ما لا يسع أطفال المسلمين جهله
[ತಿರ್ಮಿದಿ, ಅಹ್ಮದ್]
These files are generated automatically from the book's text; their layout may differ from the printed edition.
[ತಿರ್ಮಿದಿ, ಅಹ್ಮದ್]
(ಮುಕದ್ದಿಮ ಇಬ್ನ್ ಅಬೂ ಝೈದ್ ಅಲ್-ಖೈರವಾನಿ ಪುಟ 5).
[ಮುಸ್ಲಿಮ್].
[ತಿರ್ಮಿದಿ].
[ಅಬೂದಾವೂದ್].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್]
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
[ಮುಸ್ಲಿಮ್].
[ಮುಸ್ಲಿಮ್].
[ತಿರ್ಮಿದಿ].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
[ಮುಸ್ಲಿಮ್].
[ಮುಸ್ಲಿಮ್].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
[ಅಹ್ಮದ್].
[ಅಹ್ಲು-ಸ್ಸುನನ್].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಂ]
[ಅಬೂದಾವೂದ್ ಮತ್ತು ಇಬ್ನು ಮಾಜ].
[ಮುಸ್ಲಿಮ್].
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
[ಬುಖಾರಿ ಮತ್ತು ಮುಸ್ಲಿಂ]
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
(ಅಹ್ಮದ್, ತಿರ್ಮಿದಿ ಮತ್ತು ಇತರರು)
ಇದನ್ನು ಅಹ್ಲು-ಸ್ಸುನನ್ ಅವರು ರಿವಾಯತ್ ಮಾಡಿದ್ದಾರೆ.
[ಬುಖಾರಿ].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
ಇದನ್ನು ನಸಾಈ ಅವರು ವರದಿಸಿದ್ದಾರೆ ಮತ್ತು ಇದರ ಮೂಲವು ಅಸ್-ಸಹೀಹೈನ್ನಲ್ಲಿದೆ.
[ತಿರ್ಮಿದಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].
(ಮುಸ್ಲಿಂ, ಅಹ್ಮದ್ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ)
[ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].
[ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].
[ಬುಖಾರಿ].
[ಅಹ್ಮದ್ ಮತ್ತು ತಿರ್ಮಿದಿ].
[ಇಬ್ನ್ ಮಾಜ ಮತ್ತು ಮಾಲಿಕ್ (ಮುವತ್ತಾ)]
ಈ ಹದೀಸನ್ನು ಇಮಾಮ್ ತಿರ್ಮಿದಿ ಮತ್ತು ನಸಯಿ ರವರು ವರದಿ ಮಾಡಿದ್ದಾರೆ
ವರದಿ ಇಬ್ನು ಮಾಜ.
[ಹಾಕಿಂ ಮತ್ತಿತರರು].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
(ಮುತ್ತಫಕುನ್ ಅಲೈಹಿ).
(ಮುತ್ತಫಕುನ್ ಅಲೈಹಿ).
(ಅಲ್-ಬುಖಾರಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ.
[ಬುಖಾರಿ ಮತ್ತು ಮುಸ್ಲಿಂ]
[ಬುಖಾರಿ ಮತ್ತು ಮುಸ್ಲಿಂ]
[ಮುಸ್ಲಿಮ್].
[ತಿರ್ಮಿದಿ. ಈ ಹದೀಸನ್ನು ಅವರು ಹಸನ್ ಸಹೀಹ್ ಎಂದಿದ್ದಾರೆ].
[ತಿರ್ಮಿದಿ]
[ಬುಖಾರಿ ಮತ್ತು ಮುಸ್ಲಿಂ]
[ಬುಖಾರಿ ಮತ್ತು ಮುಸ್ಲಿಂ]
[ಬುಖಾರಿ]
[ಬುಖಾರಿ ಮತ್ತು ಮುಸ್ಲಿಂ]
[ಬುಖಾರಿ ಮತ್ತು ಮುಸ್ಲಿಂ]
[ಅಬೂದಾವೂದ್].
[ತಿರ್ಮಿದಿ]
[ತಿರ್ಮಿದಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].
[ತಿರ್ಮಿದಿ]
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ತಿರ್ಮಿದಿ].
[ಮುಸ್ಲಿಮ್].
[ತಿರ್ಮಿದಿ ಮತ್ತು ಅಬೂದಾವೂದ್].
[ಅಬೂದಾವೂದ್ ಮತ್ತು ತಿರ್ಮಿದಿ].
[ಬುಖಾರಿ ಮತ್ತು ಮುಸ್ಲಿಮ್].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
[ಬುಖಾರಿ].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ತಿರ್ಮಿದಿ ಮತ್ತು ಅಬೂದಾವೂದ್].
[ಬುಖಾರಿ ಮತ್ತು ಮುಸ್ಲಿಂ]
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
ವರದಿ ಇಬ್ನು ಮಾಜ.
[ತಿರ್ಮಿದಿ ಮತ್ತು ದಾರಮಿ].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
[ಬುಖಾರಿ].
[ತಿರ್ಮಿದಿ ಮತ್ತು ಅಬೂದಾವೂದ್].
[ಬುಖಾರಿ].
[ಬುಖಾರಿ].
[ತಿರ್ಮಿದಿ, ಅಹ್ಮದ್]
[ಬುಖಾರಿ].
[ಅಹ್ಮದ್].
[ಬುಖಾರಿ ಮತ್ತು ಮುಸ್ಲಿಮ್].
[ತಿರ್ಮಿದಿ, ಅಹ್ಮದ್]
[ಬುಖಾರಿ ಮತ್ತು ಮುಸ್ಲಿಮ್].
[ತಿರ್ಮಿದಿ ಮತ್ತು ಇಬ್ನ್ ಮಾಜ].
[ಅಹ್ಮದ್ ಮತ್ತು ಇಬ್ನ್ ಮಾಜ].
[ಅಬೂದಾವೂದ್ ಮತ್ತು ಇಬ್ನ್ ಮಾಜ].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
[ಬುಖಾರಿ].
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
ಇದನ್ನು ತಬರಾನಿ ಮತ್ತು ಇಬ್ನ್ ಅಬೀ ಶೈಬಾ ಅವರು ರಿವಾಯತ್ ಮಾಡಿದ್ದಾರೆ.
[ಬುಖಾರಿ].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
ವರದಿ ಇಬ್ನು ಮಾಜ.
[ಅಬೂದಾವೂದ್ ಮತ್ತು ಇಬ್ನ್ ಮಾಜ].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
ಇದನ್ನು ನಸಾಈ ಅವರು ವರದಿಸಿದ್ದಾರೆ.
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
[ತಿರ್ಮಿದಿ ಮತ್ತು ದಾರಮಿ].
ಈ ಹದೀಸನ್ನು ತಿರ್ಮಿದಿ, ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
[ಮುಸ್ಲಿಮ್].
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
[ಬುಖಾರಿ ಮತ್ತು ಮುಸ್ಲಿಮ್].
ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
ಈ ಹದೀಸನ್ನು ಮುಸ್ಲಿಂ ಮತ್ತು ಅಬೂ ದಾವೂದ್ ನಿರೂಪಿಸಿದ್ದಾರೆ, ಈಲ್ಲಿರುವ ಶಬ್ದಗಳು ಅಬೂ ದಾವೂದ್ ಅವರದ್ದಾಗಿವೆ.
[ಮುಸ್ಲಿಮ್].
ಈ ಹದೀಸನ್ನು ಇಮಾಮ್ ಅಬೂದಾವೂದ್, ಅಹ್ಮದ್ ಮತ್ತು ತಿರ್ಮಿದಿ ರವರು ವರದಿ ಮಾಡಿದ್ದಾರೆ
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
[ತಿರ್ಮಿದಿ ಮತ್ತು ಇಬ್ನ್ ಮಾಜ].
[ಬುಖಾರಿ ಮತ್ತು ಮುಸ್ಲಿಮ್].
[ಅಹ್ಮದ್].
[ಮುಸ್ಲಿಮ್].
[ತಿರ್ಮಿದಿ].
[ತಿರ್ಮಿದಿ ಮತ್ತು ಅಬೂದಾವೂದ್].
[ಬುಖಾರಿ ಮತ್ತು ಮುಸ್ಲಿಂ]
[ತಿರ್ಮಿದಿ].
[ಮುಸ್ಲಿಮ್].
[ಮುಸ್ಲಿಮ್].
[ತಿರ್ಮಿದಿ, ಅಹ್ಮದ್]
ಇದನ್ನು ಹಾಕಿಂ ಮತ್ತು ತಬರಾನಿ ಅವರು ರಿವಾಯತ್ ಮಾಡಿದ್ದಾರೆ.
[ಅಬೂದಾವೂದ್ ಮತ್ತು ತಿರ್ಮಿದಿ].
[ಅಹ್ಮದ್].
[ಅಬೂದಾವೂದ್ ಮತ್ತು ತಿರ್ಮಿದಿ].
[ಅಹ್ಮದ್].
[ಮುಸ್ಲಿಮ್].
(ಮುತ್ತಫಕುನ್ ಅಲೈಹಿ).
(ಮುತ್ತಫಕುನ್ ಅಲೈಹಿ).
(ಮುತ್ತಫಕುನ್ ಅಲೈಹಿ).
(ಮುತ್ತಫಕುನ್ ಅಲೈಹಿ).
[ಮುಸ್ಲಿಮ್].
[ಬುಖಾರಿ ಮತ್ತು ಮುಸ್ಲಿಮ್].
[ಬುಖಾರಿ].
[ತಿರ್ಮಿದಿ ಮತ್ತು ಇಬ್ನ್ ಮಾಜ].
(ಮುತ್ತಫಕುನ್ ಅಲೈಹಿ).
(ಮುತ್ತಫಕುನ್ ಅಲೈಹಿ).
[ಮುಸ್ಲಿಮ್].
[ಅಹ್ಮದ್].
(ಮುತ್ತಫಕುನ್ ಅಲೈಹಿ).
[ಅಬೂದಾವೂದ್ ಮತ್ತು ತಿರ್ಮಿದಿ].
[ಬುಖಾರಿ].
[ಬುಖಾರಿ].
[ಮುಸ್ಲಿಮ್].
[ತಿರ್ಮಿದಿ]
[ಬುಖಾರಿ ಮತ್ತು ಮುಸ್ಲಿಮ್]
[ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
[ಮುಸ್ಲಿಮ್].
[ತಿರ್ಮಿದಿ ಮತ್ತು ಇಬ್ನ್ ಹಿಬ್ಬಾನ್].
[ಬುಖಾರಿ].
[ತಿರ್ಮಿದಿ ಮತ್ತು ಇಬ್ನ್ ಮಾಜ].
(ಮುತ್ತಫಕುನ್ ಅಲೈಹಿ).
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
[ತಿರ್ಮಿದಿ]
[ಅಬೂದಾವೂದ್ ಮತ್ತು ತಿರ್ಮಿದಿ].
[ಅಬೂದಾವೂದ್].
(ಮುತ್ತಫಕುನ್ ಅಲೈಹಿ).
[ಅಬೂದಾವೂದ್ ಮತ್ತು ತಿರ್ಮಿದಿ].
[ಅಬೂದಾವೂದ್ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].
[ಮುಸ್ಲಿಮ್].
[ಅಬೂದಾವೂದ್ ಮತ್ತು ತಿರ್ಮಿದಿ].
[ಅಬೂದಾವೂದ್].
[ಮುಸ್ಲಿಮ್].
[ಮುಸ್ಲಿಮ್].
(ಮುತ್ತಫಕುನ್ ಅಲೈಹಿ).
[ಮುಸ್ಲಿಮ್].
[ಬುಖಾರಿ].
[ಬುಖಾರಿ].
(ಮುತ್ತಫಕುನ್ ಅಲೈಹಿ).
[ಅಬೂದಾವೂದ್ ಮತ್ತು ತಿರ್ಮಿದಿ].
[ಅಬೂದಾವೂದ್, ಇಬ್ನ್ ಮಾಜ ಹಾಗೂ ಇತರರು].
[ಮುಸ್ಲಿಮ್].
[ಬುಖಾರಿ].
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
[ಅಬೂದಾವೂದ್ ಮತ್ತು ತಿರ್ಮಿದಿ].
ಹಿಂದಿರುಗಿ ಬರುವಾಗ ಇದರ ಕೊನೆಯಲ್ಲಿ ಕೆಳಗಿನ ಪ್ರಾರ್ಥನೆಯನ್ನು ಸೇರಿಸಿ ಹೇಳಬೇಕು: (ಆಯಿಬೂನ ತಾಇಬೂನ ಆಬಿದೂನ ಲಿರಬ್ಬಿನಾ ಹಾಮಿದೂನ್) “ನಾವು ಮರಳುತ್ತಿದ್ದೇವೆ, ಪಶ್ಚಾತ್ತಾಪ ಪಡುತ್ತಿದ್ದೇವೆ, ಆರಾಧಿಸುತ್ತಿದ್ದೇವೆ ಮತ್ತು ನಮ್ಮ ರಬ್ಬಿಗೆ ನಾವು ಸ್ತುತಿ ಅರ್ಪಿಸುತ್ತಿದ್ದೇವೆ.” [ಮುಸ್ಲಿಮ್].
[ಅಹ್ಮದ್ ಮತ್ತು ಇಬ್ನ್ ಮಾಜ].
[ಅಹ್ಮದ್ ಮತ್ತು ತಿರ್ಮಿದಿ].
[ತಿರ್ಮಿದಿ ಮತ್ತು ಇಬ್ನ್ ಮಾಜ].
(ಮುತ್ತಫಕುನ್ ಅಲೈಹಿ).
[ತಿರ್ಮಿದಿ]
[ಅಬೂದಾವೂದ್].
[ಹಾಕಿಂ ಮತ್ತಿತರರು].
[ಸಹೀಹುಲ್ ಜಾಮಿಅ್]
[ತಿರ್ಮಿದಿ, ಅಬೂದಾವೂದ್ ಮತ್ತಿತರರು].
[ಬುಖಾರಿ].
[ಬುಖಾರಿ ಮತ್ತು ಮುಸ್ಲಿಂ]
[ಅಬೂದಾವೂದ್ ಮತ್ತು ಇಬ್ನ್ ಮಾಜ].
[ಮುವತ್ತಾ ಮಾಲಿಕ್].
[ತಿರ್ಮಿದಿ]
[ಅಹ್ಮದ್, ಇಬ್ನ್ ಮಾಜ ಹಾಗೂ ಇತರರು].
(ಮುತ್ತಫಕುನ್ ಅಲೈಹಿ).
ಸಮ್ಮಿಶ್ರ ವಿಷಯಗಳ ವಿಭಾಗ:
[ಬುಖಾರಿ ಮತ್ತು ಮುಸ್ಲಿಂ]
[ಮುಸ್ಲಿಮ್].
[ಮುಸ್ಲಿಮ್].
[ಅಬೂದಾವೂದ್].
ಅಬೂದಾವೂದ್, ತಿರ್ಮಿದಿ, ಇಬ್ನು ಮಾಜ
[ಬುಖಾರಿ ಮತ್ತು ಮುಸ್ಲಿಂ]
ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಮುನ್ನುಡಿ
ಅಲ್ಲಾಹನ ನಾಮದಿಂದ. ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಮುಂದುವರೆದು ಹೇಳುವುದೇನೆಂದರೆ:
ಇವು ಸರ್ವಶಕ್ತನಾದ ಅಲ್ಲಾಹನ ಧರ್ಮದ ಮುಸ್ಲಿಂ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳಾಗಿವೆ. ತಂದೆ-ತಾಯಿಗಳು ಚಿಕ್ಕಂದಿನಿಂದಲೇ ಮಕ್ಕಳಿಗೆ ಇವುಗಳನ್ನು ಕಲಿಸಿಕೊಡಬೇಕು. ಇದು ಅಕೀದ (ವಿಶ್ವಾಸಶಾಸ್ತ್ರ), ಕರ್ಮಶಾಸ್ತ್ರ, ಜೀವನಚರಿತ್ರೆ, ಶಿಷ್ಟಾಚಾರ, ಕುರ್ಆನ್ ವ್ಯಾಖ್ಯಾನ, ಹದೀಸ್, ಗುಣನಡವಳಿಕೆ ಮತ್ತು ದಿಕ್ರ್ಗಳ ಬಗ್ಗೆಯಿರುವ ಸರಳ, ಸುಲಭ ಮತ್ತು ಸಮಗ್ರ ಪಠ್ಯಕ್ರಮವಾಗಿದೆ. ಇದು ಮಕ್ಕಳಿಗೆ, ಎಲ್ಲಾ ವಯೋಮಾನದವರಿಗೆ ಹಾಗೂ ನವಮುಸ್ಲಿಮರಿಗೆ ಸೂಕ್ತವಾಗಿದೆ. ಇದನ್ನು ಮನೆಗಳಲ್ಲಿ, ಪೂರ್ವಪ್ರಾಥಮಿಕ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಲಾಗುತ್ತದೆ, ಕಂಠಪಾಠ ಮಾಡಿಸಲಾಗುತ್ತದೆ ಮತ್ತು ವಿವರಿಸಿಕೊಡಲಾಗುತ್ತದೆ. ನಾನು ಅವುಗಳನ್ನು ವಿಷಯಾನುಕ್ರಮದಲ್ಲಿ, ಪ್ರಶ್ನೋತ್ತರ ಶೈಲಿಯಲ್ಲಿ ರಚಿಸಿದ್ದೇನೆ. ಏಕೆಂದರೆ ಈ ಶೈಲಿಯು ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಕಂಠಪಾಠವನ್ನು ಆಳವಾಗಿ ಬೇರೂರಿಸುತ್ತದೆ. ಬೋಧಕರು ತಮ್ಮ ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಪಠ್ಯಗಳನ್ನು ಆರಿಸಿಕೊಳ್ಳಬೇಕು.
ಇದನ್ನು ಪ್ರಯೋಜನಕಾರಿಯನ್ನಾಗಿ ಮಾಡಲು ಮತ್ತು ಸ್ವೀಕರಿಸಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ.
ಇವುಗಳ ಮೂಲಾಧಾರವು:
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ನರಕಾಗ್ನಿಯಿಂದ ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರ ಹೃದಯದ ಬಲಿಷ್ಠ ದೇವದೂತರುಗಳಿದ್ದಾರೆ. ಅಲ್ಲಾಹನ ಯಾವುದೇ ಆಜ್ಞೆಯನ್ನೂ ಅವರು ಧಿಕ್ಕರಿಸುವುದಿಲ್ಲ. ಅವರಿಗೆ ಆಜ್ಞಾಪಿಸಲಾಗುವುದೆಲ್ಲವನ್ನೂ ಅವರು ನಿರ್ವಹಿಸುತ್ತಾರೆ. [ಅತ್ತಹ್ರೀಮ್:6].
ಅಬ್ದುಲ್ಲಾ ಬಿನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದು ದಿನ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಸವಾರಿ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಪುಟ್ಟಾ, ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ನೀನು ಅಲ್ಲಾಹನ ಆದೇಶಗಳನ್ನು ಸಂರಕ್ಷಿಸು. ಅವನು ನಿನ್ನನ್ನು ಸಂರಕ್ಷಿಸುವನು. ಅಲ್ಲಾಹನ ಹಕ್ಕುಗಳ ಬಗ್ಗೆ ಪ್ರಜ್ಞಾವಂತನಾಗಿರು. ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣುವೆ. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಮಾತ್ರ ಬೇಡು. ನೀನು ಸಹಾಯ ಯಾಚಿಸುವುದಾದರೆ ಅಲ್ಲಾಹನಲ್ಲಿ ಮಾತ್ರ ಸಹಾಯಯಾಚಿಸು. ತಿಳಿದುಕೋ! ನಿನಗೆ ಏನಾದರೂ ಪ್ರಯೋಜನವನ್ನು ತರಲು ಜನರೆಲ್ಲರೂ ಒಟ್ಟುಗೂಡಿದರೂ, ಅಲ್ಲಾಹು ನಿನಗೆ ವಿಧಿಸಿದ್ದನ್ನಲ್ಲದೆ ಬೇರೆ ಯಾವ ಪ್ರಯೋಜನವನ್ನು ತರಲು ಅವರಿಗೆ ಸಾಧ್ಯವಿಲ್ಲ. ನಿಮಗೆ ಏನಾದರೂ ಹಾನಿ ಮಾಡಲು ಅವರೆಲ್ಲರೂ ಒಟ್ಟುಗೂಡಿದರೂ, ಅಲ್ಲಾಹು ನಿನಗೆ ವಿಧಿಸಿದ್ದನ್ನಲ್ಲದೆ ಬೇರೆ ಯಾವುದೇ ಹಾನಿಯನ್ನುಂಟು ಮಾಡಲು ಅವರಿಗೆ ಸಾಧ್ಯವಿಲ್ಲ, ಲೇಖನಿಗಳನ್ನು ಎತ್ತಲಾಗಿದೆ ಮತ್ತು ದಾಖಲೆಗಳು ಒಣಗಿವೆ.
ಮಕ್ಕಳಿಗೆ ಶಿಕ್ಷಣ ನೀಡುವುದರ ಮಹತ್ವ:
ಮಕ್ಕಳು ತಮ್ಮ ಧರ್ಮದ ಬಗ್ಗೆ ಕಡ್ಡಾಯವಾಗಿ ಕಲಿಯಬೇಕಾದುದನ್ನು ಕಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ಇದರಿಂದ ಮಕ್ಕಳು ಇಸ್ಲಾಂ ಧರ್ಮದ ಸಹಜ ಪ್ರಕೃತಿಯಲ್ಲಿ ಬೆಳೆದು ಪೂರ್ಣ ಮಾನವರಾಗುತ್ತಾರೆ. ವಿಶ್ವಾಸದ ಮಾರ್ಗದಲ್ಲಿ ಏಕದೇವವಿಸ್ವಾಸಿಯಾಗುತ್ತಾರೆ.
ಇಮಾಮ್ ಇಬ್ನ್ ಅಬೂ ಝೈದ್ ಅಲ್-ಖೈರವಾನಿ(ರ) ಹೇಳುತ್ತಾರೆ: "ಮಕ್ಕಳಿಗೆ ಏಳು ವರ್ಷ ಪ್ರಾಯವಾಗುವಾಗ ಅವರಿಗೆ ನಮಾಝ್ ಮಾಡಲು ಆದೇಶಿಸಬೇಕು. ಹತ್ತನೇ ವಯಸ್ಸಿನಲ್ಲೂ ನಮಾಝ್ ಮಾಡದಿದ್ದರೆ ಹೊಡೆಯಬೇಕು. ಅವರನ್ನು ಬೇರೆ ಬೇರೆಯಾಗಿ ಮಲಗಿಸಬೇಕು. ಅಂತೆಯೇ, ಅವರು ಪ್ರೌಢಾವಸ್ಥೆಯನ್ನು ತಲುಪುವ ಮೊದಲೇ, ಅಲ್ಲಾಹು ದಾಸರಿಗೆ ಕಡ್ಡಾಯಗೊಳಿಸಿದ ಮಾತು ಮತ್ತು ಪ್ರವೃತ್ತಿಗಳನ್ನು ಅವರು ತಿಳಿದಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಅವರು ಪ್ರೌಢಾವಸ್ಥೆಗೆ ಬರುವ ಮೊದಲೇ ಅದು ಅವರ ಹೃದಯದಲ್ಲಿ ನೆಲೆಗೊಂಡಿರುವುದಕ್ಕಾಗಿ,ಅವರ ಮನಸ್ಸುಗಳು ಶಾಂತವಾಗುವುದಕ್ಕಾಗಿ ಮತ್ತು ಅವರು ತಮ್ಮ ಅಂಗಾಂಗಗಳು ಅವರು ಕಲಿತದ್ದನ್ನು ಸುಗಮವಾಗಿ ನಿರ್ವಹಿಸುವುದಕ್ಕಾಗಿ.”
ಅಕೀದ ವಿಭಾಗ
ಅಕೀದ ಶಾಸ್ತ್ರ:
ಇಸ್ಲಾಮೀ ವಿಶ್ವಾಸವೆಂದರೆ, ಅತ್ಯುನ್ನತನಾದ ಅಲ್ಲಾಹನ ಪ್ರಭುತ್ವ, ದೇವತ್ವ, ಅವನ ನಾಮಗಳು ಮತ್ತು ಗುಣಲಕ್ಷಣಗಳಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ, ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ, ಹಾಗೆಯೇ ದೃಢಪಟ್ಟಿರುವ ಇತರ ಎಲ್ಲ ಅಗೋಚರ ವಿಷಯಗಳಲ್ಲಿ, ಧರ್ಮದ ಮೂಲಭೂತ ತತ್ವಗಳಲ್ಲಿ, ಮತ್ತು ಈ ವಿಷಯದಲ್ಲಿ ಸತ್ಪೂರ್ವಿಕರು ಸರ್ವಾನುಮತದಿಂದ ಒಪ್ಪಿಕೊಂಡ ವಿಷಯಗಳು ಹಾಗೂ ಇತರ ವಿಷಯಗಳಲ್ಲಿ ದೃಢವಾಗಿ ವಿಶ್ವಾಸವಿಡುವುದು.
ಪ್ರಶ್ನೆ 1. ನಿನ್ನ ರಬ್ಬ್ ಯಾರು?
ಉತ್ತರ: ನನ್ನನ್ನು ಪೋಷಿಸಿ ಬೆಳೆಸಿದವನು ಮತ್ತು ತನ್ನ ಅನುಗ್ರಹದಿಂದ ಸರ್ವಲೋಕಗಳನ್ನು ಪೋಷಿಸಿ ಬೆಳೆಸುವವನೇ ನನ್ನ ರಬ್ಬ್. ಅವನೇ ನನ್ನ ಆರಾಧ್ಯನು ಮತ್ತು ನನಗೆ ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನು ವಿಶ್ವದಲ್ಲಿರುವ ಎಲ್ಲದರ ಸೃಷ್ಟಿಕರ್ತ, ಮಾಲೀಕ, ಜೀವನೋಪಾಯವನ್ನು ಒದಗಿಸುವವ ಮತ್ತು ನಿಯಂತ್ರಕ.
ಪುರಾವೆ ಅಲ್ಲಾಹನ ವಚನ: ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. [ಅಲ್-ಫಾತಿಹ:2].
ಪ್ರಶ್ನೆ 2. ನಿನ್ನ ಧರ್ಮ ಯಾವುದು?
ಉತ್ತರ: ನನ್ನ ಧರ್ಮ ಇಸ್ಲಾಂ. ಇಸ್ಲಾಮ್ ಎಂದರೆ ತೌಹೀದ್ (ಏಕದೇವವಿಶ್ವಾಸ) ನ ಮೂಲಕ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು, ಅನುಸರಣೆಯ ಮೂಲಕ ಅವನಿಗೆ ವಿಧೇಯವಾಗಿರುವುದು ಮತ್ತು ಶಿರ್ಕ್ (ಬಹುದೇವವಿಶ್ವಾಸ) ಹಾಗೂ ಅದರ ಜನರಿಂದ ದೂರವಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ಅಲ್ಲಾಹನ ಬಳಿ (ಸ್ವೀಕಾರವಾಗುವ) ಧರ್ಮವು ಇಸ್ಲಾಮ್ ಮಾತ್ರ. [ಆಲು ಇಮ್ರಾನ್: 19].
ಪ್ರಶ್ನೆ 3. ನಿನ್ನ ಪ್ರವಾದಿ ಯಾರು?
ಉತ್ತರ: ಪ್ರವಾದಿ ಮುಹಮ್ಮದ್ ﷺ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಮುಹಮ್ಮದ್ ಅಲ್ಲಾಹುವಿನ ಸಂದೇಶವಾಹಕರಾಗಿರುವರು.” [ಅಲ್-ಫತ್ಹ್:29]
ಪ್ರಶ್ನೆ 4. ಕಲಿಮತು-ತ್ತೌಹೀದ್ ಅನ್ನು ಮತ್ತು ಅದರ ಅರ್ಥವನ್ನು ತಿಳಿಸಿ?
ಉತ್ತರ: ಕಲಿಮತು-ತ್ತೌಹೀದ್ ಎಂದರೆ "ಲಾ ಇಲಾಹ ಇಲ್ಲಲ್ಲಾಹ್”. ಅದರ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಆರಾಧನೆಗೆ ಯಾರೂ ನೈಜ ಹಕ್ಕುದಾರರಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ತಿಳಿಯಿರಿ! ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ [ಮುಹಮ್ಮದ್: 19]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅದೇಕೆಂದರೆ ಅಲ್ಲಾಹನೇ ಸತ್ಯ. ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳೆಲ್ಲವೂ ಮಿಥ್ಯ. ಅಲ್ಲಾಹು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ. [ಅಲ್-ಹಜ್ಜ್: 62]
ಪ್ರಶ್ನೆ 5. ಸರ್ವಶಕ್ತನಾದ ಅಲ್ಲಾಹು ಎಲ್ಲಿದ್ದಾನೆ?
ಉತ್ತರ: ಅಲ್ಲಾಹನು ಆಕಾಶಗಳ ಮೇಲೆ, ಅವನ ಎಲ್ಲಾ ಸೃಷ್ಟಿಗಳ ಮೇಲೆ ಅರ್ಶ್ನಲ್ಲಿ ಆರೂಢನಾಗಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಪರಮ ದಯಾಮಯನು (ಅಲ್ಲಾಹು) ಸಿಂಹಾಸನದಲ್ಲಿ ಆರೂಢನಾಗಿದ್ದಾನೆ. [ತ್ವಾಹಾ:5]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿರುವನು. ಅವನು ಯುಕ್ತಿಪೂರ್ಣನೂ ಸೂಕ್ಷ್ಮ ಜ್ಞಾನಿಯೂ ಆಗಿರುವನು.” [ಅಲ್-ಅನ್ಆಮ್: 18].
ಪ್ರಶ್ನೆ 6. ಮುಹಮ್ಮದ್ ﷺ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯದ ಅರ್ಥವೇನು?
ಉತ್ತರ: ಅದರ ಅರ್ಥ: ಅಲ್ಲಾಹು ಅವರನ್ನು ಸರ್ವಲೋಕಗಳಿಗೆ ಸುವಾರ್ತೆ ನೀಡುವವರಾಗಿ ಮತ್ತು ಎಚ್ಚರಿಕೆ ನೀಡುವವರಾಗಿ ಕಳುಹಿಸಿದನು.
• ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
1. ಅವರು ಆಜ್ಞಾಪಿಸಿದ ವಿಷಯಗಳನ್ನು ಅನುಸರಿಸುವುದು.
2. ಅವರು ತಿಳಿಸಿಕೊಟ್ಟದ್ದರಲ್ಲಿ ವಿಶ್ವಾಸವಿಡುವುದು.
3. ಅವರನ್ನು ಧಿಕ್ಕರಿಸದಿರುವುದು.
4. ಅವರ ಆದೇಶದ ಪ್ರಕಾರವಲ್ಲದೆ ಅಲ್ಲಾಹನನ್ನು ಆರಾಧಿಸದಿರುವುದು. ಅಂದರೆ ಸುನ್ನತ್ತನ್ನು ಅನುಸರಿಸುವುದು ಮತ್ತು ಬಿದ್ಅತ್ಗಳನ್ನು ತ್ಯಜಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸಿದನು. [ಅನ್ನಿಸಾ: 80]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವರು ಮನಬಂದಂತೆ ಮಾತನಾಡುವುದಿಲ್ಲ 3 ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ. [ಅನ್ನಜ್ಮ್: 3-4]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ. [ಅಲ್-ಅಹ್ಝಾಬ್: 21].
ಪ್ರಶ್ನೆ 7. ಸರ್ವಶಕ್ತನಾದ ಅಲ್ಲಾಹು ನಮ್ಮನ್ನು ಏಕೆ ಸೃಷ್ಟಿಸಿದನು?
ಉತ್ತರ: ಸರ್ವಶಕ್ತನಾದ ಅಲ್ಲಾಹು ಅವನನ್ನು ಮಾತ್ರ ಆರಾಧಿಸಲು ನಮ್ಮನ್ನು ಸೃಷ್ಟಿಸಿದನು. ಆತನು ನಮ್ಮನ್ನು ವ್ಯರ್ಥವಾಗಿ, ಆಟ-ವಿನೋದಕ್ಕಾಗಿ ಅಥವಾ ನಿರುದ್ದೇಶವಾಗಿ ಮತ್ತು ಉಪೇಕ್ಷಿತರನ್ನಾಗಿ ಬಿಡುವುದಕ್ಕಾಗಿ ಸೃಷ್ಟಿಸಲಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ಜಿನ್ನ್ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ. [ಅದ್ದಾರಿಯಾತ್: 56].
ಪ್ರಶ್ನೆ 8. ಆರಾಧನೆ ಎಂದರೇನು?
ಆರಾಧನೆ ಎಂದರೆ ಅಲ್ಲಾಹು ಇಷ್ಟಪಡುವ ಹಾಗೂ ಸಂಪ್ರೀತನಾಗುವ ಎಲ್ಲಾ ಮಾತುಗಳು ಮತ್ತು ಎಲ್ಲಾ ಬಾಹ್ಯ ಹಾಗೂ ಆಂತರಿಕ ಕರ್ಮಗಳು ಅಡಕವಾಗಿರುವ ಸಮಗ್ರ ಹೆಸರಾಗಿದೆ.
ಬಾಹ್ಯ ಕರ್ಮಗಳು ಎಂದರೆ, ಉದಾಹರಣೆಗೆ ನಾಲಿಗೆಯಿಂದ ಅಲ್ಲಾಹನ ಸ್ಮರಣೆ ಮಾಡುವುದು, ಅಂದರೆ ತಸ್ಬೀಹ್, ತಹ್ಮೀದ್, ತಕ್ಬೀರ್, ನಮಾಝ್ ಮತ್ತು ಹಜ್ಜ್.
ಆಂತರಿಕ ಕರ್ಮಗಳು ಎಂದರೆ, ಉದಾಹರಣೆಗೆ ಭರವಸೆ, ಭಯ ಮತ್ತು ನಿರೀಕ್ಷೆ.
ಪ್ರಶ್ನೆ 9. ನಮ್ಮ ಅತಿದೊಡ್ಡ ಕರ್ತವ್ಯ ಯಾವುದು?
ಉತ್ತರ: ನಮ್ಮ ದೊಡ್ಡ ಕರ್ತವ್ಯ ಸರ್ವಶಕ್ತ ಅಲ್ಲಾಹನನ್ನು ಏಕೈಕಗೊಳಿಸುವುದು (ತೌಹೀದ್).
ಅಲ್ಲಾಹು ಹೇಳುತ್ತಾನೆ: ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ (ಅಲ್ ಬಯ್ಯಿನಃ 5)
ಪ್ರಶ್ನೆ 10. ತೌಹೀದಿನ ವಿಧಗಳು ಯಾವುವು?
ಉತ್ತರ: 1. ತೌಹೀದೆ ರುಬೂಬಿಯ್ಯ: ಅಂದರೆ, ಅಲ್ಲಾಹನು ಮಾತ್ರ ಸೃಷ್ಟಿಕರ್ತನು, ಅನ್ನಾಧಾರ ಒದಗಿಸುವವನು, ಮಾಲೀಕನು ಮತ್ತು ನಿಯಂತ್ರಕನೆಂದು ನಂಬುವುದು.
2. ತೌಹೀದೆ ಉಲೂಹಿಯ್ಯ: ಅಂದರೆ ಆರಾಧನೆಯಲ್ಲಿ ಅಲ್ಲಾಹನನ್ನು ಏಕನಾಗಿಸುವುದು. ಅಂದರೆ ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಆರಾಧಿಸದಿರುವುದು.
3. ತೌಹೀದೆ ಅಸ್ಮಾವಸ್ಸಿಫಾತ್: ಇದು ಕುರ್ಆನ್ ಮತ್ತು ಸಹೀಹ್ ಹದೀಸಿನಲ್ಲಿ ಬಂದಿರುವ ಅಲ್ಲಾಹನ ನಾಮಗಳು ಮತ್ತು ಗುಣವಿಶೇಷಣಗಳಲ್ಲಿ, ಅವುಗಳನ್ನು ಉಪಮಿಸದೆ, ಹೋಲಿಸದೆ, ನಿರಾಕರಿಸದೆ, ವಿಧಾನವನ್ನು ಕಲ್ಪಿಸದೆ ವಿಶ್ವಾಸವಿಡುವುದು.
ಈ ಮೂರು ವಿಧದ ತೌಹೀದ್ಗೆ ಪುರಾವೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾಳ್ಮೆಯಿಂದಿರಿ. ಅವನಿಗೆ ಸರಿಸಾಟಿಯಾಗಿ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ? [ಮರ್ಯಮ್:65]
ಪ್ರಶ್ನೆ 11. ಅತಿ ದೊಡ್ಡ ಪಾಪ ಯಾವುದು?
ಉತ್ತರ: ಅಲ್ಲಾಹನೊಡನೆ ಶಿರ್ಕ್ (ಸಹಭಾಗಿತ್ವ) ಮಾಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವವನು ನಿಶ್ಚಯವಾಗಿಯೂ ಗಂಭೀರ ಪಾಪವನ್ನೆಸಗಿದನು. [ಅನ್ನಿಸಾ: 48]
ಪ್ರಶ್ನೆ 12. ಶಿರ್ಕ್ ಮತ್ತು ಅದರ ವಿಧಗಳೆಂದರೇನು?
ಉತ್ತರ: ಶಿರ್ಕ್ ಎಂದರೆ ಅಲ್ಲಾಹನಿಗೆ ಅವನ ಆರಾಧನೆ, ಪ್ರಭುತ್ವ, ಅಥವಾ ಹೆಸರುಗಳು ಮತ್ತು ಗುಣಲಕ್ಷಣಗಳಲ್ಲಿ ಸಹಭಾಗಿಯನ್ನು ಮಾಡುವುದು.
ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನಲ್ಲದವರಿಗೆ ಅರ್ಪಿಸುವುದು ಕೂಡಾ ಶಿರ್ಕ್ ಆಗಿದೆ.
ಅದರ ವಿಧಗಳು:
ದೊಡ್ಡ ಶಿರ್ಕ್: ಉದಾಹರಣೆಗೆ: ಅಲ್ಲಾಹು ಅಲ್ಲದವರನ್ನು ಕರೆದು ಪ್ರಾರ್ಥಿಸುವುದು, ಅಲ್ಲಾಹು ಅಲ್ಲದವರಿಗೆ ಸುಜೂದ್ (ಸಾಷ್ಟಾಂಗ ನಮನ) ಮಾಡುವುದು, ಅಥವಾ ಅಲ್ಲಾಹು ಅಲ್ಲದವರಿಗೆ ಬಲಿ ಅರ್ಪಿಸುವುದು.
- ಸಣ್ಣ ಶಿರ್ಕ್: ಇದು ವ್ಯಕ್ತಿಯನ್ನು ಧರ್ಮದಿಂದ ಹೊರಹಾಕುವುದಿಲ್ಲ. ಉದಾಹರಣೆಗೆ: ಅಲ್ಲಾಹು ಅಲ್ಲದವರ ಮೇಲೆ ಆಣೆ ಹಾಕುವುದು, ಪ್ರಯೋಜನವನ್ನು ತರಲು ಅಥವಾ ಹಾನಿಯನ್ನು ತಡೆಗಟ್ಟಲು ತಾಯಿತಗಳನ್ನು ಕಟ್ಟುವುದು, ಲಘುವಾದ ರೀತಿಯಲ್ಲಿರುವ ತೋರಿಕೆ, ಅಂದರೆ ಒಬ್ಬರು ತನ್ನ ನಮಾಝನ್ನು ನೋಡುತ್ತಿದ್ದಾರೆ ಎಂದು ಭಾಸವಾಗುವಾಗ ನಮಾಝನ್ನು ಸುಂದರವಾಗಿ ನಿರ್ವಹಿಸುವುದು.
ಪ್ರಶ್ನೆ 13. ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಅಗೋಚರ ಜ್ಞಾನವಿದೆಯೇ?
ಉತ್ತರ: ಅಲ್ಲಾಹನಿಗಲ್ಲದೆ ಯಾರಿಗೂ ಅಗೋಚರ ಜ್ಞಾನವಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಹೇಳಿರಿ: “ಅಲ್ಲಾಹನ ಹೊರತು ಭೂಮ್ಯಾಕಾಶಗಳಲ್ಲಿರುವ ಯಾರಿಗೂ ಅದೃಶ್ಯ ಜ್ಞಾನವಿಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುತ್ತದೆಯೆಂದು ಕೂಡ ಅವರಿಗೆ ತಿಳಿದಿಲ್ಲ.” [ಅನ್ನಮ್ಲ್: 65]
ಪ್ರಶ್ನೆ 14. ಈಮಾನಿನ ಸ್ತಂಭಗಳು ಯಾವುವು?
ಉತ್ತರ: ಈಮಾನಿನ ಸ್ತಂಭಗಳು ಆರು:
1. ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು.
2. ಅವನ ಮಲಕ್(ದೇವಚರ)ರಲ್ಲಿ ವಿಶ್ವಾಸವಿಡುವುದು.
3. ಅವನು ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು.
4. ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು.
5- ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು.
6. ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
ಇಮಾಂ ಮುಸ್ಲಿಂ ವರದಿ ಮಾಡಿದ ಹದೀಸ್ ಜಿಬ್ರೀಲ್ ಇದಕ್ಕೆ ಪುರಾವೆಯಾಗಿದೆ. ಜಿಬ್ರೀಲರು ಪ್ರವಾದಿﷺ ರೊಡನೆ ಹೇಳಿದರು: "ನನಗೆ ಈಮಾನಿನ ಬಗ್ಗೆ ತಿಳಿಸಿಕೊಡಿ." ಪ್ರವಾದಿ(ಸ) ರವರು ಉತ್ತರಿಸಿದರು: “ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಗ್ರಂಥಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ ಅದರ ಒಳಿತು ಮತ್ತು ಕೆಡುಕುಗಳಲ್ಲಿ ವಿಶ್ವಾಸವಿಡುವುದು.”
ಪ್ರಶ್ನೆ 15. ಈಮಾನಿನ ಸ್ತಂಭಗಳು ಎಂದರೇನು?
ಉತ್ತರ: 1. ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು. ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಅನ್ನಾಧಾರ ಒದಗಿಸಿದವನು ಅಲ್ಲಾಹನಾಗಿದ್ದಾನೆ ಮತ್ತು ಅವನು ಸರ್ವ ಜೀವರಾಶಿಗಳ ಮಾಲೀಕ ಮತ್ತು ನಿಯಂತ್ರಕನಾಗಿದ್ದಾನೆಂದು ವಿಶ್ವಾಸವಿಡುವುದು. ಅವನೇ ನೈಜ ಆರಾಧ್ಯ. ಅವನಲ್ಲದೆ ಬೇರೆ ಸತ್ಯವಾದ ಆರಾಧ್ಯರಿಲ್ಲ. ಸೃಷ್ಟಿ, ಆಜ್ಞೆ, ತೀರ್ಪು ಮತ್ತು ಶಾಸನವು ಅವನಿಗೇ ಸೇರಿದೆ. ಅವನು ಏಕೈಕನಾಗಿದ್ದು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ.
ಅವನು ಮಹಾನನು, ಶ್ರೇಷ್ಠನು ಮತ್ತು ಸಂಪೂರ್ಣನು. ಸರ್ವಸ್ತುತಿಗಳು ಅವನಿಗೆ ಮಾತ್ರ ಮೀಸಲು. ಅವನಿಗೆ ಅತ್ಯಂತ ಸುಂದರವಾದ ಹೆಸರುಗಳು ಹಾಗು ಅತ್ಯುತ್ತಮ ಗುಣವಿಶೇಷಣಗಳಿವೆ. ಆತನ ಸರಿಸಾಟಿಯಾಗಿ ಯಾರೂ ಇಲ್ಲ. ಅವನಿಗೆ ಹೋಲಿಕೆಯಾಗಿ ಯಾರೂ ಇಲ್ಲ.
ಮಲಕ್ (ದೇವದೂತ) ಗಳಲ್ಲಿ ವಿಶ್ವಾಸವಿಡುವುದು: ಅವರು ಸೃಷ್ಟಿಗಳಾಗಿದ್ದಾರೆ. ತನ್ನ ಆರಾಧನೆ ಮಾಡಲು ಮತ್ತು ತನ್ನ ಆಜ್ಞೆಗಳಿಗೆ ಸಂಪೂರ್ಣ ವಿಧೇಯರಾಗಲು ಅಲ್ಲಾಹು ಅವರನ್ನು ಬೆಳಕಿನಿಂದ ಸೃಷ್ಟಿಸಿದನು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ವಾಸ್ತವವಾಗಿ ಅವರು ಅವನ ಸನ್ಮಾನ್ಯ ದಾಸರಾಗಿದ್ದಾರೆ. ಅಲ್ಲಾಹು ಮಾತನಾಡುವುದಕ್ಕೆ ಮೊದಲೇ ಅವರು ಮಾತನಾಡುವುದಿಲ್ಲ. ಅವರು ಅವನ ಆಜ್ಞೆಯಂತೆ ಕೆಲಸ ಮಾಡುತ್ತಾರೆ. [ಅಲ್-ಅಂಬಿಯಾ:26-27]
ಅವರು (ಸ) ಹೇಳಿದರು: «ದೇವದೂತರುಗಳನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ»
ಅವರ ಪೈಕಿ ಒಬ್ಬರು ಜಿಬ್ರೀಲ್(ಅ). ಅವರು ಪ್ರವಾದಿಗಳಿಗೆ ದಿವ್ಯವಾಣಿಯನ್ನು ತಲುಪಿಸುವ ಕೆಲಸ ಮಾಡುತ್ತಾರೆ. ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ಈ ಕುರ್ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ. ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ. ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು. ಸ್ಪಷ್ಟ ಅರಬ್ಬಿ ಭಾಷೆಯಲ್ಲಿ. [ಅಶ್ಶುಅರಾ:192 - 195].
ಗ್ರಂಥಗಳಲ್ಲಿ ವಿಶ್ವಾಸವಿಡುವುದು: ಇವು ಅಲ್ಲಾಹು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥಗಳು.
ಉದಾ: ಮುಹಮ್ಮದ್ ﷺ ರಿಗೆ ಅವತೀರ್ಣವಾದ ಪವಿತ್ರ ಕುರ್ಆನ್.
ಈಸಾ(ಅ) ರಿಗೆ ಅವತೀರ್ಣವಾದ ಇಂಜೀಲ್.
ಮೂಸಾ(ಅ) ರಿಗೆ ಅವತೀರ್ಣವಾದ ತೌರಾತ್.
ದಾವೂದ್(ಅ) ರಿಗೆ ಅವತೀರ್ಣವಾದ ಝಬೂರ್.
ಇಬ್ರಾಹಿಂ(ಅ) ಮತ್ತು ಮೂಸಾ(ಅ) ರಿಗೆ ಅವತೀರ್ಣವಾದ ಕಿರು ಪುಸ್ತಕಗಳು.
ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು: ಸಂದೇಶವಾಹಕರು ಎಂದರೆ ಅಲ್ಲಾಹು ತನ್ನ ದಾಸರ ಕಡೆಗೆ, ಅವರಿಗೆ ಕಲಿಸಲು, ಒಳಿತು ಮತ್ತು ಸ್ವರ್ಗದ ಶುಭವಾರ್ತೆ ತಿಳಿಸಲು, ಕೆಡುಕು ಮತ್ತು ನರಕದ ಬಗ್ಗೆ ಎಚ್ಚರಿಸಲು ಕಳುಹಿಸಿದವರಾಗಿದ್ದಾರೆ.
ಅವರಲ್ಲಿ ಶ್ರೇಷ್ಠರು ಉಲುಲ್-ಅಝ್ಮ್ ಎಂದು ಕರೆಯಲ್ಪಡುವವರು. ಅವರು:
ನೂಹ್(ಅ).
ಇಬ್ರಾಹೀಂ(ಅ).
ಮೂಸಾ(ಅ).
ಈಸಾ(ಅ).
- ಮುಹಮ್ಮದ್ صلى الله عليه وسلم.
ಅಂತ್ಯದಿನದಲ್ಲಿ ವಿಶ್ವಾಸವಿಡುವುದು: ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಎಂದರೆ ಮರಣಾನಂತರದ ಸಮಾಧಿಯಲ್ಲಿ , ಪುನರುತ್ಥಾನದ ದಿನದಲ್ಲಿ, ಪುನರ್ಜೀವ ಮತ್ತು ವಿಚಾರಣೆಯ ದಿನದಲ್ಲಿ, ಸ್ವರ್ಗದವರು ಸ್ವರ್ಗದಲ್ಲಿ ಮತ್ತು ನರಕದವರು ನರಕದಲ್ಲಿ ನೆಲೆಸುವುದರಲ್ಲಿ ವಿಶ್ವಾಸವಿಡುವುದು.
ಅಲ್ಲಾಹು ಹೇಳುತ್ತಾನೆ: ಎಲ್ಲಾ ಆತ್ಮಗಳೂ ಸಾವಿನ ರುಚಿಯನ್ನು ನೋಡಲಿವೆ. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ಣವಾಗಿ ನೀಡಲಾಗುವುದು. ಆಗ ಯಾರು ನರಕದಿಂದ ದೂರವಾಗಿ, ಸ್ವರ್ಗಕ್ಕೆ ಪ್ರವೇಶ ಪಡೆಯುತ್ತಾನೋ ಅವನು ಜಯಶಾಲಿಯಾದನು. ಇಹಲೋಕ ಜೀವನವು ಮರುಳುಗೊಳಿಸುವ ಆನಂದ ಮಾತ್ರವಾಗಿದೆ. [ಆಲಿ ಇಮ್ರಾನ್:185].
ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
ವಿಧಿ ಎಂದರೆ ವಿಶ್ವದಲ್ಲಿ ನಡೆಯುವ ಎಲ್ಲವನ್ನೂ ಅಲ್ಲಾಹು ಅರಿಯುತ್ತಾನೆ, ಅವೆಲ್ಲವನ್ನೂ ಅವನು ಲೌಹೆ ಮಹ್ಫೂಝ್ (ಸಂರಕ್ಷಿತ ಫಲಕ) ನಲ್ಲಿ ಬರೆದಿದ್ದಾನೆ ಮತ್ತು ಅವೆಲ್ಲವೂ ಅಸ್ತಿತ್ವಕ್ಕೆ ಬರಬೇಕು ಮತ್ತು ಸೃಷ್ಟಿಸಲ್ಪಡಬೇಕೆಂದು ಅವನು ಬಯಸಿದ್ದಾನೆ ಎಂದು ವಿಶ್ವಾಸವಿಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ. [ಅಲ್-ಕಮರ್: 49]
ಇದು ನಾಲ್ಕು ಹಂತಗಳನ್ನು ಹೊಂದಿದೆ:
ಮೊದಲನೆಯದು: ಅಲ್ಲಾಹನ ಜ್ಞಾನ. ಎಲ್ಲಾ ವಸ್ತುಗಳ ಬಗ್ಗೆ ಅಲ್ಲಾಹನಿಗಿರುವ ಪೂರ್ವಜ್ಞಾನವು ಇದರಲ್ಲಿ ಒಳಪಡುತ್ತದೆ. ಅವು ಸಂಭವಿಸುವ ಮೊದಲು ಮತ್ತು ಅವು ಸಂಭವಿಸಿದ ನಂತರ ಅಲ್ಲಾಹು ಅವುಗಳ ಬಗ್ಗೆ ಸ್ಪಷ್ಟಜ್ಞಾನವನ್ನು ಹೊಂದಿದ್ದಾನೆ.
ಪುರಾವೆ ಅಲ್ಲಾಹನ ವಚನ: ನಿಶ್ಚಯವಾಗಿಯೂ ಅಂತ್ಯಸಮಯದ ಜ್ಞಾನವಿರುವುದು ಅಲ್ಲಾಹನ ಬಳಿ ಮಾತ್ರ. ಅವನು ಮಳೆಯನ್ನು ಸುರಿಸುತ್ತಾನೆ. ಅವನು ಗರ್ಭಾಶಯಗಳಲ್ಲಿ ಏನಿದೆಯೆಂದು ತಿಳಿಯುತ್ತಾನೆ. ತಾನು ನಾಳೆ ಏನು ಮಾಡುತ್ತೇನೆಂದು ಯಾವುದೇ ವ್ಯಕ್ತಿಗೂ ತಿಳಿದಿಲ್ಲ. ತಾನು ಯಾವ ಭೂಮಿಯಲ್ಲಿ ಸಾಯುತ್ತೇನೆಂದು ಯಾವುದೇ ವ್ಯಕ್ತಿಗೂ ತಿಳಿದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. [ಲುಖ್ಮಾನ್:34].
ಎರಡನೆಯದು: ಅಲ್ಲಾಹನು ಅವೆಲ್ಲವನ್ನೂ ಲೌಹೆ ಮಹ್ಫೂಝ್ (ಸಂರಕ್ಷಿತ ಫಲಕ) ದಲ್ಲಿ ದಾಖಲಿಸಿದ್ದಾನೆ. ಆದ್ದರಿಂದ ಸಂಭವಿಸಿದ ಮತ್ತು ಸಂಭವಿಸುವ ಎಲ್ಲವೂ ಅವನ ಬಳಿ ಒಂದು ಗ್ರಂಥದಲ್ಲಿ ದಾಖಲಾಗಿದೆ.
ಪುರಾವೆ ಅಲ್ಲಾಹನ ವಚನ: ಅಗೋಚರ ವಿಷಯಗಳ ಖಜಾನೆಗಳಿರುವುದು ಅಲ್ಲಾಹನ ಬಳಿ ಮಾತ್ರ. ಅವನಲ್ಲದೆ ಯಾರಿಗೂ ಅದು ತಿಳಿದಿಲ್ಲ. ನೆಲದಲ್ಲಿ ಮತ್ತು ಕಡಲಲ್ಲಿರುವುದನ್ನು ಅವನು ತಿಳಿಯುತ್ತಾನೆ. ಅವನು ತಿಳಿಯದೆ ಒಂದೇ ಒಂದು ಎಲೆಯೂ ಉದುರುವುದಿಲ್ಲ. ಭೂಮಿಯ ಗಾಢಾಂಧಕಾರಗಳಲ್ಲಿರುವ ಒಂದು ಧಾನ್ಯವಾಗಲಿ, ಹಸಿ ಅಥವಾ ಒಣಗಿದ ಯಾವುದೇ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ.” [ಅಲ್-ಅನ್ಆಮ್:59].
ಮೂರನೆಯದು: ಎಲ್ಲವೂ ಅಲ್ಲಾಹನ ಇಚ್ಛೆಯಂತೆ ಸಂಭವಿಸುತ್ತದೆ. ಅವನು ಇಚ್ಛಿಸದೆ ಅವನಿಂದ ಅಥವಾ ಅವನ ಸೃಷ್ಟಿಯಿಂದ ಏನೂ ಸಂಭವಿಸುವುದಿಲ್ಲ. ದಾಸನಿಗೆ ಆಯ್ಕೆಯ ಸ್ವಾತಂತ್ರ್ಯ, ಇರಾದೆ ಮತ್ತು ಇಚ್ಛೆಯಿದೆ. ಆದರೆ ಈ ಇರಾದೆ ಮತ್ತು ಇಚ್ಛೆಯು ಸರ್ವಶಕ್ತನಾದ ಅಲ್ಲಾಹನ ಇಚ್ಛೆಯ ನಂತರವೇ ಸಂಭವಿಸುತ್ತದೆ.
ಪುರಾವೆ ಅಲ್ಲಾಹನ ವಚನ: (ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ 29 [ಅತ್ತಕ್ವೀರ್: 28-29]
ನಾಲ್ಕನೆಯದು: ಈ ಜಗತ್ತಿನಲ್ಲಿರುವ ಎಲ್ಲಾ ಸೃಷ್ಟಿಗಳು ಅಲ್ಲಾಹನ ಸೃಷ್ಟಿಗಳಾಗಿವೆ. ಅಲ್ಲಾಹು ಅವುಗಳ ದೇಹಗಳನ್ನು, ಗುಣಲಕ್ಷಣಗಳನ್ನು, ಚಲನೆಗಳನ್ನು ಮತ್ತು ಅವುಗಳಲ್ಲಿನ ಪ್ರತಿಯೊಂದನ್ನೂ ಅವನೇ ಸೃಷ್ಟಿಸಿದ್ದಾನೆ.
ಪುರಾವೆ ಅಲ್ಲಾಹನ ವಚನ: ವಾಸ್ತವವಾಗಿ, ಅಲ್ಲಾಹನೇ ನಿಮ್ಮನ್ನು ಮತ್ತು ನೀವು ನಿರ್ಮಿಸುವುದನ್ನು ಸೃಷ್ಟಿಸಿದವನು.” [ಅಸ್ಸಾಫ್ಫಾತ್: 96]
ಪ್ರಶ್ನೆ 16. ಕುರ್ಆನ್ ಎಂದರೇನು?
ಉತ್ತರ: ಅದು ಸರ್ವಶಕ್ತನಾದ ಅಲ್ಲಾಹನ ವಚನ, ಅದು ಸೃಷ್ಟಿಯಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಬಹುದೇವವಿಶ್ವಾಸಿಗಳ ಪೈಕಿ ಯಾರಾದರೂ ಆಶ್ರಯ ಕೋರಿ ತಮ್ಮ ಬಳಿಗೆ ಬಂದರೆ ಅವನು ಅಲ್ಲಾಹುವಿನ ವಚನವನ್ನು ಆಲಿಸುವುದಕ್ಕಾಗಿ ಅವನಿಗೆ ಆಶ್ರಯವನ್ನು ನೀಡಿರಿ.” [ಸೂರ ಅತ್ತೌಬ:6].
ಹದೀಸ್ನಲ್ಲಿ ಹೀಗೆ ವರದಿಯಾಗಿದೆ: «ಸಕಲ ವಚನಗಳ ಮೇಲೆ ಅಲ್ಲಾಹನ ವಚನಕ್ಕಿರುವ ಶ್ರೇಷ್ಠತೆಯು, ತನ್ನ ಸೃಷ್ಟಿಗಳ ಮೇಲೆ ಅಲ್ಲಾಹನಿಗಿರುವ ಶ್ರೇಷ್ಠತೆಯಂತಿದೆ»
ಪ್ರಶ್ನೆ 17. ಸುನ್ನತ್ ಎಂದರೇನು?
ಉತ್ತರ: ಪ್ರವಾದಿ ಮುಹಮ್ಮದ್ ﷺ ರ ಮಾತುಗಳು, ಕ್ರಿಯೆಗಳು ಮತ್ತು ಮೌನಸಮ್ಮತಿಗಳು, ಜನ್ಮತಃ ಅವರಲ್ಲಿದ್ದ ಸ್ವಭಾವಗಳು ಮತ್ತು ಅವರ ನಡವಳಿಕೆ ವರ್ತನೆಗಳೆಲ್ಲವೂ ಸುನ್ನತ್ ಆಗಿವೆ.
ಪ್ರಶ್ನೆ 18. ಬಿದ್ಅತ್ (ನೂತನವಾದ) ಎಂದರೇನು? ನಾವು ಅದನ್ನು ಸ್ವೀಕರಿಸಬಹುದೇ?
ಉತ್ತರ: ಪ್ರವಾದಿ ﷺ ಮತ್ತು ಅವರ ಸಹಚರರ ಕಾಲದಲ್ಲಿ ಧರ್ಮದಲ್ಲಿಲ್ಲದ, ಮತ್ತು ನಂತರ ಜನರು ಧರ್ಮದಲ್ಲಿ ಹೊಸದಾಗಿ ಆವಿಷ್ಕರಿಸಿದ ವಿಷಯಗಳೆಲ್ಲವೂ ಬಿದ್ಅತ್ ಆಗಿವೆ.
- ನಾವು ಅದನ್ನು ಸ್ವೀಕರಿಸುವುದಿಲ್ಲ, ಬದಲಾಗಿ ಅದನ್ನು ತಿರಸ್ಕರಿಸುವುದು ಕಡ್ಡಾಯವಾಗಿದೆ.
ಏಕೆಂದರೆ ಪ್ರವಾದಿ ﷺ ರವರು ಹೇಳಿದರು: "ಎಲ್ಲ ಬಿದ್ಅತ್ಗಳೂ ಪಥಭ್ರಷ್ಟತೆಗಳಾಗಿವೆ."
ಮತ್ತು ಪ್ರವಾದಿ(ಸ) ರವರು ಹೇಳಿದರು: ""ಯಾರು ನಮ್ಮ ಆದೇಶವಿಲ್ಲದ ಒಂದು ಕಾರ್ಯವನ್ನು ಮಾಡುತ್ತಾರೋ, ಅದು ತಿರಸ್ಕೃತವಾಗಿದೆ.""
ಉದಾಹರಣೆಗೆ: ಆರಾಧನಾ ಕರ್ಮಗಳಲ್ಲಿ ಹೊಸದನ್ನು ಸೇರಿಸುವುದು. ಅಂದರೆ ವುದೂ ಮಾಡುವಾಗ ನಾಲ್ಕು ಬಾರಿ ತೊಳೆಯುವುದು, ಪ್ರವಾದಿ ﷺ ರವರ ಜನ್ಮದಿನ ಆಚರಿಸುವುದು. ಇದನ್ನು ಪ್ರವಾದಿ ﷺ ರವರಾಗಲಿ ಅವರ ಸಹಚರರಾಗಲಿ ಆಚರಿಸಿಲ್ಲ.
ಪ್ರಶ್ನೆ 19. ವಲಾ (ನಿಷ್ಠೆ) ಮತ್ತು ಬರಾ (ನಿರಾಕರಣೆ) ದ ವಿಶ್ವಾಸವೆಂದರೇನು?
ಉತ್ತರ: ನಿಷ್ಠೆ ಎಂದರೆ ಸತ್ಯವಿಶ್ವಾಸಿಗಳನ್ನು ಪ್ರೀತಿಸುವುದು ಮತ್ತು ಬೆಂಬಲಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಯರು ಪರಸ್ಪರ ಮಿತ್ರರಾಗಿರುವರು.” [ಅತ್ತೌಬಾ:71]
ನಿರಾಕರಣೆ ಎಂದರೆ ಸತ್ಯನಿಷೇಧಿಗಳನ್ನು ದ್ವೇಷಿಸುವುದು ಮತ್ತು ವಿರೋಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮಗೆ ಇಬ್ರಾಹೀಮರಲ್ಲಿ ಮತ್ತು ಅವರ ಸಂಗಡಿಗರಲ್ಲಿ ಅತ್ಯುತ್ತಮ ಮಾದರಿಯಿದೆ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನಾವು ನಿಮ್ಮಿಂದ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ದೇವರುಗಳಿಂದ ಸಂಪೂರ್ಣ ದೂರವಾಗಿದ್ದೇವೆ. ನಾವು ನಿಮ್ಮ (ವಿಶ್ವಾಸ ನಂಬಿಕೆಗಳನ್ನು) ನಿಷೇಧಿಸಿದ್ದೇವೆ. ನೀವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಡುವ ತನಕ ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ವೈರ ಹಾಗೂ ವಿದ್ವೇಷವು ಬಹಿರಂಗವಾಗಿಬಿಟ್ಟಿದೆ.” [ಅಲ್-ಮುಮ್ತಹನ:4]
ಪ್ರಶ್ನೆ 20. ಅಲ್ಲಾಹು ಇಸ್ಲಾಮ್ ಅಲ್ಲದ ಧರ್ಮವನ್ನು ಸ್ವೀಕರಿಸುತ್ತಾನೆಯೇ?
ಉತ್ತರ: ಅಲ್ಲಾಹು ಇಸ್ಲಾಮ್ ಅಲ್ಲದ ಧರ್ಮವನ್ನು ಸ್ವೀಕರಿಸುವುದಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರು ಇಸ್ಲಾಂ ಅಲ್ಲದ ಬೇರೊಂದು ಧರ್ಮವನ್ನು ಹುಡುಕುತ್ತಾನೋ—ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರಲ್ಲಿ ಸೇರುವನು. [ಆಲು ಇಮ್ರಾನ್: 85].
ಪ್ರಶ್ನೆ 21. ಸತ್ಯನಿಷೇಧವು ಮಾತು, ಕ್ರಿಯೆ ಮತ್ತು ನಂಬಿಕೆಯಲ್ಲಿ ಸಂಭವಿಸುತ್ತದೆ. ಇದಕ್ಕೆ ಉದಾಹರಣೆ ನೀಡಿ.
ಉತ್ತರ: ಮಾತಿನಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಅಲ್ಲಾಹನನ್ನು ಅಥವಾ ಅವನ ಸಂದೇಶವಾಹಕﷺ ರನ್ನು ನಿಂದಿಸುವುದು.
ಕ್ರಿಯೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಕುರ್ಆನ್ ಗ್ರಂಥವನ್ನು ಅವಮಾನಿಸುವುದು ಅಥವಾ ಸರ್ವಶಕ್ತನಾದ ಅಲ್ಲಾಹನನ್ನು ಬಿಟ್ಟು ಇತರರಿಗೆ ಸುಜೂದ್ (ಸಾಷ್ಟಾಂಗ ನಮಸ್ಕಾರ) ಮಾಡುವುದು.
ನಂಬಿಕೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಸರ್ವಶಕ್ತನಾದ ಅಲ್ಲಾಹನಲ್ಲದೆ ಇತರರೂ ಆರಾಧನೆಗೆ ಅರ್ಹರು ಎಂದು ನಂಬುವುದು. ಅಥವಾ ಸರ್ವಶಕ್ತ ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತರಿದ್ದಾರೆ ಎಂದು ನಂಬುವುದು.
ಪ್ರಶ್ನೆ 22. ಕಪಟವಿಶ್ವಾಸ ಎಂದರೇನು? ಅದರ ವಿಧಗಳು ಯಾವುವು?
ಉ: 1. ದೊಡ್ಡ ಕಪಟವಿಶ್ವಾಸ: ಇದು ಸತ್ಯನಿಷೇಧವನ್ನು ಮರೆಮಾಚಿ ಸತ್ಯವಿಶ್ವಾಸವನ್ನು ತೋರ್ಪಡಿಸುವುದು.
ದೊಡ್ಡ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುತ್ತಾನೆ. ಇದು ದೊಡ್ಡ ಸತ್ಯನಿಷೇಧವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುತ್ತಾರೆ. ನೀವು ಅವರಿಗೆ ಯಾವುದೇ ಸಹಾಯಕನನ್ನು ಕಾಣಲಾರಿರಿ. [ಅನ್ನಿಸಾ:145].
2. ಸಣ್ಣ ಕಪಟವಿಶ್ವಾಸ: ಉದಾಹರಣೆಗೆ: ಸುಳ್ಳು ಹೇಳುವುದು, ಮಾತು ತಪ್ಪಿಸುವುದು ಮತ್ತು ನಂಬಿಕೆದ್ರೋಹ ಮಾಡುವುದು.
ಸಣ್ಣ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುವುದಿಲ್ಲ. ಅದೊಂದು ಪಾಪವಾಗಿದ್ದು, ಅದನ್ನು ಮಾಡುವವರು ಶಿಕ್ಷೆಗೆ ಅರ್ಹರಾಗುತ್ತಾರೆ.
ಪ್ರವಾದಿ صلي الله عليه وسلم ರವರು ಹೇಳಿದರು: "ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ: ಬಾಯಿ ತೆರೆದರೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ವಂಚಿಸುವುದು ಮತ್ತು ನಂಬಿಕೆಯಿಟ್ಟರೆ ನಂಬಿಕೆದ್ರೋಹ ಮಾಡುವುದು."
ಪ್ರಶ್ನೆ 23. ಪ್ರವಾದಿಗಳಲ್ಲಿ ಮತ್ತು ಸಂದೇಶವಾಹಕರಲ್ಲಿ ಕೊನೆಯವರು ಯಾರು?
ಉತ್ತರ: ಪ್ರವಾದಿ ಮುಹಮ್ಮದ್ ﷺ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಮುಹಮ್ಮದ್ ನಿಮ್ಮ ಪುರುಷರಲ್ಲಿ ಯಾರಿಗೂ ತಂದೆಯಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಎಲ್ಲಾ ಪ್ರವಾದಿಗಳ ಮೊಹರಾಗಿದ್ದಾರೆ. [ಅಲ್-ಅಹ್ಝಾಬ್:40]
- ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ನಾನು ಪ್ರವಾದಿಗಳ ಮುದ್ರೆಯಾಗಿದ್ದೇನೆ. ನನ್ನ ನಂತರ ಯಾವ ಪ್ರವಾದಿಯೂ ಇಲ್ಲ."
ಪ್ರಶ್ನೆ 17. ಮುಅಜಿಝ (ಪವಾಡ) ಎಂದರೇನು?
ಉತ್ತರ: ಮುಅಜಿಝ (ಪವಾಡ) ಎಂದರೆ ಅಲ್ಲಾಹು ತನ್ನ ಪ್ರವಾದಿಗಳಿಗೆ ಅವರ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ನೀಡುವ ಅಸಾಮಾನ್ಯ ಸಂಗತಿಗಳು. ಉದಾಹರಣೆಗೆ:
- ಪ್ರವಾದಿ ﷺ ರವರು ಚಂದ್ರನನ್ನು ಎರಡು ಹೋಳು ಮಾಡಿದ ಘಟನೆ. ಅಲ್ಲಾಹು ಹೇಳುತ್ತಾನೆ: ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ. ಅವರು ಯಾವುದೇ ದೃಷ್ಟಾಂತವನ್ನು ನೋಡಿದರೂ ವಿಮುಖರಾಗುತ್ತಾರೆ ಮತ್ತು “ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಮಾಟಗಾರಿಕೆ” ಎಂದು ಹೇಳುತ್ತಾರೆ. ಅವರು ನಿಷೇಧಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಎಲ್ಲಾ ವಿಷಯಗಳಿಗೂ ಒಂದು ನಿಶ್ಚಿತ ಸಮಯವನ್ನು ನಿರ್ಣಯಿಸಲಾಗಿದೆ. [ಅಲ್-ಕಮರ್:1-3]
- ಮೂಸಾ(ಅ)ರಿಗಾಗಿ ಸಮುದ್ರ ಎರಡು ಹೋಳಾಗುವುದು, ಫಿರ್ಔನ್ ಮತ್ತು ಅವನ ಸೈನಿಕರನ್ನು ಮುಳುಗಿಸಿ ನಾಶಮಾಡಿದ ಘಟನೆ. ಅಲ್ಲಾಹು ಹೇಳುತ್ತಾನೆ: ನಾವು ಕಡಲನ್ನು ಸೀಳಿ ನಿಮ್ಮನ್ನು ರಕ್ಷಿಸಿದ, ಮತ್ತು ನೀವು ನೋಡುತ್ತಿದ್ದಂತೆಯೇ ಫರೋಹನ ಜನರನ್ನು ಮುಳುಗಿಸಿದ ಸಂದರ್ಭ(ವನ್ನು ಸ್ಮರಿಸಿ). [ಅಲ್-ಬಖರ:50]
ಪ್ರಶ್ನೆ 25. ಸಹಾಬಿಗಳು (ಸಹಚರರು) ಎಂದರೆ ಯಾರು? ನಾವು ಅವರನ್ನು ಪ್ರೀತಿಸಬೇಕೇ?
ಉತ್ತರ: ಸಹಾಬಿಗಳು ಎಂದರೆ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಪ್ರವಾದಿ(ಸ) ರನ್ನು ಭೇಟಿಯಾಗಿ ಇಸ್ಲಾಮ್ ಧರ್ಮದಲ್ಲಿ ಮರಣಹೊಂದಿದವರು.
ನಾವು ಅವರನ್ನು ಪ್ರೀತಿಸಬೇಕು ಮತ್ತು ಅವರನ್ನು ಅನುಸರಿಸಬೇಕು. ಅವರು ಪ್ರವಾದಿಗಳ ನಂತರ ಉತ್ತಮ ಮತ್ತು ಶ್ರೇಷ್ಠ ಜನರಾಗಿದ್ದಾರೆ.
ಅವರಲ್ಲಿ ಅತಿಶ್ರೇಷ್ಠರು ನಾಲ್ವರು ಖಲೀಫರು:
ಅಬೂಬಕರ್ رَضِيَ اللَّهُ عَنْهُ.
ಉಮರ್ رَضِيَ اللَّهُ عَنْهُ.
ಉಸ್ಮಾನ್ رَضِيَ اللَّهُ عَنْهُ.
ಅಲಿ رَضِيَ اللَّهُ عَنْهُ.
ಅಲ್ಲಾಹು ಸಹಾಬಾಗಳ (ಅಲ್ಲಾಹು ಅವರೆಲ್ಲರಿಂದ ಸಂಪ್ರೀತನಾಗಲಿ) ಬಗ್ಗೆ ಹೇಳುತ್ತಾನೆ: ಮುಹಾಜಿರ್ ಮತ್ತು ಅನ್ಸಾರ್ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ. [ಅತ್ತೌಬಾ: 100]
ಪ್ರಶ್ನೆ 26. ಉಮ್ಮಹಾತುಲ್ ಮೂಮಿನೀನ್ (ಸತ್ಯವಿಶ್ವಾಸಿಗಳ ಮಾತೆಯರು) ಎಂದರೆ ಯಾರು?
ಉತ್ತರ: ಅವರು ಪ್ರವಾದಿ ﷺ ರವರ ಪತ್ನಿಯರು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸತ್ಯವಿಶ್ವಾಸಿಗಳಿಗೆ ಅವರ ಶರೀರಗಳಿಗಿಂತಲೂ ಹೆಚ್ಚು ಆಪ್ತರು ಸಂದೇಶವಾಹಕರಾಗಿರುವರು. ಅವರ ಮಡದಿಯರು ಅವರಿಗೆ ಮಾತೆಯರಾಗಿರುವರು.” [ಅಲ್-ಅಹ್ಝಾಬ್:6]
ಪ್ರಶ್ನೆ 27. ಪ್ರವಾದಿ ﷺ ಕುಟುಂಬಕ್ಕೆ ನಮ್ಮ ಮೇಲಿರುವ ಹಕ್ಕುಗಳು ಯಾವುವು?
ಉತ್ತರ: ಅವರನ್ನು ಪ್ರೀತಿಸುಸುವುದು, ಅವರನ್ನು ಅನುಸರಿಸುಸುವುದು ಮತ್ತು ಅವರನ್ನು ದ್ವೇಷಿಸುವವರನ್ನು ದ್ವೇಷಿಸುವುದು. ಅವರ ವಿಷಯದಲ್ಲಿ ಹದ್ದು ಮೀರದಿರುವುದು. ಪ್ರವಾದಿ ಕುಟುಂಬ ಎಂದರೆ ಪ್ರವಾದಿಯ ಮಡದಿಯರು, ಸಂತಾನ ಮತ್ತು ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಬುಡಕಟ್ಟಿಗೆ ಸೇರಿದ ಸತ್ಯವಿಶ್ವಾಸಿಗಳು.
ಅಲ್ಲಾಹು ಹೇಳುತ್ತಾನೆ: ಅಲ್ಲಾಹು ನಿಮ್ಮಿಂದ ಕೊಳೆಯನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಬಯಸುತ್ತಾನೆ, ಓ ಪ್ರವಾದಿಯ ಮನೆಯವರೇ! [ಅಲ್-ಅಹ್ಝಾಬ್:33].
ಹದೀಸ್ನಲ್ಲಿರುವಂತೆ ಪ್ರವಾದಿ (ﷺ) ರವರು ಹೇಳಿದರು: “ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ, ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ, ನನ್ನ ಮನೆಮಂದಿಯ ವಿಷಯದಲ್ಲಿ ಅಲ್ಲಾಹನನ್ನು ಸ್ಮರಿಸಿರಿ”
ಪ್ರಶ್ನೆ 28. ಮುಸ್ಲಿಮ್ ಆಡಳಿತಗಾರರೊಂದಿಗೆ ನಮಗಿರುವ ಕರ್ತವ್ಯಗಳೇನು?
ಉತ್ತರ: ಅವರನ್ನು ಗೌರವಿಸುವುದು, ಅಲ್ಲಾಹನ ಆಜ್ಞೋಲ್ಲಂಘನೆಯಾಗದ ರೀತಿಯಲ್ಲಿ ಅವರ ಆದೇಶಗಳನ್ನು ಪಾಲಿಸುವುದು, ರಹಸ್ಯವಾಗಿ ಅವರಿಗೋಸ್ಕರ ಪ್ರಾರ್ಥಿಸುವುದು ಹಾಗೂ ಅವರ ಬಗ್ಗೆ ಹಿತಾಕಾಂಕ್ಷೆಯನ್ನು ಹೊಂದಿರುವುದು, ಮತ್ತು ಅವರಲ್ಲಿ ಸ್ಪಷ್ಟವಾದ ಕುಫ್ರ್ ಅನ್ನು ನಾವು ಕಂಡರೆ ಹೊರತು ಅವರ ವಿರುದ್ಧ ದಂಗೆ ಏಳದಿರುವುದು.
ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ. [ಅನ್ನಿಸಾ:59].
ಪ್ರಶ್ನೆ 29. ಸತ್ಯವಿಶ್ವಾಸಿಗಳ ವಾಸಸ್ಥಾನ ಯಾವುದು?
ಉತ್ತರ: ಸ್ವರ್ಗವು ಸತ್ಯವಿಶ್ವಾಸಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು.” [ಮುಹಮ್ಮದ್:12]
ಪ್ರಶ್ನೆ 29. ಸತ್ಯನಿಷೇಧಿಗಳ ವಾಸಸ್ಥಾನ ಯಾವುದು?
ಉತ್ತರ: ನರಕವು ಸತ್ಯನಿಷೇಧಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಆ ನರಕವನ್ನು ಭಯಪಡಿರಿ; ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿದ್ದಾರೆ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ. [ಅಲ್-ಬಕರ: 24].
ಪ್ರಶ್ನೆ 31. ಭಯ ಎಂದರೇನು? ನಿರೀಕ್ಷೆ ಎಂದರೇನು? ಪುರಾವೆ ಸಹಿತ ತಿಳಿಸಿ.
ಉತ್ತರ: ಭಯ ಎಂದರೆ ಅಲ್ಲಾಹನನ್ನು ಮತ್ತು ಆತನ ಶಿಕ್ಷೆಯನ್ನು ಭಯಪಡುವುದು.
ನಿರೀಕ್ಷೆ ಎಂದರೆ ಅಲ್ಲಾಹನ ಪ್ರತಿಫಲ, ಕ್ಷಮೆ ಮತ್ತು ಕರುಣೆಯನ್ನು ಹಂಬಲಿಸುವುದು.
ಪುರಾವೆ ಅಲ್ಲಾಹನ ವಚನ: ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ. [ಅಲ್-ಇಸ್ರಾ:57]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “(ಓ ಪ್ರವಾದಿಯವರೇ!) ಖಂಡಿತವಾಗಿಯೂ ನಾನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆನೆಂದು ನನ್ನ ದಾಸರಿಗೆ ತಿಳಿಸಿಕೊಡಿರಿ. ಖಂಡಿತವಾಗಿಯೂ ನನ್ನ ಶಿಕ್ಷೆಯು ಅತ್ಯಧಿಕ ಯಾತನೆಯಿರುವ ಶಿಕ್ಷೆಯೆಂದೂ (ತಿಳಿಸಿಕೊಡಿರಿ).” [ಅಲ್-ಹಿಜ್ರ್: 49-50]
ಪ್ರಶ್ನೆ 32. ಸರ್ವಶಕ್ತನಾದ ಅಲ್ಲಾಹನ ಕೆಲವು ಹೆಸರುಗಳು ಮತ್ತು ಗುಣಲಕ್ಷಣಗಳನ್ನು ಉಲ್ಲೇಖಿಸಿ.
ಉತ್ತರ: ಅಲ್ಲಾಹ್, ಅರ್ರಬ್ಬ್, ಅರ್ರಹ್ಮಾನ್, ಅಸ್ಸಮೀಅ್, ಅಲ್-ಬಸ್ವೀರ್, ಅಲ್-ಅಲೀಮ್, ಅರ್ರಝ್ಝಾಕ್, ಅಲ್-ಹಯ್, ಅಲ್-ಅಝೀಮ್, ಅಲ್-ಹಕೀಮ್ ಮುಂತಾದವುಗಳು ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಾಗಿವೆ.
ಪ್ರಶ್ನೆ33. ಈ ಹೆಸರುಗಳನ್ನು ವಿವರಿಸಿ?
ಉತ್ತರ: ಅಲ್ಲಾಹ್ ಎಂದರೆ ನೈಜ ಆರಾಧ್ಯ. ಏಕೈಕನು ಮತ್ತು ಸಹಭಾಗಿಯಿಲ್ಲದವನು.
ಅರ್ರಬ್ಬ್ ಎಂದರೆ ಸೃಷ್ಟಿಕರ್ತ, ಮಾಲೀಕ, ಅನ್ನಾದಾರ ಒದಗಿಸುವವ ಮತ್ತು ನಿಯಂತ್ರಕ.
ಅಸ್ಸಮೀಅ್ ಎಂದರೆ ಎಲ್ಲವನ್ನೂ ಕೇಳುವವನು. ಎಲ್ಲಾ ವಿಭಿನ್ನ ಮತ್ತು ವೈವಿಧ್ಯಮಯ ಧ್ವನಿಗಳನ್ನು ಆಲಿಸುವವನು.
ಅಲ್-ಬಸ್ವೀರ್ ಎಂದರೆ ಎಲ್ಲವನ್ನೂ ನೋಡುವವನು. ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನೋಡುವವನು.
ಅಲ್-ಅಲೀಮ್ ಎಂದರೆ ಭೂತ, ವರ್ತಮಾನ ಮತ್ತು ಭವಿಷ್ಯ ಸೇರಿದಂತೆ ಎಲ್ಲವನ್ನೂ ತಿಳಿದಿರುವ ಸರ್ವಜ್ಞನು.
ಅರ್ರಹ್ಮಾನ್ ಎಂದರೆ ಪ್ರತಿಯೊಂದು ಜೀವಿಗೂ ಕರುಣೆ ತೋರುವವನು. ಎಲ್ಲಾ ಮನುಷ್ಯರು ಮತ್ತು ಇತರ ಸೃಷ್ಟಿಗಳು ಅವನ ಕರುಣೆಯಲ್ಲಿ ಒಳಪಡುತ್ತಾರೆ.
ಅರ್ರಝ್ಝಾಕ್ ಎಂದರೆ ಮನುಷ್ಯರು, ಜಿನ್ನ್ ಮತ್ತು ಇತರೆಲ್ಲಾ ಜೀವಿಗಳು ಸೇರಿದಂತೆ ಎಲ್ಲರಿಗೂ ಆಹಾರವನ್ನು ಒದಗಿಸುವವನು.
- ಅಲ್-ಹಯ್ಯ್ ಎಂದರೆ ಎಂದಿಗೂ ಸಾಯದೆ ಸದಾ ಜೀವಂತವಾಗಿರುವವನು. ಆದರೆ ಸೃಷ್ಟಿಗಳೆಲ್ಲವೂ ಒಂದಲ್ಲ ಒಂದು ದಿನ ಮರಣಹೊಂದಲಿವೆ.
ಅಲ್-ಅಝೀಮ್ ಎಂದರೆ ತನ್ನ ನಾಮ, ಗುಣಲಕ್ಷಣಗಳು ಮತ್ತು ಕ್ರಿಯೆಗಳಲ್ಲಿ ಸಂಪೂರ್ಣತೆಯನ್ನು ಮತ್ತು ಶ್ರೇಷ್ಠತೆಯನ್ನು ಹೊಂದಿರುವವನು.
- ಯುಕ್ತಿವಂತನು: ತನ್ನ ಸೃಷ್ಟಿಯನ್ನು ಪರಿಪೂರ್ಣಗೊಳಿಸಿ ಉತ್ತಮಗೊಳಿಸಿದವನು. ತನ್ನ ಸೃಷ್ಟಿ ಮತ್ತು ಆಜ್ಞೆಯಲ್ಲಿ ಅವನಿಗೆ ಯುಕ್ತಿಯಿದೆ.
ಯುಕ್ತಿಯೆಂದರೆ, ವಸ್ತುಗಳನ್ನು ಅವುಗಳಿಗೆ ಸೂಕ್ತವಾಗುವ ಮತ್ತು ಹೊಂದಿಕೆಯಾಗುವ ಸ್ಥಾನದಲ್ಲಿಡುವುದು.
ಪ್ರಶ್ನೆ 34. ಮುಸ್ಲಿಮ್ ವಿದ್ವಾಂಸರೊಂದಿಗೆ ನಮಗಿರುವ ಕರ್ತವ್ಯಗಳೇನು?
ಉತ್ತರ: ಅವರನ್ನು ಪ್ರೀತಿಸುವುದು, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಸಮಸ್ಯೆಗಳಲ್ಲಿ ಅವರನ್ನು ಅವಲಂಬಿಸುವುದು ಮತ್ತು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವುದು. ಅವರನ್ನು ಕೆಟ್ಟದಾಗಿ ಚಿತ್ರಿಸುವವರು ಸತ್ಯಮಾರ್ಗದಿಂದ ವಿಚಲಿತರಾದವರಾಗಿದ್ದಾರೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮ್ಮ ಪೈಕಿ ಸತ್ಯವಿಶ್ವಾಸಿಗಳು ಮತ್ತು ಜ್ಞಾನ ನೀಡಲಾದವರನ್ನು ಅಲ್ಲಾಹು ಹಲವು ಪದವಿಗಳಿಗೆ ಏರಿಸುವನು. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. [ಅಲ್-ಮುಜಾದಿಲ:11].
ಪ್ರಶ್ನೆ 35. ಅಲ್ಲಾಹನ ಔಲಿಯಾಗಳು (ಆಪ್ತಮಿತ್ರರು) ಎಂದರೆ ಯಾರು?
ಉತ್ತರ: ಅವರು ಭಯಭಕ್ತಿಯಿರುವ ಸತ್ಯವಿಶ್ವಾಸಿಗಳು ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು ಹಿಂಬಾಲಿಸುವವರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ಮಿತ್ರರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬಾರದು. ಅವರು ವಿಶ್ವಾಸವಿಟ್ಟವರೂ ಭಯಭಕ್ತಿ ಪಾಲಿಸುವವರೂ ಆಗಿರುವರು.” [ಯೂನುಸ್: 62-63]
ಪ್ರಶ್ನೆ 36. ಈಮಾನ್ ಎಂದರೆ ಮಾತು ಮತ್ತು ಕ್ರಿಯೆಯೇ?
ಉತ್ತರ: ಈಮಾನ್ ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.
- ಅದು ನಾಲಗೆಯಿಂದ ಹೇಳುವುದು, ಹೃದಯದಿಂದ ವಿಶ್ವಾಸವಿಡುವುದು ಮತ್ತು ಕರ್ಮವೆಸಗುವುದು, ಹಾಗೂ ಅಂಗಾಂಗಗಳಿಂದ ಕರ್ಮವೆಸಗುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.”
ಪ್ರಶ್ನೆ 37. ಈಮಾನ್ ಹೆಚ್ಚು ಕಡಿಮೆಯಾಗುತ್ತದೆಯೇ?
ಉತ್ತರ: ಈಮಾನ್ ವಿಧೇಯತೆಯೊಂದಿಗೆ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯೊಂದಿಗೆ ಕಡಿಮೆಯಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹನ ಹೆಸರು ಹೇಳಿದಾಗ ಯಾರ ಹೃದಯಗಳು ಭಯದಿಂದ ನಡುಗುತ್ತದೋ, ಅವನ ವಚನಗಳನ್ನು ಪಠಿಸಲಾದರೆ ಯಾರ ವಿಶ್ವಾಸವು ಅಧಿಕವಾಗುತ್ತದೋ ಮತ್ತು ಯಾರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುತ್ತಾರೋ ಅವರೇ ಸತ್ಯವಿಶ್ವಾಸಿಗಳು. [ಅಲ್-ಅನ್ಫಾಲ್: 2].
ಪ್ರಶ್ನೆ 38. ಇಹ್ಸಾನ್ ಎಂದರೇನು?
ಉತ್ತರ: ನೀವು ಅಲ್ಲಾಹುವನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂದು ಭಾವಿಸಿ ಆರಾಧಿಸುವುದು.
ಪ್ರಶ್ನೆ 39. ಸರ್ವಶಕ್ತನಾದ ಅಲ್ಲಾಹನು ಕರ್ಮಗಳನ್ನು ಯಾವಾಗ ಸ್ವೀಕರಿಸುತ್ತಾನೆ?
ಉತ್ತರ: ಕರ್ಮಗಳು ಸ್ವೀಕರಿಸಲ್ಪಡಬೇಕಾದರೆ ಎರಡು ಷರತ್ತುಗಳಿವೆ:
1. ಅದು ಸಂಪೂರ್ಣವಾಗಿ ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮಾಡಿದ ಕರ್ಮವಾಗಿರಬೇಕು.
2. ಅದು ಪ್ರವಾದಿ ﷺ ರವರ ಸುನ್ನತ್ ಪ್ರಕಾರವಿರಬೇಕು.
ಪ್ರಶ್ನೆ 40. ಸರ್ವಶಕ್ತನಾದ ಅಲ್ಲಾಹನ ಮೇಲೆ ತವಕ್ಕುಲ್ (ಭರವಸೆ) ಮಾಡುವುದು ಎಂದರೇನು?
ಉತ್ತರ: ಅದು ಪ್ರಯೋಜನಗಳನ್ನು ಪಡೆಯಲು ಮತ್ತು ಹಾನಿಯನ್ನು ತಡೆಗಟ್ಟಲು ಸರ್ವಶಕ್ತನಾದ ಅಲ್ಲಾಹನ ಮೇಲೆ ಅವಲಂಬಿತವಾಗುವುದು.ಆದರೆ ಅದರೊಂದಿಗೆ ಕಾರ್ಯಕಾರಣಗಳನ್ನು ಕೂಡ ನಿರ್ವಹಿಸಬೇಕು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾನೋ ಅವನಿಗೆ ಅಲ್ಲಾಹು ಸಾಕು. [ಅತ್ತಲಾಖ್:3]
'ಹಸ್ಬುಹು' ಅಂದರೆ ಅವನು ಸಾಕು ಎಂದರ್ಥ.
ಪ್ರಶ್ನೆ 41. ಒಳ್ಳೆಯದನ್ನು ಆದೇಶಿಸುವುದು ಮತ್ತು ಕೆಟ್ಟದ್ದನ್ನು ವಿರೋಧಿಸುವುದು ಎಂದರೇನು?
ಉತ್ತರ: ಒಳ್ಳೆಯದನ್ನು ಆದೇಶಿಸುವುದು ಎಂದರೆ ಅಲ್ಲಾಹನಿಗೆ ವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ಆದೇಶಿಸುವುದು. ಕೆಟ್ಟದ್ದನ್ನು ವಿರೋಧಿಸುವುದು ಎಂದರೆ ಅಲ್ಲಾಹನಿಗೆ ಅವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ವಿರೋಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸುತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.” [ಆಲು ಇಮ್ರಾನ್:110]
ಪ್ರಶ್ನೆ 42. ಅಹ್ಲು-ಸ್ಸುನ್ನ ವಲ್-ಜಮಾಅ ಎಂದರೆ ಯಾರು?
ಉತ್ತರ: ಮಾತು, ಕ್ರಿಯೆ ಮತ್ತು ವಿಶ್ವಾಸದಲ್ಲಿ ಪ್ರವಾದಿﷺ ರವರು ಮತ್ತು ಅವರ ಸಂಗಡಿಗರು ಚಲಿಸಿದ ಮಾರ್ಗದಲ್ಲೇ ಚಲಿಸುವವರು.
ಅವರನ್ನು ಅಹ್ಲುಸ್ಸುನ್ನ ಎಂದು ಕರೆಯುವುದು ಏಕೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು ಅನುಸರಿಸಿ ಬಿದ್ಅತ್ಗಳನ್ನು ತ್ಯಜಿಸುವುದರಿಂದ.
ಅಲ್ ಜಮಾಅ ಎಂದು ಕರೆಯುವುದು ಏಕೆಂದರೆ ಅವರು ಸತ್ಯದ ಆಧಾರದಲ್ಲಿ ಒಗ್ಗಟ್ಟಾಗಿದ್ದರು. ಅವರು ಹಲವು ಗುಂಪುಗಳಾಗಿ ವಿಭಜನೆಯಾಗಲಿಲ್ಲ.
ಪ್ರವಾದಿ ﷺ ರವರು ಹೇಳಿದರು «ಇಸ್ರಾಯೇಲ್ ಸಂತತಿಯವರು ಎಪ್ಪತ್ತೆರಡು ಪಂಗಡಗಳಾಗಿ ವಿಭಜನೆಯಾದರು. ಮತ್ತು ನನ್ನ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಒಂದು ಪಂಗಡದ ಹೊರತು ಎಲ್ಲರೂ ನರಕವಾಸಿಗಳು.» ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದು ಯಾರು?” ಅವರು ಹೇಳಿದರು: «ನಾನು ಮತ್ತು ನನ್ನ ಸಹಚರರು ಇರುವ ಮಾರ್ಗದಲ್ಲಿ ಇರುವವರು.»
ಕರ್ಮಶಾಸ್ತ್ರ ವಿಭಾಗ
ಕರ್ಮಶಾಸ್ತ್ರ:
ಕರ್ಮಶಾಸ್ತ್ರ ಎಂದರೆ ತಹಾರತ್, ಸಲಾತ್, ಝಕಾತ್, ಸೌಮ್, ಹಜ್, ಜಿಹಾದ್ ಮತ್ತು ಇತರ ಆಚರಣಾತ್ಮಕ ಶಾಸನಗಳ ಕುರಿತಾದ ಜ್ಞಾನ.
ಪ್ರಶ್ನೆ 1. ಶುದ್ಧೀಕರಣ ಎಂದರೇನು?
ಉತ್ತರ: ಶುದ್ಧೀಕರಣ ಎಂದರೆ ಮಾಲಿನ್ಯವನ್ನು ಮತ್ತು ಹೊಲಸುಗಳನ್ನು ನಿವಾರಿಸುವುದು. ಅಂದರೆ ನಮಾಝ್ ಮಾಡಲು ತಡೆಯಾಗಿರುವುದನ್ನು ನಿವಾರಿಸುವುದು.
ಪ್ರವಾದಿ (ಸ) ರವರು ಹೇಳಿದರು: “ನಮಾಝ್ನ ಕೀಲಿಕೈ ತಹಾರಃ ಆಗಿದೆ.”
ಹೊಲಸನ್ನು ಶುದ್ಧೀಕರಿಸುವುದು ಎಂದರೆ ಮುಸಲ್ಮಾನನು ತನ್ನ ದೇಹ, ಬಟ್ಟೆ, ಅಥವಾ ನಮಾಝ್ ಮಾಡುವ ಸ್ಥಳದಲ್ಲಿರುವ ಹೊಲಸುಗಳನ್ನು ನಿವಾರಿಸುವುದು.
ಮಾಲಿನ್ಯವನ್ನು ಶುದ್ಧೀಕರಿಸುವುದು ಎಂದರೆ ಶುದ್ಧ ನೀರಿನಿಂದ ವುದೂ ಅಥವಾ ಸ್ನಾನ ಮಾಡುವುದು. ನೀರು ಲಭ್ಯವಿಲ್ಲದಿದ್ದರೆ, ಅಥವಾ ನೀರನ್ನು ಬಳಸಲು ಸಾಧ್ಯವಾಗದಿದ್ದರೆ ತಯಮ್ಮಮ್ ಮಾಡುವುದು.
ಪ್ರಶ್ನೆ 2. ಹೊಲಸು ತಾಗಿದರೆ ಅದನ್ನು ಶುಚೀಕರಿಸುವುದು ಹೇಗೆ?
ಉತ್ತರ: ಅದು ಶುದ್ಧವಾಗುವವರೆಗೆ ನೀರಿನಿಂದ ತೊಳೆಯುವ ಮುಖಾಂತರ. ನಾಯಿ ಪಾತ್ರೆಯನ್ನು ನೆಕ್ಕಿದರೆ, ಅದನ್ನು ಏಳು ಬಾರಿ ನೀರಿನಿಂದ ಶುದ್ದಗೊಳಿಸಬೇಕು. ಮೊದಲ ಬಾರಿ ಮಣ್ಣಿನಿಂದ ತೊಳೆಯಬೇಕು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ನಾಯಿ ನೆಕ್ಕಿದರೆ, ಅದರ ಶುದ್ಧೀಕರಣವೆಂದರೆ ಅದನ್ನು ಏಳು ಬಾರಿ ತೊಳೆಯುವುದು, ಮೊದಲನೆಯ ಬಾರಿ ಮಣ್ಣಿನಿಂದ."
ಪ್ರಶ್ನೆ 3. ವುದೂವಿನ ಶ್ರೇಷ್ಠತೆಗಳನ್ನು ವಿವರಿಸಿ.
ಪ್ರಶ್ನೆ4. ನೀವು ಹೇಗೆ ವುದೂ ಮಾಡುತ್ತೀರಿ?
ಉತ್ತರ: ಕೈಗಳನ್ನು ಮೂರು ಬಾರಿ ತೊಳೆಯುವುದರಿಂದ. ಮೂರು ಬಾರಿ ಬಾಯಿಯನ್ನು ಮುಕ್ಕಳಿಸುವುದು ಮತ್ತು ಮೂಗಿನೊಳಗೆ ನೀರನ್ನು ಎಳೆದು ಹೊರಬಿಡುವುದು.
ಬಾಯಿ ಮುಕ್ಕಳಿಸುವುದು ಎಂದರೆ ಬಾಯಿಯಲ್ಲಿ ನೀರು ಹಾಕಿ ಚೆನ್ನಾಗಿ ಅಲ್ಲಾಡಿಸಿ ಹೊರಹಾಕುವುದು.
ಮೂಗಿಗೆ ನೀರೆಳೆಯುವುದು ಎಂದರೆ ಬಲಗೈಯಿಂದ ಮೂಗಿನೊಳಗೆ ಶ್ವಾಸದೊಂದಿಗೆ ನೀರನ್ನು ಎಳೆಯುವುದು.
ಮೂಗಿನಿಂದ ನೀರು ಹೊರಬಿಡುವುದು ಎಂದರೆ ಎಡಗೈಯಿಂದ ಮೂಗನ್ನು ಹಿಡಿದು ಬಲವಾಗಿ ಮೂಗಿನಿಂದ ನೀರನ್ನು ಹೊರಹಾಕುವುದು.
ನಂತರ ಮುಖವನ್ನು ಮೂರು ಬಾರಿ ತೊಳೆಯುವುದು.
ನಂತರ ಕೈಗಳನ್ನು ಮೊಣಕೈಗಳವರೆಗೆ ಮೂರು ಬಾರಿ ತೊಳೆಯುವುದು.
ನಂತರ ಎರಡು ಕೈಗಳಿಂದ ತಲೆಯ ಮುಂಬದಿಯಿಂದ ಹಿಂಬದಿಯವರೆಗೆ ಮತ್ತು ಅಲ್ಲಿಂದ ಮುಂಬದಿಯವರೆಗೆ ಸವರುವುದು ಮತ್ತು ಕಿವಿಗಳನ್ನು ಸವರುವುದು.
- ನಂತರ ಕಾಲುಗಳನ್ನು ಹರಡುಗಂಟುಗಳವರೆಗೆ ಮೂರು ಬಾರಿ ತೊಳೆಯುವುದು.
ಇದು ವುದೂ ಮಾಡುವ ಸಂಪೂರ್ಣ ವಿಧಾನ ವಾಗಿದೆ. ಪ್ರವಾದಿﷺ ರಿಂದ ವರದಿಯಾದ ಈ ವಿಧಾನವು ಬುಖಾರಿ ಮತ್ತು ಮುಸ್ಲಿಂನ ಹದೀಸ್ಗಳಲ್ಲಿ ಸಾಬೀತಾಗಿದೆ. ಉಸ್ಮಾನ್, ಅಬ್ದುಲ್ಲಾ ಬಿನ್ ಝೈದ್ ಮತ್ತು ಇತರರು ಇದನ್ನು ವರದಿ ಮಾಡಿದ್ದಾರೆ. ಅದೇ ರೀತಿ ಪ್ರವಾದಿ(ಸ) ರಿಂದ ಬುಖಾರಿ ಮತ್ತು ಇತರ ಹದೀಸ್ ಗ್ರಂಥಗಳಲ್ಲೂ ಕೂಡ ಸಾಬೀತಾಗಿದೆ: "ಅವರು ಒಂದೊಂದು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅವರು ಎರಡೆರಡು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅಂದರೆ ಅವರು ವುದೂವಿನ ಪ್ರತಿಯೊಂದು ಅಂಗಗಳನ್ನು ಒಂದು ಅಥವಾ ಎರಡು ಬಾರಿ ತೊಳೆದರು."
ಪ್ರಶ್ನೆ 5. ವುದೂವಿನ ಕಡ್ಡಾಯಗಳು ಎಂದರೇನು? ಅವು ಎಷ್ಟಿವೆ?
ಉತ್ತರ: ಯಾವುದನ್ನು ನಿರ್ವಹಿಸದಿದ್ದರೆ ವುದೂ ಅಸಿಂಧುವಾಗುತ್ತದೋ ಅವುಗಳನ್ನು ವುದೂವಿನ ಕಡ್ಡಾಯಗಳು ಎನ್ನಲಾಗುತ್ತದೆ.
1- ಮುಖವನ್ನು ತೊಳೆಯುವುದು. ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರು ಎಳೆಯುವುದು ಇದರಲ್ಲಿ ಸೇರುತ್ತದೆ.
2- ಮೊಣಕೈಗಳವರೆಗೆ ಕೈಗಳನ್ನು ತೊಳೆಯುವುದು.
3- ತಲೆಯನ್ನು ಸವರುವುದು. ಎರಡು ಕಿವಿಗಳನ್ನು ಸವರುವುದು ಕೂಡ ಇದರಲ್ಲಿ ಸೇರುತ್ತದೆ.
4- ಕಾಲುಗಳನ್ನು ಹರಡುಗಂಟುಗಳವರೆಗೆ ತೊಳೆಯುವುದು.
5- ಅಂಗಾಂಗಗಳನ್ನು ಕ್ರಮಪ್ರಕಾರ ತೊಳೆಯುವುದು. ಅಂದರೆ ಮುಖ, ನಂತರ ಕೈ, ನಂತರ ತಲೆ ಸವರುವುದು, ನಂತರ ಕಾಲುಗಳನ್ನು ತೊಳೆಯುವುದು.
ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ. (ಸೂರಃ ಅಲ್ಮಾಇದಃ: 6)
6- ಅಲ್-ಮುವಾಲತ್: ಅಂದರೆ ವುದೂವನ್ನು ನಿರಂತರವಾಗಿ ನಿರ್ವಹಿಸುವುದು. ಅಂಗಾಂಗಗಳ ನೀರು ಒಣಗುವ ತನಕ ಅವುಗಳ ಮಧ್ಯೆ ತಡ ಮಾಡದಿರುವುದು. ಅಂದರೆ ಅರ್ಧ ವುದೂ ನಿರ್ವಹಿಸಿ ಸ್ವಲ್ಪ ಸಮಯದ ನಂತರ ಅದನ್ನು ಮುಂದುವರಿಸಿದರೆ, ಆ ವುದೂ ಸಿಂಧುವಾಗುವುದಿಲ್ಲ.
ಹದೀಸ್: «ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುತ್ತಿದ್ದ ಒಬ್ಬ ವ್ಯಕ್ತಿಯ ಪಾದದ ಮೇಲ್ಭಾಗದಲ್ಲಿ ದಿರ್ಹಮ್ ಗಾತ್ರದಷ್ಟು ಸ್ಥಳಕ್ಕೆ ನೀರು ತಾಗಿರದೆ ಉಳಿದಿರುವುದನ್ನು ಕಂಡು, ಆತನಿಗೆ ವುದೂ ಮತ್ತು ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು»
ಪ್ರಶ್ನೆ 6. ವುದೂವಿನ ಸುನ್ನತ್ಗಳು ಎಂದರೇನು? ಅವು ಎಷ್ಟಿವೆ?
ಉತ್ತರ: ವುದೂವಿನ ಸುನ್ನತ್ಗಳು ಎಂದರೆ, ವುದೂ ಮಾಡುವವನು ಅವುಗಳನ್ನು ನಿರ್ವಹಿಸಿದರೆ ಹೆಚ್ಚಿನ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆ. ಅವುಗಳನ್ನು ತೊರೆದರೆ ಯಾವುದೇ ಪಾಪವಿಲ್ಲ. ಅದರಿಂದ ವುದೂ ಅಸಿಂಧುವಾಗುವುದಿಲ್ಲ.
1- ಬಿಸ್ಮಿಲ್ಲ ಹೇಳುವುದು. ಹದೀಸ್: "ಅಲ್ಲಾಹುವಿನ ಹೆಸರನ್ನು ಸ್ಮರಿಸದವನಿಗೆ ವುದೂ ಇಲ್ಲ."
2. ಮಿಸ್ವಾಕ್ ಮಾಡುವುದು. ಹದೀಸ್: "ನನ್ನ ಸಮುದಾಯಕ್ಕೆ ನಾನು ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದಾಗಿದ್ದರೆ, ನಾನು ಅವರಿಗೆ ಪ್ರತಿ ವುಝುವಿನೊಂದಿಗೆ ಸಿವಾಕ್ ಬಳಸಲು ಆಜ್ಞಾಪಿಸುತ್ತಿದ್ದೆ."
3- ಮುಂಗೈಗಳನ್ನು ತೊಳೆಯುವುದು.
4- ಬೆರಳುಗಳ ಮಧ್ಯಭಾಗಗಳನ್ನು ತೊಳೆಯುವುದು. ಹದೀಸ್: "ವುಝೂವನ್ನು ಸಂಪೂರ್ಣವಾಗಿ ಮಾಡು, ಬೆರಳುಗಳ ಸಂದುಗಳನ್ನು ತೊಳೆಯು, ಮತ್ತು ನೀನು ಉಪವಾಸಿಗನಾಗಿರದಿದ್ದರೆ ಮೂಗಿಗೆ ಚೆನ್ನಾಗಿ ನೀರು ಎಳೆ."
5- ಅಂಗಗಳನ್ನು ಎರಡನೇ ಮತ್ತು ಮೂರನೇ ಬಾರಿ ತೊಳೆಯುವುದು.
6- ಬಲಭಾಗದಿಂದ ಪ್ರಾರಂಭಿಸುವುದು. ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
7- ವುದೂ ನಿರ್ವಹಿಸಿದ ನಂತರ ಈ ದಿಕ್ರ್ ಪಠಿಸುವುದು: "ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು" "ಅಲ್ಲಾಹನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಮುಹಮ್ಮದ್ ಅವನ ದಾಸ ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷಿ ನುಡಿಯುತ್ತೇನೆ."
8- ಅದರ ನಂತರ ಎರಡು ರಕಅತ್ ನಮಾಝ್ ನಿರ್ವಹಿಸುವುದು. ಹದೀಸ್: «ಯಾರು ನನ್ನ ಈ ವುಝುವಿನಂತೆ ವುಝು ನಿರ್ವಹಿಸಿ, ನಂತರ ಸ್ವತಃ ಏನೂ ಮಾತನಾಡದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ, ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ»
ಪ್ರಶ್ನೆ 7. ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳು ಎಂದರೇನು?
ಉತ್ತರ: ಮಲಮೂತ್ರ ವಿಸರ್ಜನಾ ದ್ವಾರಗಳಿಂದ ಮೂತ್ರ, ಮಲ ಅಥವಾ ವಾಯು ಹೊರಬರುವುದು.
ನಿದ್ರಿಸುವುದು, ಅಥವಾ ಹುಚ್ಚನಾಗುವುದು ಅಥವಾ ಮೂರ್ಛೆ ಹೋಗುವುದು. ಹದೀಸ್: «ಕಣ್ಣು ಗುದದ ಬಂಧನ. ಆದುದರಿಂದ, ಯಾರು ನಿದ್ರಿಸುತ್ತಾರೋ ಅವರು ವುದೂ ಮಾಡಲಿ.»
ಒಂಟೆ ಮಾಂಸ ಸೇವಿಸುವುದು. ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ಒಂಟೆಯ ಮಾಂಸವನ್ನು ತಿಂದ ಬಳಿಕ ವುದೂ ನಿರ್ವಹಿಸಬೇಕೇ?" ಅವರು ಹೇಳಿದರು: "ಹೌದು".
ಕೈಯಿಂದ ಮೂತ್ರದ್ವಾರ ಅಥವಾ ಗುದದ್ವಾರವನ್ನು ಪರದೆಯಿಲ್ಲದೆ ಸ್ಪರ್ಶಿಸುವುದು. ಹದೀಸ್: "ಯಾರು ತನ್ನ ಗುಪ್ತಾಂಗವನ್ನು ಮುಟ್ಟುತ್ತಾನೋ ಅವನು ವುದೂ ಮಾಡಲಿ."
ಪ್ರಶ್ನೆ 8. ತಯಮ್ಮುಮ್ ಎಂದರೇನು?
ಉತ್ತರ: ತಯಮ್ಮುಮ್ ಎಂದರೆ ನೀರು ಸಿಗದಿರುವಾಗ ಅಥವಾ ಅದನ್ನು ಬಳಸಲು ಸಾಧ್ಯವಿಲ್ಲದಿರುವಾಗ ಮಣ್ಣು ಮತ್ತು ಶುದ್ಧವಾದ ಭೂಮಿಯ ಮೇಲ್ಭಾಗದ ಮುಂತಾದ ವಸ್ತುಗಳನ್ನು ಬಳಸುವುದು.
ಅಲ್ಲಾಹು ಹೇಳುತ್ತಾನೆ: ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್ ಮಾಡಿ ಮುಖ ಮತ್ತು ಕೈಗಳನ್ನು ಸವರಿರಿ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ. [ಅನ್ನಿಸಾ:43].
ಪ್ರಶ್ನೆ 9. ತಯಮ್ಮಮ್ ಮಾಡುವುದು ಹೇಗೆ?
ಉತ್ತರ: ಅಂಗೈಗಳ ಒಳಭಾಗದಿಂದ ಮಣ್ಣಿಗೆ ಒಂದು ಬಾರಿ ಬಡಿದು ಮುಖ ಮತ್ತು ಕೈಗಳ ಹೊರಭಾಗವನ್ನು ಒಂದು ಬಾರಿ ಸವರುವುದು.
ಕಾರಣ ಪ್ರವಾದಿ ﷺ ರವರು ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಹೇಳಿದ್ದಾರೆ: "ನಿನಗೆ ಹೀಗೆ ಮಾಡಿದರೆ ಸಾಕಾಗುತ್ತಿತ್ತು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಂಗೈಗಳಿಂದ ನೆಲಕ್ಕೆ ಬಡಿದು, ಅವುಗಳಿಗೆ ಊದಿದರು. ನಂತರ ಅವುಗಳಿಂದ ತಮ್ಮ ಮುಖ ಮತ್ತು ಅಂಗೈಗಳನ್ನು ಸವರಿದರು.
ಪ್ರಶ್ನೆ 10. ತಯಮ್ಮುಮ್ ಅನ್ನು ಅಸಿಂಧುಗೊಳಿಸುವ ಕಾರ್ಯಗಳು ಯಾವುವು?
ಉತ್ತರ: ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳೆಲ್ಲವೂ ತಯಮ್ಮುಮ್ ಅನ್ನು ಅಸಿಂಧುಗೊಳಿಸುತ್ತವೆ.
ನೀರು ಲಭ್ಯವಾದರೆ.
ಪ್ರಶ್ನೆ 11. ಪಾದರಕ್ಷೆ ಮತ್ತು ಕಾಲ್ಚೀಲಗಳು ಎಂದರೇನು? ಅವುಗಳ ಮೇಲೆ ಸವರಬಹುದೇ?
ಉತ್ತರ: ಪಾದರಕ್ಷೆಗಳು ಎಂದರೆ ಕಾಲಿಗೆ ಧರಿಸುವ ಚರ್ಮದ ವಸ್ತು.
ಕಾಲ್ಚೀಲಗಳು ಎಂದರೆ ಕಾಲಿಗೆ ಧರಿಸುವ ಚರ್ಮವಲ್ಲದ ವಸ್ತು.
ಕಾಲುಗಳನ್ನು ತೊಳೆಯುವ ಬದಲು ಅವುಗಳ ಮೇಲೆ ಸವರಬಹುದು.
- ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಿಂದ ವರದಿಯಾದಂತೆ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರು ವುದೂ ಮಾಡಿ, ಕಾಲುಚೀಲಗಳ ಮೇಲೆ ಸವರಿದರು.
ಬುಖಾರಿ ಮತ್ತು ಮುಸ್ಲಿಮ್ನ ವರದಿಯಲ್ಲಿ ಹೀಗಿದೆ: ಅವರು ವುಳೂ ಮಾಡಿ, ಎರಡು ಖುಫ್ಫಗಳ ಮೇಲೆ ಸವರಿದರು.
ಪ್ರಶ್ನೆ 12. ಪಾದರಕ್ಷೆಗಳ ಮೇಲೆ ಸವರುವುದರ ಯುಕ್ತಿ ಏನು?
ಉತ್ತರ: ವಿಶೇಷವಾಗಿ ತಂಪು ಮತ್ತು ಚಳಿಯಿರುವ, ಅಥವಾ ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳನ್ನು ಕಳಚುವುದು ಕಷ್ಟವಾಗುವುದರಿಂದ ಜನರಿಗೆ ಸುಲಭ ಮತ್ತು ಸರಳಗೊಳಿಸಲು ಪಾದರಕ್ಷೆಗಳ ಮೇಲೆ ಸವರುವ ನಿಯಮ ರಚಿಸಲಾಗಿದೆ. ಅಲ್ಲಾಹು ಹೇಳುತ್ತಾನೆ: ಅಲ್ಲಾಹು ನಿಮಗೆ ಸುಲಭ ಮಾಡಲು ಬಯಸುತ್ತಾನೆ; ಅವನು ನಿಮಗೆ ಕಷ್ಟ ಕೊಡಲು ಬಯಸುವುದಿಲ್ಲ. [ಅಲ್ ಬಖರ 185]
ಪ್ರಶ್ನೆ 13. ಪಾದರಕ್ಷೆಗಳ ಮೇಲೆ ಸವರುವುದು ಸಿಂಧುವಾಗಲು ಇರುವ ಷರತ್ತುಗಳು ಯಾವುವು?
ಉತ್ತರ: 1- ವುದೂ ನಿರ್ವಹಿಸಿದ ನಂತರ ಪಾದರಕ್ಷೆಗಳನ್ನು ಧರಿಸಬೇಕು.
ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು: "ಅವುಗಳನ್ನು ಬಿಟ್ಟುಬಿಡಿ. ನಾನು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಮಸ್ಹ್ ಮಾಡಿದರು."
2- ಪಾದರಕ್ಷೆಗಳು ಶುಚಿಯಾಗಿರಬೇಕು, ಶುಚಿಯಿಲ್ಲದ ಪಾದರಕ್ಷೆಗಳ ಮೇಲೆ ಸವರಬಾರದು.
3- ವುದೂ ಮಾಡುವಾಗ ಕಾಲುಗಳನ್ನು ಕಡ್ಡಾಯವಾಗಿ ತೊಳೆಯಬೇಕಾದ ಭಾಗಗಳನ್ನು ಪಾದರಕ್ಷೆಯು ಮುಚ್ಚಿರಬೇಕು.
4. ಸವರುವುದು ನಿಗದಿತ ಅವಧಿಯೊಳಗೆ ಇರಬೇಕು. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನ ಪ್ರಕಾರ: ರಸೂಲ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಪ್ರಯಾಣಿಕನಿಗೆ ಮೂರು ದಿನರಾತ್ರೆಗಳನ್ನು, ಊರ ನಿವಾಸಿಗೆ ಒಂದು ದಿನ ಮತ್ತು ರಾತ್ರಿಯನ್ನು ನಿಶ್ಚಯಿಸಿದ್ದಾರೆ.
ಪ್ರಶ್ನೆ 14. ಪಾದರಕ್ಷೆಗಳ ಮೇಲೆ ಸವರುವುದು ಹೇಗೆ?
ಉತ್ತರ: ಸವರುವ ವಿಧಾನ ಹೀಗಿದೆ: ಕೈಬೆರಳುಗಳನ್ನು ನೀರಿನಲ್ಲಿ ಒದ್ದೆ ಮಾಡಿ ಕಾಲು ಬೆರಳುಗಳ ಮೇಲಿರಿಸಿ, ಕಣಕಾಲಿನ ಬುಡದ ತನಕ ಸವರುವುದು. ಬಲಗಾಲನ್ನು ಬಲಗೈಯಿಂದ ಎಡಗಾಲನ್ನು ಎಡಗೈಯಿಂದ ಸವರಬೇಕು. ಸವರುವಾಗ ಕೈ ಬೆರಳುಗಳನ್ನು ಹರಡಬೇಕು. ಇದನ್ನು ಪುನರಾವರ್ತಿಸಬಾರದು.
ಪ್ರಶ್ನೆ15. ಪಾದರಕ್ಷೆಗಳ ಮೇಲೆ ಸವರುವುದನ್ನು ಏನೆಲ್ಲಾ ಅಸಿಂಧುಗೊಳಿಸುತ್ತದೆ?
ಉತ್ತರ: 1- ಸವರುವ ಅವಧಿ ಮುಗಿಯುವುದು. ಸವರಲು ಶರಿಯತ್ ನಿರ್ದೇಶಿಸಿದ ನಿಗದಿತ ಅವಧಿ ಮುಗಿದ ಬಳಿಕ ಪಾದರಕ್ಷೆಗಳ ಮೇಲೆ ಸವರುವಂತಿಲ್ಲ. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.
2 - ಪಾದರಕ್ಷೆಗಳನ್ನು ಕಳಚುವುದು. ಸವರಿದ ನಂತರ ಪಾದರಕ್ಷೆಗಳನ್ನು ಅಥವಾ ಅವುಗಳಲ್ಲಿ ಒಂದನ್ನು ಕಳಚಿದರೆ ಸವರುವುದು ಅಸಿಂಧುವಾಗುತ್ತದೆ.
ಪ್ರಶ್ನೆ 16. ನಮಾಝ್ನ ಶ್ರೇಷ್ಠತೆಯೇನು?
ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?" ಅವರು ಉತ್ತರಿಸಿದರು: "ಅವನ ದೇಹದಲ್ಲಿ ಯಾವುದೇ ಕೊಳೆ ಉಳಿಯಲಾರದು." ಅವರು (ಪ್ರವಾದಿ) ಹೇಳಿದರು: "ಅದು ಐದು ವೇಳೆಯ ನಮಾಝಿನ ಉದಾಹರಣೆಯಾಗಿದೆ. ಅದರ ಮೂಲಕ ಅಲ್ಲಾಹು ಪಾಪಗಳನ್ನು ಅಳಿಸುತ್ತಾನೆ."
- ದರನ್: ಕೊಳೆ.
ಪ್ರಶ್ನೆ 17. ನಮಾಝ್ ಎಂದರೇನು?
ಉತ್ತರ: ನಮಾಝ್ ಎಂದರೆ ತಕ್ಬೀರ್ನಿಂದ ಪ್ರಾರಂಭಿಸಿ ಮತ್ತು ಸಲಾಂದೊಂದಿಗೆ ಮುಕ್ತಾಯಗೊಳ್ಳುವ ನಿರ್ದಿಷ್ಟ ಮಾತುಗಳು ಮತ್ತು ಕ್ರಿಯೆಗಳೊಂದಿಗೆ ಅಲ್ಲಾಹುವಿಗೆ ಸಲ್ಲಿಸುವ ಆರಾಧನೆಯಾಗಿದೆ.
ಪ್ರಶ್ನೆ 18. ನಮಾಝ್ನ ವಿಧಿಯೇನು?
ಉತ್ತರ: ನಮಾಝ್ ಪ್ರತಿಯೊಬ್ಬ ಮುಸಲ್ಮಾನನಿಗೆ ಕಡ್ಡಾಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ. [ಅನ್ನಿಸಾ: 103].
ಪ್ರಶ್ನೆ 18. ನಮಾಝ್ ತೊರೆಯುವುದರ ವಿಧಿಯೇನು?
ಉತ್ತರ: ನಮಾಝನ್ನು ತೊರೆಯುವುದು ಸತ್ಯನಿಷೇಧವಾಗಿದೆ, ಪ್ರವಾದಿ ﷺ ರವರು ಹೇಳಿದರು: "ನಮ್ಮ (ಸತ್ಯವಿಶ್ವಾಸಿಗಳ) ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಡಂಬಡಿಕೆಯು ನಮಾಝ್ ಆಗಿದೆ. ಆದ್ದರಿಂದ ಯಾರು ಅದನ್ನು ತ್ಯಜಿಸುತ್ತಾನೋ ಅವನು ಖಂಡಿತವಾಗಿಯೂ ಸತ್ಯನಿಷೇಧಿಯಾಗುವನು."
ಪ್ರಶ್ನೆ 19. ಹಗಲು ಮತ್ತು ರಾತ್ರಿ ಒಬ್ಬ ಮುಸಲ್ಮಾನನಿಗೆ ಎಷ್ಟು ನಮಾಝ್ಗಳು ಕಡ್ಡಾಯವಾಗಿವೆ? ಪ್ರತಿ ನಮಾಝಿಗೆ ಎಷ್ಟು ರಕ್ಅತ್ಗಳಿವೆ?
ಉತ್ತರ: ಹಗಲು ಮತ್ತು ರಾತ್ರಿಯಲ್ಲಿ ಐದು ನಮಾಝ್ಗಳು ಕಡ್ಡಾಯವಾಗಿವೆ.
- ಫಜ್ರ್ ನಮಾಜು: ಎರಡು ರಕ್ಅತ್ಗಳು.
- ಝುಹರ್ ನಮಾಝು: ನಾಲ್ಕು ರಕ್ಅತ್ಗಳು.
ಅಸ್ರ್ ನಮಾಝ್: ನಾಲ್ಕು ರಕ್ಅತ್.
- ಮಗ್ರಿಬ್ ನ ನಮಾಜ್: ಮೂರು ರಕ್ಅತ್ಗಳು.
ಇಶಾ ನಮಾಝ್: ನಾಲ್ಕು ರಕ್ಅತ್.
ಪ್ರಶ್ನೆ 21. ನಮಾಝಿನ ಷರತ್ತುಗಳನ್ನು ತಿಳಿಸಿ?
ಉತ್ತರ: 1. ಇಸ್ಲಾಂ; ಸತ್ಯನಿಷೇಧಿಯಿಂದ ಸಿಂಧುವಲ್ಲ; ಶಿರ್ಕ್ನಿಂದ ಕರ್ಮಗಳು ನಿಷ್ಫಲವಾಗುವುದರಿಂದ.
ಅಲ್ಲಾಹು ಹೇಳುತ್ತಾನೆ: ನೀವೇನಾದರೂ ಸಹಭಾಗಿತ್ವ (ಶಿರ್ಕ್) ಮಾಡಿದರೆ ನಿಶ್ಚಯವಾಗಿಯೂ ನಿಮ್ಮ ಕರ್ಮಗಳು ನಿಷ್ಫಲವಾಗುತ್ತವೆ [ಅಝ್ಝುಮರ್: 65]
2- ಬುದ್ಧಿ; ಹುಚ್ಚರ ನಮಾಝ್ ಸಿಂಧುವಲ್ಲ.
3. ವಿವೇಚನೆ; ವಿವೇಚನೆಯಿಲ್ಲದ ಮಕ್ಕಳ ನಮಾಝ್ ಸಿಂಧುವಲ್ಲ.
ಕಾರಣ ಪ್ರವಾದಿ ﷺ ರವರ ಹೇಳಿಕೆಯಾಗಿದೆ- "ಮೂರು ವ್ಯಕ್ತಿಗಳ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ: ನಿದ್ರೆ ಮಾಡುವವನು ಎದ್ದೇಳುವ ತನಕ, ಸಣ್ಣವನು ದೊಡ್ಡವನಾಗುವ ತನಕ, ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ಅಥವಾ ಎಚ್ಚರಗೊಳ್ಳುವ ತನಕ"
4. ಸಂಕಲ್ಪ.
ಹದೀಸ್ನಲ್ಲಿ ಹೀಗಿದೆ: "ಕರ್ಮಗಳು ಕೇವಲ ನಿಯ್ಯತ್ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ಅವನು ಉದ್ದೇಶಿಸಿದ್ದನ್ನು ಮಾತ್ರ ಪಡೆಯುತ್ತಾನೆ."
5. ಸಮಯ ಪ್ರಾರಂಭವಾಗುವುದು. ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ. [ಅನ್ನಿಸಾ:103].
6- ವುದೂ ನಿರ್ವಹಿಸಿರುವುದು. ಹದೀಸ್: "ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ."
7- ಮಾಲಿನ್ಯಗಳಿಂದ ಶುದ್ಧವಾಗಿರುವುದು. ಅಲ್ಲಾಹನ ಈ ವಚನದಂತೆ: ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ. [ಅಲ್-ಮುದ್ದಸ್ಸಿರ್:4]
8- ಗುಪ್ತಾಂಗಗಳನ್ನು ಮುಚ್ಚುವುದು. ಅಲ್ಲಾಹು ಹೇಳುತ್ತಾನೆ: ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ. [ಅಲ್-ಅಅ್ರಾಫ್:31]
9. ಕಿಬ್ಲಾ ದೆಡೆಗೆ ತಿರುಗುವುದು. ಅಲ್ಲಾಹು ಹೇಳುತ್ತಾನೆ: ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್ನ ಕಡೆಗೆ ತಿರುಗಿಸಿರಿ; ಮತ್ತು ನೀವು ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರ ಕಡೆಗೆ ತಿರುಗಿಸಿರಿ. [ಅಲ್-ಬಖರ: 144].
ಪ್ರಶ್ನೆ 22. ನಮಾಝ್ನ ಸ್ತಂಭಗಳು ಯಾವುವು?
ಉತ್ತರ: ಹದಿನಾಲ್ಕು ಸ್ತಂಭಗಳು. ಅವು ಈ ಕೆಳಗಿನಂತಿವೆ:
ಒಂದು: ನಿಲ್ಲುವ ಸಾಮರ್ಥ್ಯವಿರುವವರು ಕಡ್ಡಾಯ ನಮಾಝನ್ನು ನಿಂತು ನಿರ್ವಹಿಸುವುದು. ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಂದ: ನಿಂತು ನಮಾಝ್ ಮಾಡಿರಿ, ನಿಮಗೆ ಸಾಧ್ಯವಾಗದಿದ್ದರೆ ಕುಳಿತುಕೊಂಡು, ಅದಕ್ಕೂ ಸಾಧ್ಯವಾಗದಿದ್ದರೆ ಪಾರ್ಶ್ವದಲ್ಲಿ ಮಲಗಿಕೊಂಡು.
ಇಹ್ರಾಮ್ನ ತಕ್ಬೀರ್, ಅಂದರೆ: ಅಲ್ಲಾಹು ಅಕ್ಬರ್ ಎಂದು ಹೇಳುವುದು. ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ: "ನೀನು ನಮಾಝಿಗೆ ನಿಂತರೆ, ತಕ್ಬೀರ್ ಹೇಳು."
ಸೂರಃ ಅಲ್-ಫಾತಿಹಾ ಪಠಿಸುವುದು. ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ: "ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ."
ರುಕೂ ನಿರ್ವಹಿಸುವುದು. ಬೆನ್ನನ್ನು ನೇರವಾಗಿ ಬಗ್ಗಿಸುವುದು ಮತ್ತು ತಲೆಯನ್ನು ಅದಕ್ಕೆ ಸಮಾನಾಂತರದಲ್ಲಿಡುವುದು.
ರೂಕೂ ನಿಂದ ತಲೆಯೆತ್ತುವುದು.
ಶಾಂತವಾಗಿ ನಿಲ್ಲುವುದು. ಪ್ರವಾದಿ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿರುವಂತೆ: ""ನಂತರ, ರುಕೂಅ್ನಲ್ಲಿ ನೀವು ಶಾಂತವಾಗುವವರೆಗೆ ರುಕೂಅ್ ಮಾಡಿರಿ, ನಂತರ ನೀವು ನೇರವಾಗಿ ನಿಲ್ಲುವವರೆಗೆ ಎದ್ದು ನಿಲ್ಲಿರಿ""
ಸುಜೂಜ್ ಮಾಡುವುದು. ಹಣೆ, ಮೂಗು, ಕೈಗಳು, ಮೊಣಕಾಲುಗಳು ಮತ್ತು ಕಾಲ್ಬೆರಳುಗಳ ತುದಿಗಳನ್ನು ನೆಲದಲ್ಲಿ ಒತ್ತಿ ಹಿಡಿಯುವುದು.
ಸುಜೂದಿನಿಂದ ತಲೆಯೆತ್ತುವುದು.
ಎರಡು ಸುಜೂದ್ಗಳ ನಡುವೆ ಕುಳಿತುಕೊಳ್ಳುವುದು. ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ "ನಂತರ ಸಂಪೂರ್ಣವಾಗಿ ಶಾಂತವಾಗುವವರೆಗೆ ಸುಜೂದ್ ಮಾಡಿರಿ, ನಂತರ ಸಂಪೂರ್ಣವಾಗಿ ಶಾಂತವಾಗುವವರೆಗೆ ಕುಳಿತುಕೊಳ್ಳಿರಿ."
ಸುನ್ನತ್ತಿನ ಪ್ರಕಾರ, ಎಡ ಕಾಲಿನ ಮೇಲೆ ಕುಳಿತುಕೊಂಡು, ಬಲ ಪಾದವನ್ನು ನೆಟ್ಟಗೆ ಮಾಡಿ, ಕಿಬ್ಲಾದ ಕಡೆಗಿರಿಸಬೇಕು. ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನ ಪ್ರಕಾರ: ಅವರು ತಮ್ಮ ಎಡ ಪಾದವನ್ನು ಹಾಸಿ, ತಮ್ಮ ಬಲ ಪಾದವನ್ನು ನೆಟ್ಟಗೆ ಇಡುತ್ತಿದ್ದರು.
ಶಾಂತತೆಯನ್ನು ಪಾಲಿಸುವುದು. ಅಂದರೆ ಪ್ರತಿಯೊಂದು ಕ್ರಿಯೆಯಲ್ಲೂ ಶಾಂತತೆಯನ್ನು ಪಾಲಿಸುವುದು.
ಕೊನೆಯ ತಶಹ್ಹುದ್. ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್ನ ವರದಿ. ಅವರು ಹೇಳಿದರು: ತಶಹ್ಹುದ್ ಕಡ್ಡಾಯಗೊಳಿಸಲ್ಪಡುವುದಕ್ಕೆ ಮೊದಲು ನಾವು ನಮಾಝಿನಲ್ಲಿ ಹೇಳುತ್ತಿದ್ದೆವು.
ಅದಕ್ಕಾಗಿ ಕುಳಿತುಕೊಳ್ಳುವುದು.
ಎರಡು ಸಲಾಂಗಳು. ಅಂದರೆ ಎರಡು ಬಾರಿ "السَّلام عليكم ورحمة الله". "ನಿಮ್ಮ ಮೇಲೆ ಶಾಂತಿ ಮತ್ತು ಅಲ್ಲಾಹನ ಕರುಣೆ ಇರಲಿ” ಎಂದು ಹೇಳುವುದು. ಹದೀಸ್: ಅವರು ತಮ್ಮ ಬಲಕ್ಕೆ ಮತ್ತು ಎಡಕ್ಕೆ ಸಲಾಮ್ ಹೇಳುತ್ತಿದ್ದರು: “ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್, ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್”.
ನಾವು ಈಗಾಗಲೇ ಹೇಳಿದಂತೆ ಸ್ತಂಭಗಳನ್ನು ಅನುಕ್ರಮವಾಗಿ ನಿರ್ವಹಿಸಬೇಕು. ಉದಾಹರಣೆಗೆ, ರುಕೂ ನಿರ್ವಹಿಸುವುದಕ್ಕೆ ಮುನ್ನ ಉದ್ದೇಶಪೂರ್ವಕ ಸುಜೂದ್ ನಿರ್ವಹಿಸಿದರೆ ಅವನ ನಮಾಝ್ ಅಸಿಂಧುವಾಗುತ್ತದೆ. ಮರೆತು ನಿರ್ವಹಿಸಿದರೆ, ರಕೂ ಮಾಡಲು ಮರಳಬೇಕು ಮತ್ತು ನಂತರ ಸುಜೂದ್ ನಿರ್ವಹಿಸಬೇಕು.
ಪ್ರಶ್ನೆ 23. ನಮಾಝ್ನ ಕಡ್ಡಾಯ ಕಾರ್ಯಗಳು ಯಾವುವು?
ಉತ್ತರ: ನಮಾಝ್ಗೆ ಎಂಟು ಕಡ್ಡಾಯ ಕಾರ್ಯಗಳಿವೆ. ಅವು:
1- ತಕ್ಬೀರ್ ಇಹ್ರಾಮಿನ ಹೊರತು ಪಡಿಸಿ ಉಳಿದ ತಕ್ಬೀರ್ಗಳು.
2- ಇಮಾಮ್ ಮತ್ತು ಮುನ್ಫರಿದ್ "ಸಮಿಅಲ್ಲಾಹು ಲಿಮನ್ ಹಮಿದ" ಹೇಳುವುದು.
3- "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವುದು.
4- ರುಕೂನಲ್ಲಿ ಒಮ್ಮೆ ಸುಬ್ಹಾನ ರಬ್ಬಿಯಲ್ ಅಝೀಮ್ ಹೇಳುವುದು.
5- ಸುಜೂದಿನಲ್ಲಿ ಒಮ್ಮೆ ಸುಬ್ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
6- ಎರಡು ಸುಜೂದ್ಗಳ ನಡುವೆ “ರಬ್ಬಿಗ್ಫಿರ್ ಲೀ” ಹೇಳುವುದು.
7- ಮೊದಲ ತಶಹ್ಹುದ್.
8- ಮೊದಲ ತಶಹ್ಹುದ್ಗಾಗಿ ಕುಳಿತುಕೊಳ್ಳುವುದು.
ಪ್ರಶ್ನೆ 23. ನಮಾಝ್ನ ಸುನ್ನತ್ಗಳು ಯಾವುವು?
ಉತ್ತರ: ಹದಿನಾಲ್ಕು ಸುನ್ನತ್ಗಳು. ಅವು:
1- ಪ್ರಾರಂಭದ ತಕ್ಬೀರ್ ನಂತರ “ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ ವತಬಾರಕಸ್ಮುಕ ವತಆಲಾ ಜದ್ದುಕ ವಲಾ ಇಲಾಹ ಗೈರುಕ” ಹೇಳುವುದು. ಇದನ್ನು ದುಆ ಅಲ್-ಇಸ್ತಿಫ್ತಾಹ್ (ಪ್ರಾರಂಭದ ಪ್ರಾರ್ಥನೆ) ಎಂದು ಕರೆಯಲಾಗುತ್ತದೆ.
2- ಅಭಯ ಯಾಚಿಸುವುದು.
3- ಬಿಸ್ಮಿಲ್ಲಾ ಹೇಳುವುದು.
4- ಆಮೀನ್ ಹೇಳುವುದು.
5- ಸೂರಃ ಅಲ್-ಫಾತಿಹಾ ನಂತರ ಬೇರೆ ಸೂರಾವನ್ನು ಓದುವುದು.
6- ಇಮಾಮ್ ಜೋರಾಗಿ ಪಠಿಸುವುದು.
7- ಸಮಿಅಲ್ಲಾಹು ಲಿಮನ್ ಹಮಿದ ಹೇಳಿದ ಬಳಿಕ: "ಮಿಲ್ಅ ಸ್ಸಮಾವಾತಿ ವಮಿಲ್ಅಲ್ ಅರ್ದಿ ವಮಿಲ್ಅ ಮಾ ಶಿಅ್ತ ಮಿನ್ ಶೈಇನ್ ಬಅ್ದ್” ಹೇಳುವುದು.
8- ರುಕೂನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಂದರೆ: ಎರಡನೆಯ ಮತ್ತು ಮೂರನೆಯ ಬಾರಿ ಮತ್ತು ಅದಕ್ಕಿಂತ ಹೆಚ್ಚು ಸುಬ್ಹಾನ ರಬ್ಬಿಯಲ್ ಅಝೀಮ್ ಹೇಳುವುದು.
9- ಸುಜೂದ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸುಬ್ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
10- ಎರಡು ಸುಜೂದ್ಗಳ ನಡುವೆ ಕುಳಿತುಕೊಳ್ಳುವಾಗ ಒಂದಕ್ಕಿಂತ ಹೆಚ್ಚು ಬಾರಿ “ರಬ್ಬಿಗ್ಫಿರ್ ಲೀ” ಹೇಳುವುದು.
11. ಕೊನೆಯ ತಶಹ್ಹುದ್ನಲ್ಲಿ ಪ್ರವಾದಿ (ﷺ) ರವರ ಮೇಲೆ ಮತ್ತು ಅವರ ಆಲ್(ಕುಟುಂಬ)ರ ಮೇಲೆ ಸ್ವಲಾತ್ ಹೇಳುವುದು, ನಂತರ ಪ್ರಾರ್ಥಿಸುವುದು.
ಕ್ರಿಯೆಗಳಲ್ಲಿರುವ ಸುನ್ನತ್ಗಳು. ಅವುಗಳನ್ನು ಹೈಆತ್ ಎಂದು ಕರೆಯಲಾಗುತ್ತದೆ:
1- ತಕ್ಬೀರ್ -ಎ- ಇಹ್ರಾಮ್ನೊಂದಿಗೆ ಕೈಗಳನ್ನು ಎತ್ತುವುದು.
2- ರುಕೂ ಮಾಡುವಾಗ ಕೈಗಳನ್ನು ಎತ್ತುವುದು.
3- ರುಕೂನಿಂದ ತಲೆಯೆತ್ತುವಾಗ ಕೈಗಳನ್ನು ಎತ್ತುವುದು.
4- ಅದರ ನಂತರ ಅವುಗಳನ್ನು ಕೆಳಗೆ ಇರಿಸುವುದು.
5- ಬಲಗೈಯನ್ನು ಎಡಕೈ ಮೇಲೆ ಹಿಡಿಯುವುದು.
6- ಸುಜೂದ್ ಮಾಡುವ ಸ್ಥಳವನ್ನು ನೋಡುವುದು.
7- ನಿಂತಿರುವಾಗ ಪಾದಗಳನ್ನು ಪರಸ್ಪರ ದೂರವಿಡುವುದು.
8- ರುಕೂ ಮಾಡುವಾಗ, ಕೈ ಬೆರಳುಗಳನ್ನು ಹರಡಿಸಿಕೊಂಡು ಮೊಣಕಾಲುಗಳನ್ನು ಬಿಗಿಹಿಡಿಯುವುದು, ಬೆನ್ನನ್ನು ನೇರಕ್ಕೆ ಚಾಚುವುದು ಮತ್ತು ತಲೆಯನ್ನು ಅದರ ಸಮಾನಾಂತರದಲ್ಲಿ ಇರಿಸುವುದು.
9- ಸುಜೂದ್ ಮಾಡುವಾಗ ಸುಜೂದಿನ ಅಂಗಾಂಗಗಳು ನೆಲಕ್ಕೆ ತಾಗಿಕೊಂಡು ಸುಜೂದಿನ ಸ್ಥಳವನ್ನು ಸ್ಪರ್ಶಿಸುವುದು.
10- ಸುಜೂದ್ ಮಾಡುವಾಗ ಕೈಗಳನ್ನು ಪಾರ್ಶ್ವಗಳಿಂದ, ಹೊಟ್ಟೆ ಮತ್ತು ತೊಡೆಗಳಿಂದ ದೂರವಿಡುವುದು. ತೊಡೆಗಳನ್ನು ಕಣಕಾಲುಗಳಿಂದ ಬೇರ್ಪಡಿಸುವುದು, ಮೊಣಕಾಲುಗಳನ್ನು ಪರಸ್ಪರ ಬೇರ್ಪಡಿಸುವುದು, ಪಾದಗಳನ್ನು ನೇರಗೊಳಿಸುವುದು, ಅವರ ಕಾಲ್ಬೆರಳುಗಳ ಅಡಿಭಾಗವನ್ನು ನೆಲಕ್ಕೆ ತಾಗಿಸುವುದು ಮತ್ತು ಕೈಗಳನ್ನು ಭುಜಕ್ಕೆ ಸಮಾನಾಂತರದಲ್ಲಿ ಬೆರಳುಗಳನ್ನು ಜೋಡಿಸಿಕೊಂಡು ಇಡುವುದು.
11- ಎರಡು ಸಾಷ್ಟಾಂಗಗಳ ನಡುವೆ ಮತ್ತು ಮೊದಲ ತಶಹ್ಹುದ್ನಲ್ಲಿ ಕುಳಿತುಕೊಳ್ಳುವಾಗ ಇಫ್ತಿರಾಶ್ (ಕಾಲನ್ನು ಹಾಸಬೇಕು) ಮಾಡಬೇಕು, ಮತ್ತು ಎರಡನೆಯ ತಶಹ್ಹುದ್ನಲ್ಲಿ ತವರ್ರುಕ್ ಮಾಡಬೇಕು.
12- ಎರಡು ಸಾಷ್ಟಾಂಗಗಳ ನಡುವೆ ಎರಡು ಕೈಗಳನ್ನು ಚಾಚಿಕೊಂಡು, ಬೆರಳುಗಳನ್ನು ಮಡಚಿ ತೊಡೆಯ ಮೇಲೆ ಇಡುವುದು. ತಶಹ್ಹುದ್ನಲ್ಲೂ ಹೀಗೆಯೇ ಮಾಡಬೇಕು. ಆದರೆ ಅದರಲ್ಲಿ ಕಿರುಬೆರಳನ್ನು ಮತ್ತು ಉಂಗುರದ ಬೆರಳನ್ನು ಮಡಚಬೇಕು ಮತ್ತು ಹೆಬ್ಬೆರಳನ್ನು ಮಧ್ಯ ಬೆರಳಿನೊಂದಿಗೆ ವೃತ್ತಾಕಾರ ಮಾಡಿ, ಅಲ್ಲಾಹನನ್ನು ಸ್ಮರಿಸುವಾಗ ತೋರುಬೆರಳಿನಿಂದ ಸಂಜ್ಞೆ ಮಾಡಬೇಕು.
13- ಸಲಾಂ ಹೇಳುವಾಗ ಬಲ ಮತ್ತು ಎಡಕ್ಕೆ ತಿರುಗುವುದು.
ಪ್ರಶ್ನೆ 25. ನಮಾಝನ್ನು ಅಸಿಂಧುಗೊಳಿಸುವ ಕಾರ್ಯಗಳು ಯಾವುವು?
ಉತ್ತರ: (1) ನಮಾಝ್ನ ಒಂದು ರುಕ್ನ್ (ಸ್ಥಂಭ) ಅಥವಾ ಶರ್ತ್(ಷರತ್ತು) ಅನ್ನು ಬಿಡುವುದು.
(2) ಉದ್ದೇಶಪೂರ್ವಕವಾಗಿ ಮಾತನಾಡುವುದು.
(3) ತಿನ್ನುವುದು ಅಥವಾ ಕುಡಿಯುವುದು.
(4) ಅನೇಕ ಸತತ ಚಲನೆಗಳು.
(5) ನಮಾಝಿನ ಕಡ್ಡಾಯಕಾರ್ಯಗಳಲ್ಲಿ ಒಂದನ್ನು ಉದ್ದೇಶಪೂರ್ವಕವಾಗಿ ತೊರೆಯುವುದು.
ಪ್ರಶ್ನೆ 25. ಮುಸ್ಲಿಂ ಹೇಗೆ ನಮಾಝ್ ಮಾಡಬೇಕು?
ಉತ್ತರ: ನಮಾಝ್ನ ವಿಧಾನ ಹೀಗಿರಬೇಕು:
1- ಸಂಪೂರ್ಣ ದೇಹವನ್ನು ಯಾವುದೇ ವಿಚಲನೆ ಮಾಡದೆ ಅಥವಾ ತಿರುಗದೆ, ಕಿಬ್ಲಾಗೆ ಮುಖಮಾಡಬೇಕು.
2- ನಂತರ ನಿರ್ವಹಿಸಲು ಬಯಸುವ ನಮಾಝಿನ ನಿಯ್ಯತ್ತನ್ನು(ಸಂಕಲ್ಪ) ನಾಲಗೆಯಿಂದ ಹೇಳದೆ ಹೃದಯದಲ್ಲಿ ನಿಯ್ಯತ್ ಮಾಡಬೇಕು.
3 - ನಂತರ ತಕ್ಬೀರ್-ಎ- ಇಹ್ರಾಮ್, ಅಂದರೆ ಅಲ್ಲಾಹು ಅಕ್ಬರ್ ಎಂದು ಹೇಳಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
4- ನಂತರ ಬಲಗೈಯ ಅಂಗೈಯನ್ನು ಎಡಗೈಯ ಹೊರಬಾಗದಲ್ಲಿಟ್ಟು ಎದೆಯ ಮೇಲಿಡಬೇಕು.
ಅಥವಾ ಹೀಗೆ ಹೇಳಬೇಕು: “ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ, ವತಬಾರಕಸ್ಮುಕ, ವತಆಲಾ ಜದ್ದುಕ, ವಲಾ ಇಲಾಹ ಗೈರುಕ” (ಅರ್ಥ: ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ಕೊಂಡಾಡುತ್ತಾ ನಿನ್ನನ್ನು ಸ್ತುತಿಸುತ್ತೇನೆ. ನಿನ್ನ ನಾಮವು ಅನುಗ್ರಹೀತವಾಗಿದೆ. ನಿನ್ನ ಮಹಿಮೆಯು ಅತ್ಯುನ್ನತವಾಗಿದೆ. ನೀನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ.)
6- ನಂತರ ಅಭಯಯಾಚನೆ ಮಾಡುತ್ತಾ ಹೀಗೆ ಹೇಳಬೇಕು: ಅಊದು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್“ಶಾಪಗ್ರಸ್ತ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯ ಪಡೆಯುತ್ತೇನೆ.”
7- ನಂತರ ಬಿಸ್ಮಿಲ್ಲಾ ಹೇಳಿ ಸೂರ ಫಾತಿಹ ಪಠಿಸಬೇಕು: ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ 2 ಪರಮ ದಯಾಮಯ, ಕರುಣಾನಿಧಿ, 3 ಪ್ರತಿಫಲದ ದಿನದ ಒಡೆಯ 4 “ಇಯ್ಯಾಕ ನಅ್ಬುದು ವಇಯ್ಯಾಕ ನಸ್ತಈನ್” ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೊಂದಿಗೆ ಮಾತ್ರ ಸಹಾಯ ಬೇಡುತ್ತೇವೆ.) ನಮಗೆ ನೇರ ಮಾರ್ಗವನ್ನು ತೋರಿಸು 6 ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ. [ಅಲ್ ಫಾತಿಹಾ:1-7].
ನಂತರ “ಆಮೀನ್” ಎಂದು ಹೇಳಬೇಕು. ಅರ್ಥ: “ಓ ಅಲ್ಲಾಹ್! ನನ್ನಿಂದ ಸ್ವೀಕರಿಸು.”
8- ನಂತರ ಕುರ್ಆನಿನಲ್ಲಿ ತನಗೆ ಕಂಠಪಾಠವಿರುವುದನ್ನು ಪಠಿಸಬೇಕು. ಫಜ್ರ್ ನಮಾಝ್ನಲ್ಲಿ ಕುರ್ಆನ್ ಪಠಣವನ್ನು ದೀರ್ಘಿಸಬೇಕು.
9-ನಂತರ ರುಕೂ ಮಾಡಬೇಕು ಅಂದರೆ: ಅಲ್ಲಾಹನ ಗೌರವಕ್ಕಾಗಿ ತನ್ನ ಬೆನ್ನನ್ನು ಬಾಗಿಸಬೇಕು, ಮತ್ತು ರುಕೂ ಮಾಡುವಾಗ ಅಲ್ಲಾಹು ಅಕ್ಬರ್ ಎಂದು ಹೇಳಬೇಕು ಮತ್ತು ತನ್ನ ಕೈಗಳನ್ನು ತನ್ನ ಭುಜದ ಮಟ್ಟಕ್ಕೆ ಎತ್ತಬೇಕು. ಬೆನ್ನನ್ನು ಚಾಚಿ ತಲೆಯನ್ನು ಕಡೆಗೆ ಇಡುವುದು.ಮತ್ತು ಮೊಣಕಾಲುಗಳ ಮೇಲೆ ತನ್ನ ಕೈಗಳನ್ನು ತೆರೆದ ಬೆರಳುಗಳಿಂದ ಇರಿಸುವುದು ಸುನ್ನತ್ ಆಗಿರುತ್ತದೆ.
10 - ರುಕೂನಲ್ಲಿ ಮೂರು ಬಾರಿ “ಸುಬ್ಹಾನ ರಬ್ಬಿಯಲ್ ಅದೀಮ್” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
11 - ನಂತರ “ಸಮಿಅಲ್ಲಾಹು ಲಿಮನ್ ಹಮಿದ” (ಸ್ತುತಿಸಿದವನ ಮಾತನ್ನು ಅಲ್ಲಾಹು ಆಲಿಸಲಿ) ಎಂದು ಹೇಳುತ್ತಾ ರುಕೂವಿನಿಂದ ತಲೆ ಮೇಲೆತ್ತಬೇಕು ಮತ್ತು ಭುಜಗಳ ವರೆಗೆ ಕೈಗಳನ್ನು ಸಮವನ್ನಾಗಿಸಬೇಕು. ಇಮಾಮರ ಹಿಂದೆ ಇರುವವರು ಸಮಿಅಲ್ಲಾಹು ಲಿಮನ್ ಹಮಿದ ಹೇಳಬಾರದು. ಬದಲಾಗಿ, “ರಬ್ಬನಾ ವಲಕಲ್ ಹಮ್ದು” (ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ) ಎಂದು ಹೇಳಬೇಕು.
12 - ರುಕೂವಿನಿಂದ ಎದ್ದ ನಂತರ: “ರಬ್ಬನಾ ವಲಕಲ್ ಹಮ್ದು ಮಿಲ್ಅ ಸ್ಸಮಾವಾತಿ ವಮಿಲ್ಅಲ್ ಅರ್ದಿ, ವಮಾ ಬೈನಹುಮಾ, ವಮಿಲ್ಅ ಮಾ ಶಿಅತ ಮಿನ್ ಶೈಇನ್ ಬಅದು” (ನಮ್ಮ ರಬ್ಬೇ! ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ, ಆಕಾಶಗಳು ತುಂಬುವಷ್ಟು, ಭೂಮಿ ತುಂಬುವಷ್ಟು ಮತ್ತು ನೀನು ಇಚ್ಛಿಸುವ ಪ್ರತಿಯೊಂದು ವಸ್ತು ತುಂಬುವಷ್ಟು ನಿನಗೆ ಸ್ತುತಿ) ಎಂದು ಹೇಳಬೇಕು.
13- ನಂತರ ಮೊದಲನೆಯ ಸುಜೂದ್ ನಿರ್ವಹಿಸಬೇಕು. ಸುಜೂದ್ ಮಾಡುವಾಗ, “ಅಲ್ಲಾಹು ಅಕ್ಬರ್” ಎಂದು ಹೇಳಬೇಕು. ಹಣೆ, ಮೂಗು, ಎರಡು ಅಂಗೈಗಳು, ಎರಡು ಮಂಡಿಗಳು, ಎರಡು ಪಾದಗಳ ತುದಿಗಳು ಮುಂತಾದ ಏಳು ಅಂಗಗಳ ಮೇಲೆ ಸುಜೂದ್ ಮಾಡಬೇಕು. ತೋಳುಗಳನ್ನು ಪಾರ್ಶ್ವಗಳಿಂದ ದೂರವಿಡಬೇಕು. ಕೈಗಳನ್ನು ನೆಲದ ಮೇಲೆ ಹರಡಬಾರದು. ಬೆರಳುಗಳ ತುದಿಗಳು ಕಿಬ್ಲಕ್ಕೆ ಮುಖಮಾಡಬೇಕು.
14 - ಸುಜೂದಿನಲ್ಲಿ ಮೂರು ಬಾರಿ “ಸುಬ್ಹಾನ ರಬ್ಬಿಯಲ್ ಅಅಲಾ” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
15- ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಸುಜೂದ್ನಿಂದ ತಲೆ ಎತ್ತಬೇಕು.
16. ನಂತರ ಎರಡು ಸಜ್ದಗಳ ಮಧ್ಯೆ ಎಡಪಾದದ ಮೇಲೆ ಕುಳಿತುಕೊಳ್ಳಬೇಕು. ಬಲಪಾದವನ್ನು ನಾಟಿ ನಿಲ್ಲಿಸಬೇಕು. ಕೈಗಳನ್ನು ತೊಡೆಗಳು ಮತ್ತು ಮೊಣಕಾಲುಗಳ ಮೇಲೆ ಇಡಬೇಕು.
17- ಎರಡು ಸುಜೂದ್ಗಳ ನಡುವೆ ಕುಳಿತುಕೊಳ್ಳುವಾಗ ಹೀಗೆ ಹೇಳಬೇಕು: “ರಬ್ಬಿಗ್ಫಿರ್ ಲೀ, ವರ್ಹಮ್ನೀ ವಹ್ದಿನೀ ವರ್ಝುಕ್ನೀ ವಜ್ಬುರ್ನೀ ವಆಫಿನೀ” (ನನ್ನ ರಬ್ಬೇ! ನನ್ನನ್ನು ಕ್ಷಮಿಸು, ನನಗೆ ಕರುಣೆತೋರು, ನನಗೆ ಮಾರ್ಗದರ್ಶನಮಾಡು,ನನ್ನ ನಷ್ಟವನ್ನು ಸರಿದೂಗಿಸು, ನನಗೆ ಅನ್ನಾಧಾರವನ್ನು ನೀಡು, ನನಗೆ ಸೌಖ್ಯನೀಡು.”
18- ನಂತರ ಮೊದಲನೇ ಸುಜೂದ್ ಮಾಡಿದಂತೆ ಎರಡನೇ ಸುಜೂದ್ ಮಾಡಬೇಕು. ಸುಜೂದ್ ಮಾಡುವಾಗ ಅಲ್ಲಾಹು ಅಕ್ಬರ್ ಹೇಳಬೇಕು.
19- ನಂತರ ಎರಡನೇ ಸುಜೂದ್ ನಿರ್ವಹಿಸಿದ ಬಳಿಕ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ಮೊದಲನೆಯ ರಕ್ಅತ್ ನಿರ್ವಹಿಸಿದಂತೆ ಎರಡನೇ ರಕ್ಅತ್ತನ್ನು ನಿರ್ವಹಿಸಬೇಕು. ಆದರೆ ಅದರಲ್ಲಿ ಪ್ರಾರಂಭದ ಪ್ರಾರ್ಥನೆಯಿಲ್ಲ.
20- ಎರಡನೇ ರಕ್ಅತ್ ನಿರ್ವಹಿಸಿದ ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ, ಎರಡು ಸುಜೂದ್ಗಳ ಮಧ್ಯೆ ಕುಳಿತಂತೆ ಕುಳಿತುಕೊಳ್ಳಬೇಕು.
21- ಈ ಕೂರವಿಕೆಯಲ್ಲಿ ಈ ರೀತಿ ತಶಹ್ಹುದ್ ಪಠಿಸಬೇಕು: “ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹ ನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ, ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹ್” (ಅಭಿವಂದನೆಗಳು, ಪ್ರಾರ್ಥನೆಗಳು ಮತ್ತು ಸತ್ಕರ್ಮಗಳೆಲ್ಲವೂ ಅಲ್ಲಾಹನಿಗೆ. ಓ ಪ್ರವಾದಿಯವರೇ! ತಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳು ಸದಾ ಇರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನರಾದ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸನೂ ಸಂದೇಶವಾಹಕನೂ ಆಗಿರುವರೆಂದು ನಾನು ಸಾಕ್ಷ್ಯವಹಿಸುತ್ತೇನೆ). ನಂತರ ಇಹಲೋಕ ಮತ್ತು ಪರಲೋಕದ ಒಳಿತಿಗಾಗಿ ತಾನು ಇಷ್ಟಪಡುವ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು.
22- ನಂತರ ಬಲಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾ ಎಂದು ಹೇಳಬೇಕು. ನಂತರ ಎಡಕ್ಕೆ ತಿರುಗಿ ಹಾಗೆಯೇ ಹೇಳಬೇಕು.
23- ನಮಾಝ್ ಮೂರು ಅಥವಾ ನಾಲ್ಕು ರಕ್ಅತ್ತಿನದ್ದಾಗಿದ್ದರೆ, ಮೊದಲ ತಶಹ್ಹುದ್ನಲ್ಲಿ "ಅಶ್ಹದು ಅನ್ ಲಾಇಲಾಹ ಇಲ್ಲಲ್ಲಾಹ್ ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು” ಎಂಬಲ್ಲಿಯ ತನಕ ಪಠಿಸಬೇಕು.
24 - ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
25- ನಂತರ ಉಳಿದ ರಕ್ಅತ್ಗಳನ್ನು ಎರಡನೇ ರಕ್ಅತ್ತಿನಂತೆ ನಿರ್ವಹಿಸಬೇಕು. ಆದರೆ ಸೂರ ಫಾತಿಹದ ನಂತರ ಬೇರೆ ಸೂರ ಓದಬೇಕಾಗಿಲ್ಲ.
26- ನಂತರ ತವರ್ರುಕ್ನಲ್ಲಿ ಕುಳಿತುಕೊಳ್ಳಬೇಕು. ಅಂದರೆ ಬಲಪಾದವನ್ನು ನಾಟಿ ನಿಲ್ಲಿಸಬೇಕು. ಎಡಪಾದವು ಬಲಗಾಲಿನ ಅಡಿಯಿಂದ ಹೊರಬರಬೇಕು. ನೆಲದ ಮೇಲೆ ಕುಳಿತುಕೊಳ್ಳಬೇಕು. ಮೊದಲ ತಶಹ್ಹುದ್ನಲ್ಲಿ ವಿವರಿಸಿದಂತೆ ಕೈಗಳನ್ನು ತೊಡೆಗಳ ಮೇಲಿಡಬೇಕು.
27- ಈ ಕೂರವಿಕೆಯಲ್ಲಿ ಸಂಪೂರ್ಣ ತಶಹ್ಹುದ್ ಪಠಿಸಬೇಕು.
28- ನಂತರ ಬಲಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾ ಎಂದು ಹೇಳಬೇಕು. ನಂತರ ಎಡಕ್ಕೆ ತಿರುಗಿ ಹಾಗೆಯೇ ಹೇಳಬೇಕು.
ಪ್ರಶ್ನೆ 26: ನಮಾಝ್ ನಿರ್ವಹಿಸಿದ ನಂತರ ಪಠಿಸಬೇಕಾದ ಪ್ರಾರ್ಥನೆಗಳು ಯಾವುವು?
ಉತ್ತರ: ಮೂರು ಸಲ “ಅಸ್ತಗ್ಫಿರುಲ್ಲಾಹ್” ಎಂದು ಹೇಳುವುದು.ಅಲ್ಲಾಹನೊಂದಿಗೆ ನಾನು ಕ್ಷಮೆಯನ್ನು ಬೇಡುತ್ತಿದ್ದೇನೆ,
“ಅಲ್ಲಾಹುಮ್ಮ ಅನ್ತ ಸ್ಸಲಾಮು ವಮಿನ್ಕ ಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಮ್” (ಓ ಅಲ್ಲಾಹ್! ನೀನು ಸಲಾಮ್ ಆಗಿರುವೆ, ಮತ್ತು ಸಲಾಮ್ ನಿನ್ನಿಂದಲೇ ಆಗಿದೆ, ಓ ಘನತೆ ಗೌರವಗಳ ಒಡೆಯನೇ ನೀನು ಅನುಗ್ರಹೀತನಾಗಿರುವೆ.)
“ಸುಬ್ಹಾನಲ್ಲಾಹ್” (ಮೂವತ್ತಮೂರು ಬಾರಿ) (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ).
“ಅಲ್ಹಮ್ದುಲಿಲ್ಲಾಹ್” (ಮೂವತ್ತಮೂರು ಬಾರಿ) (ಸ್ತುತಿ ಅಲ್ಲಾಹನಿಗೆ).
“ಅಲ್ಲಾಹು ಅಕ್ಬರ್” (ಮೂವತ್ತಮೂರು ಬಾರಿ) (ಅಲ್ಲಾಹು ಮಹಾನನಾಗಿದ್ದಾನೆ).
ನಂತರ ನೂರನ್ನು ಪೂರ್ತಿ ಮಾಡಲು ಹೀಗೆ ಹೇಳಬೇಕು: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್.” (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ, ಸ್ತುತಿ ಅಲ್ಲಾಹನಿಗೆ, ಅಲ್ಲಾಹು ಮಹಾನನಾಗಿದ್ದಾನೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.)
- ಫಜ್ರ್ ಮತ್ತು ಮಗ್ರಿಬ್ ನಮಾಝಿನ ನಂತರ ಮೂರು ಬಾರಿ ಹಾಗೂ ಉಳಿದ ನಮಾಝ್ಗಳ ನಂತರ ಒಂದು ಬಾರಿ ಸೂರ ಇಖ್ಲಾಸ್, ಸೂರಃ ಫಲಕ್ ಮತ್ತು ಸೂರಃ ನಾಸ್ ಪಠಿಸಬೇಕು.
- ಆಯತುಲ್-ಕುರ್ಸಿಯನ್ನು ಒಮ್ಮೆ ಪಠಿಸಬೇಕು.
ಪ್ರಶ್ನೆ 27. ರವಾತಿಬ್ ಸುನ್ನತ್ಗಳು ಯಾವುವು? ಅವುಗಳ ಶ್ರೇಷ್ಠತೆಯೇನು?
ಉತ್ತರ: ಫಜ್ರ್ ನಮಾಜಿನ ಮುಂಚೆ ಎರಡು ರಕ್ಅತ್ಗಳು.
ಝುಹರ್ ನಮಾಜಿನ ಮುಂಚೆ ನಾಲ್ಕು ರಕ್ಅತ್ಗಳು.
ಝುಹರ್ ನಮಾಜಿನ ನಂತರ ಎರಡು ರಕ್ಅತ್ಗಳು.
ಮಗ್ರಿಬ್ ನಮಾಜಿನ ನಂತರ ಎರಡು ರಕ್ಅತ್ಗಳು.
ಇಶಾ ನಮಾಜಿನ ನಂತರ ಎರಡು ರಕ್ಅತ್ಗಳು.
ಅದರ ಶ್ರೇಷ್ಠತೆಗಳು ಹೀಗಿವೆ: ಪ್ರವಾದಿ ﷺ ರವರು ಹೇಳಿದರು: "ಯಾರು ಹಗಲು ರಾತ್ರಿ ಸ್ವಯಂಪ್ರೇರಣೆಯಿಂದ ಹನ್ನೆರಡು ರಕ್ಅತ್ ನಮಾಝ್ ನಿರ್ವಹಿಸುತ್ತಾರೋ, ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಮನೆಯನ್ನು ನಿರ್ಮಿಸುತ್ತಾನೆ."
ಪ್ರಶ್ನೆ 28. ವಾರದ ಶ್ರೇಷ್ಠ ದಿನಗಳು ಯಾವುವು?
ಉತ್ತರ: ಜುಮುಅ ದಿನ (ಶುಕ್ರವಾರ). ಪ್ರವಾದಿﷺ ಹೇಳಿದರು: "ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಜುಮುಅ ದಿನವಾಗಿದೆ. ಆ ದಿನದಲ್ಲಿ ಆದಮರನ್ನು ಸೃಷ್ಟಿಸಲಾಯಿತು. ಅದರಲ್ಲಿಯೇ ಅವರು ಮರಣಹೊಂದಿದರು. ಅದರಲ್ಲಿಯೇ ಕಹಳೆ ಊದಲಾಗುವುದು. ಅದರಲ್ಲಿಯೇ ದಿಗ್ಭ್ರಮೆಗೊಳಿಸುವ ಶಬ್ದ ಬರುವುದು. ಆದ್ದರಿಂದ ನೀವು ಜುಮುಅ ದಿನ ನನ್ನ ಮೇಲೆ ಸ್ವಲಾತ್ ಹೆಚ್ಚಿಸಿ, ಏಕೆಂದರೆ ನಿಮ್ಮ ಸ್ವಲಾತ್ ನನ್ನ ಮುಂದೆ ಹಾಜರುಪಡಿಸಲಾಗುತ್ತದೆ." ಶಿಷ್ಯರು ಪ್ರಶ್ನಿಸಿದರು: ಓ ಅಲ್ಲಾಹನ ಸಂದೇಶವಾಹಕರೇ, ನೀವು ಅಗಲಿರುವಾಗ ನಮ್ಮ ಸ್ವಲಾತ್ ನಿಮಗೆ ಹೇಗೆ ಹಾಜರುಪಡಿಸಲಾಗುತ್ತದೆ? ಅವರು ಉತ್ತರಿಸಿದರು: "ಅಲ್ಲಾಹನು ಪ್ರವಾದಿಗಳ ದೇಹಗಳನ್ನು ಮಣ್ಣಿಗೆ ನಿಷಿದ್ಧಗೊಳಿಸಿದ್ದಾನೆ."
ಪ್ರಶ್ನೆ 29. ಜುಮುಅ ನಮಾಝಿನ ವಿಧಿಯೇನು?
ಉತ್ತರ: ಅದು ಪ್ರತಿಯೊಬ್ಬ ಪ್ರೌಢ, ಬುದ್ಧಿಯಿರುವ, ನಿವಾಸಿಯಾಗಿರುವ ಮುಸ್ಲಿಂ ಪುರುಷರಿಗೆ ವೈಯುಕ್ತಿಕ ಕಡ್ಡಾಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ಶುಕ್ರವಾರ ನಮಾಝ್ಗಾಗಿ ಕರೆಯಲಾದರೆ (ಅಝಾನ್ ನೀಡಲಾದರೆ) ಅಲ್ಲಾಹನ ಸ್ಮರಣೆಯ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ-ವ್ಯವಹಾರಗಳನ್ನು ಬಿಟ್ಟುಬಿಡಿ. ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ. [ಅಲ್-ಜುಮುಆ:9].
ಪ್ರಶ್ನೆ 30. ಜುಮುಅ ನಮಾಝಿಗೆ ಎಷ್ಟು ರಕ್ಅತ್ಗಳಿವೆ?
ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.
ಪ್ರಶ್ನೆ 31. ಜುಮುಅ ನಮಾಝನ್ನು ಬಿಟ್ಟುಬಿಡಲು ಅನುಮತಿ ಇದೆಯೇ?
ಉತ್ತರ: ಧರ್ಮಸಮ್ಮತವಾದ ಕಾರಣವಿಲ್ಲದೆ ಜುಮುಅ ನಮಾಝನ್ನು ಬಿಡಲು ಅನುಮತಿಯಿಲ್ಲ. ಪ್ರವಾದಿﷺ ಹೇಳಿದರು: “ಯಾರು ಅಸಡ್ಡೆಯಿಂದ ಮೂರು ಜುಮಾಗಳನ್ನು ಬಿಡುತ್ತಾನೋ ಅವನ ಹೃದಯದ ಮೇಲೆ ಅಲ್ಲಾಹು ಮುದ್ರೆ ಹಾಕುತ್ತಾನೆ.”
ಪ್ರಶ್ನೆ 32. ಜುಮುಅ ದಿನದ ಸುನ್ನತ್ಗಳನ್ನು ಉಲ್ಲೇಖಿಸಿ?
ಉತ್ತರ: 1. ಸ್ನಾನ ಮಾಡುವುದು. ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ: "ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು ಕಡ್ಡಾಯವಾಗಿದೆ."
2-ಸುಗಂಧಗಳನ್ನು ಬಳಸುವುದು. ಹದೀಸ್: ""ಶುಕ್ರವಾರ ಸ್ನಾನ ಮಾಡುವುದು ಮುಸಲ್ಮಾನರ ಕರ್ತವ್ಯವಾಗಿದ್ದು, ಅವರು ತಮ್ಮ ಮನೆಯ ಸುಗಂಧವನ್ನು ಹಚ್ಚಿಕೊಳ್ಳಲಿ.""
3- ಅತ್ಯುತ್ತಮ ಬಟ್ಟೆಗಳನ್ಧಗಳನ್ನು ಹದೀಸ್: "ನಿಮ್ಮಲ್ಲಿ ಸಾಮರ್ಥ್ಯವಿದ್ದವರು ತಮ್ಮ ವೃತ್ತಿಯ ವಸ್ತ್ರಗಳಲ್ಲದೆ, ಜುಮುಅಃಗಾಗಿ ಎರಡು ವಸ್ತ್ರಗಳನ್ನು ಹೊಂದುವುದರಲ್ಲಿ ತಪ್ಪೇನಿಲ್ಲ."
4-ಮಸೀದಿಗೆ ಬೇಗ ಹೋಗುವುದು.
5. ನಡೆದುಕೊಂಡು ಮಸೀದಿಗೆ ಹೋಗುವುದು. ಹದೀಸ್: «ಯಾರು ಶುಕ್ರವಾರ ಸ್ನಾನ ಮಾಡಿ, (ತನ್ನ ದೇಹವನ್ನು) ಚೆನ್ನಾಗಿ ತೊಳೆದು, ಆದಷ್ಟು ಬೇಗನೆ (ಮಸೀದಿಗೆ) ಹೊರಟು, (ಇಮಾಮರಿಗೆ) ಹತ್ತಿರವಾಗಿ ಕುಳಿತು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ ಮೌನವಾಗಿರುತ್ತಾನೋ, ಅವನಿಗೆ ಅವನು ಇಡುವ ಪ್ರತಿಯೊಂದು ಹೆಜ್ಜೆಗೂ ಒಂದು ವರ್ಷದ ಉಪವಾಸ ಮತ್ತು ರಾತ್ರಿ ನಮಾಝಿನ ಪ್ರತಿಫಲವಿದೆ.»
6- ಪ್ರವಾದಿ ﷺ ರವರ ಮೇಲೆ ಹೆಚ್ಚು ಹೆಚ್ಚು ಸ್ವಲಾತ್ ಹೇಳುವುದು. ಪ್ರವಾದಿ ﷺ ರವರು ಹೇಳಿದರು "ಜುಮುಅ ದಿನ ನನ್ನ ಮೇಲೆ ಸ್ವಲಾತ್ ಹೆಚ್ಚಿಸಿ. ಏಕೆಂದರೆ ಆ ದಿನಕ್ಕೆ ಮಲಕ್ಗಳು ಹಾಜರಾಗುತ್ತಾರೆ. ಮತ್ತು ಯಾರೇ ನನ್ನ ಮೇಲೆ ಸ್ವಲಾತ್ ಕಳುಹಿಸಿದರೂ, ಅವರು ಅದನ್ನು ಪೂರ್ಣಗೊಳಿಸುವಷ್ಟರಲ್ಲಿ ಅವರ ಸ್ವಲಾತ್ ನನ್ನ ಮುಂದೆ ಹಾಜರುಪಡಿಸಲಾಗುತ್ತದೆ."
6- ಸೂರಃ ಅಲ್-ಕಹಫ್ ಪಠಿಸುವುದು. ಹದೀಸ್: "ಯಾರು ಶುಕ್ರವಾರ ಸೂರ ಅಲ್-ಕಹಫ್ ಅನ್ನು ಪಠಿಸುತ್ತಾರೋ, ಅವರಿಗೆ ಎರಡು ಶುಕ್ರವಾರಗಳ ನಡುವೆ ಒಂದು ಬೆಳಕು ಪ್ರಕಾಶಿಸುತ್ತದೆ."
8- ಪ್ರಾರ್ಥನೆ ಸ್ವೀಕಾರಗೊಳ್ಳುವ ಸಮಯದಲ್ಲಿ ಪ್ರಾರ್ಥಿಸುವುದು. ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಕ್ರವಾರದ ದಿನವನ್ನು ಪ್ರಸ್ತಾಪಿಸಿ, ಹೇಳಿದರು: "ಅದರಲ್ಲಿ ಒಂದು ಘಳಿಗೆಯಿದೆ. ಆ ಸಮಯದಲ್ಲಿ ಓರ್ವ ಮುಸ್ಲಿಂ ದಾಸನು ನಮಾಝ್ನಲ್ಲಿ ನಿಂತು ಅಲ್ಲಾಹನ ಬಳಿ ಏನನ್ನಾದರೂ ಕೇಳಿದರೆ, ಅಲ್ಲಾಹು ಅವನಿಗೆ ಅದನ್ನು ನೀಡದೇ ಇರುವುದಿಲ್ಲ."
ಪ್ರಶ್ನೆ 34. ಜಮಾಅತ್ ನಮಾಝ್ನ ಶ್ರೇಷ್ಠತೆಯೇನು?
ಉತ್ತರ: ಅಬ್ದುಲ್ಲಾ ಬಿನ್ ಉಮರ್ رَضِيَ اللَّهُ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಜಮಾಅತ್ ನಮಾಝ್ ಒಂಟಿಯಾಗಿ ನಿರ್ವಹಿಸುವ ನಮಾಝ್ಗಿಂತ ಇಪ್ಪತ್ತೇಳು ಪಟ್ಟು ಉತ್ತಮವಾಗಿದೆ."
ಪ್ರಶ್ನೆ 34: ನಮಾಝ್ನಲ್ಲಿ ಭಯ-ಭಕ್ತಿಯಿರುವುದು ಎಂದರೇನು?
ಉತ್ತರ: ಹೃದಯ ಸಾನಿಧ್ಯ ಮತ್ತು ಅಂಗಾಂಗಗಳ ನಿಶ್ಚಲನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸತ್ಯವಿಶ್ವಾಸಿಗಳು ಯಶಸ್ವಿಯಾದರು. ಅವರು ಯಾರೆಂದರೆ, ತಮ್ಮ ನಮಾಝ್ನಲ್ಲಿ ವಿನಮ್ರತೆಯಿರುವವರು. [ಅಲ್-ಮುಅ್ಮಿನೂನ್:1-2].
ಪ್ರಶ್ನೆ 36. ಝಕಾತ್ ಎಂದರೇನು?
ಉತ್ತರ: ಝಕಾತ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಜನರಿಗೆ ಅವರಲ್ಲಿರುವ ನಿರ್ದಿಷ್ಟ ಸಂಪತ್ತಿನಲ್ಲಿರುವ ಕಡ್ಡಾಯ ಹಕ್ಕು.
ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಅದು ಕಡ್ಡಾಯ ದಾನವಾಗಿದ್ದು ಶ್ರೀಮಂತರಿಂದ ತೆಗೆದು ಬಡವರಿಗೆ ನೀಡಲಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಝಕಾತ್ ನೀಡಿರಿ [ಅಲ್-ಬಕರ: 43].
ಪ್ರಶ್ನೆ 36. ಐಚ್ಛಿಕ ದಾನ ಎಂದರೇನು?
ಉತ್ತರ: ಇದು ಝಕಾತ್ ಅಲ್ಲ, ಉದಾಹರಣೆಗೆ ಯಾವುದೇ ಒಳಿತಿನ ಉದ್ದೇಶಕ್ಕಾಗಿ ಯಾವುದೇ ಸಮಯದಲ್ಲಿ ದಾನವನ್ನು ನೀಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ. [ಅಲ್-ಬಖರ: 195].
ಪ್ರಶ್ನೆ 37: ಉಪವಾಸ ಎಂದರೇನು?
ಉತ್ತರ: ಇದು ನಿಯ್ಯತ್ನೊಂದಿಗೆ ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಮುರಿಯುವ ವಸ್ತುಗಳಿಂದ ದೂರವಿರುವ ಮೂಲಕ ಅಲ್ಲಾಹನನ್ನು ಆರಾಧಿಸುವುದು. ಇದರಲ್ಲಿ ಎರಡು ವಿಧಗಳಿವೆ:
ಕಡ್ಡಾಯ ಉಪವಾಸ: ಉದಾಹರಣೆಗೆ ರಮದಾನ್ ತಿಂಗಳ ಉಪವಾಸ. ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರಿಗೆ ಕಡ್ಡಾಯಗೊಳಿಸಲಾದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ. [ಅಲ್-ಬಕರ: 183].
ಕಡ್ಡಾಯವಲ್ಲದ ಉಪವಾಸ: ಉದಾಹರಣೆಗೆ, ಪ್ರತಿ ಸೋಮವಾರ ಮತ್ತು ಗುರುವಾರದ ಉಪವಾಸ, ಪ್ರತಿ ತಿಂಗಳ ಮೂರು ದಿನಗಳ ಉಪವಾಸ, ಅದು ಪ್ರತಿ ಚಂದ್ರಮಾನ ತಿಂಗಳ 13, 14, 15 ನೇ ದಿನಗಳಾಗಿರುವುದು ಉತ್ತಮ.
ಪ್ರಶ್ನೆ 39. ರಮದಾನ್ ತಿಂಗಳ ಉಪವಾಸದ ಶ್ರೇಷ್ಠತೆ ಯಾವುದು?
ಉತ್ತರ: ಅಬೂ ಹುರೈರ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಯಾರು ವಿಶ್ವಾಸದಿಂದ ಮತ್ತು ಪ್ರತಿಫಲದ ನಿರೀಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೋ, ಅವರ ಹಿಂದಿನ ಪಾಪಗಳು ಕ್ಷಮಿಸಲಾಗುವುದು.”
ಪ್ರಶ್ನೆ 40. ರಮದಾನ್ ಅಲ್ಲದ ಬೇರೆ ತಿಂಗಳುಗಳ ಐಚ್ಛಿಕ ಉಪವಾಸದ ಶ್ರೇಷ್ಠತೆ ಯಾವುದು?
ಉತ್ತರ: ಅಬೂ ಸಈದ್ ಖುದ್ರಿ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಯಾವುದೇ ಒಬ್ಬ ದಾಸ ಅಲ್ಲಾಹನಿಗಾಗಿ ಒಂದು ದಿನ ಉಪವಾಸ ಆಚರಿಸಿದರೆ ಆ ಉಪವಾಸದ ಕಾರಣದಿಂದ ಅಲ್ಲಾಹು ಅವನ ಮುಖವನ್ನು ನರಕಾಗ್ನಿಯಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರವಿಡುತ್ತಾನೆ."
- "ಎಪ್ಪತ್ತು ಶರತ್ಕಾಲ" ಅರ್ಥ; ಅಂದರೆ: ಎಪ್ಪತ್ತು ವರ್ಷಗಳು.
ಪ್ರಶ್ನೆ 41. ಉಪವಾಸವನ್ನು ಅಸಿಂಧುಗೊಳಿಸುವ ವಿಷಯಗಳು ಯಾವುವು?
ಉತ್ತರ: 1- ಉದ್ದೇಶಪೂರ್ವಕವಾಗಿ ತಿನ್ನುವುದು ಮತ್ತು ಕುಡಿಯುವುದು.
2- ಉದ್ದೇಶಪೂರ್ವಕವಾಗಿ ವಾಂತಿ ಮಾಡುವುದು.
ಪ್ರಶ್ನೆ 41. ಉಪವಾಸದ ಸುನ್ನತ್ಗಳು ಯಾವುವು?
ಉತ್ತರ: 1- ಇಫ್ತಾರನ್ನು ತ್ವರಿತಗೊಳಿಸುವುದು.
2- ಸುಹೂರ್ ಸೇವಿಸುವುದು ಮತ್ತು ಅದನ್ನು ವಿಳಂಬಿಸುವುದು.
3- ಸತ್ಕರ್ಮಗಳು ಮತ್ತು ಆರಾಧನೆಗಳನ್ನು ಹೆಚ್ಚಿಸುವುದು.
4- ಉಪವಾಸ ಮಾಡುವ ವ್ಯಕ್ತಿಯೊಡನೆ ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ನಾನು ಉಪವಾಸಿಗ ಎಂದು ಹೇಳುವುದು.
5- ಇಫ್ತಾರಿನ (ಉಪವಾಸ ಮುರಿಯುವ) ಸಮಯದಲ್ಲಿ ಪ್ರಾರ್ಥಿಸುವುದು.
6- ತಾಜಾ ಖರ್ಜೂರಗಳಿಂದ ಅಥವಾ ಒಣ ಖರ್ಜೂರದಿಂದ, ಇವುಗಳು ಇಲ್ಲದಿದ್ದರೆ ನೀರಿನಿಂದ ಉಪವಾಸ ಮುರಿಯುವುದು.
ಪ್ರಶ್ನೆ 43: ಹಜ್ಜ್ ಎಂದೇನು?
ಉತ್ತರ: ಹಜ್ಜ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಕರ್ಮಗಳನ್ನು ನಿರ್ವಹಿಸಲು ಅಲ್ಲಾಹನ ಪವಿತ್ರ ಭವನಕ್ಕೆ ತೆರಳುವ ಮೂಲಕ ಅವನನ್ನು ಆರಾಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಆ ಭವನಕ್ಕೆ ತಲುಪಲು ಸಾಧ್ಯವಿರುವ ಜನರು ಅಲ್ಲಿಗೆ ತೆರಳಿ ಹಜ್ಜ್ ನಿರ್ವಹಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆದರೆ ಯಾರಾದರೂ ಅದನ್ನು ನಿಷೇಧಿಸಿದರೆ—ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ಸಂಪೂರ್ಣ ನಿರಪೇಕ್ಷನಾಗಿದ್ದಾನೆ. [ಆಲು ಇಮ್ರಾನ್: 97]
ಪ್ರಶ್ನೆ 44. ಹಜ್ಜ್ನ ಸ್ಥಂಭಗಳನ್ನು ವಿವರಿಸಿ?
ಉತ್ತರ: 1- ಇಹ್ರಾಮ್.
2- ಅರಫಾದಲ್ಲಿ ನಿಲ್ಲುವುದು.
3- ತವಾಫುಲ್-ಇಫಾದ.
4- ಸಫಾ ಮತ್ತು ಮರ್ವಾ ನಡುವೆ ಸಈ ಮಾಡುವುದು.
ಪ್ರಶ್ನೆ 44. ಹಜ್ಜ್ನ ಶ್ರೇಷ್ಠತೆಗಳನ್ನು ವಿವರಿಸಿ.
ಉತ್ತರ - ಅಬು ಹುರೈರಾ رَضِيَ اللَّهُ عَنْهُ ರಿಂದ ವರಿದ. ಅಲ್ಲಾಹನ ಪ್ರವಾದಿ ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಶ್ಲೀಲ ವರ್ತನೆ ಅಥವಾ ಅನೈತಿಕತೆಯನ್ನು ಮಾಡದೇ ಕೇವಲ ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ ಅವನು ಹಜ್ಜಿನಿಂದ ಹಿಂದಿರುಗುವನು.”
- “ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ”: ಅಂದರೆ ಯಾವುದೇ ಪಾಪಗಳಿಲ್ಲದೆ.
ಪ್ರಶ್ನೆ 46. ಉಮ್ರಾ ಎಂದರೇನು?
ಉತ್ತರ: ಉಮ್ರಾ ಎಂದರೆ ಯಾವುದೇ ಸಮಯದಲ್ಲಿ ಕೆಲವು ನಿರ್ದಿಷ್ಟ ಕರ್ಮಗಳನ್ನು ನಿರ್ವಹಿಸಲು ಅಲ್ಲಾಹನ ಪವಿತ್ರ ಭವನಕ್ಕೆ ತೆರಳುವ ಮೂಲಕ ಅವನನ್ನು ಆರಾಧಿಸುವುದು.
ಪ್ರಶ್ನೆ 47. ಉಮ್ರಾದ ಸ್ತಂಭಗಳನ್ನು ವಿವರಿಸಿ?
ಉತ್ತರ: 1- ಇಹ್ರಾಮ್.
2- ಕಅಬಾಗೆ ತವಾಫ್ (ಪ್ರದಕ್ಷಿಣೆ).
3- ಸಫಾ ಮತ್ತು ಮರ್ವಾ ನಡುವೆ ಸಈ ಮಾಡುವುದು.
ಪ್ರಶ್ನೆ 47. ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಎಂದರೇನು?
ಉತ್ತರ: ಇಸ್ಲಾಂ ಧರ್ಮವನ್ನು ಹರಡಲು, ಅದನ್ನು ಮತ್ತು ಅದರ ಜನರನ್ನು ರಕ್ಷಿಸಲು ಅಥವಾ ಇಸ್ಲಾಂ ಮತ್ತು ಅದರ ಜನರ ಶತ್ರುಗಳ ವಿರುದ್ಧ ಹೋರಾಡಲು ಪರಿಶ್ರಮಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು (ಯುದ್ಧಕ್ಕಾಗಿ) ಹೊರಡಿರಿ. ನಿಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.” [ಸೂರ ಅತ್ತೌಬ:41].
ಹೀಗಿರುವಾಗ, ನೀವು ನಿಮ್ಮಿಬ್ಬರ ಪರಿಪಾಲಕನ ಯಾವೆಲ್ಲಾ ಅನುಗ್ರಹಗಳನ್ನು ಸುಳ್ಳೆಂದು ತಿರಸ್ಕರಿಸುವಿರಿ?
ಪ್ರವಾದಿಯವರ ಜೀವನಚರಿತ್ರೆ ವಿಭಾಗ
ಪ್ರವಾದಿಯವರ ಜೀವನಚರಿತ್ರೆ ಶಾಸ್ತ್ರ:
ಪ್ರವಾದಿಯ ಜೀವನಚರಿತ್ರೆ: ಇದು ಸಂದೇಶವಾಹಕ ಮುಹಮ್ಮದ್ (ﷺ) ರವರ ಜನನದಿಂದ ಮರಣದವರೆಗಿನ ಜೀವನದ ಕುರಿತಾದ ಜ್ಞಾನವಾಗಿದೆ.
ಪ್ರಶ್ನೆ 1. ನಮ್ಮ ಪ್ರವಾದಿ ಮುಹಮ್ಮದ್ ﷺ ರ ವಂಶ ಯಾವುದು?
ಉತ್ತರ: ಅವರು ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್. ಹಾಶಿಂ ಖುರೈಶ್ ಗೋತ್ರದಿಂದ, ಖುರೈಶ್ ಅರಬ್ಬರಿಂದ, ಅರಬ್ಬರು ಇಸ್ಮಾಯೀಲ್ರ ವಂಶಜರು, ಇಸ್ಮಾಯೀಲ್ ಇಬ್ರಾಹಿಮರ ಪುತ್ರರು. ಅವರ ಮತ್ತು ನಮ್ಮ ಪ್ರವಾದಿಯ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
ಪ್ರಶ್ನೆ 2. ನಮ್ಮ ಪ್ರವಾದಿಯ ತಾಯಿಯ ಹೆಸರೇನು?
ಉತ್ತರ: ಆಮಿನಾ ಬಿಂತು ವಹಬ್.
ಪ್ರಶ್ನೆ 3. ಅವರ ತಂದೆ ಯಾವಾಗ ಮರಣ ಹೊಂದಿದರು?
ಉತ್ತರ: ಪ್ರವಾದಿಯವರು ﷺ ತಾಯಿಯ ಗರ್ಭದಲ್ಲಿರುವಾಗ ಅವರ ತಂದೆ ಮದೀನಾದಲ್ಲಿ ನಿಧನರಾದರು.
ಪ್ರಶ್ನೆ 4. ಪ್ರವಾದಿ ﷺ ಯಾವಾಗ ಜನಿಸಿದರು?
ಉತ್ತರ: ಆನೆಯ ವರ್ಷದಲ್ಲಿ, ರಬೀಉಲ್-ಅವ್ವಲ್ ತಿಂಗಳಲ್ಲಿ ಸೋಮವಾರ ಜನಿಸಿದರು.
ಪ್ರಶ್ನೆ 5. ಅವರು ಯಾವ ಪಟ್ಟಣದಲ್ಲಿ ಜನಿಸಿದರು?
ಉತ್ತರ: ಮಕ್ಕಾದಲ್ಲಿ.
ಪ್ರಶ್ನೆ 6: ಅವರ ತಾಯಿಯಲ್ಲದೆ ಅವರಿಗೆ ಸ್ತನಪಾನ ಮತ್ತು ಪಾಲನೆ ಪೋಷಣೆ ಮಾಡಿದವರು ಯಾರು?
ಉತ್ತರ: ಅವರ ತಂದೆಯ ದಾಸಿ, ಉಮ್ಮು ಐಮನ್
- ಅವರ ಚಿಕ್ಕಪ್ಪ ಅಬೂ ಲಹಬ್ ರ ದಾಸಿ ಸುವೈಬಃ.
- ಹಲೀಮಾ ಸ'ಅದಿಯಾ.
ಪ್ರಶ್ನೆ 7. ಅವರ ತಾಯಿ ಯಾವಾಗ ಮರಣ ಹೊಂದಿದರು?
ಉತ್ತರ: ಅವರು ಆರು ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು. ನಂತರ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ಅವರನ್ನು ಪೋಷಿಸಿದರು.
ಪ್ರಶ್ನೆ 8. ಅವರ ಅಜ್ಜ ಅಬ್ದುಲ್ ಮುತ್ತಲಿಬ್ರ ಮರಣದ ನಂತರ ಅವರನ್ನು ಯಾರು ಪೋಷಿಸಿದರು?
ಉತ್ತರ: ಅವರು ಎಂಟು ವರ್ಷದವರಾಗಿದ್ದಾಗ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ನಿಧನರಾದರು. ನಂತರ ಅವರ ಚಿಕ್ಕಪ್ಪ ಅಬೂತಾಲಿಬ್ ಅವರನ್ನು ಪೋಷಿಸಿದರು.
ಪ್ರಶ್ನೆ 9. ಅವರು ತಮ್ಮ ಚಿಕ್ಕಪ್ಪನೊಂದಿಗೆ ಯಾವಾಗ ಸಿರಿಯಾಗೆ ಪ್ರಯಾಣ ಮಾಡಿದರು?
ಉತ್ತರ: ಅವರು ಹನ್ನೆರಡು ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ಚಿಕ್ಕಪ್ಪನೊಂದಿಗೆ ಸಿರಿಯಾಗೆ ಪ್ರಯಾಣ ಮಾಡಿದರು.
ಪ್ರಶ್ನೆ 10. ಅವರ ಎರಡನೇ ಪ್ರಯಾಣ ಯಾವಾಗ ಆಯಿತು?
ಉತ್ತರ: ಅವರ ಎರಡನೇ ಪ್ರಯಾಣವು ಖದೀಜಾರ رَضِيَ اللَّهُ عَنْهَا ಹಣದಿಂದ ವ್ಯಾಪಾರ ಮಾಡುವ ಸಂದರ್ಭದಲ್ಲಾಯಿತು. ಪ್ರಯಾಣದಿಂದ ಹಿಂದಿರುಗಿದ ನಂತರ ಅವರನ್ನು ಮದುವೆಯಾದರು. ಆಗ ಅವರಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು.
ಪ್ರಶ್ನೆ 11. ಖುರೈಷರು ಕಾಬಾವನ್ನು ಯಾವಾಗ ಪುನರ್ ನಿರ್ಮಾಣ ರ್ಮಾಣ ಮಾಡಿದರು?
ಉತ್ತರ: ಅವರಿಗೆ ಮೂವತ್ತೈದು ವರ್ಷ ಪ್ರಾಯವಾಗಿದ್ದಾಗ ಖುರೈಶ್ ಕಾಬಾವನ್ನು ಪುನರ್ನಿರ್ಮಿಸಿದರು.
ಹಜರ್ ಅಸ್ವದನ್ನು ಯಾರು ಇಡಬೇಕೆಂದು ಅವರಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಅವರದನ್ನು ಒಂದು ಬಟ್ಟೆಯಲ್ಲಿಟ್ಟು, ನಾಲ್ಕು ಬುಡಕಟ್ಟುಗಳ ಪ್ರತಿಯೊಬ್ಬ ನಾಯಕನನ್ನು ಆ ಬಟ್ಟೆಯ ತುದಿ ಹಿಡಿದುಕೊಳ್ಳುವಂತೆ ಆದೇಶಿಸಿದರು ಅವರು ಅದನ್ನು ಅದರ ಸ್ಥಳದವರೆಗೆ ಎತ್ತಿದಾಗ, ಪ್ರವಾದಿರವರು ಅದನ್ನು ತನ್ನ ಕೈಯಿಂದ ಇರಿಸಿದನು.. ಈ ರೀತಿ ಸಮಸ್ಯೆಯನ್ನು ಪರಿಹರಿಸಿದರು.
ಪ್ರಶ್ನೆ 12. ಅವರನ್ನು ಪ್ರವಾದಿಯಾಗಿ ನಿಯುಕ್ತಿಗೊಳಿಸುವಾಗ ಅವರ ವಯಸ್ಸು ಎಷ್ಟು? ಅವರನ್ನು ಯಾರೆಡೆಗೆ ನಿಯುಕ್ತಿಗೊಳಿಸಲಾಯಿತು?
ಉತ್ತರ: ಆಗ ಅವರಿಗೆ ನಲವತ್ತು ವರ್ಷ ಪ್ರಾಯವಾಗಿತ್ತು. ಅವರಿಗೆ ಸಂಪೂರ್ಣ ಮನುಕುಲಕ್ಕೆ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ನಿಯುಕ್ತಿಗೊಳಿಸಲಾಯಿತು.
ಪ್ರಶ್ನೆ 13. ಮೊತ್ತಮೊದಲು ದಿವ್ಯವಾಣಿ ಪ್ರಾರಂಭವಾದದ್ದು ಹೇಗೆ?
ಉತ್ತರ: ಸತ್ಯ ಕನಸುಗಳು. ಅವರು ಯಾವುದೇ ಕನಸನ್ನು ಕಂಡರೂ ಅದು ಹಗಲ ಬೆಳಕಿನಂತೆ ನಿಜವಾಗುತ್ತಿತ್ತು.
ಪ್ರಶ್ನೆ 14. ದಿವ್ಯವಾಣಿ ಅವತೀರ್ಣದ ಮೊದಲು ಅವರ ಸ್ಥಿತಿ ಹೇಗಿತ್ತು? ಮೊತ್ತಮೊದಲು ಅವರಿಗೆ ದಿವ್ಯವಾಣಿ ಅವತೀರ್ಣವಾದದ್ದು ಯಾವಾಗ?
ಉತ್ತರ: ಅವರು ಹಿರಾ ಗುಹೆಯಲ್ಲಿ ಅಲ್ಲಾಹನನ್ನು ಆರಾಧಿಸುತ್ತಿದ್ದರು ಮತ್ತು ಅದಕ್ಕಾಗಿ ಸ್ವತಃ ಸನ್ನದ್ಧರಾಗುತ್ತಿದ್ದರು.
ಅವರು ಗುಹೆಯಲ್ಲಿ ಆರಾಧನೆಯಲ್ಲಿರುವಾಗ ಅವರ ಮೇಲೆ ದಿವ್ಯವಾಣಿ ಅವತೀರ್ಣವಾಯಿತು.
ಪ್ರಶ್ನೆ 15. ಮೊತ್ತಮೊದಲು ಅವತೀರ್ಣವಾದ ಕುರ್ಆನ್ ಸೂಕ್ತಿ ಯಾವುದು?
ಉತ್ತರ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸೃಷ್ಟಿಸಿರುವ ತಮ್ಮ ಪ್ರಭುವಿನ ನಾಮದಿಂದ ಓದಿರಿ. ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು 2 ಓದಿರಿ ತಮ್ಮ ಪ್ರಭು ಅತ್ಯಧಿಕ ಔದಾರ್ಯವುಳ್ಳವನಾಗಿರುವನು. ಅವನು ಲೇಖನಿಯ ಮೂಲಕ ಕಲಿಸಿಕೊಟ್ಟನು. ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು 5﴾ [ಅಲ್-ಅಲಕ್:1-5]
ಪ್ರಶ್ನೆ 16. ಅವರ ಸಂದೇಶದಲ್ಲಿ ಮೊತ್ತಮೊದಲು ವಿಶ್ವಾಸವಿಟ್ಟದ್ದು ಯಾರು?
ಉತ್ತರ - ಪುರುಷರಲ್ಲಿ: ಅಬೂಬಕರ್ ಸಿದ್ದೀಕ್.
- ಮಹಿಳೆಯರಲ್ಲಿ: ಖದೀಜ ಬಿಂತ್ ಖುವೈಲಿದ್.
- ಮತ್ತು ಬಾಲಕರಲ್ಲಿ: ಅಲಿ ಬಿನ್ ಅಬೂತಾಲಿಬ್.
- ಮತ್ತು ವಿಮೋಚನೆಗೊಂಡ ಗುಲಾಮರಲ್ಲಿ: ಝೈದ್ ಬಿನ್ ಹಾರಿಸ.
- ದಾಸರ ಪೈಕಿ: ಬಿಲಾಲ್ ಅಲ್-ಹಬಶಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ).
ಪ್ರಶ್ನೆ 17. ಅವರು ಇಸ್ಲಾಮಿನೆಡೆಗೆ ಹೇಗೆ ಆಮಂತ್ರಿಸಿದರು?
ಉತ್ತರ: ಸುಮಾರು ಮೂರು ವರ್ಷಗಳ ಕಾಲ ರಹಸ್ಯವಾಗಿ ಮತಪ್ರಚಾರ ಮಾಡಿದರು. ನಂತರ ಬಹಿರಂಗವಾಗಿ ಮತಪ್ರಚಾರ ಮಾಡಲು ಪ್ರವಾದಿ ﷺ ಗೆ ಆದೇಶ ನೀಡಲಾಯಿತು.
ಪ್ರಶ್ನೆ 18. ಬಹಿರಂಗವಾಗಿ ಮತಪ್ರಚಾರ ಮಾಡಲು ಆರಂಭಿಸಿದ ನಂತರ ಪ್ರವಾದಿ ﷺ ಮತ್ತು ಅವರ ಅನುಯಾಯಿಗಳ ಸ್ಥಿತಿ ಹೇಗಿತ್ತು?
ಉತ್ತರ - ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿ ಮತ್ತು ಮುಸ್ಲಿಮರನ್ನು ತೀವ್ರವಾಗಿ ಹಿಂಸಿಸಿದರು. ನಂತರ ವಿಶ್ವಾಸಿಗಳಿಗೆ ಹಬ್ಷಾದ (ಇಥಿಯೋಪಿಯಾ) ನಜಾಶಿ ಅರಸನೆಡೆಗೆ ವಲಸೆ ಹೋಗಲು ಆದೇಶ ನೀಡಲಾಯಿತು.
ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಸಿಸಲು ಮತ್ತು ಕೊಲ್ಲಲು ಸರ್ವಾನುಮತದಿಂದ ತೀರ್ಮಾನಿಸಿದಾಗ ಅಲ್ಲಾಹು ಅವರನ್ನು ರಕ್ಷಿಸಿದನು. ಮತ್ತು ಅವರ ಚಿಕ್ಕಪ್ಪ ಅಬು ತಾಲಿಬ್ ಅವರನ್ನು ರಕ್ಷಿಸಬೇಕೆಂದು ಅವರ ಆಸರೆಯಲ್ಲಿ ಇರಿಸಿದನು.
ಪ್ರಶ್ನೆ 19. ಪ್ರವಾದಿ ﷺರ ಪ್ರವಾದಿತ್ವದ ಹತ್ತನೇ ವರ್ಷದಲ್ಲಿ ಯಾರು ನಿಧನರಾದರು?
ಉತ್ತರ: ಪ್ರವಾದಿಯ ಚಿಕ್ಕಪ್ಪ ಅಬೂತಾಲಿಬ್ ಮತ್ತು ಅವರ ಪತ್ನಿ ಖದೀಜಾ رَضِيَ اللَّهُ عَنْهَا ನಿಧನರಾದರು.
ಪ್ರಶ್ನೆ 20. ಇಸ್ರಾ (ರಾತ್ರಿಯ ಪ್ರಯಾಣ) ಮತ್ತು ಮಿ'ಅರಾಜ್ (ಆಕಾಶಯಾನ) ಯಾವಾಗ ಸಂಭವಿಸಿತು?
ಉತ್ತರ: ಅವರು ಐವತ್ತು ವರ್ಷ ವಯಸ್ಸಿನವರಾಗಿದ್ದಾಗ. ಆಗ ಅವರ ಮೇಲೆ ದೈನಂದಿನ ಐದು ಹೊತ್ತಿನ ನಮಾಝನ್ನು ಕಡ್ಡಾಯಗೊಳಿಸಲಾಯಿತು.
ಇಸ್ರಾ : ಮಸ್ಜಿದುಲ್ ಹರಾಮಿನಿಂದ -ಅಕ್ಸಾ ಮಸೀದಿವರೆಗಿನ ರಾತ್ರಿಯ ಪ್ರಯಾಣ.
ಮಿ'ಅರಾಜ್: ಇದು ಅಕ್ಸಾ ಮಸೀದಿಯಿಂದ ಆಕಾಶಕ್ಕೆ ಸಿದ್ರತುಲ್-ಮುಂತಾಹಾದವರೆಗಿನ ಆಕಾಶಯಾನ.
ಪ್ರಶ್ನೆ 21. ಪ್ರವಾದಿ ﷺ ಮಕ್ಕಾದ ಹೊರಗಿನ ಜನರನ್ನು ಹೇಗೆ ಆಹ್ವಾನಿಸುತ್ತಿದ್ದರು?
ಉತ್ತರ: ಅವರು ತ್ವಾಯಿಫ್ನ ಜನರನ್ನು ಇಸ್ಲಾಮಿಗೆ ಕರೆದರು ಮತ್ತು ಹಜ್ಜಿನ ಸಮಯದಲ್ಲಿ ಹಾಗೂ ಜನ ಸೇರುವೆಡೆ ಮತಪ್ರಚಾರ ಮಾಡಿದರು. ಕೊನೆಗೆ ಮದೀನಾದ ಅನ್ಸಾರ್ ಜನರ ಪೈಕಿ ಕೆಲವರು ಬಂದು ಅವರಲ್ಲಿ ವಿಶ್ವಾಸವಿಟ್ಟರು. ಅವರು ಪ್ರವಾದಿಗೆ ﷺ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದರು.
ಪ್ರಶ್ನೆ 22. ಪ್ರವಾದಿ ﷺ ಮಕ್ಕಾದಲ್ಲಿ ಮತಪ್ರಚಾರ ಮಾಡುತ್ತಾ ಎಷ್ಟು ವರ್ಷಗಳ ಕಾಲ ತಂಗಿದ್ದರು?
ಉತ್ತರ: ಹದಿಮೂರು ವರ್ಷ.
ಪ್ರಶ್ನೆ 23: ಪ್ರವಾದಿ(ಸ) ಎಲ್ಲಿಗೆ ವಲಸೆ ಹೋದರು?
ಉತ್ತರ: ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದರು.
ಪ್ರಶ್ನೆ 24. ಅವರು ಮದೀನಾದಲ್ಲಿ ಎಷ್ಟು ಸಮಯ ಇದ್ದರು?
ಉತ್ತರ: ಹತ್ತು ವರ್ಷ.
ಪ್ರಶ್ನೆ 25. ಮದೀನಾದಲ್ಲಿ ಅವರ ಮೇಲೆ ಕಡ್ಡಾಯಗೊಳಿಸಲಾದ ಇಸ್ಲಾಮಿನ ಕಾನೂನುಗಳು ಯಾವುವು?
ಉತ್ತರ: ಝಕಾತ್, ಉಪವಾಸ, ಹಜ್ಜ್, ಜಿಹಾದ್, ಅಝಾನ್ (ಪ್ರಾರ್ಥನೆಗೆ ಕರೆ) ಮತ್ತು ಇಸ್ಲಾಮಿನ ಇತರೆ ಕಾನೂನುಗಳು ಕಡ್ಡಾಯಗೊಳಿಸಲಾದವು.
ಪ್ರಶ್ನೆ 26. ಪ್ರವಾದಿ ﷺ ರ ಪ್ರಮುಖ ಯುದ್ಧಗಳು ಯಾವುವು?
ಉತ್ತರ: - ಬದ್ರ್ ಮಹಾಯುದ್ಧ: ಹಿಜರಿ ಎರಡನೇ ವರ್ಷದಲ್ಲಿ.
- ಉಹುದ್ ಯುದ್ಧ: ಹಿಜರಿ ಮೂರನೇ ವರ್ಷದಲ್ಲಿ.
- ಅಹ್ಝಾಬ್ ಯುದ್ಧ: ಹಿಜ್ರಾದ ಐದನೇ ವರ್ಷದಲ್ಲಿ.
- ಮಕ್ಕಾ ವಿಜಯದ ಯುದ್ಧ. ಹಿಜರಿ ಎಂಟನೇ ವರ್ಷದಲ್ಲಿ.
ಪ್ರಶ್ನೆ 27. ಕೊನೆಯದಾಗಿ ಅವತೀರ್ಣವಾದ ಕುರ್ಆನಿನ ಸೂಕ್ತಿ ಯಾವುದು?
ಉತ್ತರ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮ್ಮನ್ನು ಅಲ್ಲಾಹನ ಬಳಿಗೆ ಮರಳಿಸಲಾಗುವ ಒಂದು ದಿನವನ್ನು ಭಯಪಡಿರಿ. ನಂತರ ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. [ಅಲ್-ಬಕರ:281].
ಪ್ರಶ್ನೆ 28: ಪ್ರವಾದಿ ﷺ ಯಾವಾಗ ನಿಧನರಾದರು? ಆಗ ಅವರ ವಯಸ್ಸು ಎಷ್ಟಾಗಿತ್ತು?
ಉತ್ತರ: ಅವರು ಹಿಜ್ರ 11ನೇ ವರ್ಷ ರಬೀಉಲ್-ಅವ್ವಲ್ ತಿಂಗಳಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.
ಪ್ರಶ್ನೆ 29: ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಪತ್ನಿಯರನ್ನು ಹೆಸರಿಸಿ?
ಉತ್ತರ-1- ಖದೀಜಾ ಬಿಂತು ಖುವೈಲಿದ್ رَضِيَ اللَّهُ عَنْهَا
2- ಸೌದಾ ಬಿಂತು ಝಮ್ಅ رَضِيَ اللَّهُ عَنْهَا
3- ಆಯಿಶ ಬಿಂತು ಅಬೂಬಕರ್ رَضِيَ اللَّهُ عَنْهَا
4- ಹಫ್ಸಾ ಬಿಂತು ಉಮರ್ رَضِيَ اللَّهُ عَنْهَا
5- ಝೈನಬ್ ಬಿಂತು ಖುಝೈಮಾ رَضِيَ اللَّهُ عَنْهَا
6- ಉಮ್ಮು ಸಲಮಾ ಹಿಂದ್ ಬಿಂತು ಅಬೂ ಉಮಯ್ಯ رَضِيَ اللَّهُ عَنْهَا
6- ಉಮ್ಮು ಹಬೀಬ ರಮ್ಲಾ ಬಿಂತು ಅಬೂ ಸುಫ್ಯಾನ್ رَضِيَ اللَّهُ عَنْهَا
8- ಜುವೈರಿಯಾ ಬಿಂತು ಹಾರಿಸ್ رَضِيَ اللَّهُ عَنْهَا
9- ಮೈಮೂನಾ ಬಿಂತು ಹಾರಿಸ್ رَضِيَ اللَّهُ عَنْهَا
10- ಸಫಿಯ್ಯಾ ಬಿಂತು ಹುಯಯ್ رَضِيَ اللَّهُ عَنْهَا
11. ಝೈನಬ್ ಬಿಂತು ಜಹಶ್ رَضِيَ اللَّهُ عَنْهَا.
ಪ್ರಶ್ನೆ 30. ಪ್ರವಾದಿ ﷺ ರಿಗೆ ಎಷ್ಟು ಮಕ್ಕಳು?
ಉತ್ತರ: ಮೂರು ಗಂಡುಮಕ್ಕಳು:
ಅಲ್-ಖಾಸಿಮ್, ಇದು ಪ್ರವಾದಿಯ ಕುನಿಯ್ಯತ್ ಆಗಿತ್ತು.
ಅಬ್ದುಲ್ಲಾ.
ಇಬ್ರಾಹಿಂ.
ಹೆಣ್ಣು ಮಕ್ಕಳು:
ಫಾತಿಮಾ.
ರುಕಯ್ಯ.
ಉಮ್ಮೆ ಕುಲ್ಸೂಮ್.
ಝೈನಬ್.
ಇಬ್ರಾಹೀಮರು ಮಾರಿಯ ಅಲ್-ಕಿಬ್ತಿಯ್ಯರಿಂದ, ಉಳಿದ ಎಲ್ಲಾ ಮಕ್ಕಳು ಖಾದಿಜಾ رَضِيَ اللَّهُ عَنْهَا ರಿಂದ ಹುಟ್ಟಿದ್ದು. ಫಾತಿಮಾರ ಹೊರತು ಉಳಿದವರೆಲ್ಲರೂ ಪ್ರವಾದಿಯ ಜೀವಂತಕಾಲದಲ್ಲೇ ಮರಣಹೊಂದಿದರು. ಫಾತಿಮಾ ಪ್ರವಾದಿಯವರು ನಿಧನರಾಗಿ ಆರು ತಿಂಗಳ ಬಳಿಕ ನಿಧನರಾದರು.
ಪ್ರಶ್ನೆ 31. ಪ್ರವಾದಿﷺ ರ ಕೆಲವು ಜನ್ಮಜಾತ ಗುಣಲಕ್ಷಣಗಳನ್ನು ಉಲ್ಲೇಖಿಸಿ?
ಉತ್ತರ: ಪ್ರವಾದಿ ﷺ ರು ಅತೀ ಗಿಡ್ಡ ಅಥವಾ ಅತೀ ಎತ್ತರವೂ ಆಗಿರಲಿಲ್ಲ. ಬದಲಾಗಿ ಅವರು ಪುರುಷರ ಪೈಕಿ ಮಧ್ಯಮದವರಾಗಿದ್ದರು. ಅವರು ಕೆಂಪು ಮಿಶ್ರಿತ ಬಿಳಿ ಬಣ್ಣದವರಾಗಿದ್ದರು. ದಪ್ಪನೆಯ ಗಡ್ಡ, ಅಗಲವಾದ ಕಣ್ಣುಗಳು, ದೊಡ್ಡ ಬಾಯಿ, ಕಪ್ಪು ಕೂದಲು, ಬೃಹದಾಕಾರದ ಭುಜಗಳು, ಉತ್ತಮ ಪರಿಮಳ ಹೊಂದಿದವರಾಗಿದ್ದರು.
ಪ್ರಶ್ನೆ 32. ಪ್ರವಾದಿ ﷺ ತನ್ನ ಸಮುದಾಯವನ್ನು ಯಾವುದರ ಮೇಲೆ ಬಿಟ್ಟಗಲಿದರು?
ಉತ್ತರ: ಅವರು ತಮ್ಮ ಸಮುದಾಯವನ್ನು ಬೆಳ್ಳಗಿನ ಪ್ರಕಾಶದ ಮೇಲೆ ಬಿಟ್ಟಗಲಿದರು. ಅದರ ರಾತ್ರಿ ಹಗಲಿನಂತಿದೆ. ನಾಶ ಹೊಂದಿದವನಲ್ಲದೆ ಇನ್ನಾರೂ ಅದರಿಂದ ವಿಚಲಿತರಾಗಲಾರರು. ಅವರು ತಮ್ಮ ಸಮುದಾಯವನ್ನು ಎಲ್ಲಾ ಒಳಿತುಗಳೆಡೆಗೆ ಮಾರ್ಗದರ್ಶಿಸಿದರು ಮತ್ತು ಎಲ್ಲಾ ಕೆಡುಕುಗಳಿಂದ ಎಚ್ಚರಿಕೆ ನೀಡಿದರು.
*******
ತಫ್ಸೀರ್ (ಕುರ್ಆನ್ ವ್ಯಾಖ್ಯಾನ) ವಿಭಾಗ
ಕುರ್ಆನ್ ವ್ಯಾಖ್ಯಾನ ಶಾಸ್ತ್ರ:
ತಫ್ಸೀರ್ (ವಿವರಣೆ): ಅದು ವಿಶ್ವಾಸ, ಆರಾಧನೆಗಳು, ವ್ಯವಹಾರಗಳು, ನೈತಿಕತೆ, ಹಲಾಲ್ ಮತ್ತು ಹರಾಮ್, ಆದೇಶ ಮತ್ತು ನಿಷೇಧ ಹಾಗೂ ಇನ್ನಿತರ ವಿಷಯಗಳಲ್ಲಿ ಮಾರ್ಗದರ್ಶನವನ್ನು ಒಳಗೊಂಡಿರುವ ಪವಿತ್ರ ಕುರ್ಆನ್ನ ಸೂಕ್ತಿಗಳ ಅರ್ಥಗಳನ್ನು ತಿಳಿಯುವ ಜ್ಞಾನವಾಗಿದೆ.
ಸೂಚನೆ: ಈ ವಿಭಾಗವು ಆಯತ್ಗಳನ್ನು ಕಂಠಪಾಠ ಮಾಡಲು ಮತ್ತು ಅವುಗಳ ಅರ್ಥಗಳನ್ನು ಅರ್ಥಮಾಡಿಕೊಳ್ಳಲು ಮೀಸಲಾಗಿದೆ.
ಪ್ರಶ್ನೆ 1. ಸೂರಃ ಅಲ್-ಫಾತಿಹಾವನ್ನು ಓದಿರಿ ಮತ್ತು ವಿವರಿಸಿರಿ?
ಉತ್ತರ: ಸೂರ ಅಲ್-ಫಾತಿಹಾ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ 2. ಪರಮ ದಯಾಮಯ, ಕರುಣಾನಿಧಿ, 3 ಪ್ರತಿಫಲದ ದಿನದ ಒಡೆಯ 4 ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು. ನಮಗೆ ನೇರ ಮಾರ್ಗವನ್ನು ತೋರಿಸು 6 ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ. [ಅಲ್ ಫಾತಿಹಾ: 1- 7].
ತಫ್ಸೀರ್ (ವಿವರಣೆ).
ಇದನ್ನು ಸೂರ ಅಲ್-ಫಾತಿಹ ಎಂದು ಕರೆದಿರುವುದು ಏಕೆಂದರೆ ಇದರೊಂದಿಗೆ ಅಲ್ಲಾಹನ ಗ್ರಂಥ ಆರಂಭವಾಗುತ್ತದೆ.
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಅಲ್ಲಾಹನ ಹೆಸರಿನಲ್ಲಿ ನಾನು ಕುರ್ಆನ್ ಓದಲು ಪ್ರಾರಂಭಿಸುತ್ತೇನೆ. ಅವನ ಹೆಸರನ್ನು ಪ್ರಸ್ತಾಪಿಸುವ ಮೂಲಕ ಸಹಾಯಯಾಚಿಸುತ್ತಾ ಆತನ ಸಮೃದ್ಧಿ ಬಯಸುತ್ತೇನೆ.
- (ಅಲ್ಲಾಹು) ಅಂದರೆ: ಸತ್ಯ ಆರಾಧ್ಯ. ಅವನಲ್ಲದೆ ಬೇರೆ ಯಾರನ್ನೂ ಈ ಹೆಸರಿನಿಂದ ಕರೆಯಲಾಗುವುದಿಲ್ಲ.
- ರಹ್ಮಾನ್ ಎಲ್ಲಾ ವಸ್ತುಗಳನ್ನು ಆವರಿಸಿರುವ ವಿಶಾಲವಾದ ಕರುಣೆಯನ್ನು ಹೊಂದಿರುವವನು.
-ರಹೀಮ್ ವಿಶ್ವಾಸಿಗಳೊಂದಿಗೆ ವಿಶೇಷ ಕರುಣೆಯುಳ್ಳವನು.
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. ಅಂದರೆ: ಎಲ್ಲಾ ರೀತಿಯ ಪ್ರಶಂಸೆಗಳು ಮತ್ತು ಸಂಪೂರ್ಣತೆ ಅಲ್ಲಾಹನಿಗೆ ಮಾತ್ರ ಅರ್ಹವಾಗಿವೆ.
3. ಕರುಣಾನಿಧಿಯೂ ದಯಾಮಯನೂ ಆದ 3 ಅವನ ದಯೆ ಎಲ್ಲವನ್ನೂ ಆವರಿಸಿದೆ ಮತ್ತು ಅವನ ಕರುಣೆ ವಿಶ್ವಾಸಿಗಳಿಗೆ ತಲುಪುವುದು.
ಪ್ರತಿಫಲದ ದಿನದ ಒಡೆಯ. ಅದು ಪುನರುತ್ಥಾನದ ದಿನ.
ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ; ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ. ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು.
ನಮಗೆ ನೇರ ಮಾರ್ಗವನ್ನು ತೋರಿಸು. ಅಂದರೆ ಅದು ಇಸ್ಲಾಂ ಮತ್ತು ಸುನ್ನತ್ತಿನೆಡೆಗೆ ಮಾರ್ಗದರ್ಶನ.
ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ. ಅಂದರೆ ಅಂಬಿಯಾಗಳ ಮತ್ತು ಸಲಫುಸ್ಸಾಲಿಹೀನರ ಮಾರ್ಗದಲ್ಲಿ ಯಹೋದರು ಮತ್ತು ಕ್ರೈಸ್ತರ ಮಾರ್ಗದಲ್ಲಲ್ಲ.
- ಇದನ್ನು ಓದಿದ ನಂತರ ಆಮೀನ್ ಹೇಳುವುದು ಸುನ್ನತ್ತಾಗಿದೆ: (آمين) ಅರ್ಥ: ನಮಗೆ ಉತ್ತರ ಕೊಡು.
ಪ್ರಶ್ನೆ 2. ಸೂರ ಅಝ್ಝಲ್ಝಲ ಓದಿ ಮತ್ತು ಅದನ್ನು ವಿವರಿಸಿ?
ಉತ್ತರ: ಸೂರ ಅಝ್ಝಲ್ಝಲ ಮತ್ತು ಅದರ ವ್ಯಾಖ್ಯಾನ:
ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ, ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ, 2 “ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು 3 ಆ ದಿನದಂದು ಅದು (ಭೂಮಿಯು) ತನ್ನ ವೃತ್ತಾಂತಗಳನ್ನು ತಿಳಿಸಿಕೊಡುವುದು. ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ 5 ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ. ಆಗ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿರುವನೋ ಅವನು ಅದನ್ನು ಕಾಣುವನು. ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು. [ಅಝ್ಝಲ್ಝಲ:1-8]
ತಫ್ಸೀರ್ (ವಿವರಣೆ).
1. ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ, ಪುನರುತ್ಥಾನ ದಿನದಂದು ಸಂಭವಿಸುವ ತೀವ್ರ ಕಂಪನದಿಂದ ಭೂಮಿಯನ್ನು ಕಂಪಿಸಲಾಗುತ್ತದೆ.
2. ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ2: ಭೂಮಿ ಅದರೊಳಗಿರುವ ಶವಗಳನ್ನು ಹಾಗೂ ಇತರ ವಸ್ತುಗಳನ್ನು ಹೊರ ಹಾಕುತ್ತದೆ.
“ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು. ಮನುಷ್ಯನು ಆಶ್ಚರ್ಯಚಕಿತನಾಗಿ ಹೇಳುವನು: ಭೂಮಿಗೆ ಏನಾಗಿದೆ ಇದೇಕೆ ಚಲಿಸುತ್ತಾ ಕಂಪಿಸುತ್ತಿದೆ?
4. (ಅಂದು ಅದು (ಭೂಮಿ) ತನ್ನ ಎಲ್ಲಾ ಸಮಾಚಾರಗಳನ್ನು ತಿಳಿಸುವುದು4): ಆ ಮಹಾನ್ ದಿನದಂದು ಭೂಮಿಯು ಅದರ ಮೇಲೆ ಮಾಡಿದ ಒಳಿತು ಮತ್ತು ಕೆಡುಕಿನ ಬಗ್ಗೆ ಹೇಳುವುದು.
ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ. ಏಕೆಂದರೆ ಭೂಮಿ ಅದನ್ನು ತಿಳಿಯುವಂತೆ ಅಲ್ಲಾಹು ಮಾಡಿದ್ದಾನೆ ಮತ್ತು ಅದನ್ನು ತಿಳಿಸಬೇಕೆಂದು ಆಜ್ಞಾಪಿಸಿದ್ದಾನೆ.
6. ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ. 6 ಆ ಮಹಾನ್ ದಿನದಂದು, ಭೂಮಿಯು ನಡುಗುತ್ತದೆ, ಜನರು ತಾವು ಇಹಲೋಕದಲ್ಲಿ ಮಾಡಿದ ಕರ್ಮಗಳನ್ನು ವೀಕ್ಷಿಸಲು ತಂಡಗಳಾಗಿ ವಿಚಾರಣೆಯ ಸ್ಥಾನದಿಂದ ಹೊರಬರುತ್ತಾರೆ.
ಆದ್ದರಿಂದ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿದ್ದಾನೋ ಅವನು ಅದನ್ನು ನೋಡುವನು. ಯಾರು ಸಣ್ಣ ಇರುವೆಯ ತೂಕದಷ್ಟು ಒಳಿತು ಮತ್ತು ಸದಾಚಾರವನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು.
8. ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿದ್ದಾನೋ ಅವನು ಅದನ್ನು ನೋಡುವನು.8 ಯಾರು ಕೆಡುಕನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು.
ಪ್ರಶ್ನೆ 3. ಸೂರ ಅಲ್-ಆದಿಯಾತ್ ಓದಿ ಮತ್ತು ವಿವರಿಸಿ?
ಉತ್ತರ: ಸೂರ ಅಲ್-ಆದಿಯಾತ್ ಮತ್ತು ಅದರ ವ್ಯಾಖ್ಯಾನ:
ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ! ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ! 2 ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ! 3 ಆಗ ಅವು ಧೂಳೆಬ್ಬಿಸುತ್ತವೆ ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹದೊಳಕ್ಕೆ ನುಗ್ಗಿ ಬಿಡುತ್ತವೆ ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ 6 ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ 7 ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ 8 ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ? ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ) 10 ಖಂಡಿತವಾಗಿಯೂ ಅಂದು ಅವರ ಪ್ರಭು ಅವರನ್ನು ಪೂರ್ಣವಾಗಿ ತಿಳಿದವನಾಗಿರುವನು. [ಅಲ್-ಆದಿಯಾತ್: 1-11].
ತಫ್ಸೀರ್ (ವಿವರಣೆ).
ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ! ಅಲ್ಲಾಹು ಇಲ್ಲಿ ಕುದುರೆಗಳ ಮೇಲೆ ಆಣೆ ಹಾಕಿದ್ದಾನೆ. ಅವುಗಳ ಓಟದ ತೀವ್ರತೆಯಿಂದ ಅದರ ಶಬ್ದವನ್ನು ಕೇಳಬಹುದು.
ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ! ಅವುಗಳ ಓಟದ ತೀವ್ರತೆಯಿಂದ ಗೊರಸುಗಳು ಕಲ್ಲುಗಳಿಗೆ ತಾಗುವಾಗ, ತಮ್ಮ ಕಾಲುಗಳ ಗೊರಸುಗಳಿಂದ ಬೆಂಕಿ ಕಿಡಿಗಳನ್ನು ಹಾರಿಸುವ ಕುದುರೆಗಳ ಮೇಲೆ ಆಣೆ ಮಾಡಲಾಗಿದೆ.
ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ! ಪ್ರಭಾತದಲ್ಲಿ ವೈರಿಗಳ ಮೇಲೆ ಆಕ್ರಮಣ ಮಾಡುವ ಕುದುರೆಗಳ ಮೇಲೆ ಆಣೆ ಮಾಡಲಾಗಿದೆ.
٤. ಆಗ ಅವು ಧೂಳನ್ನು ಹರಡುತ್ತವೆ.4 ಅವು ಓಡುವಾಗ ಧೂಳನ್ನು ಎಬ್ಬಿಸುತ್ತವೆ.
ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ. ಅವು ತಮ್ಮ ಮೇಲೆ ಸವಾರಿ ಮಾಡುವ ಯೋಧರೊಂದಿಗೆ ಶತ್ರುಗಳ ನಡುವಿಗೆ ಧುಮುಕುತ್ತವೆ.
6. ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ. ಅಲ್ಲಾಹು ಮನುಷ್ಯನಿಗೆ ಕೊಡಬೇಕೆಂದು ಆದೇಶಿಸುವ ಒಳಿತನ್ನು ಅವನು ಕೊಡದೆ ತಡೆಹಿಡಿಯುತ್ತಾನೆ.
ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ. ಅವನು ಸ್ವತಃ ಆ ಒಳಿತನ್ನು ತಡೆಹಿಡಿಯುವುದಕ್ಕೆ ಸಾಕ್ಷಿಯಾಗಿದ್ದಾನೆ. ಅದು ಅತ್ಯಂತ ಸ್ಪಷ್ಟವಾಗಿರುವುದರಿಂದ ಅದನ್ನು ನಿರಾಕರಿಸಲು ಅವನಿಗೆ ಸಾಧ್ಯವಿಲ್ಲ.
ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ. ಅವನಿಗೆ ಧನದ ಮೇಲೆ ಅತಿಯಾದ ಮೋಹವಿರುವುದರಿಂದ ಅವನು ಜಿಪುಣನಾಗಿದ್ದಾನೆ.
ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ? ಇಹಲೋಕಕ್ಕೆ ಮರುಳಾದ ಈ ಮನುಷ್ಯನಿಗೆ, ಸಮಾಧಿಗಳಲ್ಲಿರುವವರನ್ನು ಅಲ್ಲಾಹು ಜೀವಂತ ಎಬ್ಬಿಸುವಾಗ ಮತ್ತು ಅವರನ್ನು ವಿಚಾರಣೆ ಮಾಡಿ ಅವರಿಗೆ ಪ್ರತಿಫಲ ನೀಡಲು ಅವರನ್ನು ಭೂಮಿಯಿಂದ ಹೊರತರುವಾಗ ವಿಷಯವು ಅವನು ಭಾವಿಸಿದಂತಿಲ್ಲ ಎಂದು ಮನುಷ್ಯನಿಗೆ ತಿಳಿಯುವುದಿಲ್ಲವೇ?
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ). ಹೃದಯಗಳಲ್ಲಿರುವ ಉದ್ದೇಶಗಳು, ವಿಶ್ವಾಸಗಳು ಮುಂತಾದವುಗಳನ್ನು ಬಹಿರಂಗಪಡಿಸುವಾಗ.
ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. ಆ ದಿನ ಅಲ್ಲಾಹು ಅವರ ಬಗ್ಗೆ ಸೂಕ್ಷ್ಮ ಜ್ಞಾನವನ್ನು ಹೊಂದಿರುವನು. ಅವನ ದಾಸರ ಯಾವುದೇ ವಿಷಯವೂ ಅವನಿಗೆ ತಿಳಿಯದೇ ಇರುವುದಿಲ್ಲ. ಅದರ ಆಧಾರದಲ್ಲೇ ಅವನು ಅವರಿಗೆ ಪ್ರತಿಫಲ ನೀಡುತ್ತಾನೆ.
ಪ್ರಶ್ನೆ 4. ಸೂರ ಅಲ್-ಕಾರಿಅ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಕಾರಿಅ ಮತ್ತು ಅದರ ವ್ಯಾಖ್ಯಾನ:
ಆ ಭಯಾನಕ ಸದ್ದು. ಆ ಭಯಾನಕ ಸದ್ದು ಏನು 2 ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು? 3 ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ 4 ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ 5. ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ 6 ಅವನು ಮನೋಹರವಾದ ಸುಖಭೋಗದಲ್ಲಿರುವನು. ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ 8 ಅವನ ನಿವಾಸವು ಆಳವಾದ ಹೊಂಡವಾಗಿರುವುದು. ಅದು (ಹಾವಿಯ) ಏನೆಂದು ನಿಮಗೇನು ಗೊತ್ತು? 10 ಧಗಧಗಿಸುವ ಅಗ್ನಿಯದು. [ಅಲ್-ಕಾರಿಅ:1-11].
ತಫ್ಸೀರ್ (ವಿವರಣೆ).
೧. ಆ ಭಯಾನಕ ಸದ್ದು. ಜನರ ಹೃದಯಕ್ಕೆ ಬಡಿಯುವ ಪ್ರಳಯ. ಇದರಿಂದಾಗಿ ಜನರ ಹೃದಯಗಳಲ್ಲಿ ಭಯಾನಕತೆ ಉಂಟಾಗುತ್ತದೆ.
ಆ ಭಯಾನಕ ಸದ್ದು ಎಂದರೇನು? ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಪ್ರಳಯ ಎಂದರೇನು?
ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು? ಓ ಪ್ರವಾದಿಯವರೇ! ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಈ ಪ್ರಳಯ ಎಂದರೇನೆಂದು ನಿಮಗೇನು ಗೊತ್ತು? ಖಂಡಿತವಾಗಿಯೂ ಅದು ಪುನರುತ್ಥಾನದ ದಿನ.
ಮನುಷ್ಯರು ಚದುರಿದ ಹಾಸೆಗಳಂತಾಗುವ ದಿನ. ಅದು ಜನರ ಹೃದಯವನ್ನು ಬಡಿಯುವ ದಿನದಂದು ಅವರು ಚದುರಿದ ಪತಂಗಗಳಂತೆ ಅಲ್ಲಿ ಇಲ್ಲಿ ಬಿದ್ದಿರುತ್ತಾರೆ.
ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ. ಮತ್ತು ಪರ್ವತಗಳು ತಮ್ಮ ಚಲನೆಯಲ್ಲಿ ಹಗುರವಾಗಿ, ಹಿಂಜಿದ ಉಣ್ಣೆಯಂತೆ ಆಗಿಬಿಡುತ್ತವೆ.
ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ, ಯಾರ ಸತ್ಕರ್ಮಗಳು ಅವನ ದುಷ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
ಆದ್ದರಿಂದ ಅವನು ಸಂತೃಪ್ತ ಜೀವನದಲ್ಲಿರುವನು. ಅವನು ಸ್ವರ್ಗದಲ್ಲಿ ಆಹ್ಲಾದಕರ ಜೀವನವನ್ನು ಆನಂದಿಸುವನು.
ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ, ಯಾರ ದುಷ್ಕರ್ಮಗಳು ಅವನ ಸತ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
ಅವನ ವಾಸಸ್ಥಳವು ಹಾವಿಯ ಆಗಿರುವುದು. ಪುನರುತ್ಥಾನದ ದಿನ ಅವನ ವಾಸಸ್ಥಳ ಮತ್ತು ವಸತಿ ನರಕಾಗ್ನಿಯಾಗಿರುವುದು.
"ಅದು (ಹಾವಿಯ) ಏನೆಂದು ನಿಮಗೇನು ಗೊತ್ತು? ಓ ಪ್ರವಾದಿಯವರೇ! ಅದು ಏನೆಂದು ನಿಮಗೇನು ಗೊತ್ತು?
"ಅದು ತೀವ್ರ ಶಾಖವಿರುವ ಬೆಂಕಿಯಾಗಿದೆ. 11 ಇದು ಧಗಧಗನೆ ಉರಿಯುವ ಬೆಂಕಿಯಾಗಿದೆ.
ಪ್ರಶ್ನೆ 5. ಸೂರ ಅತ್ತಕಾಸುರ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರಃ ಅತ್ತಕಾಸುರ್ ಮತ್ತು ಅದರ ವ್ಯಾಖ್ಯಾನ
ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ. ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ 2. ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ. ಇನ್ನೂ (ಕೇಳಿರಿ) ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ. ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ 5 ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ 6 ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ 7 ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು. [ಸೂರ ಅತ್ತಕಾಸುರ್:1- 8].
ತಫ್ಸೀರ್ (ವಿವರಣೆ).
"ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ. ಓ ಜನರೇ, ನೀವು ನಿಮ್ಮ ಸಂಪತ್ತು ಮತ್ತು ಮಕ್ಕಳ ಬಗ್ಗೆ ತೋರುವ ಅಹಂಭಾವವು ನಿಮ್ಮನ್ನು ಅಲ್ಲಾಹನ ಅನುಸರಣೆ ಮಾಡದಂತೆ ಮಗ್ನಗೊಳಿಸಿದೆ.
ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ. ನೀವು ಸತ್ತು ನಿಮ್ಮ ಸಮಾಧಿಗಳನ್ನು ಪ್ರವೇಶಿಸುವವರೆಗೆ.
ಇಲ್ಲವೇ ಇಲ್ಲ, ಸದ್ಯವೇ ನೀವು ತಿಳಿಯುವಿರಿ. ಅಲ್ಲಾಹನ ಅನುಸರಣೆಯನ್ನು ಬಿಟ್ಟು ಅಹಂಭಾವದಲ್ಲಿ ಮುಳುಗುವುದು ನಿಮಗೆ ಭೂಷಣವಲ್ಲ. ಈ ರೀತಿ ಅಹಂಭಾವದಲ್ಲಿ ಮುಳುಗಿದ್ದರ ಪರಿಣಾಮವನ್ನು ನೀವು ಸದ್ಯದಲ್ಲೇ ತಿಳಿದುಕೊಳ್ಳಲಿರುವಿರಿ.
ಇಲ್ಲವೇ ಇಲ್ಲ, ನಂತರ ನಿಮಗೆ (ಎಲ್ಲವೂ) ತಿಳಿಯಲಿದೆ. ನಂತರ, ನೀವು ಸದ್ಯದಲ್ಲೇ ಅದರ ಪರಿಣಾಮವನ್ನು ತಿಳಿದುಕೊಳ್ಳಲಿರುವಿರಿ.
ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ. ನಿಮ್ಮನ್ನು ಅಲ್ಲಾಹನ ಬಳಿಗೆ ಪುನರುತ್ಥಾನಗೊಳಿಸಿ ತರಲಾಗುತ್ತದೆ ಮತ್ತು ಅವನು ನಿಮ್ಮ ಕರ್ಮಗಳಿಗೆ ಪ್ರತಿಫಲವನ್ನು ನೀಡುತ್ತಾನೆ ಎಂದು ನೀವು ನಿಜವಾಗಿ ಮತ್ತು ಖಚಿತವಾಗಿ ತಿಳಿದುಕೊಂಡಿದ್ದರೆ ನೀವು ನಿಮ್ಮ ಆಸ್ತಿ ಮತ್ತು ಮಕ್ಕಳ ವಿಷಯದಲ್ಲಿ ಅಹಂಭಾವದಲ್ಲಿ ಮುಳುಗುತ್ತಿರಲಿಲ್ಲ.
6. ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ. ಅಲ್ಲಾಹನಾಣೆ! ಪುನರುತ್ಥಾನದ ದಿನ ನೀವು ಖಂಡಿತವಾಗಿಯೂ ನರಕಾಗ್ನಿಯನ್ನು ನೋಡುವಿರಿ.
7. ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ7: ನಂತರ ನೀವು ಅದನ್ನು ಸಂಪೂರ್ಣ ಖಚಿತವಾಗಿ ಯಾವುದೇ ಸಂಶಯವಿಲ್ಲದೆ ಕಣ್ಣಾರೆ ನೋಡುವಿರಿ.
ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು. ನಂತರ ಆ ದಿನ ಅಲ್ಲಾಹನು ನಿಮ್ಮೊಡನೆ, ಅವನು ನಿಮಗೆ ಅನುಗ್ರಹಿಸಿದ ಆರೋಗ್ಯ, ಐಶ್ವರ್ಯ ಮುಂತಾದವುಗಳ ಬಗ್ಗೆ ವಿಚಾರಿಸಲಿದ್ದಾನೆ.
ಪ್ರಶ್ನೆ 6. ಸೂರ ಅಲ್-ಅಸ್ರ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಅಸ್ರ್ ಮತ್ತು ಅದರ ವ್ಯಾಖ್ಯಾನ:
ಕಾಲದ ಮೇಲಾಣೆ! ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ 2. ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ. [ಅಲ್-ಅಸ್ರ್:1-3].
ತಫ್ಸೀರ್ (ವಿವರಣೆ).
1. ಕಾಲದ ಮೇಲಾಣೆ! ಸರ್ವಶಕ್ತನಾದ ಅಲ್ಲಾಹು ಸಮಯದ ಮೇಲೆ ಆಣೆ ಮಾಡಿ ಹೇಳುತ್ತಾನೆ.
2. ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ.2 ಅಂದರೆ: ಸರ್ವ ಮಾನವಕುಲವು ಸಂಪೂರ್ಣ ನಷ್ಟ ಮತ್ತು ನಾಶದಲ್ಲಿದೆ.
ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ. ವಿಶ್ವಾಸವಿಟ್ಟು ಸತ್ಕರ್ಮವೆಸಗಿದವರು, ಹಾಗೂ ಅದರೊಂದಿಗೆ ಸತ್ಯದೆಡೆಗೆ ಕರೆ ನೀಡಿ ಅದರ ಮೇಲೆ ಸಹನೆ ವಹಿಸಿದವರ ಹೊರತು, ಇವರೇ ಆ ನಷ್ಟದಿಂದ ಉಳಿಯುವವರಾಗಿದ್ದಾರೆ.
ಪ್ರಶ್ನೆ 7. ಸೂರ ಅಲ್-ಹುಮಝ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಹುಮಝ ಮತ್ತು ಅದರ ವ್ಯಾಖ್ಯಾನ:
(ಎದುರೆದುರೇ) ಜನರನ್ನು ಮೂದಲಿಸುವ ಮತ್ತು (ಬೆನ್ನ ಹಿಂದೆ) ದೂಷಿಸುವ ಅಭ್ಯಾಸವಿರುವ ಪ್ರತಿಯೊಬ್ಬನಿಗೂ ವಿನಾಶವಿದೆ. ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು 2 ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು 4 ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು? 5 ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ 6 ಅದು ಹೃದಯಗಳ ಮೇಲೆ ಏರಿ ಬರುತ್ತದೆ 7 ಅದನ್ನು ಅವರ ಮೇಲೆ ಆವರಿಸಿ ಮುಚ್ಚಿ ಬಿಡಲಾಗುವುದು. ಅವರು ಎತ್ತರವಾದ ಸ್ತಂಭಗಳಲ್ಲಿ (ಸಿಲುಕಿಕೊಂಡಿರುವ ಸ್ಥಿತಿಯಲ್ಲಿ). [ಅಲ್-ಹುಮಝ:1-9].
ತಫ್ಸೀರ್ (ವಿವರಣೆ).
1. ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ. ಜನರನ್ನು ಪದೇ ಪದೇ ದೂಷಿಸುವ ಮತ್ತು ನಿಂದಿಸುವವರಿಗೆ ದುರ್ಗತಿ ಮತ್ತು ಕಠೋರ ಶಿಕ್ಷೆಯಿದೆ.
ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು. ಹಣವನ್ನು ಕೂಡಿಡುವುದು ಮತ್ತು ಎಣಿಸುವುದರ ಹೊರತು ಬೇರೆ ಯಾವುದರಲ್ಲೂ ಆಸಕ್ತಿಯಿಲ್ಲದವನು.
ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ. ತಾನು ಕೂಡಿಟ್ಟ ಹಣವು ತನ್ನನ್ನು ಸಾವಿನಿಂದ ರಕ್ಷಿಸುತ್ತದೆ ಮತ್ತು ತಾನು ಭೂಲೋಕದಲ್ಲಿ ಶಾಶ್ವತವಾಗಿ ಬದುಕುತ್ತೇನೆ ಎಂದು ಅವನು ಭಾವಿಸುತ್ತಾನೆ.
ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು. ನಿಜಸ್ಥಿತಿಯು ಈ ಅವಿವೇಕಿ ಚಿಂತಿಸಿದಂತಲ್ಲ. ಅವನನ್ನು ಖಂಡಿತವಾಗಿಯೂ ನರಕಾಗ್ನಿಗೆ ಎಸೆಯಲಾಗುವುದು. ಅದರ ಕಠೋರತೆಯಿಂದಾಗಿ ಅದರಲ್ಲಿ ಎಸೆಯಲಾಗುವ ಎಲ್ಲವನ್ನೂ ಅದು ಪುಡಿಗುಟ್ಟಿ ಬಿಡುವುದು.
ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು? ಓ ಪ್ರವಾದಿಯವರೇ! ಎಸೆಯಲಾಗುವ ಎಲ್ಲವನ್ನೂ ಪುಡಿಗಟ್ಟುವ ಈ ಬೆಂಕಿ ಏನೆಂದು ನಿಮಗೇನು ಗೊತ್ತು?
ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ 6 ಅದು ಧಗಧಗನೆ ಉರಿಯುವ ಅಲ್ಲಾಹನ ಅಗ್ನಿಯಾಗಿದೆ.
ಅದು ಹೃದಯಗಳ ಮೇಲೆ ಏರಿ ಬರುತ್ತದೆ. ಅದು ಜನರ ದೇಹಗಳನ್ನು ಬೇಧಿಸಿ ಅವರ ಹೃದಯಗಳನ್ನು ತಲುಪುತ್ತದೆ.
ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ. ಅದರ ದ್ವಾರಗಳು ಶಿಕ್ಷೆಗೊಳಗಾದವರ ಮೇಲೆ ಮುಚ್ಚಿಕೊಂಡಿರುವವು.
ದೊಡ್ಡ ದೊಡ್ಡ ಸ್ತಂಭಗಳಲ್ಲಿ 9 ಅವರು ಅಲ್ಲಿಂದ ಹೊರಬರದಿರಲೆಂದು ಅವರಿಗೆ ಉದ್ದಕ್ಕೆ ಚಾಚಲಾಗಿರುವ ಸ್ತಂಭಗಳಿಂದ ಕಟ್ಟಲಾಗುವುದು.
ಪ್ರಶ್ನೆ 8. ಸೂರ ಅಲ್-ಫೀಲ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಫೀಲ್ ಮತ್ತು ಅದರ ವ್ಯಾಖ್ಯಾನ:
ನಿಮ್ಮ ಪರಿಪಾಲಕನು (ಅಲ್ಲಾಹು) ಆನೆಯ ಜನರೊಡನೆ ಹೇಗೆ ವರ್ತಿಸಿದನೆಂದು ನೀವು ನೋಡಿಲ್ಲವೇ? 2 ಅವನು ಅವರ ಯೋಜನೆಯನ್ನು ನಿರರ್ಥಕಗೊಳಿಸಿ ಬಿಡಲಿಲ್ಲವೇ? 3 ಮತ್ತು ಅವನು ಅವರ ಮೇಲೆ ಪಕ್ಷಿಗಳ ಗುಂಪುಗಳನ್ನೇ ಕಳುಹಿಸಿಬಿಟ್ಟನು. 4 ಅವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು. 5 ತರುವಾಯ ಅವನು ಅವರನ್ನು (ಪ್ರಾಣಿಗಳು) ತಿಂದು ಹಾಕಿದ ಹೊಟ್ಟಿನಂತೆ ಮಾಡಿಬಿಟ್ಟನು. [ಅಲ್-ಫೀಲ್:1-5].
ತಫ್ಸೀರ್ (ವಿವರಣೆ).
ನಿಮ್ಮ ಪರಿಪಾಲಕನು (ಅಲ್ಲಾಹು) ಆನೆಯ ಜನರೊಡನೆ ಹೇಗೆ ವರ್ತಿಸಿದನೆಂದು ನೀವು ನೋಡಿಲ್ಲವೇ? ಓ ಪ್ರವಾದಿಯವರೇ! ಅಬ್ರಹ ಮತ್ತು ಅವನ ಸೈನಿಕರು —ಅಂದರೆ ಆನೆ ಸೇನೆಯ ಜನರು— ಕಅಬಾವನ್ನು ಕೆಡವಲು ಬಂದಾಗ ನಿಮ್ಮ ಪ್ರಭು ಏನು ಮಾಡಿದನೆಂದು ನಿಮಗೆ ತಿಳಿದಿಲ್ಲವೇ?
ಅವನು ಅವರ ತಂತ್ರವನ್ನು ವಿಫಲಗೊಳಿಸಲಿಲ್ಲವೇ? ಅದನ್ನು ಕೆಡವಲು ಅವರು ಹೂಡಿದ ಕುತಂತ್ರವನ್ನು ಅಲ್ಲಾಹನು ಸಂಪೂರ್ಣ ವಿಫಲಗೊಳಿಸಿದನು. ಆದ್ದರಿಂದ, ಜನರನ್ನು ಕಅಬಾದಿಂದ ದೂರಗೊಳಿಸಬೇಕು ಎಂಬ ಅವರ ಆಸೆ ಕೈಗೂಡಲಿಲ್ಲ ಅವರಿಗೆ ವಿನಾಶದ ಹೊರತಾಗಿ ಬೇರೇನೂ ಸಿಗಲಿಲ್ಲ.
ಅವನು ಅವರ ಮೇಲೆ ಹಕ್ಕಿಗಳನ್ನು ಹಿಂಡು ಹಿಂಡಾಗಿ ಕಳುಹಿಸಿದನು. ಅವನು ಅವರ ವಿರುದ್ಧ ಹಿಂಡು ಹಿಂಡಾಗಿ ಬರುವ ಹಕ್ಕಿಗಳನ್ನು ಕಳುಹಿಸಿದನು.
ಅವು ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಅವರ ಮೇಲೆ ಎಸೆಯುತ್ತಿದ್ದವು. ಅವು ಅವರ ಮೇಲೆ ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು.
ನಂತರ ಅವನು ಅವರನ್ನು (ಜಾನುವಾರುಗಳು) ತಿಂದ ಒಣಹುಲ್ಲಿನಂತೆ ಮಾಡಿದನು. ನಂತರ ಅಲ್ಲಾಹನು ಅವರನ್ನು ಜಾನುವಾರುಗಳು ತಿಂದ ಮತ್ತು ತುಳಿದ ಎಲೆಗಳಂತೆ ಮಾಡಿದನು.
ಪ್ರಶ್ನೆ 9. ಸೂರ ಖುರೈಶ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಖುರೈಶ್ ಮತ್ತು ಅದರ ವ್ಯಾಖ್ಯಾನ:
ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ 1 ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ 2 ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ 3 ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು. [ಕುರೈಷ್:1-4].
ತಫ್ಸೀರ್ (ವಿವರಣೆ).
ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ. ಇಲ್ಲಿ ಹೇಳಿರುವುದು ಅವರಿಗೆ ಪರಿಚಿತವಾದ ಚಳಿಗಾಲ ಮತ್ತು ಬೇಸಿಗೆಯ ಪ್ರಯಾಣಗಳಾಗಿವೆ.
"ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ. ಅವರು ಸುರಕ್ಷಿತವಾಗಿ ಚಳಿಗಾಲದಲ್ಲಿ ಯಮನ್ ಮತ್ತು ಬೇಸಿಗೆಯಲ್ಲಿ ಸಿರಿಯಾಗೆ ಕೈಗೊಳ್ಳುವ ಪ್ರಯಾಣಗಳು.
ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ. ಅವರು ಈ ಪವಿತ್ರ ಭವನದ ಪ್ರಭುವಾದ ಅಲ್ಲಾಹನನ್ನು ಮಾತ್ರ ಆರಾಧಿಸಲಿ. ಅವನೇ ಅವರಿಗೆ ಈ ಪ್ರಯಾಣವನ್ನು ಸುಗಮಗೊಳಿಸಿದವನು; ಅವರು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ.
ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು. ಅವರಿಗೆ ಹಸಿವಾದಾಗ ಅವರಿಗೆ ಆಹಾರ ನೀಡಿದವನು ಮತ್ತು ಅವರಿಗೆ ಭಯವಾದಾಗ ಅವರಿಗೆ ನಿರ್ಭಯತೆ ನೀಡಿದವನು. ಅಲ್ಲಾಹು ಅರಬ್ಬರ ಹೃದಯಗಳಲ್ಲಿ ಹರಮ್ ಮತ್ತು ಅದರ ನಿವಾಸಿಗಳ ಬಗ್ಗೆ ಗೌರವನ್ನಿಟ್ಟದ್ದೇ ಇದಕ್ಕೆ ಕಾರಣವಾಗಿದೆ.
ಪ್ರಶ್ನೆ 10. ಸೂರ ಅಲ್-ಮಾಊನ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಮಾಊನ್ ಮತ್ತು ಅದರ ವ್ಯಾಖ್ಯಾನ:
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ? ಅವನೇ ಅನಾಥನನ್ನು ಹೊರತಳ್ಳುವವನು 2 ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ 3 ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ. ಅವರು ಯಾರೆಂದರೆ ತಮ್ಮ ನಮಾಝ್ಗಳ ಬಗ್ಗೆ ಅಲಕ್ಷ್ಯರಾಗಿರುವವರು 5 ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ 6. ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ 7 [ಸೂರ ಅಲ್-ಮಾಊನ್: 1-7].
ತಫ್ಸೀರ್ (ವಿವರಣೆ).
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ? ಪುನರುತ್ಥಾನ ದಿನದ ಪ್ರತಿಫಲವನ್ನು ನಿಷೇಧಿಸುವವನು ಯಾರೆಂದು ನಿಮಗೆ ತಿಳಿದಿದೆಯೇ?
ಅವನೇ ಅನಾಥನನ್ನು ಹೊರತಳ್ಳುವವನು. ಅವನು ಅನಾಥರಿಗೆ ಅವರು ಕೇಳಿದ್ದನ್ನು ಕೊಡದೆ ನಿರ್ದಾಕ್ಷಿಣ್ಯವಾಗಿ ಅಟ್ಟುವವನು.
ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ. ಬಡವರಿಗೆ ಆಹಾರ ನೀಡುಲು ತನಗಾಗಲಿ ಇತರರಿಗಾಗಲಿ ಪ್ರೇರಣೆ ನೀಡದವನು.
"ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ. ನಮಾಝ್ ಮಾಡುವವರಿಗೆ ವಿನಾಶ ಮತ್ತು ಶಿಕ್ಷೆ ಕಾದಿದೆ.
ಅವರು ಯಾರೆಂದರೆ ತಮ್ಮ ನಮಾಝ್ಗಳ ಬಗ್ಗೆ ಅಲಕ್ಷ್ಯರಾಗಿರುವವರು ಅವರು ತಮ್ಮ ನಮಾಝಿನ ಬಗ್ಗೆ ನಿರ್ಲಕ್ಷ್ಯರಾಗಿರುವರು. ಅದರ ಸಮಯ ಮುಗಿಯುವವರೆಗೂ ಅವರು ಅದರ ಬಗ್ಗೆ ಯೋಚಿಸುವುದಿಲ್ಲ.
ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ. ಅವರು ತಮ್ಮ ನಮಾಝ್ ಮತ್ತು ಸತ್ಕರ್ಮಗಳನ್ನು ತೋರಿಕೆಗಾಗಿ ನಿರ್ವಹಿಸುತ್ತಾರೆ. ಅಲ್ಲಾಹನಿಗೆ ನಿಷ್ಕಳಂಕವಾಗಿ ನಿರ್ವಹಿಸುವುದಿಲ್ಲ.
ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ. ಇತರರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತೊಂದರೆಯಾಗದ ಸಣ್ಣ ಸಣ್ಣ ವಿಷಯಗಳಲ್ಲೂ ಅವರು ಇತರರಿಗೆ ಸಹಾಯ ಮಾಡುವುದಿಲ್ಲ.
ಪ್ರಶ್ನೆ 11. ಸೂರ ಅಲ್-ಕೌಸರ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಕೌಸರ್ ಮತ್ತು ಅದರ ವ್ಯಾಖ್ಯಾನ:
ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ. ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ 2 ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು. [ಸೂರಃ ಅಲ್-ಕೌಸರ್: 1-3].
ತಫ್ಸೀರ್ (ವಿವರಣೆ).
ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ1 ಓ ಪ್ರವಾದಿಯವರೇ, ನಾವು ನಿಮಗೆ ಹೇರಳ ಒಳಿತುಗಳನ್ನು ನೀಡಿದ್ದೇವೆ. ಸ್ವರ್ಗದಲ್ಲಿರುವ ಕೌಸರ್ ನದಿಯು ಅದರಲ್ಲೊಂದಾಗಿದೆ.
"ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ. ಆದ್ದರಿಂದ, ಇದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಸಲ್ಲಿಸಿರಿ. ಅಂದರೆ ಅವನಿಗೆ ಮಾತ್ರ ನಮಾಝ್ ಮತ್ತು ಬಲಿಕರ್ಮಗಳನ್ನು ನಿರ್ವಹಿಸಿರಿ. ಬಹುದೇವರಾಧಕರು ಅವರ ವಿಗ್ರಹಗಳ ಸಾಮೀಪ್ಯ ಪಡೆಯಲು ಬಲಿ ನೀಡುವಂತೆ ನೀವು ಮಾಡಬೇಡಿ.
ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು3 ನಿಮ್ಮನ್ನು ದ್ವೇಷಿಸುವವನು ಎಲ್ಲಾ ಒಳಿತುಗಳನ್ನು ನಿಷೇಧಿಸಲಾದವನು. ಅವನನ್ನು ಯಾರಾದರೂ ನೆನಪು ಮಾಡಿದರೂ ಕೆಟ್ಟದಾಗಿಯಲ್ಲದೆ ನೆನಪು ಮಾಡುವುದಿಲ್ಲ.
ಪ್ರಶ್ನೆ 12. ಸೂರ ಅಲ್-ಕಾಫಿರೂನ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಕಾಫಿರೂನ್ ಮತ್ತು ಅದರ ವ್ಯಾಖ್ಯಾನ:
ಹೇಳಿರಿ: “ಓ ಸತ್ಯನಿಷೇಧಿಗಳೇ! 2 ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ. ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ 3. 5 ಮತ್ತು ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ 5. 6 ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ. [ಸೂರಾ ಅಲ್-ಕಾಫಿರೂನ್:1-6].
ತಫ್ಸೀರ್ (ವಿವರಣೆ).
ಹೇಳಿರಿ: “ಓ ಸತ್ಯನಿಷೇಧಿಗಳೇ! ಓ ಪ್ರವಾದಿಯವರೇ, ಹೇಳಿರಿ: ಓ ಅಲ್ಲಾಹನನ್ನು ನಿಷೇಧಿಸಿದವರೇ
ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ. ಈಗಲಾಗಲಿ ಅಥವಾ ಭವಿಷ್ಯದಲ್ಲಾಗಲಿ ನೀವು ಆರಾಧಿಸುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನಾನು ಆರಾಧಿಸುವವನನ್ನು —ಅಂದರೆ ಅಲ್ಲಾಹನನ್ನು ಮಾತ್ರ— ನೀವು ಆರಾಧಿಸುವುದಿಲ್ಲ.
ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ. ನೀವು ಆರಾಧಿಸುವ ವಿಗ್ರಹಗಳನ್ನು ನಾನು ಎಂದಿಗೂ ಆರಾಧಿಸುವುದಿಲ್ಲ.
ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನಾನು ಆರಾಧಿಸುವವನನ್ನು —ಅಂದರೆ ಅಲ್ಲಾಹನನ್ನು ಮಾತ್ರ— ನೀವು ಆರಾಧಿಸುವುದಿಲ್ಲ.
ನಿಮಗೆ ನಿಮ್ಮ ಧರ್ಮ. ನನಗೆ ನನ್ನ ಧರ್ಮ.” ನೀವು ನಿಮಗಾಗಿ ಸ್ವಯಂ ನಿರ್ಮಿಸಿದ ನಿಮ್ಮ ಧರ್ಮವು ನಿಮಗೆ. ಅಲ್ಲಾಹು ನನಗೆ ಅವತೀರ್ಣಗೊಳಿಸಿದ ಧರ್ಮವು ನನಗೆ.
ಪ್ರಶ್ನೆ 13. ಸೂರ ಅನ್ನಸ್ರ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅನ್ನಸ್ರ್ ಮತ್ತು ಅದರ ವ್ಯಾಖ್ಯಾನ:
ಅಲ್ಲಾಹನ ಸಹಾಯ ಮತ್ತು (ಮಕ್ಕಾ) ವಿಜಯ ಬಂದಾಗ. ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ನೀವು ನೋಡುವಾಗ 2 ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನೊಡನೆ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. [ಅನ್ನಸ್ರ್:1-3].
ತಫ್ಸೀರ್ (ವಿವರಣೆ).
ಅಲ್ಲಾಹನ ಸಹಾಯ ಮತ್ತು (ಮಕ್ಕಾ) ವಿಜಯ ಬಂದಾಗ. ಓ ಪ್ರವಾದಿಯವರೇ, ಅಲ್ಲಾಹನ ವತಿಯಿಂದ ನಿಮ್ಮ ಧರ್ಮಕ್ಕೆ ವಿಜಯ ಮತ್ತು ಶಕ್ತಿ ಬಂದಾಗ ಮತ್ತು ಮಕ್ಕಾ ವಿಜಯ ಸಂಭವಿಸಿದಾಗ.
ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ನೀವು ನೋಡುವಾಗ. ಮತ್ತು ಜನರು ಒಂದರ ನಂತರ ಒಂದರಂತೆ ಗುಂಪು ಗುಂಪಾಗಿ ಇಸ್ಲಾಂ ಧರ್ಮಕ್ಕೆ ಬರುವುದನ್ನು ನೀವು ನೋಡಿದಾಗ.
ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನೊಡನೆ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. ಇದು ನಿಮ್ಮ ಕರ್ತವ್ಯದ ಸಮಾಪ್ತಿಯು, ನಿಮ್ಮ ಆಯುಷ್ಯದ ಅಂತ್ಯವು ಮತ್ತು ನಿಮ್ಮ ಪ್ರಭುವಿನೊಂದಿಗಿನ ಭೇಟಿಯು ಹತ್ತಿರವಾಗುತ್ತಿದೆ ಎಂಬುದರ ಚಿಹ್ನೆಯಾಗಿದೆಯೆಂದು ನೀವು ತಿಳಿದಿರಬೇಕಾಗಿದೆ. ಆದ್ದರಿಂದ ಸಹಾಯ ಮತ್ತು ವಿಜಯ ನೀಡಿದ್ದಕ್ಕಾಗಿ ನಿಮ್ಮ ಪ್ರಭುವಿಗೆ ಕೃತಜ್ಞತೆ ಸಲ್ಲಿಸಲು ಅವನ ತಸ್ಬೀಹ್ ಮಾಡಿ ಮತ್ತು ಅವನಲ್ಲಿ ಕ್ಷಮೆಯಾಚಿಸಿ. ಏಕೆಂದರೆ ಅವನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಕ್ಷಮಿಸುತ್ತಾನೆ.
ಪ್ರಶ್ನೆ 14. ಸೂರ ಅಲ್-ಮಸದ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಮಸದ್ ಮತ್ತು ಅದರ ವ್ಯಾಖ್ಯಾನ:
1 ಅಬೂಲಹಬನ ಕೈಗಳು ಮುರಿದು ಹೋದುವು ಮತ್ತು ಅವನು ನಾಶವಾದನು. ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ. ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು 3 ಸೌದೆ ಹೊರುವವಳಾದ ಅವನ ಹೆಂಡತಿಯು ಕೂಡ (ಅವನೊಡನೆ ಪ್ರವೇಶಿಸುವಳು) 4 5 ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನ ಹಗ್ಗವಿರುವುದು. [ಅಲ್-ಮಸದ್:1-5].
ತಫ್ಸೀರ್ (ವಿವರಣೆ).
ಅಬೂಲಹಬನ ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು. ಪ್ರವಾದಿಯ (ಸ) ತಂದೆಯ ಸಹೋದರ, ಅಬೂ ಲಹಬ್ ಬಿನ್ ಅಬ್ದುಲ್ ಮುತ್ತಲಿಬ್ನ ಕೈಗಳು ಅವನ ಕಾರ್ಯಗಳ ನಷ್ಟದಿಂದಾಗಿ ನಾಶವಾದವು ಮತ್ತು ಅವನ ಪರಿಶ್ರಮ ವಿಫಲವಾಯಿತು; ಏಕೆಂದರೆ ಅವನು ಪ್ರವಾದಿ (ಸ) ರಿಗೆ ಕಿರುಕುಳ ನೀಡುತ್ತಿದ್ದನು.
ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ. ಅವನ ಸಂಪತ್ತು ಮತ್ತು ಮಕ್ಕಳಿಂದ ಅವನಿಗೆ ಉಪಯೋಗವಾಗಿದೆಯೇ? ಇಲ್ಲ. ಅವನ ಸಂಪತ್ತು ಮತ್ತು ಮಕ್ಕಳು ಅವನನ್ನು ಶಿಕ್ಷೆಯಿಂದ ರಕ್ಷಿಸಲಿಲ್ಲ ಮತ್ತು ಅವನಿಗೆ ದಯಾಭಿಕ್ಷೆಯನ್ನೂ ಕೊಡಲಿಲ್ಲ.
ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು. ಪುನರುತ್ಥಾನ ದಿನ ಅವನು ಜ್ವಾಲೆಗಳಿರುವ ನರಕವನ್ನು ಪ್ರವೇಶಿಸುವನು ಮತ್ತು ಅದರ ಬಿಸಿಯನ್ನು ಅನುಭವಿಸುವನು.
ಅವನ ಹೆಂಡತಿಯು ಸೌದೆ ಹೊರುವವಳಾದಳು. ಪ್ರವಾದಿ صلى الله عليه وسلم ನಡೆಯುವ ದಾರಿಯಲ್ಲಿ ಮುಳ್ಳುಗಳನ್ನು ಎಸೆಯುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದ ಆತನ ಪತ್ನಿ ಉಮ್ಮು ಜಮೀಲ್ ಕೂಡ ನರಕವನ್ನು ಪ್ರವೇಶಿಸುವಳು.
ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನಿಂದ ತಯಾರಿಸಿದ ಹಗ್ಗವಿರುವುದು. ಅವಳ ಕೊರಳಿಗೆ ಬಿಗಿಯಾಗಿ ಕಟ್ಟಲಾದ ಹಗ್ಗವಿರುವುದು ಅದರ ಮೂಲಕ ಅವಳನ್ನು ನರಕಕ್ಕೆ ಒಯ್ಯಲಾಗುವುದು.
ಪ್ರಶ್ನೆ 15. ಸೂರ ಅಲ್-ಇಖ್ಲಾಸ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಇಖ್ಲಾಸ್ ಮತ್ತು ಅದರ ವ್ಯಾಖ್ಯಾನ:
ಹೇಳಿರಿ: “ಅವನು ಅಲ್ಲಾಹು, ಏಕೈಕನು. ಅಲ್ಲಾಹು ನಿರಪೇಕ್ಷನು 2 3 ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. 4 ಅವನಿಗೆ ಸರಿಸಮಾನರು ಯಾರೂ ಇಲ್ಲ. [ಅಲ್-ಇಖ್ಲಾಸ್:1-4]
ತಫ್ಸೀರ್ (ವಿವರಣೆ).
1. ಹೇಳಿರಿ: “ಅವನು ಅಲ್ಲಾಹು, ಏಕೈಕನು. ಓ ಪ್ರವಾದಿಯವರೇ, ಹೇಳಿರಿ: ಅವನು ಅಲ್ಲಾಹು; ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ.
2. ಅಲ್ಲಾಹು ನಿರಪೇಕ್ಷನು 2: ಅಂದರೆ, ಸೃಷ್ಟಿಯ ಎಲ್ಲಾ ಅಗತ್ಯಗಳನ್ನು ಅವನೆಡೆಗೆ ಎತ್ತಲಾಗುತ್ತದೆ.
3. ಅವನು ಯಾರಿಗೂ ಜನ್ಮವನ್ನು ನೀಡಿಲ್ಲ. ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ.3 ಸರ್ವಶಕ್ತನಾದ ಅವನಿಗೆ ಯಾವುದೇ ಮಕ್ಕಳಿಲ್ಲ ಮತ್ತು ತಂದೆಯೂ ಇಲ್ಲ.
ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.” ಅವನ ಸೃಷ್ಟಿಗಳಲ್ಲಿ ಯಾರೂ ಅವನಂತೆ ಇಲ್ಲ.
ಪ್ರಶ್ನೆ 16. ಸೂರ ಅಲ್-ಫಲಕ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅಲ್-ಫಲಕ್ ಮತ್ತು ಅದರ ವ್ಯಾಖ್ಯಾನ:
ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. 2 ಅವನು(ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ. 3 ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ. ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ 4 5 ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ). [ಅಲ್-ಫಲಕ್:1-5]
ತಫ್ಸೀರ್ (ವಿವರಣೆ).
1.ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.1 ಓ ಪ್ರವಾದಿಯವರೇ, ಹೇಳಿರಿ: ನಾನು ಪ್ರಭಾತದ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
ಅವನು ಸೃಷ್ಟಿಸಿದ ಎಲ್ಲಾ ವಸ್ತುಗಳ ಕೇಡಿನಿಂದ. ಹಿಂಸಾತ್ಮಕ ಜೀವಿಗಳ ಕೆಡುಕಿನಿಂದ.
3. ಕಾರ್ಗತ್ತಲೆಯ ರಾತ್ರಿಯ ಕೆಡುಕಿನಿಂದ—ಅದರ ಕತ್ತಲೆಯು ಆವರಿಸುವಾಗ3: ರಾತ್ರಿಯಲ್ಲಿ ಪ್ರಾಣಿಗಳು ಮತ್ತು ಕಳ್ಳರಿಂದ ಉಂಟಾಗುವ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ. ಮತ್ತು ಗಂಟುಗಳ ಮೇಲೆ ಊದುವ ಮಾಟಗಾರರ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
5. ಅಸೂಯೆಪಡುವವನ ಕೆಡುಕಿನಿಂದ—ಅವನು ಅಸೂಯೆಪಡುವಾಗ.” ಅಸೂಯೆಗಾರ ಮತ್ತು ಜನರಿಗೆ ಅಲ್ಲಾಹು ದಯಪಾಲಿಸಿದ ಅನುಗ್ರಹಗಳು ಅವರಿಂದ ನಿವಾರಣೆಯಾಗಬೇಕು ಮತ್ತು ಅವರಿಗೆ ಹಾನಿಯಾಗಬೇಕೆಂದು ಬಯಸುವ ಮನುಷ್ಯ ದ್ವೇಷಿಯ ಕೆಡುಕುಗಳಿಂದ.
ಪ್ರಶ್ನೆ 17. ಸೂರ ಅನ್ನಾಸ್ ಅನ್ನು ಪಠಿಸಿ ಮತ್ತು ವಿವರಿಸಿ.
ಉತ್ತರ: ಸೂರ ಅನ್ನಾಸ್ ಮತ್ತು ಅದರ ವ್ಯಾಖ್ಯಾನ:
ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. ಮನುಷ್ಯರ ಒಡೆಯನಲ್ಲಿ 2 ಮನುಷ್ಯರ ದೇವನಲ್ಲಿ 3 ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ. ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು 5 ಅವರು ಜಿನ್ನ್ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.” [ಅನ್ನಾಸ್:1-6].
ತಫ್ಸೀರ್ (ವಿವರಣೆ):
1. ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. ಓ ಪ್ರವಾದಿಯವರೇ, ಹೇಳಿರಿ: ನಾನು ಮನುಷ್ಯರ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
ಮನುಷ್ಯರ ಒಡೆಯನಲ್ಲಿ. ಅವರ ಕೆಲಸ-ಕಾರ್ಯಗಳಲ್ಲಿ ಅವನು ಅವನಿಷ್ಟದಂತೆ ವ್ಯವಹರಿಸುತ್ತಾನೆ. ಅವನ ಹೊರತು ಅವರಿಗೆ ಬೇರೆ ಯಜಮಾನರಿಲ್ಲ.
3. ಮನುಷ್ಯರ ದೇವನಲ್ಲಿ. ಅವನೇ ನಿಜವಾದ ಆರಾಧ್ಯ. ಅವನ ಹೊರತು ಅವರಿಗೆ ಬೇರೆ ನಿಜವಾದ ಆರಾಧ್ಯರಿಲ್ಲ.
ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ. ಜನರಿಗೆ ದುರ್ಭೋಧನೆ ಮಾಡುವ ಶೈತಾನನ ಕೆಡುಕಿನಿಂದ.
ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು. ಜನರ ಹೃದಯಗಳಲ್ಲಿ ದುರ್ಬೋಧನೆಗಳನ್ನು ಹಾಕುತ್ತಾನೆ.
ಅವರು ಜಿನ್ನ್ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.” ಅಂದರೆ, ದುರ್ಬೋಧನೆ ನೀಡುವವನು ಮನುಷ್ಯರಲ್ಲಿ ಸೇರಿದವನು ಅಥವಾ ಜಿನ್ನ್ಗಳಲ್ಲಿ ಸೇರಿದವನು ಆಗಿರಬಹುದು.
*******
ಹದೀಸ್ ವಿಭಾಗ
ಹದೀಸ್ ಶಾಸ್ತ್ರ:
ಹದೀಸ್: ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರಿಗೆ ಸಂಬಂಧಿಸಲ್ಪಟ್ಟ ಮಾತು, ಅಥವಾ ಕಾರ್ಯ, ಅಥವಾ ಮೌನ ಸಮ್ಮತಿ, ಅಥವಾ ದೈಹಿಕ ಅಥವಾ ನೈತಿಕ ಗುಣಲಕ್ಷಣವಾಗಿದೆ.
* ಮೊದಲನೇ ಹದೀಸ್:
ಪ್ರಶ್ನೆ 1. ಹದೀಸ್ ಅನ್ನು ಪೂರ್ಣಗೊಳಿಸಿ: "إنما الأعمال بالنيات..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಮೀರುಲ್ ಮೂಮಿನೀನ್ ಅಬು ಹಫ್ಸ್ ಉಮರ್ ಬಿನ್ ಖತ್ತಾಬ್ رَضِيَ اللَّهُ تَعَالَى عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕರ್ಮಗಳು ಉದ್ದೇಶಗಳ ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಉದ್ದೇಶಿಸಿದ್ದನ್ನು ಮಾತ್ರ ಹೊಂದಿರುತ್ತಾನೆ. ಆದ್ದರಿಂದ ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಕಡೆಗೆ ವಲಸೆ ಹೋದನೋ; ಅವನ ವಲಸೆಯು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗಾಗಿದೆ. ಯಾರು ಲೌಕಿಕ ಪ್ರಯೋಜನಗಳಿಗಾಗಿ ಅಥವಾ ಒಬ್ಬ ಮಹಿಳೆಯನ್ನು ಮದುವೆಯಾಗಲು ವಲಸೆ ಹೋದನೋ; ಅವನ ವಲಸೆಯು ಅವನು ವಲಸೆ ಹೋದುದಕ್ಕಾಗಿದೆ.”
ಹದೀಸಿನ ಪ್ರಯೋಜನಗಳು:
1- ಪ್ರತಿಯೊಂದು ಕರ್ಮವೂ ಒಂದು ಉದ್ದೇಶವನ್ನು ಹೊಂದಿಯೇ ಇರುತ್ತದೆ. ಉದಾ: ನಮಾಜ್, ಉಪವಾಸ, ಹಜ್ಜ್ ಮತ್ತು ಇತರೆ ಕರ್ಮಗಳು.
2- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು ಕಡ್ಡಾಯವಾಗಿದೆ.
* ಎರಡನೇ ಹದೀಸ್:
ಪ್ರಶ್ನೆ 2. “من أحدث في أمرنا هذا ...” ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಸತ್ಯವಿಶ್ವಾಸಿಗಳ ಮಾತೆ ಉಮ್ಮು ಅಬ್ದುಲ್ಲಾ ಆಯಿಷಾ رَضِيَ اللَّهُ عَنْهَا ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರುﷺ ಹೇಳಿದರು: "ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ ಏನನ್ನಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ."
ಹದೀಸಿನ ಪ್ರಯೋಜನಗಳು:
1- ಧರ್ಮದಲ್ಲಿ ಹೊಸ ಆವಿಷ್ಕಾರಗಳ ನಿಷೇಧ.
2- ಹೊಸದಾಗಿ ಆವಿಷ್ಕರಿಸಲಾದ ಕರ್ಮಗಳು ತಿರಸ್ಕೃತವಾಗಿವೆ. ಅವು ಸ್ವೀಕಾರಯೋಗ್ಯವಲ್ಲ.
* ಮೂರನೇ ಹದೀಸ್:
ಪ್ರಶ್ನೆ 3. ಹದೀಸ್ ಅನ್ನು ಪೂರ್ಣಗೊಳಿಸಿ «بينما نحن جلوس عند رسول الله صلى الله عليه وسلم ...», ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಬಂದು, ತಮ್ಮ ಮೊಣಕಾಲನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ." ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: "ನನಗೆ ಈಮಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಹೇಳಿದರು: "ನನಗೆ ಇಹ್ಸಾನ್ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ." ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಪ್ರಳಯದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ." ಆ ವ್ಯಕ್ತಿ ಹೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ." ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಸ್ವಲ್ಪ ಹೊತ್ತು ಅಲ್ಲೇ ಇದ್ದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
ಹದೀಸಿನ ಪ್ರಯೋಜನಗಳು:
1- ಇಸ್ಲಾಂ ಧರ್ಮದ ಐದು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನ ಹೊರತು ಬೇರೆ ದೇವರು ಇಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷಿವಚನ.
ನಮಾಝನ್ನು ಸಂಸ್ಥಾಪಿಸುವುದು.
ಝಕಾತ್ ನೀಡುವುದು.
ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು.
ಅಲ್ಲಾಹನ ಪವಿತ್ರ ಭವನಕ್ಕೆ ಹಜ್ಜ್ ನಿರ್ವಹಿಸುವುದು.
2- ಈಮಾನಿನ ಆರು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನಲ್ಲಿ ವಿಶ್ವಾಸವಿಡುವುದು.
ಅವನ ಮಲಕ್(ದೇವಚರ)ರಲ್ಲಿ ವಿಶ್ವಾಸವಿಡುವುದು.
ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು.
ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು.
ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು.
ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
3- ಇಹ್ಸಾನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದಕ್ಕಿರುವುದು ಒಂದೇ ಸ್ತಂಭ. ಅಂದರೆ ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂಬ ಪ್ರಜ್ಞೆಯನ್ನು ಹೊಂದಿರುವುದು.
4- ಅಂತ್ಯದಿನ ಸಂಭವಿಸುವ ಸಮಯದ ಬಗ್ಗೆ ಉಲ್ಲೇಖಿಸಲಾಗಿದೆ. ಅದು ಯಾವಾಗ ಎಂದು ಸರ್ವಶಕ್ತನಾದ ಅಲ್ಲಾಹುವಿಗೆ ಮಾತ್ರ ತಿಳಿದಿದೆ.
ನಾಲ್ಕನೇ ಹದೀಸ್:
ಪ್ರಶ್ನೆ 4. "أكمل المؤمنين إيماناً ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು."
ಹದೀಸಿನ ಪ್ರಯೋಜನಗಳು:
1- ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸಲಾಗಿದೆ.
2- ಈಮಾನಿನ ಸಂಪೂರ್ಣತೆಯು ಗುಣನಡವಳಿಕೆಯ ಸಂಪೂರ್ಣತೆಯನ್ನು ಅವಲಂಬಿಸಿದೆ.
3- ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.
ಐದನೆಯ ಹದೀಸ್:
ಪ್ರಶ್ನೆ 5: ಹದೀಸ್ ಅನ್ನು ಪೂರ್ಣಗೊಳಿಸಿ: "من حلف بغير الله ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಇಬ್ನ್ ಉಮರ್ رَضِيَ اللَّهُ عَنْهُمَا ರಿಂದ ವರದಿ. ಪ್ರವಾದಿ ﷺ ಹೇಳಿದರು: “ಯಾರು ಅಲ್ಲಾಹು ಅಲ್ಲದವರ ಮೇಲೆ ಆಣೆ (ಪ್ರಮಾಣ) ಮಾಡುತ್ತಾನೋ; ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
ಹದೀಸಿನ ಪ್ರಯೋಜನಗಳು:
- ಅಲ್ಲಾಹನಲ್ಲದೆ ಇತರ ಯಾರ ಮೇಲೂ ಪ್ರಮಾಣ ಮಾಡಬಾರದು.
- ಅಲ್ಲಾಹು ಅಲ್ಲದವರ ಮೇಲೆ ಪ್ರಮಾಣ (ಆಣೆ) ಮಾಡುವುದು ಸಣ್ಣ ಶಿರ್ಕ್ ಆಗಿದೆ.
ಆರನೇ ಹದೀಸ್:
ಪ್ರಶ್ನೆ6. ಹದೀಸ್ ಅನ್ನು ಪೂರ್ಣಗೊಳಿಸಿ: "لا يؤمن أحدكم حتى أكون أحب إليه ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ."
ಹದೀಸಿನ ಪ್ರಯೋಜನಗಳು:
- ಪ್ರವಾದಿ صلى الله عليه وسلم ರನ್ನು ಎಲ್ಲಾ ಜನರಿಗಿಂತ ಹೆಚ್ಚು ಪ್ರೀತಿಸಬೇಕು.
- ಅದು ಸತ್ಯವಿಶ್ವಾಸದ ಸಂಪೂರ್ಣತೆಯಾಗಿದೆ.
ಏಳನೇ ಹದೀಸ್:
ಪ್ರಶ್ನೆ 7. ಹದೀಸ್ ಅನ್ನು ಪೂರ್ಣಗೊಳಿಸಿ: "لا يؤمن أحدكم حتى يحب لأخيه ... ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅನಸ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು."
ಹದೀಸಿನ ಪ್ರಯೋಜನಗಳು:
1- ಸತ್ಯವಿಶ್ವಾಸಿ ತನಗಾಗಿ ಪ್ರೀತಿಸುವ ಒಳಿತುಗಳೆಲ್ಲವನ್ನೂ ಇತರ ಸತ್ಯವಿಶ್ವಾಸಿಗಳಿಗಾಗಿಯೂ ಪ್ರೀತಿಸಬೇಕು.
- ಅದು ಸತ್ಯವಿಶ್ವಾಸದ ಸಂಪೂರ್ಣತೆಯಾಗಿದೆ.
ಎಂಟನೇ ಹದೀಸ್:
ಪ್ರಶ್ನೆ 8. ಹದೀಸ್ ಅನ್ನು ಪೂರ್ಣಗೊಳಿಸಿ: “والذي نفسي بيده! ......” ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಬೂ ಸಈದ್ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ: “ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಇದು ಕುರ್ಆನ್ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.”
ಹದೀಸಿನ ಪ್ರಯೋಜನಗಳು:
1- ಸೂರ ಅಲ್-ಇಖ್ಲಾಸ್ನ ಶ್ರೇಷ್ಠತೆ.
2- ಅದು ಕುರ್ಆನ್ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.
ಒಂಬತ್ತನೇ ಹದೀಸ್:
ಪ್ರಶ್ನೆ 9. "لا حول ولا قوة إلا بالله ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ- ಅಬೂ ಮೂಸಾ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದರು: "ಅಲ್ಲಾಹನಲ್ಲಿ ಹೊರತು ಯಾವುದೇ ಶಕ್ತಿ-ಸಾಮರ್ಥ್ಯ ಇಲ್ಲ - ಈ ವಚನವು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ."
ಹದೀಸಿನ ಪ್ರಯೋಜನಗಳು:
1- ಈ ವಚನದ ಶ್ರೇಷ್ಠತೆಯನ್ನು ಮತ್ತು ಇದು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ ಎಂದು ತಿಳಿಸುತ್ತದೆ.
2- ಸತ್ಯವಿಶ್ವಾಸಿಯು ತನ್ನ ಶಕ್ತಿ-ಸಾಮರ್ಥ್ಯಗಳಿಂದ ಮುಕ್ತನಾಗಿ, ಸರ್ವಶಕ್ತನಾದ ಅಲ್ಲಾಹನನ್ನು ಮಾತ್ರ ಅವಲಂಬಿಸುತ್ತಾನೆ.
* ಹತ್ತನೇ ಹದೀಸ್:
ಪ್ರಶ್ನೆ 10. ಹದೀಸ್ ಅನ್ನು ಪೂರ್ಣಗೊಳಿಸಿ "ألا إن في الجسد مضغة..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಖಂಡಿತವಾಗಿಯೂ ದೇಹದಲ್ಲಿ ಒಂದು ಮಾಂಸದ ಮುದ್ದೆಯಿದೆ. ಅದು ಸರಿಯಾದರೆ ಇಡೀ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಇಡೀ ದೇಹವು ಕೆಡುತ್ತದೆ. ತಿಳಿಯಿರಿ! ಅದು ಹೃದಯವಾಗಿದೆ."
ಹದೀಸಿನ ಪ್ರಯೋಜನಗಳು:
1- ಹೃದಯವು ಸರಿಯಾದರೆ ಬಾಹ್ಯ ಮತ್ತು ಆಂತರ್ಯವು ಸರಿಯಾಗುತ್ತದೆ.
2- ಹೃದಯವು ಸರಿಯಾಗುವುದಕ್ಕೆ ಗಮನ ಕೊಡಬೇಕು. ಏಕೆಂದರೆ ಮಾನವನ ಸುಧಾರಣೆಯು ಅದನ್ನು ಅವಲಂಬಿಸಿಕೊಂಡಿದೆ.
* ಹನ್ನೊಂದನೇ ಹದೀಸ್:
ಪ್ರಶ್ನೆ 11. ಹದೀಸ್ ಅನ್ನು ಪೂರ್ಣಗೊಳಿಸಿ: "من كان آخر كلامه من الدنيا: لا إله إلا الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಮುಆದ್ ಬಿನ್ ಜಬಲ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಯಾರ ಕೊನೆಯ ಮಾತು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಬೇರೆ ದೇವರಿಲ್ಲ) ಆಗುವುದೋ ಅವನು ಸ್ವರ್ಗವನ್ನು ಪ್ರವೇಶಿಸುವನು.”
ಹದೀಸಿನ ಪ್ರಯೋಜನಗಳು:
1- ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂಬ ಸಾಕ್ಷ್ಯವಚನದ ಶ್ರೇಷ್ಠತೆ ಮತ್ತು ಅದರ ಮೂಲಕ ಸತ್ಯವಿಶ್ವಾಸಿ ಸ್ವರ್ಗವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗಿದೆ.
2- ಇಹಲೋಕದಲ್ಲಿ ಯಾರ ಕೊನೆಯ ಮಾತುಗಳು ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂದಾಗುತ್ತದೋ ಎಂಬುದರ ಮಹತ್ವ ವಿವರಿಸಲಾಗಿದೆ.
* ಹನ್ನೆರಡನೇ ಹದೀಸ್:
ಪ್ರಶ್ನೆ 12. ಹದೀಸ್ ಅನ್ನು ಪೂರ್ಣಗೊಳಿಸಿ "ليس المؤمن بالطعان، ولا اللعان ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ವರ್ತಿಸುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ."
ಹದೀಸಿನ ಕೆಲವು ಪ್ರಯೋಜನಗಳು:
1- ಎಲ್ಲಾ ಸುಳ್ಳು ಮತ್ತು ಕೆಟ್ಟ ಪದಗಳ ಬಳಕೆಯನ್ನು ವಿರೋಧಿಸಲಾಗಿದೆ.
- ಇದು ಸತ್ಯವಿಶ್ವಾಸಿಗಳು ಮಾತನಾಡುವ ವಿಧಾನವಾಗಿದೆ.
* ಹದಿಮೂರನೇ ಹದೀಸ್:
ಪ್ರಶ್ನೆ 13. ಹದೀಸ್ ಅನ್ನು ಪೂರ್ಣಗೊಳಿಸಿ "من حسن إسلام المرء ...." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ""ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು"."
ಹದೀಸಿನ ಕೆಲವು ಪ್ರಯೋಜನಗಳು:
1- ಲೌಕಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು.
2- ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು ಇಸ್ಲಾಮಿನ ಸಂಪುರ್ಣತೆಯಾಗಿದೆ.
* ಹದಿನಾಲ್ಕನೇ ಹದೀಸ್:
ಪ್ರಶ್ನೆ 14. ಹದೀಸ್ ಅನ್ನು ಪೂರ್ಣಗೊಳಿಸಿ: "من قرأ حرفاً من كتاب الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ, ಅವರಿಗೆ ಒಂದು ಪುಣ್ಯವಿದೆ. ಆ ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ ಮತ್ತು ಮೀಮ್ ಒಂದು ಅಕ್ಷರವಾಗಿದೆ.”
ಹದೀಸಿನ ಪ್ರಯೋಜನಗಳು:
1- ಕುರ್ಆನ್ ಪಾರಾಯಣದ ಶ್ರೇಷ್ಠತೆ.
2- ನೀವು ಓದುವ ಪ್ರತಿಯೊಂದು ಅಕ್ಷರಕ್ಕೆ ಪ್ರತಿಫಲವಿದೆ.
*******
ಇಸ್ಲಾಮೀ ಶಿಷ್ಟಾಚಾರದ ವಿಭಾಗ
ಶಿಷ್ಟಾಚಾರಗಳ ಜ್ಞಾನ
ಇಸ್ಲಾಮೀ ಶಿಷ್ಟಾಚಾರಗಳು: ಇವು ಇಸ್ಲಾಮೀ ಶರಿಯಾದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಶಂಸನೀಯ ನಡವಳಿಕೆ, ಕಾರ್ಯ ಮತ್ತು ವರ್ತನೆಗಳ ಸಮೂಹವಾಗಿದೆ. ಇವು ಅಲ್ಲಾಹನೊಂದಿಗೆ ಮತ್ತು ಆತನ ಸೃಷ್ಟಿಗಳೊಂದಿಗೆ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ಒಟ್ಟುಗೂಡಿಸುತ್ತವೆ.
ಸರ್ವಶಕ್ತನಾದ ಅಲ್ಲಾಹನೊಂದಿಗಿನ ಶಿಷ್ಟಾಚಾರಗಳು:
ಪ್ರಶ್ನೆ 1. ಸರ್ವಶಕ್ತನಾದ ಅಲ್ಲಾಹನೊಂದಿಗಿನ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಸರ್ವಶಕ್ತನಾದ ಅಲ್ಲಾಹನನ್ನು ಗೌರವಿಸುವುದು. ಅಲ್ಲಾಹು ಹೇಳುತ್ತಾನೆ: ಅವರು ಅಲ್ಲಾಹನಿಗೆ ಮಹತ್ವ ನೀಡಬೇಕಾದ ರೀತಿಯಲ್ಲಿ ಮಹತ್ವ ನೀಡಲಿಲ್ಲ. ಪುನರುತ್ಥಾನ ದಿನದಂದು ಭೂಮಿಯು ಸಂಪೂರ್ಣವಾಗಿ ಅವನ ಮುಷ್ಠಿಯಲ್ಲಿರುತ್ತದೆ ಮತ್ತು ಆಕಾಶಗಳೆಲ್ಲವೂ ಅವನ ಬಲಗೈಯಲ್ಲಿ ಸುರುಳಿಯಾಗಿರುತ್ತವೆ. ಅವರು ಸಹಾಭಾಗಿತ್ವ (ಶಿರ್ಕ್) ಮಾಡುವ ಎಲ್ಲಾ ವಸ್ತುಗಳಿಂದಲೂ ಅವನು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ. [ಅಝ್ಝುಮರ್:67]
2. ಯಾವುದೇ ಸಹಭಾಗಿಗಳಿಲ್ಲದ ಅವನನ್ನು ಮಾತ್ರ ಆರಾಧಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ [ಅಲ್-ಬಯ್ಯಿನ:5].
3- ಅವನ ಆಜ್ಞೆಗಳನ್ನು ಅನುಸರಿಸುವುದು. ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ [ಮುಹಮ್ಮದ್: 33].
4- ಅವನ ಆಜ್ಞೆಗಳನ್ನು ಉಲ್ಲಂಘಿಸದಿರುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ಮತ್ತು ಅವನ ಎಲ್ಲೆಗಳನ್ನು ಮೀರುತ್ತಾನೋ—ಅವನನ್ನು ಅಲ್ಲಾಹು ನರಕಾಗ್ನಿಗೆ ಪ್ರವೇಶ ಮಾಡಿಸುವನು. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನಿಗೆ ಅಪಮಾನಕರ ಶಿಕ್ಷೆಯಿದೆ. [ಅನ್ನಿಸಾ: 14].
5- ಅವನ ಅಸಂಖ್ಯ ಅನುಗ್ರಹ ಮತ್ತು ವರದಾನಗಳಿಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಸ್ತುತಿಸುವುದು. ಅಲ್ಲಾಹು ಹೇಳುತ್ತಾನೆ: ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿರಿ. ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ. [ಅನ್ನಹ್ಲ್: 114].
6- ಅವನ ನಿರ್ಣಯಗಳ (ವಿಧಿ) ಬಗ್ಗೆ ತಾಳ್ಮೆ ವಹಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸ್ಥೈರ್ಯದಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ. [ಅಲ್-ಅನ್ಫಾಲ್:46].
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರೊಂದಿಗಿನ ಶಿಷ್ಟಾಚಾರಗಳು:
ಪ್ರಶ್ನೆ 2. ಪ್ರವಾದಿ ﷺ ರೊಂದಿಗಿನ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಅವರನ್ನು ಅನುಸರಿಸುವುದು ಮತ್ತು ಅನುಕರಿಸುವುದು. ಅಲ್ಲಾಹು ಹೇಳುತ್ತಾನೆ: ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ. [ಅಲ್-ಅಹ್ಝಾಬ್:21]
2- ಅವರ ಆಜ್ಞೆಗಳನ್ನು ಅನುಸರಿಸುವುದು.
3- ಅವರ ಆಜ್ಞೆಗಳನ್ನು ಉಲ್ಲಂಘಿಸದಿರುವುದು. ಅಲ್ಲಾಹು ಹೇಳುತ್ತಾನೆ: ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸಿದನು. ಯಾರು ವಿಮುಖರಾಗುತ್ತಾರೋ ಅವರ ಮೇಲೆ ಕಾವಲುಗಾರನಾಗಿ ನಾವು ನಿಮ್ಮನ್ನು ಕಳುಹಿಸಿಲ್ಲ. [ಅನ್ನಿಸಾ: 80].
4- ಅವರು ತಿಳಿಸಿಕೊಟ್ಟದ್ದರಲ್ಲಿ ವಿಶ್ವಾಸವಿಡುವುದು. ಅಲ್ಲಾಹು ಹೇಳುತ್ತಾನೆ: ಅವರು ಮನಬಂದಂತೆ ಮಾತನಾಡುವುದಿಲ್ಲ. ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ. [ಅನ್ನಜ್ಮ್: 3-4]
5- ಅವರ ಸುನ್ನತ್ಗೆ ಹೊಸ ಆವಿಷ್ಕಾರಗಳನ್ನು ಸೇರಿಸದಿರುವುದು. ಪ್ರವಾದಿ ﷺ ರವರು ಹೇಳಿದರು "ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ."
6- ಸ್ವಂತ ದೇಹಕ್ಕಿಂತ ಮತ್ತು ಇತರೆಲ್ಲಾ ಜನರಿಗಿಂತ ಅವರನ್ನು ಹೆಚ್ಚು ಪ್ರೀತಿಸುವುದು. ಪ್ರವಾದಿ ﷺ ರವರು ಹೇಳಿದರು "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ಹೆಚ್ಚು ನಾನು ನಿಮಗೆ ಪ್ರಿಯನಾಗುವವರೆಗೂ ನಿಮ್ಮಲ್ಲಿ ಯಾರೂ ಸಂಪೂರ್ಣ ವಿಶ್ವಾಸಿಯಾಗಲಾರರು."
7- ಅವರನ್ನು ಗೌರವಿಸುವುದು ಮತ್ತು ಅವರನ್ನು ಹಾಗೂ ಅವರ ಸುನ್ನತ್ತನ್ನು ಬೆಂಬಲಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನೀವು (ಜನರು) ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಕ್ಕಾಗಿ, ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಕ್ಕಾಗಿ, ಅವರನ್ನು ಗೌರವಿಸುವುದಕ್ಕಾಗಿ. [ಅಲ್-ಫತ್ಹ್:9]
ಮಾತಾಪಿತರೊಂದಿಗಿನ ಶಿಷ್ಟಾಚಾರಗಳು:
ಪ್ರಶ್ನೆ 3. ಮಾತಾಪಿತರೊಂದಿಗಿನ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಅಲ್ಲಾಹನ ಆಜ್ಞೋಲ್ಲಂಘನೆಯಾಗದ ರೀತಿಯಲ್ಲಿ ಮಾತಾಪಿತರನ್ನು ಅನುಸರಿಸುವುದು.
2- ಮಾತಾಪಿತರ ಸೇವೆ ಮಾಡುವುದು.
3- ಮಾತಾಪಿತರಿಗೆ ಸಹಾಯ ಮಾಡುವುದು.
4- ಮಾತಾಪಿತರ ಅಗತ್ಯಗಳನ್ನು ಪೂರೈಸುವುದು.
5- ಮಾತಾಪಿತರಿಗಾಗಿ ಪ್ರಾರ್ಥಿಸುವುದು.
6- ಅವರೊಂದಿಗೆ ಮರ್ಯಾದೆಯಿಂದ ಮಾತನಾಡುವುದು, ಅವರ ಮುಂದೆ ಕನಿಷ್ಠ "ಛೇ" ಎಂಬ ಪದವನ್ನು ಕೂಡ ಬಳಸದಿರುವುದು.
7- ಮಾತಾಪಿತರ ಮುಖ ನೋಡಿ ಮಂದಹಾಸ ಬೀರುವುದು. ಅವರ ಮುಂದೆ ಮುಖವನ್ನು ಗಂಟಿಕ್ಕಬಾರದು.
8- ಮಾತಾಪಿತರ ಧ್ವನಿಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು. ಅವರ ಮಾತನ್ನು ಗಮನವಿಟ್ಟು ಕೇಳಬೇಕು. ಅವರ ಮಾತುಗಳಿಗೆ ಅಡ್ಡಿಪಡಿಸಬಾರದು. ಅವರ ಹೆಸರಿನಿಂದ ಅವರನ್ನು ಕರೆಯಬಾರದು. ಬದಲಾಗಿ ಅಪ್ಪ ಅಮ್ಮ ಎಂದು ಕರೆಯುವುದು.
9- ತಂದೆ ಮತ್ತು ತಾಯಿ ಕೋಣೆಯಲ್ಲಿರುವಾಗ ಅವರ ಅನುಮತಿ ಪಡೆದು ಪ್ರವೇಶಿಸುವುದು.
10- ಮಾತಾಪಿತರ ಕೈ ಮತ್ತು ತಲೆಗಳನ್ನು ಚುಂಬಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಮತ್ತು ಮಾತಾಪಿತರಿಗೆ ಒಳಿತು ಮಾಡಬೇಕು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಆದೇಶಿಸಿದ್ದಾನೆ. ಅವರಲ್ಲೊಬ್ಬರು ಅಥವಾ ಇಬ್ಬರೂ ನಿಮ್ಮ ಉಪಸ್ಥಿತಿಯಲ್ಲಿ ವೃದ್ಧಾಪ್ಯವನ್ನು ತಲುಪಿದ್ದರೆ ಅವರೊಡನೆ “ಛೇ” ಎಂದು ಹೇಳಬೇಡಿ. ಅವರನ್ನು ಗದರಿಸಬೇಡಿ. ಅವರೊಡನೆ ಗೌರವದಿಂದ ಮಾತನಾಡಿರಿ. ಅವರಿಬ್ಬರ ಮುಂದೆ ದಯೆಯಿಂದ ಕೂಡಿದ ವಿನಯದ ರೆಕ್ಕೆಯನ್ನು ತಗ್ಗಿಸಿ ನಿಲ್ಲಿರಿ. “ನನ್ನ ಪರಿಪಾಲಕನೇ! ಬಾಲ್ಯದಲ್ಲಿ ಇವರು ನನ್ನನ್ನು ಸಾಕಿ ಸಲಹಿದಂತೆ ಇವರಿಗೆ ದಯೆ ತೋರು” ಎಂದು ಪ್ರಾರ್ಥಿಸಿರಿ. [ಅಲ್-ಇಸ್ರಾಅ್: 23-24]
ಒಂದು ಹದೀಸ್ನಲ್ಲಿ ಬಂದಿದೆ: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಜಿಹಾದ್ನಲ್ಲಿ ಭಾಗವಹಿಸಲು ಅನುಮತಿ ಕೇಳಿದರು. ಆಗ ಪ್ರವಾದಿಯವರು ಹೇಳಿದರು: "ನಿನಗೆ ಹೆತ್ತವರಿದ್ದಾರೆಯೇ?" ಅದಕ್ಕವರು "ಹೌದು" ಎಂದರು. ಆಗ ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವರಿಬ್ಬರಲ್ಲೇ ಜಿಹಾದ್ ಮಾಡು".
ಕುಟುಂಬ ಸಂಬಂಧ ಕಾಪಾಡುವುದರ ಶಿಷ್ಟಾಚಾರಗಳು:
ಪ್ರಶ್ನೆ 4. ಕುಟುಂಬ ಸಂಬಂಧ ಕಾಪಾಡುವುದು ಹೇಗೆ?
ಉತ್ತರ: 1- ಸಹೋದರ, ಸಹೋದರಿ, ಚಿಕ್ಕಪ್ಪ, ಚಿಕ್ಕಮ್ಮ, ಸೋದರ ಮಾವ, ಸೋದರತ್ತೆ ಹಾಗೂ ಇತರ ಸಂಬಂಧಿಕರನ್ನು ಭೇಟಿ ಮಾಡುವುದು.
2- ಮಾತು ಮತ್ತು ಕ್ರಿಯೆಗಳ ಮೂಲಕ ಅವರಿಗೆ ಒಳಿತು ಮತ್ತು ಸಹಾಯ ಮಾಡುವುದು.
3- ಅವರನ್ನು ಸಂಪರ್ಕಿಸುವುದು ಮತ್ತು ಅವರ ಯೋಗಕ್ಷೇಮ ವಿಚಾರಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನೀವು (ಯುದ್ಧದಿಂದ) ವಿಮುಖರಾದರೆ ಬಹುಶಃ ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಲೂ ಮತ್ತು ನಿಮ್ಮ ಕುಟುಂಬ ಸಂಬಂಧಗಳನ್ನು ಕಡಿಯುತ್ತಲೂ ಇರುವಿರಾ? [ಮುಹಮ್ಮದ್: 22]
ಹದೀಸ್ನಲ್ಲಿ ಹೀಗಿದೆ: “ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”
ಇಸ್ಲಾಮೀ ಸಹೋದರತೆಯ ಶಿಷ್ಟಾಚಾರಗಳು:
ಪ್ರಶ್ನೆ 5. ನಾನು ನನ್ನ ಇಸ್ಲಾಮೀ ಸಹೋದರರು ಮತ್ತು ಸ್ನೇಹಿತರೊಂದಿಗೆ ಹೇಗೆ ವರ್ತಿಸಬೇಕು?
ಉತ್ತರ: 1- ಒಳ್ಳೆಯ ಜನರನ್ನು ಪ್ರೀತಿಸುವುದು ಮತ್ತು ಅವರೊಂದಿಗೆ ಗೆಳೆತನ ಮಾಡುವುದು.
2- ಕೆಟ್ಟ ಜನರಿಂದ ದೂರವಾಗುವುದು ಮತ್ತು ಅವರ ಗೆಳೆತನವನ್ನು ಬಿಡುವುದು. ಹದೀಸ್ನಲ್ಲಿ ಹೀಗಿದೆ: "ಮೊಮಿನರನ್ನು ಮಾತ್ರ ಸಹಚರರನ್ನಾಗಿ ಮಾಡಿಕೊ, ಮತ್ತು ತಕ್ವಾವಂತರು ಮಾತ್ರ ನಿನ್ನ ಆಹಾರವನ್ನು ತಿನ್ನಲಿ"
3- ಮುಸ್ಲಿಂ ಸಹೋದರರಿಗೆ ಸಲಾಂ ಹೇಳುವುದು ಮತ್ತು ಹಸ್ತಲಾಘವ ಮಾಡುವುದು. ಹದೀಸ್ನಲ್ಲಿ ಹೀಗಿದೆ: "ಯಾವುದೇ ಇಬ್ಬರು ಮುಸ್ಲಿಮರು ಭೇಟಿಯಾಗಿ ಹಸ್ತಲಾಘವ ಮಾಡಿದರೆ, ಅವರು ಬೇರ್ಪಡುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ."
4- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರು ಗುಣಮುಖರಾಗಲು ಪ್ರಾರ್ಥಿಸುವುದು.
5- ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಹೇಳುವುದು.
6- ಅವನನ್ನು ಭೇಟಿ ಮಾಡಲು ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು. ಹದೀಸ್ನಲ್ಲಿ: “ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”
7- ಅವನಿಗೆ ಹಿತವಚನ ನೀಡುವುದು. ಹದೀಸ್ನಲ್ಲಿ ಹೀಗೆ ಬಂದಿದೆ: "ಯಾರು ಸನ್ಮಾರ್ಗವು ಬೇರೆಯದರಲ್ಲಿದೆ ಎಂದು ತಿಳಿದೂ ತನ್ನ ಸಹೋದರನಿಗೆ ಒಂದು ವಿಷಯದಲ್ಲಿ ಸಲಹೆ ನೀಡುತ್ತಾನೋ, ಅವನು ಅವನಿಗೆ ದ್ರೋಹ ಬಗೆದಿದ್ದಾನೆ."
8- ಅವನು ಅನ್ಯಾಯಕ್ಕೆ ಒಳಗಾದರೆ ಅವನಿಗೆ ಸಹಾಯ ಮಾಡುವುದು ಮತ್ತು ಅವನು ಅನ್ಯಾಯ ಮಾಡದಂತೆ ತಡೆಯುವುದು. ಪ್ರವಾದಿ صلي الله عليه وسلم ರವರು ಹೇಳಿದರು: "ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ" ಆಗ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಹೇಗೆ ಸಹಾಯ ಮಾಡಲಿ ಎಂದು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು: "ನೀನು ಅವನನ್ನು ಅನ್ಯಾಯದಿಂದ ತಡೆಯುವುದು, ಖಂಡಿತವಾಗಿಯೂ, ಅದೇ ಅವನಿಗೆ ಮಾಡುವ ಸಹಾಯವಾಗಿದೆ".
10- ತನಗಾಗಿ ಬಯಸುವುದನ್ನು ಮುಸ್ಲಿಂ ಸಹೋದರನಿಗೂ ಬಯಸುವುದು. ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿಯಾದ ಹದೀಸ್ನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು."
11- ಅವನಿಗೆ ನನ್ನ ಸಹಾಯ ಬೇಕಾದರೆ ಸಹಾಯ ಮಾಡುವುದು. ಹದೀಸ್ನಲ್ಲಿ: “ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವವರೆಗೂ ಅಲ್ಲಾಹು ಆ ದಾಸನಿಗೆ ಸಹಾಯ ಮಾಡುತ್ತಿರುತ್ತಾನೆ.”
12- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು. ಹದೀಸ್ನಲ್ಲಿ ಹೀಗಿದೆ: “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್.”
13- ಅವನ ರಹಸ್ಯವನ್ನು ಮುಚ್ಚಿಡುವುದು. ಹದೀಸ್ನಲ್ಲಿ: "ಒಬ್ಬ ವ್ಯಕ್ತಿಯು ಮಾತನಾಡಿ, ನಂತರ ತಿರುಗಿದರೆ, ಆ ಮಾತು ಅಮಾನತ್ ಆಗಿರುತ್ತದೆ."
13- ಅವನನ್ನು ಗದರಿಸದಿರುವುದು, ದೂಷಿಸದಿರುವುದು, ಕೀಳಾಗಿಸದಿರುವುದು, ಅಸೂಯೆ ಪಡದಿರುವುದು, ಅವನ ರಹಸ್ಯಗಳನ್ನು ಅನ್ವೇಷಿಸದಿರುವುದು ಮತ್ತು ಅವನನ್ನು ವಂಚಿಸದಿರುವುದು.
ಹದೀಸ್ನಲ್ಲಿ: “ಒಬ್ಬ ಮುಸ್ಲಿಂ ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಅವನು ಅವನಿಗೆ ಅನ್ಯಾಯ ಮಾಡುವುದಿಲ್ಲ, ಅವನನ್ನು ಕೈಬಿಡುವುದಿಲ್ಲ ಮತ್ತು ಅವನನ್ನು ಕೀಳಾಗಿ ಕಾಣುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಕೀಳಾಗಿ ಕಾಣುವುದೇ ಒಂದು ಕೆಡುಕಾಗಿ ಸಾಕು.”
ನೆರೆಹೊರೆಯವರೊಂದಿಗಿನ ಶಿಷ್ಟಾಚಾರಗಳು:
ಪ್ರಶ್ನೆ 6. ನೆರೆಹೊರೆಯವರೊಂದಿಗಿನ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಮಾತು ಮತ್ತು ಕ್ರಿಯೆಯ ಮೂಲಕ ನೆರೆಹೊರೆಯವರಿಗೆ ಒಳಿತನ್ನು ಮಾಡುವುದು ಮತ್ತು ಅವರಿಗೆ ಸಹಾಯ ಬೇಕಾದರೆ ಸಹಾಯ ಮಾಡುವುದು.
2- ಹಬ್ಬ, ಮದುವೆ ಅಥವಾ ಇನ್ನೇನಾದರೂ ಸಂತೋಷದಲ್ಲಿದ್ದರೆ ಅವರನ್ನು ಅಭಿನಂದಿಸುವುದು.
3- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರಿಗೆ ನೋವುಂಟಾದರೆ ಸಾಂತ್ವನ ಹೇಳುವುದು.
4- ಮನೆಯಲ್ಲಿ ಆಹಾರ ತಯಾರಿಸುವಾಗ ಸಾಧ್ಯವಾದರೆ ಅವರಿಗೂ ಆಹಾರ ನೀಡುವುದು.
5- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು.
6- ದೊಡ್ಡ ಧ್ವನಿಯಿಂದ ಅವನಿಗೆ ತೊಂದರೆ ಕೊಡದಿರುವುದು, ಅಥವಾ ಅವನ ಮೇಲೆ ಬೇಹುಗಾರಿಕೆ ಮಾಡದಿರುವುದು, ಮತ್ತು ಅವನ ಬಗ್ಗೆ ತಾಳ್ಮೆ ವಹಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ಮಾತಾಪಿತರಿಗೆ ಒಳಿತು ಮಾಡಿರಿ. ಸಂಬಂಧಿಕರು, ಅನಾಥರು, ಬಡವರು, ಕುಟುಂಬ ಸಂಬಂಧವಿರುವ ನೆರೆಹೊರೆಯವರು, ಇತರ ನೆರೆಹೊರೆಯವರು, ಸಂಗಡಿಗರು, ಪ್ರಯಾಣಿಕರು ಮತ್ತು ನಿಮ್ಮ ಅಧೀನದಲ್ಲಿರುವ ಗುಲಾಮರು ಮುಂತಾದವರೊಡನೆ ಉತ್ತಮವಾಗಿ ವರ್ತಿಸಿರಿ. ಅಹಂಕಾರ ಮತ್ತು ದರ್ಪವಿರುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ. [ಅನ್ನಿಸಾ: 36].
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಬೂ ದರ್! ನೀನು ಸಾರು ತಯಾರಿಸಿದರೆ, ಅದರ ನೀರನ್ನು ಹೆಚ್ಚಿಸು, ಮತ್ತು ನಿನ್ನ ನೆರೆಯವರನ್ನು ಪರಿಗಣಿಸು (ಅವರಿಗೂ ಅದರಿಂದ ಸ್ವಲ್ಪ ಕೊಡು)"
ಹದೀಸ್ನಲ್ಲಿರುವಂತೆ ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಹೇಳಿದರು: “ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವವನು ತನ್ನ ನೆರೆಹೊರೆಯವರಿಗೆ ತೊಂದರೆ ಕೊಡದಿರಲಿ.”
ಆತಿಥ್ಯದ ಶಿಷ್ಟಾಚಾರಗಳು:
ಪ್ರಶ್ನೆ 7. ಅತಿಥಿ ಮತ್ತು ಆತಿಥ್ಯದ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಆತಿಥ್ಯಕ್ಕೆ ಆಮಂತ್ರಿಸಲಾದರೆ ಸ್ವೀಕರಿಸುವುದು.
2- ಯಾರನ್ನಾದರೂ ಭೇಟಿಯಾಗುವುದಾದರೆ, ಅನುಮತಿ ಮತ್ತು ಸಮಯವನ್ನು ಕೇಳುವುದು.
3- ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
4- ಭೇಟಿಯ ಸಂದರ್ಭ ದೀರ್ಘ ಹೊತ್ತು ತಂಗದಿರುವುದು.
5. ಅತಿಥಿಯ ಮನೆಯವರ ಕಡೆ ಕಣ್ಣು ಹಾಯಿಸದಿರುವುದು.
6- ಅತಿಥಿಯನ್ನು ಮಂದಹಾಸದ ಮುಖದಿಂದ ಉತ್ತಮ ರೀತಿಯಲ್ಲಿ ಸ್ವಾಗತಿಸುವುದು.
7- ಅತಿಥಿಯನ್ನು ಉತ್ತಮ ಸ್ಥಳದಲ್ಲಿ ಕೂರಿಸುವುದು.
8- ಆಹಾರ ಮತ್ತು ಪಾನೀಯಗಳನ್ನು ನೀಡಿ ಅತಿಥಿಯನ್ನು ಗೌರವಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನಿಮ್ಮ ಮನೆಗಳನ್ನು ಬಿಟ್ಟು ಬೇರೆ ಮನೆಗಳನ್ನು, ಆ ಮನೆಯವರಿಂದ ಅನುಮತಿ ಪಡೆದು ಅವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿ. ಅದು ನಿಮಗೆ ಉತ್ತಮವಾಗಿದೆ. ನೀವು ಉಪದೇಶ ಪಡೆಯುವುದಕ್ಕಾಗಿ. [ಅನ್ನೂರ್: 27].
- ಹದೀಸ್ನಲ್ಲಿ ಹೀಗಿದೆ: "ಅಲ್ಲಾಹು ಅನುಮತಿ ಕೇಳುವುದನ್ನು ವಿಧಿಸಿರುವುದೇ ದೃಷ್ಟಿಯ ಕಾರಣಕ್ಕಾಗಿ."
ಮತ್ತು ಪ್ರವಾದಿ(ಸ) ರವರು ಹೇಳಿದರು: “ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಯನ್ನು ಗೌರವಿಸಲಿ”
ಕಾಯಿಲೆಯ ಶಿಷ್ಟಾಚಾರಗಳು:
ಪ್ರಶ್ನೆ 8: ರೋಗಿ ಮತ್ತು ರೋಗಿ ಸಂದರ್ಶನದ ಶಿಷ್ಟಾಚಾರಗಳು ಯಾವುವು?
ಉತ್ತರ- 1- ನೋವು ಅನುಭವವಾಗುವ ಸ್ಥಳದಲ್ಲಿ ಬಲಗೈಯನ್ನಿಟ್ಟು ಮೂರು ಬಾರಿ ಬಿಸ್ಮಿಲ್ಲಾ ಪಠಿಸುವುದು ನಂತರ ಏಳು ಬಾರಿ "ಅವೂದು ಬಿಇಜ್ಜತಿಲ್ಲಾಹಿ ವ ಖುದ್ರತಿಹಿ ಮಿನ್ ಶರ್ರಿ ಮಾ ಅಜಿದು ವ ಉಹಾದಿರು" ಎಂದು ಹೇಳುವುದು. ಅಂದರೆ "ನಾನು ಅನುಭವಿಸುವುದರಿಂದ ಮತ್ತು ಭಯಪಡುವುದರಿಂದ ಅಲ್ಲಾಹನ ಪ್ರತಾಪ ಮತ್ತು ಶಕ್ತಿಯಲ್ಲಿ ಅಭಯ ಯಾಚಿಸುತ್ತೇನೆ"
2- ಅಲ್ಲಾಹನ ವಿಧಿಯಲ್ಲಿ ಸಂತೃಪ್ತನಾಗುವುದು ಮತ್ತು ತಾಳ್ಮೆ ವಹಿಸುವುದು. ಉಮ್ಮುಲ್ ಅಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಸ್ವಸ್ಥಳಾಗಿದ್ದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ವಿಚಾರಿಸಲು ಬಂದರು. ಆಗ ಅವರು ಹೇಳಿದರು: "ಓ ಉಮ್ಮುಲ್ ಅಲಾ, ನಿನಗೆ ಶುಭವಾರ್ತೆ! ನಿಶ್ಚಯವಾಗಿ, ಬೆಂಕಿಯು ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು ತೊಲಗಿಸುವಂತೆ, ಅಲ್ಲಾಹು ಮುಸಲ್ಮಾನನ ರೋಗದ ಮೂಲಕ ಅವನ ಪಾಪಗಳನ್ನು ತೊಲಗಿಸುತ್ತಾನೆ."
3- ಅನಾರೋಗ್ಯ ಪೀಡಿತ ಸಹೋದರನನ್ನು ಸಂದರ್ಶಿಸಲು ಆತುರಪಡುವುದು ಮತ್ತು ಅವನಿಗಾಗಿ ಪ್ರಾರ್ಥಿಸುವುದು. ನಂದರ್ಶನದ ವೇಳೆ ಬಹಳ ಹೊತ್ತು ಅಲ್ಲಿ ಕುಳಿತುಕೊಳ್ಳದಿರುವುದು.
4- ಅವನು ವಿನಂತಿಸದಿದ್ದರೂ ಅವನಿಗಾಗಿ ಮಂತ್ರಿಸುವುದು.
5- ಅವನಿಗೆ ತಾಳ್ಮೆಯಿಂದಿರಲು ಮತ್ತು ಪ್ರಾರ್ಥಿಸಲು, ನಮಾಝ್ ನಿರ್ವಹಿಸಲು ಮತ್ತು ಸಾಧ್ಯವಾದಷ್ಟು ಶುದ್ದಿಯಲ್ಲಿರಲು ಸಲಹೆ ನೀಡುವುದು.
6. ರೋಗಿಗಳಿಗಾಗಿ ಹೀಗೆ ಪ್ರಾರ್ಥಿಸುವುದು: "ಅಸ್ಅಲುಲ್ಲಾಹಲ್ ಅದೀಮ್ ರಬ್ಬಲ್ ಅರ್ಶಿಲ್ ಅದೀಮ್ ಅಯ್ ಯಶ್ಫಿಯಕ್" ಅಂದರೆ "ನಿಮ್ಮನ್ನು ಗುಣಪಡಿಸಲೆಂದು ಸರ್ವಶಕ್ತನಾದ ಅಲ್ಲಾಹನಲ್ಲಿ, ಮಹಾ ಅರ್ಶಿನ ಒಡೆಯನಲ್ಲಿ ಬೇಡುತ್ತೇನೆ." (ಏಳು ಬಾರಿ).
ಜ್ಞಾನಾರ್ಜನೆಯ ಶಿಷ್ಟಾಚಾರಗಳು:
ಪ್ರಶ್ನೆ 9. ಜ್ಞಾನಾರ್ಜನೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು. ಹದೀಸ್ನಲ್ಲಿ: "ಯಾರು ಜ್ಞಾನವನ್ನು ವಿದ್ವಾಂಸರ ನಡುವೆ ಮೆರೆಯಲು, ಅವಿವೇಕಿಗಳೊಡನೆ ತರ್ಕಿಸಲು ಮತ್ತು ಜನರ ಗಮನವನ್ನು ತನ್ನತ್ತ ಸೆಳೆಯಲು ಕಲಿಯುತ್ತಾನೋ, ಅಲ್ಲಾಹನು ಅವನನ್ನು ನರಕಕ್ಕೆ ಸೇರಿಸುತ್ತಾನೆ."
2- ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಹದೀಸ್ನಲ್ಲಿ: "ಪುನರುತ್ಥಾನ ದಿನದಂದು ದಾಸನೊಂದಿಗೆ ನಾಲ್ಕು ವಿಷಯಗಳ ಬಗ್ಗೆ ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ - ಅವುಗಳಲ್ಲಿ ಒಂದು: ಅವನ ಜ್ಞಾನದ ಬಗ್ಗೆ, ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು."
3- ಶಿಕ್ಷಕರನ್ನು ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಗೌರವಿಸುವುದು.
4- ಅವರ ಮುಂದೆ ವಿನಯದಿಂದ ಕುಳಿತುಕೊಳ್ಳುವುದು.
5- ಅವರ ಮಾತನ್ನು ಕಿವಿಗೊಟ್ಟು ಕೇಳುವುದು ಮತ್ತು ಪಾಠದ ಮಧ್ಯೆ ಅಡ್ಡಿಪಡಿಸದಿರುವುದು.
6- ಸಭ್ಯವಾಗಿ ಪ್ರಶ್ನೆಗಳನ್ನು ಕೇಳುವುದು.
7- ಅವರನ್ನು ಹೆಸರಿನಿಂದ ಕರೆಯದಿರುವುದು. - ಹದೀಸ್ನಲ್ಲಿ ಹೀಗಿದೆ: “ಖಂಡಿತವಾಗಿಯೂ, ವಯೋವೃದ್ಧ ಮುಸಲ್ಮಾನನನ್ನು ಮತ್ತು ಕುರ್ಆನ್ ಪಠಿಸುವವನನ್ನು ಗೌರವಿಸುವುದು ಅಲ್ಲಾಹನನ್ನು ಗೌರವಿಸುವುದರ ಭಾಗವಾಗಿದೆ.”
ಸಭೆಯ ಶಿಷ್ಟಾಚಾರಗಳು:
ಪ್ರಶ್ನೆ 10. ಸಭೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಸಭೆಯಲ್ಲಿರುವವರಿಗೆ ಸಲಾಂ ಹೇಳುವುದು.
2- ಸಭೆಯ ಕೊನೆಯಲ್ಲಿ ಖಾಲಿ ಸ್ಥಳದಲ್ಲಿ ಕುಳಿತುಕೊಳ್ಳುವುದು. ಯಾರನ್ನೂ ಅವರ ಸ್ಥಳದಿಂದ ಎಬ್ಬಿಸದಿರುವುದು ಅಥವಾ ಇಬ್ಬರ ನಡುವೆ ಅವರ ಅನುಮತಿಯಿಲ್ಲದೆ ಕುಳಿತುಕೊಳ್ಳದಿರುವುದು.
3- ಇತರರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡುವುದು.
4- ಇತರರ ಮಾತಿಗೆ ಅಡ್ಡಿಪಡಿಸದಿರುವುದು.
5- ಸಭೆಯಿಂದ ಹೊರಡುವಾಗ ಸಲಾಂ ಹೇಳಿ ಅನುಮತಿ ಪಡೆಯುವುದು.
- ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: «ಯಾರನ್ನೂ ಅವರ ಸ್ಥಳದಿಂದ ಎಬ್ಬಿಸಿ, ಅಲ್ಲಿ ಇನ್ನೊಬ್ಬರು ಕುಳಿತುಕೊಳ್ಳಬಾರದು; ಬದಲಿಗೆ, ಸ್ಥಳಾವಕಾಶ ಮಾಡಿಕೊಡಿರಿ ಮತ್ತು ಸ್ಥಳವನ್ನು ವಿಶಾಲಗೊಳಿಸಿರಿ».
- ಹದೀಸ್ನಲ್ಲಿ ಹೀಗಿದೆ: "ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
6- ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು. ಅದು ಹೀಗಿದೆ: 'ಸುಬ್ಹಾನಕಲ್ಲಾಹುಮ್ಮ ವಿ ಬಿಹಮ್ದಿಕ ಅಶ್ಹದು ಅಲ್ಲಾ ಇಲಾಹ ಇಲ್ಲಾ ಅಂತ ಅಸ್ತಘ್ಫಿರುಕ ವಿ ಅತೂಬು ಇಲೈಕ್" ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ."
ನಿದ್ದೆಯ ಶಿಷ್ಟಾಚಾರಗಳು:
ಪ್ರಶ್ನೆ 11: ಮಲಗುವ ಶಿಷ್ಟಾಚಾರಗಳು ಯಾವುವು?
ಉತ್ತರ: ಬೇಗನೇ ಮಲಗುವುದು. ಹದೀಸ್: «ಅಬೂ ಬರ್ಝ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಶಾ ನಮಾಝ್ಗಿಂತ ಮೊದಲು ಮಲಗುವುದನ್ನು, ಮತ್ತು ಅದರ ನಂತರ ಮಾತನಾಡುವುದನ್ನು ಇಷ್ಟಪಡುತ್ತಿರಲಿಲ್ಲ»
2- ವುದೂ ಇರುವ ಸ್ಥಿತಿಯಲ್ಲಿ ಮಲಗುವುದು.
2- ಹೊಟ್ಟೆಯ ಮೇಲೆ ಮಲಗದಿರುವುದು.
4- ಬಲಭಾಗಕ್ಕೆ ಸರಿದು ಬಲಗೈಯನ್ನು ಬಲಗೆನ್ನೆಯ ಕೆಳಗಿರಿಸಿ ಮಲಗುವುದು.
5- ಮಲಗುವ ಮೊದಲು ಹಾಸಿಗೆಯನ್ನು ಝಾಡಿಸುವುದು.
- ಹದೀಸ್ನಲ್ಲಿ ಹೀಗಿದೆ: ಬರಾಅ್ ಬಿನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರು ಹೇಳಿದರು: "ನೀವು ನಿಮ್ಮ ಮಲಗುವ ಸ್ಥಳಕ್ಕೆ ಹೋದಾಗ, ನಮಾಝಿಗಾಗಿ ಮಾಡುವಂತೆ ವುದೂ ನಿರ್ವಹಿಸಿ, ನಂತರ ನಿಮ್ಮ ಬಲ ಪಾರ್ಶ್ವದ ಮೇಲೆ ಮಲಗಿಕೊಳ್ಳಿ"
- ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಟ್ಟೆಯ ಮೇಲೆ ಮಲಗಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಹೇಳಿದರು: “ಖಂಡಿತವಾಗಿಯೂ, ಈ ಮಲಗುವ ಭಂಗಿಯನ್ನು ಅಲ್ಲಾಹು ಇಷ್ಟಪಡಲಾರನು.”
- ಪ್ರವಾದಿ (ಸ) ರವರು ಹೇಳಿದರು: "ನಿಮ್ಮಲ್ಲೊಬ್ಬರು ತನ್ನ ಹಾಸಿಗೆಗೆ ತೆರಳಿದರೆ, ಅವನು ತನ್ನ ಕೆಳವಸ್ತ್ರದ ಒಳಭಾಗದಿಂದ ತನ್ನ ಹಾಸಿಗೆಯನ್ನು ಝಾಡಿಸಲಿ. ಏಕೆಂದರೆ, ಅವನ ನಂತರ ಅದರ ಮೇಲೆ ಏನು ಬಂದಿದೆ ಎಂದು ಅವನಿಗೆ ತಿಳಿದಿರುವುದಿಲ್ಲ."
6- ಅಯತುಲ್-ಕುರ್ಸಿ, ಸೂರ ಅಲ್-ಇಖ್ಲಾಸ್ ಮತ್ತು ಅಲ್-ಮಉವ್ವಿಝತೈನ್ (ಮೂರು ಬಾರಿ) ಮುಂತಾದ ಮಲಗುವಾಗ ಹೇಳುವ ದಿಕ್ರ್ಗಳನ್ನು ಪಠಿಸುವುದು. ನಂತರ ಹೀಗೆ ಹೇಳುವುದು: ಬಿಸ್ಮಿಕಲ್ಲಾಹುಮ್ಮ ಅಮೂತು ವ ಅಹ್ಯ "ಓ ಅಲ್ಲಾಹನೇ, ನಿನ್ನ ಹೆಸರಿನಲ್ಲಿ ನಾನು ಸಾಯುತ್ತೇನೆ ಮತ್ತು ಬದುಕುತ್ತೇನೆ."
7- ಫಜ್ರ್ ನಮಾಝಿಗಾಗಿ ಏಳುವುದು.
8- ನಿದ್ದೆಯಿಂದ ಏಳುವಾಗ ಹೀಗೆ ಪಠಿಸುವುದು: ಅಲ್ ಹಯ್ದು ಲಿಲ್ಲಾಹಿಲ್ಲದೀ ಅಹ್ಯಾನ ಬ'ಅದ ಮಾ ಅಮಾತನ ವ ಇಲೈಹಿನ್ನುಶೂರ್" " ನಮ್ಮ ಮರಣದ ನಂತರ ನಮ್ಮನ್ನು ಬದುಕಿಸಿದ ಅಲ್ಲಾಹನಿಗೆ ಸರ್ವಸ್ತುತಿ ಮತ್ತು ಪುನರುತ್ಥಾನವು ಅವನ ಕಡೆಗೇ ಆಗಿದೆ."
ಆಹಾರ ಸೇವನೆಯ ಶಿಷ್ಟಾಚಾರಗಳು:
ಪ್ರಶ್ನೆ 12. ಆಹಾರ ಸೇವನೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಶಕ್ತಿಯನ್ನು ಪಡೆಯುವುದಕ್ಕಾಗಿ ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂದು ನಿಯ್ಯತ್ ಮಾಡುವುದು.
2- ಆಹಾರ ಸೇವನೆಯ ಮೊದಲು ಕೈಗಳನ್ನು ತೊಳೆಯುವುದು.
- ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಹದೀಸಿನ ಪ್ರಕಾರ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ): «ಆಹಾರ ಸೇವಿಸಲು ಮತ್ತು ಕುಡಿಯಲು ಬಯಸಿದರೆ, ಕೈಗಳನ್ನು ತೊಳೆದು ನಂತರ ಆಹಾರ ಸೇವಿಸುತ್ತಾನೆ ಮತ್ತು ಕುಡಿಯುತ್ತಾನೆ»
3- ಬಿಸ್ಮಿಲಾ ಎಂದು ಹೇಳುವುದು, ಬಲಗೈಯಿಂದ ಆಹಾರ ಸೇವಿಸುವುದು ಮತ್ತು ಹತ್ತಿರದಲ್ಲಿರುವಲ್ಲಿಂದಲೇ ಸೇವಿಸುವುದು. ತಟ್ಟೆಯ ಮಧ್ಯದಿಂದ ಅಥವಾ ಇತರರ ಮುಂಭಾಗದಲ್ಲಿರುವುದರಿಂದ ಸೇವಿಸದಿರುವುದು.
4- ಬಿಸ್ಮಿಲ್ಲಾ ಹೇಳಲು ಮರೆತರೆ, ಬಿಸ್ಮಿಲ್ಲಾಹಿ ಅವ್ವಲಿಹಿ ವ ಆಖಿರಿಹಿ" "ಇದರ ಪ್ರಾರಂಭ ಮತ್ತು ಅಂತ್ಯ ಅಲ್ಲಾಹನ ಹೆಸರಿನಲ್ಲಿ” ಎಂದು ಹೇಳುವುದು.
- ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಮ್ಮಲ್ಲೊಬ್ಬನು ಆಹಾರವನ್ನು ಸೇವಿಸಿದಾಗ, ಅವನು 'ಬಿಸ್ಮಿಲ್ಲಾಹ್' ಎಂದು ಹೇಳಲಿ. ಒಂದು ವೇಳೆ ಅವನು ಆರಂಭದಲ್ಲಿ ಮರೆತರೆ, ಅವನು 'ಬಿಸ್ಮಿಲ್ಲಾಹಿ ಅವ್ವಲಹು ವ ಆಖಿರಹು' ಎಂದು ಹೇಳಲಿ”
5- ಇರುವ ಆಹಾರದಲ್ಲಿ ಸಂತೃಪ್ತನಾಗುವುದು. ಆಹಾರವನ್ನು ದೂಷಿಸದಿರುವುದು. ಇಷ್ಟವಾದರೆ ತಿನ್ನುವುದು, ಇಷ್ಟವಿಲ್ಲದಿದ್ದರೆ ಬಿಟ್ಟುಬಿಡುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವತ್ತೂ ಯಾವುದೇ ಆಹಾರವನ್ನು ದೂಷಿಸುತ್ತಿರಲಿಲ್ಲ. ಇಷ್ಟಪಟ್ಟರೆ ತಿನ್ನುತ್ತಿದ್ದರು, ಇಲ್ಲದಿದ್ದರೆ ಅದನ್ನು ಬಿಡುತ್ತಿದ್ದರು."
6- ಕೆಲವು ತುತ್ತುಗಳನ್ನು ಸೇವಿಸುವುದು, ಅತಿಯಾಗಿ ಸೇವಿಸದಿರುವುದು.
- ಹದೀಸ್ನಲ್ಲಿ ಹೀಗಿದೆ: «ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ ಅವನ ಮನಸ್ಸು ಅವನನ್ನು ಮೀರಿದರೆ, ಮೂರನೇ ಒಂದು ಭಾಗವು ಆಹಾರಕ್ಕಾಗಿ, ಮೂರನೇ ಒಂದು ಭಾಗವು ಪಾನೀಯಕ್ಕಾಗಿ ಮತ್ತು ಮೂರನೇ ಒಂದು ಭಾಗವು ಉಸಿರಾಟಕ್ಕಾಗಿ (ಇರಲಿ)»
7- ಆಹಾರ ಅಥವಾ ಪಾನೀಯಕ್ಕೆ ಊದದಿರುವುದು. ಅದನ್ನು ತಣ್ಣಗಾಗಲು ಹಾಗೆಯೇ ಬಿಟ್ಟುಬಿಡುವುದು.
- ಹದೀಸ್ನಲ್ಲಿ ಹೀಗಿದೆ: «ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಹಾರ ಮತ್ತು ಪಾನೀಯದಲ್ಲಿ ಊದುವುದನ್ನು ವಿರೋಧಿಸಿದ್ದಾರೆ»
8- ಕುಟುಂಬಿಕರು ಅಥವಾ ಅತಿಥಿಗಳೊಂದಿಗೆ ಆಹಾರ ಸೇವಿಸುವುದು.
- ಒಬ್ಬ ವ್ಯಕ್ತಿ ಪ್ರವಾದಿಯವರಲ್ಲಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಹೇಳಿದರು: "ಖಂಡಿತವಾಗಿಯೂ ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ". ಅವರು (ಪ್ರವಾದಿ) ಹೇಳಿದರು: "ಬಹುಶಃ ನೀವು ಬೇರೆ ಬೇರೆಯಾಗಿ ತಿನ್ನುತ್ತೀರಿ. ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ, ಆಗ ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು."
9- ಹಿರಿಯರಿಗಿಂತ ಮೊದಲು ಆಹಾರ ಸೇವಿಸದಿರುವುದು.
10. ಪಾನೀಯ ಸೇವಿಸುವಾಗ ಬಿಸ್ಮಿಲ್ಲಾ ಹೇಳುವುದು, ಕುಳಿತುಕೊಂಡು ಮೂರು ಗುಟುಕುಗಳಲ್ಲಿ ಕುಡಿಯುವುದು ಮತ್ತು ಪಾತ್ರೆಗೆ ಉಸಿರು ಬಿಡದಿರುವುದು.
- ಹದೀಸ್: "ನಿಮ್ಮಲ್ಲೊಬ್ಬರು ಕುಡಿಯುವಾಗ ಪಾತ್ರೆಯೊಳಗೆ ಶ್ವಾಸ ಬಿಡಬಾರದು"
- ಮತ್ತು ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ವರದಿಯಂತೆ, "ಪ್ರವಾದಿ (ಸ) ರವರು ನಿಂತುಕೊಂಡು ಕುಡಿಯುವುದನ್ನು ನಿಷೇಧಿಸಿದ್ದಾರೆ."
- ಹಾಗೂ ಹದೀಸ್: «ಅಲ್ಲಾಹುವಿನ ಸಂದೇಶವಾಹಕರು (ಸ) ಪಾನೀಯವನ್ನು ಕುಡಿಯುವಾಗ ಮೂರು ಬಾರಿ ಉಸಿರಾಡುತ್ತಿದ್ದರು»
11. ಆಹಾರ ಅಥವಾ ಪಾನೀಯ ಸೇವಿಸಿದ ಬಳಿಕ ಅಲ್ಲಾಹುವಿಗೆ ಧನ್ಯವಾದ ಹೇಳುವುದು.
- ಹದೀಸ್ನಲ್ಲಿ ಹೀಗಿದೆ: "ಆಹಾರವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಪಾನೀಯವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಾಸನನ್ನು ಅಲ್ಲಾಹು ಪ್ರೀತಿಸುತ್ತಾನೆ."
ವಸ್ತ್ರಧಾರಣೆಯ ಶಿಷ್ಟಾಚಾರಗಳು:
ಪ್ರಶ್ನೆ 13: ವಸ್ತ್ರಧಾರಣೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಬಲಭಾಗದಿಂದ ಉಡುಪು ಧರಿಸುವುದು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಹೇಳುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ವಸ್ತ್ರ ಧರಿಸುವಾಗ ಮತ್ತು ವುದೂ ನಿರ್ವಹಿಸುವಾಗ, ನಿಮ್ಮ ಬಲಭಾಗಗಳಿಂದ ಆರಂಭಿಸಿರಿ."
2- ಉಡುಪನ್ನು ಹರಡುಗಂಟುಗಳಿಗಿಂತ ಕೆಳಗಿಳಿಸದಿರುವುದು.
- ಹದೀಸ್ನಲ್ಲಿ ಹೀಗಿದೆ: "ಇಝಾರ್ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು." ಹರಡುಗಂಟುಗಳು ಎಂದರೆ ಪಾದದ ಎರಡೂ ಬದಿಗಳಲ್ಲಿರುವ ಉಬ್ಬಿಕೊಂಡಿರುವ ಮೂಳೆಗಳು.
3- ಹುಡುಗರು ಹುಡುಗಿಯರ ಉಡುಪುಗಳನ್ನು ಧರಿಸದಿರುವುದು ಮತ್ತು ಹುಡುಗಿಯರು ಹುಡುಗರ ಉಡುಪುಗಳನ್ನು ಧರಿಸದಿರುವುದು.
4- ಸತ್ಯನಿಷೇಧಿಗಳು ಅಥವಾ ದುಷ್ಟರು ಧರಿಸುವ ಉಡುಪುಗಳನ್ನು ಧರಿಸದಿರುವುದು.
5- ಉಡುಪು ಕಳಚುವಾಗ ಬಿಸ್ಮಿಲ್ಲಾ ಹೇಳುವುದು.
- ಹದೀಸ್ನಲ್ಲಿ ಹೀಗಿದೆ: «ಆದಮ್ ಸಂತತಿಯವರ ಔರತ್ಗಳಿಗೂ ಜಿನ್ನ್ಗಳ ಕಣ್ಣುಗಳಿಗೂ ನಡುವಿನ ಪರದೆಯೆಂದರೆ, ನಿಮ್ಮಲ್ಲೊಬ್ಬರು ತನ್ನ ವಸ್ತ್ರವನ್ನು ಕಳಚುವಾಗ ‘ಬಿಸ್ಮಿಲ್ಲಾಹ್’ ಎಂದು ಹೇಳುವುದೇ ಆಗಿದೆ.»
6- ಪಾದರಕ್ಷೆ ಧರಿಸುವಾಗ ಮೊದಲು ಬಲಗಾಲಿಗೆ ಧರಿಸುವುದು ಮತ್ತು ಕಳಚುವಾಗ ಮೊದಲು ಎಡಗಾಲಿನಿಂದ ಕಳಚುವುದು.
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
ಸವಾರಿ ಮಾಡುವುದರ ಶಿಷ್ಟಾಚಾರಗಳು:
ಪ್ರಶ್ನೆ 14: ಸವಾರಿ ಮಾಡುವುದರ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಬಿಸ್ಮಿಲ್ಲಾ, ಅಲ್-ಹಮ್ದುಲಿಲ್ಲಾಹ್ ಎಂದು ಹೇಳುವುದು. {ನಮಗೋಸ್ಕರ ಇದನ್ನು ವಿಧೇಯಗೊಳಿಸಿಕೊಟ್ಟವನು ಪರಮಪಾವನನು. ಇದನ್ನು ಪಳಗಿಸಲು ನಮಗೆ ಸಾಧ್ಯವಿರಲಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗುವವರಾಗಿದ್ದೇವೆ.” 14 [ಅಝ್ಝುಖ್ರುಫ್: 13-14].
2- ಮುಸ್ಲಿಂ ವ್ಯಕ್ತಿಯ ಮೂಲಕ ಹಾದುಹೋಗವಾಗ ಅವನಿಗೆ ಸಲಾಂ ಹೇಳುವುದು.
ರಸ್ತೆಯ ಶಿಷ್ಟಾಚಾರಗಳು:
ಪ್ರಶ್ನೆ 15. ರಸ್ತೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಹದವಾಗಿ ಮತ್ತು ವಿನಯವಾಗಿ ನಡೆಯುವುದು. ಅಲ್ಲಾಹು ಹೇಳುತ್ತಾನೆ: ಭೂಮಿಯಲ್ಲಿ ದರ್ಪದಿಂದ ನಡೆಯಬೇಡಿ. ಭೂಮಿಯನ್ನು ಸೀಳಲು ಅಥವಾ ಎತ್ತರದಲ್ಲಿ ಪರ್ವತವನ್ನು ತಲುಪಲು ನಿಮಗೆ ಖಂಡಿತ ಸಾಧ್ಯವಿಲ್ಲ. [ಅಲ್-ಇಸ್ರಾ:37]
2- ರಸ್ತೆಯಲ್ಲಿ ಭೇಟಿಯಾಗುವವರಿಗೆ ಸಲಾಂ ಹೇಳುವುದು.
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಹೇಳಿದರು: "ಆಹಾರವನ್ನು ಉಣಿಸುವುದು ಮತ್ತು ನಿನಗೆ ಪರಿಚಯವಿರುವವರಿಗೂ ಪರಿಚಯವಿಲ್ಲದವರಿಗೂ ಸಲಾಮ್ ಹೇಳುವುದು"
3- ದೃಷ್ಟಿಯನ್ನು ತಗ್ಗಿಸುವುದು ಮತ್ತು ಯಾರಿಗೂ ಹಾನಿ ಮಾಡದಿರುವುದು.
4- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು. ಹದೀಸ್ನಲ್ಲಿರುವಂತೆ ಪ್ರವಾದಿ (ﷺ) ರವರ ಮಾತು: “ಹಾಗಾದರೆ, ರಸ್ತೆಗೆ ಅದರ ಹಕ್ಕನ್ನು ನೀಡಿರಿ.” ಅವರು ಕೇಳಿದರು: “ರಸ್ತೆಯ ಹಕ್ಕು ಯಾವುದು?” ಅವರು ಹೇಳಿದರು: “ದೃಷ್ಟಿಯನ್ನು ತಗ್ಗಿಸುವುದು, ಯಾರಿಗೂ ತೊಂದರೆ ನೀಡದಿರುವುದು, ಸಲಾಂ ಹೇಳಿದರೆ ಉತ್ತರಿಸುವುದು, ಒಳಿತನ್ನು ಆಜ್ಞಾಪಿಸುವುದು ಮತ್ತು ಕೆಡುಕಿನಿಂದ ತಡೆಯುವುದು.”
5- ರಸ್ತೆಯಿಂದ ಅಡೆತಡೆಗಳನ್ನು ನಿವಾರಿಸುವುದು.
- ಹದೀಸ್ನಲ್ಲಿ ಹೀಗಿದೆ: "ದಾರಿಯಿಂದ ಅಡ್ಡಿಯನ್ನು ನಿವಾರಿಸುವುದು ದಾನವಾಗಿದೆ."
ಮನೆಯನ್ನು ಪ್ರವೇಶಿಸುವ ಮತ್ತು ಮನೆಯಿಂದ ಹೊರಡುವ ಶಿಷ್ಟಾಚಾರಗಳು:
ಪ್ರಶ್ನೆ 16. ಮನೆಯನ್ನು ಪ್ರವೇಶಿಸುವ ಮತ್ತು ಮನೆಯಿಂದ ಹೊರಡುವ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಎಡಗಾಲಿಟ್ಟು ಮನೆಯಿಂದ ಹೊರಬರುವುದು. ಹೊರಬರುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ,ತವಕ್ಕಲ್ತು ಅಲಲ್ಲಾಹಿ ಲಾ ಹವ್ಲಾ ವಲಾ ಖುವ್ವತ ಇಲ್ಲಾ ಬಿಲ್ಲಾ ಅಲ್ಲಾಹುಮ್ಮ ಇನ್ನಿ ಅವೂದುಬಿಕ ಅನ್ ಅದಲ್ಲ ಅವ್ ಉದಲ್ಲ,ಅವ್ ಅದಲ್ಲ ಅವ್ ಉದಲ್ಲ ಅವ್ ಅದ್ಲಿಮ ಅವ್ ಉದ್ಲಮ ಅವ್ ಅಜ್ಹಲ ಅವ್ ಯುಜ್ಹಲ ಅಲಯ್.“ಅಲ್ಲಾಹನ ಹೆಸರಿನಿಂದ, ನಾನು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ, ಅಲ್ಲಾಹನಲ್ಲಿಯೇ ಹೊರತು ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಓ ಅಲ್ಲಾಹನೇ, ನಾನು ದಾರಿ ತಪ್ಪದಿರಲು ಅಥವಾ ಇತರರು ನನ್ನನ್ನು ದಾರಿ ತಪ್ಪಿಸದಿರಲು, ಅಥವಾ ನಾನು ಜಾರದಿರಲು ಅಥವಾ ಇತರರು ನನ್ನನ್ನು ಜಾರುವಂತೆ ಮಾಡದಿರಲು, ಅಥವಾ ನಾನು ಅನ್ಯಾಯವೆಸಗಿದಂತೆ ಅಥವಾ ನನಗೆ ಅನ್ಯಾಯವಾಗದಂತೆ, ನಾನು ತಿಳಿಗೇಡಿಯಂತೆ ವರ್ತಿಸದಿರಲು ಅಥವಾ ಇತರರು ನನ್ನನ್ನು ತಿಳಿಗೇಡಿಯಂತೆ ಮಾಡದಿರಲು ನಾನು ನಿನ್ನಲ್ಲಿ ಅಭಯಕೋರುತ್ತೇನೆ."
2- ಬಲಗಾಲಿಟ್ಟು ಮನೆಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ ವಲಜ್ನಾ ವಬಿಸ್ಮಿಲ್ಲಾಹಿ ಖರಜ್ನಾ ವಅಲ ರಬ್ಬಿನಾ ತವಕ್ಕಲ್ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”
3- ಮೊದಲು ಮಿಸ್ವಾಕಿನಿಂದ ಹಲ್ಲುಜ್ಜುವುದು, ನಂತರ ಮನೆಯವರಿಗೆ ಸಲಾಮ್ ಹೇಳುವುದು.
- ಹದೀಸ್ನಲ್ಲಿ ಹೀಗಿದೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಮಿಸ್ವಾಕ್ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು.
ಮಲಮೂತ್ರ ವಿಸರ್ಜನೆಯ ಶಿಷ್ಟಾಚಾರಗಳು:
ಪ್ರಶ್ನೆ 17. ಮಲಮೂತ್ರ ವಿಸರ್ಜನೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಎಡಗಾಲಿನಿಂದ ಶೌಚಾಲಯವನ್ನು ಪ್ರವೇಶಿಸುವುದು.
3- ಪ್ರವೇಶಿಸುವ ಮೊದಲು ಹೀಗೆ ಹೇಳುವುದು: "ಅಲ್ಲಾಹನ ನಾಮದಿಂದ , ಓ ಅಲ್ಲಾಹನೇ, ನಾನು ಗಂಡು ಮತ್ತು ಹೆಣ್ಣು ಶೈತಾನರಿಂದ ನಿನ್ನಲ್ಲಿ ಅಭಯ ಯಾಚಿಸುತ್ತೇನೆ."
3. ಅಲ್ಲಾಹನ ಹೆಸರನ್ನು ಹೊಂದಿರುವ ಯಾವುದನ್ನೂ ಶೌಚಾಲಯದ ಒಳಗೆ ಒಯ್ಯದಿರುವುದು.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ ತಮ್ಮ ಉಂಗುರವನ್ನು ಕಳಚಿಡುತ್ತಿದ್ದರು.
4- ವಿಸರ್ಜನೆಯ ಸಮಯದಲ್ಲಿ ಗುಹ್ಯಭಾಗವನ್ನು ಮರೆಮಾಚುವುದು.
- ಹದೀಸ್ನಲ್ಲಿ ಹೀಗಿದೆ: «ಅಲ್ಲಾಹರ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಗತ್ಯಕ್ಕಾಗಿ ಮರೆಯಾಗಲು ದಿಣ್ಣೆ ಅಥವಾ ಖರ್ಜೂರದ ಮರಗಳ ಗುಂಪನ್ನು ಅತಿ ಹೆಚ್ಚು ಇಷ್ಟಪಡುತ್ತಿದ್ದರು.»
5- ವಿಸರ್ಜನೆ ಮಾಡುವ ಸ್ಥಳದಲ್ಲಿ ಮಾತನಾಡದಿರುವುದು.
6- ಮಲ ಮೂತ್ರ ವಿಸರ್ಜನೆ ಮಾಡುವಾಗ ಕಿಬ್ಲಾದೆಡೆಗೆ ಮುಖ ಮಾಡದಿರುವುದು ಅಥವಾ ಬೆನ್ನು ತೋರಿಸದಿರುವುದು.
ಕಾರಣ ಪ್ರವಾದಿ ﷺ ರವರ ಹೇಳಿಕೆಯಾಗಿದೆ- «ಮಲ ಅಥವಾ ಮೂತ್ರ ವಿಸರ್ಜಿಸುವಾಗ ಕಿಬ್ಲಾದೆಡೆಗೆ ಮುಖ ಮಾಡಬೇಡಿ, ಬದಲಾಗಿ ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿರಿ.»
7- ಕಲ್ಮಶವನ್ನು ನಿವಾರಿಸಲು ಎಡಗೈಯನ್ನು ಬಳಸುವುದು. ಬಲಗೈಯನ್ನು ಬಳಸದಿರುವುದು.
- ಹದೀಸ್: «ಅವರು ನಮ್ಮನ್ನು… ಬಲಗೈಯಿಂದ ಶೌಚ ಮಾಡಲು ನಿಷೇಧಿಸಿದ್ದಾರೆ»
8- ಜನರು ನಡೆದಾಡುವ ರಸ್ತೆಯಲ್ಲಿ ಅಥವಾ ಜನರು ಉಪಯೋಗಿಸುವ ನೆರಳಿನಲ್ಲಿ ವಿಸರ್ಜನೆ ಮಾಡದಿರುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: «ಶಾಪಕ್ಕೆ ಗುರಿಮಾಡುವ ಎರಡು ವಿಷಯಗಳಿಂದ ದೂರವಿರಿ.» ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಶಾಪಕ್ಕೆ ಗುರಿಮಾಡುವ ಆ ಎರಡು ವಿಷಯಗಳು ಯಾವುವು?" ಅವರು ಹೇಳಿದರು: «ಜನರು ಸಂಚರಿಸುವ ದಾರಿಯಲ್ಲಿ, ಅಥವಾ ಅವರು ವಿಶ್ರಾಂತಿ ಪಡೆಯುವ ನೆರಳಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು.»
9- ವಿಸರ್ಜನೆಯ ನಂತರ ಕೈಗಳನ್ನು ತೊಳೆಯುವುದು. ಜರೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದೆ. ಆಗ ಅವರು ಶೌಚಾಲಯಕ್ಕೆ ತೆರಳಿ, ತಮ್ಮ ಶೌಚಕಾರ್ಯವನ್ನು ಪೂರೈಸಿ, ನಂತರ ಹೇಳಿದರು: "ಓ ಜರೀರ್, ಶುದ್ಧೀಕರಣಕ್ಕಾಗಿ ನೀರನ್ನು ತನ್ನಿ." ನಾನು ಅವರ ಬಳಿಗೆ ನೀರನ್ನು ತಂದೆ. ಅವರು ನೀರಿನಿಂದ ಶುದ್ಧೀಕರಿಸಿಕೊಂಡರು, ಮತ್ತು ತಮ್ಮ ಕೈಯನ್ನು ನೆಲದ ಮೇಲೆ ಉಜ್ಜಿದರು.
10- ಎಡಗಾಲಿಟ್ಟು ಶೌಚಾಲಯದಿಂದ ಹೊರಬರುವುದು ಮತ್ತು ಗುಫ್ರಾನಕ್ ಎಂದು ಹೇಳುವುದು.
ಮಸೀದಿಯ ಶಿಷ್ಟಾಚಾರಗಳು:
ಪ್ರಶ್ನೆ 18. ಮಸೀದಿಯ ಶಿಷ್ಟಾಚಾರಗಳು ಯಾವುವು?
ಉತ್ತರ: 1- ಬಲಗಾಲಿಟ್ಟು ಮಸೀದಿಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ್."ಅಲ್ಲಾಹನ ಹೆಸರಿನಿಂದ, ಓ ಅಲ್ಲಾಹನೇ, ನಿನ್ನ ಕರುಣೆಯ ಬಾಗಿಲುಗಳನ್ನು ನನಗೆ ತೆರೆದುಕೊಡು."
2- ಕುಳಿತುಕೊಳ್ಳುವುದಕ್ಕೆ ಮುಂಚೆ ಎರಡು ರಕ್ಅತ್ ನಮಾಝ್ ನಿರ್ವಹಿಸುವುದು.
- ಹದೀಸ್: "ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಎರಡು ರಕಅತ್ ನಮಾಝ್ ಮಾಡುವವರೆಗೆ ಕುಳಿತುಕೊಳ್ಳಬಾರದು"
3- ನಮಾಝ್ ಮಾಡುವವರ ಮುಂದೆ ಹಾದುಹೋಗದಿರುವುದು, ಮಸೀದಿಯಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕದಿರುವುದು ಮತ್ತು ಮಸೀದಿಯಲ್ಲಿ ಮಾರಾಟ ಮತ್ತು ಖರೀದಿ ಮಾಡದಿರುವುದು. ಪ್ರವಾದಿ ﷺ ರವರು ಹೇಳಿದರು "ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು."
- ಮತ್ತು ಅಲ್ಲಾಹನ ಸಂದೇಶವಾಹಕರು ﷺ ರ ಮಾತು: «ಯಾರಾದರೂ ಮಸೀದಿಯಲ್ಲಿ ಒಬ್ಬ ಮನುಷ್ಯನು ಕಳೆದುಹೋದ ವಸ್ತುವಿನ ಬಗ್ಗೆ ಘೋಷಿಸುವುದನ್ನು ಕೇಳಿದರೆ, ಅವನು ‘ಅಲ್ಲಾಹನು ಅದನ್ನು ನಿನಗೆ ಮರಳಿಸದಿರಲಿ’ ಎಂದು ಹೇಳಲಿ. ಏಕೆಂದರೆ, ಖಂಡಿತವಾಗಿಯೂ ಮಸೀದಿಗಳು ಇದಕ್ಕಾಗಿ ನಿರ್ಮಿಸಲ್ಪಟ್ಟಿಲ್ಲ.»
- ಹದೀಸ್ನಲ್ಲಿ ಹೀಗಿದೆ: “ಮಸೀದಿಯಲ್ಲಿ ಮಾರಾಟ ಮಾಡುವ ಅಥವಾ ಖರೀದಿಸುವವರನ್ನು ನೀವು ಕಂಡರೆ, ‘ಅಲ್ಲಾಹು ನಿಮ್ಮ ವ್ಯಾಪಾರವನ್ನು ಲಾಭದಾಯಕವಾಗಿಸದಿರಲಿ’ ಎಂದು ಹೇಳಿರಿ.”
4. ಮಸೀದಿಯ ಶುಚಿತ್ವವನ್ನು ಕಾಪಾಡುವುದು.
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಡಾವಣೆಗಳಲ್ಲಿ ಮಸೀದಿಗಳನ್ನು ನಿರ್ಮಿಸಬೇಕೆಂದೂ, ಹಾಗೂ ಅವುಗಳನ್ನು ಸ್ವಚ್ಛವಾಗಿಟ್ಟು ಸುಗಂಧಭರಿತಗೊಳಿಸಬೇಕೆಂದೂ ಆದೇಶಿಸಿದ್ದಾರೆ.
4- ಎಡಗಾಲಿಟ್ಟು ಮಸೀದಿಯಿಂದ ಹೊರಬರುವುದು ಮತ್ತು ಹೀಗೆ ಹೇಳುವುದು: “ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಮಿನ್ ಫದ್ಲಿಕ” (ಓ ಅಲ್ಲಾಹ್! ನಾನು ನಿನ್ನ ಔದಾರ್ಯದೊಂದಿಗೆ ನಿನ್ನಲ್ಲಿ ಬೇಡುತ್ತಿದ್ದೇನೆ.)
ಸಲಾಮ್ ಹೇಳುವ ಶಿಷ್ಟಾಚಾರಗಳು:
ಪ್ರಶ್ನೆ 19. ಸಲಾಮ್ ಹೇಳುವ ಶಿಷ್ಟಾಚಾರಗಳನ್ನು ತಿಳಿಸಿ?
ಉತ್ತರ: 1 - ಮುಸ್ಲಿಮನನ್ನು ಭೇಟಿಯಾದಾಗ ಮೊತ್ತಮೊದಲು ಸಲಾಮ್ ಹೇಳುವುದು: "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು". ಸಲಾಂ ಅಲ್ಲದ ಬೇರೆ ಯಾವುದನ್ನು ಮೊದಲು ಹೇಳದಿರುವುದು. ಸನ್ನೆಯ ಮೂಲಕ ಸಲಾಮ್ ಹೇಳಿದರೆ ಸಾಕಾಗುವುದಿಲ್ಲ.
2- ಸಲಾಮ್ ಹೇಳುವ ವ್ಯಕ್ತಿಯ ಮುಖ ನೋಡಿ ಮುಗುಳು ನಗೆ ಬೀರುವುದು. ಹದೀಸ್ನಲ್ಲಿ ಹೀಗಿದೆ: “ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”
3- ಬಲಗೈಯಿಂದ ಹಸ್ತಲಾಘವ ಮಾಡುವುದು.
4- ಯಾರಾದರೂ ಸಲಾಮ್ ಹೇಳಿದರೆ, ಅದಕ್ಕಿಂತಲೂ ಉತ್ತಮವಾದುದರ ಮೂಲಕ ಉತ್ತರ ನೀಡುವುದು ಅಥವಾ ಕನಿಷ್ಠ ಅಷ್ಟನ್ನೇ ಹಿಂದಿರುಗಿಸುವುದು.
- ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮಗೆ ಅಭಿವಂದನೆ (ಸಲಾಂ) ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ ಅಭಿವಂದನೆ ಸಲ್ಲಿಸಿರಿ. ಅಥವಾ ಕನಿಷ್ಠ ಅದನ್ನು ಮರಳಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯವನ್ನೂ ವಿಚಾರಣೆ ಮಾಡುತ್ತಾನೆ. [ಅನ್ನಿಸಾ:86].
5- ಸತ್ಯನಿಷೇಧಿಗೆ ಮೊದಲು ಸಲಾಮ್ ಹೇಳದಿರುವುದು. ಒಂದು ವೇಳೆ ಅವನೇ ಸಲಾಮ್ ಹೇಳಿದರೆ “ವಅಲೈಕುಂ” ಎಂದು ಉತ್ತರಿಸುವುದು.
- ಹದೀಸ್: "ಯಹೂದಿಗಳಿಗೆ ಅಥವಾ ಕ್ರೈಸ್ತರಿಗೆ ನೀವು ಮುಂದಾಗಿ ಸಲಾಂ ಹೇಳಬೇಡಿ."
6- ಕಿರಿಯರು ಹಿರಿಯರಿಗೆ, ಸವಾರಿ ಮಾಡುವವರು ಪಾದಚಾರಿಗಳಿಗೆ, ಚಲಿಸುವವರು ಕುಳಿತವರಿಗೆ ಮತ್ತು ಚಿಕ್ಕ ಗುಂಪು ದೊಡ್ಡ ಗುಂಪಿಗೆ ಸಲಾಮ್ ಹೇಳುವುದು. ಪ್ರವಾದಿ صلي الله عليه وسلم ರವರು ಹೇಳಿದರು: "ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು"
7. ಮಹ್ರಮ್ ಅಲ್ಲದ (ವಿವಾಹವಾಗಲು ಅನುಮತಿಯಿರುವ) ಮಹಿಳೆಯೊಂದಿಗೆ ಹಸ್ತಲಾಘವ ಮಾಡದಿರುವುದು.
ಹದೀಸಿನಲ್ಲಿ ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹುವಿನಾಣೆ, ಅಲ್ಲಾಹನ ಸಂದೇಶವಾಹಕರ (ಸ) ಕೈಯು ಯಾವುದೇ ಮಹಿಳೆಯ ಕೈಯನ್ನು ಎಂದಿಗೂ ಸ್ಪರ್ಶಿಸಲಿಲ್ಲ."
ಅನುಮತಿ ಕೇಳುವ ಶಿಷ್ಟಾಚಾರಗಳು:
ಪ್ರಶ್ನೆ 20. ಅನುಮತಿ ಕೇಳುವ ಶಿಷ್ಟಾಚಾರಗಳನ್ನು ತಿಳಿಸಿ?
ಉತ್ತರ: 1- ಒಂದು ಸ್ಥಳಕ್ಕೆ ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
2- ಮೂರು ಬಾರಿಗಿಂತ ಹೆಚ್ಚು ಅನುಮತಿ ಕೇಳದಿರುವುದು. ನಂತರ ಹೊರಟುಹೋಗುವುದು.
ಹದೀಸ್ನಲ್ಲಿ: «ನಿಮ್ಮಲ್ಲೊಬ್ಬನು ಮೂರು ಬಾರಿ ಅನುಮತಿ ಕೇಳಿಯೂ ಅನುಮತಿ ಸಿಗದಿದ್ದರೆ, ಅವನು ಹಿಂತಿರುಗಲಿ.»
3- ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು. ಮತ್ತು "ಅಸ್ಸಲಾಮು ಅಲೈಕುಂ" ಎಂದು ಹೇಳುವುದು. ಹದೀಸ್: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರದ್ದಾದರೂ ಬಾಗಿಲಿಗೆ ಬಂದಾಗ, ನೇರವಾಗಿ ಬಾಗಿಲನ್ನು ಎದುರಿಸುತ್ತಿರಲಿಲ್ಲ. ಬದಲಾಗಿ, ಅದರ ಬಲ ಅಥವಾ ಎಡ ಭಾಗಕ್ಕೆ ಸರಿದು ನಿಂತು, 'ಅಸ್ಸಲಾಮು ಅಲೈಕುಮ್, ಅಸ್ಸಲಾಮು ಅಲೈಕುಮ್' ಎಂದು ಹೇಳುತ್ತಿದ್ದರು."
4- ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.
- ಯಾಕೆಂದರೆ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ನಿಮ್ಮಲ್ಲಿ ಪ್ರೌಢಾವಸ್ಥೆಗೆ ತಲುಪದವರು ಮೂರು ವೇಳೆಗಳಲ್ಲಿ ನಿಮ್ಮೊಂದಿಗೆ ಪ್ರವೇಶಾನುಮತಿಯನ್ನು ಕೇಳಲಿ. ಫಜ್ರ್ ನಮಾಝ್ಗೆ ಮೊದಲು, ಮಧ್ಯಾಹ್ನದ ವೇಳೆ (ವಿಶ್ರಾಂತಿಗಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಡುವಾಗ ಮತ್ತು ಇಶಾ ನಮಾಝ್ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಇವುಗಳ ಹೊರತಾದ ಸಮಯಗಳಲ್ಲಿ ನಿಮಗೆ ಅಥವಾ ಅವರಿಗೆ ದೋಷವಿಲ್ಲ. ನೀವು ಪರಸ್ಪರ ಒಬ್ಬರ ಬಳಿಗೆ ಇನ್ನೊಬ್ಬರು ಬರುತ್ತಲೂ ಹೋಗುತ್ತಲೂ ಇರುವವರಾಗಿದ್ದೀರಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. [ಅನ್ನೂರ್: 58].
5- ಆಸ್ಪತ್ರೆ, ಅಂಗಡಿ ಮುಂತಾದ ಜನರು ವಾಸಿಸದ ಸ್ಥಳಗಳನ್ನು ಅನುಮತಿಯಿಲ್ಲದೆ ಪ್ರವೇಶಿಸಬಹುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಜನವಾಸವಿಲ್ಲದ ಮತ್ತು ನಿಮ್ಮ ಯಾವುದಾದರೂ ಬಳಕೆಗೆ ಇರುವಂತಹ ಮನೆಗಳನ್ನು (ಅನುಮತಿ ವಿನಾ) ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ನೀವು ಬಹಿರಂಗಪಡಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ. [ಅನ್ನೂರ್: 29].
ಪ್ರಾಣಿದಯೆಯ ಶಿಷ್ಟಾಚಾರಗಳು:
ಪ್ರಶ್ನೆ 21: ಪ್ರಾಣಿದಯೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಪ್ರಾಣಿಗಳಿಗೆ ಆಹಾರ ಮತ್ತು ಪಾನೀಯವನ್ನು ನೀಡುವುದು.
- ಹದೀಸ್ನಲ್ಲಿ ಹೀಗಿದೆ: ಅವರು ಕೇಳಿದರು: "ಅಲ್ಲಾಹನ ಸಂದೇಶವಾಹಕರೇ, ಪ್ರಾಣಿಗಳ ವಿಷಯದಲ್ಲಿಯೂ ನಮಗೆ ಪುಣ್ಯ ಸಿಗುವುದೇ?" ಅವರು ಹೇಳಿದರು: "ಜೀವವಿರುವ ಪ್ರತಿಯೊಂದು ಜೀವಿಯಲ್ಲಿಯೂ ಪುಣ್ಯವಿದೆ."
- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಟ್ಟೆ ಬೆನ್ನಿಗೆ ಅಂಟಿಹೋಗಿದ್ದ ಒಂದು ಒಂಟೆಯ ಬಳಿಯಿಂದ ಹಾದುಹೋದಾಗ ಹೇಳಿದರು: "ಈ ಪ್ರಾಣಿಗಳ ವಿಷಯದಲ್ಲಿ ಅಲ್ಲಾಹುವನ್ನು ಭಯಪಡಿರಿ."
2. ದಯೆ ಮತ್ತು ಸೌಮ್ಯತೆ ತೋರುವುದು; ಮತ್ತು ಅದಕ್ಕೆ ಹೊರಲಾಗದ ಹೊರೆಯನ್ನು ಹೊರಿಸದಿರುವುದು.
- ಹದೀಸ್ನಲ್ಲಿ: ಪ್ರವಾದಿ ﷺ ರವರು ಹೇಳಿದರು: "ಈ ಒಂಟೆಯ ಯಜಮಾನ ಯಾರು? ಈ ಒಂಟೆ ಯಾರಿಗೆ ಸೇರಿದ್ದು?" ಆಗ ಅನ್ಸಾರ್ಗಳ ಪೈಕಿ ಒಬ್ಬ ಯುವಕ ಬಂದು, "ಓ ಅಲ್ಲಾಹನ ಸಂದೇಶವಾಹಕರೇ! ಇದು ನನಗೆ ಸೇರಿದ್ದು" ಎಂದು ಹೇಳಿದರು. ಆಗ ಅವರು ಹೇಳಿದರು: "ಅಲ್ಲಾಹು ನಿನಗೆ ಒಡೆಯನನ್ನಾಗಿ ಮಾಡಿರುವ ಈ ಪ್ರಾಣಿಯ ವಿಷಯದಲ್ಲಿ ನೀನು ಅಲ್ಲಾಹನಿಗೆ ಭಯಪಡುವುದಿಲ್ಲವೇ? ಯಾಕೆಂದರೆ, ನೀನು ಅದನ್ನು ಹಸಿವಿನಿಂದಿಡುತ್ತೀ ಮತ್ತು ಅದರಿಂದ ನಿರಂತರವಾಗಿ ದುಡಿಸಿಕೊಳ್ಳುತ್ತೀ ಎಂದು ಅದು ನನ್ನೊಡನೆ ದೂರಿದೆ." 'ತುದ್ಇಬುಹು' ಎಂದರೆ 'ಅದು ಅವನನ್ನು ದಣಿಸುತ್ತದೆ' ಎಂದರ್ಥ.
3. ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಹಿಂಸಿಸುವುದು ಅಥವಾ ತೊಂದರೆ ನೀಡುವುದರಿಂದ ದೂರವಿರುವುದು.
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಖದ ಮೇಲೆ ಬರೆ ಹಾಕಲಾಗಿದ್ದ ಒಂದು ಕತ್ತೆಯ ಬಳಿ ಹಾದುಹೋದರು, ಆಗ ಹೇಳಿದರು: «ಪ್ರಾಣಿಯ ಮುಖದ ಮೇಲೆ ಬರೆ ಹಾಕುವವನನ್ನು ಅಥವಾ ಅದರ ಮುಖಕ್ಕೆ ಹೊಡೆಯುವವನನ್ನು ನಾನು ಶಪಿಸಿದ್ದೇನೆ ಎಂಬುದು ನಿಮಗೆ ತಲುಪಿಲ್ಲವೇ?» ಅವರು ಅದನ್ನು ನಿಷೇಧಿಸಿದರು.
ಕ್ರೀಡೆಯ ಶಿಷ್ಟಾಚಾರಗಳು:
ಪ್ರಶ್ನೆ 22: ಕ್ರೀಡೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಮತ್ತು ಅವನ ಸಂಪ್ರೀತಿಗೆ ಪಾತ್ರನಾಗಲು ಶಕ್ತಿಯನ್ನು ಪಡೆಯುವುದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತೇನೆಂದು ನಿಯ್ಯತ್ ಮಾಡುವುದು.
2. ನಮಾಝಿನ ಸಮಯದಲ್ಲಿ ಆಡದಿರುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ. ಅವರು ಯಾರೆಂದರೆ ತಮ್ಮ ನಮಾಝ್ಗಳ ಬಗ್ಗೆ ಅಲಕ್ಷ್ಯರಾಗಿರುವವರು [ಅಲ್ ಮಾವೂನ್:4-5].
3. ಹುಡುಗರು ಮತ್ತು ಹುಡುಗಿಯರು ಜೊತೆಗೂಡಿ ಆಡದಿರುವುದು.
4. ‘ಔರತ್’ (ದೇಹದ ನಗ್ನ ಭಾಗಗಳನ್ನು) ಮುಚ್ಚುವ ಕ್ರೀಡಾ ಉಡುಪುಗಳನ್ನು ಮಾತ್ರ ಧರಿಸುವುದು.
5. ಮುಖಕ್ಕೆ ಹೊಡೆಯುವುದು ಅಥವಾ ‘ಔರತ್’ (ದೇಹದ ನಗ್ನ ಭಾಗಗಳನ್ನು) ಪ್ರದರ್ಶಿಸುವಂತಹ ನಿಷಿದ್ಧ ಕ್ರೀಡೆಗಳನ್ನು ಆಡದಿರುವುದು.
ಹದೀಸ್ನಲ್ಲಿ: “ನಿಮ್ಮಲ್ಲಿ ಯಾರಾದರೂ ತನ್ನ ಸಹೋದರನೊಂದಿಗೆ ಕಾದಾಡಿದರೆ, ಅವನು ಮುಖವನ್ನು ವರ್ಜಿಸಲಿ.”
ಹಾಸ್ಯದ ಶಿಷ್ಟಾಚಾರಗಳು:
ಪ್ರಶ್ನೆ 23: ಹಾಸ್ಯದ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಹಾಸ್ಯ ಮಾಡುವಾಗ ಸತ್ಯ ಹೇಳುವುದು ಮತ್ತು ಸುಳ್ಳು ಹೇಳದಿರುವುದು.
- ಹದೀಸ್ನಲ್ಲಿ ಹೀಗಿದೆ: “ಜನರನ್ನು ನಗಿಸಲು ಸುಳ್ಳು ಹೇಳುವವನಿಗೆ ವೈಲ್, ಅವನಿಗೆ ವೈಲ್, ಅವನಿಗೆ ವೈಲ್”
2. ಹಾಸ್ಯವು ಅಪಹಾಸ್ಯ, ಮಾನಹಾನಿ ಮತ್ತು ಬೆದರಿಕೆಗಳಿಂದ ಮುಕ್ತವಾಗಿರುವುದು.
- ಪ್ರವಾದಿ ﷺ ರವರು ಹೇಳಿದರು: "ಒಬ್ಬ ಮುಸ್ಲಿಮನು ಇನ್ನೊಬ್ಬ ಮುಸ್ಲಿಮನನ್ನು ಹೆದರಿಸುವುದು ಧರ್ಮಸಮ್ಮತವಲ್ಲ."
3. ಹೆಚ್ಚು ಹೆಚ್ಚು ಹಾಸ್ಯ ಮಾಡದಿರುವುದು.
- ಪ್ರವಾದಿ ﷺ ರವರು ಹೇಳಿದರು: "ಅತಿಯಾಗಿ ನಗಬೇಡ; ಏಕೆಂದರೆ ಅತಿಯಾದ ನಗು ಹೃದಯವನ್ನು ಸಾಯಿಸುತ್ತದೆ"
ಸೀನುವುದರ ಶಿಷ್ಟಾಚಾರಗಳು:
ಪ್ರಶ್ನೆ 24: ಸೀನುವುದರ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಸೀನುವಾಗ ಕೈ, ಬಟ್ಟೆ ಅಥವಾ ಕರವಸ್ತ್ರವನ್ನು ಬಳಸುವುದು.
2. ಸೀನಿದ ನಂತರ ಅಲ್ಲಾಹನನ್ನು ಸ್ತುತಿಸುವುದು: "ಅಲ್-ಹಮ್ದುಲಿಲ್ಲಾಹ್" (ಅಲ್ಲಾಹನಿಗೆ ಸ್ತುತಿ) ಎಂದು ಹೇಳುವುದು.
3. ಸೀನಿದವನ ಸಹೋದರ ಅಥವಾ ಸಹಚರ ಹೀಗೆ ಹೇಳಬೇಕು: "ಯರ್ಹಮುಕಲ್ಲಾಹ್" (ಅಲ್ಲಾಹನು ನಿನ್ನ ಮೇಲೆ ಕರುಣೆ ತೋರಲಿ).
ಸೀನಿದವನು ಅದಕ್ಕೆ ಹೀಗೆ ಉತ್ತರಿಸಬೇಕು: "ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್" (ಅಲ್ಲಾಹನು ನಿಮಗೆ ಮಾರ್ಗದರ್ಶನ ಮಾಡಲಿ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲಿ)
ಆಕಳಿಕೆಯ ಶಿಷ್ಟಾಚಾರಗಳು:
ಪ್ರಶ್ನೆ 25: ಆಕಳಿಕೆಯ ಶಿಷ್ಟಾಚಾರಗಳು ಯಾವುವು?
ಉತ್ತರ: 1. ಆಕಳಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುವುದು.
ಹದೀಸ್ನಲ್ಲಿ: "ಆಕಳಿಕೆಯು ಶೈತಾನನಿಂದ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅದನ್ನು ಸಾಧ್ಯವಾದಷ್ಟು ತಡೆದುಕೊಳ್ಳಲಿ."
2. "ಆಹ್ ಆಹ್" ಎಂದು ಸದ್ದು ಮಾಡದಿರುವುದು.
- ಹದೀಸ್ನಲ್ಲಿ ಹೀಗಿದೆ: "ಆಹ್, ಆಹ್" ಎಂದು ಹೇಳಬಾರದು. ಏಕೆಂದರೆ ನಿಮ್ಮಲ್ಲೊಬ್ಬನು ಬಾಯಿ ತೆರೆದಾಗ, ಖಂಡಿತವಾಗಿಯೂ ಶೈತಾನನು ಅವನನ್ನು ನೋಡಿ ನಗುತ್ತಾನೆ."
3. ಬಾಯಿಯ ಮೇಲೆ ಕೈ ಇಡುವುದು.
- ಹದೀಸ್ನಲ್ಲಿ ಹೀಗಿದೆ: "ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ."
ಪ್ರಾರ್ಥನೆಯ ಶಿಷ್ಟಾಚಾರಗಳು:
ಪ್ರಶ್ನೆ 26. ಪ್ರಾರ್ಥನೆಯ ಶಿಷ್ಟಾಚಾರ ಯಾವುದು?
ಉತ್ತರ: 1. ಅಲ್ಲಾಹನ ಸ್ತುತಿ ಮತ್ತು ಪ್ರಶಂಸೆಯೊಂದಿಗೆ ಪ್ರಾರಂಭಿಸುವುದು.
೨. ಪ್ರವಾದಿ ﷺ ರವರ ಮೇಲೆ ಸ್ವಲಾತ್ ಹೇಳುವುದು.
ಹದೀಸ್ನಲ್ಲಿರುವಂತೆ ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಹೇಳಿದರು: "«ನೀವು ನಮಾಝ್ನಲ್ಲಿ ಕುಳಿತುಕೊಂಡಾಗ, ಅಲ್ಲಾಹುವನ್ನು ಅವನಿಗೆ ಯೋಗ್ಯವಾದ ರೀತಿಯಲ್ಲಿ ಸ್ತುತಿಸಿ, ನನ್ನ ಮೇಲೆ ಸ್ವಲಾತ್ ಹೇಳಿ, ನಂತರ ಅವನಲ್ಲಿ ಪ್ರಾರ್ಥಿಸಿ»"
3. ಪ್ರಾರ್ಥಿಸುವಾಗ ಕೈಗಳನ್ನು ಎತ್ತುವುದು.
- ಪ್ರವಾದಿ صلى الله عليه وسلم ರವರು ಹೇಳಿದರು: "ಖಂಡಿತವಾಗಿಯೂ ಅನುಗ್ರಹಪೂರ್ಣನಾಗಿರುವ ನಿಮ್ಮ ಪರಿಪಾಲಕನು ಬಹಳ ವಿನಯಶೀಲ ಹಾಗೂ ಉದಾರಿಯಾಗಿರುವನು. ದಾಸನು ತನ್ನ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದಾಗ ಅವುಗಳನ್ನು ಶೂನ್ಯವಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ."
೪. ತೌಬಾ ಮತ್ತು ಪಾಪವನ್ನು ಒಪ್ಪಿಕೊಳ್ಳುವುದು.
- ಮೂಸಾ عليه السلام ರವರ ಪ್ರಾರ್ಥನೆಯಲ್ಲಿ: ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ಆದ್ದರಿಂದ ನನ್ನನ್ನು ಕ್ಷಮಿಸು.” ಆಗ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. [ಅಲ್-ಕಸಸ್: 16]
5. ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವುದು ಎಂದರೆ, ಅದನ್ನು ಹೆಚ್ಚಿಸುವುದು ಮತ್ತು ಪುನರಾವರ್ತಿಸುವುದು.
6. ಉತ್ತರಕ್ಕಾಗಿ ಆತುರಪಡದಿರುವುದು.
7. ಪಾಪ ಮಾಡುವುದಕ್ಕಾಗಿ ಅಥವಾ ಕುಟುಂಬ ಸಂಬಂಧ ಕಡಿಯುವುದಕ್ಕಾಗಿ ಪ್ರಾರ್ಥಿಸಬಾರದು.
- ಹದೀಸ್ನಲ್ಲಿ ಹೀಗಿದೆ: «ದಾಸನೊಬ್ಬನು ಪಾಪಕ್ಕಾಗಿ ಅಥವಾ ರಕ್ತ ಸಂಬಂಧವನ್ನು ಮುರಿಯುವುದಕ್ಕಾಗಿ ಪ್ರಾರ್ಥಿಸದ ಮತ್ತು ಆತುರಪಡದ ತನಕ, ಅವನ ಪ್ರಾರ್ಥನೆಗೆ ಉತ್ತರ ದೊರೆಯುತ್ತಲೇ ಇರುತ್ತದೆ.» ಸಹಚರರು ಕೇಳಿದರು: «ಓ ಅಲ್ಲಾಹನ ಸಂದೇಶವಾಹಕರೇ, ಆತುರಪಡುವುದು ಎಂದರೇನು?» ಪ್ರವಾದಿಯವರು ಹೇಳಿದರು: «'ನಾನು ಪ್ರಾರ್ಥಿಸಿದೆನು, ಮತ್ತೆ ಪ್ರಾರ್ಥಿಸಿದೆನು. ಆದರೆ ನನಗೆ ಉತ್ತರ ದೊರೆಯುತ್ತಿರುವುದನ್ನು ನಾನು ಕಾಣಲಿಲ್ಲ' ಎಂದು ಅವನು ಹೇಳುವುದು. ಆಗ ಅವನು ಹತಾಶನಾಗಿ ಪ್ರಾರ್ಥಿಸುವುದನ್ನು ಬಿಟ್ಟುಬಿಡುತ್ತಾನೆ.»
8. ಪ್ರಾರ್ಥನೆಯಲ್ಲಿ ಧ್ವನಿಯನ್ನು ತಗ್ಗಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ವಿನಯದಿಂದ ಮತ್ತು ರಹಸ್ಯವಾಗಿ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. [ಅಲ್-ಅಅ್ರಾಫ್: 55].
9. ಪ್ರಾರ್ಥಿಸುವ ವೇಳೆ ಹೃದಯವನ್ನು ಸಾನಿಧ್ಯಕ್ಕೆ ತರಬೇಕು.
- ಹದೀಸ್ನಲ್ಲಿ: «ಉತ್ತರವು ಖಂಡಿತವಾಗಿಯೂ ಸಿಗುತ್ತದೆಂಬ ದೃಢ ವಿಶ್ವಾಸವಿಟ್ಟು ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ, ಮತ್ತು ಅಲ್ಲಾಹನು ಅಜಾಗರೂಕ, ಚಂಚಲ ಹೃದಯದಿಂದ ಬಂದ ಪ್ರಾರ್ಥನೆಗೆ ಉತ್ತರ ನೀಡುವುದಿಲ್ಲವೆಂದು ತಿಳಿದುಕೊಳ್ಳಿರಿ.»
10. ಪರಮೋನ್ನತ ಅಲ್ಲಾಹನಿಗೆ ನಿಷ್ಕಳಂಕತೆ, ಹಾಗೂ ಕಷ್ಟ ಮತ್ತು ಅನುಕೂಲದ ಎರಡೂ ಸಮಯಗಳಲ್ಲಿ ಏಕೈಕ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಮಸೀದಿಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ. [ಅಲ್-ಜಿನ್ನ್:18]
11. ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಗುಣಲಕ್ಷಣಗಳ ಮೂಲಕ ಪ್ರಾರ್ಥಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ. [ಅಲ್-ಅಅರಾಫ್:180]
12. ಕಿಬ್ಲಾ ದೆಡೆಗೆ ತಿರುಗುವುದು. ಹದೀಸ್ನಲ್ಲಿ ಹೀಗಿದೆ: «ಅವರು ಕಿಬ್ಲಾದ ಕಡೆಗೆ ಮುಖ ಮಾಡಿ, ಕೈಗಳನ್ನು ಚಾಚಿ, ತಮ್ಮ ಮೇಲುಹೊದಿಕೆಯು ಭುಜಗಳಿಂದ ಕೆಳಗೆ ಬೀಳುವವರೆಗೆ ತಮ್ಮ ಪ್ರಭುವಿಗೆ ಮೊರೆಯಿಡುತ್ತಲೇ ಇದ್ದರು.»
13. ಆಹಾರ ಮತ್ತು ಬಟ್ಟೆ-ಬರೆ ಪರಿಶುದ್ಧವಾಗಿರುವುದು. ಹದೀಸ್ನಲ್ಲಿ: ನಂತರ ಅವರು ದೀರ್ಘ ಯಾತ್ರೆಯಲ್ಲಿರುವ, ಕೆದರಿದ ಕೂದಲಿನ ಮತ್ತು ಧೂಳು ಮೆತ್ತಿಕೊಂಡಿರುವ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸಿದರು. ಅವನು ಆಕಾಶಕ್ಕೆ ತನ್ನ ಕೈಗಳನ್ನು ಚಾಚುತ್ತಾ, “ಓ ನನ್ನ ಪ್ರಭುವೇ, ಓ ನನ್ನ ಪ್ರಭುವೇ!” ಎಂದು ಪ್ರಾರ್ಥಿಸುತ್ತಾನೆ. ಆದರೆ ಅವನ ಆಹಾರವು ನಿಷಿದ್ಧವಾಗಿದೆ, ಅವನ ಪಾನೀಯವು ನಿಷಿದ್ಧವಾಗಿದೆ, ಅವನ ಬಟ್ಟೆಬರೆಗಳು ನಿಷಿದ್ಧವಾಗಿವೆ ಮತ್ತು ಅವನು ನಿಷಿದ್ಧದಲ್ಲೇ ಬೆಳೆದಿದ್ದಾನೆ. ಹೀಗಿರುವಾಗ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಾದರೂ ಹೇಗೆ?
ಪವಿತ್ರ ಕುರ್ಆನ್ ಪಠಣದ ಶಿಷ್ಟಾಚಾರಗಳು:
ಪ್ರಶ್ನೆ 27: ಕುರ್ಆನ್ ಪಠಣದ ಶಿಷ್ಟಾಚಾರಗಳು ಯಾವುವು?
ಉತ್ತರ: 1. ವುದೂ ನಿರ್ವಹಿಸಿದ ನಂತರ ಶುದ್ಧಾವಸ್ಥೆಯಲ್ಲಿ ಪಠಿಸುವುದು.
2. ಮರ್ಯಾದೆಯೊಂದಿಗೆ ಗಂಭೀರವಾಗಿ ಕುಳಿತುಕೊಳ್ಳುವುದು.
3. ಪಠಣದ ಪ್ರಾರಂಭದಲ್ಲಿ ಶೈತಾನನಿಂದ ಅಲ್ಲಾಹನಲ್ಲಿ ಅಭಯಕೋರುವುದು. ಅಲ್ಲಾಹು ಹೇಳುತ್ತಾನೆ: ನೀವು ಕುರ್ಆನ್ ಪಠಿಸುವಾಗ ಬಹಿಷ್ಕೃತ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ. [ಅನ್ನಹ್ಲ್: 98].
4. ಅರ್ಥವರಿತು ಪಠಣ ಮಾಡುವುದು. ಅಲ್ಲಾಹು ಹೇಳುತ್ತಾನೆ: ಅವರು ಕುರ್ಆನನ್ನು ಮನನ ಮಾಡುವುದಿಲ್ಲವೇ? ಅಥವಾ (ಅವರ) ಹೃದಯಗಳಿಗೆ ಬೀಗ ಜಡಿಯಲಾಗಿದೆಯೇ? [ಮುಹಮ್ಮದ್: 24]
*******
ಗುಣನಡತೆಯ ವಿಭಾಗ
ಗುಣನಡತೆಯ ಶಾಸ್ತ್ರ:
ನಡವಳಿಕೆ: ಇದೊಂದು ಜ್ಞಾನವಾಗಿದ್ದು, ಇದು ಒಳ್ಳೆಯ ಮತ್ತು ಕೆಟ್ಟದ್ದರ ಅರ್ಥವನ್ನು ತಿಳಿಸುತ್ತದೆ ಮತ್ತು ಅಲ್ಲಾಹುವಿನೊಂದಿಗೆ ಹಾಗೂ ಆತನ ಸೃಷ್ಟಿಗಳೊಂದಿಗೆ ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಪ್ರಶ್ನೆ 1. ಉತ್ತಮ ಗುಣನಡತೆಯ ಶ್ರೇಷ್ಠತೆ ಯಾವುದು?
ಉತ್ತರ: ಪ್ರವಾದಿ ﷺ ರವರು ಹೇಳಿದರು: “ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ಸತ್ಯ ವಿಶ್ವಾಸಿಗಳಾಗಿದ್ದಾರೆ."
ಪ್ರಶ್ನೆ 2. ನಾವೇಕೆ ಇಸ್ಲಾಮಿ ಗುಣನಡತೆಗಳನ್ನು ಅಳವಡಿಸಿಕೊಳ್ಳಬೇಕು?
ಉತ್ತರ: 1. ಏಕೆಂದರೆ ಅದು ಅಲ್ಲಾಹನ ಪ್ರೀತಿಗೆ ಕಾರಣವಾಗುತ್ತದೆ.
ಹದೀಸ್ನಲ್ಲಿ: “ಅಲ್ಲಾಹನ ದಾಸರಲ್ಲಿ ಅಲ್ಲಾಹನಿಗೆ ಅತ್ಯಂತ ಪ್ರಿಯನಾದವನೆಂದರೆ ಅವರಲ್ಲಿ ಅತ್ಯುತ್ತಮ ಸ್ವಭಾವವುಳ್ಳವನು.”
2. ಜನರ ಪ್ರೀತಿಗೆ ಕಾರಣವಾಗುತ್ತದೆ.
3. ಅದು ತಕ್ಕಡಿಯಲ್ಲಿ ಅತಿಹೆಚ್ಚು ಭಾರ ತೂಗುತ್ತದೆ.
- ಹದೀಸ್ನಲ್ಲಿ: "ಪುನರುತ್ಥಾನ ದಿನದಂದು ತಕ್ಕಡಿಯಲ್ಲಿ ಅತ್ಯಂತ ಹೆಚ್ಚು ಭಾರವಿರುವ ವಸ್ತು ಉತ್ತಮ ಗುಣವಾಗಿದೆ."
4. ಉತ್ತಮ ಗುಣ ನಡತೆಯಿಂದ ಪ್ರತಿಫಲಗಳು ಹಲವು ಪಟ್ಟು ಹೆಚ್ಚಾಗುತ್ತವೆ.
- ಹದೀಸ್ನಲ್ಲಿ ಹೀಗಿದೆ: "ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ರಾತ್ರಿಯಲ್ಲಿ ನಮಾಝ್ ಮಾಡುವವನ ಮತ್ತು ಹಗಲಿನಲ್ಲಿ ಉಪವಾಸ ಆಚರಿಸುವವನ ಪದವಿಗಳನ್ನು ಪಡೆಯುತ್ತಾನೆ."
5. ಅದು ಪರಿಪೂರ್ಣ ಸತ್ಯವಿಶ್ವಾಸದ ಚಿಹ್ನೆಯಾಗಿದೆ.
- ಹದೀಸ್ನಲ್ಲಿ ಹೀಗಿದೆ: “ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ಸತ್ಯ ವಿಶ್ವಾಸಿಗಳಾಗಿದ್ದಾರೆ."
ಪ್ರಶ್ನೆ 3. ನಾವು ಗುಣನಡತೆಗಳನ್ನು ಎಲ್ಲಿಂದ ಪಡೆಯಬೇಕು?
ಉತ್ತರ: ಪವಿತ್ರ ಕುರ್ಆನ್ನಿಂದ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಈ ಕುರ್ಆನ್ ಅತ್ಯಂತ ನೇರವಾಗಿರುವ ಮಾರ್ಗದೆಡೆಗೆ ಮುನ್ನಡೆಸುತ್ತದೆ.” [ಅಲ್-ಇಸ್ರಾ:9].
ಪ್ರವಾದಿಯವರ ಸುನ್ನತ್ತಿನಿಂದ. ಪ್ರವಾದಿ(ಸ) ರವರು ಹೇಳಿದರು: “ನಿಶ್ಚಯವಾಗಿಯೂ ಉತ್ತಮ ಗುಣನಡತೆಗಳ ಪೂರ್ತೀಕರಣಕ್ಕಾಗಿ ನನ್ನನ್ನು ಕಳುಹಿಸಲಾಗಿದೆ.”
ಪ್ರಶ್ನೆ 4. ಇಹ್ಸಾನ್(ಉತ್ತಮ ವರ್ತನೆ) ಎಂದರೇನು ಮತ್ತು ಅದರ ರೂಪಗಳು ಯಾವುವು?
ಉತ್ತರ: ಇಹ್ಸಾನ್ ಎಂದರೆ ಪ್ರತಿಯೊಂದು ಕಾರ್ಯದಲ್ಲಿ ಅಲ್ಲಾಹನಿಗಾಗಿ ನಿಷ್ಕಪಟತೆಯನ್ನು ಹೊಂದಿರುವುದು ಮತ್ತು ಸಹಜೀವಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸುವುದು.
ಪ್ರವಾದಿ ﷺ ರವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಇಹ್ಸಾನ್ ಅನ್ನು (ಉತ್ತಮ ರೀತಿಯಿಂದ ವರ್ತಿಸುವುದನ್ನು)ಕಡ್ಡಾಯಗೊಳಿಸಿದ್ದಾನೆ.”
ಇಹ್ಸಾನ್ನ (ಉತ್ತಮ ವರ್ತನೆಯ) ರೂಪಗಳು:
✔ ಅಲ್ಲಾಹನ ಆರಾಧನೆಯಲ್ಲಿ ಇಹ್ಸಾನ್ ಮಾಡುವುದು. ಅಂದರೆ ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವುದು.
✔ ಮಾತಾಪಿತರಿಗೆ ಇಹ್ಸಾನ್ ಮಾಡುವುದು. ಅಂದರೆ ಮಾತು ಮತ್ತು ಕ್ರಿಯೆಯಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸುವುದು.
✔ ರಕ್ತ ಸಂಬಂಧಿಕರಿಗೆ ಮತ್ತು ಆಪ್ತ ಸಂಬಂಧಿಕರಿಗೆ ಇಹ್ಸಾನ್ ಮಾಡುವುದು.
✔ ನೆರೆಹೊರೆಯವರಿಗೆ ಇಹ್ಸಾನ್ ಮಾಡುವುದು.
✔ ಅನಾಥರಿಗೆ ಮತ್ತು ಬಡವರಿಗೆ ಇಹ್ಸಾನ್ ಮಾಡುವುದು.
✔ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದವರಿಗೆ ಇಹ್ಸಾನ್ ಮಾಡುವುದು.
✔ ತರ್ಕಿಸುವಾಗ ಇಹ್ಸಾನ್ ಮಾಡುವುದು.
✔ ಮಾತನಾಡುವಾಗ ಇಹ್ಸಾನ್ ಮಾಡುವುದು
✔ ಪ್ರಾಣಿಗಳಿಗೆ ಇಹ್ಸಾನ್ ಮಾಡುವುದು.
ಪ್ರಶ್ನೆ 5. ಇಹ್ಸಾನ್ಗೆ (ಉತ್ತಮ ವರ್ತನೆಗೆ) ವಿರುದ್ಧವಾದುದು ಯಾವುದು?
ಉತ್ತರ: ಇಸಾಅತ್ (ಕೆಟ್ಟ ವರ್ತನೆ) ಇಹ್ಸಾನ್ಗೆ ವಿರುದ್ಧವಾಗಿದೆ.
ಇಸಾಅತ್ಗೆ ಉದಾಹರಣೆಗಳು: * ಅಲ್ಲಾಹನ ಆರಾಧನೆಯಲ್ಲಿ ನಿಷ್ಕಳಂಕತೆಯಿಲ್ಲದಿರುವುದು.
* ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು.
* ಕುಟುಂಬ ಸಂಬಂಧವನ್ನು ಕಡಿಯುವುದು.
* ನೆರೆಯವರೊಂದಿಗೆ ಕೆಟ್ಟದಾಗಿ ವರ್ತಿಸುವುದು.
* ಬಡವರು ಮತ್ತು ನಿರ್ಗತಿಕರೊಂದಿಗೆ ತನ್ನ ಕೆಟ್ಟ ಮಾತು ಮತ್ತು ವರ್ತನೆಗಳಿಂದ ಕೆಟ್ಟದಾಗಿ ವರ್ತಿಸುವುದು.
ಪ್ರಶ್ನೆ 6: ಅಮಾನತ್ನ (ನಂಬಿಕಾರ್ಹತೆಯ) ವಿಧಗಳು ಮತ್ತು ರೂಪಗಳು ಯಾವುವು?
ಉತ್ತರ: 1. ಸರ್ವಶಕ್ತನಾದ ಅಲ್ಲಾಹನ ಹಕ್ಕುಗಳನ್ನು ಸಂರಕ್ಷಿಸುವುದು ನಮ್ಮ ಮೇಲೆ ಅಮಾನತ್ ಆಗಿದೆ.
ಅದರ ರೂಪಗಳು: ನಮಾಝ್, ಝಕಾತ್, ಉಪವಾಸ, ಹಜ್ಜ್ ಮುಂತಾದ ಅಲ್ಲಾಹು ನಮ್ಮ ಮೇಲೆ ಕಡ್ಡಾಯಗೊಳಿಸಿದ ಆರಾಧನಾ ಕರ್ಮಗಳನ್ನು ನಿರ್ವಹಿಸುವುದು.
2. ಮಾನವರ ಹಕ್ಕುಗಳನ್ನು ಸಂರಕ್ಷಿಸುವುದೂ ಸಹ ನಮ್ಮ ಮೇಲೆ ಅಮಾನತ್ ಆಗಿದೆ.
· ಜನರ ಘನತೆ-ಗೌರವಗಳನ್ನು ಸಂರಕ್ಷಿಸುವುದು.
· ಜನರ ಆಸ್ತಿಪಾಸ್ತಿಗಳನ್ನು ಸಂರಕ್ಷಿಸುವುದು.
· ಜನರ ಜೀವವನ್ನು ಸಂರಕ್ಷಿಸುವುದು.
· ಜನರ ರಹಸ್ಯಗಳನ್ನು ಸಂರಕ್ಷಿಸುವುದು ಮತ್ತು ಜನರು ನಿಮ್ಮ ಮೇಲೆ ನಂಬಿಕೆಯಿಡುವ ಎಲ್ಲಾ ವಿಷಯಗಳಲ್ಲೂ ನಂಬಿಗಸ್ತನಾಗಿರುವುದು.
ಯಶಸ್ವಿಯಾದವರ ಗುಣಗಳನ್ನು ವಿವರಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವರು ಯಾರೆಂದರೆ, ತಮ್ಮ ವಿಶ್ವಸ್ಥತೆಯನ್ನು ಮತ್ತು ಕರಾರುಗಳನ್ನು ಕಾಪಾಡುವವರು. [ಅಲ್-ಮೂಮಿನೂನ್:8]
ಪ್ರಶ್ನೆ 5. ಅಮಾನತ್ಗೆ (ನಂಬಿಕಾರ್ಹತೆಗೆ) ವಿರುದ್ಧವಾದುದು ಯಾವುದು?
ಉತ್ತರ: ಖಿಯಾನತ್ (ನಂಬಿಕೆದ್ರೋಹ). ಅಂದರೆ ಅಲ್ಲಾಹನ ಹಕ್ಕುಗಳನ್ನು ಮತ್ತು ಮನುಷ್ಯರ ಹಕ್ಕುಗಳನ್ನು ನೆರವೇರಿಸದಿರುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡಬೇಡಿ. ನಿಮ್ಮ ಮೇಲೆ ವಿಶ್ವಾಸವಿಡಲಾದ ವಿಷಯಗಳಲ್ಲೂ ವಿಶ್ವಾಸದ್ರೋಹ ಮಾಡಬೇಡಿ. (ಅದರ ಫಲಿತಾಂಶವೇನೆಂದು) ನೀವು ತಿಳಿದಿದ್ದೂ ಸಹ. [ಅಲ್-ಅನ್ಫಾಲ್:27]
ಪ್ರವಾದಿ ﷺ ರವರು ಹೇಳಿದರು: “ಕಪಟಿಗಳಿಗೆ ಮೂರು ಲಕ್ಷಣಗಳಿವೆ.” ಅವುಗಳಲ್ಲೊಂದು: “ಅವನ ಮೇಲೆ ನಂಬಿಕೆಯಿಟ್ಟರೆ ಅವನು ನಂಬಿಕೆದ್ರೋಹ ಮಾಡುತ್ತಾನೆ.”
ಪ್ರಶ್ನೆ 4. ಸತ್ಯವಂತಿಕೆಯ ಗುಣ ಯಾವುದು?
ಉತ್ತರ: ಸತ್ಯವಂತಿಕೆ ಎಂದರೆ ನಿಜಸ್ಥಿತಿಗೆ ಅನುಗುಣವಾಗಿ ಅಥವಾ ಇದ್ದದ್ದು ಇದ್ದಂತೆ ಹೇಳುವುದು.
ಅದರ ರೂಪಗಳು:
ಜನರೊಂದಿಗೆ ಮಾತನಾಡುವಾಗ ಸತ್ಯ ಹೇಳುವುದು.
ಮಾತು ಕೊಟ್ಟರೆ ಅದನ್ನು ಪಾಲಿಸುವುದು.
ಪ್ರತಿಯೊಂದು ಮಾತು ಮತ್ತು ಕಾರ್ಯದಲ್ಲಿ ಸತ್ಯವಂತನಾಗಿರುವುದು.
ಪ್ರವಾದಿ ﷺ ರವರು ಹೇಳಿದರು: “ನಿಶ್ಚಯವಾಗಿಯೂ, ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿಯು ನಿರಂತರ ಸತ್ಯವನ್ನೇ ಹೇಳುತ್ತಾ ಇದ್ದರೆ ಅವನು ಅಲ್ಲಾಹನ ಬಳಿ ಸತ್ಯವಂತನೆಂದು ದಾಖಲಿಸಲ್ಪಡುತ್ತಾನೆ.”
ಪ್ರಶ್ನೆ 9. ಸತ್ಯಕ್ಕೆ ವಿರುದ್ಧವಾದುದು ಯಾವುದು?
ಉತ್ತರ: ಸುಳ್ಳು. ಅದು ನಿಜಸ್ಥಿತಿಗೆ ವಿರುದ್ಧವಾದುದು. ಉದಾಹರಣೆಗೆ: ಜನರೊಡನೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು, ಸುಳ್ಳು ಸಾಕ್ಷಿ ಹೇಳುವುದು.
- ಪ್ರವಾದಿ (ﷺ) ರವರು ಹೇಳಿದರು: “ನಿಶ್ಚಯವಾಗಿಯೂ ಸುಳ್ಳು ಕೆಡುಕಿನೆಡೆಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿ ಸುಳ್ಳು ಹೇಳುತ್ತಲೇ ಇದ್ದರೆ ಅಲ್ಲಾಹನ ಬಳಿ ಅವನು ಸುಳ್ಳುಗಾರನೆಂದು ದಾಖಲಿಸಲ್ಪಡುತ್ತಾನೆ.”
ಪ್ರವಾದಿ ﷺ ರವರು ಹೇಳಿದರು: “ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ. ಅವುಗಳಲ್ಲಿ ಎರಡು ಹೀಗಿವೆ: ಮಾತನಾಡಿದರೆ ಸುಳ್ಳು ಹೇಳುವುದು ಮತ್ತು ವಾಗ್ದಾನ ಮಾಡಿದರೆ ಉಲ್ಲಂಘಿಸುವುದು.”
ಪ್ರಶ್ನೆ 10: ತಾಳ್ಮೆಯ ವಿಧಗಳು ಯಾವುವು?
ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸುವುದು.
- ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸುವುದು.
- ವೇದನಾಯುಕ್ತ ವಿಧಿ-ನಿರ್ಣಯಗಳಲ್ಲಿ ತಾಳ್ಮೆ ವಹಿಸುವುದು ಮತ್ತು ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ತುತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ. [ಆಲಿ ಇಮ್ರಾನ್:146].
ಪ್ರವಾದಿ ﷺ ರವರು ಹೇಳಿದರು: “ವಿಶ್ವಾಸಿಯ ಸಂಗತಿ ಅದ್ಭುತವಾಗಿದೆ! ಅವನ ಸಂಗತಿಗಳೆಲ್ಲವೂ ಅವನಿಗೆ ಒಳಿತೇ ಆಗಿವೆ. ಅದು ವಿಶ್ವಾಸಿಗಳಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೆ ಸಂತೋಷವಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೆ ಕಷ್ಟ ಬಂದರೆ ಅವನು ತಾಳ್ಮೆ ವಹಿಸುತ್ತಾನೆ. ಅದೂ ಕೂಡ ಅವನಿಗೆ ಒಳಿತಾಗಿದೆ.”
ಪ್ರಶ್ನೆ 11. ತಾಳ್ಮೆಗೆ ವಿರುದ್ಧವಾದುದು ಯಾವುದು?
ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸದಿರುವುದು, ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸದಿರುವುದು ಮತ್ತು ಮಾತು ಮತ್ತು ಕ್ರಿಯೆಯ ಮೂಲಕ ವಿಧಿ-ನಿರ್ಣಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು.
ಅದರ ರೂಪಗಳು:
- ಸಾವನ್ನು ಬಯಸುವುದು.
ಪ್ರವಾದಿ(ಸ) ರವರು ಹೇಳಿದರು: "ನಿಮ್ಮಲ್ಲಿ ಯಾರೂ ತಮಗೆ ಬಾಧಿಸಿದ ಸಂಕಷ್ಟದ ಕಾರಣದಿಂದ ಮರಣವನ್ನು ಬಯಸಬಾರದು. ಅನಿವಾರ್ಯವಾಗಿ ಬಯಸಲೇಬೇಕಾದರೆ, 'ಓ ಅಲ್ಲಾಹ್, ಜೀವನವು ನನಗೆ ಉತ್ತಮವಾಗಿರುವವರೆಗೆ ನನ್ನನ್ನು ಜೀವಂತವಾಗಿರಿಸು, ಮತ್ತು ಮರಣವು ನನಗೆ ಉತ್ತಮವಾಗುವುದಾದರೆ ನನಗೆ ಮರಣವನ್ನು ನೀಡು' ಎಂದು ಹೇಳಲಿ."
- ಮುಖಕ್ಕೆ ಬಡಿಯುವುದು.
- ಬಟ್ಟೆಗಳನ್ನು ಹರಿಯುವುದು.
- ಕೂದಲನ್ನು ಕೆದರುವುದು.
- ಸ್ವಯಂ ವಿನಾಶಕ್ಕಾಗಿ ಪ್ರಾರ್ಥಿಸುವುದು.
- ಪ್ರವಾದಿ ﷺ ರವರು ಹೇಳಿದರು: "ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ."
ಪ್ರವಾದಿ ﷺ ರವರು ಹೇಳಿದರು: “ಪರೀಕ್ಷೆಯ ಗಾತ್ರಕ್ಕೆ ಅನುಗುಣವಾಗಿ ಪ್ರತಿಫಲ ಇರುತ್ತದೆ. ಅಲ್ಲಾಹು ಒಂದು ಜನತೆಯನ್ನು ಪ್ರೀತಿಸಿದರೆ, ಅವರನ್ನು ಪರೀಕ್ಷಿಸುತ್ತಾನೆ. ಯಾರು ಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಸಂತೃಪ್ತಿಯಿದೆ. ಯಾರು ಅಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಅಸಂತೃಪ್ತಿಯಿದೆ."
ಪ್ರಶ್ನೆ 12. ಸಹಕಾರದ ಗುಣ ಎಂದರೇನು?
ಉತ್ತರ: ಸಹಕಾರ ಎಂದರೆ ಸತ್ಯ ಮತ್ತು ಒಳಿತಿನಲ್ಲಿ ಜನರೊಡನೆ ಸಹಕರಿಸುವುದು.
ಸಹಕಾರದ ರೂಪಗಳು:
o ಹಕ್ಕುಗಳನ್ನು ನೀಡುವುದರಲ್ಲಿ ಸಹಕರಿಸುವುದು.
o ಅನ್ಯಾಯವನ್ನು ತಡೆಗಟ್ಟುವುದರಲ್ಲಿ ಸಹಕರಿಸುವುದು.
o ಜನರ ಮತ್ತು ಬಡವರ ಅಗತ್ಯಗಳನ್ನು ಪೂರೈಸುವುದರಲ್ಲಿ ಸಹಕರಿಸುವುದು.
o ಎಲ್ಲಾ ಒಳಿತುಗಳಲ್ಲೂ ಸಹಕರಿಸುವುದು.
o ಪಾಪ, ತೊಂದರೆ ಮತ್ತು ದ್ವೇಷದ ಕಾರ್ಯದಲ್ಲಿ ಸಹಕರಿಸದಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ. [ಅಲ್-ಮಾಇದ:2].
ಪ್ರವಾದಿ ﷺ ರವರು ಹೇಳಿದರು: “ಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಗೆ ಪರಸ್ಪರ ಬಿಗಿಯಾಗಿ ಹಿಡಿದುಕೊಂಡ ಒಂದು ಕಟ್ಟಡದಂತೆ.”
ಪ್ರವಾದಿ ﷺ ರವರು ಹೇಳಿದರು: “ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮನ ಸಹೋದರ. ಅವನು ಅವನಿಗೆ ಅನ್ಯಾಯ ಮಾಡಲಾರ. ಅವನನ್ನು (ಅನ್ಯಾಯ ಮಾಡುವವನ ಕೈಗೆ) ಒಪ್ಪಿಸಲಾರ. ಯಾರು ತನ್ನ ಸಹೋದರನ ಅಗತ್ಯವನ್ನು ಪೂರೈಸುತ್ತಾನೋ ಅವನ ಅಗತ್ಯವನ್ನು ಅಲ್ಲಾಹು ಪೂರೈಸುವನು. ಯಾರು ಮುಸ್ಲಿಮನನ್ನು ಒಂದು ಕಷ್ಟದಿಂದ ಪಾರು ಮಾಡುತ್ತಾನೋ ಅದರ ಕಾರಣದಿಂದಾಗಿ ಅಲ್ಲಾಹು ಅವನನ್ನು ಪುನರುತ್ಥಾನ ದಿನದ ಕಷ್ಟಗಳಲ್ಲಿ ಸೇರಿದ ಒಂದು ಕಷ್ಟದಿಂದ ಪಾರು ಮಾಡುವನು. ಯಾರು ಒಬ್ಬ ಮುಸ್ಲಿಮನ ನ್ಯೂನತೆಯನ್ನು ಮರೆಮಾಚುತ್ತಾನೋ ಅವನ ನ್ಯೂನತೆಯನ್ನು ಪುನರುತ್ಥಾನ ದಿನದಂದು ಅಲ್ಲಾಹು ಮರೆಮಾಚುವನು.”
ಪ್ರಶ್ನೆ 13. ಲಜ್ಜೆಯ ಗುಣದ ವಿಧಗಳು ಯಾವುವು?
ಉತ್ತರ: 1. ಅಲ್ಲಾಹನ ಬಗ್ಗೆ ಲಜ್ಜೆ ಪಡುವುದು. ಅಂದರೆ ಅಲ್ಲಾಹನಿಗೆ ಅವಿಧೇಯತೆ ತೋರಲು ಸಂಕೋಚಪಡುವುದು.
2. ಜನರ ಬಗ್ಗೆ ಲಜ್ಜೆ ಪಡುವುದು. ಜನರೊಡನೆ ಅಶ್ಲೀಲವಾಗಿ ಮಾತನಾಡದಿರುವುದು ಮತ್ತು ಅವರ ಮುಂದೆ ಗುಹ್ಯಭಾಗಗಳನ್ನು ಪ್ರದರ್ಶಿಸದಿರುವುದು ಇದರಲ್ಲಿ ಒಳಪಡುತ್ತದೆ.
- ಪ್ರವಾದಿ صلي الله عليه وسلم ರವರು ಹೇಳಿದರು: “ಸತ್ಯವಿಶ್ವಾಸವು ಎಪ್ಪತ್ತಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ.” ಅಥವಾ “ಅರುವತ್ತಕ್ಕಿಂತಲೂ ಹೆಚ್ಚು.” - “ಅವುಗಳಲ್ಲಿ ಅತ್ಯುನ್ನತ ಶಾಖೆಯು ಲಾ ಇಲಾಹ ಇಲ್ಲಲ್ಲಾಹ್ ಎಂಬ ವಚನ. ಅವುಗಳಲ್ಲಿ ಅತ್ಯಂತ ಕೆಳಗಿನ ಶಾಖೆಯು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು. ಲಜ್ಜೆಯು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.”
ಪ್ರಶ್ನೆ 14. ದಯಾಗುಣದ ರೂಪಗಳು ಯಾವುವು?
ಉತ್ತರ: - ಹಿರಿಯ ವಯಸ್ಸಿನವರಿಗೆ ದಯೆ ತೋರುವುದು ಮತ್ತು ಗೌರವಿಸುವುದು.
- ಕಿರಿಯ ವಯಸ್ಸಿನವರಿಗೆ ಮತ್ತು ಮಕ್ಕಳಿಗೆ ದಯೆ ತೋರುವುದು. ಹದೀಸ್ನಲ್ಲಿ ಹೀಗಿದೆ: "ನಮ್ಮ ಹಿರಿಯರನ್ನು ಗೌರವಿಸದವರು ಮತ್ತು ನಮ್ಮ ಕಿರಿಯರಿಗೆ ದಯೆ ತೋರದವರು ನಮ್ಮಲ್ಲಿ ಸೇರಿದವರಲ್ಲ."
- ಬಡವರಿಗೆ, ನಿರ್ಗತಿಕರಿಗೆ ಮತ್ತು ಅಗತ್ಯವುಳ್ಳವರಿಗೆ ದಯೆ ತೋರುವುದು.
- ಪ್ರಾಣಿಗಳಿಗೆ ದಯೆ ತೋರುವುದು. ಅಂದರೆ ಅವುಗಳಿಗೆ ತಿನ್ನಲು ಕೊಡುವುದು ಮತ್ತು ಅವುಗಳಿಗೆ ಕಿರುಕುಳ ಕೊಡದಿರುವುದು.
ಅವುಗಳಲ್ಲೊಂದು ಪ್ರವಾದಿ ﷺ ರವರು ಹೇಳಿದ ಈ ವಚನ: “ಪರಸ್ಪರ ದಯೆ ತೋರುವುದರಲ್ಲಿ, ಪರಸ್ಪರ ಪ್ರೀತಿಸುವುದರಲ್ಲಿ ಮತ್ತು ಪರಸ್ಪರ ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗಕ್ಕೆ ನೋವಾದರೆ ಸಂಪೂರ್ಣ ದೇಹವು ನಿದ್ದೆಗೆಡುವಿಕೆ ಮತ್ತು ಜ್ವರದಿಂದ ನರಳುತ್ತದೆ.”
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ.”
ಪ್ರಶ್ನೆ 13. ಪ್ರೀತಿಸುವ ಗುಣದ ವಿಧಗಳು ಯಾವುವು?
ಉತ್ತರ: ಅಲ್ಲಾಹನನ್ನು ಪ್ರೀತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ. [ಅಲ್-ಬಕರ:165].
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುವುದು.
ಪ್ರವಾದಿ(ﷺ)ರು ಹೇಳಿದರು: “ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಮ್ಮಲ್ಲೊಬ್ಬನಿಗೆ ಅವನ ತಂದೆ-ತಾಯಿ ಮತ್ತು ಮಕ್ಕಳಿಗಿಂತಲೂ ನಾನು ಅವನಿಗೆ ಅತ್ಯಂತ ಪ್ರಿಯನಾಗುವ ತನಕ ನಿಮ್ಮಲ್ಲಿ ಯಾರೊಬ್ಬರೂ ಸತ್ಯವಿಶ್ವಾಸಿಗಳಾಗಲಾರಿರಿ.”
ಸತ್ಯವಿಶ್ವಾಸಿಗಳನ್ನು ಪ್ರೀತಿಸುವುದು ಮತ್ತು ತನಗೆ ಒಳಿತನ್ನು ಪ್ರೀತಿಸುವಂತೆಯೇ ಅವರಿಗೂ ಒಳಿತನ್ನು ಪ್ರೀತಿಸುವುದು.
ಪ್ರವಾದಿ ﷺ ರವರು ಹೇಳಿದರು: “ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು."
ಪ್ರಶ್ನೆ 16. ಪ್ರಸನ್ನತೆ ಎಂದರೇನು?
ಉತ್ತರ: ಜನರನ್ನು ಭೇಟಿಯಾಗುವಾಗ, ಸಂತೋಷ, ಮುಗುಳ್ನಗೆ, ಅನುಕಂಪ ಮತ್ತು ಹರ್ಷ ಪ್ರಕಟಣೆಯೊಂದಿಗೆ ಮುಖ ಮಂದಸ್ಮಿತವಾಗಿರುವುದು.
ಜನರನ್ನು ಕಂಡಾಗ ದ್ವೇಷದಿಂದ ಮುಖ ಸಿಂಡರಿಸಿಕೊಂಡು ಭೇಟಿಯಾಗಬಾರದು.
ಇದರ ಶ್ರೇಷ್ಠತೆಯನ್ನು ವಿವರಿಸುವ ಅನೇಕ ಹದೀಸ್ಗಳಿವೆ. ಅಬೂ ದರ್(ರ) ರಿಂದ ವರದಿ. ಪ್ರವಾದಿ(ಸ) ರವರು ನನಗೆ ಹೇಳಿದರು: “ಒಳಿತಿನಲ್ಲಿ ಯಾವುದನ್ನೂ ತುಚ್ಛವಾಗಿ ಕಾಣಬೇಡ. ಅದು ನಗುಮುಖದಿಂದ ನಿನ್ನ ಸಹೋದರನನ್ನು ಭೇಟಿಯಾಗುವುದಾದರೂ ಸರಿ.”
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ನಿನ್ನ ಸಹೋದರನ ಮುಖ ನೋಡಿ ಮಂದಹಾಸ ಬೀರುವುದು ನಿನಗೆ ದಾನಧರ್ಮವಾಗಿದೆ.”
ಪ್ರಶ್ನೆ 17. ಅಸೂಯೆ ಎಂದರೇನು?
ಉತ್ತರ: ಇತರರಿಗೆ ದೊರಕಿದ ಅನುಗ್ರಹವು ನಿವಾರಣೆಯಾಗಬೇಕೆಂದು ಬಯಸುವುದು ಅಥವಾ ಇತರರಿಗೆ ಅನುಗ್ರಹ ದೊರೆಯುವುದನ್ನು ಅಸಹ್ಯಪಡುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಸೂಯೆಪಡುವವನ ಕೆಡುಕಿನಿಂದ—ಅವನು ಅಸೂಯೆಪಡುವಾಗ.” [ಅಲ್-ಫಲಕ್:5]
ಅನಸ್(ರ) ರಿಂದ ವರದಿ, ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: “ನೀವು ಪರಸ್ಪರ ದ್ವೇಷಿಸಬೇಡಿ, ನೀವು ಪರಸ್ಪರ ಅಸೂಯೆಪಡಬೇಡಿ, ನೀವು ಪರಸ್ಪರ ಮುಖ ತಿರುಗಿಸಿ ನಡೆಯಬೇಡಿ. ಅಲ್ಲಾಹನ ದಾಸರಾಗಿ ಸಹೋದರರಂತೆ ಬಾಳಿರಿ.”
ಪ್ರಶ್ನೆ 18. ಅಪಹಾಸ್ಯ ಎಂದರೇನು?
ಉತ್ತರ: ಅಪಹಾಸ್ಯ ಎಂದರೆ ನಿನ್ನ ಮುಸ್ಲಿಂ ಸಹೋದರನನ್ನು ಗೇಲಿ ಮಾಡುವುದು ಮತ್ತು ತುಚ್ಛವಾಗಿ ಕಾಣುವುದು. ಇದು ಧರ್ಮಸಮ್ಮತವಲ್ಲ.
ಇದನ್ನು ವಿರೋಧಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸತ್ಯವಿಶ್ವಾಸಿಗಳೇ! ಪುರುಷರು ಇತರ ಪುರುಷರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ಮಹಿಳೆಯರು ಇತರ ಮಹಿಳೆಯರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ನೀವು ಒಬ್ಬರು ಇನ್ನೊಬ್ಬರ ಕೊರತೆಯನ್ನು ಹೇಳಬೇಡಿ. ಯಾರನ್ನೂ ಅಡ್ಡಹೆಸರಿನಿಂದ ಕರೆಯಬೇಡಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ದುಷ್ಕರ್ಮವು ಬಹಳ ಕೆಟ್ಟ ಹೆಸರಾಗಿದೆ! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರೇ ಅಕ್ರಮಿಗಳು. [ಅಲ್-ಹುಜುರಾತ್:11].
ಪ್ರಶ್ನೆ 19. ವಿನಯ ಎಂದರೇನು?
ಉತ್ತರ: ವಿನಯ ಎಂದರೆ ತಾನು ಇತರರಿಗಿಂತ ಮೇಲು ಎಂದು ಭಾವಿಸದಿರುವುದು, ಜನರನ್ನು ತಿರಸ್ಕಾರದಿಂದ ಕಾಣದಿರುವುದು ಮತ್ತು ಸತ್ಯವನ್ನು ತಿರಸ್ಕರಿಸದಿರುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಪರಮ ದಯಾಮಯನ ದಾಸರು ಭೂಮಿಯಲ್ಲಿ ವಿನಯದೊಂದಿಗೆ ಚಲಿಸುವವರಾಗಿರುವರು.” [ಅಲ್-ಫುರ್ಕಾನ್: 63] ಅಂದರೆ ವಿನಯವಂತರಾಗಿ ಚಲಿಸುವರು.
- ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಅಲ್ಲಾಹನಿಗಾಗಿ ವಿನಯ ತೋರುವವರ ಸ್ಥಾನವನ್ನು ಅಲ್ಲಾಹು ಎತ್ತರಿಸದೇ ಇರಲಾರನು.”
ಪ್ರವಾದಿ(ಸ) ರವರು ಹೇಳಿದರು: “ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಜಂಭ ತೋರದೆ, ಮತ್ತು ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡದೆ, ನೀವೆಲ್ಲರೂ ವಿನಯವಂತರಾಗಬೇಕೆಂದು ಅಲ್ಲಾಹು ನನಗೆ ದೇವವಾಣಿ ಅವತೀರ್ಣಗೊಳಿಸಿದ್ದಾನೆ.”
ಪ್ರಶ್ನೆ 20. ನಿಷೇಧಿತ ಅಹಂಕಾರದ ವಿಧಗಳು ಯಾವುವು?
ಉತ್ತರ: 1. ಸತ್ಯದ ವಿರುದ್ಧ ಅಹಂಕಾರಪಡುವುದು. ಅಂದರೆ ಸತ್ಯವನ್ನು ಸ್ವೀಕರಿಸದೆ ತಿರಸ್ಕರಿಸುವುದು.
2. ಜನರ ವಿರುದ್ಧ ಅಹಂಕಾರಪಡುವುದು. ಅಂದರೆ ಅವರನ್ನು ತಿರಸ್ಕಾರ ಮತ್ತು ನಿಕೃಷ್ಟವಾಗಿ ಕಾಣುವುದು.
ಪ್ರವಾದಿ صلي الله عليه وسلم ರವರು ಹೇಳಿದರು: “ನಿಶ್ಚಯವಾಗಿಯೂ ಹೃದಯದಲ್ಲಿ ಒಂದು ಅಣುವಿನ ತೂಕದಷ್ಟು ಅಹಂಕಾರ ಇರುವವನು ಸ್ವರ್ಗವನ್ನು ಪ್ರವೇಶಿಸಲಾರ.” ಆಗ ಒಬ್ಬ ವ್ಯಕ್ತಿ ಕೇಳಿದರು: “ಒಬ್ಬ ವ್ಯಕ್ತಿ ತನ್ನ ಬಟ್ಟೆ-ಬರೆ ಸುಂದರವಾಗಿರಲು ಮತ್ತು ತನ್ನ ಪಾದರಕ್ಷೆ ಸುಂದರವಾಗಿರಲು ಬಯಸುತ್ತಾನೆ. ಇದು ಅಹಂಕಾರವೇ?” ಅವರು ಉತ್ತರಿಸಿದರು: “ನಿಶ್ಚಯವಾಗಿಯೂ ಅಲ್ಲಾಹು ಸುಂದರನಾಗಿರುವನು. ಮತ್ತು ಅವನು ಸೌಂದರ್ಯವನ್ನು ಇಷ್ಟಪಡುತ್ತಾನೆ. ಅಹಂಕಾರ ಎಂದರೆ ಸತ್ಯವನ್ನು ತಿರಸ್ಕರಿಸುವುದು ಮತ್ತು ಜನರನ್ನು ತುಚ್ಛವಾಗಿ ಕಾಣುವುದು.”
- ಸತ್ಯವನ್ನು ತಿರಸ್ಕರಿಸುವುದು ಎಂದರೆ ಸತ್ಯವನ್ನು ಸ್ವೀಕರಿಸದಿರುವುದು.
- ಜನರನ್ನು ತುಚ್ಛವಾಗಿ ಕಾಣುವುದು ಎಂದರೆ ಜನರನ್ನು ಕೀಳಾಗಿ ಕಾಣುವುದು.
- ಸುಂದರ ಬಟ್ಟೆ ಮತ್ತು ಸುಂದರ ಪಾದರಕ್ಷೆಗಳನ್ನು ಧರಿಸುವುದು ಅಹಂಕಾರವಲ್ಲ.
ಪ್ರಶ್ನೆ 21. ನಿಷೇಧಿತ ವಂಚನೆಯ ಕೆಲವು ವಿಧಗಳು ಯಾವುವು?
ಉತ್ತರ: - ಮಾರಾಟ ಮತ್ತು ಖರೀದಿಯಲ್ಲಿ ವಂಚಿಸುವುದು. ಅಂದರೆ ಸರಕುಗಳ ನ್ಯೂನತೆಯನ್ನು ಮುಚ್ಚಿಡುವುದು.
- ಕಲಿಯುವುದರಲ್ಲಿ ಮತ್ತು ಕಲಿಸುವುದರಲ್ಲಿ ವಂಚಿಸುವುದು. ಉದಾಹರಣೆಗೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಂಚನೆ ಮಾಡುವುದು.
- ಮಾತಿನಲ್ಲಿ ವಂಚಿಸುವುದು. ಅಂದರೆ ಸುಳ್ಳು ಹೇಳುವುದು ಮತ್ತು ಸುಳ್ಳು ಸಾಕ್ಷಿ ನುಡಿಯುವುದು.
- ಜನರಿಗೆ ಮಾತು ಕೊಟ್ಟರೆ ಅಥವಾ ಒಪ್ಪಂದ ಮಾಡಿದರೆ ಅದನ್ನು ನೆರವೇರಿಸದಿರುವುದು.
- ವಂಚಿಸುವುದು ನಿಷೇಧಿಸಲಾಗಿದೆ ಎನ್ನುವುದಕ್ಕೆ ಒಂದು ಪುರಾವೆಯೇನೆಂದರೆ, ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ಒಂದು ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಹೇಳಿದರು: “ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು: “ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.”
ಆಹಾರ ಧಾನ್ಯದ ರಾಶಿ ಎಂದರೆ ಆಹಾರ ಧಾನ್ಯವನ್ನು ಮಾರಾಟಕ್ಕೆ ಕುಪ್ಪೆ ಮಾಡಿಟ್ಟಿರುವುದು.
ಪ್ರಶ್ನೆ 22. ಪರದೂಷಣೆ ಎಂದರೇನು?
ಉತ್ತರ: ಪರದೂಷಣೆ ಎಂದರೆ ನಿನ್ನ ಸಹೋದರನ ಅನುಪಸ್ಥಿತಿಯಲ್ಲಿ ಅವನಿಗೆ ಇಷ್ಟವಿಲ್ಲದ್ದನ್ನು ಹೇಳುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಿಮ್ಮಲ್ಲಿ ಕೆಲವರು ಇತರ ಕೆಲವರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಕೆಟ್ಟದಾಗಿ ಮಾತನಾಡಬಾರದು. ತನ್ನ ಸಹೋದರನು ಮೃತಪಟ್ಟು ಮಲಗಿರುವಾಗ ಅವನ ಮಾಂಸವನ್ನು ತಿನ್ನಲು ನಿಮ್ಮಲ್ಲಿ ಯಾರಾದರೂ ಇಷ್ಟಪಡುವರೇ? ನೀವು ಅದನ್ನು (ತಿನ್ನುವುದನ್ನು) ಅಸಹ್ಯಪಡುತ್ತೀರಿ! ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಅಲ್-ಹುಜುರಾತ್:12].
ಪ್ರಶ್ನೆ 23. ಚಾಡಿ ಮಾತು ಎಂದರೇನು?
ಉತ್ತರ: ಚಾಡಿ ಎಂದರೆ ಜನರ ಮಧ್ಯೆ ಜಗಳ ಉಂಟುಮಾಡಲು ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವುದು.
- ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಚಾಡಿಕೋರ ಸ್ವರ್ಗವನ್ನು ಪ್ರವೇಶಿಸಲಾರ.”
ಪ್ರಶ್ನೆ 24. ಆಲಸ್ಯ ಎಂದರೇನು?
ಉತ್ತರ: ಆಲಸ್ಯ ಎಂದರೆ ಒಳಿತು ಮಾಡಲು ಮತ್ತು ತನ್ನ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸಲು ಉದಾಸೀನ ತೋರುವುದು.
ಉದಾಹರಣೆಗೆ, ಕಡ್ಡಾಯ ಕರ್ಮಗಳನ್ನು ಮಾಡಲು ಆಲಸ್ಯ ತೋರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಬಹುದೆಂದು (ಭಾವಿಸುತ್ತಾರೆ). ಆದರೆ, (ವಾಸ್ತವವಾಗಿ) ಅಲ್ಲಾಹನೇ ಅವರನ್ನು ವಂಚಿಸುತ್ತಿದ್ದಾನೆ. ಅವರು ನಮಾಝ್ ಮಾಡಲು ನಿಲ್ಲುವಾಗ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವುದಕ್ಕಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ವಲ್ಪ ಮಾತ್ರ ಸ್ಮರಿಸುತ್ತಾರೆ. [ಅನ್ನಿಸಾ: 142].
ಆದ್ದರಿಂದ ಸತ್ಯವಿಶ್ವಾಸಿ ಆಲಸ್ಯ, ಸೋಮಾರಿತನ ಮತ್ತು ಜಡವನ್ನು ತೊರೆದು, ಜೀವನದಲ್ಲಿ ಅಲ್ಲಾಹನನ್ನು ಸಂಪ್ರೀತಗೊಳಿಸುವ ಕೆಲಸಗಳನ್ನು ನಿರ್ವಹಿಸಲು ಅತಿಯಾಗಿ ಪರಿಶ್ರಮಿಸಬೇಕು.
ಪ್ರಶ್ನೆ 25: ಕೋಪದ ವಿಧಗಳನ್ನು ತಿಳಿಸಿ.
ಉತ್ತರ: 1. ಪ್ರಶಂಸಾರ್ಹ ಕೋಪ: ಅಂದರೆ ಸತ್ಯನಿಷೇಧಿಗಳು, ಕಪಟಿಗಳು ಅಥವಾ ಇತರರು ಅಲ್ಲಾಹನ ಪಾವಿತ್ರ್ಯಕ್ಕೆ ಧಕ್ಕೆ ಮಾಡುವಾಗ ಅಲ್ಲಾಹನಿಗಾಗಿ ಕೋಪಿಸುವುದು.
2. ಖಂಡನಾರ್ಹ ಕೋಪ: ಒಬ್ಬ ವ್ಯಕ್ತಿಯಿಂದ ಹೇಳಬಾರದ ಮಾತನ್ನು ಮತ್ತು ಮಾಡಬಾರದ ಕೆಲಸವನ್ನು ಮಾಡಿಸುವ ಕೋಪ.
ಖಂಡನಾರ್ಹ ಕೋಪಕ್ಕೆ ಮದ್ದು:
ವುದೂ.
ನಿಂತಿದ್ದರೆ ಕುಳಿತುಕೊಳ್ಳುವುದು; ಕುಳಿತಿದ್ದರೆ ಮಲಗುವುದು.
- ಕೋಪ ಬರುವಾಗ, “ಕೋಪ ಮಾಡಿಕೊಳ್ಳಬಾರದು” ಎಂಬ ಪ್ರವಾದಿಯವರ(ಸ) ಮಾತನ್ನು ಪಾಲಿಸುವುದು.
ಕೋಪ ಬರುವಾಗ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು.
ಶಾಪಗ್ರಸ್ತ ಸೈತಾನನಿಂದ ಅಲ್ಲಾಹನಲ್ಲಿ ಆಶ್ರಯಬೇಡುವುದು.”
ಮೌನ ಪಾಲಿಸುವುದು.
ಪ್ರಶ್ನೆ 26. ಗೂಢಚರ್ಯೆ ಎಂದರೇನು?
ಉತ್ತರ: ಗೂಢಚರ್ಯೆ ಎಂದರೆ ಜನರ ರಹಸ್ಯಗಳನ್ನು ಮತ್ತು ಅವರು ಮುಚ್ಚಿಡುವ ವಿಷಯಗಳನ್ನು ಹುಡುಕುವುದು ಮತ್ತು ಬಹಿರಂಗಪಡಿಸುವುದು.
ಗೂಢಚರ್ಯೆಯ ನಿಷೇಧಿತ ರೂಪಗಳು:
- ಜನರ ಮನೆಗಳಲ್ಲಿ ಅವರ ಖಾಸಗಿ ವಿಷಯಗಳನ್ನು ತಿಳಿಯಲು ಪ್ರಯತ್ನಿಸುವುದು.
- ಜನರ ಅನುಮತಿಯಿಲ್ಲದೆ ಅವರ ಮಾತಿಗೆ ಕಿವಿಗೊಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು ಗೂಢಚರ್ಯೆ ಮಾಡಬೇಡಿ...” [ಅಲ್-ಹುಜುರಾತ್:12].
ಪ್ರಶ್ನೆ 27. ದುರ್ವ್ಯಯ ಎಂದರೇನು? ಜಿಪುಣತನ ಎಂದರೇನು? ಉದಾರತೆ ಎಂದರೇನು?
ಉತ್ತರ: ದುರ್ವ್ಯಯ ಎಂದರೆ ಲೆಕ್ಕಕ್ಕಿಂತ ಹೆಚ್ಚು ಖರ್ಚು ಮಾಡುವುದು. ಜಿಪುಣತನ ಇದಕ್ಕೆ ವಿರುದ್ಧವಾಗಿದೆ. ಅದು ಲೆಕ್ಕಕ್ಕಿಂತ ಕಡಿಮೆ ಖರ್ಚು ಮಾಡುವುದು.
ಸರಿಯಾಗಿ ರೀತಿ ಇವೆರಡರ ಮಧ್ಯದಲ್ಲಿದ್ದು, ಮುಸಲ್ಮಾನನು ಉದಾರಿಯಾಗಿರಬೇಕು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವರು ಖರ್ಚು ಮಾಡುವಾಗ ಅತಿಯಾಗಿ ಖರ್ಚು ಮಾಡುವುದಿಲ್ಲ ಮತ್ತು ಜಿಪುಣತನ ತೋರುವುದೂ ಇಲ್ಲ. ಬದಲಿಗೆ, ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುತ್ತಾರೆ. [ಅಲ್-ಫುರ್ಕಾನ್: 67].
ಪ್ರಶ್ನೆ 28. ಹೇಡಿತನ ಎಂದರೇನು? ಶೌರ್ಯ ಎಂದರೇನು?
ಉತ್ತರ: ಹೇಡಿತನ. ಭಯಪಡಬಾರದ್ದನ್ನು ಭಯಪಡುವುದು.
ಉದಾಹರಣೆಗೆ, ಸತ್ಯವನ್ನು ಹೇಳಲು ಮತ್ತು ಕೆಡುಕನ್ನು ವಿರೋಧಿಸಲು ಭಯಪಡುವುದು.
ಧೈರ್ಯ: ಅಂದರೆ ಸತ್ಯಕ್ಕಾಗಿ ಮುಂದೆ ಬರುವುದು. ಉದಾಹರಣೆಗೆ ಇಸ್ಲಾಂ ಮತ್ತು ಮುಸ್ಲಿಮರನ್ನು ರಕ್ಷಿಸಲು ಯುದ್ಧಭೂಮಿಯಲ್ಲಿ ಮುಂದೆ ಬರುವುದು.
ಪ್ರವಾದಿ ﷺ ರವರು ತಮ್ಮ ಪ್ರಾರ್ಥನೆಯಲ್ಲಿ ಹೇಳುತ್ತಿದ್ದರು: “ಓ ಅಲ್ಲಾಹ್ ನಾನು ನಿನ್ನೊಂದಿಗೆ ಹೇಡಿತನದಿಂದ ಅಭಯ ಯಾಚಿಸುತ್ತೇನೆ.”
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ಶಕ್ತಿಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮ ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನು. ಪ್ರತಿಯೊಬ್ಬರಲ್ಲೂ ಒಳಿತಿದೆ."
ಪ್ರಶ್ನೆ 29. ಕೆಲವು ನಿಷಿದ್ಧ ಮಾತುಗಳು ಯಾವುವು?
ಉತ್ತರ: - ಶಪಿಸುವುದು ಮತ್ತು ತೆಗಳುವುದು.
- ಪ್ರಾಣಿಯ ಹೆಸರು ಮುಂತಾದವುಗಳಿಂದ ಕರೆಯುವುದು.
- ಅಶ್ಲೀಲ ಮತ್ತು ಅವಾಚ್ಯವಾಗಿ ಮಾತನಾಡುವುದು.
ಪ್ರವಾದಿ ﷺ ರವರು ಇವೆಲ್ಲವನ್ನೂ ನಿಷೇಧಿಸಿ, ಹೀಗೆ ಹೇಳಿದರು: "ಸತ್ಯವಿಶ್ವಾಸಿಯು ದೂಷಿಸಲಾರ, ಶಪಿಸಲಾರ, ಅಶ್ಲೀಲ ಅಥವಾ ಅವಾಚ್ಯ ಮಾತುಗಳನ್ನಾಡಲಾರ."
ಪ್ರಶ್ನೆ 30. ಮುಸಲ್ಮಾನನು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗುವ ಅಂಶಗಳು ಯಾವುವು?
ಉತ್ತರ: 1- ಅಲ್ಲಾಹು ಉತ್ತಮ ಗುಣವನ್ನು ದಯಪಾಲಿಸಿ ಸಹಾಯ ಮಾಡಲು ಪ್ರಾರ್ಥಿಸುವುದು.
2- ಅಲ್ಲಾಹನ ಬಗ್ಗೆ ಜಾಗರೂಕನಾಗಿರುವುದು, ಅಲ್ಲಾಹು ನೋಡುತ್ತಿದ್ದಾನೆ ಮತ್ತು ಕೇಳುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಹೊಂದಿರುವುದು.
3- ಉತ್ತಮ ಗುಣದ ಪ್ರತಿಫಲವನ್ನು ಜ್ಞಾಪಿಸುವುದು ಮತ್ತು ಅದು ಸ್ವರ್ಗ ಪ್ರವೇಶಕ್ಕೆ ಒಂದು ಕಾರಣವೆಂದು ತಿಳಿಯುವುದು.
4- ಕೆಟ್ಟ ಗುಣದ ಪರಿಣಾಮವನ್ನು ಜ್ಞಾಪಿಸುವುದು ಮತ್ತು ಅದು ನರಕ ಪ್ರವೇಶಕ್ಕೆ ಒಂದು ಕಾರಣವೆಂದು ತಿಳಿಯುವುದು.
5- ಉತ್ತಮ ಗುಣದಿಂದ ಅಲ್ಲಾಹನ ಪ್ರೀತಿ ಮತ್ತು ಜನರ ಪ್ರೀತಿ ದೊರಕುತ್ತದೆ. ಕೆಟ್ಟ ಗುಣವು ಅಲ್ಲಾಹನ ಕೋಪ ಮತ್ತು ಜನರ ಕೋಪಕ್ಕೆ ಕಾರಣವಾಗುತ್ತದೆ ಎಂದು ತಿಳಿಯುವುದು.
6- ಪ್ರವಾದಿ ಚರಿತ್ರೆಯನ್ನು ಓದುವುದು, ಮತ್ತು ಅವರನ್ನು ಅನುಸರಿಸುವುದು.
7- ಒಳ್ಳೆಯವರ ಸಹವಾಸ ಮಾಡುವುದು ಮತ್ತು ಕೆಟ್ಟವರ ಸಹವಾಸವನ್ನು ತ್ಯಜಿಸುವುದು.
*******
ಪ್ರಾರ್ಥನೆ ಮತ್ತು ದಿಕ್ರ್ಗಳ ವಿಭಾಗ
ದಿಕ್ರ್ನ ಜ್ಞಾನ:
ದಿಕ್ರ್ನ ವ್ಯಾಖ್ಯಾನ: ಅದು ತಹ್ಲೀಲ್, ತಕ್ಬೀರ್, ತಸ್ಬೀಹ್, ತಹ್ಮೀದ್, ಇಸ್ತಿಗ್ಫಾರ್ ಮತ್ತು ಅಲ್ಲಾಹನಿಗೆ (ಸುಬ್ಹಾನಹು ವತಆಲಾ) ಪ್ರಶಂಸೆ ಸಲ್ಲಿಸುವುದು, ಬೆಳಗಿನ ಮತ್ತು ಸಂಜೆಯ ದಿಕ್ರ್ಗಳು, ನಮಾಝ್ಗಳ ದಿಕ್ರ್ಗಳು, ನಿದ್ರಿಸುವಾಗ ಮತ್ತು ಎಚ್ಚರವಾದಾಗ ಮಾಡುವ ಸ್ಮರಣೆಗಳು, ಹಾಗೂ ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವರದಿಯಾದ ಇತರ ಸಂದರ್ಭಗಳು ಮತ್ತು ವಚನಗಳ ಮೂಲಕ ಅಲ್ಲಾಹನನ್ನು ಸ್ಮರಿಸುತ್ತಾ ನಾಲಗೆಯನ್ನು ಚಲಿಸುವುದಾಗಿದೆ.
- ಹೃದಯ ಮತ್ತು ನಾಲಗೆಯೆರಡೂ ಒಮ್ಮತದಿಂದ ಮಾಡುವ ಸ್ಮರಣೆಯೇ ಅತಿಶ್ರೇಷ್ಠವಾದುದು.
ಪ್ರಶ್ನೆ 1. ದಿಕ್ರ್ನ ಶ್ರೇಷ್ಠತೆಯನ್ನು ತಿಳಿಸಿ?
ಉತ್ತರ: ಪ್ರವಾದಿ ﷺ ರವರು ಹೇಳಿದರು: "ಅಲ್ಲಾಹನನ್ನು ಸ್ಮರಿಸುವವನ ಮತ್ತು ಸ್ಮರಿಸದವನ ಉದಾಹರಣೆಯು ಜೀವಂತವಿರುವವನು ಮತ್ತು ಸತ್ತವನಂತಿದೆ."
- ಏಕೆಂದರೆ ಮನುಷ್ಯನ ಜೀವನದ ಮೌಲ್ಯವು ಅವನು ಅಲ್ಲಾಹನನ್ನು ಎಷ್ಟು ಸ್ಮರಿಸುತ್ತಾನೆ ಎಂಬುದನ್ನು ಅವಲಂಬಿಸಿದೆ.
ಪ್ರಶ್ನೆ 2. ದಿಕ್ರ್ನ ಕೆಲವು ಪ್ರಯೋಜನಗಳನ್ನು ತಿಳಿಸಿ?
ಉತ್ತರ: 1- ಅದು ಅಲ್ಲಾಹನಿಗೆ ಇಷ್ಟವಾಗಿದೆ.
2- ಅದು ಶೈತಾನನನ್ನು ಓಡಿಸುತ್ತದೆ.
3- ಅದು ಮುಸ್ಲಿಮನನ್ನು ಕೆಡುಕುಗಳಿಂದ ರಕ್ಷಿಸುತ್ತದೆ.
4- ಅದರಿಂದ ಪ್ರತಿಫಲ ಮತ್ತು ಪುಣ್ಯ ದೊರಕುತ್ತದೆ.
ಪ್ರಶ್ನೆ 3. ಅತ್ಯುತ್ತಮ ದಿಕ್ರ್ ಯಾವುದು?
ಪ್ರಶ್ನೆ 4. ನಿದ್ದೆಯಿಂದ ಎದ್ದೇಳುವಾಗ ಏನು ಹೇಳಬೇಕು?
ಉತ್ತರ: (ಅಲ್-ಹಮ್ದುಲಿಲ್ಲಾಹಿಲ್ಲದೀ ಅಹ್ಯಾನಾ ಬಅ್ದ ಮಾ ಅಮಾತನಾ ವಇಲೈಹಿ ನ್ನುಶೂರ್) "ನಮ್ಮ ಮರಣದ ನಂತರ ನಮ್ಮನ್ನು ಬದುಕಿಸಿದ ಅಲ್ಲಾಹನಿಗೆ ಸರ್ವಸ್ತುತಿ ಮತ್ತು ಪುನರುತ್ಥಾನವು ಅವನ ಕಡೆಗೇ ಆಗಿದೆ."
ಪ್ರಶ್ನೆ 5. ಉಡುಪು ಧರಿಸುವಾಗ ಏನು ಹೇಳಬೇಕು?
ಉತ್ತರ: (ಅಲ್-ಹಮ್ದುಲಿಲ್ಲಾಹಿಲ್ಲದೀ ಕಸಾನೀ ಹಾದಸ್ಸೌಬ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ) “ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಉಡುಪನ್ನು ಉಡಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ.”
ಪ್ರಶ್ನೆ 6. ಉಡುಪು ಕಳಚುವಾಗ ಏನು ಹೇಳಬೇಕು?
ಉತ್ತರ: (ಬಿಸ್ಮಿಲ್ಲಾ) ಅಲ್ಲಾಹನ ನಾಮದಿಂದ.
ಪ್ರಶ್ನೆ 7. ಹೊಸ ಉಡುಪು ಧರಿಸುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಅಲ್ಲಾಹುಮ್ಮ ಲಕಲ್ ಹಮ್ದು ಅನ್ತ ಕಸೌತನೀಹಿ, ಅಸ್ಅಲುಕ ಖೈರಹು ವಖೈರ ಮಾ ಸುನಿಅ ಲಹು, ವಅಊದು ಬಿಕ ಮಿನ್ ಶರ್ರಿಹೀ ವಶರ್ರಿ ಮಾ ಸುನಿಅ ಲಹು) “ಓ ಅಲ್ಲಾಹ್! ನಿನಗೆ ಸ್ತುತಿ, ಈ ಉಡುಪನ್ನು ನೀನು ನನಗೆ ಉಡಿಸಿರುವೆ, ಇದರ ಒಳಿತನ್ನು ಮತ್ತು ಇದು ನಿರ್ಮಿಸಲ್ಪಟ್ಟುದರ ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ, ಮತ್ತು ಇದರ ಕೆಡುಕಿನಿಂದ ಮತ್ತು ಇದು ನಿರ್ಮಿಸಲ್ಪಟ್ಟುದರ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ.”
ಪ್ರಶ್ನೆ 8. ಇತರರು ಹೊಸ ಉಡುಪು ಧರಿಸಿದ್ದನ್ನು ಕಾಣುವಾಗ ಏನು ಪ್ರಾರ್ಥಿಸಬೇಕು?
ಉತ್ತರ: ಇತರರು ಹೊಸ ಉಡುಪು ಧರಿಸಿರುವುದನ್ನು ಕಂಡಾಗ ಅವರಿಗೆ ಈ ರೀತಿ ಪ್ರಾರ್ಥಿಸಬೇಕು: (ತುಬ್ಲೀ ವಯುಖ್ಲಿಫುಲ್ಲಾಹು ತಆಲಾ) “ಧರಿಸು ಮತ್ತು ಅಲ್ಲಾಹು ನಿನಗೆ ಇದರ ನಂತರ (ಬೇರೊಂದನ್ನು) ನೀಡುವನು.”
ಪ್ರಶ್ನೆ 9. ಶೌಚಾಲಯವನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?
ಪ್ರಶ್ನೆ 10. ಶೌಚಾಲಯದಿಂದ ಹೊರಬರುವಾಗ ಏನು ಪ್ರಾರ್ಥಿಸಬೇಕು?
(ಗುಫ್ರಾನಕ್) “(ಓ ಅಲ್ಲಾಹ್) ನಿನ್ನೊಂದಿಗೆ ಕ್ಷಮೆಯನ್ನು ಬೇಡುತ್ತಿದ್ದೇನೆ”
ಪ್ರಶ್ನೆ 11. ವುದೂ ಮಾಡುವ ಮೊದಲು ಏನು ಹೇಳಬೇಕು?
ಉತ್ತರ: (ಬಿಸ್ಮಿಲ್ಲಾ) ಅಲ್ಲಾಹನ ನಾಮದಿಂದ.
ಪ್ರಶ್ನೆ 12. ವುದೂ ಪೂರ್ಣಗೊಳಿಸಿದ ನಂತರದ ಏನು ಪ್ರಾರ್ಥಿಸಬೇಕು?
ಪ್ರಶ್ನೆ 13. ಮನೆಯಿಂದ ಹೊರಡುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಬಿಸ್ಮಿಲ್ಲಾಹಿ ತವಕ್ಕಲ್ತು ಅಲಲ್ಲಾಹ್, ವಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್) “ಅಲ್ಲಾಹನ ನಾಮದೊಂದಿಗೆ, ನಾನು ಅಲ್ಲಾಹನ ಮೇಲೆ ಭರವಸೆಯನ್ನಿಟ್ಟಿರುವೆನು, ಅಲ್ಲಾಹನ ಹೊರತು ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ಇಲ್ಲ.”
ಪ್ರಶ್ನೆ 14. ಮನೆಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಬಿಸ್ಮಿಲ್ಲಾಹಿ ವಲಜ್ನಾ ವಬಿಸ್ಮಿಲ್ಲಾಹಿ ಖರಜ್ನಾ ವಅಲಲ್ಲಾಹಿ ರಬ್ಬಿನಾ ತವಕ್ಕಲ್ನಾ) “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.” ನಂತರ ಮನೆಯವರಿಗೆ ಸಲಾಂ ಹೇಳಬೇಕು.
ಪ್ರಶ್ನೆ 15. ಮಸೀದಿಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?
ಪ್ರಶ್ನೆ 16. ಮಸೀದಿಯಿಂದ ಹೊರಡುವಾಗ ಏನು ಪ್ರಾರ್ಥಿಸಬೇಕು?
ಪ್ರಶ್ನೆ 17. ಅಝಾನ್ ಕೇಳುವಾಗ ಏನು ಹೇಳಬೇಕು?
ಉತ್ತರ: ಮುಅದ್ದಿನ್ ಹೇಳುವಂತೆಯೇ ಹೇಳಬೇಕು. ಆದರೆ ಮುಅದ್ದಿನ್ “ಹಯ್ಯ ಅಲಸ್ಸಲಾಹ್” ಮತ್ತು “ಹಯ್ಯ ಅಲಲ್ ಫಲಾಹ್” ಎಂದು ಹೇಳುವಾಗ “ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್” (ಅಲ್ಲಾಹನಲ್ಲೇ ಹೊರತು ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ) ಎಂದು ಹೇಳಬೇಕು.
ಪ್ರಶ್ನೆ 18. ಅಝಾನ್ ನಂತರ ಏನು ಹೇಳಬೇಕು?
ಉತ್ತರ: ಪ್ರವಾದಿ(ಸ) ರವರ ಮೇಲೆ ಸ್ವಲಾತ್ (ದರೂದ್) ಪಠಿಸಬೇಕು.
ಅದಾನ್ ಮತ್ತು ಇಕಾಮತ್ಗಳ ಮಧ್ಯೆ ಸ್ವಂತಕ್ಕಾಗಿ ಪ್ರಾರ್ಥಿಸಬೇಕು. ಏಕೆಂದರೆ ಆ ಸಮಯದ ಪ್ರಾರ್ಥನೆ ತಿರಸ್ಕೃತವಾಗುವುದಿಲ್ಲ.
ಪ್ರಶ್ನೆ 19. ಬೆಳಿಗ್ಗೆ ಮತ್ತು ಸಂಜೆ ಯಾವ ದಿಕ್ರ್ಗಳನ್ನು ಹೇಳಬೇಕು?
ಉತ್ತರ: 1. ಆಯತುಲ್-ಕುರ್ಸಿ ಪಠಿಸಬೇಕು. ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ. [ಅಲ್-ಬಕರ:255].
2. ನಂತರ ಇದನ್ನು ಪಠಿಸಬೇಕು: ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಹೇಳಿರಿ: “ಅವನು ಅಲ್ಲಾಹು, ಏಕೈಕನು. ಅಲ್ಲಾಹು ನಿರಪೇಕ್ಷನು 2. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸರಿಸಮಾನರು ಯಾರೂ ಇಲ್ಲ. [ಅಲ್-ಇಖ್ಲಾಸ್:1-4] ಮೂರು ಬಾರಿ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. ಅವನು (ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ. ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ. ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ 4 ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ). [ಅಲ್ ಫಲಖ್:1-5] ಮೂರು ಸಲ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. ಮನುಷ್ಯರ ಒಡೆಯನಲ್ಲಿ 2 ಮನುಷ್ಯರ ದೇವನಲ್ಲಿ 3 ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ. ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು 5 ಅವರು ಜಿನ್ನ್ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.” [ಅನ್ನಾಸ್:1-6] ಮೂರು ಸಲ.
ಪ್ರಶ್ನೆ 20. ಮಲಗುವಾಗ ಏನು ಹೇಳಬೇಕು?
ಉತ್ತರ:”ಬಿಸ್ಮಿಕಲ್ಲಾಹುಮ್ಮ ಅಮೂತು ವಅಹ್ಯಾ” (ಓ ಅಲ್ಲಾಹನೇ, ನಿನ್ನ ಹೆಸರಿನಲ್ಲಿ ನಾನು ಸಾಯುತ್ತೇನೆ ಮತ್ತು ಬದುಕುತ್ತೇನೆ.)
ಪ್ರಶ್ನೆ 21. ಆಹಾರ ಸೇವಿಸುವ ಮೊದಲು ಏನು ಹೇಳಬೇಕು?
ಉತ್ತರ: ಬಿಸ್ಮಿಲ್ಲಾ ಆಹಾರ ಸೇವಿಸುವ ಮೊದಲು ಬಿಸ್ಮಿಲ್ಲಾ ಹೇಳಲು ಮರೆತರೆ ಹೀಗೆ ಹೇಳಬೇಕು: “ಬಿಸ್ಮಿಲ್ಲಾಹಿ ಫೀ ಅವ್ವಲಿಹೀ ವಆಖಿರಿಹೀ.” (ಇದರ ಪ್ರಾರಂಭ ಮತ್ತು ಅಂತ್ಯ ಅಲ್ಲಾಹನ ಹೆಸರಿನಲ್ಲಿ).
ಪ್ರಶ್ನೆ 22. ಆಹಾರ ಸೇವಿಸಿದ ಬಳಿಕ ಏನು ಹೇಳುತ್ತೀರಿ?
ಉತ್ತರ: “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ.)
ಪ್ರಶ್ನೆ 23. ಆಹಾರ ನೀಡಿದ ಆತಿಥೇಯನಿಗೆ ಅತಿಥಿ ಏನು ಪ್ರಾರ್ಥಿಸಬೇಕು?
ಉತ್ತರ: “ಅಲ್ಲಾಹುಮ್ಮ ಬಾರಿಕ್ ಲಹುಮ್ ಫೀಮಾ ರಝಕ್ತಹುಮ್ ವಗ್ಫಿರ್ ಲಹುಮ್ ವರ್ಹಮ್ಹುಮ್.” (ಓ ಅಲ್ಲಾಹ್! ಇವರಿಗೆ ನೀನು ದಯಪಾಲಿಸಿರುವುದರಲ್ಲಿ ಬರಕತ್ತನ್ನು ನೀಡು. ಅವರನ್ನು ಕ್ಷಮಿಸು ಮತ್ತು ಅವರಿಗೆ ದಯೆ ತೋರು).
ಪ್ರಶ್ನೆ 24. ಸೀನಿದಾಗ ಏನು ಹೇಳಬೇಕು?
ಉತ್ತರ: ಅಲ್-ಹಮ್ದುಲಿಲ್ಲಾ ಆಗ ಸೀನಿದವನ ಸಹೋದರ ಅಥವಾ ಸಹಚರ ಹೀಗೆ ಹೇಳಬೇಕು: "ಯರ್ಹಮುಕಲ್ಲಾಹ್" (ಅಲ್ಲಾಹನು ನಿನಗೆ ಕರುಣೆ ತೋರಲಿ). ಸೀನಿದವನು ಅದಕ್ಕೆ ಹೀಗೆ ಉತ್ತರಿಸಬೇಕು: "ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್" (ಅಲ್ಲಾಹನು ನಿಮಗೆ ಮಾರ್ಗದರ್ಶನ ಮಾಡಲಿ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲಿ)
ಪ್ರಶ್ನೆ 25. ಸಭೆ ಮುಗಿದು ಎದ್ದೇಳುವಾಗ ಹೇಳುವ ಕಫ್ಫಾರತುಲ್ ಮಜ್ಲಿಸ್ ನ ಪ್ರಾರ್ಥನೆ ಏನು?
ಉತ್ತರ: “ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ, ಅಶ್ಹದು ಅನ್ ಲಾ ಇಲಾಹ ಇಲ್ಲಾ ಅನ್ತ, ಅಸ್ತಗ್ಫಿರುಕ ವಅತೂಬು ಇಲೈಕ್.” (ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಅನ್ಯ ನೈಜ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ.)
ಪ್ರಶ್ನೆ 26. ಸವಾರಿ ಮಾಡುವಾಗ ಹೇಳುವ ಪ್ರಾರ್ಥನೆ ಯಾವುದು?
ಉತ್ತರ: (ಬಿಸ್ಮಿಲ್ಲಾಹಿ, ವಲ್ಹಮ್ದುಲಿಲ್ಲಾಹಿ, ಸುಬ್ಹಾನಲ್ಲದೀ ಸಖ್ಖರ ಲನಾ ಹಾದಾ ವಮಾ ಕುನ್ನಾ ಲಹೂ ಮುಕ್ರಿನೀನ್, ವಇನ್ನಾ ಇಲಾ ರಬ್ಬಿನಾ ಲಮುನ್ಕಲಿಬೂನ್, ಅಲ್ಹಮ್ದುಲಿಲ್ಲಾಹಿ, ಅಲ್ಹಮ್ದುಲಿಲ್ಲಾಹಿ, ಅಲ್ಹಮ್ದುಲಿಲ್ಲಾಹಿ, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಸುಬ್ಹಾನಕಲ್ಲಾಹುಮ್ಮ ಇನ್ನೀ ದಲಮ್ತು ನಫ್ಸೀ ಫಗ್ಫಿರ್ ಲೀ ಫಇನ್ನಹೂ ಲಾ ಯಗ್ಫಿರು ದ್ದುನೂಬ ಇಲ್ಲಾ ಅನ್ತ್) “ಅಲ್ಲಾಹನ ನಾಮದಿಂದ, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಇದನ್ನು ನಮಗೆ ಆಧೀನಗೊಳಿಸಿಕೊಟ್ಟವನು ಪರಮಪಾವನನು, ನಾವು ಇದರ ನಿಯಂತ್ರಕರಾಗಿರಲಿಲ್ಲ. ಮತ್ತು ನಾವು ನಮ್ಮ ರಬ್ಬಿನೆಡೆಗೆ ಮರಳುವವರಾಗಿದ್ದೇವೆ. ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಪರಮಪಾವನನಾಗಿರುವ ಓ ಅಲ್ಲಾಹ್! ನಾನು ನನ್ನ ಶರೀರದ ಮೇಲೆ ಅನ್ಯಾಯವೆಸಗಿರುವೆನು. ಆದ್ದರಿಂದ ನನಗೆ ಕ್ಷಮಿಸು. ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಾರೂ ಇಲ್ಲ.”
ಪ್ರಶ್ನೆ 27: ಪ್ರಯಾಣದ ಪ್ರಾರ್ಥನೆ ಯಾವುದು?
ಉತ್ತರ: (ಅಲ್ಲಾಹು ಅಕ್ಬರ್ (ಮೂರು ಬಾರಿ), ಸುಬ್ಹಾನಲ್ಲದೀ ಸಖ್ಖರ ಲನಾ ಹಾದಾ ವಮಾ ಕುನ್ನಾ ಲಹೂ ಮುಕ್ರಿನೀನ್, ವಇನ್ನಾ ಇಲಾ ರಬ್ಬಿನಾ ಲಮುನ್ಕಲಿಬೂನ್, ಅಲ್ಲಾಹುಮ್ಮ ಇನ್ನಾ ನಸ್ಅಲುಕ ಫೀ ಸಫರಿನಾ ಹಾದಲ್ ಬಿರ್ರ ವತ್ತಕ್ವಾ ವಮಿನಲ್ ಅಮಲಿ ಮಾ ತರ್ದಾ, ಅಲ್ಲಾಹುಮ್ಮ ಹವ್ವಿನ್ ಅಲೈನಾ ಸಫರನಾ ಹಾದಾ, ವತ್ವಿ ಅನ್ನಾ ಬುಅದಹೂ, ಅಲ್ಲಾಹುಮ್ಮ ಅನ್ತ ಸ್ಸಾಹಿಬು ಫಿ ಸ್ಸಫರಿ ವಲ್ಖಲೀಫತು ಫಿಲ್ ಅಹ್ಲಿ, ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ವಅಸಾಇ ಸ್ಸಫರಿ ವಕಆಬತಿಲ್ ಮನ್ದರಿ ವಸೂಇಲ್ ಮುನ್ಕಲಬಿ ಫಿಲ್ ಮಾಲಿ ವಲ್ಅಹ್ಲ್) “ಅಲ್ಲಾಹು ಮಹಾನನು. ಇದನ್ನು ನಮಗೆ ಆಧೀನಗೊಳಿಸಿಕೊಟ್ಟವನು ಪರಮಪಾವನನು, ನಾವು ಇದರ ನಿಯಂತ್ರಕರಾಗಿರಲಿಲ್ಲ. ಮತ್ತು ನಾವು ನಮ್ಮ ರಬ್ಬಿನೆಡೆಗೆ ಮರಳುವವರಾಗಿದ್ದೇವೆ. ಓ ಅಲ್ಲಾಹ್! ನಮ್ಮ ಈ ಯಾತ್ರೆಯಲ್ಲಿ ಒಳಿತನ್ನು, ಭಯಭಕ್ತಿಯನ್ನು ಮತ್ತು ಕರ್ಮಗಳಲ್ಲಿ ನೀನು ತೃಪ್ತಿಪಡುವುದನ್ನು ನಾವು ನಿನ್ನೊಂದಿಗೆ ಬೇಡುತ್ತಿದ್ದೇವೆ. ಓ ಅಲ್ಲಾಹ್! ನಮಗೆ ಈ ಯಾತ್ರೆಯನ್ನು ಸುಲಭೀಕರಿಸು ಮತ್ತು ಇದರ ದೂರವನ್ನು ನಮಗೆ ಕಿರಿದಾಗಿಸು. ಓ ಅಲ್ಲಾಹ್! ಯಾತ್ರೆಯಲ್ಲಿ ನೀನು ಜೊತೆಗಾರನಾಗಿರುವೆ ಮತ್ತು (ನಾನು ಬಿಟ್ಟು ಬಂದ) ಕುಟುಂಬದ ಉತ್ತರಾಧಿಕಾರಿಯಾಗಿರುವೆ. ಓ ಅಲ್ಲಾಹ್! ಯಾತ್ರೆಯ ಸಂಕಷ್ಟಗಳಿಂದ, ನೋಟದ ವ್ಯಾಕುಲತೆಯಿಂದ ಮತ್ತು ಸಂಪತ್ತು ಹಾಗೂ ಕುಟುಂಬದಲ್ಲಿ ಕೆಟ್ಟ ಪರಿಣಾಮಗಳಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ.”
ಪ್ರಶ್ನೆ 28: ನಿವಾಸಿಗಾಗಿ ಪ್ರಯಾಣಿಕನು ಹೇಗೆ ಪ್ರಾರ್ಥಿಸಬೇಕು?
ಉತ್ತರ: (ಅಸ್ತೌದಿಉಕುಮುಲ್ಲಾಹಲ್ಲದೀ ಲಾ ತದೀಉ ವದಾಇಉಹೂ) “ನಾನು ನಿಮ್ಮನ್ನು ಅಲ್ಲಾಹನ ಸಂರಕ್ಷಣೆಯಲ್ಲಿ ಅರ್ಪಿಸಿದ್ದೇನೆ. ಅವನ ಸಂರಕ್ಷಣೆಯಲ್ಲಿ ಅರ್ಪಿಸಲ್ಪಟ್ಟದ್ದು ಎಂದೂ ನಷ್ಟವಾಗದು.”
ಪ್ರಶ್ನೆ 29: ಪ್ರಯಾಣಿಕನನ್ನು ಬೀಳ್ಕೊಡುವಾಗ ನಿವಾಸಿ ಏನು ಪ್ರಾರ್ಥಿಸಬೇಕು?
ಉತ್ತರ: (ಅಸ್ತೌದಿಉಲ್ಲಾಹ ದೀನಕ ವಅಮಾನತಕ ವಖವಾತೀಮ ಅಮಲಿಕ್) “ನಾನು ನಿನ್ನ ಧರ್ಮವನ್ನು, ಪ್ರಾಮಾಣಿಕತೆಯನ್ನು ಮತ್ತು ನಿನ್ನ ಕರ್ಮದ ಅಂತ್ಯಗಳನ್ನು ಅಲ್ಲಾಹನ ಸಂರಕ್ಷಣೆಯಲ್ಲಿಡುತ್ತೇನೆ.”
ಪ್ರಶ್ನೆ 30: ಮಾರುಕಟ್ಟೆಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?
ಉತ್ತರ: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ಯುಹ್ಯೀ ವಯುಮೀತು, ವಹುವ ಹಯ್ಯುನ್ ಲಾ ಯಮೂತ್, ಬಿಯದಿಹಿಲ್ ಖೈರ್, ವಹುವ ಅಲಾ ಕುಲ್ಲಿ ಶೈಇನ್ ಕದೀರ್.” (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ, ಸ್ತುತಿ ಅಲ್ಲಾಹನಿಗೆ, ಅಲ್ಲಾಹು ಮಹಾನನಾಗಿದ್ದಾನೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಂದೆಂದಿಗೂ ಜೀವಿಸುವವನು ಮತ್ತು ಎಂದಿಗೂ ಸಾಯದವನು, ಒಳಿತೆಲ್ಲವೂ ಅವನ ಕೈಯಲ್ಲಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.)
ಪ್ರಶ್ನೆ 31. ಕೋಪ ಬರುವಾಗ ಏನು ಪ್ರಾರ್ಥಿಸಬೇಕು?
ಉತ್ತರ: “ಅಊದು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್.” (ಶಾಪಗ್ರಸ್ತ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯ ಪಡೆಯುತ್ತೇನೆ).
ಪ್ರಶ್ನೆ 32. ಯಾರಾದರೂ ಉಪಕಾರ ಮಾಡಿದರೆ ಏನು ಹೇಳಬೇಕು?
ಉತ್ತರ: “ಜಝಾಕಲ್ಲಾಹು ಖೈರನ್.” (ಅಲ್ಲಾಹು ನಿನಗೆ ಅತ್ಯುತ್ತಮ ಪ್ರತಿಫಲ ನೀಡಲಿ).
ಪ್ರಶ್ನೆ 33. ವಾಹನ ಮುಗ್ಗರಿಸಿದರೆ ಏನು ಪ್ರಾರ್ಥಿಸಬೇಕು?
ಉತ್ತರ: ಬಿಸ್ಮಿಲ್ಲಾ (ಅಲ್ಲಾಹನ ನಾಮದಿಂದ)
ಪ್ರಶ್ನೆ 34. ಏನಾದರೂ ಒಳ್ಳೆಯದು ಸಂಭವಿಸಿದರೆ ಏನು ಹೇಳಬೇಕು?
ಉತ್ತರ: “ಅಲ್-ಹಮ್ದುಲಿಲ್ಲಾಹಿಲ್ಲದೀ ಬಿನಿಅ್ಮತಿಹೀ ತತಿಮ್ಮು ಸ್ಸಾಲಿಹಾತ್.” (ಅಲ್ಲಾಹನಿಗೆ ಸರ್ವಸ್ತುತಿ. ಅವನ ಅನುಗ್ರಹದಿಂದಲೇ ಉತ್ತಮ ಕಾರ್ಯಗಳು ಪೂರ್ಣವಾಗುತ್ತವೆ).
ಪ್ರಶ್ನೆ 35. ಏನಾದರೂ ಕೆಟ್ಟದು ಸಂಭವಿಸಿದರೆ ಏನು ಹೇಳಬೇಕು?
ಉತ್ತರ: “ಅಲ್-ಹಮ್ದುಲಿಲ್ಲಾಹಿ ಅಲಾ ಕುಲ್ಲಿ ಹಾಲ್.” (ಎಲ್ಲಾ ಅವಸ್ಥೆಗಳಲ್ಲೂ ಅಲ್ಲಾಹನಿಗೆ ಸರ್ವಸ್ತುತಿ).
ಪ್ರಶ್ನೆ 36. ಸಲಾಂ ಹೇಳುವುದು ಮತ್ತು ಅದಕ್ಕೆ ಉತ್ತರಿಸುವುದು ಹೇಗೆ?
ಉತ್ತರ: ಮುಸಲ್ಮಾನನು, “ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಸಲಾಂ ಹೇಳಬೇಕು. ಸಲಾಂ ಹೇಳಿದವರಿಗೆ, “ವಅಲೈಕುಮು ಸ್ಸಲಾಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಉತ್ತರಿಸಬೇಕು.
ಪ್ರಶ್ನೆ 37. ಮಳೆ ಸುರಿಯುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಅಲ್ಲಾಹುಮ್ಮ ಸಯ್ಯಿಬನ್ ನಾಫಿಅನ್) “ಓ ಅಲ್ಲಾಹ್! ಪ್ರಯೋಜನಕರ ಮಳೆಯಾಗಿರಲಿ.”
ಪ್ರಶ್ನೆ 38. ಮಳೆ ಸುರಿಯುವುದು ನಿಂತರೆ ಏನು ಪ್ರಾರ್ಥಿಸಬೇಕು?
ಉತ್ತರ: (ಮುತಿರ್ನಾ ಬಿಫದ್ಲಿಲ್ಲಾಹಿ ವರಹ್ಮತಿಹೀ) “ಅಲ್ಲಾಹನ ಔದಾರ್ಯದಿಂದ ಮತ್ತು ಕರುಣೆಯಿಂದ ನಮಗೆ ಮಳೆ ಸುರಿಯಿತು.”
ಪ್ರಶ್ನೆ 39: ಗಾಳಿ ಬೀಸುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಖೈರಹಾ, ವಅಊದು ಬಿಕ ಮಿನ್ ಶರ್ರಿಹಾ) “ಓ ಅಲ್ಲಾಹ್! ನಾನು ಅದರ (ಗಾಳಿಯ) ಒಳಿತನ್ನು ನಿನ್ನಲ್ಲಿ ಬೇಡುತ್ತಿದ್ದೇನೆ. ಮತ್ತು ನಾನು ಅದರ ಕೆಡುಕಿನಿಂದ ನಿನ್ನ ರಕ್ಷೆ ಬೇಡುತ್ತಿದ್ದೇನೆ.”
ಪ್ರಶ್ನೆ 40. ಗುಡುಗಿನ ಶಬ್ಧವನ್ನು ಕೇಳುವಾಗ ಏನು ಪ್ರಾರ್ಥಿಸಬೇಕು?
ಉತ್ತರ: (ಸುಬ್ಹಾನಲ್ಲದೀ ಯುಸಬ್ಬಿಹು ರ್ರಅದು ಬಿಹಮ್ದಿಹೀ ವಲ್ಮಲಾಇಕತು ಮಿನ್ ಖೀಫತಿಹೀ) “ಗುಡುಗು ಸ್ತುತಿಯೊಂದಿಗೆ ಮತ್ತು ಮಲಕ್ಗಳು ಭಯದಿಂದ ಪ್ರಕೀರ್ತನೆ ಮಾಡುವ ಅಲ್ಲಾಹು ಪರಿಪಾವನನು.”
ಪ್ರಶ್ನೆ 41. ಪರೀಕ್ಷಿಸಲ್ಪಟ್ಟವನನ್ನು ಕಂಡಾಗ ಏನು ಪ್ರಾರ್ಥಿಸಬೇಕು?
ಉತ್ತರ: “ಅಲ್ಹಮ್ದು ಲಿಲ್ಲಾಹಿಲ್ಲದೀ ಆಫಾನೀ ಮಿಮ್ಮಬ್ತಲಾಕ ಬಿಹೀ ವಫದ್ದಲನೀ ಅಲಾ ಕಸೀರಿನ್ ಮಿಮ್ಮನ್ ಖಲಕ ತಫ್ದೀಲಾ” (ಅಲ್ಲಾಹನಿಗೆ ಸ್ತುತಿ, ನಿನ್ನನ್ನು ಯಾವುದರಿಂದ ಅವನು ಪರೀಕ್ಷಿಸಿದನೋ ಅದರಿಂದ ಅವನು ನನ್ನನ್ನು ಪಾರು ಮಾಡಿದ್ದಾನೆ. ಮತ್ತು ಅವನು ಸೃಷ್ಟಿಸಿದ ಅನೇಕ ಸೃಷ್ಟಿಗಳಿಗಿಂತ ನನ್ನನ್ನು ಶ್ರೇಷ್ಠಗೊಳಿಸಿದ್ದಾನೆ.)
ಪ್ರಶ್ನೆ 42. ತನ್ನಿಂದ ದೃಷ್ಟಿ ತಾಗಬಹುದು ಎಂದು ಭಯಪಡುವವನು ಏನು ಪ್ರಾರ್ಥಿಸಬೇಕು?
ಉತ್ತರ: ಹದೀಸ್ನಲ್ಲಿ ಹೀಗಿದೆ: “ಒಬ್ಬ ವ್ಯಕ್ತಿ ತನ್ನಲ್ಲಿ, ತನ್ನ ಸಹೋದರನಲ್ಲಿ ಅಥವಾ ತನ್ನ ಆಸ್ತಿಯಲ್ಲಿ, ತನಗೆ ಅಚ್ಚರಿಯಾಗುವಂತದ್ದನ್ನು ಕಂಡರೆ ಬರಕತ್ಗಾಗಿ ಪ್ರಾರ್ಥಿಸಬೇಕು. ಏಕೆಂದರೆ ದೃಷ್ಟಿ ತಾಗುವುದು ಸತ್ಯವಾಗಿದೆ.”
ಪ್ರಶ್ನೆ 43. ಪ್ರವಾದಿ(ಸ) ರವರ ಮೇಲೆ ಸಲಾತ್ ಹೇಳುವುದು ಹೇಗೆ?
*******
ಸಮ್ಮಿಶ್ರ ವಿಷಯಗಳ ವಿಭಾಗ
ಸಮ್ಮಿಶ್ರ ವಿಷಯಗಳು: ಇವು ಹಲವಾರು ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳ ಸಂಗ್ರಹವಾಗಿದೆ.
ಪ್ರಶ್ನೆ 1. ಐದು ಉತ್ತರದಾಯಿತ್ವದ ನಿಯಮಗಳು ಯಾವುವು?
ಉತ್ತರ: 1. ವಾಜಿಬ್ (ಕಡ್ಡಾಯ)
2. ಮುಸ್ತಹಬ್ಬ್ (ಅಪೇಕ್ಷಣೀಯ)
3. ಮುಹರ್ರಮ್ (ನಿಷೇಧಿತ)
4. ಮಕ್ರೂಹ್ (ಅಸಹ್ಯಕರ)
5. ಮುಬಾಹ್ (ಸಮ್ಮತಾರ್ಹ)
ಪ್ರಶ್ನೆ 2. ಈ ಐದು ನಿಯಮಗಳನ್ನು ವಿವರಿಸಿ.
ಉತ್ತರ: 1. ವಾಜಿಬ್ (ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯ): ಉದಾಹರಣೆಗೆ ಐದು ವೇಳೆಯ ನಮಾಝ್, ರಮದಾನ್ ಉಪವಾಸ ಮತ್ತು ಮಾತಾಪಿತರಿಗೆ ಒಳಿತು ಮಾಡುವುದು.
- ವಾಜಿಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿದೆ.
2. ಮುಸ್ತಹಬ್ಬ್ (ಕಡ್ಡಾಯವಲ್ಲದ ಅಪೇಕ್ಷಣೀಯ ಕಾರ್ಯ): ಉದಾಹರಣೆಗೆ, ರವಾತಿಬ್ ಸುನ್ನತ್ ನಮಾಝ್, ರಾತ್ರಿ ನಮಾಝ್, ಅನ್ನದಾನ ಮಾಡುವುದು, ಸಲಾಂ ಹೇಳುವುದು.
- ಮುಸ್ತಹಬ್ಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿಲ್ಲ.
ಪ್ರಮುಖ ಸೂಚನೆ:
ಒಂದು ಕಾರ್ಯವು ಸುನ್ನತ್ ಅಥವಾ ಮುಸ್ತಹಬ್ಬ್ ಎಂದು ತಿಳಿದರೆ ಮುಸಲ್ಮಾನನು (ಅದನ್ನು ತೊರೆಯದೆ) ಪ್ರವಾದಿ(ಸ) ರನ್ನು ಅನುಸರಿಸುತ್ತಾ ಅದನ್ನು ಮಾಡಲು ಆತುರಪಡಬೇಕು.
3. ಮುಹರ್ರಮ್ (ತ್ಯಜಿಸಲೇಬೇಕಾದ ಕಾರ್ಯ): ಉದಾಹರಣೆಗೆ, ಮದ್ಯಪಾನ ಮಾಡುವುದು, ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು ಮತ್ತು ಕುಟುಂಬ ಸಂಬಂಧವನ್ನು ಕಡಿಯುವುದು.
- ಮುಹರ್ರಮ್ ಕಾರ್ಯ ಮಾಡುವವನಿಗೆ ಶಿಕ್ಷೆ ಮತ್ತು ತೊರೆಯುವವನಿಗೆ ಪ್ರತಿಫಲವಿದೆ.
4. ಮಕ್ರೂಹ್ (ಅಸಹ್ಯಕರ ಕಾರ್ಯ): ಇದನ್ನು ತ್ಯಜಿಸುವುದು ಕಡ್ಡಾಯವಲ್ಲ. ಉದಾಹರಣೆಗೆ, ಎಡಗೈಯಲ್ಲಿ ಕೊಡುವುದು ಮತ್ತು ಪಡೆಯುವುದು, ನಮಾಝ್ನಲ್ಲಿ ಬಟ್ಟೆ ಮಡಚುವುದು.
- ಮಕ್ರೂಹ್ ಕಾರ್ಯ ತೊರೆಯುವವನಿಗೆ ಪ್ರತಿಫಲವಿದೆ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.
5. ಮುಬಾಹ್ (ಸಮ್ಮತಾರ್ಹ ಕಾರ್ಯ): ಇದನ್ನು ಮಾಡುವುದಕ್ಕೂ ಬಿಡುವುದಕ್ಕೂ ಆಯ್ಕೆ ಇದೆ. ಉದಾಹರಣೆಗೆ, ಸೇಬು ತಿನ್ನುವುದು, ಚಹಾ ಕುಡಿಯುವುದು. ಇದನ್ನು ಜಾಇಝ್ ಮತ್ತು ಹಲಾಲ್ ಎಂದು ಕೂಡ ಹೇಳಲಾಗುತ್ತದೆ.
- ಮುಬಾಹ್ ತೊರೆಯುವವನಿಗೆ ಪ್ರತಿಫಲವಿಲ್ಲ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.
ಪ್ರಶ್ನೆ 3- ಧರ್ಮವನ್ನು ಅರ್ಥಮಾಡಿಕೊಳ್ಳುವುದರ ಪ್ರತಿಫಲ, ಮತ್ತು ಧರ್ಮದಲ್ಲಿನ ಕರ್ಮಶಾಸ್ತ್ರದ ಶ್ರೇಷ್ಠತೆ ಏನು?
ಉತ್ತರ: ಮಾತುಗಳು, ಕರ್ಮಗಳು ಮತ್ತು ವಿಶ್ವಾಸಗಳಲ್ಲಿನ ಪರಿಶುದ್ಧತೆಯು ಇಹಲೋಕ ಮತ್ತು ಪರಲೋಕದಲ್ಲಿ ಸೌಭಾಗ್ಯವನ್ನು ಫಲವಾಗಿ ನೀಡುತ್ತದೆ.
ಮುಆವಿಯಾ ಬಿನ್ ಅಬೂ ಸುಫ್ಯಾನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾರಿಗೆ ಅಲ್ಲಾಹು ಒಳಿತನ್ನು ಬಯಸುತ್ತಾನೋ ಅವನಿಗೆ ಧರ್ಮದ ಜ್ಞಾನವನ್ನು ನೀಡುತ್ತಾನೆ.
ಅಂದರೆ, ಅವನನ್ನು ಧಾರ್ಮಿಕ ಶಾಸನಗಳ ಜ್ಞಾನಿಯನ್ನಾಗಿ ಮಾಡುತ್ತಾನೆ.
ಪ್ರಶ್ನೆ 3. ವ್ಯಾಪಾರ ಮತ್ತು ವ್ಯವಹಾರಗಳ ವಿಧಿಯೇನು?
ಉತ್ತರ: ಮೂಲನಿಯಮದ ಪ್ರಕಾರ ಎಲ್ಲಾ ವ್ಯಾಪಾರ ಮತ್ತು ವ್ಯವಹಾರಗಳು ಸಮ್ಮತಾರ್ಹವಾಗಿವೆ; ಅಲ್ಲಾಹು ನಿಷೇಧಿಸಿದ ಕೆಲವು ವಿಧಗಳ ಹೊರತು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. [ಅಲ್-ಬಕರ: 275].
ಪ್ರಶ್ನೆ 5. ಕೆಲವು ನಿಷೇಧಿಸಲಾದ ವ್ಯಾಪಾರ ಮತ್ತು ವ್ಯವಹಾರಗಳು ಯಾವುವು?
ಉತ್ತರ: 1. ವಂಚನೆ: ಸರಕುಗಳ ನ್ಯೂನತೆಯನ್ನು ಮರೆಮಾಚುವುದು ಇದರಲ್ಲಿ ಒಳಪಡುತ್ತದೆ.
ಅಬೂ ಹುರೈರ(ರ) ರಿಂದ ವರದಿ. ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಕೇಳಿದರು: “ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು: “ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.”
2. ಬಡ್ಡಿ: ಉದಾಹರಣೆಗೆ, ಎರಡು ಸಾವಿರ ರೂಪಾಯಿ ಕೊಡುತ್ತೇನೆಂದು ಹೇಳಿ ಒಂದು ಸಾವಿರ ರೂಪಾಯಿ ಸಾಲ ಪಡೆಯುವುದು.
ಹೆಚ್ಚಾಗಿ ಕೊಡುವ ರೂಪಾಯಿಗಳು ನಿಷೇಧಿತ ಬಡ್ಡಿಯಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. [ಅಲ್-ಬಕರ: 275].
3. ಮೋಸ ಮತ್ತು ಅಜ್ಞಾನ: ಉದಾಹರಣೆಗೆ, ಕುರಿಯ ಕೆಚ್ಚಲಲ್ಲಿರುವ ಹಾಲನ್ನು ಮಾರಾಟ ಮಾಡುವುದು, ಅಥವಾ ನೀರಿನಲ್ಲಿರುವ ಮೀನುಗಳನ್ನು ಅವುಗಳನ್ನು ಹಿಡಿಯುವ ಮೊದಲೇ ಮಾರಾಟ ಮಾಡುವುದು.
- ಹದೀಸ್ನಲ್ಲಿ ಹೀಗಿದೆ: “ಮೋಸದ ವ್ಯಾಪಾರವನ್ನು ಪ್ರವಾದಿಯವರು(ಸ) ನಿಷೇಧಿಸಿದ್ದಾರೆ.”
ಪ್ರಶ್ನೆ 6. ಅಲ್ಲಾಹು ನಿಮಗೆ ನೀಡಿದ ಕೆಲವು ಅನುಗ್ರಹಗಳನ್ನು ತಿಳಿಸಿ.
ಉತ್ತರ: 1. ನಿನಗೆ ಅಲ್ಲಾಹನು ಇಸ್ಲಾಂ ಧರ್ಮವನ್ನು ದಯಪಾಲಿಸಿರುವ ಮತ್ತು ನೀನು ಸತ್ಯನಿಷೇಧಿಗಳಲ್ಲಿ ಇಲ್ಲದಿರುವ ಅನುಗ್ರಹ.
2. ನೀನು ಸುನ್ನತ್ ಪಾಲಿಸುವವನಾಗಿರುವೆ ಮತ್ತು ನೂತನವಾದಿಯಲ್ಲದಿರುವ ಅನುಗ್ರಹ.
3. ಕೇಳುವ, ನೋಡುವ, ನಡೆಯುವ ಮುಂತಾದ ಆರೋಗ್ಯದ ಅನುಗ್ರಹ.
4. ಆಹಾರ, ಪಾನೀಯ, ಬಟ್ಟೆ-ಬರೆ ಮುಂತಾದಗಳ ಅನುಗ್ರಹ.
ಅಲ್ಲಾಹು ನಿನಗೆ ನೀಡಿದ ಅನುಗ್ರಹಗಳು ಅಸಂಖ್ಯವಾಗಿದ್ದು ಅವುಗಳನ್ನು ಎಣಿಸಲು ಸಾಧ್ಯವಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಎಣಿಕೆ ಮಾಡಲು ನಿಮ್ಮಿಂದ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಅನ್ನಹ್ಲ್:18].
ಪ್ರಶ್ನೆ 6. ಅನುಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ಕರ್ತವ್ಯವೇನು? ನಾವು ಅವುಗಳಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು?
ಉತ್ತರ: ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವುದು ಕಡ್ಡಾಯವಾಗಿದೆ. ಕೃತಜ್ಞತೆ ಸಲ್ಲಿಸುವುದು ಎಂದರೆ ನಾಲಗೆಯ ಮೂಲಕ ಅಲ್ಲಾಹನನ್ನು ಸ್ತುತಿಸುವುದು ಮತ್ತು ಪ್ರಶಂಸಿಸುವುದು, ಅನುಗ್ರಹಗಳನ್ನು ಅಲ್ಲಾಹನಿಗೆ ಮಾತ್ರ ಸೇರಿಸಿ ಹೇಳುವುದು ಮತ್ತು ಆ ಅನುಗ್ರಹಗಳನ್ನು ಅಲ್ಲಾಹನಿಗೆ ಅವಿಧೇಯತೆ ತೋರುವ ವಿಧದಲ್ಲಿ ಬಳಸದೆ, ಅವನಿಗೆ ತೃಪ್ತಿಯಾಗುವ ವಿಧದಲ್ಲಿ ವಿನಿಯೋಗಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ; ನಾನು ನಿಮ್ಮನ್ನು ಸ್ಮರಿಸುತ್ತೇನೆ. ನನಗೆ ಕೃತಜ್ಞರಾಗಿರಿ; ನನಗೆ ಕೃತಘ್ನರಾಗಬೇಡಿ. [ಅಲ್-ಬಖರ: 152].
ಪ್ರಶ್ನೆ 7. ಮುಸ್ಲಿಮರ ಹಬ್ಬಗಳು ಯಾವುವು?
ಉತ್ತರ: ಈದುಲ್ ಫಿತ್ರ್ (ರಂಜಾನ್) ಮತ್ತು ಈದುಲ್ ಅದ್ಹಾ (ಬಕ್ರೀದ್). ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಹದೀಸ್ನಲ್ಲಿ ಬಂದಂತೆ, ಅವರು ಹೇಳಿದರು: ಪ್ರವಾದಿ(ಸ) ರವರು ಮದೀನಕ್ಕೆ ಬಂದಾಗ ಅಲ್ಲಿನ ಜನರು ವರ್ಷದ ಎರಡು ದಿನಗಳಲ್ಲಿ ಆಟವಾಡುವುದನ್ನು ಕಂಡರು. ಅವರು ಕೇಳಿದರು: “ಈ ಎರಡು ದಿನಗಳ ವಿಶೇಷತೆಯೇನು?” ಜನರು ಉತ್ತರಿಸಿದರು: “ನಾವು ಅಜ್ಞಾನಕಾಲದಿಂದಲೇ ಈ ಎರಡು ದಿನಗಳಲ್ಲಿ ಆಟವಾಡುತ್ತಿದ್ದೇವೆ.” ಆಗ ಪ್ರವಾದಿ(ಸ) ರವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಈ ಎರಡು ದಿನಗಳ ಬದಲು ಬೇರೆ ಎರಡು ದಿನಗಳನ್ನು ನೀಡಿದ್ದಾನೆ: ಈದುಲ್ ಅದ್ಹಾ ಮತ್ತು ಈದುಲ್ ಫಿತ್ರ್.”
ಈ ಎರಡು ಹಬ್ಬಗಳ ಹೊರತಾದ ಹಬ್ಬಗಳೆಲ್ಲವೂ ಬಿದ್ಅತ್(ನವೀನಾಚಾರ) ಆಗಿವೆ.
ಪ್ರಶ್ನೆ 8. ಶ್ರೇಷ್ಠ ತಿಂಗಳು ಯಾವುದು?
ಉತ್ತರ: ರಮದಾನ್ ತಿಂಗಳು.
ಪ್ರಶ್ನೆ 9. ಶ್ರೇಷ್ಠ ದಿನ ಯಾವುದು?
ಉತ್ತರ: ಶುಕ್ರವಾರ.
ಪ್ರಶ್ನೆ 10. ವರ್ಷದ ಅತಿಶ್ರೇಷ್ಠ ದಿನ ಯಾವುದು?
ಉತ್ತರ: ಬಲಿ ದಿನ. ಅರಫಾ ದಿನ ಎಂದೂ ಹೇಳಲಾಗುತ್ತದೆ.
ಪ್ರಶ್ನೆ 11. ವರ್ಷದ ಅತಿಶ್ರೇಷ್ಠ ರಾತ್ರಿ ಯಾವುದು?
ಉತ್ತರ: ಲೈಲತುಲ್ ಕದ್ರ್.
ಪ್ರಶ್ನೆ 12. ಅನ್ಯ ಮಹಿಳೆಯನ್ನು ನೋಡಿದರೆ ಏನು ಮಾಡಬೇಕು?
ಉತ್ತರ: ದೃಷ್ಟಿಗಳನ್ನು ತಗ್ಗಿಸಬೇಕು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸತ್ಯವಿಶ್ವಾಸಿಗಳೊಡನೆ, ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಲು ಹೇಳಿರಿ.” [ಅನ್ನೂರ್:30]
ಪ್ರಶ್ನೆ 14: ಮುಸ್ಲಿಮ್ ಮಹಿಳೆಯರ ಹಿಜಾಬ್ನ ಗುಣಲಕ್ಷಣಗಳು ಯಾವುವು?
ಉತ್ತರ: ಸಂಪೂರ್ಣ ದೇಹವನ್ನು ಮುಚ್ಚುವುದು.
- ಅಲಂಕಾರಮುಕ್ತವಾಗಿರಬಾರದು.
– ದೇಹ ಪ್ರದರ್ಶನವಾಗುವಂತಿರಬಾರದು.
– ಅದು ವಿಶಾಲವಾಗಿರಬೇಕು, ಬಿಗಿಯಾಗಿರಬಾರದು.
- ಧೂಪದಿಂದಾಗಲಿ ಸುಗಂಧದಿಂದಾಗಲಿ ಪರಿಮಳಯುಕ್ತವಾಗಿರಬಾರದು.
– ಅದು ಪುರುಷರ ಉಡುಪುಗಳನ್ನು ಹೋಲುವಂತಿರಬಾರದು.
– ಸತ್ಯನಿಷೇಧಿನಿಯರು ಮತ್ತು ದುಷ್ಟೆಯರು ಧರಿಸುವ ಉಡುಪಿನಂತೆ ಇರದಿರುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಪ್ರವಾದಿಯವರೇ! ನಿಮ್ಮ ಮಡದಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ—ಅವರು ತಮ್ಮ ಮೈಮೇಲೆ ಚಾದರಗಳನ್ನು ಹೊದ್ದುಕೊಳ್ಳಲು ಹೇಳಿರಿ. ಇದರಿಂದ ಅವರನ್ನು ಬಹಳ ಬೇಗ ಗುರುತು ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಕಿರುಕುಳಗಳು ಉಂಟಾಗುವುದಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. [ಅಲ್-ಅಹ್ಝಾಬ್: 59]
ಸೂಕ್ತಯ ಅರ್ಥ: “ಓ ಪ್ರವಾದಿಯವರೇ! ನಿಮ್ಮ ಪತ್ನಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಮ್ಮ ಮುಖ, ಎದೆ ಮತ್ತು ತಲೆಗಳನ್ನು ಮುಚ್ಚಿಕೊಳ್ಳಲು, ತಮ್ಮ ಮೇಲುವಸ್ತ್ರಗಳು ಮತ್ತು ಹೊದಿಕೆಗಳನ್ನು ತಮ್ಮ ತಲೆಗಳ ಹಾಗೂ ಮುಖಗಳ ಮೇಲೆ ಇಳಿಬಿಡುವಂತೆ ಹೇಳಿರಿ. ಅವರು ಸಭ್ಯತೆ ಮತ್ತು ಸಂರಕ್ಷಣೆಯಿಂದ ಗುರುತಿಸಲ್ಪಡಲು, ಮತ್ತು ಯಾವುದೇ ಕೆಡುಕು ಅಥವಾ ಕಿರುಕುಳಕ್ಕೆ ಒಳಗಾಗದಿರಲು ಅದು ಹೆಚ್ಚು ಸೂಕ್ತವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು. ಅವನು ನಿಮ್ಮ ಹಿಂದಿನ ತಪ್ಪುಗಳನ್ನು ಕ್ಷಮಿಸಿದ್ದಾನೆ ಮತ್ತು ನಿಮಗೆ ಧರ್ಮಸಮ್ಮತ (ಹಲಾಲ್) ಮತ್ತು ನಿಷಿದ್ಧ (ಹರಾಮ್) ವಾದವುಗಳನ್ನು ಸ್ಪಷ್ಟಪಡಿಸುವ ಮೂಲಕ ನಿಮ್ಮ ಮೇಲೆ ಕರುಣೆ ತೋರಿದ್ದಾನೆ.”
ಪ್ರಶ್ನೆ 13. ಮನುಷ್ಯನ ಶತ್ರುಗಳು ಯಾರು?
ಉತ್ತರ: 1. ಕೆಡುಕಿಗೆ ಪ್ರೇರೇಪಿಸುವ ಮನಸ್ಸು: ಅಂದರೆ ಮನುಷ್ಯನ ಮನಸ್ಸು ಮತ್ತು ಮೋಹವು ಸರ್ವಶಕ್ತನಾದ ಅಲ್ಲಾಹನಿಗೆ ಅವಿಧೇಯತೆ ತೋರಲು ಪ್ರೇರೇಪಿಸುವುದನ್ನು ಅನುಸರಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಮನಸ್ಸು ದುಷ್ಕರ್ಮವನ್ನು ಪ್ರೇರೇಪಿಸುತ್ತಲೇ ಇರುವಂತದ್ದಾಗಿದೆ. ನನ್ನ ರಬ್ಬ್ನ ಕರುಣೆಗೆ ಪಾತ್ರವಾದ ಮನಸ್ಸಿನ ಹೊರತು. ಖಂಡಿತವಾಗಿಯೂ ನನ್ನ ರಬ್ಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಯೂಸುಫ್:53]
2. ಶೈತಾನ್: ಶೈತಾನ್ ಮನುಷ್ಯನ ಶತ್ರು. ಮನುಷ್ಯನನ್ನು ದಾರಿ ತಪ್ಪಿಸುವುದು ಮತ್ತು ಕೆಡುಕುಗಳನ್ನು ಮಾಡುವಂತೆ ದುರ್ಬೋಧನೆ ಮಾಡಿ ನರಕವಾಸಿಯಾಗುವಂತೆ ಮಾಡುವುದು ಅವನ ಗುರಿಯಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ. [ಅಲ್-ಬಕರ: 168].
3. ಕೆಟ್ಟ ಸಂಗಡಿಗರು: ಅಂದರೆ ಕೆಡುಕನ್ನು ಆದೇಶಿಸುವವರು ಮತ್ತು ಒಳಿತನ್ನು ವಿರೋಧಿಸುವವರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಂದು ಆಪ್ತಮಿತ್ರರು ಪರಸ್ಪರ ವೈರಿಗಳಾಗುವರು. ದೇವಭಯವುಳ್ಳವರ ಹೊರತು. [ಅಝ್ಝುಖ್ರುಫ್: 67].
ಪ್ರಶ್ನೆ 16. ತಕ್ವಾ (ದೇವಭಯ) ಎಂದರೇನು?
ಉತ್ತರ: ವಿಧೇಯ ಕಾರ್ಯಗಳನ್ನು ಮಾಡುವುದು ಮತ್ತು ಅವಿಧೇಯ ಕಾರ್ಯಗಳನ್ನು ತ್ಯಜಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅವನನ್ನು ಭಯಪಡುವವರ ಜೊತೆಗಿದ್ದಾನೆ. [ಅಲ್-ಬಖರ: 194].
ಪ್ರಶ್ನೆ 14. ಪಶ್ಚಾತ್ತಾಪ ಎಂದರೇನು?
ಉತ್ತರ: ಪಶ್ಚಾತ್ತಾಪ ಎಂದರೆ ಅಲ್ಲಾಹನ ಆಜ್ಞೋಲ್ಲಂಘನೆಯನ್ನು ತೊರೆದು ಅವನ ವಿಧೇಯತೆಗೆ ಮರಳುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಪಶ್ಚಾತ್ತಾಪಪಡುವವರು, ವಿಶ್ವಾಸವಿಡುವವರು ಮತ್ತು ಸತ್ಕರ್ಮವೆಸಗುವವರು ಹಾಗೂ ಅನಂತರ ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲುವವರಿಗೆ ನಿಶ್ಚಯವಾಗಿಯೂ ನಾನು ಕ್ಷಮಿಸುವೆನು. [ತ್ವಾಹಾ:82]
ಪ್ರಶ್ನೆ 15. ಸರಿಯಾದ ಪಶ್ಚಾತ್ತಾಪದ ಷರತ್ತುಗಳು ಯಾವುವು?
ಉತ್ತರ: 1. ಪಾಪವನ್ನು ತ್ಯಜಿಸುವುದು.
2. ಆಗಿ ಹೋದದ್ದಕ್ಕೆ ವಿಷಾದಿಸುವುದು.
3. ಅದನ್ನು ಮುಂದುವರಿಸುವುದಿಲ್ಲವೆಂದು ದೃಢ ನಿರ್ಧಾರ ತಳೆಯುವುದು.
4. ಜನರ ಹಕ್ಕುಗಳನ್ನು ಅವರಿಗೆ ಮರಳಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ. [ಆಲು ಇಮ್ರಾನ್:135]
ಪ್ರಶ್ನೆ 19. ಮುಸ್ಲಿಮರಿಗೆ ಘನತೆ ಮತ್ತು ವಿಜಯದ ಮಾರ್ಗ ಯಾವುದು?
ಉತ್ತರ: ಇಸ್ಲಾಮನ್ನು ಪಾಲಿಸುವುದು ಮತ್ತು ಪಾಪಗಳನ್ನು ತ್ಯಜಿಸುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುತ್ತಾನೆ ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸುತ್ತಾನೆ. [ಮುಹಮ್ಮದ್:7]
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹು ಜನರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ, ಜನರು ಸ್ವಯಂ ತಮ್ಮಲ್ಲಿ ಬದಲಾವಣೆ ತರುವ ತನಕ. [ಅರ್ರಅ್ದ್:11]
ಪ್ರಶ್ನೆ 20. ಪ್ರಾರ್ಥನೆಯ ಮಹತ್ವವೇನು?
ಉತ್ತರ: ದುಆ ಅತ್ಯಂತ ಶ್ರೇಷ್ಠ ಆರಾಧನೆಗಳು ಮತ್ತು ಅತ್ಯುನ್ನತ ಸಾಮೀಪ್ಯಗಳ ಪೈಕಿ ಒಂದಾಗಿದೆ.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ: “ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು.” [ಗಾಫಿರ್:60].
- ಪ್ರವಾದಿ (ﷺ) ರವರು ಹೇಳಿದರು: "ಪ್ರಾರ್ಥನೆಯೇ ಆರಾಧನೆಯಾಗಿದೆ."
ಪ್ರಶ್ನೆ 16. ಪ್ರವಾದಿ ﷺ ರವರ ಮೇಲೆ ಸ್ವಲಾತ್ ಹೇಳುವುದು ಎಂದರೇನು?
ಉತ್ತರ: ಸ್ವಲಾತ್ ಹೇಳುವುದು ಎಂದರೆ ಉಪರಿಲೋಕದಲ್ಲಿ ಅಲ್ಲಾಹು ತನ್ನ ಪ್ರವಾದಿಯ(ಸ) ಬಗ್ಗೆ ಪ್ರಶಂಸಿಸಲು ಪ್ರಾರ್ಥಿಸುವುದು.
ಪ್ರಶ್ನೆ 17. ಸುಬ್ಹಾನಲ್ಲಾಹ್ ಎಂದರೇನು?
ಉತ್ತರ: ಸುಬ್ಹಾನಲ್ಲಾಹ್ ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ಅಪೂರ್ಣತೆ, ನ್ಯೂನತೆ ಮತ್ತು ಕೆಡುಕುಗಳಿಂದ ಪರಿಶುದ್ಧಿಗೊಳಿಸುವುದು.
ಪ್ರಶ್ನೆ 18. ಅಲ್ಹಮ್ದುಲಿಲ್ಲಾಹ್ ಎಂದರೇನು?
ಉತ್ತರ: ಅಲ್ಹಮ್ದುಲಿಲ್ಲಾಹ್ ಎಂದರೆ ಅಲ್ಲಾಹನನ್ನು ಪ್ರಶಂಸಿಸುವುದು ಮತ್ತು ಪರಿಪೂರ್ಣತೆಯ ಗುಣಲಕ್ಷಣಗಳ ಮೂಲಕ ಅವನನ್ನು ಬಣ್ಣಿಸುವುದು.
ಪ್ರಶ್ನೆ 19. ಅಲ್ಲಾಹು ಅಕ್ಬರ್ ಎಂದರೇನು?
ಉತ್ತರ: ಅಲ್ಲಾಹು ಅಕ್ಬರ್ ಎಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತ ದೊಡ್ಡವನು, ಶ್ರೇಷ್ಠನು ಮತ್ತು ಶಕ್ತಿವಂತನು ಎಂದು ಹೇಳುವುದು.
ಪ್ರಶ್ನೆ 20. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದರೇನು?
ಉತ್ತರ: ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದರೆ ಅಲ್ಲಾಹನ ಶಕ್ತಿ-ಸಾಮರ್ಥ್ಯವಿಲ್ಲದೆ ಮನುಷ್ಯನಿಗೆ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಹೊರಳುವ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ.
ಪ್ರಶ್ನೆ 21. ಅಸ್ತಗ್ಫಿರುಲ್ಲಾಹ್ ಎಂದರೇನು?
ಉತ್ತರ: ಅಸ್ತಗ್ಫಿರುಲ್ಲಾಹ್ ಎಂದರೆ ದಾಸನು ಅಲ್ಲಾಹನೊಡನೆ ತನ್ನ ಪಾಪಗಳನ್ನು ಅಳಿಸಲು ಮತ್ತು ನ್ಯೂನತೆಗಳನ್ನು ಮರೆಮಾಚಲು ಬೇಡುವುದು.
*******
ಸಮಾಪ್ತಿ
ಅಂತಿಮವಾಗಿ:
ಮಕ್ಕಳು ಸರಿಯಾದ ಮಾತು, ಕರ್ಮ ಮತ್ತು ನಂಬಿಕೆಯೊಡನೆ ಬೆಳೆಯಲು ತಂದೆ-ತಾಯಿಗಳು ಈ ಪ್ರಶ್ನೆಗಳನ್ನು ಮಕ್ಕಳಿಗೆ ವಿವರಿಸಿಕೊಡಬೇಕು. ಮಕ್ಕಳಿಗೆ ಆಹಾರ ಮತ್ತು ಬಟ್ಟೆ-ಬರೆಗಳನ್ನು ನೀಡುವುದಕ್ಕಿಂತಲೂ ಈ ತರಬೇತಿಯು ಹೆಚ್ಚು ಮುಖ್ಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ನರಕಾಗ್ನಿಯಿಂದ ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರ ಹೃದಯದ ಬಲಿಷ್ಠ ದೇವದೂತರುಗಳಿದ್ದಾರೆ. ಅಲ್ಲಾಹನ ಯಾವುದೇ ಆಜ್ಞೆಯನ್ನೂ ಅವರು ಧಿಕ್ಕರಿಸುವುದಿಲ್ಲ. ಅವರಿಗೆ ಆಜ್ಞಾಪಿಸಲಾಗುವುದೆಲ್ಲವನ್ನೂ ಅವರು ನಿರ್ವಹಿಸುತ್ತಾರೆ. [ಅತ್ತಹ್ರೀಮ್:6].
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ಪುರುಷನು ತನ್ನ ಕುಟುಂಬದ ಮೇಲೆ ಹೊಣೆಗಾರಿಕೆಯುಳ್ಳವನಾಗಿದ್ದಾನೆ. ಅವನ ಹೊಣೆಗಾರಿಕೆಯ ಬಗ್ಗೆ ಅವನಲ್ಲಿ ಪ್ರಶ್ನಿಸಲಾಗುವುದು. ಮಹಿಳೆ ತನ್ನ ಗಂಡನ ಮನೆಯವರ ಮೇಲೆ ಹೊಣೆಗಾರಿಕೆಯುಳ್ಳವಳಾಗಿದ್ದಾಳೆ. ಅವಳ ಹೊಣೆಗಾರಿಕೆಯ ಬಗ್ಗೆ ಅವಳಲ್ಲಿ ಪ್ರಶ್ನಿಸಲಾಗುವುದು.”
ನಮ್ಮ ಪ್ರವಾದಿ ಮುಹಮ್ಮದ್ صلى الله عليه وسلم ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಾಬಾಗಳ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
Related books
All books
ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು85 ಭಾಷೆಗಳುಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು
ಶೇಖ್ ಅಬ್ದುರ್-ರಹಮಾನ್ ಇಬ್ನ್ ನಾಸಿರ್ ಅಸ್-ಸಾದಿ ರವರ 'ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು' ಎಂಬ ಪುಸ್ತಕವು, ಆಳವಾದ ಈಮಾನಿನ ದೃಷ್ಟಿಕೋನದಿಂದ ನಿಜವಾದ ಸಂತೋಷದ ಕಾರಣಗಳನ್ನು ವಿಶ್ಲೇಷಿಸುತ್ತದೆ. ಇದು ಈಮಾನ್ (ಸತ್ಯವಿಶ್ವಾಸ), ಸತ್ಕರ್ಮ, ಅಲ್ಲಾಹನ ಸ್ಮರಣೆ, ಸಂತೃಪ್ತಿ, ಅನುಗ್ರಹಗಳ ಕುರಿತು ಚಿಂತನೆ, ಪರೋಪಕಾರ, ಅಲ್ಲಾಹನಲ್ಲಿ ಭರವಸೆ (ತವಕ್ಕುಲ್), ಸಹನೆ, ಮತ್ತು ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡುವುದರ ಮೂಲಕ ಓದುಗರಿಗೆ ಹೃದಯದ ನೆಮ್ಮದಿಯೆಡೆಗೆ ದಾರಿ ತೋರಿಸುತ್ತದೆ. ಈ ಕೃತಿಯು ತನ್ನ ಸುಂದರವಾದ ಶೈಲಿಯ ಮೂಲಕ, ಜೀವನದ ಏರಿಳಿತಗಳ ನಡುವೆಯೂ ನೆಮ್ಮದಿಯ, ಸಮತೋಲಿತ ಮತ್ತು ಸಂತೋಷದ ಜೀವನಕ್ಕಾಗಿ ಒಂದು ಮಾರ್ಗಸೂಚಿಯನ್ನು ನಮ್ಮ ಮುಂದಿಡುತ್ತದೆ.
ಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು78 ಭಾಷೆಗಳುಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು
ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರ 'ಮುಸ್ಲಿಮ್ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು' ಎಂಬ ಪುಸ್ತಕವು, ಸಾಮಾನ್ಯ ಮುಸ್ಲಿಮರಿಗೆ ಒಂದು ಜ್ಞಾನದ ಭಂಡಾರವಾಗಲೆಂದು ಇಮಾಮರು ರಚಿಸಿದ, ಮಹತ್ತರ ಪ್ರಯೋಜನವುಳ್ಳ ಒಂದು ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ, ಪ್ರತಿಯೊಬ್ಬ ಮುಸ್ಲಿಮನಿಗೂ ಸರಿಯಾದ ವಿಶ್ವಾಸ (ಅಖೀದಾ) ಮತ್ತು ಆರಾಧನೆಯನ್ನು ಸುಲಭವಾಗಿ ತಲುಪಿಸುವ ಸಲುವಾಗಿ, ಕುರ್ಆನ್ ಮತ್ತು ಸುನ್ನತ್ತನ್ನು ಆಧಾರವಾಗಿಟ್ಟುಕೊಂಡು, ಸರಳ ಮತ್ತು ಸ್ಪಷ್ಟವಾದ ಶೈಲಿಯಲ್ಲಿ, ದೀನಿನ ಮೂಲ ತತ್ವಗಳು ಮತ್ತು ಸ್ತಂಭಗಳಾದ ತೌಹೀದ್, ಈಮಾನ್ ಮತ್ತು ಇಸ್ಲಾಂನಿಂದ ಹಿಡಿದು, ಸ್ವಚ್ಛತೆ (ತಹಾರತ್) ಮತ್ತು ನಮಾಝಿನ ನಿಯಮಗಳು, ಇಸ್ಲಾಮಿನ ಶಿಷ್ಟಾಚಾರಗಳು, ಹಾಗೂ ಶಿರ್ಕ್ ಮತ್ತು ಪಾಪಗಳ ಅಪಾಯಗಳ ಬಗ್ಗೆ ವಿವರಿಸಲಾಗಿದೆ.
ಇಸ್ಲಾಮ್ ಧರ್ಮದ ಸಂಕ್ಷಿಪ್ತ ಸಂದೇಶ — ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ61 ಭಾಷೆಗಳುಇಸ್ಲಾಮ್ ಧರ್ಮದ ಸಂಕ್ಷಿಪ್ತ ಸಂದೇಶ — ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಇಸ್ಲಾಮ್ (ಪುರಾವೆ ಸಾಕ್ಷ್ಯಾಧಾರಗಳಿಲ್ಲದ ಪ್ರತಿ)[1] [1] ಇದರಲ್ಲಿರುವ ಪ್ರತಿಯೊಂದು ವಿಷಯಕ್ಕೂ ಪವಿತ್ರ ಕುರ್ಆನ್ ಮತ್ತು ಪ್ರವಾದಿಯವರ ಸುನ್ನತ್ ನಿಂದ ಪುರಾವೆಗಳನ್ನು ಒಳಗೊಂಡಿರುವ ಈ ಪುಸ್ತಿಕೆಯ ಇನ್ನೊಂದು ಪ್ರತಿಯನ್ನು ಈ ಲಿಂಕ್ ಮೂಲಕ ಓದಬಹುದು: https://islamhouse.com/ar/books/2830071. ಇದು ಇಸ್ಲಾಮ್ ಧರ್ಮದ ಸಂಕ್ಷಿಪ್ತ ಪರಿಚಯವನ್ನು ಹೊಂದಿರುವ ಪ್ರಮುಖ ಸಂದೇಶವಾಗಿದೆ. ಇದು ಇಸ್ಲಾಮ್ ಧರ್ಮದ ಪ್ರಮುಖ ಮೂಲಾಧಾರಗಳು, ಬೋಧನೆಗಳು ಮತ್ತು ಸದ್ಗುಣಗಳನ್ನು ಅದರ ಮೂಲ ಆಧಾರ ಗ್ರಂಥಗಳಾದ ಪವಿತ್ರ ಕುರ್ಆನ್ ಮತ್ತು ಸುನ್ನತ್ (ಪ್ರವಾದಿಚರ್ಯೆ) ನಿಂದ ವಿವರಿಸುತ್ತದೆ. ಧರ್ಮವನ್ನು ಅನುಸರಿಸಿ ಜೀವಿಸಲು ಬದ್ಧರಾಗಿರುವ ಎಲ್ಲಾ ಮುಸ್ಲಿಮರು ಮತ್ತು ಮುಸ್ಲಿಮೇತರರಿಗೆ ಅವರದ್ದೇ…
ಅಝಾನ್ನ ಪದಗಳ ವಿವರಣೆ55 ಭಾಷೆಗಳುಅಝಾನ್ನ ಪದಗಳ ವಿವರಣೆ
'ಅಝಾನ್ನ ಪದಗಳ ವಿವರಣೆ' ಎಂಬ ಈ ಪುಸ್ತಕವು ಅಝಾನ್ನ ಪ್ರತಿಯೊಂದು ಪದವನ್ನೂ ಆಧ್ಯಾತ್ಮಿಕವಾಗಿ ವಿವರಿಸುತ್ತದೆ. ಇದು ಅದರ ನಂಬಿಕೆಯ ಮತ್ತು ಶೈಕ್ಷಣಿಕ ಆಯಾಮಗಳನ್ನು ಎತ್ತಿ ತೋರಿಸುತ್ತದೆ. ಅಝಾನ್ ಎನ್ನುವುದು ಕೇವಲ ನಮಾಝಿಗಾಗಿ ನೀಡುವ ಕರೆಯಲ್ಲ, ಬದಲಾಗಿ ಅದು ಏಕದೇವೋಪಾಸನೆ (ತೌಹೀದ್) ಮತ್ತು ಯಶಸ್ಸಿನತ್ತ ಕರೆಯುವ ದೈನಂದಿನ ಕರೆಯಾಗಿದೆ ಎಂದು ಈ ಕೃತಿ ಪ್ರತಿಪಾದಿಸುತ್ತದೆ. ಈ ಕೃತಿಯು ಅಲ್ಲಾಹನ ಹಿರಿಮೆ, ತೌಹೀದ್ನ ಸಾಕ್ಷ್ಯ, ಪ್ರವಾದಿತ್ವದ ಸಾಕ್ಷ್ಯ, ನಮಾಝ್ ಮತ್ತು ಯಶಸ್ಸಿನ ಕರೆಯಿಂದ ಹಿಡಿದು ತಕ್ಬೀರ್ ಮತ್ತು ತೌಹೀದ್ನೊಂದಿಗೆ ಮುಕ್ತಾಯವಾಗುವವರೆಗಿನ ಎಲ್ಲಾ ಪದಗಳ ಅರ್ಥಗಳನ್ನು ವಿವರವಾಗಿ ವಿಶ್ಲೇಷಿಸುತ್ತದೆ. ಅತ್ಯಂತ ಪ್ರಭಾವಶಾಲಿ ಶೈಲಿಯಲ್ಲಿ ಬರೆಯಲ್ಪಟ್ಟ ಈ ಪುಸ್ತಕವು, ಅಝಾನ್ನ ಪದಗಳಿಗೂ ಮತ್ತು ಅದರ ಆಧ್ಯಾತ್ಮಿಕ ಉದ್ದೇಶಗಳಿಗೂ…