Skip to content

ಹದೀಸ್ ಅನ್ನು ಪೂರ್ಣಗೊಳಿಸಿ: "إنما الأعمال بالنيات..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س1: أكمل حديث: «إنما الأعمال بالنيات ...»، واذكر بعض فوائده.

ಪ್ರಶ್ನೆ 1. ಹದೀಸ್ ಅನ್ನು ಪೂರ್ಣಗೊಳಿಸಿ: "إنما الأعمال بالنيات..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن أمير المؤمنين أبي حفص عمر بن الخطاب رَضِيَ اللَّهُ تَعَالَى عَنْهُ قال: سمعت رسول الله صَلَّى اللهُ تَعَالَى عَلَيْهِ وعَلَى آَلِهِ وَسَلَّمَ يقول:

«إنما الأعمال بالنيات، وإنما لكل امرئ ما نوى، فمن كانت هجرته إلى الله ورسوله؛ فهجرته إلى الله ورسوله، ومن كانت هجرته لدنيا يصيبها، أو امرأة ينكحها؛ فهجرته إلى ما هاجر إليه»

رواه البخاري ومسلم.

فوائد من الحديث:

  1. كل عمل لا بد له من نية، من صلاة، وصوم، وحج، وغيرها من الأعمال.
  2. لا بد من الإخلاص في النية لله تَعَالَى.

ಉತ್ತರ: ಅಮೀರುಲ್ ಮೂಮಿನೀನ್ ಅಬು ಹಫ್ಸ್ ಉಮರ್ ಬಿನ್ ಖತ್ತಾಬ್ رَضِيَ اللَّهُ تَعَالَى عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

“ಕರ್ಮಗಳು ಉದ್ದೇಶಗಳ ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಉದ್ದೇಶಿಸಿದ್ದನ್ನು ಮಾತ್ರ ಹೊಂದಿರುತ್ತಾನೆ. ಆದ್ದರಿಂದ ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಕಡೆಗೆ ವಲಸೆ ಹೋದನೋ; ಅವನ ವಲಸೆಯು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗಾಗಿದೆ. ಯಾರು ಲೌಕಿಕ ಪ್ರಯೋಜನಗಳಿಗಾಗಿ ಅಥವಾ ಒಬ್ಬ ಮಹಿಳೆಯನ್ನು ಮದುವೆಯಾಗಲು ವಲಸೆ ಹೋದನೋ; ಅವನ ವಲಸೆಯು ಅವನು ವಲಸೆ ಹೋದುದಕ್ಕಾಗಿದೆ.”

[ಬುಖಾರಿ ಮತ್ತು ಮುಸ್ಲಿಮ್]

ಹದೀಸಿನ ಪ್ರಯೋಜನಗಳು:

  1. ಪ್ರತಿಯೊಂದು ಕರ್ಮವೂ ಒಂದು ಉದ್ದೇಶವನ್ನು ಹೊಂದಿಯೇ ಇರುತ್ತದೆ. ಉದಾ: ನಮಾಜ್, ಉಪವಾಸ, ಹಜ್ಜ್ ಮತ್ತು ಇತರೆ ಕರ್ಮಗಳು.
  2. ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು ಕಡ್ಡಾಯವಾಗಿದೆ.