ಉಮ್ರಾ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ) ಉಮ್ರಾ ಮಾಡುವುದು ಹೇಗೆ? (ಸರಳ ಶೈಕ್ಷಣಿಕ ವಿಡಿಯೋ) ಈ ವೀಡಿಯೋ ಇಹ್ರಾಮ್ನಿಂದ ಹಿಡಿದು ತಹಲ್ಲುಲ್ವರೆಗಿನ ಉಮ್ರಾದ ವಿಧಿವಿಧಾನಗಳನ್ನು ಕ್ರಮಬದ್ಧವಾಗಿ ಸರಳವಾಗಿ ವಿವರಿಸುತ್ತದೆ. ವೀಡಿಯೋ ವೀಕ್ಷಿಸಿ ಉಮ್ರಾವನ್ನು ಸುಲಭವಾಗಿ ಮತ್ತು ಪರಿಪೂರ್ಣವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಯಿರಿ. ಉಮ್ರಾ ಮಾಡುವ ವಿಧಾನ ಉಮ್ರಾ ಮಾಡಲು ಉದ್ದೇಶಿಸುವವರು ನಿಗದಿತ ಮೀಖಾತ್ನಿಂದ ಇಹ್ರಾಮ್ ಕಟ್ಟುವುದು ಕಡ್ಡಾಯ. ಮೀಕಾತ್ಗಳು: ಹಜ್ ಅಥವಾ ಉಮ್ರಾಕ್ಕಾಗಿ ಇಹ್ರಾಮ್ ಕಟ್ಟಲು ಪ್ರವಾದಿಯವರು (ಸ) ನಿಗದಿಪಡಿಸಿದ ಸ್ಥಳಗಳು. ಹಜ್ ಅಥವಾ ಉಮ್ರಾ ಮಾಡಲು ಬಯಸುವವರು ಇಲ್ಲಿಂದ ಇಹ್ರಾಮ್ ಮಾಡಬೇಕು. ಹಜ್ ಅಥವಾ ಉಮ್ರಾದ ಉದ್ದೇಶದಿಂದ ಈ ಮೀಖಾತ್ಗಳಲ್ಲಿ ಯಾವುದಾದರೂ ಒಂದರ ಮೂಲಕ ಹಾದುಹೋಗುವವರು ಅಲ್ಲಿಂದಲೇ…
ಉಮ್ರಾ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ)ಉಮ್ರಾ ಮಾಡುವುದು ಹೇಗೆ? (ಸರಳ ಶೈಕ್ಷಣಿಕ ವಿಡಿಯೋ)ಈ ವೀಡಿಯೋ ಇಹ್ರಾಮ್ನಿಂದ ಹಿಡಿದು ತಹಲ್ಲುಲ್ವರೆಗಿನ ಉಮ್ರಾದ ವಿಧಿವಿಧಾನಗಳನ್ನು ಕ್ರಮಬದ್ಧವಾಗಿ ಸರಳವಾಗಿ ವಿವರಿಸುತ್ತದೆ. ವೀಡಿಯೋ ವೀಕ್ಷಿಸಿ ಉಮ್ರಾವನ್ನು ಸುಲಭವಾಗಿ ಮತ್ತು ಪರಿಪೂರ್ಣವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಯಿರಿ.ಉಮ್ರಾ ಮಾಡುವ ವಿಧಾನ
ಉಮ್ರಾ ಮಾಡಲು ಉದ್ದೇಶಿಸುವವರು ನಿಗದಿತ ಮೀಖಾತ್ನಿಂದ ಇಹ್ರಾಮ್ ಕಟ್ಟುವುದು ಕಡ್ಡಾಯ.
ಮೀಕಾತ್ಗಳು: ಹಜ್ ಅಥವಾ ಉಮ್ರಾಕ್ಕಾಗಿ ಇಹ್ರಾಮ್ ಕಟ್ಟಲು ಪ್ರವಾದಿಯವರು (ಸ) ನಿಗದಿಪಡಿಸಿದ ಸ್ಥಳಗಳು.ಹಜ್ ಅಥವಾ ಉಮ್ರಾ ಮಾಡಲು ಬಯಸುವವರು ಇಲ್ಲಿಂದ ಇಹ್ರಾಮ್ ಮಾಡಬೇಕು.
ಹಜ್ ಅಥವಾ ಉಮ್ರಾದ ಉದ್ದೇಶದಿಂದ ಈ ಮೀಖಾತ್ಗಳಲ್ಲಿ ಯಾವುದಾದರೂ ಒಂದರ ಮೂಲಕ ಹಾದುಹೋಗುವವರು ಅಲ್ಲಿಂದಲೇ ಇಹ್ರಾಮ್ ಕಟ್ಟುವುದು ಕಡ್ಡಾಯ. ಇಹ್ರಾಮ್ ಇಲ್ಲದೆ ಅದನ್ನು ದಾಟುವಂತಿಲ್ಲ.
ಈ ಮೀಖಾತ್ಗಳಿಗಿಂತ ಮಕ್ಕಾಗೆ ಹತ್ತಿರದಲ್ಲಿರುವವರ ಮೀಖಾತ್ (ಉದಾಹರಣೆಗೆ ಜಿದ್ದಾ ನಿವಾಸಿಗಳ ಮೀಖಾತ್)ಅವರು ವಾಸಿಸುವ ಸ್ಥಳವೇ ಆಗಿರುತ್ತದೆ; ಅವರು ಹಜ್ ಮತ್ತು ಉಮ್ರಾಕ್ಕಾಗಿ ಅಲ್ಲಿಂದಲೇ ಇಹ್ರಾಮ್ ಕಟ್ಟಬೇಕು.
ಮಕ್ಕಾ ನಿವಾಸಿಗಳು ಹಜ್ಗಾಗಿ ಮಕ್ಕಾದಲ್ಲಿರುವ ತಮ್ಮ ಮನೆಗಳಿಂದಲೇ ಇಹ್ರಾಮ್ ಕಟ್ಟಬೇಕು.ಆದರೆ ಉಮ್ರಾಕ್ಕಾಗಿ ಅವರು ಹರಮ್ನ ಗಡಿಯಿಂದ ಹೊರಗೆ ಹೋಗಿ ಅಲ್ಲಿಂದ ಇಹ್ರಾಮ್ ಕಟ್ಟಬೇಕು. ಉದಾಹರಣೆಗೆ ತನ್ಈಮ್ ಮುಂತಾದ ಸ್ಥಳಗಳು.
ವಿಮಾನದಲ್ಲಿ ಪ್ರಯಾಣಿಸುವವರು ವಿಮಾನವು ಮೀಖಾತ್ನ ನೇರಕ್ಕೆ ಬಂದಾಗ ಇಹ್ರಾಮ್ ಕಟ್ಟಬೇಕು.ಮೀಖಾತ್ ಬರುವ ಮೊದಲೇ ಸಿದ್ಧತೆ ಮಾಡಿಕೊಂಡು ಇಹ್ರಾಮ್ ಬಟ್ಟೆಗಳನ್ನು ಧರಿಸಿರಬೇಕು.ಮೀಖಾತ್ಗೆ ನೇರವಾಗಿ ಬಂದ ತಕ್ಷಣವೇ ಇಹ್ರಾಮ್ನ ನಿಯ್ಯತ್ ಮಾಡಬೇಕು.ವಿಮಾನದ ವೇಗದ ಕಾರಣದಿಂದ ತಲ್ಬಿಯಾ ಹೇಳುವ ಸ್ಥಳ ತಪ್ಪಿ ಹೋಗುವ ಭಯವಿದ್ದರೆ, ಮುನ್ನೆಚ್ಚರಿಕೆಯಾಗಿ ಮೀಖಾತ್ ತಲುಪುವ ಸ್ವಲ್ಪ ಮುಂಚಿತವಾಗಿಯೇ ತಲ್ಬಿಯಾ ಹೇಳಬಹುದು.ಆದರೆ ವಿಮಾನ ನಿಲ್ದಾಣದಲ್ಲಿ ಇಳಿಯುವವರೆಗೆ ಅದನ್ನು ವಿಳಂಬ ಮಾಡಬಾರದು.
ಇಹ್ರಾಮ್ ಮಾಡುವ ವಿಧಾನ ಮತ್ತು ಅದರ ನಿಯಮಗಳು
ಇಹ್ರಾಮ್ ಕಟ್ಟಲು ಉದ್ದೇಶಿಸಿದವರು
1. ಸ್ನಾನ ಮಾಡುವುದು ಸುನ್ನತ್.
2. ಪುರುಷರಿಗೆ ಸುಗಂಧ ದ್ರವ್ಯ ಹಚ್ಚಿಕೊಳ್ಳುವುದು ಸುನ್ನತ್.ಇದನ್ನು ದೇಹ ಮತ್ತು ಗಡ್ಡಕ್ಕೆ ಹಚ್ಚಬೇಕು, ಇಹ್ರಾಮ್ ಬಟ್ಟೆಗಳಿಗಲ್ಲ.
3. ಇಹ್ರಾಮ್ ಬಟ್ಟೆಗಳನ್ನು ಧರಿಸುವುದು ಕಡ್ಡಾಯ. ಪುರುಷರಿಗೆ ಒಂದು ಕೆಳ ಉಡುಪು ಮತ್ತು ಮೇಲುಡುಪು.ಇವೆರಡೂ ಬಿಳಿ ಬಣ್ಣದ, ಶುದ್ಧವಾದ ಅಥವಾ ಹೊಸ ಬಟ್ಟೆಗಳಾಗಿರುವುದು ಸುನ್ನತ್.
ಮಹಿಳೆಯರು ತಮಗಿಷ್ಟವಾದ ಬಟ್ಟೆಗಳಲ್ಲಿ ಇಹ್ರಾಮ್ ಕಟ್ಟಬಹುದು, ಆದರೆ ಅದು ಸೌಂದರ್ಯ ಪ್ರಕಟಿಸುವಂತಿರಬಾರದು.ಆದರೆ ಅವರು ನಕಾಬ್ ಮತ್ತು ಕೈಗವಸುಗಳನ್ನು ಧರಿಸಬಾರದು.ಅವರು ಬೇರೆ ಬಟ್ಟೆಯಿಂದ ತಮ್ಮ ಮುಖ ಮತ್ತು ಕೈಗಳನ್ನು ಮುಚ್ಚಿಕೊಳ್ಳಬೇಕು.
4. ಇಹ್ರಾಮ್ ಎಂದರೆ ಆರಾಧನೆಯಲ್ಲಿ ಪ್ರವೇಶಿಸುವ ನಿಯ್ಯತ್. ಅದನ್ನು ಹೀಗೆ ಹೇಳಬೇಕು:"ಓ ಅಲ್ಲಾಹ್, ನಾನು ನಿನ್ನ ಕರೆಗೆ ಉಮ್ರಾದೊಂದಿಗೆ ಉತ್ತರಿಸುತ್ತಿದ್ದೇನೆ."ಲಬ್ಬೈಕ ಅಲ್ಲಾಹುಮ್ಮ ಉಮ್ರತನ್ಬೇರೆಯವರ ಪರವಾಗಿ ಉಮ್ರಾ ಮಾಡುತ್ತಿದ್ದರೆ ಹೀಗೆ ಹೇಳಬೇಕು:"ಓ ಅಲ್ಲಾಹ್, ನಾನು ನಿನ್ನ ಕರೆಗೆ ಉಮ್ರಾದೊಂದಿಗೆ ಇಂತಹವನ [ಅವರ ಹೆಸರು] ಪರವಾಗಿ ಉತ್ತರಿಸುತ್ತಿದ್ದೇನೆ."ಲಬ್ಬೈಕಲ್ಲಾಹುಮ್ಮ ಉಮ್ರತನ್ ಅನ್ ಫುಲಾನ್
5. ಇಹ್ರಾಮ್ ಕಟ್ಟುವಾಗ ಆರಾಧನೆಯನ್ನು ಪೂರ್ಣಗೊಳಿಸಲು ಯಾವುದಾದರೂ ಅಡ್ಡಿ ಉಂಟಾಗುವ ಭಯವಿದ್ದರೆ,ಇಹ್ರಾಮ್ ಕಟ್ಟುವಾಗಲೇ ಷರತ್ತು ವಿಧಿಸಿ, ಹೀಗೆ ಹೇಳಬಹುದು:“ಓ ಅಲ್ಲಾಹ್, ನಾನು ಉಮ್ರಾದೊಂದಿಗೆ ನಿನ್ನ ಕರೆಗೆ ಉತ್ತರಿಸುತ್ತಿದ್ದೇನೆ. ಯಾವುದಾದರೂ ಅಡ್ಡಿಯು ನನ್ನನ್ನು ತಡೆದರೆ, ಎಲ್ಲಿ ನಾನು ತಡೆಯಲ್ಪಡುತ್ತೇನೋ ಅದೇ ನನ್ನ ಇಹ್ರಾಮ್ನಿಂದ ಮುಕ್ತವಾಗುವ ಸ್ಥಳವಾಗಿದೆ”ಲಬ್ಬೈಕಲ್ಲಾಹುಮ್ಮ ಉಮ್ರತನ್, ವ ಇನ್ ಹಬಸನಿ ಹಾಬಿಸುನ್ ಫಮಹಿಲ್ಲೀ ಹೈಸು ಹಬಸ್ತನೀಹೀಗೆ ಷರತ್ತು ವಿಧಿಸಿ, ನಂತರ ಉಮ್ರಾ ಪೂರೈಸಲು ಏನಾದರೂ ಅಡ್ಡಿ ಉಂಟಾದರೆ, ಅವರು ಇಹ್ರಾಮ್ನಿಂದ ಮುಕ್ತರಾಗುತ್ತಾರೆ ಮತ್ತು ಅವರ ಮೇಲೆ ಯಾವುದೇ ಪ್ರಾಯಶ್ಚಿತ್ತ ಇರುವುದಿಲ್ಲ.
6. ನಂತರ ಹೆಚ್ಚೆಚ್ಚು ತಲ್ಬಿಯಾ ಪಠಿಸಬೇಕು:ಓ ಅಲ್ಲಾಹ್, ನಾನು ನಿನ್ನ ಕರೆಗೆ ಉತ್ತರಿಸುತ್ತಿದ್ದೇನೆ, ನಾನು ಉತ್ತರಿಸುತ್ತಿದ್ದೇನೆ, ನಾನು ನಿನ್ನ ಕರೆಗೆ ಉತ್ತರಿಸುತ್ತಿದ್ದೇನೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ, ನಾನು ಉತ್ತರಿಸುತ್ತಿದ್ದೇನೆ, ಖಂಡಿತವಾಗಿಯೂ ಸ್ತುತಿ, ಅನುಗ್ರಹ ಮತ್ತು ಆಧಿಪತ್ಯ ನಿನಗೇ ಸೇರಿದೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ.ಲಬ್ಬೈಕಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್ ಹಮ್ದ ವನ್ನಿಅಮತ ಲಕ ವಲ್ ಮುಲ್ಕ್ ಲಾ ಶರೀಕ ಲಕ್ಪುರುಷರು ಇದನ್ನು ಗಟ್ಟಿಯಾಗಿ ಹೇಳಬೇಕು.ಮಹಿಳೆಯರೂ ಕೂಡ, ಪರಪುರುಷರು ಇಲ್ಲದಿದ್ದಾಗ ಗಟ್ಟಿಯಾಗಿ ಹೇಳಬಹುದು.
ಮೊದಲನೆಯದು: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ನಿಷಿದ್ಧವಾದ ವಿಧ:
1. ದೇಹದ ಯಾವುದೇ ಭಾಗದ ಕೂದಲು ಬೋಳಿಸುವುದು, ಕತ್ತರಿಸುವುದು ಅಥವಾ ಕೀಳುವುದು.
2. ಕೈ ಅಥವಾ ಕಾಲಿನ ಉಗುರುಗಳನ್ನು ಪೂರ್ತಿಯಾಗಿ ಅಥವಾ ಸ್ವಲ್ಪ ಕತ್ತರಿಸುವುದು.
3. ದೇಹಕ್ಕೆ ಅಥವಾ ಇಹ್ರಾಮ್ ಬಟ್ಟೆಗಳಿಗೆ ಸುಗಂಧ ಹಚ್ಚುವುದು.
4. ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಕೊಲ್ಲದಿದ್ದರೂ ಹಿಡಿಯುವುದು.
5. ತನಗಾಗಿ ಅಥವಾ ಇತರರಿಗಾಗಿ ವಿವಾಹ ಪ್ರಸ್ತಾಪ ಮಾಡುವುದು.
6. ವಿವಾಹ ಒಪ್ಪಂದ ಮಾಡುವುದು.
7. ಮರ್ಮಾಂಗವನ್ನು ಹೊರತುಪಡಿಸಿ ಇತರೆಡೆ ಕಾಮದಿಂದ ಸ್ಪರ್ಶಿಸುವುದು; ಉದಾಹರಣೆಗೆ ಚುಂಬಿಸುವುದು, ಕಾಮದಿಂದ ಮುಟ್ಟುವುದು.
8. ಲೈಂಗಿಕ ಸಂಭೋಗ.
ಎರಡನೆಯದು: ಕೇವಲ ಪುರುಷರಿಗೆ ನಿಷಿದ್ಧವಾದ ವಿಧ:
1. ತಲೆಗೆ ಅಂಟಿಕೊಳ್ಳುವಂತಹ ಟೋಪಿ, ರುಮಾಲು ಮುಂತಾದವುಗಳಿಂದ ತಲೆಯನ್ನು ಮುಚ್ಚುವುದು.ಅಥವಾ ಮೇಲುಡುಪನ್ನು ಅಥವಾ ತಲೆಯನ್ನು ಮುಚ್ಚುವ ಉದ್ದೇಶವಿರುವ ಯಾವುದೇ ವಸ್ತುವನ್ನು ತಲೆಯ ಮೇಲಿಡುವುದು.
2. ದೇಹದ ಆಕಾರಕ್ಕೆ ತಕ್ಕಂತೆ ಹೊಲಿದು ತಯಾರಿಸಿದ ಸಾಮಾನ್ಯ ಬಟ್ಟೆಗಳನ್ನು ಧರಿಸುವುದು.ಉದಾಹರಣೆಗೆ: ಹೊಲಿದ ನಿಲುವಂಗಿ, ಪ್ಯಾಂಟ್ ಮತ್ತು ಶರ್ಟ್.
ಮೂರನೆಯದು: ಕೇವಲ ಮಹಿಳೆಯರಿಗೆ ನಿಷಿದ್ಧವಾದ ವಿಧ:
1. ನಕಾಬ್, ಬುರ್ಖಾ ಅಥವಾ ಮುಖವನ್ನು ಮುಚ್ಚುವ ಮುಖಪರದೆಗಳನ್ನು ಧರಿಸುವುದು.ಆದರೆ ಪರಪುರುಷರು ಎದುರಾದಾಗ ಬೇರೆ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಳ್ಳುವುದು ಕಡ್ಡಾಯ.
ಉಮ್ರಾ ಮಾಡುವವನು ಕಅಬಾದ ಸುತ್ತ ತವಾಫ್ ಮಾಡುವ ಮೂಲಕ ಉಮ್ರಾವನ್ನು ಪ್ರಾರಂಭಿಸಬೇಕು.
ಕಅಬಾದ ಸುತ್ತ ತವಾಫ್ ಮಾಡಲು ಶುದ್ಧಿ (ವುಝೂ) ಇರುವುದು ಕಡ್ಡಾಯ.
1. ಇಹ್ರಾಮ್ನಲ್ಲಿರುವವನು ಮಸ್ಜಿದುಲ್ ಹರಾಮ್ ಅನ್ನು ಪ್ರವೇಶಿಸುವಾಗ ಬಲಗಾಲನ್ನು ಮೊದಲು ಇಡುವುದುಮತ್ತು ಮಸೀದಿಯನ್ನು ಪ್ರವೇಶಿಸುವ ಪ್ರಾರ್ಥನೆಯನ್ನು ಹೇಳುವುದು ಸುನ್ನತ್. ಅದು ಹೀಗಿದೆ:"ಓ ಅಲ್ಲಾಹ್! ನಿನ್ನ ಅನುಗ್ರಹದ ಬಾಗಿಲುಗಳನ್ನು ನನಗೆ ತೆರೆದುಕೊಡು."ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್.
2. ಕಅಬಾವನ್ನು ನೋಡಿದ ತಕ್ಷಣ ತಲ್ಬಿಯಾ ಹೇಳುವುದನ್ನು ನಿಲ್ಲಿಸಬೇಕು.
3. ತವಾಫ್ ಪ್ರಾರಂಭಿಸುವ ಮುನ್ನ 'ಇದ್ತಿಬಾ' ಮಾಡುವುದು ಸುನ್ನತ್.ಅಂದರೆ ಮೇಲುಡುಪಿನ ಮಧ್ಯಭಾಗವನ್ನು ಬಲ ಕಂಕುಳದ ಕೆಳಗಿನಿಂದ ತಂದು ಅದರ ಎರಡೂ ತುದಿಗಳನ್ನು ಎಡ ಭುಜದ ಮೇಲೆ ಹಾಕುವುದು.ತವಾಫ್ ಮುಗಿದ ನಂತರ ಮೇಲುಡುಪನ್ನು ಸರಿಪಡಿಸಿ ಎರಡೂ ಭುಜಗಳನ್ನು ಮುಚ್ಚಿಕೊಳ್ಳಬೇಕು; ಏಕೆಂದರೆ 'ಇದ್ತಿಬಾ' ಕೇವಲ ತವಾಫ್ಗೆ ಮಾತ್ರ ಸೀಮಿತ.
4. ತವಾಫ್ ಹಜರುಲ್ ಅಸ್ವದ್ನಿಂದ ಪ್ರಾರಂಭವಾಗುತ್ತದೆ.
5. ಹಜರುಲ್ ಅಸ್ವದ್ ಬಳಿ ಬಂದು ಅದನ್ನು ಬಲಗೈಯಿಂದ ಮುಟ್ಟಿ ಚುಂಬಿಸುವುದು ಸುನ್ನತ್.ಚುಂಬಿಸಲು ಸಾಧ್ಯವಾಗದಿದ್ದರೆ, ಕೈಯಿಂದ ಮುಟ್ಟಿ ಆ ಕೈಯನ್ನು ಚುಂಬಿಸಬೇಕು.ಅದೂ ಸಾಧ್ಯವಾಗದಿದ್ದರೆ, ಕೈಯಲ್ಲಿರುವ ಕೋಲು ಮುಂತಾವುಗಳ ಮೂಲಕ ಮುಟ್ಟಿ ಅದನ್ನು ಚುಂಬಿಸಬೇಕು.ಇದಾವುದೂ ಸಾಧ್ಯವಾಗದಿದ್ದರೆ, ಹಜರುಲ್ ಅಸ್ವದ್ ಕಡೆಗೆ ಮುಖಮಾಡಿ ಕೈಯಿಂದ ಸನ್ನೆ ಮಾಡಬೇಕು (ಕೈ ಚುಂಬಿಸಬಾರದು).ಜನರಿಗೆ ತೊಂದರೆ ಕೊಡದಿರುವುದು ಮತ್ತು ತಾವೂ ತೊಂದರೆಗೊಳಗಾಗದಿರುವುದು ಉತ್ತಮ.
6. ಹಜರುಲ್ ಅಸ್ವದ್ ಅನ್ನು ಮುಟ್ಟುವಾಗ ಅಥವಾ ಸನ್ನೆ ಮಾಡುವಾಗ ಹೀಗೆ ಹೇಳುವುದು ಸುನ್ನತ್:ಅಲ್ಲಾಹು ಮಹಾನನು.ಅಲ್ಲಾಹು ಅಕ್ಬರ್.
7. ನಂತರ ಕಾಬಾವನ್ನು ತನ್ನ ಎಡಭಾಗದಲ್ಲಿರಿಸಿಕೊಂಡು ಬಲಭಾಗದ ಕಡೆಗೆ ನಡೆಯಬೇಕು.ರುಕ್ನುಲ್ ಯಮಾನಿಯನ್ನು ತಲುಪಿದಾಗ ಅದನ್ನು ಮುಟ್ಟಬೇಕು, ಚುಂಬಿಸಬಾರದು.ಮುಟ್ಟಲು ಸಾಧ್ಯವಾಗದಿದ್ದರೆ ನೂಕಾಟ ಮಾಡಬಾರದು ಮತ್ತು ಅದರ ಕಡೆಗೆ ಸನ್ನೆಯನ್ನೂ ಮಾಡಬಾರದು.
ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು.ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ ವಫಿಲ್ ಆಖಿರತಿ ಹಸನತನ್ ವಕಿನಾ ಅದಾಬನ್ನಾರ್
8. ರುಕ್ನುಲ್ ಯಮಾನಿ ಮತ್ತು ಹಜರುಲ್ ಅಸ್ವದ್ ನಡುವೆ ಹೀಗೆ ಪ್ರಾರ್ಥಿಸಬೇಕು:
9. ಪ್ರತಿ ಬಾರಿ ಹಜರುಲ್ ಅಸ್ವದ್ ಅನ್ನು ದಾಟುವಾಗ ಕೈಯಿಂದ ಸನ್ನೆ ಮಾಡಿ ಹೀಗೆ ಹೇಳಬೇಕು:ಅಲ್ಲಾಹು ಅಕ್ಬರ್.
10. ತವಾಫ್ನ ಉಳಿದ ಸಮಯದಲ್ಲಿ ನಿಮಗೆ ಇಷ್ಟವಾದ ದಿಕ್ರ್, ದುಆ ಮತ್ತು ಕುರ್ಆನ್ ಪಠಣವನ್ನು ಮಾಡಬಹುದು.
11. ಸಾಧ್ಯವಾದರೆ ಮೊದಲ ಮೂರು ಸುತ್ತುಗಳಲ್ಲಿ ಮಾತ್ರ 'ರಮಲ್' ಮಾಡುವುದು ಸುನ್ನತ್.ಅಂದರೆ ಸಣ್ಣ ಹೆಜ್ಜೆಗಳನ್ನಿಡುತ್ತಾ ವೇಗವಾಗಿ ನಡೆಯುವುದು.ಉಳಿದ ನಾಲ್ಕು ಸುತ್ತುಗಳಲ್ಲಿ ವೇಗವಾಗಿ ನಡೆಯಬಾರದು.
12. ತವಾಫ್ ಮುಗಿದ ನಂತರ ಸಾಧ್ಯವಾದರೆ ಮಕಾಮೆ ಇಬ್ರಾಹೀಂನ ಹಿಂದೆ ಎರಡು ರಕ್ಅತ್ ನಮಾಝ್ ಮಾಡುವುದು ಸುನ್ನತ್.ಸಾಧ್ಯವಾಗದಿದ್ದರೆ ಮಸೀದಿಯ ಯಾವುದೇ ಸ್ಥಳದಲ್ಲಿ ನಮಾಝ್ ಮಾಡಬಹುದು.ಮೊದಲ ರಕ್ಅತ್ನಲ್ಲಿ ಸೂರತುಲ್ ಫಾತಿಹಾದ ನಂತರ ಇದನ್ನು ಪಠಿಸಿ:ಖುಲ್ ಯಾ ಅಯ್ಯುಹಲ್ ಕಾಫಿರೂನ್ಎರಡನೇ ರಕ್ಅತ್ನಲ್ಲಿ ಸೂರತುಲ್ ಫಾತಿಹಾದ ನಂತರ ಇದನ್ನು ಪಠಿಸಿ:ಖುಲ್ ಹುವಲ್ಲಾಹು ಅಹದ್.
ಸಈ ಮಾಡುವ ವಿಧಾನ
1. ತವಾಫ್ ಮತ್ತು ಅದರ ಎರಡು ರಕ್ಅತ್ ನಮಾಝ್ ಮುಗಿದ ನಂತರ ಸಈ ಮಾಡುವ ಸ್ಥಳಕ್ಕೆ ಹೋಗಬೇಕು.ಸಫಾ ಬೆಟ್ಟದ ಸಮೀಪ ತಲುಪಿದಾಗ ಈ ವಚನವನ್ನು ಪಠಿಸಬೇಕು:ಇನ್ನಸ್ಸಫಾ ವಲ್-ಮರ್ವತ ಮಿನ್ ಶಆಇರಿಲ್ಲಾಹ್ನಂತರ ಹೀಗೆ ಹೇಳಬೇಕು:"ಅಲ್ಲಾಹು ಆರಂಭಿಸಿದಲ್ಲಿಂದಲೇ ನಾನು ಆರಂಭಿಸುತ್ತೇನೆ."ಅಬ್ದಉ ಬಿಮಾ ಬದಅಲ್ಲಾಹು ಬಿಹಿ.
2. ನಂತರ ಖಿಬ್ಲಾದ (ಕಾಬಾದ) ಕಡೆಗೆ ಮುಖ ಮಾಡಿ ನಿಂತು ಹೀಗೆ ಹೇಳುವುದು ಸುನ್ನತ್:ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯ ಅವನದ್ದು ಮತ್ತು ಸರ್ವಸ್ತುತಿ ಅವನಿಗೆ, ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು.ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ, ಅವನು ಏಕೈಕನು. ಅವನು ತನ್ನ ವಾಗ್ದಾನವನ್ನು ನೆರವೇರಿಸಿದನು, ತನ್ನ ದಾಸನಿಗೆ ಸಹಾಯ ಮಾಡಿದನು ಮತ್ತು ಶತ್ರುಪಡೆಗಳನ್ನು ಏಕಾಂಗಿಯಾಗಿ ಸೋಲಿಸಿದನು.ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು, ಲಹುಲ್ ಮುಲ್ಕು ವ ಲಹುಲ್ ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಕದೀರ್,ಲಾ ಇಲಾಹ ಇಲ್ಲಲ್ಲಾಹು ವಹ್ದಹು, ಅಂಜಝ ವಅದಹು, ವನಸರ ಅಬ್ದಹು, ವಹಝಮಲ್ ಅಹ್ಝಾಬ ವಹ್ದಹುಇದನ್ನು ಮೂರು ಬಾರಿ ಪುನರಾವರ್ತಿಸಬೇಕು ಮತ್ತು ಇದರ ನಡುವೆ ಬೇರೆ ದುಆ (ಪ್ರಾರ್ಥನೆ) ಮಾಡಬೇಕು.
3. ನಂತರ ಸಫಾದಿಂದ ಮರ್ವಾ ಕಡೆಗೆ ನಡೆಯಲು ಪ್ರಾರಂಭಿಸಬೇಕು.ಹಸಿರು ಬಣ್ಣದ ಗುರುತು ತಲುಪಿದಾಗ, ಪುರುಷರು ಮಾತ್ರ ವೇಗವಾಗಿ ಓಡಬೇಕು.ಎರಡನೇ ಹಸಿರು ಗುರುತು ತಲುಪಿದಾಗ ಮತ್ತೆ ಮಾಮೂಲಿಯಾಗಿ ನಡೆಯಬೇಕು.
4. ಮರ್ವಾ ತಲುಪಿದಾಗ, ಸಫಾದಲ್ಲಿ ಮಾಡಿದಂತೆಯೇ ಮಾಡಬೇಕು.ಅಂದರೆ ತಕ್ಬೀರ್, ದುಆ ಮತ್ತು ಕುರ್ಆನ್ ಪಠಿಸುವುದು ಹಾಗೂ ಕಅಬಾದ ಕಡೆಗೆ ತಿರುಗುವುದು.
5. ನಂತರ ಮರ್ವಾದಿಂದ ಸಫಾ ಕಡೆಗೆ ನಡೆಯಬೇಕು.ಮೊದಲ ಹಸಿರು ಗುರುತು ತಲುಪಿದಾಗ ವೇಗವಾಗಿ ಓಡಬೇಕು,ಎರಡನೇ ಹಸಿರು ಗುರುತು ದಾಟಿದಾಗ ಮಾಮೂಲಿಯಾಗಿ ನಡೆಯಬೇಕು.
6. ಇದೇ ರೀತಿ ಏಳು ಸುತ್ತುಗಳನ್ನು ಪೂರ್ಣಗೊಳಿಸಬೇಕು.ಸಫಾದಿಂದ ಮರ್ವಾಗೆ ಹೋಗುವುದು ಒಂದು ಸುತ್ತು,ಮತ್ತು ಮರ್ವಾದಿಂದ ಸಫಾಗೆ ಹಿಂತಿರುಗುವುದು ಎರಡನೇ ಸುತ್ತು.ಇದು ಸಫಾದಿಂದ ಪ್ರಾರಂಭವಾಗಿ ಮರ್ವಾದಲ್ಲಿ ಕೊನೆಗೊಳ್ಳುತ್ತದೆ.
7. ಸಈ ಮಾಡುವಾಗ ನಿಮಗೆ ಇಷ್ಟವಾದ ದಿಕ್ರ್, ದುಆ ಮತ್ತು ಕುರ್ಆನ್ ಪಠಣ ಮಾಡಬಹುದು.
ತಲೆ ಬೋಳಿಸುವ ಮತ್ತು ಕೂದಲು ಕತ್ತರಿಸುವ ವಿಧಾನ:
1. ಉಮ್ರಾ ಮಾಡುವವನು ತವಾಫ್ ಮತ್ತು ಸಈ ಮುಗಿಸಿದ ನಂತರ, ಪುರುಷನಿಗೆ ತಲೆಯನ್ನು ಬೋಳಿಸಿಕೊಳ್ಳುವುದು ಅಥವಾ ಕೂದಲನ್ನು ಕತ್ತರಿಸುವುದು ಕಡ್ಡಾಯ.ಕೂದಲು ಬೋಳಿಸುವುದು ಅಥವಾ ಕತ್ತರಿಸುವುದು ತಲೆಯ ಎಲ್ಲಾ ಭಾಗಕ್ಕೂ ಅನ್ವಯಿಸಬೇಕು.
2. ಮಹಿಳೆ ತನ್ನ ಕೂದಲಿನ ತುದಿಗಳಿಂದ ಬೆರಳ ತುದಿಯ ಗಾತ್ರದಷ್ಟು ಕತ್ತರಿಸಬೇಕು.
ಇದರೊಂದಿಗೆ ಉಮ್ರಾ ಪೂರ್ಣಗೊಳ್ಳುತ್ತದೆ.
ವೀಡಿಯೊದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವ ವಾಕ್ಯಗಳು:ವೀಡಿಯೊದಲ್ಲಿ ಕಾಣುವ ವಾಕ್ಯಗಳು
ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
65 ಭಾಷೆಗಳು
ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ. ಮುಂದುವರಿದು ಹೇಳುವುದೇನೆಂದರೆ: ಇದು ಉಮ್ರಾ ನಿರ್ವಹಿಸುವ ವಿಧಾನ, ನಿಯಮ ಮತ್ತು ಶಿಷ್ಟಾಚಾರಗಳ ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಉಮ್ರಾ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಇದನ್ನು ಅಲ್ಲಾಹನ ಗೌರವಾನ್ವಿತ ಮುಖವನ್ನು ಬಯಸಿ ಅವನಿಗಾಗಿ ಮೀಸಲುಗೊಳಿಸುವಂತೆ ಮತ್ತು ಇದರಿಂದ ಸರ್ವ ಮುಸ್ಲಿಮರಿಗೆ ಪ್ರಯೋಜನವಾಗುವಂತೆ ಮಾಡಲು ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ.
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ. ಮುಂದುವರಿದು ಹೇಳುವುದೇನೆಂದರೆ: ಇದು ಹಜ್ನ ವಿವರಣೆಯ ಒಂದು ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಹಜ್ಜ್ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಅಲ್ಲಾಹು ಇದನ್ನು ತನ್ನ ಪವಿತ್ರ ಮುಖವನ್ನು ಮಾತ್ರ ಬಯಸುವ ಹಾಗೂ ಎಲ್ಲಾ ಮುಸ್ಲಿಮರಿಗೂ ಪ್ರಯೋಜನ ನೀಡುವ ಕೃತಿಯಾಗಿ ಮಾಡಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಮುನ್ನುಡಿ
ವುದೂ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ)
79 ಭಾಷೆಗಳು
ವುದೂ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ)
ವುದೂ ಮಾಡುವ ವಿಧಾನ (ಸರಳೀಕೃತ ವೀಡಿಯೊ) ವುದೂವನ್ನು ಹಂತ ಹಂತವಾಗಿ ಹೇಗೆ ಮಾಡಬೇಕೆಂದು ತೋರಿಸುವ ಪ್ರಾಯೋಗಿಕ ವಿವರಣೆ. ಇದು ತುಂಬಾ ಮುಖ್ಯವಾಗಿದೆ; ಏಕೆಂದರೆ ವುದೂ ನಮಾಝ್ ಸಿಂಧುವಾಗಲು ಒಂದು ಷರತ್ತಾಗಿದೆ. ವೀಡಿಯೊ ವೀಕ್ಷಿಸಿ ಮತ್ತು ವುದೂ ಮಾಡುವ ಸರಿಯಾದ ವಿಧಾನವನ್ನು ಕಲಿಯಿರಿ. ವುದೂ ಮಾಡುವ ವಿಧಾನ