮೊದಲು ಮದೀನದ ಅನ್ಸಾರಿಗಳು ಮನಾತ್ ಎಂಬ ವಿಗ್ರಹದ ಹೆಸರಲ್ಲಿ ತಲ್ಬಿಯತ್ ಹೇಳುತ್ತಿದ್ದರು. ಅವರು ಪರ್ವತಗಳ ಮೇಲೆ ಅದನ್ನು ಪೂಜಿಸುತ್ತಿದ್ದರು. ಅವರು ಹಜ್ ನಿರ್ವಹಿಸಲು ಮಕ್ಕಾಗೆ ಬಂದರೆ ಸಫಾ ಮತ್ತು ಮರ್ವಾದ ನಡುವೆ ಸಈ ಮಾಡುವುದನ್ನು ಪಾಪವೆಂದು ಪರಿಗಣಿಸುತ್ತಿದ್ದರು. ಮುಸ್ಲಿಮರಾದ ಬಳಿಕ ಅವರು ಇದರ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಚಾರಿಸಿದಾಗ ಈ ವಚನವು ಅವತೀರ್ಣವಾಯಿತು.