ಕುರ್ಆನ್ ಮತ್ತು ಹದೀಸಿನ ಪ್ರಾರ್ಥನೆಗಳು.
ಲೇಖಕರು ಅಲ್ಲಾಹನ ಅತ್ಯಂತ ಅಗತ್ಯವನ್ನು ಹೊಂದಿರುವ ಲೇಖಕರು "ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು." ಸೂರಃ ಅಲ್ ಅಅ್ರಾಫ್, ಸೂಕ್ತ: 180. ಅಲ್ಲಾಹ್ - ಅಲ್-ಅವ್ವಲ್ (ಮೊದಲನೆಯವನು) - ಅಲ್-ಆಖಿರ್ (ಕೊನೆಯವನು) - ಅಝ್ಝಾಹಿರ್ (ಪ್ರಕಟವಾದವನು) - ಅಲ್-ಬಾತಿನ್ (ಗುಪ್ತವಾದವನು) - ಅಲ್-ಅಲಿಯ್ಯ್ (ಉನ್ನತನಾದವನು) - ಅಲ್-ಅಅಲಾ (ಅತ್ಯುನ್ನತನಾದವನು). ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
These files are generated automatically from the book's text; their layout may differ from the printed edition.
ಕುರ್ಆನ್ ಮತ್ತು ಹದೀಸಿನ ಪ್ರಾರ್ಥನೆಗಳು.
ಲೇಖಕರು
ಅಲ್ಲಾಹನ ಅತ್ಯಂತ ಅಗತ್ಯವನ್ನು ಹೊಂದಿರುವ ಲೇಖಕರು
ಶೈಖ್ ಸಈದ್ ಇಬ್ನು ಅಲೀ ಇಬ್ನು ವಹ್ಫ್ ಅಲ್ ಕಹ್ತಾನೀ "ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು." ಸೂರಃ ಅಲ್ ಅಅ್ರಾಫ್, ಸೂಕ್ತ: 180.
ಅಲ್ಲಾಹ್ - ಅಲ್-ಅವ್ವಲ್ (ಮೊದಲನೆಯವನು) - ಅಲ್-ಆಖಿರ್ (ಕೊನೆಯವನು) - ಅಝ್ಝಾಹಿರ್ (ಪ್ರಕಟವಾದವನು) - ಅಲ್-ಬಾತಿನ್ (ಗುಪ್ತವಾದವನು) - ಅಲ್-ಅಲಿಯ್ಯ್ (ಉನ್ನತನಾದವನು) - ಅಲ್-ಅಅಲಾ (ಅತ್ಯುನ್ನತನಾದವನು). ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
ಪೀಠಿಕೆ
ನಿಗೂಢ ರಹಸ್ಯಗಳನ್ನು ಅರಿಯುವವನು, ಸ್ತುತ್ಯರ್ಹನು, ಪ್ರತಾಪ ಶಾಲಿ, ಸರ್ವಶಕ್ತನು, ಎಲ್ಲಾ ರೀತಿಯ ಸಾಮರ್ಥ್ಯವುಳ್ಳವನು, ಅಧಿಕಾರವುಳ್ಳವನು, ಮಹಾ ಬಲಿಷ್ಠನು. ಅಲ್ಲಾಹನಿಗೆ ಸರ್ವ ಸ್ತುತಿ, ನಾವು ಅವನನ್ನು ಸ್ತುತಿಸುತ್ತೇವೆ, ಮತ್ತು ಅವನ ಸಹಾಯ ಹಾಗೂ ಕ್ಷಮೆಯನ್ನು ಬೇಡುತ್ತೇವೆ. ನಮ್ಮ ದುಷ್ಕೃತ್ಯಗಳಿಂದ ಹಾಗೂ ನಮ್ಮ ಆತ್ಮಗಳ ಕೇಡುಗಳಿಂದ ನಾವು ಅಲ್ಲಾಹನಲ್ಲಿ ಅಭಯವನ್ನು ಯಾಚಿಸುತ್ತೇವೆ. ಅಲ್ಲಾಹನು ಯಾರಿಗೆ ಸನ್ಮಾರ್ಗ ತೋರಿಸಿದನೋ ಅವನನ್ನು ಪಥಭ್ರಷ್ಟಗೊಳಿಸುವವರಾರೂ ಇಲ್ಲ ಮತ್ತು ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸಿದನೋ ಅವನಿಗೆ ಸನ್ಮಾರ್ಗ ತೋರಿಸುವವರಾರೂ ಇಲ್ಲ . ಆರಾಧನೆಗೆ ಅರ್ಹನಾದವನು ಅಲ್ಲಾಹನಲ್ಲದೆ ಬೇರೆ ಯಾರೂ ಇಲ್ಲ ಹಾಗೂ ಮುಹಮ್ಮದ್ (ಸ) ರವರು ಅಲ್ಲಾಹನ ಸಂದೇಶವಾಹಕರು ಮತ್ತು ದಾಸರೆಂದು ನಾನು ಸಾಕ್ಷ್ಯವಹಿಸುತ್ತೇನೆ. ಅವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಿ ಜೀವಿಸುವ ಅಂತ್ಯ ದಿನದ ತನಕ ಬರುವ ಸಜ್ಜನ ದಾಸರ ಮೇಲೆ ಅಲ್ಲಾಹನ ಶಾಂತಿ ಮತ್ತು ಸಮಾಧಾನವು ಸದಾ ವರ್ಷಿಸುತ್ತಿರಲಿ. ಮುಂದುವರಿದು ಹೇಳುವುದೇನೆಂದರೆ:
ಮಹಾ ಬಲಿಷ್ಠನು, ನಿರಪೇಕ್ಷನು, ಯುಕ್ತಿಪೂರ್ಣನು, ಬಹಳ ಸಹನೆಯುಳ್ಳವನು,ಅತ್ಯಧಿಕ ಮನ್ನಿಸುವವನು, ಅತ್ಯಧಿಕ ಕ್ಷಮಿಸುವವನು, ಅತ್ಯಧಿಕ ಕ್ಷಮೆ ನೀಡುವವನು, ಇದು ನನ್ನ "ಅದ್ದಿಕ್ರು ವ ದ್ದುಆಉ ವಲ್ ಇಲಾಜು ಬಿರ್ರುಖಾ ಮಿನಲ್ ಕಿತಾಬಿ ವಸ್ಸುನ್ನ"[2] ಎಂಬ ಪುಸ್ತಕದ ಸಂಕ್ಷೇಪವಾಗಿದೆ. ಇದರಲ್ಲಿ ನಾನು ಜನರ ಪ್ರಯೋಜನಕ್ಕಾಗಿ ಪ್ರಾರ್ಥನೆಯ ಭಾಗವನ್ನು ಸಂಕ್ಷಿಪ್ತಗೊಳಿಸಿದ್ದೇನೆ, ಮತ್ತು ಅದರೊಂದಿಗೆ ಕೆಲವು ಪ್ರಾರ್ಥನೆಗಳನ್ನು ಹಾಗೂ (ಅಲ್ಲಾಹನು ಇಚ್ಛಿಸಿದರೆ) ಕೆಲವೊಂದು ಲಾಭದಾಯಕ ಪ್ರಯೋಜನಗಳನ್ನು ಸೇರಿಸಿದ್ದೇನೆ. ಈ ಪುಸ್ತಕವನ್ನು ಮಹಾ ಉದಾರಿಯಾಗಿರುವ ಅಲ್ಲಾಹನ ಸಂತೃಪ್ತಿಯನ್ನು ಅರಸುವುದಕ್ಕಾಗಿ ನಿಷ್ಕಳಂಕವಾಗಿಸಲಿ ಎಂದು ಅಲ್ಲಾಹನ ಅತ್ಯಂತ ಸುಂದರ ನಾಮಗಳೊಂದಿಗೆ ಮತ್ತು ಅವನ ಅತ್ಯುನ್ನತ ಗುಣಲಕ್ಷಣಗಳೊಂದಿಗೆ ನಾನು ಬೇಡುತ್ತೇನೆ. ಖಂಡಿತವಾಗಿಯೂ ಅವನು ಅದಕ್ಕೆ ನೆರವು ನೀಡುವವನು ಮತ್ತು ಸಾಮರ್ಥ್ಯವುಳ್ಳವನಾಗಿದ್ದಾನೆ. [2] ಅಲ್ಲಾಹನಿಗೆ ಸರ್ವ ಸ್ತುತಿ, ಮೇಲೆ ಪ್ರಸ್ತಾಪಿಸಲಾದ ಮೂಲ ಪುಸ್ತಕವು ನಾಲ್ಕು ಸಂಪುಟಗಳಲ್ಲಿ ವಿಸ್ತಾರವಾದ ತಖ್ರೀಜ್ನೊಂದಿಗೆ ಮುದ್ರಿಸಲಾಗಿದೆ: ಅಲ್ ಅದ್ಕಾರ್ "ಹಿಸ್ನುಲ್ ಮುಸ್ಲಿಮ್" ಮೊದಲನೇ ಮತ್ತು ಎರಡನೇ ಸಂಪುಟದಲ್ಲಿ, ಅದ್ದುಆ ಮೂರನೇ ಸಂಪುಟದಲ್ಲಿ, ಅಲ್ ಇಲಾಜು ಬಿರ್ರುಖಾ ಅದರ ನಾಲ್ಕನೇ ಸಂಪುಟದಲ್ಲಿ.
ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನು, ಸೂಕ್ಷ್ಮವಾಗಿ ವೀಕ್ಷಿಸುವವನು, ಸಾಕ್ಷಿಯಾಗಿರುವನು, ಕಾಪಾಡುವವನು, ಸೂಕ್ಷ್ಮಜ್ಞನು, ಅತೀ ನಿಕಟವಾಗಿರುವವನು, ಉತ್ತರ ನೀಡುವವನು. ನಮ್ಮೆಲ್ಲರ ಪ್ರವಾದಿಗಳಾದ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಸಹಚರರ ಮೇಲೆ ಹಾಗೂ ಅವರ ಮಾರ್ಗದರ್ಶನವನ್ನು ಅನುಸರಿಸಿ ಅಂತಿಮ ದಿನದವರೆಗೆ ಬರುವ ಸಜ್ಜನರ ಮೇಲೆ ಅಲ್ಲಾಹನ ಶಾಂತಿ ಮತ್ತು ಸಮಾಧಾನವು ವರ್ಷಸಲಿ.
ಅತ್ಯಧಿಕ ಪ್ರೀತಿಸುವವನು, ಕೃತಜ್ಞನು, ಕೃತಜ್ಞತೆಯುಳ್ಳವನು, ಯಜಮಾನನು, ಸರ್ವರಿಗೂ ಆಶ್ರಯದಾತನಾಗಿರುವನು, ಪರಮಾಧಿಕಾರಿ, ಸರ್ವಾಧಿಕಾರಿ. ಈ ಪುಸ್ತಕವನ್ನು ಬರೆದವರು ಶೈಖ್ ಸಈದ್ ಇಬ್ನು ಅಲೀ ಇಬ್ನು ವಹ್ಫ್ ಅಲ್ ಕಹ್ತಾನೀ
ಮಹಾ ಪ್ರಚಂಡನು, ವಿಚಾರಣೆ ಮಾಡುವವನು, ಸನ್ಮಾರ್ಗ ತೋರಿಸುವವನು, ತೀರ್ಪುಗಾರನು, ಪರಮ ಪಾವನನು, ಶಾಂತಿ ನೀಡುವವನು, ಅಪಾರ ಔದಾರ್ಯವುಳ್ಳವನು, 1408 ಹಿಜರಿ ಶಕೆಯ ಶಅಬಾನ್ ತಿಂಗಳಲ್ಲಿ ಇದನ್ನು ಬರೆಯಲಾಗಿದೆ
ಪ್ರಾರ್ಥನೆಯ ಶ್ರೇಷ್ಠತೆ
ಅನ್ನಾಧಾರವನ್ನು ಕರುಣಿಸುವನು, ಜೀವನಾಧಾರ ಒದಗಿಸುವವನು, ಶಾಶ್ವತವಾಗಿ ಬದುಕಿರುವವನು, ಸ್ವಯಂ ಅಸ್ತಿತ್ವದಲ್ಲಿರುವವನು, ಪರಿಪಾಲಕ, ರಾಜ, ರಾಜರ ಯಜಮಾನ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಿಮ್ಮ ರಬ್ಬ್ ಹೇಳುತ್ತಾನೆ: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುವೆನು. ನನ್ನನ್ನು ಆರಾಧಿಸದೆ ಅಹಂಕಾರ ಪಡುವವರಾರೋ ಅವರು ಖಂಡಿತವಾಗಿಯೂ ಸದ್ಯದಲ್ಲೇ ಅಪಮಾನಿತರಾಗಿ ನರಕಾಗ್ನಿಯನ್ನು ಪ್ರವೇಶಿಸುವರು". ಸೂರಾ ಗಾಫಿರ್, ಸೂಕ್ತಿ :60. ಸರ್ವಶಕ್ತನಾದ ಅಲ್ಲಾಹನು ಹೇಳಿದನು: "ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು. ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು." ಸೂರ ಅಲ್-ಬಕರಃ :186, ಪ್ರವಾದಿ (ﷺ) ರವರು ಹೇಳಿದರು: "ಪ್ರಾರ್ಥನೆಯೇ ಆರಾಧನೆಯಾಗಿದೆ. ನಿಮ್ಮ ರಬ್ (ಪರಿಪಾಲಕನು) ಹೇಳಿದ್ದಾನೆ: 'ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ'."[3] ಪ್ರವಾದಿ (ﷺ) ರವರು ಹೇಳಿದರು: "ಖಂಡಿತವಾಗಿಯೂ ಅನುಗ್ರಹಪೂರ್ಣನಾಗಿರುವ, ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ವಿನಯಶೀಲ ಹಾಗೂ ಉದಾರಿಯಾಗಿರುವನು. ಅವನ ದಾಸನು ತನ್ನ ಕೈಗಳನ್ನೆತ್ತಿ ಅವನ ಬಳಿ ಪ್ರಾರ್ಥಿಸಿದಾಗ ಅವುಗಳನ್ನು ಶೂನ್ಯವಾಗಿ ಹಾಗೆಯೇ ಹಿಂದಿರುಗಿಸಲು ಅವನು ನಾಚಿಕೆ ಪಡುತ್ತಾನೆ."[4] ಪ್ರವಾದಿ (ﷺ) ರವರು ಹೇಳಿದರು: "ಪಾಪಗಳಿಲ್ಲದ ಮತ್ತು ಕುಟುಂಬ ಸಂಬಂಧ ಮುರಿಯದ ಪ್ರತಿಯೊಬ್ಬ ಮುಸ್ಲಿಮನ ಎಲ್ಲಾ ಪ್ರಾರ್ಥನೆಗಳಿಗೂ ಅಲ್ಲಾಹು ಈ ಮೂರರಲ್ಲಿ ಒಂದನ್ನು ನೀಡುತ್ತಾನೆ. ಒಂದೋ ಅವನ ಪ್ರಾರ್ಥನೆಗೆ ತಕ್ಷಣ ಉತ್ತರ ನೀಡುತ್ತಾನೆ. ಅಥವಾ ಅದಕ್ಕೆ ಪರಲೋಕದಲ್ಲಿ ಪ್ರತಿಫಲ ನೀಡುತ್ತಾನೆ ಅಥವಾ ಅದಕ್ಕೆ ಸಮಾನವಾದ ಒಂದು ಹಾನಿಯನ್ನು ಅವನಿಂದ ದೂರ ಮಾಡುತ್ತಾನೆ. ಆಗ ಸಹಾಬಾಗಳು ಹೇಳುತ್ತಾರೆ: ಹಾಗಾದರೆ ನಾವು ಹೆಚ್ಚು ಹೆಚ್ಚು ಪ್ರಾರ್ಥಿಸುತ್ತೇವೆ. ಆಗ ಪ್ರವಾದಿಯವರು(ಸ) ಹೇಳುತ್ತಾರೆ: ಹಾಗಾದರೆ ಅಲ್ಲಾಹು ಕೂಡ ಹೆಚ್ಚೆಚ್ಚು ಉತ್ತರ ನೀಡುತ್ತಾನೆ."[5] [3] ಅಬೂ ದಾವೂದ್ 2/78, ಸಂಖ್ಯೆ 1481, ಅತ್ತಿರ್ಮಿದಿ, 5/211, ಸಂಖ್ಯೆ 2959, ಇಬ್ನು ಮಾಜಾ, 2/1258, ಸಂಖ್ಯೆ 3828, ಅಲ್ಬಾನೀ (ರ) ರವರು ಸಹೀಹುಲ್ ಜಾಮಿಯಿ ಸ್ಸಗೀರ್, 3/150, ಮತ್ತು ಸಹೀಹ್ ಇಬ್ನು ಮಾಜಾ 2324 ದಲ್ಲಿ ಈ ಹದೀಸ್ ಸರಿಯಾಗಿದೆ ಎಂದು ದೃಢೀಕರಿಸಿದ್ದಾರೆ. [4] ಈ ಹದೀಸನ್ನು ಅಬೂ ದಾವೂದ್ (ರ) ರವರು, 2/78, ಸಂಖ್ಯೆ 1488 ಮತ್ತು ಅತ್ತಿರ್ಮಿದಿ 5/557, ಸಂಖ್ಯೆ 3556, ಮತ್ತು ಇಬ್ನು ಮಾಜಾ 2/1271, ಸಂಖ್ಯೆ 3865, ರವರು ವರದಿ ಮಾಡಿದ್ದಾರೆ ಮತ್ತು ಇಬ್ನು ಹಜರ್ (ರ) ರವರು ಹೇಳಿದರು: " ಸನದುಹು ಜೈಯ್ಯಿದುನ್", ಮತ್ತು ಇಮಾಮ್ ಅಲ್ಬಾನಿ (ರ) ರವರು ಸಹೀಹು ತ್ತಿರ್ಮಿದಿಯಲ್ಲಿ 3/179 ಈ ಹದೀಸ್ ಸರಿಯಾಗಿದೆ ಎಂದು ದೃಢೀಕರಿಸಿದ್ದಾರೆ. [5] ತಿರ್ಮಿದಿ ರವರು ಈ ಹದೀಸನ್ನು ವರದಿ ಮಾಡಿದ್ದಾರೆ, 5/566 ಮತ್ತು 5/462, ಸಂಖ್ಯೆ 3573, ಮತ್ತು ಅಹ್ಮದ್, 3/18, ಸಂಖ್ಯೆ 11150, ಇಮಾಮ್ ಅಲ್ಬಾನಿರವರು ಸಹೀಹುಲ್ ಜಾಮಿಯಿ ಸ್ಸಗೀರ್ ನಲ್ಲಿ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ, 5/116, ಮತ್ತು ಸಹೀಹ್ ಸುನನಿ ತ್ತಿರ್ಮಿದಿ,3/140.
ಏಕೈಕ, ಏಕಮಾತ್ರನು, ಸರ್ವೋನ್ನತನು, ಸೃಷ್ಟಿಕರ್ತ, ಸೃಷ್ಟಿಸುವವನು, ನಿರ್ಮಾತೃ, ರೂಪವನ್ನು ನೀಡುವವನು, ಪ್ರಾರ್ಥನೆಯ ಶಿಷ್ಟಾಚಾರಗಳು ಮತ್ತು ಪ್ರಾರ್ಥನೆಗೆ ಉತ್ತರ ಸಿಗುವ ಕಾರಣಗಳು [6]: [6] ಈ ಶಿಷ್ಟಾಚಾರಗಳನ್ನು ಮತ್ತು ಪ್ರಾರ್ಥನೆಗೆ ಉತ್ತರ ಸಿಗುವ ಕಾರಣಗಳನ್ನು ಅದರ ಪುರಾವೆಗಳೊಂದಿಗೆ ಅಲ್ ಅಸ್ಲ್, 3/927-975 ಪುಸ್ತಕದಲ್ಲಿ ನೋಡಿರಿ.
ರಕ್ಷಣೆ ನೀಡುವವನು, ಸಂರಕ್ಷಕನು, ಆವರಿಸಿಕೊಳ್ಳುವವನು, ಪೋಷಕ, ವಿಶ್ವಾಸಯೋಗ್ಯ, ತನ್ನ ದಾಸರಿಗೆ ಅಗತ್ಯವಿರುವ ಎಲ್ಲವನ್ನು ಪೂರೈಸುವವನು, ಎಲ್ಲವನ್ನು ಆವರಿಸಿಕೊಳ್ಳುವವನು, 1. ಅಲ್ಲಾಹನಿಗಾಗಿ ನಿಷ್ಕಳಂಕತೆ.
ಸತ್ಯ, ಸೌಂದರ್ಯವಂತ, ಮಿತ್ರ, ಶಾಶ್ವತವಾಗಿ ಬದುಕಿರುವವನು, ಮರೆಮಾಚುವವನು, ಆರಾಧ್ಯನು, ವಶಪಡಿಸುವವನು. 2. ಅಲ್ಲಾಹನ ಸ್ತುತಿ ಮತ್ತು ಅವನ ಪ್ರಶಂಸೆಯೊಂದಿಗೆ ಪ್ರಾರ್ಥನೆಯನ್ನು ಪ್ರಾರಂಭಿಸಬೇಕು, ನಂತರ ಪ್ರವಾದಿ (ﷺ) ರ ಮೇಲೆ ಸ್ವಲಾತ್ ಓದಬೇಕು ಮತ್ತು ಅದರೊಂದಿಗೆಯೇ ಪ್ರಾರ್ಥನೆಯನ್ನು ಕೊನೆಗೊಳಿಸಬೇಕು.
ವಿಸ್ತರಿಸುವವನು, ಕೊಡುವವನು, ಮುಂದಕ್ಕೆ ತರುವವನು, ಹಿಂದಕ್ಕೆ ತಳ್ಳುವವನು, ಸುಸ್ಪಷ್ಟನು, ಉಪಕಾರಿ, ರಕ್ಷಕ ಮಿತ್ರ. 3. ಪ್ರಾರ್ಥನೆಯಲ್ಲಿ ಪ್ರಬಲವಾದ ನಿರೀಕ್ಷೆಯಿರಬೇಕು, ಮತ್ತು ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡುತ್ತಾನೆಂಬ ಭರವಸೆ ಇರಬೇಕು.
4. ಪ್ರಾರ್ಥನೆಯಲ್ಲಿ ಹಟವಿರಬೇಕು, ಮತ್ತು ಪ್ರಾರ್ಥನೆಯ ಉತ್ತರಕ್ಕಾಗಿ ಆತುರ ಪಡಬಾರದು.
5. ಪ್ರಾರ್ಥಿಸುವ ವೇಳೆ ಹೃದಯವನ್ನು ಸಾನಿಧ್ಯಕ್ಕೆ ತರಬೇಕು. [1] ಅಲ್ಲಾಹನ ಈ ನಾಮಗಳನ್ನು ಪವಿತ್ರ ಕುರ್ಆನ್ ಮತ್ತು ಸುನ್ನತ್ತಿನ ಪುರಾವೆಗಳೊಂದಿಗೆ ಲೇಖಕರ (ಶರ್ಹು ಅಸ್ಮಾಇಲ್ಲಾಯಿಲ್ ಹುಸ್ನಾ ಫೀ ದೌಇಲ್ ಕಿತಾಬಿ ವ ಸ್ಸುನ್ನ) ಎಂಬ ಪುಸ್ತಕದಲ್ಲಿ ನೋಡಿರಿ.
6. ಅನುಕೂಲ ಮತ್ತು ಕಷ್ಟದ ಎರಡೂ ಸಮಯಗಳಲ್ಲಿ ಪ್ರಾರ್ಥಿಸುವುದು.
7. ಏಕೈಕ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಬೇಕು.
8. ಕುಟುಂಬ, ಹಣ, ಮಕ್ಕಳು, ಮತ್ತು ಸ್ವತಃ ತನ್ನ ಜೀವದ ವಿರುದ್ಧ ಶಾಪಕ್ಕಾಗಿ ಪ್ರಾರ್ಥಿಸಬಾರದು.
9. ಪ್ರಾರ್ಥನೆಯನ್ನು ಉಚ್ಛಧ್ವನಿ ಮತ್ತು ಮೆಲುಧ್ವನಿ ಅವೆರಡರ ಮಧ್ಯದ ಸ್ಥಿತಿಯಲ್ಲಿ ಧ್ವನಿಯನ್ನು ತಗ್ಗಿಸುತ್ತಾ ನಿರ್ವಹಿಸಬೇಕು.
10. ಪಾಪವನ್ನು ಒಪ್ಪಿಕೊಳ್ಳಬೇಕು, ಮತ್ತು ಅದರಿಂದ ಕ್ಷಮೆಯಾಚಿಸಬೇಕು, ಮತ್ತು ಅಲ್ಲಾಹನ ಅನುಗ್ರಹಗಳನ್ನು ಒಪ್ಪಿಕೊಳ್ಳಬೇಕು ಮತ್ತು ಆ ಅನುಗ್ರಹಗಳಿಗಾಗಿ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು.
11. ಪ್ರಾರ್ಥಿಸುವಾಗ ಶಬ್ದಗಳನ್ನು ಪ್ರಾಸಬದ್ದವಾಗಿ ಹೊಂದಿಸಿ ರಾಗದಲ್ಲಿ ಪ್ರಾರ್ಥಿಸಬಾರದು.
13. ಅಕ್ರಮವಾಗಿ ಪಡೆದ ವಸ್ತುಗಳನ್ನು ಪಶ್ಚಾತಾಪದೊಂದಿಗೆ ಹಿಂತಿರುಗಿಸುವುದು.
14. ಪ್ರಾರ್ಥನೆಯನ್ನು ಮೂರು ಬಾರಿ ಮಾಡಬೇಕು.
15. ಕಿಬ್ಲಕ್ಕೆ ಮುಖಮಾಡಿ ಪ್ರಾರ್ಥನೆ ಮಾಡಬೇಕು.
16. ಕೈಗಳನ್ನೆತ್ತಿ ಪ್ರಾರ್ಥನೆ ಮಾಡಬೇಕು.
17. ಸಾಧ್ಯವಾದರೆ ಪ್ರಾರ್ಥಿಸುವ ಮುಂಚೆ ವುದೂ ಮಾಡಬೇಕು.
18. ಅನಾವಶ್ಯಕವಾಗಿ ಪ್ರಾರ್ಥನೆಯನ್ನು ವಿಸ್ತರಿಸಬಾರದು.
19. ಪ್ರಾರ್ಥಿಸುವವನು ಇತರರಿಗಾಗಿ ಪ್ರಾರ್ಥಿಸುವಾಗ ಮೊದಲು ತನಗಾಗಿ ಪ್ರಾರ್ಥಿಸಿಕೊಳ್ಳಬೇಕು [7]. [7] ಪ್ರವಾದಿ (ﷺ) ರವರು ಮೊದಲು ತಮ್ಮಿಂದಲೇ ಪ್ರಾರ್ಥನೆಯನ್ನು ಪ್ರಾರಂಭಿಸಿದ್ದಾರೆಂದು ಸಾಬೀತಾಗಿದೆ ಹಾಗೂ ಪ್ರವಾದಿ (ﷺ) ರವರು ಪ್ರಾರ್ಥನೆಯನ್ನು ತಮ್ಮಿಂದಲೇ ಪ್ರಾರಂಭಿಸಿಲ್ಲವೆಂದೂ ಸಹ ಸಾಬೀತಾಗಿದೆ. ಉದಾಹರಣೆಗೆ ಪ್ರವಾದಿ (ﷺ) ರವರ ಪ್ರಾರ್ಥನೆ ಅನಸ್, ಇಬ್ನು ಅಬ್ಬಾಸ್, ಉಮ್ಮು ಇಸ್ಮಾಯೀಲ್ ಮತ್ತು ಇತರರಿಗೆ. ಈ ವಿಷಯದ ಕುರಿತು ಹೆಚ್ಚಿನ ವಿವರಣೆಗಾಗಿ ನೋಡಿರಿ: ಶರ್ಹು ನ್ನವವಿ ಲಿ ಸಹೀಹಿಲ್ ಮುಸ್ಲಿಮ್ 15/144, ಮತ್ತು ತುಹ್ಫತುಲ್ ಅಹ್ವದಿ ಶರ್ಹು ಸುನನಿ ತ್ತಿರ್ಮಿದಿ, 9/328, ಮತ್ತು ಫತ್ಹುಲ್ ಬಾರೀ ಶರ್ಹು ಸಹೀಹಿಲ್ ಬುಖಾರೀ, 1/281.
20. ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳೊಂದಿಗೆ ಅಥವಾ ಪ್ರಾರ್ಥಿಸುವವನು ಮಾಡಿದ ಯಾವುದೇ ಸತ್ಕಾರ್ಯದ ಮುಖಾಂತರ ಅಥವಾ ಜೀವಂತವಾಗಿರುವ ಹಾಜರಿರುವ ಸಜ್ಜನ ವ್ಯಕ್ತಿಯ ಪ್ರಾರ್ಥನೆಯ ಮೂಲಕ ಪ್ರಾರ್ಥಿಸಬೇಕು.
21. ಆಹಾರ ಪಾನೀಯ, ಬಟ್ಟೆ-ಬರೆ, ವಸತಿ ಇತ್ಯಾದಿಗಳು ಧರ್ಮಸಮ್ಮತ ಹಣದಿಂದಾಗಿರಬೇಕು.
22. ಪಾಪ ಮಾಡುವುದಕ್ಕಾಗಿ ಮತ್ತು ಕುಟುಂಬ ಸಂಬಂಧ ಕಡಿಯುವುದಕ್ಕಾಗಿ ಪ್ರಾರ್ಥಿಸಬಾರದು.
23. ಸತ್ಕಾರ್ಯದ ಕಡೆ ಆಹ್ವಾನಿಸಬೇಕು ಮತ್ತು ದುಷ್ಕರ್ಮದಿಂದ ತಡೆಯಬೇಕು.
24. ಎಲ್ಲಾ ರೀತಿಯ ಪಾಪಕಾರ್ಯಗಳಿಂದ ದೂರವಿರಬೇಕು.
ಪ್ರಾರ್ಥನೆ ಸ್ವೀಕಾರವಾಗುವ ಸಮಯ, ಸ್ಥಳ ಮತ್ತು ಪರಿಸ್ಥಿತಿಗಳು[8]: [8] ಈ ಸಮಯಗಳು, ಸ್ಥಳಗಳು, ಮತ್ತು ಸ್ಥಿತಿಗಳನ್ನು ಅದರ ಪುರಾವೆಗಳೊಂದಿಗೆ ವಿವರವಾಗಿ ಮೂಲ ಪುಸ್ತಕದಲ್ಲಿ ನೋಡಿರಿ 3/975-1117.
1. ಲೈಲತುಲ್ ಕದ್ರ್.
2. ರಾತ್ರಿಯ ಕೊನೆಯ ಹಂತದಲ್ಲಿ.
3. ಕಡ್ಡಾಯ ನಮಾಝ್ಗಳ ನಂತರ
4. ಅಝಾನ್ ಮತ್ತು ಇಕಾಮತ್ತಿನ ನಡುವೆ.
5. ಪ್ರತಿ ರಾತ್ರಿಯ ಒಂದು ನಿಶ್ಚಿತ ಸಮಯದಲ್ಲಿ.
6. ಫರ್ಝ್ ನಮಾಝಿಗಾಗಿ ಅಝಾನ್ ಕೂಗುವಾಗ.
7. ಮಳೆ ಬರುತ್ತಿರುವಾಗ.
8. ಅಲ್ಲಾಹನ ಮಾರ್ಗದಲ್ಲಿ ಯುದ್ಧ ಸಜ್ಜಿತರಾಗಿ ನಿಂತು ಕೊಂಡಿರುವಾಗ.
9. ಶುಕ್ರವಾರ ಹಗಲಿನ ಒಂದು ಸಮಯದಲ್ಲಿ.
ಈ ವಿಷಯದಲ್ಲಿ ಅತ್ಯಂತ ಸರಿಯಾದ ಮಾತೇನೆಂದರೆ: ಶುಕ್ರವಾರ ಅಸರ್ ಸಮಯದ ಕೊನೆ ಗಳಿಗೆ ಎಂಬುದಾಗಿದೆ ಮತ್ತು ಕೆಲವೊಮ್ಮೆ ಖುತ್ಬಾದ ಸಮಯ ಮತ್ತು ನಮಾಝಿನ ಸಮಯವೂ ಆಗಬಹುದು.
10. ಸತ್ಯ ಸಂಕಲ್ಪದೊಂದಿಗೆ ಝಮ್ ಝಮ್ ನೀರು ಕುಡಿಯುತ್ತಿರುವಾಗ.
11. ಸುಜೂದಿನಲ್ಲಿರುವಾಗ.
12. ರಾತ್ರಿ ಸಮಯದಲ್ಲಿ ಮಲಗಿ ನಿದ್ದೆಯಿಂದ ಏಳುವ ಸಂದರ್ಭದಲ್ಲಿ ಹೇಳಿಕೊಟ್ಟ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು.
13. ವುದೂ ಮಾಡಿ ಮಲಗಿ ನಂತರ ಮಧ್ಯರಾತ್ರಿಯಲ್ಲಿ ಎದ್ದು ಪ್ರಾರ್ಥಿಸಿದಾಗ.
14. "ಲಾ ಇಲಾಹ ಇಲ್ಲಾ ಅಂತ ಸುಬ್ಹಾನಕ ಇನ್ನಿ ಕುಂತು ಮಿನದ್ವಾಲಿಮೀನ್" ಪ್ರಾರ್ಥಿಸುವ ಸಂದರ್ಭದಲ್ಲಿ.
15. ಒಬ್ಬ ವ್ಯಕ್ತಿ ಮರಣಹೊಂದಿದಾಗ ಜನರ ಪ್ರಾರ್ಥನೆ.
16. ಕೊನೆಯ ತಶಹ್ಹುದಿನಲ್ಲಿ ಅಲ್ಲಾಹನನ್ನು ಸ್ತುತಿಸಿ ಪ್ರವಾದಿ (ﷺ) ರವರ ಮೇಲೆ ಸ್ವಲಾತ್ ಹೇಳಿದ ನಂತರದ ಪ್ರಾರ್ಥನೆ.
17. ಅಲ್ಲಾಹನೊಂದಿಗೆ ಅವನ ಮಹಾನ್ ಹೆಸರನ್ನೆತ್ತಿ ಪ್ರಾರ್ಥಿಸಿದಾಗ. ಆ ಹೆಸರನ್ನೆತ್ತಿ ಪ್ರಾರ್ಥಿಸಿದಾಗ ಅವನು ಆ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ, ಮತ್ತು ಆ ಮಹಾನ್ ಹೆಸರಿನಿಂದ ಬೇಡಿದಾಗ ಅವನು ನೀಡುತ್ತಾನೆ [9] [9] ಅಲ್ಲಾಹನ ಅತ್ಯಂತ ಮಹಾನ್ ಹೆಸರನ್ನು ಈ ಪುಸ್ತಕದ ಹದೀಸ್ ಸಂಖ್ಯೆ 203,104,105 ರಲ್ಲಿ ನೋಡಿರಿ.
18. ತನ್ನ ಮುಸ್ಲಿಂ ಸಹೋದರನಿಗೆ ಅವನ ಅನುಪಸ್ಥಿತಿಯಲ್ಲಿ ಪ್ರಾರ್ಥನೆ.
19. ಅರಫಾ ದಿನದಂದು ಅರಫಾದಲ್ಲಿ ಪ್ರಾರ್ಥನೆ.
20. ರಮದಾನ್ ತಿಂಗಳಲ್ಲಿ ಪ್ರಾರ್ಥನೆ.
21. ಮುಸ್ಲಿಮರು ದಿಕ್ರಿನ ಸಭೆಗಳಲ್ಲಿ ಒಟ್ಟುಗೂಡಿದಾಗ.
22. ಆಪತ್ಕಾಲದಲ್ಲಿ "ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್, ಅಲ್ಲಾಹುಮ್ಮ ಅ್ಜುರ್ನಿ ಫೀ ಮುಸೀಬತೀ ವ ಅಖ್ಲಿಫ್ ಲೀ ಖೈರಮ್ ಮಿನ್ಹಾ" ಎಂದು ಪ್ರಾರ್ಥಿಸಿದಾಗ.
23. ಅಲ್ಲಾಹನ ಬಳಿ ಹೃದಯವು ಸ್ಪರ್ಶಿಸಿದಾಗ ಮತ್ತು ನಿಷ್ಕಳಂಕತೆಯು ಬಲವಾದಾಗ ಮಾಡುವ ಪ್ರಾರ್ಥನೆ.
24. ಅನ್ಯಾಯವೆಸಗಿದವನ ಮೇಲೆ ಅನ್ಯಾಯಕ್ಕೊಳಗಾದವನ ಪ್ರಾರ್ಥನೆ.
25. ಮಕ್ಕಳ ಪರವಾಗಿ ಮತ್ತು ಅವರ ವಿರುದ್ಧವಾಗಿ ತಂದೆಯ ಪ್ರಾರ್ಥನೆ.
26. ಪ್ರಯಾಣಿಕನ ಪ್ರಾರ್ಥನೆ.
27. ಇಫ್ತಾರ್ (ಉಪವಾಸ ಪಾರಣೆ) ಮಾಡುವವರೆಗೆ ಉಪವಾಸ ವ್ರತವನ್ನು ಆಚರಿಸುವವನ ಪ್ರಾರ್ಥನೆ.
28. ಇಫ್ತಾರ್ ಮಾಡುವ ಸಮಯದಲ್ಲಿ ಉಪವಾಸ ಆಚರಿಸುವವನ ಪ್ರಾರ್ಥನೆ.
29. ಕಷ್ಟದಲ್ಲಿರುವವನ ಪ್ರಾರ್ಥನೆ.
30. ನ್ಯಾಯವಂತ ಆಡಳಿತಗಾರನ ಪ್ರಾರ್ಥನೆ.
31. ಮಾತಾಪಿತರಿಗೆ ವಿಧೇಯರಾದ ಮಕ್ಕಳ ಪ್ರಾರ್ಥನೆ.
32. ವುದೂ ಮಾಡಿದ ಬಳಿಕ ಆ ಸಮಯದಲ್ಲಿ ಕಲಿಸಿಕೊಟ್ಟ ಪ್ರಾರ್ಥನೆಯಿಂದ ಪ್ರಾರ್ಥಿಸಿದಾಗ.
33. ಚಿಕ್ಕ ಜಮ್ರಗೆ ಕಲ್ಲೆಸೆದ ನಂತರದ ಪ್ರಾರ್ಥನೆ.
34. ಮಧ್ಯದ ಜಮ್ರಕ್ಕೆ ಕಲ್ಲೆಸೆದ ನಂತರದ ಪ್ರಾರ್ಥನೆ.
35. ಕಅಬಾದೊಳಗೆ ಪ್ರಾರ್ಥನೆ. ಹಿಜ್ರ್ ಒಳಗಡೆ ನಮಾಝ್ ನಿರ್ವಹಿಸುವವರು ಕಅಬಾದ ಒಳಗಡೆ ನಮಾಝ್ ನಿರ್ವಹಿಸುವವರಾಗಿದ್ದಾರೆ.
36. ಸಫಾ ಬೆಟ್ಟದ ಮೇಲೆ ಮಾಡುವ ಪ್ರಾರ್ಥನೆ.
37. ಮರ್ವಾ ಬೆಟ್ಟದ ಮೇಲೆ ಮಾಡುವ ಪ್ರಾರ್ಥನೆ.
38. ಮಶ್ಅರುಲ್ ಹರಾಮ್ನ ಬಳಿ ಮಾಡುವ ಪ್ರಾರ್ಥನೆ.
ಒಬ್ಬ ಸತ್ಯವಿಶ್ವಾಸಿ ಎಲ್ಲೇ ಇದ್ದರೂ ಅವನು ಸದಾ ತನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಪ್ರಾರ್ಥಿಸುತ್ತಲೇ ಇರುತ್ತಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು. ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು." ಸೂರ ಅಲ್-ಬಕರಃ :186, ಆದರೆ ಈ ಸಮಯ, ಸ್ಥಿತಿ ಮತ್ತು ಸ್ಥಳಗಳಿಗೆ ಹೆಚ್ಚಿನ ಕಾಳಜಿ ನೀಡಲಾಗಿದೆ.
ಕುರ್ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು
ಸರ್ವ ಸ್ತುತಿ-ಸ್ತೋತ್ರಗಳು ಅಲ್ಲಾಹುವಿಗೆ ಮಾತ್ರ ಮೀಸಲು. ಯಾರ ನಂತರ ಬೇರೆ ಯಾವುದೇ ಪ್ರವಾದಿಯಿಲ್ಲವೋ ಅವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
1. ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ. ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ. ಪರಮ ದಯಾಮಯನೂ, ಕರುಣಾನಿಧಿಯೂ ಪ್ರತಿಫಲ ದಿನದ ಒಡೆಯ. ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು. ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ. ಸೂರಾ ಫಾತಿಹ, ಸೂಕ್ತಿ :1-7.
2. "ನಮ್ಮ ಪ್ರಭೂ! ನಮ್ಮಿಂದ ಇದನ್ನು ಸ್ವೀಕರಿಸು. ಖಂಡಿತವಾಗಿಯೂ ನೀನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವೆ." ಸೂರ ಅಲ್-ಬಕರಃ ಸೂಕ್ತಿ: 127.
3. "ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ಖಂಡಿತವಾಗಿಯೂ ನೀನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವೆ." ಸೂರ ಅಲ್-ಬಕರಃ ಸೂಕ್ತಿ: 128.
4. "ನಮ್ಮ ಪ್ರಭೂ! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು." ಸೂರ ಅಲ್-ಬಕರಃ ಸೂಕ್ತಿ: 201.
5. "ನಾವು ಆಲಿಸಿರುವೆವು ಮತ್ತು ಅನುಸರಿಸಿರುವೆವು, ನಮ್ಮ ಪ್ರಭೂ! ನಮಗೆ ಪಾಪಮುಕ್ತಿಯನ್ನು ದಯಪಾಲಿಸು, (ನಮ್ಮ) ಮರಳುವಿಕೆಯು ನಿನ್ನ ಬಳಿಗೇ ಆಗಿದೆ." ಸೂರ ಅಲ್-ಬಕರಃ ಸೂಕ್ತಿ: 285.
6. "ನಮ್ಮ ಪ್ರಭೂ! ನಾವು ಮರೆತರೆ ಅಥವಾ ಪ್ರಮಾದವೆಸಗಿದರೆ ನಮ್ಮನ್ನು ಶಿಕ್ಷಿಸದಿರು. ನಮ್ಮ ಪ್ರಭೂ! ನಮ್ಮ ಪೂರ್ವಿಕರ ಮೇಲೆ ನೀನು ಹೊರಿಸಿದಂತಹ ಭಾರವನ್ನು ನಮ್ಮ ಮೇಲೆ ಹೊರಿಸದಿರು. ನಮ್ಮ ಪ್ರಭೂ! ನಮಗೆ ಸಾಮರ್ಥ್ಯವಿಲ್ಲದಿರುವುದನ್ನು ನಮ್ಮ ಮೇಲೆ ಹೊರಿಸದಿರು. ನಮ್ಮನ್ನು ಕ್ಷಮಿಸು, ನಮ್ಮನ್ನು ಮನ್ನಿಸು ಮತ್ತು ನಮ್ಮೊಂದಿಗೆ ದಯೆ ತೋರು. ನೀನು ನಮ್ಮ ರಕ್ಷಕನಾಗಿರುವೆ. ಆದ್ದರಿಂದ ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯವನ್ನು ನೀಡು." ಸೂರ ಅಲ್-ಬಕರಃ ಸೂಕ್ತಿ: 286.
7. "ನಮ್ಮ ಪ್ರಭೂ! ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸದಿರು. ನಿನ್ನ ವತಿಯ ದಯೆಯನ್ನು ನಮಗೆ ದಯಪಾಲಿಸು. ಖಂಡಿತವಾಗಿಯೂ ನೀನು ಅತ್ಯಧಿಕ ಔದಾರ್ಯವುಳ್ಳವನಾಗಿರುವೆ." ಸೂರ ಆಲು ಇಮ್ರಾನ್, ಸೂಕ್ತಿ :8.
8. "ನಮ್ಮ ಪ್ರಭೂ! ನಾವು ವಿಶ್ವಾಸವಿಟ್ಟಿರುವೆವು. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು." ಸೂರ ಆಲು ಇಮ್ರಾನ್, ಸೂಕ್ತಿ:16.
9. "ನನ್ನ ಪ್ರಭೂ! ನಿನ್ನ ವತಿಯಿಂದ ನನಗೆ ಉತ್ತಮ ಸಂತಾನವನ್ನು ದಯಪಾಲಿಸು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ." ಸೂರ ಆಲು ಇಮ್ರಾನ್, ಸೂಕ್ತಿ 38.
10. "ನಮ್ಮ ಪ್ರಭೂ! ನೀನು ಅವತೀರ್ಣಗೊಳಿಸಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು ಮತ್ತು ನಾವು (ನಿನ್ನ) ಸಂದೇಶವಾಹಕರನ್ನು ಅನುಸರಿಸಿರುವೆವು. ಆದ್ದರಿಂದ ನಮ್ಮನ್ನು ಸಾಕ್ಷ್ಯವಹಿಸಿದವರೊಂದಿಗೆ ದಾಖಲಿಸು." ಸೂರ ಆಲು ಇಮ್ರಾನ್, ಸೂಕ್ತಿ 53.
11. "ನಮ್ಮ ಪ್ರಭೂ! ನಮ್ಮ ಪಾಪಗಳನ್ನೂ, ನಮ್ಮ ಕರ್ಮಗಳಲ್ಲಿ ಉಂಟಾದಂತಹ ಅತಿಕ್ರಮಗಳನ್ನೂ ಕ್ಷಮಿಸು, ನಮ್ಮ ಪಾದಗಳನ್ನು ಸುದೃಢಗೊಳಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು." ಸೂರ ಆಲು ಇಮ್ರಾನ್, ಸೂಕ್ತಿ:147.
12. "ನಮ್ಮ ಪ್ರಭೂ! ನೀನಿದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಮಪಾವನನು. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು. ನಮ್ಮ ಪ್ರಭೂ! ನೀನು ಯಾರನ್ನು ನರಕಾಗ್ನಿಗೆ ಪ್ರವೇಶ ಮಾಡಿಸುವೆಯೋ ಅವನನ್ನು ನೀನು ಅಪಮಾನಗೊಳಿಸಿದಂತೆ. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು. ನಮ್ಮ ಪ್ರಭೂ! ಸತ್ಯವಿಶ್ವಾಸದೆಡೆಗೆ ಕರೆಯುವ ಓರ್ವ ಧರ್ಮೋಪದೇಶಕನು ನೀವು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಡಿರಿ ಎಂದು ಹೇಳುವುದನ್ನು ಖಂಡಿತವಾಗಿಯೂ ನಾವು ಕೇಳಿರುವೆವು. ಆದ್ದರಿಂದ ನಾವು ವಿಶ್ವಾಸವಿಟ್ಟಿರುವೆವು. ನಮ್ಮ ಪ್ರಭೂ! ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ನಮ್ಮಿಂದ ಅಳಿಸು. ನಮ್ಮನ್ನು ಸಜ್ಜನರೊಂದಿಗೆ ಮೃತಪಡಿಸು. ನಮ್ಮ ಪ್ರಭೂ! ನಿನ್ನ ಸಂದೇಶವಾಹಕರ ಮೂಲಕ ನೀನು ನಮಗೆ ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು ಮತ್ತು ಪುನರುತ್ಥಾನ ದಿನದಂದು ನಮ್ಮನ್ನು ಅಪಮಾನಗೊಳಿಸದಿರು. ಖಂಡಿತವಾಗಿಯೂ ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ" ಸೂರ ಆಲು ಇಮ್ರಾನ್, ಸೂಕ್ತಿ:191-194.
13. "ನಮ್ಮ ಪ್ರಭೂ! ನಾವು ವಿಶ್ವಾಸವಿಟ್ಟಿರುವೆವು. ಆದ್ದರಿಂದ ಸತ್ಯಕ್ಕೆ ಸಾಕ್ಷ್ಯವಹಿಸಿದವರೊಂದಿಗೆ ನಮ್ಮನ್ನೂ ದಾಖಲಿಸು" ಸೂರ ಅಲ್-ಮಾಇದ, ಸೂಕ್ತಿ: 83.
14. "ನಮ್ಮ ಪ್ರಭೂ! ನಾವು ಸ್ವತಃ ನಮ್ಮೊಂದಿಗೇ ಅಕ್ರಮವೆಸಗಿರುವೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮಗೆ ಕರುಣೆ ತೋರದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು." ಸೂರಃ ಅಲ್-ಅಅ್ರಾಫ್, ಸೂಕ್ತಿ:23.
15. "ನಮ್ಮ ಪ್ರಭೂ! ನಮ್ಮನ್ನು ನೀನು ಅಕ್ರಮಿಗಳೊಂದಿಗೆ ಸೇರಿಸದಿರು." ಸೂರಃ ಅಲ್-ಅಅ್ರಾಫ್, ಸೂಕ್ತಿ:47.
16. ಓ ಅಲ್ಲಾಹ್, "ಓ ಅಲ್ಲಾಹನೇ, ನೀನು ನಮ್ಮ ರಕ್ಷಕನಾಗಿರುವೆ. ಆದ್ದರಿಂದ ನಮಗೆ ಕ್ಷಮೆ ನೀಡು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನು ಕ್ಷಮಿಸುವವರಲ್ಲಿ ಉತ್ತಮನಾಗಿರುವೆ. ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ನೀನು ಒಳಿತನ್ನು ದಾಖಲಿಸು." ಸೂರ ಅಲ್-ಅಅ್ರಾಫ್ 155-156.
17. "ನನಗೆ ಅಲ್ಲಾಹು ಸಾಕು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ನಾನು ಅವನ ಮೇಲೆ ಭರವಸೆಯಿಟ್ಟಿರುವೆನು. ಅವನು ಮಹಾ ಸಿಂಹಾಸನದ (ಅರ್ಶ್) ಒಡೆಯನಾಗಿರುವನು." ಸೂರ ಅತ್ತೌಬ 129.
18. "ಓ ನಮ್ಮ ಪ್ರಭೂ! ನಮ್ಮನ್ನು ಅಕ್ರಮಿಗಳಾದ ಈ ಜನತೆಯ ಹಿಂಸೆಗೆ ಬಲಿಪಶುಗಳನ್ನಾಗಿ ಮಾಡದಿರು. ನಿನ್ನ ಕಾರುಣ್ಯದಿಂದ ನಮ್ಮನ್ನು ನೀನು ಸತ್ಯನಿಷೇಧಿಗಳಾದ ಜನತೆಯಿಂದ ರಕ್ಷಿಸು." ಸೂರ ಯೂನುಸ್ 85-86.
19. "ನನ್ನ ಪ್ರಭೂ! ನನಗೆ ಅರಿವಿಲ್ಲದಿರುವುದನ್ನು ನಿನ್ನಲ್ಲಿ ಬೇಡುವುದರಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿರುವೆನು. ನೀನು ನನ್ನನ್ನು ಕ್ಷಮಿಸದಿದ್ದರೆ ಮತ್ತು ನನ್ನೊಂದಿಗೆ ಕರುಣೆ ತೋರದಿದ್ದರೆ ನಾನು ನಷ್ಟ ಹೊಂದಿದವರಲ್ಲಿ ಸೇರಿದವನಾಗುವೆನು." ಸೂರ ಹೂದ್ 47.
20. "ಓ ಅಲ್ಲಾಹ್, ಸೂರಾ ಯೂಸುಫ್, ಸೂಕ್ತಿ: 101[10].
21. "ಓ ನನ್ನ ಪ್ರಭೂ! ಈ ನಾಡನ್ನು (ಮಕ್ಕಾವನ್ನು) ಸುರಕ್ಷತೆಯುಳ್ಳದ್ದಾಗಿ ಮಾಡು ಮತ್ತು ನನ್ನನ್ನೂ ನನ್ನ ಮಕ್ಕಳನ್ನೂ ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು." ಸೂರ ಇಬ್ರಾಹೀಮ್: 35.
22. "ನನ್ನ ಪ್ರಭೂ! ನೀನು ನನ್ನನ್ನು ಮತ್ತು ನನ್ನ ಸಂತತಿಯಲ್ಲಿ ಸೇರಿದವರನ್ನು ನಮಾಝ್ ಸಂಸ್ಥಾಪಿಸುವವರನ್ನಾಗಿ ಮಾಡು. ನಮ್ಮ ಪ್ರಭೂ! ನನ್ನ ಪ್ರಾರ್ಥನೆಯನ್ನು ಸ್ವೀಕರಿಸು." ಸೂರ ಇಬ್ರಾಹೀಮ್ : 40.
23. "ನಮ್ಮ ಪ್ರಭೂ! ವಿಚಾರಣೆಯನ್ನು ಸ್ಥಾಪಿಸಲಾಗುವ ದಿನದಂದು ನನಗೂ, ನನ್ನ ಮಾತಾಪಿತರಿಗೂ, ಸತ್ಯವಿಶ್ವಾಸಿಗಳಿಗೂ ಪಾಪಮುಕ್ತಿಯನ್ನು ನೀಡು." ಸೂರ ಇಬ್ರಾಹೀಮ್ : 41.
24. "ನಮ್ಮ ಪ್ರಭೂ! ನಿನ್ನ ವತಿಯ ಕಾರುಣ್ಯವನ್ನು ನಮಗೆ ದಯಪಾಲಿಸು ಮತ್ತು ನಮ್ಮ ಕಾರ್ಯವನ್ನು ಸರಿಯಾದ ವಿಧದಲ್ಲಿ ನಿರ್ವಹಿಸಲು ನಮಗೆ ಅನುಕೂಲಮಾಡಿಕೊಡು." ಸೂರ ಅಲ್-ಕಹ್ಫ್ : 10.
25. "ನನ್ನ ಪ್ರಭೂ! ನನ್ನ ಹೃದಯವನ್ನು ವಿಶಾಲಗೊಳಿಸು. ನನಗೆ ನನ್ನ ಕಾರ್ಯವನ್ನು ಸರಳಗೊಳಿಸು. ಜನರು ನನ್ನ ಮಾತನ್ನು ಗ್ರಹಿಸುವುದಕ್ಕಾಗಿ ನನ್ನ ನಾಲಗೆಯ ಕಟ್ಟುಗಳನ್ನು ಬಿಚ್ಚಿಹಾಕು. ಸೂರ ತ್ವಾಹಾ : 25-28.
26. "ನನ್ನ ಪ್ರಭೂ! ನನಗೆ ಜ್ಞಾನವನ್ನು ಹೆಚ್ಚಿಸಿಕೊಡು." ಸೂರ ತ್ವಾಹಾ :114.
27. "ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ, ನೀನು ಪರಮ ಪಾವನನು ! ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದವನಾಗಿರುವೆನು." ಸೂರ ಅಲ್-ಅಂಬಿಯಾ : 87.
28. "ನನ್ನ ಪ್ರಭೂ! ನನ್ನನ್ನು (ಉತ್ತರಾಧಿಕಾರಿಗಳಿಲ್ಲದೆ) ಒಂಟಿಯಾಗಿ ಬಿಡದಿರು. ವಾರಸುದಾರರಲ್ಲಿ ನೀನೇ ಅತ್ಯುತ್ತಮನಾಗಿರುವೆ." ಸೂರ ಅಲ್-ಅಂಬಿಯಾ : 89.
29. "ನನ್ನ ಪ್ರಭೂ! ಸೈತಾನರ ದುರ್ಬೋಧನೆಗಳಿಂದ ನಾನು ನಿನ್ನಲ್ಲಿ ಅಭಯ ಯಾಚಿಸುತ್ತಿರುವೆನು. ನನ್ನ ಪ್ರಭೂ! ಅವರು (ಸೈತಾನರು) ನನ್ನ ಬಳಿ ಉಪಸ್ಥಿತರಾಗುವುದರಿಂದಲೂ ನಾನು ನಿನ್ನಲ್ಲಿ ಅಭಯ ಯಾಚಿಸುತ್ತಿರುವೆನು." ಸೂರ ಅಲ್-ಮುಅ್ಮಿನೂನ್ : 97-98.
30. "ನಮ್ಮ ಪ್ರಭೂ! ನಾವು ವಿಶ್ವಾಸವಿಟ್ಟಿರುವೆವು. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ದಯೆ ತೋರು. ನೀನು ದಯೆ ತೋರುವವರಲ್ಲಿ ಅತ್ಯುತ್ತಮನಾಗಿರುವೆ." ಸೂರ ಅಲ್-ಮುಅ್ಮಿನೂನ್ :109.
31. "ನನ್ನ ಪ್ರಭೂ! ನನ್ನನ್ನು ಕ್ಷಮಿಸು ಮತ್ತು ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ." ಸೂರ ಅಲ್-ಮುಅ್ಮಿನೂನ್ :118.
ಸೂರ ಅಲ್-ಫುರ್ಕಾನ್ : 65-66.
33. "ನಮ್ಮ ಪ್ರಭೂ! ನಮ್ಮ ಪತ್ನಿಯರಲ್ಲಿ ಮತ್ತು ನಮ್ಮ ಸಂತತಿಗಳಲ್ಲಿ ನೀನು ನಮಗೆ ಕಣ್ತಣಿಸುವಿಕೆಯನ್ನು ದಯಪಾಲಿಸು ಮತ್ತು ಭಯಭಕ್ತಿ ಪಾಲಿಸುವವರಿಗೆ ನಮ್ಮನ್ನು ಮಾದರೀಯೋಗ್ಯರನ್ನಾಗಿ ಮಾಡು." ಸೂರ ಅಲ್-ಫುರ್ಕಾನ್: 74.
34. "ನನ್ನ ಪ್ರಭೂ! ನನಗೆ ತತ್ವಜ್ಞಾನವನ್ನು ಕರುಣಿಸು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು. ಮುಂದಿನ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು. ಸುಖಸಮೃದ್ಧಿಯಿಂದ ಕೂಡಿದ ಸ್ವರ್ಗದ ಹಕ್ಕುದಾರರಲ್ಲಿ ನನ್ನನ್ನು ಸೇರಿಸು." ಸೂರ ಅಶ್ಶುಅರಾ : 83-85.
35. "ಅವರನ್ನು (ಮನುಷ್ಯರನ್ನು) ಪುನರುತ್ಥಾನಗೊಳಿಸಲಾಗುವ ದಿನದಂದು ನನಗೆ ಅವಮಾನ ಮಾಡದಿರು. ಆ ದಿನ ಸಂಪತ್ತಾಗಲಿ, ಸಂತತಿಯಾಗಲಿ ಪ್ರಯೋಜನಕೊಡಲಾರದು. ಆದರೆ ಪಾಪರಹಿತವಾದ ಹೃದಯದೊಂದಿಗೆ ಅಲ್ಲಾಹನ ಬಳಿ ಬಂದವನಿಗೆ ಮಾತ್ರ." ಸೂರ ಅಶ್ಶುಅರಾ: 87-89.
36. "ನನ್ನ ಪ್ರಭೂ! ನನಗೂ ನನ್ನ ಮಾತಾಪಿತರಿಗೂ ನೀನು ದಯಪಾಲಿಸಿರುವ ನಿನ್ನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಲು ಮತ್ತು ನೀನು ತೃಪ್ತಿಪಡುವ ಸತ್ಕರ್ಮಗಳನ್ನು ಮಾಡಲು ನನಗೆ ಪ್ರೇರಣೆಯನ್ನು ನೀಡು. ನೀನು ನಿನ್ನ ಕಾರುಣ್ಯದಿಂದಾಗಿ ನಿನ್ನ ಸಜ್ಜನ ದಾಸರಲ್ಲಿ ನನ್ನನ್ನೂ ಸೇರಿಸು." ಸೂರ ಅನ್ನಮ್ಲ್ : 19.
37. "ನನ್ನ ಪ್ರಭೂ! ಖಂಡಿತವಾಗಿಯೂ ನಾನು ನನ್ನೊಂದಿಗೇ ಅನ್ಯಾಯವೆಸಗಿರುವೆನು. ಆದ್ದರಿಂದ ನನ್ನನ್ನು ಕ್ಷಮಿಸು." ಸೂರ ಅಲ್-ಕಸಸ್ : 16.
38. "ನನ್ನ ಪ್ರಭೂ! ಅಕ್ರಮಿಗಳಾಗಿರುವ ಜನರಿಂದ ನನ್ನನ್ನು ಪಾರು ಮಾಡು." ಸೂರ ಅಲ್-ಕಸಸ್ : 21.
39. "ನನ್ನ ಪ್ರಭು ನನ್ನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲೂಬಹುದು." ಸೂರ ಅಲ್-ಕಸಸ್ : 22.
40. "ನನ್ನ ಪ್ರಭೂ! ನೀನು ನನಗೆ ದಯಪಾಲಿಸುವ ಯಾವುದೇ ಒಳಿತಿಗೂ ನಾನು ಅವಶ್ಯಕತೆಯುಳ್ಳವನಾಗಿರುವೆನು." ಸೂರ ಅಲ್-ಕಸಸ್: 24.
41. "ನನ್ನ ಪ್ರಭೂ! ವಿನಾಶಕಾರಿಗಳಾಗಿರುವ ಈ ಜನತೆಯ ವಿರುದ್ಧ ನನಗೆ ಸಹಾಯ ಮಾಡು." ಸೂರ ಅಲ್-ಅನ್ಕಬೂತ್ : 30.
42. "ನನ್ನ ಪ್ರಭೂ! ಸಜ್ಜನರಲ್ಲಿ ಸೇರಿದವನನ್ನು ನನಗೆ (ಪುತ್ರನನ್ನಾಗಿ) ಕರುಣಿಸು." ಸೂರ ಅಸ್ಸಾಫಾತ್ :100.
43. "ನನ್ನ ಪ್ರಭೂ! ನನಗೆ ಮತ್ತು ನನ್ನ ಹೆತ್ತವರಿಗೆ ನೀನು ದಯಪಾಲಿಸಿರುವ ಅನುಗ್ರಹಗಳಿಗಾಗಿ ಕೃತಜ್ಞತೆ ಸಲ್ಲಿಸಲು ಮತ್ತು ನೀನು ಸಂತೃಪ್ತನಾಗುವ ಸತ್ಕರ್ಮವನ್ನು ಮಾಡಲು ನನಗೆ ಪ್ರೇರಣೆ ನೀಡು. ನನ್ನ ಸಂತತಿಗಳಲ್ಲಿ ನನಗೆ ಒಳಿತನ್ನುಂಟುಮಾಡು. ಖಂಡಿತವಾಗಿಯೂ ನಾನು ನಿನ್ನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರುವೆನು. ಖಂಡಿತವಾಗಿಯೂ ನಾನು ಶರಣಾಗತರಾಗುವವರ ಪೈಕಿ ಸೇರಿದವನಾಗಿರುವೆನು." ಸೂರ ಅಲ್-ಅಹ್ಕಾಫ್ :15.
44. "ನಮ್ಮ ಪ್ರಭೂ! ನಮಗೂ, ಮತ್ತು ನಮಗಿಂತ ಮುಂಚೆ ವಿಶ್ವಾಸವಿರಿಸಿ ಗತಿಸಿಹೋಗಿರುವ ನಮ್ಮ ಸಹೋದರರಿಗೂ ಕ್ಷಮಿಸು. ನಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸಿಗಳೊಂದಿಗೆ ಯಾವುದೇ ವಿದ್ವೇಷವನ್ನೂ ಉಂಟುಮಾಡದಿರು. ನಮ್ಮ ಪ್ರಭೂ! ಖಂಡಿತವಾಗಿಯೂ ನೀನು ಅತ್ಯಧಿಕ ದಯೆಯುಳ್ಳವನೂ, ಅಪಾರ ಕರುಣೆಯುಳ್ಳವನೂ ಆಗಿರುವೆ." ಸೂರ ಅಲ್-ಹಶ್ರ್ : 10.
45. "ನಮ್ಮ ಪ್ರಭೂ! ನಾವು ನಿನ್ನ ಮೇಲೆ ಭರವಸೆಯಿಟ್ಟಿರುವೆವು ಮತ್ತು ನಾವು ನಿನ್ನೆಡೆಗೆ ಮರಳಿರುವೆವು. ಮರಳುವಿಕೆಯು ನಿನ್ನೆಡೆಗೇ ಆಗಿದೆ." ಸೂರ ಅಲ್-ಮುಮ್ತಹಿನ: 4.
46. "ನಮ್ಮ ಪ್ರಭೂ! ನಮ್ಮನ್ನು ಸತ್ಯನಿಷೇಧಿಗಳ ಪರೀಕ್ಷೆಗೆ ಬಲಿಯಾಗಿಸದಿರು. ನಮ್ಮ ಪ್ರಭೂ! ನಮ್ಮನ್ನು ಕ್ಷಮಿಸು. ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವೆ." ಸೂರ ಅಲ್-ಮುಮ್ತಹಿನ : 5.
47. "ನನ್ನ ಪ್ರಭೂ! ನನಗೆ, ನನ್ನ ಮಾತಾಪಿತರಿಗೆ, ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವರಿಗೆ, ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಯರಿಗೆ ಕ್ಷಮಿಸು." ಸೂರ ನೂಹ್ :28.
48. "ನಮ್ಮ ಪ್ರಭೂ! ನಮ್ಮ ಪ್ರಕಾಶವನ್ನು ನಮಗೆ ಪೂರ್ಣಗೊಳಿಸು ಮತ್ತು ನಮಗೆ ಕ್ಷಮೆ ನೀಡು. ಖಂಡಿತವಾಗಿಯೂ ನೀನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ." ಸೂರ ಅತ್ತಹ್ರೀಮ್ : 8.
49. "ಓ ಅಲ್ಲಾಹನೇ, ಸತ್ಯದ ವಿಷಯದಲ್ಲಿ ಭಿನ್ನಾಭಿಪ್ರಾಯಕ್ಕೊಳಗಾಗಿರುವುದರಲ್ಲಿ ನಿನ್ನ ಅನುಮತಿಯೊಂದಿಗೆ ನನಗೆ ನೇರಮಾರ್ಗವನ್ನು ತೋರಿಸು. ಖಂಡಿತವಾಗಿಯೂ ನೀನು ಬಯಸಿದವರಿಗೆ ನೀನು ನೇರ ಮಾರ್ಗ ತೋರಿಸುವೆ."[11]. [11] ಸೂರ ಅಲ್-ಬಕರ 213ನೇ ಸೂಕ್ತಿಯಿಂದ ಉಲ್ಲೇಖಿಸಲಾಗಿದೆ.
50. "ಓ ಅಲ್ಲಾಹನೇ, ನನಗೆ (ನೈಜ) ಜ್ಞಾನವನ್ನು ನೀಡು. ಆ (ನೈಜ)ಜ್ಞಾನ ಯಾರಿಗೆ ನೀಡಲಾಯಿತೋ ಅವನಿಗೆ ಅತ್ಯಧಿಕ ಒಳಿತುಗಳನ್ನು ನೀಡಲಾಯಿತು"[12]. [12] ಸೂರ ಅಲ್-ಬಕರ 213ನೇ ಸೂಕ್ತಿಯಿಂದ ಉಲ್ಲೇಖಿಸಲಾಗಿದೆ.
51. "ಓ ಅಲ್ಲಾಹನೇ, ನನ್ನನ್ನು ಇಹಲೋಕದಲ್ಲೂ ಪರಲೋಕದಲ್ಲೂ ಸುದೃಢ ವಚನದ ಮೂಲಕ ಸ್ಥಿರವಾಗಿ ನೆಲೆಗೊಳಿಸು". [13] ಸೂರ ಇಬ್ರಾಹೀಮ್ 27ನೇ ವಚನದಿಂದ ಉಲ್ಲೇಖಿಸಲಾಗಿದೆ.
52. "ಓ ಅಲ್ಲಾಹನೇ, ಸತ್ಯವಿಶ್ವಾಸವನ್ನು ನಮಗೆ ಇಷ್ಟಕರವಾಗಿಸು ಮತ್ತು ನಮ್ಮ ಹೃದಯಗಳಲ್ಲಿ ಅದನ್ನು ಆಕರ್ಷಣೀಯವಾಗಿ ತೋರಿಸಿಕೂಡು. ಅವಿಶ್ವಾಸ, ಧಿಕ್ಕಾರ, ಹಾಗೂ ಅವಿಧೇಯತೆಯನ್ನು ನಮಗೆ ಅಸಹ್ಯಕರವಾಗಿಸು ಮತ್ತು ನಮ್ಮನ್ನು ಸನ್ಮಾರ್ಗ ಪಡೆದವರಲ್ಲಿ ಸೇರಿಸು."[14]. [14] ಸೂರ ಅಲ್-ಹುಜುರಾತ್ 7ನೇ ವಚನದಿಂದ ಉಲ್ಲೇಖಿಸಲಾಗಿದೆ.
53. "ಓ ಅಲ್ಲಾಹನೇ, ನನ್ನನ್ನು ಮನಸ್ಸಿನ ಜಿಪುಣತನದಿಂದ ಪಾರುಮಾಡು ಮತ್ತು ನನ್ನನ್ನು ಯಶಸ್ವಿಯಾದವರಲ್ಲಿ ಸೇರಿಸು." [15]. [15] ಸೂರ ಅತ್ತಗಾಬುನ್ 16ನೇ ವಚನದಿಂದ ಉಲ್ಲೇಖಿಸಲಾಗಿದೆ.
54. " ಓ ಅಲ್ಲಾಹನೇ, ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ನಮಗೆ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು" [16]. [16] ಬುಖಾರಿ (ಹದೀಸ್ ಸಂಖ್ಯೆ 4522, 6389), ಮುಸ್ಲಿಮ್ (ಹದೀಸ್ ಸಂಖ್ಯೆ 2690).
55. "ಓ ಅಲ್ಲಾಹ್! ನರಕದ ಪರೀಕ್ಷೆಯಿಂದ, ನರಕದ ಶಿಕ್ಷೆಯಿಂದ, ಗೋರಿಯ ಪರೀಕ್ಷೆಯಿಂದ, ಗೋರಿಯ ಶಿಕ್ಷೆಯಿಂದ, ಶ್ರೀಮಂತಿಕೆಯ ಪರೀಕ್ಷೆಯ ಕೇಡಿನಿಂದ ಮತ್ತು ಬಡತನದ ಪರೀಕ್ಷೆಯ ಕೇಡಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ಮಸೀಹು ದ್ದಜ್ಜಾಲ್ನ ಪರೀಕ್ಷೆಯ ಕೇಡಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನನ್ನ ಹೃದಯವನ್ನು ಮಂಜು ಮತ್ತು ಹಿಮಗಳ ನೀರಿನಿಂದ ತೊಳೆದು ಬಿಡು. ಓ ಅಲ್ಲಾಹ್! ಬಿಳಿ ಉಡುಪನ್ನು ಕೊಳೆಯಿಂದ ಶುದ್ಧೀಕರಿಸುವಂತೆ ನನ್ನ ಹೃದಯವನ್ನು ಪಾಪಗಳಿಂದ ಶುದ್ಧೀಕರಿಸು. ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮ (ದಿಕ್ಕು) ಗಳ ಮಧ್ಯೆ ಅಂತರವಿರಿಸಿದಂತೆ ನನ್ನ ಮತ್ತು ನನ್ನ ಪಾಪಗಳ ಮಧ್ಯೆ ಅಂತರವಿರಿಸು. ಓ ಅಲ್ಲಾಹ್ ಸೋಮಾರಿತನದಿಂದ, ಪಾಪ ಕಾರ್ಯಗಳಿಂದ, ಮತ್ತು ಋಣಭಾರದಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ." [17] ಬುಖಾರಿ (ಹದೀಸ್ ಸಂಖ್ಯೆ 832), ಮುಸ್ಲಿಮ್ (ಹದೀಸ್ ಸಂಖ್ಯೆ 589)
56. "ಓ ಅಲ್ಲಾಹ್! ದೌರ್ಬಲ್ಯ, ಸೋಮಾರಿತನ, ಹೇಡಿತನ, ವೃದ್ಯಾಪ್ಯ ಮತ್ತು ಜಿಪುಣತನದಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಗೋರಿಯ ಶಿಕ್ಷೆಯಿಂದ ಮತ್ತು ಜೀವನ ಹಾಗೂ ಮರಣದ ಪರೀಕ್ಷೆಯಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ." [18]. [18] ಬುಖಾರಿ (ಹದೀಸ್ ಸಂಖ್ಯೆ 2823), ಮುಸ್ಲಿಮ್ (ಹದೀಸ್ ಸಂಖ್ಯೆ 2706).
57. "ಓ ಅಲ್ಲಾಹ್! ವಿಪತ್ತುಗಳ ಪ್ರಯಾಸ, ಹತಭಾಗ್ಯತನ, ದುರ್ವಿಧಿ, ಮತ್ತು ಶತ್ರುಗಳ ಅವಹೇಳನಗಳಿಂದ ನಾನು ನಿನ್ನ ರಕ್ಷೆ ಬೇಡುತ್ತೇನೆ." [19] ಬುಖಾರಿ (ಹದೀಸ್ ಸಂಖ್ಯೆ 6347) ಮತ್ತು ಮುಸ್ಲಿಮ್ (ಹದೀಸ್ ಸಂಖ್ಯೆ 2707). ಈ ಹದೀಸಿನ ಪದ ಹೀಗಿದೆ: "ಪ್ರವಾದಿ ಮುಹಮ್ಮದ್ (ಸ) ರು ಪ್ರಯಾಸ, ಹತಭಾಗ್ಯತನ, ದುರ್ವಿಧಿ, ಮತ್ತು ಶತ್ರುಗಳ ಅವಹೇಳನಗಳಿಂದ ಅಭಯ ಯಾಚಿಸುತ್ತಿದ್ದರು".
58. "ಓ ಅಲ್ಲಾಹ್! ನನ್ನ ಕಾರ್ಯಗಳ ಕೇಂದ್ರವಾಗಿರುವ ನನ್ನ ಧರ್ಮವನ್ನು ನನಗೆ ಉತ್ತಮಗೊಳಿಸು. ನಾನು ಬದುಕಬೇಕಾಗಿರುವ ನನ್ನ ಇಹಲೋಕವನ್ನು ನನಗೆ ಉತ್ತಮಗೊಳಿಸು. ನಾನು ಮರಳಬೇಕಾಗಿರುವ ನನ್ನ ಪರಲೋಕವನ್ನು ನನಗೆ ಉತ್ತಮಗೊಳಿಸು. ಬದುಕನ್ನು ಪ್ರತಿಯೊಂದು ಒಳಿತಿನಲ್ಲೂ ನನಗೆ ವರ್ಧಿಸು ಮತ್ತು ಮರಣವನ್ನು ಪ್ರತಿಯೊಂದು ಕೆಡುಕಿನಿಂದಲೂ ನನಗೆ ಮುಕ್ತವಾಗಿಸು." [20]. [20] ಮುಸ್ಲಿಮ್ (ಹದೀಸ್ ಸಂಖ್ಯೆ 2720).
59. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನೇರ ಮಾರ್ಗ, ಧರ್ಮನಿಷ್ಠೆ, ಗುಣಶೀಲತೆ ಹಾಗೂ ಮನಸ್ಸಿನ ಶ್ರೀಮಂತಿಕೆಯನ್ನು ಬೇಡುತ್ತೇನೆ." [21]. [21] ಮುಸ್ಲಿಮ್ (ಹದೀಸ್ ಸಂಖ್ಯೆ 2721).
61. "ಓ ಅಲ್ಲಾಹ್! ನನ್ನನ್ನು ನೇರ ಮಾರ್ಗಕ್ಕೆ ಮುನ್ನಡೆಸು ಮತ್ತು ನನ್ನನ್ನು ಸರಿಯಾಗಿಸು. ಓ ಅಲ್ಲಾಹ್! ನಾನು ನಿನ್ನೊಂದಿಗೆ ಮಾರ್ಗದರ್ಶನ ಮತ್ತು ನೇರ ಮಾರ್ಗವನ್ನು ಬೇಡುತ್ತೇನೆ." [23] [23] ಮುಸ್ಲಿಮ್ (ಹದೀಸ್ ಸಂಖ್ಯೆ 2725).
62. "ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ." [24] [24] ಮುಸ್ಲಿಮ್ (ಹದೀಸ್ ಸಂಖ್ಯೆ 2739).
63. "ಓ ಅಲ್ಲಾಹ್! ನಾನು ಮಾಡಿರುವ ಕೆಡುಕಿನಿಂದ ಮತ್ತು ನಾನು ಮಾಡದಿರುವ ಕೆಡುಕಿನಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತೇನೆ." [25] [25] ಮುಸ್ಲಿಮ್ (ಹದೀಸ್ ಸಂಖ್ಯೆ 2716).
64. "ಓ ಅಲ್ಲಾಹ್! ನನಗೆ ಸಂಪತ್ತನ್ನು ಮತ್ತು ಮಕ್ಕಳನ್ನು ಅಧಿಕಗೊಳಿಸು ಮತ್ತು ನೀನು ನನಗೆ ನೀಡಿರುವುದರಲ್ಲಿ ಸಮೃದ್ಧಿಯನ್ನು ನೀಡು" [26]. "ನನ್ನ ಜೀವನವನ್ನು ನಿನ್ನ ಅನುಸರಣೆಯ ಮೇಲೆ ದೀರ್ಘವಾಗಿಸು, ನನ್ನ ಕಾರ್ಯವನ್ನು ಉತ್ತಮಗೊಳಿಸು ಮತ್ತು ನನ್ನನ್ನು ಕ್ಷಮಿಸು"[27]. [26] ಪ್ರವಾದಿ (ﷺ) ರವರು ಅನಸ್ (ರ) ಗಾಗಿ ಮಾಡಿದ ಪ್ರಾರ್ಥನೆ ಇದಕ್ಕೆ ಪುರಾವೆಯಾಗಿದೆ: “ಓ ಅಲ್ಲಾಹ್! ಅವನ ಸಂಪತ್ತನ್ನು ಮತ್ತು ಮಕ್ಕಳನ್ನು ಅಧಿಕಗೊಳಿಸು ಮತ್ತು ನೀನು ಅವನಿಗೆ ನೀಡಿರುವುದರಲ್ಲಿ ಸಮೃದ್ಧಿಯನ್ನು ನೀಡು.” ಬುಖಾರಿ (ಹದೀಸ್ ಸಂಖ್ಯೆ 1982) ಮತ್ತು ಮುಸ್ಲಿಮ್ (ಹದೀಸ್ ಸಂಖ್ಯೆ 660). [27] ಇದನ್ನು ಬುಖಾರಿ ತಮ್ಮ ಅದಬುಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 653) ವರದಿ ಮಾಡಿದ್ದಾರೆ. ಇಮಾಮ್ ಅಲ್ಬಾನಿ ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹದಲ್ಲಿ (ಹದೀಸ್ ಸಂಖ್ಯೆ 2241) ಮತ್ತು ಸಹೀಹುಲ್ ಅದಬಿಲ್ ಮುಫ್ರದ್ನಲ್ಲಿ (ಪುಟ 244) ಇದನ್ನು ಸಹೀಹ್ ಎಂದಿದ್ದಾರೆ. ಎರಡು ಆವರಣಗಳ ನಡುವೆಯಿರುವ ವಚನವು ಪ್ರವಾದಿ (ﷺ) ರವರ ಈ ವಚನವನ್ನು ಸೂಚಿಸುತ್ತದೆ: ಪ್ರವಾದಿ (ﷺ) ರೊಂದಿಗೆ ಜನರಲ್ಲಿ ಅತ್ಯುತ್ತಮರು ಯಾರೆಂದು ಕೇಳಲಾಯಿತು. ಆಗ ಅವರು, “ಯಾರ ಆಯುಷ್ಯ ದೀರ್ಘವಾಗಿ ಮತ್ತು ಕರ್ಮಗಳು ಉತ್ತಮವಾಗುವುದೋ ಅವನು ಜನರಲ್ಲಿ ಅತ್ಯುತ್ತಮನೆಂದು” ಉತ್ತರಿಸಿದರು. ತಿರ್ಮಿದಿ (ಹದೀಸ್ ಸಂಖ್ಯೆ 2329) ಮತ್ತು ಅಹ್ಮದ್ (ಹದೀಸ್ ಸಂಖ್ಯೆ 17716). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹ್ ತಿರ್ಮಿದಿಯಲ್ಲಿ (2/271) ಸಹೀಹ್ ಎಂದಿದ್ದಾರೆ. ಈ ಪದಗಳೊಂದಿಗೆ ಪ್ರಾರ್ಥಿಸುವುದು ಸುನ್ನತ್ ಆಗಿದೆಯೇ? ಎಂದು ಶೇಖ್ ಬಿನ್ ಬಾಝ್ (ರಹಿ) ರೊಂದಿಗೆ ನಾನು ಕೇಳಿದಾಗ ಅವರು ಹೌದು ಎಂದು ಉತ್ತರಿಸಿದರು.
66. "ಓ ಅಲ್ಲಾಹ್, ನಿನ್ನ ಕರುಣೆಯನ್ನೇ ನಾನು ನಿರೀಕ್ಷಿಸುತ್ತೇನೆ. ಆದ್ದರಿಂದ ಕಣ್ಣು ಮಿಟುಕಿಸುವಷ್ಟೂ ಕಾಲ ಕೂಡ ನನ್ನನ್ನು ನನ್ನ ಪಾಡಿಗೆ ಬಿಡಬೇಡ. ನನ್ನ ಎಲ್ಲಾ ಕೆಲಸ-ಕಾರ್ಯಗಳನ್ನು ನನಗಾಗಿ ಸರಿಪಡಿಸು. ನಿನ್ನ ಹೊರತು ಬೇರೆ ಆರಾಧ್ಯನಿಲ್ಲ" [29]. [29] ಅಬೂ ದಾವೂದ್ (ಹದೀಸ್ ಸಂಖ್ಯೆ 5090) ಮತ್ತು ಅಹ್ಮದ್ (5/42). ಇಮಾಮ್ ಅಲ್ಬಾನಿ ಸಹೀಹ್ ಅಬೂ ದಾವೂದ್ನಲ್ಲಿ (3/250) ಮತ್ತು ಸಹೀಹ್ ಅದಬುಲ್ ಮುಫ್ರದ್ನಲ್ಲಿ (ಪುಟ 260) ಈ ಹದೀಸನ್ನು ಹಸನ್ ಎಂದಿದ್ದಾರೆ. ಅಲ್ಲಾಮಾ ಬಿನ್ ಬಾಝ್ (ರಹಿ) ರವರು ತುಹ್ಫತುಲ್ ಅಖ್ಯಾರ್ನಲ್ಲಿ (ಪುಟ 24) ಈ ಹದೀಸಿನ ಸನದನ್ನು ಹಸನ್ ಎಂದಿದ್ದಾರೆ.
67. "ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ಪರಮ ಪಾವನನು! ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದವನಾಗಿರುವೆನು" [30]. [30] ತಿರ್ಮಿದಿ (ಹದೀಸ್ ಸಂಖ್ಯೆ 3505) ಮತ್ತು ಹಾಕಿಮ್. ಹಾಕಿಮ್ ಈ ಹದೀಸನ್ನು ಸಹೀಹ್ ಎಂದಿದ್ದಾರೆ ಮತ್ತು ಇಮಾಮ್ ಝಹಬೀ ಒಪ್ಪಿಕೊಂಡಿದ್ದಾರೆ (1/505) ಅಲ್ಬಾನಿ ಸಹೀಹ್ ತಿರ್ಮಿದಿಯಲ್ಲಿ (3/168) ಈ ಹದೀಸನ್ನು ಸಹೀಹ್ ಎಂದಿದ್ದಾರೆ. ಅದರ ಪದಗಳು ಹೀಗಿವೆ: ದುನ್ನೂನ್ ರವರು ಮೀನಿನ ಹೊಟ್ಟೆಯಲ್ಲಿರುವಾಗ ಪ್ರಾರ್ಥಿಸಿದ ಪ್ರಾರ್ಥನೆ: “ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ಪರಮ ಪಾವನನು! ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದವನಾಗಿರುವೆನು.” ಯಾವುದೇ ಮುಸ್ಲಿಮನು ಈ ಪ್ರಾರ್ಥನೆಯೊಂದಿಗೆ ಅಲ್ಲಾಹನಲ್ಲಿ ಪ್ರಾರ್ಥಿಸಿದರೆ ಖಂಡಿತವಾಗಿಯೂ ಅಲ್ಲಾಹನು ಅವನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ.
68. " ಓ ಅಲ್ಲಾಹ್! ನಾನು ನಿನ್ನ ದಾಸನಾಗಿದ್ದೇನೆ. ನಿನ್ನ ದಾಸನ ಮಗನಾಗಿದ್ದೇನೆ. ನಿನ್ನ ದಾಸಿಯ ಮಗನಾಗಿದ್ದೇನೆ. ನನ್ನ ಮುಂಗುರುಳು ನಿನ್ನ ಕೈಯಲ್ಲಿದೆ. ನನ್ನ ಮೇಲೆ ನಿನ್ನ ತೀರ್ಪು ಜಾರಿಯಾಗುತ್ತಿದೆ. ನನ್ನ ಮೇಲೆ ನಿನ್ನ ವಿಧಿಯು ನ್ಯಾಯ ಪೂರ್ವಕವಾಗಿದೆ. ನೀನು ನಿನ್ನನ್ನು ಸ್ವತಃ ಹೆಸರಿಸಿದ ಅಥವಾ ನಿನ್ನ ಸೃಷ್ಟಿಗಳಲ್ಲಿ ಯಾರೊಬ್ಬರಿಗಾದರೂ ಕಲಿಸಿದ ಅಥವಾ ನಿನ್ನ ಗ್ರಂಥದಲ್ಲಿ ನೀನು ಅವತೀರ್ಣಗೊಳಿಸಿದ ಅಥವಾ ನಿನ್ನ ಬಳಿಯಲ್ಲಿರುವ ಅದೃಶ್ಯ ಜ್ಞಾನದಲ್ಲಿ ನೀನು ಬಾಕಿಯುಳಿಸಿದ ನಿನಗಿರುವ ಎಲ್ಲಾ ಹೆಸರುಗಳಿಂದ, ಕುರ್ಆನನ್ನು ನನ್ನ ಹೃದಯದ ವಸಂತವಾಗಿಸಬೇಕೆಂದು, ನನ್ನ ಎದೆಯ ಬೆಳಕಾಗಿಸಬೇಕೆಂದು, ನನ್ನ ದುಃಖದ ನಿವಾರಕವಾಗಿಸಬೇಕೆಂದು ಮತ್ತು ನನ್ನ ವ್ಯಥೆಯ ನಿವಾರಕವಾಗಿಸಬೇಕೆಂದು ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ" [31]. [31] ಅಹ್ಮದ್ (1/391, 452) ಮತ್ತು ಹಾಕಿಮ್ (1/509). ಹಾಫಿದ್ ಇಬ್ನು ಹಜರ್ (ರಹಿ) ತಖ್ರೀಜುಲ್ ಅದ್ಕಾರ್ನಲ್ಲಿ ಈ ಹದೀಸನ್ನು ಹಸನ್ ಎಂದಿದ್ದಾರೆ. ಅಲ್ಬಾನಿ (ರಹಿ) ಅಲ್-ಕಲಿಮು ತ್ತ್ವಯ್ಯಿಬ್ನ ತಖ್ರೀಜ್ನಲ್ಲಿ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ (ಪುಟ 73).
69. "ಓ ಅಲ್ಲಾಹ್! ಹೃದಯಗಳನ್ನು ಪರಿವರ್ತಿಸುವವನೇ, ನಮ್ಮ ಹೃದಯವನ್ನು ನಿನ್ನ ಅನುಸರಣೆಯೆಡೆಗೆ ಪರಿವರ್ತಿಸು" [32]. [32] ಮುಸ್ಲಿಮ್ (ಹದೀಸ್ ಸಂಖ್ಯೆ 2654).
70. "ಓ ಹೃದಯಗಳನ್ನು ಪರಿವರ್ತಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ಸ್ಥಿರವಾಗಿ ನೆಲೆಗೊಳಿಸು" [33]. [33] ತಿರ್ಮಿದಿ (ಹದೀಸ್ ಸಂಖ್ಯೆ 3522), ಅಹ್ಮದ್ (4/182) ಮತ್ತು ಅಲ್-ಹಾಕಿಮ್ (1/525, 528) ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಅಲ್ಬಾನಿ ಈ ಹದೀಸನ್ನು ಸಹೀಹುಲ್ ಜಾಮಿಅ್ನಲ್ಲಿ (6/309) ಮತ್ತು ಸಹೀಹುತ್ತಿರ್ಮಿದಿಯಲ್ಲಿ (3/171) ಸಹೀಹ್ ಎಂದು ಘೋಷಿಸಿದ್ದಾರೆ. ಉಮ್ಮು ಸಲಮಾ (ರ) ರವರು ಹೇಳಿದರು: "ಪ್ರವಾದಿ (ﷺ) ರವರು ಅತಿ ಹೆಚ್ಚಾಗಿ ಈ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತಿದ್ದರು."
[71] ತಿರ್ಮಿದಿ (ಹದೀಸ್ ಸಂಖ್ಯೆ 3514), ಬುಖಾರಿ ಅದಬುಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 726). ತಿರ್ಮಿದಿಯ ಪ್ರಕಾರ ಹದೀಸಿನ ಪದಗಳು ಹೀಗಿವೆ: “ಇಹಲೋಕದಲ್ಲೂ ಪರಲೋಕದಲ್ಲೂ ಅಲ್ಲಾಹನಲ್ಲಿ ಸೌಖ್ಯವನ್ನು ಬೇಡಿರಿ.” ಇನ್ನೊಂದು ಹದೀಸಿನ ಪದಗಳು ಹೀಗಿವೆ: “ಅಲ್ಲಾಹನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡಿರಿ. ಏಕೆಂದರೆ ದೃಢವಿಶ್ವಾಸದ ನಂತರ ಸೌಖ್ಯಕ್ಕಿಂತ ಉತ್ತಮವಾದದ್ದನ್ನು ಯಾರಿಗೂ ನೀಡಲಾಗಿಲ್ಲ.” ಇಮಾಮ್ ಅಲ್ಬಾನಿ ಸಹೀಹ್ ಇಬ್ನು ಮಾಜಾದಲ್ಲಿ (3/180,3/185 3/170) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ. ಈ ಹದೀಸಿಗೆ ಬಹಳಷ್ಟು ಸಾಕ್ಷಿಗಳಿವೆ. ಹೆಚ್ಚಿನ ಮಾಹಿತಿಗಾಗಿ: ಅಹ್ಮದ್ ಶಾಕಿರ್ ರವರು ಕ್ರಮಗೊಳಿಸಿರುವ ಮುಸ್ನದ್ ಅಹ್ಮದ್ (1/156, 157) ನೋಡಿರಿ.
72. "ಓ ಅಲ್ಲಾಹ್! ನಮ್ಮ ಎಲ್ಲಾ ಕಾರ್ಯಗಳ ಪರಿಣಾಮವನ್ನು ಅತ್ಯುತ್ತಮಗೊಳಿಸು. ಭೂಲೋಕದ ಅಪಮಾನದಿಂದ ಮತ್ತು ಪರಲೋಕದ ಶಿಕ್ಷೆಯಿಂದ ನಮ್ಮನ್ನು ರಕ್ಷಿಸು" [35]. [35] ಅಹ್ಮದ್ (4/181), ಅತ್ತಬ್ರಾನಿ ಅಲ್-ಕಬೀರ್ನಲ್ಲಿ (2/33/1169) ಮತ್ತು ಅದ್ದುಆದಲ್ಲಿ (ಹದೀಸ್ ಸಂಖ್ಯೆ 1436), ಇಬ್ನು ಹಿಬ್ಬಾನ್ (ಹದೀಸ್ ಸಂಖ್ಯೆ 2424, 2425 ಮವಾರಿದ್), ಹಾಫಿದ್ ಅಲ್-ಹೈಸಮಿ ಮಜ್ಮವು ಝ್ಝವಾಯಿದ್ನಲ್ಲಿ (10/178) ಹೇಳುತ್ತಾರೆ: ಅಹ್ಮದ್ ರವರ ವರದಿಗಾರರು ಮತ್ತು ಇಮಾಮ್ ತಬ್ರಾನಿ ರವರ ಒಂದು ಸನದ್ನಲ್ಲಿರುವ ವರದಿಗಾರರು ವಿಶ್ವಾಸಯೋಗ್ಯರಾಗಿದ್ದಾರೆ.
73. "ನನ್ನ ಪ್ರಭೂ! ನನಗೆ ಸಹಾಯ ಮಾಡು. ನನ್ನ ವಿರುದ್ಧ ಸಹಾಯ ಮಾಡಿದಿರು. ನನಗೆ ನೆರವು ನೀಡು. ನನ್ನ ವಿರುದ್ಧ ನೆರವು ನೀಡದಿರು. ನನಗೋಸ್ಕರ ತಂತ್ರ ಹೂಡು, ನನ್ನ ವಿರುದ್ಧ ತಂತ್ರ ಹೂಡದಿರು. ನನ್ನನ್ನು ಮುನ್ನಡೆಸು ಮತ್ತು ನನಗೆ ಮಾರ್ಗದರ್ಶನವನ್ನು ಸುಲಭೀಕರಿಸು. ನನ್ನ ವಿರುದ್ಧ ಬಂಡೇಳುವವರಿಗೆದುರಾಗಿ ನನಗೆ ನೆರವು ನೀಡು. ಓ ಅಲ್ಲಾಹ್! ನಿನಗೆ ಕೃತಜ್ಞತೆ ಸಲ್ಲಿಸುವಂತೆ, ನಿನ್ನನ್ನು ಸ್ಮರಿಸುವಂತೆ, ನಿನ್ನನ್ನು ಆರಾಧಿಸುವಂತೆ, ನಿನಗೆ ವಿದೇಯವಾಗಿರುವಂತೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪದಿಂದ ಮರಳುವಂತೆ ನನ್ನನ್ನು ಮಾಡು. ನನ್ನ ಪ್ರಭೂ! ನನ್ನ ಪಶ್ಚಾತ್ತಾಪವನ್ನು ಸ್ವೀಕರಿಸು, ನನ್ನ ಪಾಪವನ್ನು ತೊಳೆದುಬಿಡು, ನನ್ನ ಪ್ರಾರ್ಥನೆಗೆ ಉತ್ತರಿಸು, ನನ್ನ ಆಧಾರವನ್ನು ದೃಢಗೊಳಿಸು, ನನ್ನ ಹೃದಯವನ್ನು ಮುನ್ನಡೆಸು, ನನ್ನ ನಾಲಗೆಯನ್ನು ನೇರವಾಗಿಸು ಮತ್ತು ನನ್ನ ಹೃದಯದ ಮಾಲಿನ್ಯವನ್ನು ನಿವಾರಿಸು" [36]. [36] ಬುಖಾರಿ ಅದಬುಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 664, 665), ಅಬೂ ದಾವೂದ್ (ಹದೀಸ್ ಸಂಖ್ಯೆ 1510, 1511), ತಿರ್ಮಿದಿ (ಹದೀಸ್ ಸಂಖ್ಯೆ 3551), ಇಬ್ನು ಮಾಜಾ (ಹದೀಸ್ ಸಂಖ್ಯೆ 3830), ಅಹ್ಮದ್ (1/127) ಮತ್ತು ಹಾಕಿಮ್ (1/519). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಅಲ್ಬಾನಿ ಸಹೀಹ್ ಅಬೂ ದಾವೂದ್ನಲ್ಲಿ (1/414) ಮತ್ತು ಸಹೀಹ್ ಅತ್ತಿರ್ಮಿದಿಯಲ್ಲಿ (3/178) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
74. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನಿನ್ನ ಪ್ರವಾದಿ ಮುಹಮ್ಮದ್ (ﷺ) ರವರು ಬೇಡಿದ ಅತ್ಯುತ್ತಮವಾದುದ್ದನ್ನು ಬೇಡುತ್ತೇನೆ ಮತ್ತು ನಿನ್ನ ಪ್ರವಾದಿ ಮುಹಮ್ಮದ್ (ﷺ) ರವರು ನಿನ್ನೊಂದಿಗೆ ಅಭಯ ಯಾಚಿಸಿದ ಪ್ರತಿಯೊಂದು ಕೇಡಿನಿಂದ ನಾನು ಅಭಯ ಯಾಚಿಸುತ್ತೇನೆ. ನಿನ್ನಿಂದ ಮಾತ್ರ ಸಹಾಯ ಬೇಡಲಾಗುತ್ತದೆ. ಸಂದೇಶವನ್ನು ತಲುಪಿಸುವುದು ಮಾತ್ರ ನಿನ್ನ ಹೊಣೆಗಾರಿಕೆಯಾಗಿದೆ. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿ-ಸಾಮರ್ಥ್ಯವಿಲ್ಲ"[37]. [37] ತಿರ್ಮಿದಿ (ಹದೀಸ್ ಸಂಖ್ಯೆ 3521), ಇಬ್ನು ಮಾಜಾ (ಹದೀಸ್ ಸಂಖ್ಯೆ 3846 ಅದೇ ಅರ್ಥವಿರುವ ಹದೀಸ್). ಇಮಾಮ್ ತಿರ್ಮಿದಿ ಈ ಹದೀಸನ್ನು ಹಸನ್ ಗರೀಬ್ ಎಂದು ಹೇಳಿದ್ದಾರೆ. ಇಮಾಮ್ ಅಲ್ಬಾನಿ ಈ ಹದೀಸನ್ನು ದಈಫು ತ್ತಿರ್ಮಿದಿಯಲ್ಲಿ (ಪುಟ 387) ದುರ್ಬಲವಾಗಿದೆ ಎಂದು ಘೋಷಿಸಿದ್ದಾರೆ.
75. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನನ್ನ ಕಿವಿಗಳ ಕೇಡಿನಿಂದ, ನನ್ನ ಕಣ್ಣುಗಳ ಕೇಡಿನಿಂದ, ನನ್ನ ನಾಲಿಗೆಯ ಕೇಡಿನಿಂದ, ನನ್ನ ಹೃದಯದ ಕೇಡಿನಿಂದ ಮತ್ತು ನನ್ನ ವೀರ್ಯದ ಕೇಡಿನಿಂದ ರಕ್ಷೆ ಬೇಡುತ್ತೇನೆ"[38]. [38] ಅಬೂ ದಾವೂದ್ (ಹದೀಸ್ ಸಂಖ್ಯೆ 1551), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3492), ನಸಾಈ (ಹದೀಸ್ ಸಂಖ್ಯೆ 5470). ಇವರಲ್ಲದೆ ಇನ್ನು ಅನೇಕರು ಈ ಹದೀಸನ್ನು ವರದಿ ಮಾಡಿದ್ದಾರೆ. ಇಮಾಮ್ ಅಲ್ಬಾನಿ ಸಹೀಹು ತ್ತಿರ್ಮಿದಿ (3/166) ಮತ್ತು ಸಹೀಹು ನ್ನಸಾಈಯಲ್ಲಿ 3/1108 ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
76. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಕುಷ್ಠರೋಗದಿಂದ, ಹುಚ್ಚುತನದಿಂದ, ತೊನ್ನಿನ ರೋಗದಿಂದ ಮತ್ತು ಎಲ್ಲಾ ರೀತಿಯ ಕೆಟ್ಟ ರೋಗಗಳಿಂದ ರಕ್ಷೆ ಬೇಡುತ್ತೇನೆ" [39]. [39] ಅಬೂ ದಾವೂದ್ (ಹದೀಸ್ ಸಂಖ್ಯೆ 1554), ಅತ್ತಿರ್ಮಿದಿ (ಹದೀಸ್ ಸಂಖ್ಯೆ 5493), ಅಹ್ಮದ್ (3/192). ಇಮಾಮ್ ಸಹೀಹು ನ್ನಸಾಈ 3/184 ಮತ್ತು ಅಲ್ಬಾನಿ ಸಹೀಹು ತ್ತಿರ್ಮಿದಿಯಲ್ಲಿ (3/1116) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
77. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಕೆಟ್ಟ ಸ್ವಭಾವಗಳಿಂದ, ಕೆಟ್ಟ ಕಾರ್ಯಗಳಿಂದ ಮತ್ತು ಕೆಟ್ಟ ದೇಹೇಚ್ಛೆಗಳಿಂದ ರಕ್ಷಣೆ ಬೇಡುತ್ತೇನೆ"[40]. [40] ಅತ್ತಿರ್ಮಿದಿ (ಹದೀಸ್ ಸಂಖ್ಯೆ 3591), ಇಬ್ನು ಹಿಬ್ಬಾನ್ (ಹದೀಸ್ ಸಂಖ್ಯೆ 2422 ಮವಾರಿದ್), ಅಲ್ ಹಾಕಿಮ್ (1/532) ಮತ್ತು ಅತ್ತಬ್ರಾನೀ ಅಲ್ ಕಬೀರ್ನಲ್ಲಿ (19/19/36) ಇಮಾಮ್ ಅಲ್ಬಾನಿ ಸಹೀಹು ತ್ತಿರ್ಮಿದಿಯಲ್ಲಿ (3/184) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
78. "ಓ ಅಲ್ಲಾಹ್! ನೀನು ಕ್ಷಮಿಸುವವನಾಗಿರುವೆ, ಉದಾರಿಯಾಗಿರುವೆ, ಕ್ಷಮೆಯನ್ನು ಇಷ್ಟಪಡುವವನಾಗಿರುವೆ. ಆದ್ದರಿಂದ ನನಗೆ ಕ್ಷಮೆ ನೀಡು"[41]. [41] ಅತ್ತಿರ್ಮಿದಿ (ಹದೀಸ್ ಸಂಖ್ಯೆ 3513), ಅನ್ನಸಾಈ ಅಲ್-ಕುಬ್ರಾದಲ್ಲಿ (ಹದೀಸ್ ಸಂಖ್ಯೆ 7712). ಇಮಾಮ್ ಅಲ್ಬಾನಿ ಸಹೀಹು ತ್ತಿರ್ಮಿದಿಯಲ್ಲಿ (3/170) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
79. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಸತ್ಕಾರ್ಯಗಳನ್ನು ಮಾಡುವುದನ್ನು, ದುಷ್ಕೃತ್ಯಗಳನ್ನು ತೊರೆಯುವುದನ್ನು ಮತ್ತು ಬಡವರನ್ನು ಪ್ರೀತಿಸುವುದನ್ನು ಬೇಡುತ್ತೇನೆ. ನೀನು ನನಗೆ ಕ್ಷಮಿಸಬೇಕು ಮತ್ತು ನನ್ನ ಮೇಲೆ ಕರುಣೆ ತೋರಬೇಕೆಂದು ಬೇಡುತ್ತೇನೆ. ನೀನು ಒಂದು ಸಮುದಾಯವನ್ನು ಪರೀಕ್ಷೆಗೆ ಒಳಪಡಿಸಿದಾಗ ನನ್ನನ್ನು ಪರೀಕ್ಷಿಸದೆ ಮರಣವನ್ನು ನೀಡೆಂದು ನಿನ್ನಲ್ಲಿ ಬೇಡುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ನಿನ್ನ ಪ್ರೀತಿ ಮತ್ತು ನಿನ್ನನ್ನು ಪ್ರೀತಿಸುವವರ ಪ್ರೀತಿ ಮತ್ತು ನಿನ್ನ ಪ್ರೀತಿಯೆಡೆಗೆ ಸಮೀಪಿಸುವ ಕಾರ್ಯದ ಪ್ರೀತಿಯನ್ನು ಬೇಡುತ್ತೇನೆ"[42]. [42] ಅಹ್ಮದ್ (5/243 ಈ ಪದಗಳಲ್ಲೇ ವರದಿ), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3235 ಇದೇ ಪದಗಳಲ್ಲಿ ವರದಿ). ತಿರ್ಮಿದಿ ಈ ಹದೀಸನ್ನು ಹಸನ್ ಎಂದು ಹೇಳಿದ್ದಾರೆ. ನಂತರ ಹೀಗೆ ಹೇಳಿದ್ದಾರೆ: ನಾನು ಮುಹಮ್ಮದ್ ಬಿನ್ ಇಸ್ಮಾಯೀಲ್ ಅಂದರೆ ಇಮಾಂ ಬುಖಾರಿಯವರಲ್ಲಿ ಈ ಹದೀಸಿನ ಬಗ್ಗೆ ಕೇಳಿದಾಗ, ಅವರು ಈ ಹದೀಸ್ ಹಸನ್ ಸಹೀಹ್ ಆಗಿದೆ ಎಂದು ಹೇಳಿದರು. ಈ ಹದೀಸಿನ ಕೊನೆಯಲ್ಲಿ ಪ್ರವಾದಿ (ﷺ) ರವರು: ಅದು ಸತ್ಯವಾಗಿದೆ. “ಅದನ್ನು ಕಲಿಯಿರಿ ಮತ್ತು ಇತರರನ್ನು ಕಲಿಸಿರಿ” ಎಂದು ಹೇಳಿದ್ದಾರೆ. ಅಲ್ ಹಾಕಿಮ್ (1/521). ಇಮಾಮ್ ಅಲ್ಬಾನಿ ರವರು ಈ ಹದೀಸನ್ನು ಸಹೀಹುತ್ತಿರ್ಮಿದಿಯಲ್ಲಿ (3/318) ಸಹೀಹ್ ಎಂದು ಘೋಷಿಸಿದ್ದಾರೆ.
80. "ಓ ಅಲ್ಲಾಹ್! ನಾನು ತಿಳಿದಿರುವ ಮತ್ತು ತಿಳಿಯದಿರುವ ಪ್ರತಿಯೊಂದು ಒಳಿತುಗಳಿಂದಲೂ, ಅವುಗಳಲ್ಲಿ ಸನಿಹವಾಗಿರುವುದನ್ನೂ ವಿದೂರವಾಗಿರುವುದನ್ನೂ ನಾನು ನಿನ್ನೊಂದಿಗೆ ಬೇಡುತ್ತೇನೆ. ನಾನು ತಿಳಿದಿರುವ ಮತ್ತು ತಿಳಿಯದಿರುವ ಪ್ರತಿಯೊಂದು ಕೆಡುಕುಗಳಿಂದಲೂ, ಅವುಗಳಲ್ಲಿ ಸನಿಹವಾಗಿರುವುದರಿಂದಲೂ ವಿದೂರವಾಗಿರುವುದರಿಂದಲೂ ನಾನು ನಿನ್ನೊಂದಿಗೆ ಅಭಯವನ್ನು ಬೇಡುತ್ತೇನೆ. ನಿನ್ನ ದಾಸ ಮತ್ತು ಸಂದೇಶವಾಹಕರಾದ ಮುಹಮ್ಮದ್ (ﷺ) ರವರು ನಿನ್ನೊಂದಿಗೆ ಬೇಡಿದ ಒಳಿತುಗಳನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ನಿನ್ನ ದಾಸ ಮತ್ತು ಸಂದೇಶವಾಹಕರಾದ ಮುಹಮ್ಮದ್ (ﷺ) ರವರು ನಿನ್ನೊಂದಿಗೆ ಅಭಯ ಯಾಚಿಸಿದ ಕೆಡುಕುಗಳಿಂದ ನಾನು ನಿನ್ನೊಂದಿಗೆ ಅಭಯವನ್ನು ಬೇಡುತ್ತೇನೆ. ಸ್ವರ್ಗವನ್ನು ಮತ್ತು ಅದರೆಡೆಗೆ ಹತ್ತಿರವಾಗಿಸುವ ಮಾತು ಮತ್ತು ಪ್ರವೃತ್ತಿಯನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ನರಕದಿಂದ ಮತ್ತು ಅದರೆಡೆಗೆ ಹತ್ತಿರವಾಗಿಸುವ ಮಾತು ಮತ್ತು ಪ್ರವೃತ್ತಿಯಿಂದ ನಾನು ನಿನ್ನೊಂದಿಗೆ ಅಭಯವನ್ನು ಬೇಡುತ್ತೇನೆ. ನೀನು ನನ್ನ ಮೇಲೆ ವಿಧಿಸಿದ ಯಾವುದೇ ವಿಧಿಯನ್ನೂ ಉತ್ತಮ ಗೊಳಿಸಬೇಕೆಂದು ನಾನು ನಿನ್ನೊಂದಿಗೆ ಬೇಡುತ್ತೇನೆ"[43]. [43] ಇಬ್ನು ಮಾಜಾ (ಹದೀಸ್ ಸಂಖ್ಯೆ 3846 ಇದು ಅವರ ಪದಗಳು), ಅಹ್ಮದ್ (6/134 ಎರಡನೇ ಹೆಚ್ಚುವರಿ ಇವರದ್ದಾಗಿದೆ). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ (1/521 ಮೊದಲನೆಯ ಹೆಚ್ಚುವರಿ ಇವರದ್ದಾಗಿದೆ). ಇಮಾಮ್ ಅಲ್ಬಾನಿ ಸಹೀಹ್ ಇಬ್ನು ಮಾಜಾದಲ್ಲಿ (2/327) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
81. "ಓ ಅಲ್ಲಾಹ್! ನಾನು ನಿಂತಿಕೊಂಡಿರುವಾಗ ಇಸ್ಲಾಮಿನಲ್ಲಿರುವಂತೆ ನನ್ನನ್ನು ರಕ್ಷಿಸು, ನಾನು ಕುಳಿತು ಕೊಂಡಿರುವಾಗ ಇಸ್ಲಾಮಿನಲ್ಲಿರುವಂತೆ ನನ್ನನ್ನು ರಕ್ಷಿಸು, ನಾನು ಮಲಗಿರುವಾಗ ಇಸ್ಲಾಮಿನಲ್ಲಿರುವಂತೆ ನನ್ನನ್ನು ರಕ್ಷಿಸು. ಶತ್ರುವಿಗೆ ಮತ್ತು ಅಸೂಯೆಪಡುವವನಿಗೆ (ನನ್ನ ಮೇಲೆ ಕೈಮಾಡಿ) ಸಂತೋಷವಾಗಲು ಅವಕಾಶ ನೀಡದಿರು. ಓ ಅಲ್ಲಾಹ್! ನಾನು ನಿನ್ನೊಂದಿಗೆ ಪ್ರತಿಯೊಂದು ಒಳಿತನ್ನು ಬೇಡುತ್ತೇನೆ. ಅದರ ಖಜಾನೆಗಳು ನಿನ್ನ ಕೈಯಲ್ಲಿವೆ. ನಾನು ನಿನ್ನೊಂದಿಗೆ ಪ್ರತಿಯೊಂದು ಕೇಡಿನಿಂದ ಅಭಯ ಯಾಚಿಸುತ್ತೇನೆ. ಅದರ ಖಜಾನೆಗಳು ಕೂಡ ನಿನ್ನ ಕೈಯಲ್ಲಿವೆ"[44]. [44] ಅಲ್ ಹಾಕಿಮ್ (1/525). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಅಲ್ಬಾನಿ ಈ ಹದೀಸನ್ನು ಸಹೀಹು ಜಾಮಿಅ್ನಲ್ಲಿ (2/398) ಮತ್ತು ಸಿಲ್ಸಿಲತುಲ್ ಅಹಾದೀಸಿಸ್ಸಹೀಹಾದಲ್ಲಿ (4/54 ಹದೀಸ್ ಸಂಖ್ಯೆ 1540) ಹಸನ್ ಎಂದು ಹೇಳಿದ್ದಾರೆ.
82. "ಓ ಅಲ್ಲಾಹ್! ನಮ್ಮ ಮತ್ತು ನಿನ್ನ ಆಜ್ಞೋಲ್ಲಂಘನೆಯ ಮಧ್ಯೆ ತಡೆಯಾಗುವ ನಿನ್ನ ಭಯವನ್ನು ದಯಪಾಲಿಸು. ನಿನ್ನ ಸ್ವರ್ಗಕ್ಕೆ ತಲುಪಿಸುವಂತಹ ನಿನ್ನ ವಿಧೇಯತೆಯನ್ನು ನಮಗೆ ದಯಪಾಲಿಸು. ನಮ್ಮ ಪ್ರಪಂಚದ ತೊಂದರೆಗಳನ್ನು ಸುಲಭಗೊಳಿಸುವ ದೃಢವಿಶ್ವಾಸವನ್ನು ದಯಪಾಲಿಸು. ಓ ಅಲ್ಲಾಹ್! ನೀನು ನಮ್ಮನ್ನು ಜೀವಂತವಾಗಿಡುವ ತನಕ ನಮ್ಮ ಕಿವಿ, ಕಣ್ಣು ಮತ್ತು ನಮ್ಮ ಶಕ್ತಿಗಳಿಂದ ನಮಗೆ ಪ್ರಯೋಜನ ನೀಡು ಮತ್ತು ಅವುಗಳಲ್ಲಿನ ಪ್ರತಿಯೊಂದು ಗುಣವನ್ನು ನಮ್ಮ ಉತ್ತರಾಧಿಕಾರಿಯನ್ನಾಗಿ ಮಾಡು. ನಮ್ಮ ಮೇಲೆ ಅನ್ಯಾಯವೆಸಗಿದವರಿಗೆ ತಕ್ಕ ಪ್ರತಿಕಾರವನ್ನು ನೀಡು ಮತ್ತು ನಮ್ಮ ಶತ್ರುಗಳ ವಿರುದ್ಧ ನಮಗೆ ಸಹಾಯ ಮಾಡು. ನಮ್ಮ ಸಂಕಷ್ಟವನ್ನು ನಮ್ಮನ್ನು ನಮ್ಮ ಧರ್ಮದಿಂದ ದೂರವಾಗಿಸುವ ಸಾಧನವನ್ನಾಗಿ ಮಾಡಬೇಡ. ಪ್ರಪಂಚವನ್ನು ದುಃಖದ ದೊಡ್ಡ ವಿಷಯವನ್ನಾಗಿ ಮಾಡಬೇಡ. ಅದನ್ನು ನಮ್ಮ ಜ್ಞಾನದ ಕೇಂದ್ರವನ್ನಾಗಿ ಮಾಡಬೇಡ. ನಮ್ಮ ಮೇಲೆ ಕರುಣೆ ತೋರದ ವ್ಯಕ್ತಿಯನ್ನು ನಮ್ಮ ಮೇಲೆ ಹೇರಬೇಡ"[45]. [45] ಅತ್ತಿರ್ಮಿದಿ (ಹದೀಸ್ ಸಂಖ್ಯೆ 3502), ಅಲ್ ಹಾಕಿಮ್ (1/528). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಬ್ನುಸ್ಸುನ್ನಿ (ಹದೀಸ್ ಸಂಖ್ಯೆ 446) ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುತ್ತಿರ್ಮಿದಿ (3/168) ರಲ್ಲಿ ಮತ್ತು ಸಹೀಹುಲ್ ಜಾಮಿಅ್ (1/400) ರಲ್ಲಿ ಹಸನ್ ಎಂದು ಹೇಳಿದ್ದಾರೆ.
83. "ಓ ಅಲ್ಲಾಹ್! ಅಂಜುಬುರುಕುತನದಿಂದ ನಾನು ನಿನ್ನೊಂದಿಗೆ ಅಭಯವನ್ನು ಯಾಚಿಸುತ್ತೇನೆ. ಜಿಪುಣತನದಿಂದ ನಾನು ನಿನ್ನಲ್ಲಿ ಅಭಯ ಯಾಚಿಸುತ್ತೇನೆ. ಹಣ್ಣು ಹಣ್ಣು ಮುಪ್ಪಿನವರೆಗೆ ನನ್ನನ್ನು ಬದುಕಿಸುವುದರಿಂದ ನಾನು ನಿನ್ನೊಂದಿಗೆ ಅಭಯವನ್ನು ಯಾಚಿಸುತ್ತೇನೆ. ಇಹಲೋಕದ ಪರೀಕ್ಷೆಯಿಂದ ನಾನು ನಿನ್ನೊಂದಿಗೆ ಅಭಯವನ್ನು ಯಾಚಿಸುತ್ತೇನೆ. ಗೋರಿ ಶಿಕ್ಷೆಯಿಂದ ನಾನು ನಿನ್ನೊಂದಿಗೆ ಅಭಯವನ್ನು ಯಾಚಿಸುತ್ತೇನೆ"[46]. [46] ಬುಖಾರಿ (ಹದೀಸ್ ಸಂಖ್ಯೆ 2822).
84. "ಓ ಅಲ್ಲಾಹ್! ನನ್ನ ತಪ್ಪುಗಳನ್ನು, ನನ್ನ ಅಜ್ಞಾನವನ್ನು, ಮತ್ತು ನನ್ನ (ಪಾಪಗಳಲ್ಲಿ) ಮಿತಿಮೀರುವುದನ್ನು ನನಗೆ ಕ್ಷಮಿಸು. ನಾನು ಮಾಡಿರುವುದೆಲ್ಲವನ್ನು ಕ್ಷಮಿಸು. ತಮಾಷೆಗಾಗಿಯೂ ಗಂಭೀರವಾಗಿಯೂ ಮಾಡಿದ ಕೃತ್ಯಗಳನ್ನು ಕ್ಷಮಿಸು. ನಾನು ಅರಿತೋ ಅರಿಯದೆಯೋ ಮಾಡಿದ, ನಾನೇ ಕಾರಣನಾದ ಪ್ರಮಾದಗಳನ್ನು ಕ್ಷಮಿಸು"[47]. [47] ಮುತ್ತಫಕುನ್ ಅಲೈಹಿ. ಬುಖಾರಿ (ಹದೀಸ್ ಸಂಖ್ಯೆ 6398), ಮುಸ್ಲಿಮ್ (ಹದೀಸ್ ಸಂಖ್ಯೆ 2719)
85. "ಓ ಅಲ್ಲಾಹ್! ನಾನು ನನ್ನ ಶರೀರವನ್ನು ಅತ್ಯಧಿಕವಾಗಿ ಅಕ್ರಮಿಸಿರುವೆನು ಮತ್ತು ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ. ಆದ್ದರಿಂದ ನಿನ್ನ ಬಳಿಯ ಕ್ಷಮೆಯಿಂದ ನನ್ನನ್ನು ಕ್ಷಮಿಸು. ನನಗೆ ದಯತೋರು. ಖಂಡಿತವಾಗಿ ನೀನು ಕ್ಷಮಿಸುವವನೂ ದಯೆ ತೋರುವವನೂ ಆಗಿರುವೆ"[48]. [48] ಮುತ್ತಫಕುನ್ ಅಲೈಹಿ. ಬುಖಾರಿ (ಹದೀಸ್ ಸಂಖ್ಯೆ 834), ಮುಸ್ಲಿಮ್ (ಹದೀಸ್ ಸಂಖ್ಯೆ 2705)
86. "ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ, ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ, ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ, ನಿನ್ನ ಕಡೆಗೆ ತಿರುಗಿದ್ದೇನೆ, ನಿನ್ನ ಸಹಾಯದಿಂದ ವಾದಿಸಿದ್ದೇನೆ. ಓ ಅಲ್ಲಾಹ್, ನೀನು ನನ್ನನ್ನು ದಾರಿತಪ್ಪಿಸದಂತೆ ನಿನ್ನ ಘನತೆಯಿಂದ ನಾನು ನಿನ್ನಲ್ಲಿ ಅಭಯ ಬೇಡುತ್ತೇನೆ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾವುದೇ ಆರಾಧ್ಯನಿಲ್ಲ. ನೀನು ಶಾಶ್ವತವಾಗಿ ಜೀವಂತವಿರುವವನು, ಎಂದಿಗೂ ಸಾಯದವನು. ಜಿನ್ನ್ಗಳು ಮತ್ತು ಮನುಷ್ಯರು ಸಾಯುತ್ತಾರೆ"[49]. [49] ಮುತ್ತಫಕುನ್ ಅಲೈಹಿ. ಬುಖಾರಿ (ಹದೀಸ್ ಸಂಖ್ಯೆ 6398), ಮುಸ್ಲಿಮ್ (ಹದೀಸ್ ಸಂಖ್ಯೆ 2719)
87. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನಿನ್ನ ಕರುಣೆಯನ್ನು ಕಡ್ಡಾಯಗೊಳಿಸುವ ಮತ್ತು ನಿನ್ನ ಕ್ಷಮೆಯನ್ನು ನಿಶ್ಚಿತಗೊಳಿಸುವ ಕರ್ಮಗಳನ್ನು ಬೇಡುತ್ತೇನೆ. ಪ್ರತಿಯೊಂದು ಪಾಪದಿಂದ ಸುರಕ್ಷೆಯನ್ನು ಬೇಡುತ್ತೇನೆ. ಪ್ರತಿಯೊಂದು ಪುಣ್ಯದ ಲಾಭವನ್ನು, ಸ್ವರ್ಗದ ಯಶಸ್ವಿಯನ್ನು, ಮತ್ತು ನರಕದಿಂದ ಮುಕ್ತಿಯನ್ನು ಬೇಡುತ್ತೇನೆ"[50]. [50] ಅಲ್ ಹಾಕಿಮ್ (1/525) ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಬೈಹಕಿ ಅದ್ದಅವಾತ್ನಲ್ಲಿ (ಹದೀಸ್ ಸಂಖ್ಯೆ 206). ಇಮಾಮ್ ನವವೀ ರವರ ಅಲ್ ಅದ್ಕಾರ್ (ಪುಟ 340) ನೋಡಿರಿ. ಈ ಹದೀಸನ್ನು ಹದೀಸ್ ಸಂಶೋಧಕರಾದ ಅಬ್ದುಲ್ ಖಾದಿರ್ ಅಲ್ ಅರ್ನವೂತ್ ರವರು ಹಸನ್ ಎಂದು ಹೇಳಿದ್ದಾರೆ.
88. "ಓ ಅಲ್ಲಾಹ್ ಸತ್ಯವಿಶ್ವಾಸಿಗಳನ್ನು ಮತ್ತು ಸತ್ಯವಿಶ್ವಾಸಿನಿಯರನ್ನು ಕ್ಷಮಿಸು"[51]. [51] ಉಬಾದಾ(ರ) ರಿಂದ ವರದಿ. ಅವರು ಹೇಳುತ್ತಾರೆ: ನಾನು ಪ್ರವಾದಿ (ﷺ) ರವರು ಹೇಳುವುದನ್ನು ಕೇಳಿದೆ: “ಯಾರು ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಯರಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಾನೋ ಅಲ್ಲಾಹನು ಅವನಿಗೆ ಪ್ರತಿಯೊಬ್ಬ ಸತ್ಯವಿಶ್ವಾಸಿ ಮತ್ತು ಸತ್ಯವಿಶ್ವಾಸಿನಿಯ ಬದಲಾಗಿ ಒಂದು ಒಳಿತನ್ನು ಬರೆಯುತ್ತಾನೆ.” ಅತ್ತಬ್ರಾನೀ ಅಲ್-ಕಬೀರ್ನಲ್ಲಿ (5/202, ಹದೀಸ್ ಸಂಖ್ಯೆ 5092 ಮತ್ತು 3/334, ಹದೀಸ್ ಸಂಖ್ಯೆ 2155). ಅಲ್-ಹೈಸಮೀರವರು ಮಜ್ಮಉ ಝ್ಝವಾಇದ್ನಲ್ಲಿ (10/210) ಈ ಹದೀಸನ್ನು ಉತ್ತಮವೆಂದಿದ್ದಾರೆ. ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (5/242, ಹದೀಸ್ ಸಂಖ್ಯೆ 5902) ಹಸನ್ ಎಂದು ಹೇಳಿದ್ದಾರೆ.
89. "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು, ನನಗೆ ನನ್ನ ಮನೆಯನ್ನು ವಿಶಾಲಗೊಳಿಸು ಮತ್ತು ನನಗೆ ನೀಡಿರುವುದರಲ್ಲಿ ಸಮೃದ್ಧಿಯನ್ನು ನೀಡು"[52].
90. "ಓ ಅಲ್ಲಾಹ್ ನಿನ್ನ ಔದಾರ್ಯದಿಂದ ಮತ್ತು ನಿನ್ನ ಕರುಣೆಯಿಂದ ನಾನು ನಿನ್ನೊಂದಿಗೆ ಬೇಡುತ್ತೇನೆ. ಏಕೆಂದರೆ ನೀನೇ ಅದರ ಸಾಮರ್ಥ್ಯವುಳ್ಳವನಾಗಿರುವೆ"[53]. [53] ತಬ್ರಾನೀ. ಅಲ್ ಹೈಸಮೀರವರು ಮಜ್ಮಉ ಝ್ಝವಾಇದ್ನಲ್ಲಿ ಹೇಳುತ್ತಾರೆ (10/159): ಮುಹಮ್ಮದ್ ಬಿನ್ ಝಿಯಾದ್ರವರ ಹೊರತು ಈ ಹದೀಸಿನ ವರದಿಗಾರರು ಸಹೀಹ್ ಬುಖಾರಿಯ ವರದಿಗಾರರಾಗಿದ್ದಾರೆ. ಮುಹಮ್ಮದ್ ಬಿನ್ ಝಿಯಾದ್ ವಿಶ್ವಾಸಯೋಗ್ಯ ವರದಿಗಾರರಾಗಿದ್ದಾರೆ. ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (1/404 ಹದೀಸ್ ಸಂಖ್ಯೆ 1278) ಸಹೀಹ್ ಎಂದು ಘೋಷಿಸಿದ್ದಾರೆ.
91. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಮುದಿ ವಯಸ್ಸಿನಿಂದ, ಎತ್ತರದಿಂದ ಬೀಳುವುದರಿಂದ, (ಗೋಡೆಯ ಕೆಳಗೆ) ನುಜ್ಜುಗುಜ್ಜಾಗುವುದರಿಂದ, ದುಃಖದಿಂದ, ಮುಳುಗುವುದರಿಂದ ಮತ್ತು ಸುಡಲ್ಪಡುವುದರಿಂದ ಅಭಯ ಯಾಚಿಸುತ್ತೇನೆ. ಸೈತಾನನು ಮರಣದ ಸಮಯದಲ್ಲಿ ನನ್ನನ್ನು ಮಗುಚಿ ಬೀಳಿಸುವುದರಿಂದ ನಿನ್ನ ಅಭಯ ಯಾಚಿಸುತ್ತೇನೆ. ನಾನು ನಿನ್ನ ದಾರಿಯಲ್ಲಿ ಅಂದರೆ ಜಿಹಾದಿನ ಮಾರ್ಗದಲ್ಲಿ ಬೆನ್ನು ತಿರುಗಿಸುವ ಪರಿಸ್ಥಿತಿಯಲ್ಲಿ ಮರಣ ಹೊಂದುವುದರಿಂದ ನಿನ್ನ ಅಭಯ ಯಾಚಿಸುತ್ತೇನೆ"[54]. [54] ಅಬೂ ದಾವೂದ್ (ಹದೀಸ್ ಸಂಖ್ಯೆ 1552), ಅನ್ನಸಾಈ (ಹದೀಸ್ ಸಂಖ್ಯೆ 5531, 5532). ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (3/1123) ಮತ್ತು ಸಹೀಹು ತ್ತಿರ್ಮಿದಿಯಲ್ಲಿ (1/425) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
92. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಹಸಿವಿನಿಂದ ಅಭಯ ಯಾಚಿಸುತ್ತೇನೆ. ಏಕೆಂದರೆ ಅದು ಅತ್ಯಂತ ಕೆಟ್ಟ ಸಂಗತಿಯಾಗಿದೆ. ನಾನು ದ್ರೋಹ ಮಾಡುವುದರಿಂದ ನಿನ್ನ ಅಭಯ ಯಾಚಿಸುತ್ತೇನೆ. ಏಕೆಂದರೆ ಅದು ಅತ್ಯಂತ ಕೆಟ್ಟ ಅಂತರಂಗದ ವಿಷಯವಾಗಿದೆ"[55]. [55] ಅಬೂ ದಾವೂದ್ (ಹದೀಸ್ ಸಂಖ್ಯೆ 1547), ಅನ್ನಸಾಈ (ಹದೀಸ್ ಸಂಖ್ಯೆ 5483). ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (3/1112) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ.
93. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಅಸಹಾಯಕತೆಯಿಂದ, ಸೋಮಾರಿತನದಿಂದ, ಅಂಜುಬುರುಕತನದಿಂದ, ಜಿಪುಣತನದಿಂದ, ಮುದಿವಯಸ್ಸಿನಿಂದ, ಕಠೋರತನದಿಂದ, ನಿರ್ಲಕ್ಷ್ಯದಿಂದ, ದಾರಿದ್ರ್ಯದಿಂದ, ನಿಂದ್ಯತೆಯಿಂದ, ಕಡುಬಡತನದಿಂದ ನಿನ್ನ ಅಭಯ ಯಾಚಿಸುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ಬಡತನದಿಂದ, ಸತ್ಯ ನಿಷೇಧದಿಂದ, ದುರಾಚಾರದಿಂದ, ವಿರೋಧದಿಂದ, ಕಪಟತನದಿಂದ, ಸುಳ್ಳು ಖ್ಯಾತಿಪಡೆಯುವುದರಿಂದ, ತೋರಿಕೆಯಿಂದ ನಿನ್ನ ಅಭಯ ಯಾಚಿಸುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ಕಿವುಡುತನದಿಂದ, ಮೂಕತನದಿಂದ, ಹುಚ್ಚುತನದಿಂದ, ಮತ್ತು ಕುಷ್ಠರೋಗದಿಂದ, ತೊನ್ನಿನ ರೋಗದಿಂದ, ಮತ್ತು ಎಲ್ಲಾ ರೀತಿಯ ಕೆಟ್ಟ ರೋಗಗಳಿಂದ ನಿನ್ನ ಅಭಯ ಯಾಚಿಸುತ್ತೇನೆ"[56]. [56] ಅನ್ನಸಾಈ (ಹದೀಸ್ ಸಂಖ್ಯೆ 5493), ಅಲ್-ಹಾಕಿಮ್ (1/530). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (1/406) ಮತ್ತು ಇರ್ವಾಉಲ್ ಗಲೀಲ್ನಲ್ಲಿ (ಹದೀಸ್ ಸಂಖ್ಯೆ 852) ಸಹೀಹ್ ಎಂದು ಘೋಷಿಸಿದ್ದಾರೆ.
94. "ಓ ಅಲ್ಲಾಹ್! ನಾನು ನಿನ್ನೊಂದಿಗೆ ದಾರಿದ್ರ್ಯದಿಂದ, (ಬಡತನದಿಂದ), ಕೊರತೆಯಿಂದ, ನಿಂದ್ಯತೆಯಿಂದ ನಿನ್ನ ಅಭಯ ಯಾಚಿಸುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ಅನ್ಯಾಯವೆಸಗುವುದುರಿಂದ ಮತ್ತು ಇತರರಿಂದ ಅನ್ಯಾಯಕ್ಕೊಳಗಾಗುವುದರಿಂದ ನಿನ್ನ ಅಭಯ ಯಾಚಿಸುತ್ತೇನೆ"[57]. [57] ಈ ಹದೀಸನ್ನು ಇಮಾಮ್ ಅಬೂ ದಾವೂದ್ (ಹದೀಸ್ ಸಂಖ್ಯೆ 1544) ಮತ್ತು ಅನ್ನಸಾಈ (ಹದೀಸ್ ಸಂಖ್ಯೆ 5475) ವರದಿ ಮಾಡಿದ್ದಾರೆ. ಇದನ್ನು ಇಮಾಮ್ ಅಲ್ಬಾನಿ ಸಹೀಹು ನ್ನಸಾಈ (3/1111) ನಲ್ಲಿ ಮತ್ತು ಸಹೀಹುಲ್ ಜಾಮಿಅ್ (1/407) ನಲ್ಲಿ ಸಹೀಹ್ ಎಂದು ಘೋಷಿಸಿದ್ದಾರೆ. ಆವರಣ ಚಿಹ್ನೆಗಳಲ್ಲಿರುವುದು ಇಬ್ನ್ ಹಿಬ್ಬಾನ್ರ (ಮವಾರಿದ್ ಗ್ರಂಥದಲ್ಲಿ) ವರದಿ. ಇದನ್ನು ಇಮಾಂ ಅಲ್ಬಾನಿ ಸಹೀಹ್ ಮವಾರಿದು ಝ್ಝಮ್ಆನ್ನಲ್ಲಿ (2/455) ಸಹೀಹ್ ಎಂದು ಘೋಷಿಸಿದ್ದಾರೆ.
95. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನನ್ನ ವಾಸಸ್ಥಳದಲ್ಲಿ ಕೆಟ್ಟ ನೆರೆಯವನಿಂದ ರಕ್ಷಣೆ ಬೇಡುತ್ತೇನೆ. ಏಕೆಂದರೆ ಮರುಭೂಮಿಯ ನೆರೆಯವನು (ಮರುಭೂಮಿಯನ್ನು) ಬಿಟ್ಟು ಹೋಗುತ್ತಾನೆ"[58]. [58] ಬುಖಾರಿ ಅದಬುಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 117), ಅಲ್ ಹಾಕಿಮ್ (1/532). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಅನ್ನಸಾಈ (ಹದೀಸ್ ಸಂಖ್ಯೆ 5517). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (1/408) ಮತ್ತು ಸಹೀಹು ನ್ನಸಾಈಯಲ್ಲಿ (3/1118) ಸಹೀಹ್ ಎಂದು ಹೇಳಿದ್ದಾರೆ.
96. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಭಯಪಡದ ಹೃದಯದಿಂದ, ಕೇಳಲಾಗದ ಪ್ರಾರ್ಥನೆಯಿಂದ, ಸಂತೃಪ್ತಗೊಳ್ಳದ ಮನಸ್ಸಿನಿಂದ, ಮತ್ತು ಪ್ರಯೋಜನ ಕೊಡದ ಜ್ಞಾನದಿಂದ ನಿನ್ನ ಅಭಯ ಯಾಚಿಸುತ್ತೇನೆ. ಈ ನಾಲ್ಕು ವಿಷಯಗಳಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ"[59]. [59] ಅತ್ತಿರ್ಮಿದಿ 3482 ಅಬೂ ದಾವೂದ್ 1549. ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (1295) ಮತ್ತು ಸಹೀಹುನ್ನಸಾಈಯಲ್ಲಿ (3/1113) ಸಹೀಹ್ ಎಂದು ಘೋಷಿಸಿದ್ದಾರೆ.
97. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಕೆಟ್ಟ ದಿನದಿಂದ, ಕೆಟ್ಟ ರಾತ್ರಿಯಿಂದ, ಕೆಟ್ಟ ಘಳಿಗೆಯಿಂದ, ಕೆಟ್ಟ ಸಂಗಡಿಗನಿಂದ ಮತ್ತು ವಾಸಸ್ಥಳದಲ್ಲಿ ಕೆಟ್ಟ ನೆರೆಯವನಿಂದ ನಿನ್ನ ಅಭಯ ಯಾಚಿಸುತ್ತೇನೆ"[60]. [60] ತಬ್ರಾನೀ. ಅಲ್ ಹೈಸಮೀರವರು ಮಜ್ಮಉ ಝ್ಝವಾಇದ್ನಲ್ಲಿ ಹೇಳುತ್ತಾರೆ (10/144): ಈ ಹದೀಸಿನ ವರದಿಗಾರರು ಸಹೀಹ್ ಬುಖಾರಿಯ ವರದಿಗಾರರಾಗಿದ್ದಾರೆ. ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಜಾಮಿಅ್ನಲ್ಲಿ (1/411 ಹದೀಸ್ ಸಂಖ್ಯೆ 1290) ಹಸನ್ ಎಂದು ಘೋಷಿಸಿದ್ದಾರೆ.
98. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಸ್ವರ್ಗವನ್ನು ಬೇಡುತ್ತೇನೆ ಮತ್ತು ನರಕದಿಂದ ನಿನ್ನ ಆಶ್ರಯವನ್ನು ಕೋರುತ್ತೇನೆ." (ಮೂರು ಬಾರಿ)[61]. [61] ತಿರ್ಮಿದಿ (ಹದೀಸ್ ಸಂಖ್ಯೆ 2572), ಇಬ್ನು ಮಾಜಾ (ಹದೀಸ್ ಸಂಖ್ಯೆ 3340) ಮತ್ತು ನಸಾಈ (ಹದೀಸ್ ಸಂಖ್ಯೆ 5536). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ತ್ತಿರ್ಮಿದಿಯನಲ್ಲಿ (2/319) ಮತ್ತು ಸಹೀಹು ನ್ನಸಾಈಯಲ್ಲಿ (3/1121) ಸಹೀಹ್ ಎಂದು ಘೋಷಿಸಿದ್ದಾರೆ. ಅದರ ಪದಗಳು ಹೀಗಿವೆ: ಯಾರಾದರೂ ಅಲ್ಲಾಹನಲ್ಲಿ ಮೂರು ಬಾರಿ ಸ್ವರ್ಗವನ್ನು ಬೇಡಿದರೆ ಸ್ವರ್ಗವು ಹೇಳುತ್ತದೆ: "ಓ ಅಲ್ಲಾಹ್! ಅವನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸು ಮತ್ತು ಯಾರಾದರೂ ಮೂರು ಬಾರಿ ಅಲ್ಲಾಹನಲ್ಲಿ ನರಕದಿಂದ ಅಭಯ ಯಾಚಿಸಿದರೆ ನರಕವು ಹೇಳುತ್ತದೆ: ಓ ಅಲ್ಲಾಹ್! ಅವನನ್ನು ನರಕದಿಂದ ಮುಕ್ತಿ ನೀಡು."
99. "ಓ ಅಲ್ಲಾಹನೇ ನನಗೆ ಧರ್ಮದ ತಿಳುವಳಿಕೆಯನ್ನು ನೀಡು"[62]. [62] ಇಬ್ನು ಅಬ್ಬಾಸ್ (ರ) ರವರಿಗೆ ಪ್ರವಾದಿ (ﷺ) ರವರು ಪ್ರಾರ್ಥಿಸಿದ ಬುಖಾರಿ ಮತ್ತು ಮುಸ್ಲಿಮ್ ವರದಿ ಮಾಡಿರುವ ಹದೀಸ್ ಈ ಪ್ರಾರ್ಥನೆಗೆ ಪುರಾವೆಯಾಗಿದೆ. ಬುಖಾರಿ (ಹದೀಸ್ ಸಂಖ್ಯೆ 143), ಮುಸ್ಲಿಮ್ (ಹದೀಸ್ ಸಂಖ್ಯೆ 2477)
100. “ಓ ಅಲ್ಲಾಹ್! ನಾನು ಅರಿಯುತ್ತಾ ನಿನ್ನೊಂದಿಗೆ ಇತರರನ್ನು ಸಹಭಾಗಿಯನ್ನಾಗಿ ಮಾಡುವುದರಿಂದ ನಿನ್ನ ಅಭಯ ಯಾಚಿಸುತ್ತೇನೆ ಮತ್ತು ನಾನು ಅರಿಯದೆ ಮಾಡಿರುವ ಪಾಪಗಳಿಂದ ನಿನ್ನೊಂದಿಗೆ ಕ್ಷಮೆ ಯಾಚಿಸುತ್ತೇನೆ" [63]. [63] ಅಹ್ಮದ್ (4/403), ಇಬ್ನು ಅಬೀ ಶೈಬಾ (10/337) ತಬ್ರಾನಿ ಅಲ್-ಮುಅಜಮುಲ್ ಅವ್ಸತ್ನಲ್ಲಿ (4/284). ಇಮಾಮ್ ಅಲ್ಬಾನಿ ಸಹೀಹು ತ್ತರ್ಗೀಬ್ ವತ್ತರ್ಹೀಬ್ನಲ್ಲಿ (1/19) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ.
101. "ಓ ಅಲ್ಲಾಹ್! ನೀನು ನನಗೆ ದಯಪಾಲಿಸಿರುವ ಜ್ಞಾನದಲ್ಲಿ ನನಗೆ ಲಾಭವನ್ನು ನೀಡು, ನನಗೆ ಲಾಭದಾಯಕ ಜ್ಞಾನವನ್ನು ದಯಪಾಲಿಸು ಮತ್ತು ನನ್ನ ಜ್ಞಾನವನ್ನು ಅಧಿಕಗೊಳಿಸು"[64. [64] ಅತ್ತಿರ್ಮಿದಿ (ಹದೀಸ್ ಸಂಖ್ಯೆ 3599), ಇಬ್ನು ಮಾಜಾ (ಹದೀಸ್ ಸಂಖ್ಯೆ 259). ಇಮಾಮ್ ಅಲ್ಬಾನಿ ಸಹೀಹ್ ಇಬ್ನು ಮಾಜಾದಲ್ಲಿ (1/47) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
102. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಪ್ರಯೋಜನಕಾರಿ ಜ್ಞಾನವನ್ನು, ಉತ್ತಮವಾದ ಅನ್ನಾಧಾರವನ್ನು ಮತ್ತು ಸ್ವೀಕೃತವಾಗುವ ಕರ್ಮಗಳನ್ನು ಬೇಡುತ್ತೇನೆ"[65]. [65] ಇಬ್ನು ಮಾಜಾ (ಹದೀಸ್ ಸಂಖ್ಯೆ 925), ನಸಾಈ ಅಮಲುಲ್ ಯೌಮಿ ವಲ್ಲೈಲದಲ್ಲಿ (ಹದೀಸ್ ಸಂಖ್ಯೆ 102) ಮತ್ತು ಅಹ್ಮದ್ (6/294, 305). ಇಮಾಮ್ ಅಲ್ಬಾನಿ ಸಹೀಹ್ ಇಬ್ನು ಮಾಜಾದಲ್ಲಿ (1/152) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ.
103. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಬೇಡುತ್ತೇನೆ. ಏಕೆಂದರೆ ಓ ಅಲ್ಲಾಹ್! ನೀನು ಏಕಮಾತ್ರನಾಗಿರುವೆ. ನೀನು (ಯಾರಿಗೂ) ಜನ್ಮ ನೀಡದ, (ಯಾರದೇ ಸಂತತಿಯಾಗಿ) ಜನಿಸದ ಮತ್ತು ಸರಿಸಾಟಿಯಿಲ್ಲದ ಆಶ್ರಯದಾತನಾಗಿರುವೆ. ನನ್ನ ಪಾಪಗಳನ್ನು ಕ್ಷಮಿಸು. ಏಕೆಂದರೆ ನೀನು ಅತ್ಯಧಿಕ ಪಾಪಗಳನ್ನು ಕ್ಷಮಿಸುವನು ಮತ್ತು ಕರುಣೆ ತೋರುವವನಾಗಿರುವೆ"[66]. [66] ನಸಾಈ (ಹದೀಸ್ ಸಂಖ್ಯೆ 1300, ಇದು ಅವರ ವರದಿ), ನಸಾಈ ಅಲ್-ಕುಬ್ರಾದಲ್ಲಿ (ಹದೀಸ್ ಸಂಖ್ಯೆ 7665) ಮತ್ತು ಅಬೂ ದಾವೂದ್ (ಹದೀಸ್ ಸಂಖ್ಯೆ 985). ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (1/147) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
104. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಬೇಡುತ್ತೇನೆ ಏಕೆಂದರೆ ಸರ್ವ ಸ್ತುತಿಗಳು ನಿನಗಾಗಿ ಮಾತ್ರ. ನಿನ್ನ ಹೊರತು ಬೇರೆ ನೈಜ ಆರಾಧ್ಯನಿಲ್ಲ. ನೀನು ಏಕೈಕನು. ನಿನಗೆ ಯಾವುದೇ ಸಹಭಾಗಿಗಳಿಲ್ಲ. ಓ ಉಪಕಾರ ಮಾಡುವವನೇ, ಓ ಭೂಮಿ ಮತ್ತು ಆಕಾಶಗಳ ಸೃಷ್ಟಿಕರ್ತನೇ, ಓ ಮಹತ್ವವುಳ್ಳವನೇ, ಔದಾರ್ಯವುಳ್ಳವನೇ, ಓ ಸದಾ ಜೀವಂತವಿರುವವನೇ, ಸರ್ವವನ್ನೂ ನಿಯಂತ್ರಿಸುವವನೇ, ನಾನು ನಿನ್ನಲ್ಲಿ ಸ್ವರ್ಗವನ್ನು ಬೇಡುತ್ತೇನೆ ಮತ್ತು ನರಕದಿಂದ ಅಭಯ ಯಾಚಿಸುತ್ತೇನೆ"[67]. [67] ಅಬೂ ದಾವೂದ್ (ಹದೀಸ್ ಸಂಖ್ಯೆ 1495), ಇಬ್ನು ಮಾಜಾ (ಹದೀಸ್ ಸಂಖ್ಯೆ 3858), ನಸಾಈ (ಹದೀಸ್ ಸಂಖ್ಯೆ 1299), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3544). ಇಮಾಮ್ ಅಲ್ಬಾನಿ ಸಹೀಹು ನ್ನಸಾಈ (1/279) ಮತ್ತು ಸಹೀಹ್ ಇಬ್ನು ಮಾಜಾದಲ್ಲಿ (2/329) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
105. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಬೇಡುತ್ತೇನೆ. ಏಕೆಂದರೆ ನಿನ್ನ ಹೊರತು ಬೇರೆ ನೈಜ ಆರಾಧ್ಯನಿಲ್ಲವೆಂದು ನಾನು ಸಾಕ್ಷ್ಯ ವಹಿಸುತ್ತೇನೆ. (ಅಲ್ಲಾಹನು) ಏಕೈಕನಾಗಿರುವನು. ಸರ್ವರಿಗೂ ಆಶ್ರಯದಾತನಾಗಿರುವನು. ಅವನು (ಯಾರಿಗೂ) ಜನ್ಮವನ್ನು ನೀಡಿಲ್ಲ. ಅವನು (ಯಾರದೇ ಸಂತತಿಯಾಗಿ) ಜನಿಸಿದವನೂ ಅಲ್ಲ. ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ"[68]. [68] ಅಬೂ ದಾವೂದ್ (ಹದೀಸ್ ಸಂಖ್ಯೆ 985), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3475), ಇಬ್ನು ಮಾಜಾ (ಹದೀಸ್ ಸಂಖ್ಯೆ 3857), ಅಹ್ಮದ್ (5/360). ಈ ಹದೀಸನ್ನು ಅಲ್ಬಾನೀ ಸುನನ್ ಅತ್ತಿರ್ಮಿದಿಯಲ್ಲಿ (3/163) ಸಹೀಹ್ ಎಂದು ಘೋಷಿಸಿದ್ದಾರೆ.
106. "ಓ ನನ್ನ ಪ್ರಭುವೇ! ನನ್ನನ್ನು ಕ್ಷಮಿಸು, ನನ್ನ ಪಶ್ಚಾತ್ತಾಪವನ್ನು ಸ್ವೀಕರಿಸು. ಏಕೆಂದರೆ ಖಂಡಿತವಾಗಿಯೂ ನೀನು ಅತ್ಯಧಿಕ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿರುವೆ ಮತ್ತು ಕ್ಷಮಿಸುವವನಾಗಿರುವೆ"[69]. [69] ಅಬೂದಾವೂದ್ (ಹದೀಸ್ ಸಂಖ್ಯೆ 1518), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3434 ಇದು ಅವರ ವರದಿ), ನಸಾಈ ಅಲ್-ಕುಬ್ರಾದಲ್ಲಿ (ಹದೀಸ್ ಸಂಖ್ಯೆ 10292), ಇಬ್ನು ಮಾಜಾ (ಹದೀಸ್ ಸಂಖ್ಯೆ 3814)| ಇಮಾಮ್ ಅಲ್ಬಾನಿ ಸಹೀಹ್ ಇಬ್ನು ಮಾಜಾದಲ್ಲಿ (2/321) ಮತ್ತು ಸಹೀಹು ತ್ತಿರ್ಮಿದಿಯಲ್ಲಿ (3/153) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
107. "ಓ ಅಲ್ಲಾಹ್! ನಿನ್ನ ಪರೋಕ್ಷದ ಜ್ಞಾನದೊಂದಿಗೆ ಮತ್ತು ಸೃಷ್ಟಿಗಳ ಮೇಲೆ ನಿನ್ನ ಶಕ್ತಿ-ಸಾಮರ್ಥ್ಯದೊಂದಿಗೆ ನಾನು ನಿನ್ನೊಂದಿಗೆ ಬೇಡುತ್ತೇನೆ. ನನ್ನ ಜೀವನವು ಎಲ್ಲಿಯವರೆಗೆ ನನಗೆ ಉತ್ತಮವಾಗಿದೆಯೋ ಅಲ್ಲಿಯವರೆಗೆ ನೀನು ನನ್ನನ್ನು ಜೀವಂತವಾಗಿರಿಸು. ನನ್ನ ಮರಣವು ನನಗೆ ಉತ್ತಮವಾಗಿದೆಯೆಂದಾದರೆ ನನಗೆ ಮರಣವನ್ನು ನೀಡು. ಓ ಅಲ್ಲಾಹ್! ರಹಸ್ಯವಾಗಿರುವಾಗಲೂ ಬಹಿರಂಗವಾಗಿರುವಾಗಲೂ ನಿನ್ನ ಭಯ-ಭಕ್ತಿಯನ್ನು ಬೇಡುತ್ತೇನೆ. ಸಂತೃಪ್ತಿಯಲ್ಲಿದ್ದಾಗಲೂ, ಕೋಪದಲ್ಲಿದ್ದಾಗಲೂ ನಾನು ಸತ್ಯವಚನ ನುಡಿಯಬೇಕೆಂದು ನಿನ್ನೊಂದಿಗೆ ಬೇಡುತ್ತೇನೆ. ಶ್ರೀಮಂತಿಕೆಯಲ್ಲೂ ಮತ್ತು ಬಡತನದಲ್ಲೂ ನಾನು ಮಿತತ್ವವನ್ನು ಪಾಲಿಸಬೇಕೆಂದು ನಿನ್ನೊಂದಿಗೆ ಬೇಡುತ್ತೇನೆ. ಎಂದೂ ಕೊನೆಗೊಳ್ಳದ ಕಣ್ತಂಪನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ನಿನ್ನ ತಿರ್ಮಾನದ ನಂತರ (ಆ ತೀರ್ಮಾನದೊಂದಿಗೆ) ಸಂತೃಪ್ತಿಯನ್ನು ಬೇಡುತ್ತೇನೆ. ಮರಣದ ನಂತರ ನೆಮ್ಮದಿಯ ಜೀವನವನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ನಿನ್ನ ಮುಖವನ್ನು ನೋಡುವ ಆನಂದ ಮತ್ತು ಯಾವುದೇ ಸಂಕಟವಿಲ್ಲದ, ಹಾನಿಕಾರಕವಲ್ಲದ, ಪಥಭ್ರಷ್ಟಗೊಳಿಸುವ ಪರೀಕ್ಷೆಯಿಲ್ಲದ ನಿನ್ನ ಭೇಟಿಯ ಹಂಬಲವನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ಓ ಅಲ್ಲಾಹ್! ನಮ್ಮನ್ನು ಸತ್ಯ ವಿಶ್ವಾಸದ ಸೌಂದರ್ಯದೊಂದಿಗೆ ಅಲಂಕರಿಸು. ಓ ಅಲ್ಲಾಹ್! ನಮ್ಮನ್ನು ಸನ್ಮಾರ್ಗದಲ್ಲಿ ಸೇರಿದವರನ್ನಾಗಿಸಿ, ಸನ್ಮಾರ್ಗ ಪಡೆದವರನ್ನಾಗಿ ಮಾಡು"[70]. [70] ಅನ್ನಸಾಈ (ಹದೀಸ್ ಸಂಖ್ಯೆ 1305), ಅಹ್ಮದ್ (4/264). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (1/280, 1/281) ಸಹೀಹ್ ಎಂದು ಘೋಷಿಸಿದ್ದಾರೆ.
108. "ಓ ಅಲ್ಲಾಹ್! ನನಗೆ ನಿನ್ನ ಪ್ರೀತಿಯನ್ನು ದಯಪಾಲಿಸು ಮತ್ತು ಯಾರ ಪ್ರೀತಿಯು ನಿನ್ನ ಬಳಿ ನನಗೆ ಪ್ರಯೋಜನ ನೀಡುವಂತಹದ್ದಾಗಿದೆಯೋ ಅವನ ಪ್ರೀತಿಯನ್ನು ದಯಪಾಲಿಸು. ಓ ಅಲ್ಲಾಹ್! ನಾನು ಬಯಸಿದ್ದನ್ನು ನೀನು ನನಗೆ ದಯಪಾಲಿಸಿರುವೆ. ನೀನು ಬಯಸಿರುವುದರಲ್ಲಿ ಅದರೊಳಗೆ ನನಗೆ ಶಕ್ತಿ ನೀಡು. ಓ ಅಲ್ಲಾಹ್! ನಾನು ಬಯಸಿದ್ದನ್ನು ನೀನು ನನಗೆ ನೀಡಿರುವುದಿಲ್ಲವೂ ನೀನು ಇಷ್ಟಪಡುವ ಕಾರ್ಯಗಳಲ್ಲಿ ಅದರ ಬಿಡುವು ಸಮಯವನ್ನು ಉಪಯೋಗಿಸುವ ದೈವಾನುಗ್ರಹ ನನಗೆ ನೀಡು"[71]̤ [71] ತಿರ್ಮಿದಿ (ಹದೀಸ್ ಸಂಖ್ಯೆ 3491), ತಿರ್ಮಿದಿ ಈ ಹದೀಸ್ ಹಸನ್ ಎಂದು ಹೇಳಿದ್ದಾರೆ. ಅಬ್ದುಲ್ ಖಾದಿರ್ ಅಲ್-ಅರ್ನವೂತ್(ರ) ರವರು ಹೇಳಿದರು: "ಈ ಹದೀಸ್ ಅವರು ಹೇಳಿದ ಹಾಗೆ ಇದೆ". ಹೆಚ್ಚಿನ ಮಾಹಿತಿಗಾಗಿ ಜಾಮಿಉಲ್ ಉಸೂಲ್ನ ಅವರ ಪರಿಶೋಧನೆಯನ್ನು ನೋಡಿರಿ (4/341).
109. "ಓ ಅಲ್ಲಾಹ್! ನನ್ನ ಪಾಪಗಳನ್ನು ಮತ್ತು ನನ್ನ ತಪ್ಪುಗಳನ್ನು ಕ್ಷಮಿಸಿ ಶುದ್ಧೀಕರಿಸು. ಓ ಅಲ್ಲಾಹ್! ಬಿಳಿ ಉಡುಪನ್ನು ಕೊಳೆಯಿಂದ ಶುದ್ಧೀಕರಿಸಿದಂತೆ ನನ್ನನ್ನು ಶುದ್ಧೀಕರಿಸು. ಓ ಅಲ್ಲಾಹ್! ನನ್ನನ್ನು ಮಂಜು, ಹಿಮ, ಮತ್ತು ತಣ್ಣನೆಯ ನೀರಿನಿಂದ ಶುದ್ಧೀಕರಿಸು"[72]. [72] ಮುಸ್ಲಿಮ್ (ಹದೀಸ್ ಸಂಖ್ಯೆ 476), ಅನ್ನಸಾಈ (ಹದೀಸ್ ಸಂಖ್ಯೆ 400).
110. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಜಿಪುಣತನದಿಂದ, ಹೇಡಿತನದಿಂದ, ಕೆಟ್ಟ ಆಯುಷ್ಯದಿಂದ, ಮನಸ್ಸಿನ ಕೇಡಿನಿಂದ ಮತ್ತು ಗೋರಿಯ ಶಿಕ್ಷೆಯಿಂದ ಅಭಯ ಯಾಚಿಸುತ್ತೇನೆ"[73]. [73] ನಸಾಈ (ಹದೀಸ್ ಸಂಖ್ಯೆ 5469). ಅವರ ವರದಿಯ ಪದಗಳು ಹೀಗಿವೆ: ಪ್ರವಾದಿ (ﷺ) ರವರು ಐದು ವಿಷಯಗಳಿಂದ ಅಭಯ ಯಾಚಿಸುತ್ತಿದ್ದರು: ಜಿಪುಣತನ, ಹೇಡಿತನ, ಕೆಟ್ಟ ಆಯಸ್ಸು, ಕೇಡು, ಗೋರಿಯ ಶಿಕ್ಷೆ. ಅಬೂ ದಾವೂದ್ (ಹದೀಸ್ ಸಂಖ್ಯೆ 1539). ಅರ್ನವೂತ್ ರವರು ಜಾಮಿಉಲ್ ಉಸೂಲ್ನ ತಖ್ರೀಜ್ನಲ್ಲಿ (4/363) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ.
111. "ಓ ಅಲ್ಲಾಹ್! ಜಿಬ್ರಾಯೀಲರ ಪ್ರಭುವೇ, ಮೀಕಾಯೀಲರ ಪ್ರಭುವೇ ಮತ್ತು ಇಸ್ರಾಫೀಲರ ಪ್ರಭುವೇ, ನಾನು ನಿನ್ನೊಂದಿಗೆ ನರಕದ ತಾಪದಿಂದ, ಗೋರಿಯ ಶಿಕ್ಷೆಯಿಂದ ಅಭಯ ಯಾಚಿಸುತ್ತೇನೆ"[74]. [74] ನಸಾಈ (ಹದೀಸ್ ಸಂಖ್ಯೆ 1344), ಅಹ್ಮದ್ (6/61), ಬೈಹಖಿ ಅದ್ದಅವಾತ್ನಲ್ಲಿ (ಹದೀಸ್ ಸಂಖ್ಯೆ 109). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (3/1121) ಮತ್ತು ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹಾದಲ್ಲಿ (ಹದೀಸ್ ಸಂಖ್ಯೆ 1544) ಸಹೀಹ್ ಎಂದು ಘೋಷಿಸಿದ್ದಾರೆ.
112. "ಓ ಅಲ್ಲಾಹ್! ನನಗೆ ನನ್ನ ಮಾರ್ಗದರ್ಶನವನ್ನು ತಿಳಿಸಿಕೊಡು ಮತ್ತು ನನ್ನನ್ನು ನನ್ನ ಮನಸ್ಸಿನ ಕೇಡಿನಿಂದ ರಕ್ಷಿಸು"[75].
[76] ನಸಾಈ ಅಲ್-ಕುಬ್ರಾದಲ್ಲಿ (ಹದೀಸ್ ಸಂಖ್ಯೆ 7867) ಮತ್ತು ಇಬ್ನು ಮಾಜಾ (ಹದೀಸ್ ಸಂಖ್ಯೆ 3843). ಇಮಾಮ್ ಅಲ್ಬಾನಿ ಸಹೀಹ್ ಸುನನ್ ಇಬ್ನು ಮಾಜಾದಲ್ಲಿ (2/327) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ. ಅವರ ವರದಿಯ ಪದಗಳು ಹೀಗಿವೆ: "ಅಲ್ಲಾಹನೊಡನೆ ಲಾಭದಾಯಕ ಜ್ಞಾನವನ್ನು ಬೇಡಿರಿ. ಪ್ರಯೋಜನ ಕೊಡದ ಜ್ಞಾನದಿಂದ ಅವನಲ್ಲಿ ಅಭಯ ಯಾಚಿಸಿರಿ."
114. "ಓ ಅಲ್ಲಾಹ್! ಏಳಾಕಾಶಗಳ ಒಡೆಯನೇ, ಭೂಮಿಯ ಒಡೆಯನೇ, ಮಹೋನ್ನತವಾದ ಅರ್ಶ್ನ ಒಡೆಯನೇ, ನಮ್ಮ ಒಡೆಯನೇ ಮತ್ತು ಎಲ್ಲಾ ವಸ್ತುಗಳ ಒಡೆಯನೇ, ದವಸಧಾನ್ಯಗಳನ್ನು ಸೀಳುವವನೇ, ತೌರಾತ್, ಇಂಜೀಲ್ ಮತ್ತು ಪುರ್ಕಾನನ್ನು ಅವತೀರ್ಣಗೊಳಿಸಿದವನೇ, ನೀನು ಅದರ ಮುಂಗುರಳನ್ನು ಹಿಡಿದುಕೊಂಡಿರುವ ಪ್ರತಿಯೊಂದು ವಸ್ತುವಿನ ಕೇಡಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನೀನು ಆದಿಯಾಗಿರುವೆ, ನಿನಗಿಂತ ಮೊದಲು ಏನೂ ಇಲ್ಲ. ನೀನು ಅಂತ್ಯನಾಗಿರುವೆ, ನಿನ್ನ ನಂತರ ಏನೂ ಇಲ್ಲ. ನೀನು ಬಹಿರಂಗನಾಗಿರುವೆ, ನಿನ್ನ ಮೇಲೆ ಏನೂ ಇಲ್ಲ. ನೀನು ಅಂತರಂಗವಾಗಿರುವೆ, ನಿನ್ನ ಸಮೀಪ ಏನೂ ಇಲ್ಲ. ನಮ್ಮ ಸಾಲಗಳನ್ನು ತೀರಿಸು ಮತ್ತು ದಾರಿದ್ರ್ಯದಿಂದ ನಮ್ಮನ್ನು ಬಡತನದಿಂದ ಶ್ರೀಮಂತಗೊಳಿಸು"[114]. [77] ಮುಸ್ಲಿಮ್ (ಹದೀಸ್ ಸಂಖ್ಯೆ 2713) ಅಬೂ ಹುರೈರಾ(ರ) ರಿಂದ ವರದಿ.
115. "ಓ ಅಲ್ಲಾಹ್! ನಮ್ಮ ಹೃದಯಗಳನ್ನು ಪರಸ್ಪರ ಬೆಸೆ, ನಮ್ಮ ಮಧ್ಯೆ ಸಂಧಾನ ಮಾಡು, ನಮಗೆ ಇಸ್ಲಾಮಿನ ಮಾರ್ಗಗಳೆಡೆಗೆ ಮಾರ್ಗದರ್ಶನ ಮಾಡು, ನಮ್ಮನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಮುನ್ನಡೆಸು, ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯಗಳಿಂದ ನಮ್ಮನ್ನು ರಕ್ಷಿಸು, ನಮ್ಮ ಕಿವಿಗಳಲ್ಲಿ, ನಮ್ಮ ಕಣ್ಣುಗಳಲ್ಲಿ, ನಮ್ಮ ಹೃದಯಗಳಲ್ಲಿ, ನಮ್ಮ ಪತ್ನಿಯರಲ್ಲಿ, ಮತ್ತು ಮಕ್ಕಳಲ್ಲಿ ಸಮೃದ್ಧಿಯನ್ನು ನೀಡು. ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ಏಕೆಂದರೆ ನೀನು ಅತ್ಯಧಿಕ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿರುವೆ ಮತ್ತು ಅತ್ಯಧಿಕ ಕರುಣೆ ತೋರುವವನಾಗಿರುವೆ. ನಮ್ಮನ್ನು ನಿನ್ನ ಅನುಗ್ರಹಗಳಿಗೆ ಕೃತಜ್ಞತೆ ತೋರುವವರನ್ನಾಗಿ ಮತ್ತು ಅವುಗಳನ್ನು ಪಡೆದ ಕಾರಣದಿಂದಾಗಿ ನಿನ್ನನ್ನು ಸ್ತುತಿಸುವವರನ್ನಾಗಿ ಮಾಡು"[78]. [78] ಅಬೂ ದಾವೂದ್ (ಹದೀಸ್ ಸಂಖ್ಯೆ 969), ಅಲ್-ಹಾಕಿಮ್ (1/265 ಇದು ಅವರ ವರದಿ). ಈ ಹದೀಸಿನ ಕುರಿತು ಇಮಾಮ್ ಹಾಕಿಮ್ ಹೇಳಿದರು: "ಈ ಹದೀಸ್ ಇಮಾಮ್ ಮುಸ್ಲಿಮ್ ರವರ ಶರತ್ತಿನ ಮೇಲೆ ಸರಿಯಾಗಿದೆ." ಇಮಾಮ್ ಝಹಬೀ ಈ ಹದೀಸನ್ನು ಸಹೀಹ್ ಎಂದು ಸಮ್ಮತಿಸಿದ್ದಾರೆ (1/26). ಇಮಾಮ್ ಅಲ್ಬಾನೀ ಈ ಹದೀಸನ್ನು ಸಹೀಹುಲ್ ಅದಬಿಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 630) ಸಹೀಹ್ ಎಂದು ಘೋಷಿಸಿದ್ದಾರೆ.
[79] ಇಮಾಮ್ ಹಾಕಿಮ್ (1/520) ಉಮ್ಮು ಸಲಮಾ (ರ) ರಿಂದ ಮರ್ಫೂ ಆಗಿ ವರದಿ. ಹಾಕಿಮ್ (1/520) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಬೈಹಕಿ ಅದ್ದಅವಾತ್ನಲ್ಲಿ (ಹದೀಸ್ ಸಂಖ್ಯೆ 225) ಮತ್ತು ಅತ್ತಬ್ರಾನೀ ಅಲ್-ಕಬೀರ್ನಲ್ಲಿ (23/326 ಹದೀಸ್ ಸಂಖ್ಯೆ 717).
117. "ಓ ಅಲ್ಲಾಹ್! ನನ್ನನ್ನು ಕೆಟ್ಟ ಸ್ವಭಾವಗಳಿಂದ ಸ್ವೇಚ್ಛೆಗಳಿಂದ, ಕೆಟ್ಟ ಕಾರ್ಯಗಳಿಂದ ಮತ್ತು ಕೆಟ್ಟ ರೋಗಗಳಿಂದ ರಕ್ಷಿಸು"[80]̤ [80] ಅಲ್-ಹಾಕಿಮ್ (1/523). ಈ ಹದೀಸಿನ ಕುರಿತು ಇಮಾಮ್ ಹಾಕಿಮ್ ಹೇಳಿದರು: "ಈ ಹದೀಸ್ ಮುಸ್ಲಿಮ್ ರವರ ಶರತ್ತಿನಂತೆ ಸಹೀಹ್ ಆಗಿದೆ." ಇದನ್ನು ಇಮಾಮ್ ಝಹಬೀ ಒಪ್ಪಿಕೊಂಡಿದ್ದಾರೆ (1/532). ಅತ್ತಬ್ರಾನೀ ಅಲ್-ಮುಅ್ಜಮುಲ್-ಕಬೀರ್ನಲ್ಲಿ (19/19 ಹದೀಸ್ ಸಂಖ್ಯೆ 36). ಈ ಹದೀಸನ್ನು ಇಮಾಮ್ ಅಲ್ಬಾನಿ "ಝಿಲಾಲುಲ್ ಜನ್ನ"ದಲ್ಲಿ (ಹದೀಸ್ ಸಂಖ್ಯೆ 13) ಸಹೀಹ್ ಎಂದು ಘೋಷಿಸಿದ್ದಾರೆ.
118. "ಓ ಅಲ್ಲಾಹ್! ನೀನು ನನಗೆ ದಯಪಾಲಿಸಿರುವುದರಲ್ಲಿ ನನ್ನನ್ನು ಸಂತೃಪ್ತನನ್ನಾಗಿ ಮಾಡು, ಅದರಲ್ಲಿ ಸಮೃದ್ಧಿಯನ್ನು ನೀಡು ಮತ್ತು ನನ್ನಿಂದ ಕಳೆದು ಹೋಗಿರುವ ನನ್ನ ಎಲ್ಲಾ ವಸ್ತುಗಳನ್ನು ನನಗೆ ಒಳಿತಾಗಿ ಹಿಂದಿರುಗಿಸು"[81]. [81] ಅಲ್-ಹಾಕಿಮ್ (1/532). ಇಬ್ನ್ ಅಬ್ಬಾಸ್ರಿಂದ ವರದಿಯಾದ ಈ ಹದೀಸನ್ನು ಹಾಕಿಮ್ ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ (1/510). ಬೈಹಕಿ ಅಲ್-ಆದಾಬ್ನಲ್ಲಿ (ಹದೀಸ್ ಸಂಖ್ಯೆ 1084) ಮತ್ತು ಅದ್ದಅವಾತುಲ್ ಕಬೀರ್ನಲ್ಲಿ (ಹದೀಸ್ ಸಂಖ್ಯೆ 211). ಹಾಫಿಝ್ ಇಬ್ನು ಹಜರ್ ಅಲ್ ಫುತೂಹಾತು ರ್ರಬ್ಬಾನಿಯ್ಯದಲ್ಲಿ (4/383) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ.
119. "ಓ ಅಲ್ಲಾಹ್! ನನ್ನನ್ನು ಸರಳವಾಗಿ ವಿಚಾರಣೆ ಮಾಡು"[82]. [82] ಅಹ್ಮದ್ (6/48), ಹಾಕಿಮ್ (1/255). ಈ ಹದೀಸಿನ ಕುರಿತು ಇಮಾಮ್ ಹಾಕಿಮ್ ಹೇಳಿದರು: "ಈ ಹದೀಸ್ ಮುಸ್ಲಿಮ್ ರವರ ಶರತ್ತಿನಂತೆ ಸಹೀಹ್ ಆಗಿದೆ." ಈ ಹದೀಸನ್ನು ಇಮಾಮ್ ಝಹಬೀ ಒಪ್ಪಿಕೊಂಡಿದ್ದಾರೆ (1/255). ಆಯಿಷಾ (ರ) ರವರು ಹೇಳುತ್ತಾರೆ: ಪ್ರವಾದಿ (ﷺ) ರವರು ನಮಾಝ್ ಮುಗಿಸಿದಾಗ, ಓ ಪ್ರವಾದಿಯವರೇ! ಸರಳವಾದ ವಿಚಾರಣೆ ಎಂದರೆ ಏನು ಎಂದು ನಾನು ಕೇಳಿದೆ. ಪ್ರವಾದಿ (ﷺ) ರವರು ಉತ್ತರಿಸಿದರು: "ಸುಮ್ಮನೆ ಒಮ್ಮೆ ಗ್ರಂಥದ ಮೇಲೆ ಕಣ್ಣೋಡಿಸುವುದು. ಓ ಆಯಿಶಾ, ಅಂದು ಯಾರ ಗ್ರಂಥವನ್ನು ಅಲ್ಲಾಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೋ ಅವನು ನಾಶವಾದನು. ಸತ್ಯವಿಶ್ವಾಸಿಗೆ ಉಂಟಾಗುವ ಎಲ್ಲಾ ಕಷ್ಟಗಳಿಂದ ಅಲ್ಲಾಹನು ಅವನ ಪಾಪಗಳನ್ನು ಮನ್ನಿಸುತ್ತಾನೆ. ಎಲ್ಲಿಯವರೆಗೆಂದರೆ ಅವನಿಗೆ ಚುಚ್ಚುವ ಒಂದು ಮುಳ್ಳಿನಿಂದಲೂ ಕೂಡ." ಅಲ್ಲಾಮಾ ಅಲ್ಬಾನಿ ಮಿಶ್ಕಾತುಲ್ ಮಸಾಬೀಹ್ನಲ್ಲಿ ಈ ಹದೀಸಿನ ಸನದ್ ಉತ್ತಮವಾಗಿದೆ ಎಂದಿದ್ದಾರೆ.
120. "ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನ್ನ ಕೃತಜ್ಞತೆ ತೋರಲು ಮತ್ತು ಉತ್ತಮ ರೀತಿಯಲ್ಲಿ ನಿನ್ನ ಆರಾಧನೆ ಮಾಡಲು ನಮಗೆ ಸಹಾಯ ಮಾಡು"[83]. [83] ಅಹ್ಮದ್ (2/299), ಅಲ್-ಹಾಕಿಮ್ (1/499). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಈ ಹದೀಸ್ ಅವರಿಬ್ಬರು ಹೇಳಿದ ಹಾಗೆ ಇದೆ. ಅಬೂ ದಾವೂದ್ (ಹದೀಸ್ ಸಂಖ್ಯೆ 1524), ನಸಾಈ ಅಲ್-ಕುಬ್ರಾದಲ್ಲಿ (ಹದೀಸ್ ಸಂಖ್ಯೆ 9973) ಇಮಾಮ್ ಅಲ್ಬಾನಿ "ಸಹೀಹುಲ್ ಅದಬುಲ್ ಮುಫ್ರದ್"ನಲ್ಲಿ (ಹದೀಸ್ ಸಂಖ್ಯೆ 534) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
121. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಧರ್ಮಭ್ರಷ್ಟವಾಗದ ವಿಶ್ವಾಸವನ್ನು, ಎಂದೂ ಕೊನೆಗೊಳ್ಳದ ಅನುಗ್ರಹಗಳನ್ನು ಮತ್ತು ಸ್ವರ್ಗದ ಉನ್ನತ ಸ್ಥಾನಗಳಲ್ಲಿ ಪ್ರವಾದಿ ಮುಹಮ್ಮದ್ (ﷺ) ರವರ ಒಡನಾಟವನ್ನು ಬೇಡುತ್ತೇನೆ"[84]. [84] ಇಬ್ನು ಹಿಬ್ಬಾನ್ (ಪುಟ 604, ಹದೀಸ್ ಸಂಖ್ಯೆ 2436 ಇಬ್ನು ಮಸ್ಊದ್(ರ) ರಿಂದ ಮೌಖೂಫ್ ಆಗಿ). ಅಹ್ಮದ್ (1/386 ಹದೀಸ್ ಸಂಖ್ಯೆ 400, ಇನ್ನೊಂದು ಹಾದಿಯಿಂದ), ನಸಾಈ ಅಮಲುಲ್ ಯೌಮಿ ವಲ್ಲೈಲಾದಲ್ಲಿ (ಹದೀಸ್ ಸಂಖ್ಯೆ 869). ಇಮಾಮ್ ಅಲ್ಬಾನಿ ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹಾದಲ್ಲಿ (ಹದೀಸ್ ಸಂಖ್ಯೆ 2301) ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
122. "ಓ ಅಲ್ಲಾಹ್! ನನ್ನನ್ನು ನನ್ನ ಮನಸ್ಸಿನ ಕೇಡಿನಿಂದ ರಕ್ಷಿಸು ಮತ್ತು ನನಗಾಗಿ ನನ್ನ ಕಾರ್ಯದ ಅತ್ಯುತ್ತಮ ಮಾರ್ಗದರ್ಶನದ ನಿರ್ಧಾರ ಮಾಡು. ಓ ಅಲ್ಲಾಹ್! ನಾನು ರಹಸ್ಯವಾಗಿ ಮಾಡಿರುವ, ಬಹಿರಂಗವಾಗಿ ಮಾಡಿರುವ, ತಪ್ಪಾಗಿ ಮಾಡಿರುವ, ಉದ್ದೇಶಪೂರ್ವಕವಾಗಿ ಮಾಡಿರುವ, ಅರಿತು ಮಾಡಿರುವ ಮತ್ತು ಅರಿಯದೇ ಮಾಡಿರುವ ಪಾಪಗಳನ್ನು ಕ್ಷಮಿಸು"[85]. [85] ನಸಾಈ ಅಲ್-ಕುಬ್ರಾದಲ್ಲಿ (6/246 ಹದೀಸ್ ಸಂಖ್ಯೆ 10830), ಅಲ್-ಹಾಕಿಮ್ (1/510). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಅಹ್ಮದ್ (4/444), ಅಲ್-ಮುಸ್ನದ್ ಅಲ್-ಮುಹಖ್ಖಖ್ (33/197 ಹದೀಸ್ ಸಂಖ್ಯೆ 19992). ಹಾಫಿದ್ ಇಬ್ನು ಹಜರ್ ಅಲ್-ಇಸಾಬಾದಲ್ಲಿ ಹೇಳುತ್ತಾರೆ: "ಈ ಹದೀಸಿನ ಸನದ್ ಸಹೀಹ್ ಆಗಿದೆ." ಇಮಾಮ್ ಅಲ್ಬಾನಿ ರಿಯಾದು ಸ್ಸ್ವಾಲಿಹೀನ್ನ ತಖ್ರೀಜ್ನಲ್ಲಿ (ಹದೀಸ್ ಸಂಖ್ಯೆ 1495) ಹದೀಸಿನ ಕುರಿತು ಬರೆದಿರುವ ಟಿಪ್ಪಣಿಯಲ್ಲಿ ಈ ಹದೀಸ್ ಸಹೀಹ್ ಎಂದು ಘೋಷಿಸಿದ್ದಾರೆ.
123. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಸಾಲದ ಭಾರದಿಂದ, ಶತ್ರುವಿನ ಆಕ್ರಮಣದಿಂದ ಮತ್ತು ಶತ್ರುಗಳು ಸಂತೋಷಪಡುವುದರಿಂದ ಅಭಯ ಯಾಚಿಸುತ್ತೇನೆ"[86]. [86] ನಸಾಈ (ಹದೀಸ್ ಸಂಖ್ಯೆ 5475), ಅಹ್ಮದ್ (2/173). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ನ್ನಸಾಈಯಲ್ಲಿ (3/1113) ಸಹೀಹ್ ಎಂದು ಘೋಷಿಸಿದ್ದಾರೆ.
124. "ಓ ಅಲ್ಲಾಹ್! ನನ್ನನ್ನು ಕ್ಷಮಿಸು ಮತ್ತು ನನಗೆ ನೇರ ಮಾರ್ಗ ತೋರಿಸು. ನನಗೆ ಜೀವನಾಧಾರವನ್ನು ನೀಡು ಮತ್ತು ನನಗೆ ಸೌಖ್ಯವನ್ನು ನೀಡು. ನಾನು ಪುನರುತ್ಥಾನದ ದಿನದ ಇಕ್ಕಟ್ಟಿನ ಸ್ಥಾನದ ಬಗ್ಗೆ ಅಲ್ಲಾಹನಲ್ಲಿ ರಕ್ಷಣೆ ಬೇಡುತ್ತೇನೆ"[124]. [87] ಅನ್ನಸಾಈ (ಹದೀಸ್ ಸಂಖ್ಯೆ 1617), ಇಬ್ನು ಮಾಜಾ (ಹದೀಸ್ ಸಂಖ್ಯೆ 1356). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ಸುನನಿ ನ್ನಸಾಈಯಲ್ಲಿ (1/356) ಮತ್ತು ಸಹೀಹು ಇಬ್ನು ಮಾಜಾದಲ್ಲಿ (1/226) ಸಹೀಹ್ ಎಂದು ಘೋಷಿಸಿದ್ದಾರೆ.
125. "ಓ ಅಲ್ಲಾಹ್! ನಮ್ಮ ಶ್ರವಣಗಳಿಂದ, ನಮ್ಮ ದೃಷ್ಟಿಯಿಂದ ನಮ್ಮನ್ನು ಆನಂದಪಡಿಸು, ಅವೆರೆಡನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡು. ನನಗೆ ಅನ್ಯಾಯ ಮಾಡುವವರ ವಿರುದ್ಧ ನನಗೆ ಸಹಾಯ ಮಾಡು ಮತ್ತು ಅವನಿಂದ ನನ್ನ ಸೇಡು ತೀರಿಸಿಕೋ"[88]. [88] ತಿರ್ಮಿದಿ (ಹದೀಸ್ ಸಂಖ್ಯೆ 3681), ಇಮಾಮ್ ಬುಖಾರಿ ಅಲ್-ಅದಬುಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 650), ಅಲ್-ಹಾಕಿಮ್ (1/523). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಅಲ್ಬಾನಿ ಈ ಹದೀಸನ್ನು ಸಹೀಹುತ್ತಿರ್ಮಿದಿಯಲ್ಲಿ (3/188) ಹಸನ್ ಎಂದು ಘೋಷಿಸಿದ್ದಾರೆ.
126. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಶುದ್ಧ ಜೀವನ, ಸಾಮಾನ್ಯ ಮರಣ, ಅವಮಾನಕರವಲ್ಲದ ಮತ್ತು ನಾಚಿಕೆಗೀಡಾಗಿರದ ಮರಳುವಿಕೆಯನ್ನು ಬೇಡುತ್ತೇನೆ"[89]. [89] ಈ ಹದೀಸನ್ನು ಹಾಕಿಮ್,1/541, ಮತ್ತು ಝವಾಇದು ಮುಸ್ನದ್ ಅಲ್ ಬಝ್ಝಾರ್,2/442 ಸಂಖ್ಯೆ 2177, ಮತ್ತು ಅತ್ತಬ್ರಾನೀ ಫಿ ದ್ದುಆ, ಸಂಖ್ಯೆ 1435 ವರದಿ ಮಾಡಿದ್ದಾರೆ. ಹೈಸಮೀ ಮಜ್ಮಉ ಝ್ಝವಾಇದ್ 10/179 ನಲ್ಲಿ ಹೇಳಿದರು "ಇಸ್ನಾದ್ ಅತ್ತಬ್ರಾನೀ ಜೈಯ್ಯಿದುನ್"(ತಬ್ರಾನಿರವರ ಸನದ್ ಉತ್ತಮವಾಗಿದೆ).
127. "ಓ ಅಲ್ಲಾಹ್! ಸರ್ವಸ್ತುತಿಗಳು ನಿನಗೆ ಮಾತ್ರ. ಓ ಅಲ್ಲಾಹ್! ನೀನು ವಿಶಾಲಗೊಳಿಸಿದವನಿಗೆ ಸಂಕುಚಿತಗೊಳಿಸುವವನಾರೂ ಇಲ್ಲ. ನೀನು ಸಂಕುಚಿತಗೊಳಿಸಿದವನಿಗೆ ವಿಶಾಲಗೊಳಿಸುವವನಾರೂ ಇಲ್ಲ. ನೀನು ಪಥಭ್ರಷ್ಟಗೊಳಿಸಿದವನಿಗೆ ಸನ್ಮಾರ್ಗ ತೋರಿಸುವವನಾರೂ ಇಲ್ಲ. ನೀನು ಸನ್ಮಾರ್ಗ ತೋರಿಸಿದವನನ್ನು ಪಥಭ್ರಷ್ಟಗೊಳಿಸುವವನಾರೂ ಇಲ್ಲ. ಓ ಅಲ್ಲಾಹ್! ನೀನು ತಡೆದುದ್ದನ್ನು ನೀಡುವವನಾರೂ ಇಲ್ಲ, ನೀನು ನೀಡಿದ್ದನ್ನು ತಡೆಯುವವನಾರೂ ಇಲ್ಲ. ನೀನು ದೂರಗೊಳಿಸಿದ್ದನ್ನು ಸಮೀಪ ತರುವವನಾರೂ ಇಲ್ಲ. ನೀನು ಸಮೀಪಗೊಳಿಸಿದ್ದನ್ನು ದೂರಗೊಳಿಸುವವನಾರೂ ಇಲ್ಲ. ಓ ಅಲ್ಲಾಹ್! ನಮ್ಮ ಮೇಲೆ ನಿನ್ನ ವತಿಯ ಸಮೃದ್ಧಿ, ನಿನ್ನ ಕರುಣೆ, ನಿನ್ನ ಅನುಗ್ರಹ ಮತ್ತು ನಿನ್ನ ಜೀವನಾಧಾರವನ್ನು ವರ್ಷಿಸು. ಓ ಅಲ್ಲಾಹ್! ನಾನು ನಿನ್ನೊಂದಿಗೆ ಅಡೆತಡೆಯಾಗದೆ, ಸ್ಥಿರವಾಗಿರುವ ಮತ್ತು ಎಂದೂ ಕೊನೆಗೊಳ್ಳದ ಅನುಗ್ರಹವನ್ನು ಬೇಡುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ದಾರಿದ್ರ್ಯದ ದಿನದಂದು ಅನುಗ್ರಹವನ್ನು ಮತ್ತು ಭಯಪಡುವ ದಿನದಂದು ಸುಖ ಶಾಂತಿಯನ್ನು ಬೇಡುತ್ತೇನೆ. ಓ ಅಲ್ಲಾಹ್! ನಾನು ನಿನ್ನೊಂದಿಗೆ ನೀನು ನಮಗೆ ನೀಡಿರುವ ವಸ್ತುಗಳ ಕೇಡಿನಿಂದ ಮತ್ತು ನೀನು ನಮಗೆ ತಡೆದಿರುವ ವಸ್ತುಗಳ ಕೇಡಿನಿಂದ ಅಭಯ ಯಾಚಿಸುತ್ತೇನೆ. ಓ ಅಲ್ಲಾಹ್! ಸತ್ಯವಿಶ್ವಾಸವನ್ನು ನಮಗೆ ಇಷ್ಟಕರವಾಗಿಸು ಮತ್ತು ಅದನ್ನು ನಮ್ಮ ಹೃದಯಗಳಲ್ಲಿ ಆಕರ್ಷಣೀಯವಾಗಿಸು. ಸತ್ಯನಿಷೇಧ, ಧಿಕ್ಕಾರ ಮತ್ತು ಅವಿಧೇಯತೆಯನ್ನು ನಮಗೆ ಅಸಹ್ಯಕರವಾಗಿಸು ಮತ್ತು ನಮ್ಮನ್ನು ಸನ್ಮಾರ್ಗ ಪಡೆದವರನ್ನಾಗಿಸು. ನಮ್ಮನ್ನು ಮುಸ್ಲಿಮರನ್ನಾಗಿ ಮೃತಪಡಿಸು ಮತ್ತು ನಮ್ಮನ್ನು ಮುಸ್ಲಿಮರನ್ನಾಗಿ ಜೀವಂತಗೊಳಿಸು. ಓ ಅಲ್ಲಾಹ್! ನಮ್ಮನ್ನು ಅಪಮಾನಗೊಳಿಸದೆ, ದುರ್ಮಾರ್ಗಿಗಳಲ್ಲಿ ಸೇರಿಸದೆ ಸಜ್ಜನ ದಾಸರಲ್ಲಿ ಸೇರಿಸು. ಓ ಅಲ್ಲಾಹ್! ನಿನ್ನ ಸಂದೇಶವಾಹಕರನ್ನು ಸುಳ್ಳಾಗಿಸುವವರನ್ನು ಮತ್ತು ನಿನ್ನ ಮಾರ್ಗದಿಂದ (ನಿನ್ನ ದಾಸರನ್ನು) ತಡೆಯುವವರನ್ನು ಶಪಿಸು. ಅವರ ಮೇಲೆ ನಿನ್ನ ಶಿಕ್ಷೆ ಮತ್ತು ಯಾತನೆಯನ್ನು ಎರಗಿಸು. ಓ ಅಲ್ಲಾಹ್! ಸತ್ಯ ಆರಾಧ್ಯನೇ, ಗ್ರಂಥ ನೀಡಲಾದ ಸತ್ಯನಿಷೇಧಿಗಳನ್ನು ಶಪಿಸು"[90]. [90] ಅಹ್ಮದ್ (3/424, 24/246 ಹದೀಸ್ ಸಂಖ್ಯೆ 15492 ಇದು ಅವರ ವರದಿ). ಆವರಣ ಚಿಹ್ನೆಯಲ್ಲಿ ಬಂದಿರುವ ಪದಗಳು ಹಾಕಿಮ್ರದ್ದು (1/507, 3/23-24). ಇಮಾಮ್ ಬುಖಾರಿ ಅಲ್-ಅದಬುಲ್ ಮುಫ್ರದ್ದಲ್ಲಿ (ಹದೀಸ್ ಸಂಖ್ಯೆ 699). ಈ ಹದೀಸನ್ನು ಇಮಾಮ್ ಅಲ್ಬಾನಿ ಫಿಖ್ಹು ಸ್ಸೀರಾದ ತಖ್ರೀಜ್ನಲ್ಲಿ (ಪುಟ 284) ಮತ್ತು ಸಹೀಹು ಅದಬಿಲ್ ಮುಫ್ರದ್ನಲ್ಲಿ (ಹದೀಸ್ ಸಂಖ್ಯೆ 538, ಪುಟ 259) ಸಹೀಹ್ ಎಂದು ಘೋಷಿಸಿದ್ದಾರೆ. ಮುಸ್ನದ್ ಅಹ್ಮದ್ನ ಪರಿಶೋಧಕರು ಈ ಹದೀಸಿನ ವರದಿಗಾರರು ವಿಶ್ವಾಸಾರ್ಹರು ಎಂದಿದ್ದಾರೆ.
128. "ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನ್ನ ಮೇಲೆ ಕರುಣೆ ತೋರು, ನನಗೆ ನೇರ ಮಾರ್ಗ ತೋರಿಸು, ನನಗೆ ಸೌಖ್ಯವನ್ನು ನೀಡು ಮತ್ತು ನನಗೆ ಜೀವನಾಧಾರವನ್ನು ದಯಪಾಲಿಸು"[91]. [91] ಮುಸ್ಲಿಮ್ (ಹದೀಸ್ ಸಂಖ್ಯೆ 2696, 2697). ಮುಸ್ಲಿಮ್ ರವರ ವರದಿಯಲ್ಲಿ ಹೀಗಿದೆ: "ಖಂಡಿತವಾಗಿಯೂ ಈ ಪದಗಳು ನಿನಗೆ ನಿನ್ನ ಐಹಿಕ ಹಾಗೂ ಪಾರತ್ರಿಕ ಜೀವನದ ಎಲ್ಲ ಒಳಿತುಗಳನ್ನು ಒಟ್ಟುಗೂಡಿಸುತ್ತವೆ." ಸುನನ್ ಅಬೂ ದಾವೂದ್ (ಹದೀಸ್ ಸಂಖ್ಯೆ 850). ಅಬೂದಾವೂದ್ನ ವರದಿಯಲ್ಲಿ ಹೀಗಿದೆ: ಆ ಗ್ರಾಮೀಣ ವ್ಯಕ್ತಿ ಹಿಂತಿರುಗಿ ಹೋಗುತ್ತಿದ್ದಾಗ ಪ್ರವಾದಿ(ಸ) ರವರು ಹೇಳಿದರು: "ಖಂಡಿತವಾಗಿಯೂ ಅವನು ತನ್ನ ಎರಡೂ ಕೈಗಳನ್ನು ಒಳಿತಿನಿಂದ ತುಂಬಿಕೊಂಡನು."
"...ನನ್ನ ತೂಂದರೆಗಳನ್ನು ಪರಿಹರಿಸು, ನನ್ನ ಕೀರ್ತಿಯನ್ನು ಉತ್ತುಂಗಕ್ಕೇರಿಸು"[92].
129. "ಓ ಅಲ್ಲಾಹ್! ನಮಗೆ (ಒಳಿತನ್ನು) ಹೆಚ್ಚಿಸು, ಮತ್ತು ನಮಗೆ (ಒಳಿತನ್ನು) ಕುಗ್ಗಿಸಬೇಡ, ನಮ್ಮನ್ನು ಗೌರವಿಸು, ಅವಮಾನಿಸಬೇಡ, ನಮಗೆ ದಯಪಾಲಿಸು, ವಂಚಿತರನ್ನಾಗಿ ಮಾಡಬೇಡ, ನಮಗೆ ಆದ್ಯತೆ ನೀಡು ನಮಗೆ ವಿರುದ್ಧವಾಗಿ ಆದ್ಯತೆ ನೀಡಬೇಡ, ನಮ್ಮನ್ನು ಸಂತೃಪ್ತಗೊಳಿಸು ಮತ್ತು ನಮ್ಮ ಬಗ್ಗೆ ಸಂತೃಪ್ತನಾಗು"[93]. [93] ಅತ್ತಿರ್ಮಿದಿ (5/326 ಹದೀಸ್ ಸಂಖ್ಯೆ 3173), ಅಲ್-ಹಾಕಿಮ್ (2/98). ಅಬ್ದುಲ್ ಖಾದಿರ್ ಅಲ್-ಅರ್ನವೂತ್ ರವರು ಜಾಮಿಉಲ್ ಉಸೂಲ್ನ ತಮ್ಮ ಪರಿಶೋಧನೆಯಲ್ಲಿ (11/282 ಹದೀಸ್ ಸಂಖ್ಯೆ 8847) ಈ ಹದೀಸನ್ನು ಸಹೀಹ್ ಮತ್ತು ಹಸನ್ ಎಂದು ಘೋಷಿಸಿದ್ದಾರೆ.
130. "ಓ ಅಲ್ಲಾಹ್! ನೀನು ನನ್ನ ಆಕಾರವನ್ನು ಉತ್ತಮಗೊಳಿಸಿರುವೆ. ಆದುದರಿಂದ ನನ್ನ ಸ್ವಭಾವವನ್ನೂ ಉತ್ತಮಗೊಳಿಸು"[94]. [94] ಅಹ್ಮದ್ (6/68 ಹದೀಸ್ ಸಂಖ್ಯೆ 155 ಮತ್ತು 1/403), ಇಬ್ನು ಹಿಬ್ಬಾನ್ (ಹದೀಸ್ ಸಂಖ್ಯೆ 2423 -ಮವಾರಿದ್ದಲ್ಲಿ) ಅತ್ತಯಾಲಿಸಿ (ಹದೀಸ್ ಸಂಖ್ಯೆ 374), ಮುಸ್ನದ್ ಅಬೀ ಯಅ್ಲಾ (ಹದೀಸ್ ಸಂಖ್ಯೆ 5075). ಈ ಹದೀಸನ್ನು ಇಮಾಮ್ ಅಲ್ಬಾನಿ ಇರ್ವಾವುಲ್ ಗಲೀಲ್ನಲ್ಲಿ (1/115 ಹದೀಸ್ ಸಂಖ್ಯೆ 74) ಸಹೀಹ್ ಎಂದು ಘೋಷಿಸಿದ್ದಾರೆ.
131. "ಓ ಅಲ್ಲಾಹ್! ನನ್ನನ್ನು ಧರ್ಮದಲ್ಲಿ ಸ್ಥಿರವಾಗಿರಿಸು ಮತ್ತು ಸನ್ಮಾರ್ಗಿಯೂ ಮಾರ್ಗದರ್ಶಕನೂ ಆಗಿ ಮಾಡು"[95]. [95] ಜರೀರ್ (ರ) ರವರಿಗೆ ಪ್ರವಾದಿ (ﷺ) ಪ್ರಾರ್ಥಿಸಿದ ಪ್ರಾರ್ಥನೆ ಇದಕ್ಕೆ ಪುರಾವೆಯಾಗಿದೆ. ನೋಡಿರಿ: ಅಲ್ ಬುಖಾರಿ (ಹದೀಸ್ ಸಂಖ್ಯೆ 6333, 3020, 3036)
132. " ಓ ಅಲ್ಲಾಹ್! ನಾನು ನಿನ್ನೊಂದಿಗೆ ಕಾರ್ಯದಲ್ಲಿ ಸ್ಥಿರತೆಯನ್ನು, ಸತ್ಕಾರ್ಯದ ನಿರ್ಧಾರವನ್ನು ಬೇಡುತ್ತೇನೆ. ನಾನು ನಿನ್ನೊಂದಿಗೆ ನಿನ್ನ ಕರುಣೆಯನ್ನು ಕಡ್ಡಾಯಗೊಳಿಸುವ ಮತ್ತು ನಿನ್ನ ಕ್ಷಮೆಯನ್ನು ನಿಶ್ಚಿತಗೊಳಿಸುವ ಕರ್ಮಗಳನ್ನು ಬೇಡುತ್ತೇನೆ. ನಾನು ನಿನ್ನೊಂದಿಗೆ ನಿನ್ನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಉತ್ತಮ ರೀತಿಯಲ್ಲಿ ನಿನ್ನ ಆರಾಧನೆ ಮಾಡುವ ಸ್ಫೂರ್ತಿಯನ್ನು ಬೇಡುತ್ತೇನೆ. ನಾನು ನಿನ್ನೊಂದಿಗೆ ನಿಷ್ಕಳಂಕ ಹೃದಯವನ್ನು ಮತ್ತು ಸತ್ಯ ನುಡಿಯುವ ನಾಲಿಗೆಯನ್ನು ಬೇಡುತ್ತೇನೆ. ನೀನು ಅರಿಯುವ ಪ್ರತಿಯೊಂದು ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ. ನೀನು ಅರಿಯುವ ಪ್ರತಿಯೊಂದು ಕೇಡಿನಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತೇನೆ. ನೀನು ಅರಿಯುವ ಪ್ರತಿಯೊಂದು ಪಾಪದಿಂದ ನಾನು ನಿನ್ನೊಂದಿಗೆ ಕ್ಷಮೆ ಬೇಡುತ್ತೇನೆ. ಏಕೆಂದರೆ ನೀನೇ ಅತಿ ಹೆಚ್ಚು ಪರೋಕ್ಷಗಳನ್ನು ಅರಿಯುವವನಾಗಿರುವೆ"[96]. [96] ಅಹ್ಮದ್ (28/338 ಹದೀಸ್ ಸಂಖ್ಯೆ 17114 ಮತ್ತು 28/356 ಹದೀಸ್ ಸಂಖ್ಯೆ 17133), ಅತ್ತಿರ್ಮಿದಿ (ಹದೀಸ್ ಸಂಖ್ಯೆ 3407), ಅತ್ತಬ್ರಾನೀ ಅಲ್-ಮುಅಜಮುಲ್ ಕಬೀರ್ನಲ್ಲಿ (ಹದೀಸ್ ಸಂಖ್ಯೆ 7135, 7157, 7175, 7176, 7177, 7178, 7179, 7180 ಅವರ ವರದಿಯ ಇದೇ ಪದಗಳಾಗಿವೆ), ಇಬ್ನು ಹಿಬ್ಬಾನ್ ತಮ್ಮ ಸಹೀಹ್ನಲ್ಲಿ (3/215 ಹದೀಸ್ ಸಂಖ್ಯೆ 935 ಮತ್ತು 5/310 ಹದೀಸ್ ಸಂಖ್ಯೆ 1974), ಶುಐಬ್ ಅಲ್-ಅರ್ನಾವೂತ್ರವರು ಸಹೀಹ್ ಇಬ್ನು ಹಿಬ್ಬಾನ್ನಲ್ಲಿ (5/312) ಈ ಹದೀಸನ್ನು ಹಸನ್ ಎಂದು ಘೋಷಿಸಿದ್ದಾರೆ. ಮುಸ್ನದ್ನ ಪರಿಶೋಧಕರು ಈ ಹದೀಸನ್ನು ಇಬ್ನು ಹಿಬ್ಬಾನ್ ರವರ ವರದಿಯ ಸನದ್ನ ಮೇರೆಗೆ ಹಸನ್ ಎಂದು ಘೋಷಿಸಿದ್ದಾರೆ (28/338). ಇಮಾಮ್ ಅಲ್ಬಾನಿ ಸಿಲ್ಸಿಲತುಲ್ ಅಹಾದೀಸು ಸ್ಸಹೀಹಾದ 7ನೇ ಭಾಗದಲ್ಲಿ (ಹದೀಸ್ ಸಂಖ್ಯೆ 3228), ಮತ್ತು ಸಹೀಹು ಮವಾರಿದು ಝ್ಝಮ್ಆನ್ನಲ್ಲಿ (ಹದೀಸ್ ಸಂಖ್ಯೆ 2416 2418) ಈ ಹದೀಸನ್ನು ಉಲ್ಲೇಖಿಸಿ ಈ ಹದೀಸ್ ಸಹೀಹ್ ಲಿಗೈರಿಹಿ ಎಂದು ಹೇಳಿದ್ದಾರೆ.
133. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಅತ್ಯುನ್ನತ ಸ್ವರ್ಗವಾದ ಫಿರ್ದೌಸ್ ಅನ್ನು ಬೇಡುತ್ತೇನೆ"[97] [97] ಪ್ರವಾದಿ (ﷺ) ರವರ ಈ ವಚನದಿಂದ ಈ ಪ್ರಾರ್ಥನೆಯನ್ನು ಆಯ್ದುಕೊಳ್ಳಲಾಗಿದೆ: "ನೀವು ಅಲ್ಲಾಹನಲ್ಲಿ ಸ್ವರ್ಗವನ್ನು ಕೇಳುವಾಗ ಫಿರ್ದೌಸ್ ಅನ್ನು ಕೇಳಿರಿ. ಏಕೆಂದರೆ ಅದು ಅತ್ಯುತ್ತಮ ಸ್ವರ್ಗವಾಗಿದೆ. ಅದಕ್ಕಿಂತ ಮೇಲೆ ರಹ್ಮಾನನ ಅರ್ಶ್ (ಸಿಂಹಾಸನ) ಇದೆ. ಅದೇ ಫಿರ್ದೌಸ್ ನಿಂದ ಸ್ವರ್ಗದ ಕಾಲುವೆಗಳು ಹರಿಯುತ್ತವೆ." (ಬುಖಾರಿ ಹದೀಸ್ ಸಂಖ್ಯೆ 2790, 7423).
134. "ಓ ಅಲ್ಲಾಹ್! ನನ್ನ ಹೃದಯದಲ್ಲಿ ಸತ್ಯವಿಶ್ವಾಸವನ್ನು ನವೀಕರಿಸು"[98]. [98] ಈ ಪ್ರಾರ್ಥನೆಯನ್ನು ಅಬ್ದುಲ್ಲಾ ಇಬ್ನು ಉಮರ್ (ರ) ರವರ ಹದೀಸ್ನಿಂದ ಆಯ್ದುಕೊಳ್ಳಲಾಗಿದೆ. ಅವರು ಹೇಳುತ್ತಾರೆ: ಪ್ರವಾದಿ (ﷺ) ರವರು ಹೇಳಿದರು: "ಖಂಡಿತವಾಗಿಯೂ ಬಟ್ಟೆ ಹಳತಾಗುವಂತೆ ನಿಮ್ಮ ಮನಸ್ಸಿನಲ್ಲಿ ಸತ್ಯವಿಶ್ವಾಸವು ಹಳತಾಗುತ್ತದೆ. ಆದುದರಿಂದ ಸತ್ಯವಿಶ್ವಾಸವನ್ನು ನವೀಕರಿಸಲು ಅಲ್ಲಾಹನೊಂದಿಗೆ ಬೇಡಿರಿ." (ಅಲ್-ಹಾಕಿಮ್ 1/4). ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ ಮತ್ತು ಇಮಾಮ್ ಝಹಬೀ ಅದನ್ನು ಒಪ್ಪಿಕೊಂಡಿದ್ದಾರೆ. ಇಮಾಮ್ ಹೈಸಮಿ ರವರು ಮಜ್ಮಉ ಝ್ಝವಾಇದ್ನಲ್ಲಿ (1/52) ಹೇಳುತ್ತಾರೆ: "ಈ ಹದೀಸನ್ನು ಇಮಾಮ್ ತಬ್ರಾನಿ ಅಲ್ ಕಬೀರ್ನಲ್ಲಿ ವರದಿ ಮಾಡಿದ್ದಾರೆ. ಇದರ ಸನದ್ ಹಸನ್ ಆಗಿದೆ." ಈ ಹದೀಸನ್ನು ಇಮಾಮ್ ಅಲ್ಬಾನಿ ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹಾದಲ್ಲಿ (4/113 ಹದೀಸ್ ಸಂಖ್ಯೆ 1585) ಹಸನ್ ಎಂದು ಘೋಷಿಸಿದ್ದಾರೆ.
135. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಪ್ರಯೋಜನವಿಲ್ಲದ ನಮಾಝಿನಿಂದ ಅಭಯ ಯಾಚಿಸುತ್ತೇನೆ"[99]. [99] ಅಬೂ ದಾವೂದ್ (ಹದೀಸ್ ಸಂಖ್ಯೆ 1549). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹ್ ಸುನನ್ ಅಬೀ ದಾವೂದ್ನಲ್ಲಿ (1/424) ಸಹೀಹ್ ಎಂದು ಘೋಷಿಸಿದ್ದಾರೆ.
136. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಕೆಟ್ಟ ನೆರೆಯವನಿಂದ, ವೃದ್ಧಾಪ್ಯ ಬರುವ ಮುಂಚೆ ಮುದುಕನನ್ನಾಗಿಸುವ ಪತ್ನಿಯಿಂದ, ನನ್ನ ಮೇಲೆ ಅಧಿಕಾರ ಚಲಾಯಿಸುವ ಸಂತಾನದಿಂದ, ನನಗೆ ಶಿಕ್ಷೆಯನ್ನು ನೀಡುವ ಸಂಪತ್ತಿನಿಂದ ಮತ್ತು ಕುತಂತ್ರಿ ಸ್ನೇಹಿತನಿಂದ ಅಭಯ ಯಾಚಿಸುತ್ತೇನೆ. ಅವನ ಕಣ್ಣುಗಳು ನನ್ನನ್ನು ಕಾಯುತ್ತಿವೆ ಮತ್ತು ಅವನ ಹೃದಯವು ನನ್ನನ್ನು ಹಿಂಬಾಲಿಸುತ್ತಿದೆ. ಅವನು ನನ್ನ ಪ್ರತಿಯೊಂದು ಒಳ್ಳೆಯ ಕಾರ್ಯವನ್ನು ಮುಚ್ಚಿಡುತ್ತಾನೆ ಮತ್ತು ನನ್ನ ಕೆಟ್ಟ ಕಾರ್ಯವನ್ನು ಪ್ರಸಾರ ಮಾಡುತ್ತಾನೆ"[100]. [100] ಅತ್ತಬ್ರಾನೀ ಅದ್ದುಆದಲ್ಲಿ (3/1425 ಹದೀಸ್ ಸಂಖ್ಯೆ 1339). ಇಮಾಮ್ ಅಲ್ಬಾನಿ ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹಾದಲ್ಲಿ (7/377 ಹದೀಸ್ ಸಂಖ್ಯೆ 3137). ಅಲ್ಬಾನಿ ಹೇಳಿದರು: "ನಾನು ಹೇಳುತ್ತೇನೆ, ಈ ಹದೀಸಿನ ಸನದ್ ಉತ್ತಮವಾಗಿದೆ. ಅದರ ವರದಿಗಾರೆಲ್ಲರೂ ತಹ್ದೀಬ್ ಪುಸ್ತಕದ ವರದಿಗಾರರಾಗಿದ್ದಾರೆ".
137. "ಓ ಅಲ್ಲಾಹ್! ಪುನರುತ್ಥಾನ ದಿನ ನನ್ನನ್ನು ಅವಮಾನಿಸಬೇಡ"[101]. [101] ಅಹ್ಮದ್ ಮುಸ್ನದ್ನಲ್ಲಿ (29/596 ಹದೀಸ್ ಸಂಖ್ಯೆ 18056). ಮುಸ್ನದ್ ಪುಸ್ತಕದ ಸಂಶೋಧಕರು ಈ ಹದೀಸಿನ ಸನದ್ ಸಹೀಹ್ ಎಂದು ಹೇಳಿದ್ದಾರೆ. ತಬ್ರಾನಿ ಅಲ್-ಮುಅಜಮುಲ್ ಕಬೀರ್ನಲ್ಲಿ (3/20 ಹದೀಸ್ ಸಂಖ್ಯೆ 2524). ಅವರ ವರದಿಯ ಪದಗಳು ಹೀಗಿವೆ: "ಓ ಅಲ್ಲಾಹ್! ಪುನರುತ್ಥಾನ ದಿನ ನನ್ನನ್ನು ಅವಮಾನಿಸಬೇಡ ಮತ್ತು ಶಿಕ್ಷೆಯ ದಿನ ನನ್ನನ್ನು ನಿಂದಿಸಬೇಡ."
138. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಇಹಲೋಕ ಮತ್ತು ಪರಲೋಕದಲ್ಲಿ ಕ್ಷೇಮವನ್ನು ಬೇಡುತ್ತಾನೆ"[102]. [102] ಇಬ್ನು ಮಾಜಾ (ಹದೀಸ್ ಸಂಖ್ಯೆ 3851). ಇಮಾಮ್ ಅಲ್ಬಾನಿ ಈ ಹದೀಸನ್ನು ಸಹೀಹ್ ಇಬ್ನು ಮಾಜಾದಲ್ಲಿ (3/259) ಮತ್ತು ಸಿಲ್ಸಿಲತುಲ್ ಅಹಾದೀಸಿ ಸ್ಸಹೀಹಾದಲ್ಲಿ (ಹದೀಸ್ ಸಂಖ್ಯೆ 1138) ಸಹೀಹ್ ಎಂದು ಘೋಷಿಸಿದ್ದಾರೆ.
139. "ಓ ಅಲ್ಲಾಹ್! ನಾನು ನಿನ್ನೊಂದಿಗೆ ಪ್ರಯೋಜನವಿಲ್ಲದ ಜ್ಞಾನದಿಂದ, ಮೇಲಕ್ಕೇರದ ಕರ್ಮದಿಂದ, ಭಯಪಡದ ಹೃದಯದಿಂದ ಮತ್ತು ಕೇಳಲ್ಪಡದ ಮಾತಿನಿಂದ ಅಭಯ ಯಾಚಿಸುತ್ತೇನೆ"[103]. [103] ಇಬ್ನು ಹಿಬ್ಬಾನ್ (ಹದೀಸ್ ಸಂಖ್ಯೆ 2440 - ಮವಾರಿದ್). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹುಲ್ ಮವಾರಿದು ಝ್ಝಮ್ಆನ್ನಲ್ಲಿ (2/454 ಹದೀಸ್ ಸಂಖ್ಯೆ 2066) ಸಹೀಹ್ ಎಂದು ಘೋಷಿಸಿದ್ದಾರೆ.
140. "ಓ ಅಲ್ಲಾಹ್! ನಾನು ನಿನ್ನೊಂದಿಗೆ ದುಃಖ, ವ್ಯಥೆ, ಅಸಹಾಯಕತೆ, ಸೋಮಾರಿತನ, ಜಿಪುಣತೆ, ಅಂಜುಬುರುಕುತನ, ಋಣ ಬಾಧೆ ಮತ್ತು ಜನರ ಆಕ್ರಮಣದಿಂದ ರಕ್ಷೆ ಬೇಡುತ್ತೇನೆ"[104]. [104] ಬುಖಾರಿ (ಹದೀಸ್ ಸಂಖ್ಯೆ 6363). ಅನಸ್(ರ) ರವರು ಹೇಳಿದರು: "ನಾನು ಪ್ರವಾದಿ (ﷺ) ರವರ ಸೇವೆ ಮಾಡುತ್ತಿದ್ದೆ. ನಾನು ಅವರ ಬಳಿಗೆ ಹೋದಾಗಲೆಲ್ಲಾ ಅವರು ಹೀಗೆ ಪ್ರಾರ್ಥಿಸುತ್ತಿರುವುದನ್ನು ಕೇಳುತ್ತಿದ್ದೆ: ಓ ಅಲ್ಲಾಹ್! ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತೇನೆ..."
141. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನರಕದ ಶಿಕ್ಷೆಯಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನೊಂದಿಗೆ ಗೋರಿಯ ಶಿಕ್ಷೆಯಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನೊಂದಿಗೆ ಪ್ರತ್ಯಕ್ಷವಾಗಿರುವ ಹಾಗೂ ಪರೋಕ್ಷವಾಗಿರುವ ಪರೀಕ್ಷೆಗಳಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನೊಂದಿಗೆ ದಜ್ಜಾಲ್ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ"[105]. [105] ಮುಸ್ಲಿಮ್ (ಹದೀಸ್ ಸಂಖ್ಯೆ 2867) ಇದರಲ್ಲಿ ಹೀಗೆ ವರದಿಯಾಗಿದೆ: "ಅಲ್ಲಾಹನೊಂದಿಗೆ ನರಕ ಶಿಕ್ಷೆಯಿಂದ ಅಭಯ ಯಾಚಿಸಿರಿ..."
142. "ಓ ಅಲ್ಲಾಹ್! ನಾನು ನಿನ್ನೊಂದಿಗೆ ನಿನ್ನ ಮಾರ್ಗದಲ್ಲಿ ಹುತಾತ್ಮನಾಗುವ ಭಾಗ್ಯವನ್ನು ಬೇಡುತ್ತೇನೆ"[106]. [106] ಮುಸ್ಲಿಮ್ (ಹದೀಸ್ ಸಂಖ್ಯೆ 1909). ಈ ಪ್ರಾರ್ಥನೆಯನ್ನು ಪ್ರವಾದಿ (ﷺ) ರವರ ಈ ವಚನದಿಂದ ಆಯ್ದುಕೊಳ್ಳಲಾಗಿದೆ: "ಯಾರು ನಿಷ್ಕಳಂಕತೆಯಿಂದ ಅಲ್ಲಾಹನೊಂದಿಗೆ ಹುತಾತ್ಮತೆಯನ್ನು ಬೇಡುತ್ತಾನೋ ಅವನು ತನ್ನ ಹಾಸಿಗೆಯ ಮೇಲೆ ಸತ್ತರೂ ಅಲ್ಲಾಹು ಅವನನ್ನು ಹುತಾತ್ಮರ ಸ್ಥಾನದಲ್ಲಿ ಸೇರಿಸುತ್ತಾನೆ."
143. "ಓ ಅಲ್ಲಾಹ್! ನನ್ನನ್ನು ಕ್ಷಮಿಸು, ಓ ಅಲ್ಲಾಹ್! ಪುನರುತ್ಥಾನ ದಿನ ಜನರಲ್ಲಿ ನಿನ್ನ ಅನೇಕ ಸೃಷ್ಟಿಗಳಿಗಿಂತ ನನ್ನನ್ನು ಉತ್ತುಂಗಕ್ಕೇರಿಸು. ಓ ಅಲ್ಲಾಹ್! ನನ್ನ ಪಾಪಗಳನ್ನು ಕ್ಷಮಿಸು, ಪುನರುತ್ಥಾನ ದಿನದಂದು ಪ್ರತಿಷ್ಠಿತವಾದ ಒಂದು ಸ್ಥಳದಲ್ಲಿ ನನ್ನನ್ನು ಪ್ರವೇಶಗೊಳಿಸು"[107]. [107] ಬುಖಾರಿ (ಹದೀಸ್ ಸಂಖ್ಯೆ 1323), ಮುಸ್ಲಿಮ್ (ಹದೀಸ್ ಸಂಖ್ಯೆ 2498). ಇದನ್ನು ಪ್ರವಾದಿ (ﷺ) ರವರು ಉಬೈದ್ ಅಬೂ ಆಮಿರ್ ಮತ್ತು ಅಬೂ ಬುರ್ದಾ(ರ) ರವರಿಗಾಗಿ ಪ್ರಾರ್ಥಿಸಿದ ಪ್ರಾರ್ಥನೆಗಳಿಂದ ಉಲ್ಲೇಖಿಸಲಾಗಿದೆ.
144. "ಓ ಅಲ್ಲಾಹ್! ನೀನು ಮಾರ್ಗದರ್ಶನ ನೀಡಿದವರೂಂದಿಗೆ ನನಗೂ ಮಾರ್ಗದರ್ಶನ ನೀಡು. ನೀನು ಸೌಖ್ಯವನ್ನು ನೀಡಿದವರೂಂದಿಗೆ ನನಗೂ ಸೌಖ್ಯವನ್ನು ನೀಡು. ನೀನು ರಕ್ಷಣೆ ಮಾಡಿದವರೊಂದಿಗೆ ನನಗೂ ರಕ್ಷಣೆ ಮಾಡು. ನೀನು ನನಗೆ ನೀಡಿದುದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ನೀನು ವಿಧಿಸಿದವುಗಳಲ್ಲಿರುವ ಕೇಡಿನಿಂದ ನನ್ನನ್ನು ರಕ್ಷಿಸು. ಏಕೆಂದರೆ ನೀನು ವಿಧಿಸುವವನಾಗಿರುವೆ ಮತ್ತು ನಿನ್ನ ಮೇಲೆ ವಿಧಿಸುವವನಾರೂ ಇಲ್ಲ. ನೀನು ಯಾರನ್ನು ಮಿತ್ರನಾಗಿ ಮಾಡಿದ್ದೀಯೋ ಅವನು ನಿಂದಿತನಾಗಲಾರನು. ನೀನು ಯಾರನ್ನು ಶತ್ರುವನ್ನಾಗಿ ಮಾಡಿದ್ದೀಯೋ ಅವನು ಗೌರವ ಪಡೆಯಲಾರನು. ನೀನು ಅನುಗ್ರಹೀತನಾಗಿರುವೆ. ನಮ್ಮ ಪ್ರಭು ನೀನು ಅತ್ಯುನ್ನತನು[108." [108] ಅಹ್ಮದ್ (3/249 ಹದೀಸ್ ಸಂಖ್ಯೆ 1723). ಮುಸ್ನದ್ನ ಸಂಶೋಧಕರು ಹೇಳಿದರು (3/249): "ಈ ಹದೀಸಿನ ಸನದ್ ಸಹೀಹ್ ಆಗಿದೆ." ಈ ಪ್ರಾರ್ಥನೆಯು ಇನ್ನೊಂದು ವರದಿಯಲ್ಲಿ ನಿರೂಪಿಸಲಾದಂತೆ ವಿತ್ರ್ ನಮಾಝಿಗೆ ಸೀಮಿತವಾಗಿಲ್ಲ. ಆ ವರದಿಯಲ್ಲಿ ಹೀಗಿದೆ: ಅನಸ್ (ರ) ರವರು ಹೇಳಿದರು: "ಪ್ರವಾದಿ(ಸ) ರವರು ನಮಗೆ ಈ ಪ್ರಾರ್ಥನೆ ಕಲಿಸುತ್ತಿದ್ದರು...."
145. "ಓ ನನ್ನ ಪ್ರಭು! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು"[109]. [109] ಮುಸ್ಲಿಮ್ (ಹದೀಸ್ ಸಂಖ್ಯೆ 214). ಪ್ರವಾದಿ(ﷺ) ರವರೊಂದಿಗೆ ಕೇಳಲಾಯಿತು: "ಓ ಪ್ರವಾದಿಯವರೇ, ಜುದ್ಆನ್ ಎಂಬ ವ್ಯಕ್ತಿ ಜಾಹಿಲಿಯ್ಯಾ ಕಾಲದಲ್ಲಿ ಸಂಬಂಧಗಳನ್ನು ಜೋಡಿಸುತ್ತಿದ್ದನು ಮತ್ತು ನಿರ್ಗತಿಕರಿಗೆ ಉಣಿಸುತ್ತಿದ್ದನು. ಏನು ಇದು ಅವನಿಗೆ ಪ್ರಯೋಜನ ಕೊಡಬಹುದೇ? ಅವರು ಉತ್ತರಿಸಿದರು: ಇಲ್ಲ, ಇದು ಅವನಿಗೆ ಪ್ರಯೋಜನ ಕೊಡಲಾರದು. ಏಕೆಂದರೆ ಅವನು ಎಂದಿಗೂ ಓ ನನ್ನ ಪ್ರಭು! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು ಎಂದು ಹೇಳಲಿಲ್ಲ."
146. "ಮಹೋನ್ನತನಾದ ಅಲ್ಲಾಹನಲ್ಲಿ ನಾನು ಕ್ಷಮೆ ಬೇಡುತ್ತೇನೆ. ಅವನ ಹೊರತು ಬೇರೆ ನೈಜ ಆರಾಧ್ಯನಿಲ್ಲ. ಅವನು ಸದಾ ಜೀವಿಸಿರುವವನೂ ಸರ್ವವನ್ನೂ ನಿಯಂತ್ರಿಸುವವನೂ ಆಗಿರುವನು. ನಾನು ಅವನಡೆಗೆ ಪಶ್ಚಾತ್ತಾಪಪಟ್ಟು ಮರಳುವೆನು"[110]. [110] ಅತ್ತಿರ್ಮಿದಿ (ಹದೀಸ್ ಸಂಖ್ಯೆ 3577). ಈ ಹದೀಸನ್ನು ಇಮಾಮ್ ಅಲ್ಬಾನಿ ಸಹೀಹು ತ್ತಿರ್ಮಿದಿಯಲ್ಲಿ (3/469) ಸಹೀಹ್ ಎಂದು ಘೋಷಿಸಿದ್ದಾರೆ: "ಯಾರಾದರೂ ಅಲ್ಲಾಹನೊಂದಿಗೆ ಈ ಪ್ರಾರ್ಥನೆಯೊಂದಿಗೆ ಕ್ಷಮೆಯಾಚಿಸಿದರೆ ಅವನು ಯುದ್ಧಭೂಮಿಯಿಂದ ಹಿಂತಿರುಗಿ ಓಡಿದರೂ ಅಲ್ಲಾಹನು ಅವನನ್ನು ಕ್ಷಮಿಸುತ್ತಾನೆ."
147. "ಓ ಅಲ್ಲಾಹ್! ನನ್ನ ಎಲ್ಲ ಪಾಪಗಳನ್ನು ಕ್ಷಮಿಸು, ನನ್ನ ಹೃದಯದ ಕ್ರೋಧವನ್ನು ನಿವಾರಿಸು ಮತ್ತು ತಪ್ಪುದಾರಿಗೆಳೆಯುವ ಪರೀಕ್ಷೆಗಳಿಂದ ನನ್ನನ್ನು ರಕ್ಷಿಸು"[111]. [111] ಆಯಿಷಾ (ರ) ರವರಿಗೆ ಪ್ರವಾದಿ (ﷺ) ರವರ ಪ್ರಾರ್ಥನೆಯಿಂದ ಈ ಪ್ರಾರ್ಥನೆ ಆಯ್ದುಕೊಳ್ಳಲಾಗಿದೆ: "ಓ ಅಲ್ಲಾಹ್! ಅವಳ ಪಾಪಗಳನ್ನು ಕ್ಷಮಿಸು, ಅವಳ ಮನಸ್ಸಿನ ಕ್ರೋಧವನ್ನು ನಿವಾರಿಸು, ಮತ್ತು ಅವಳನ್ನು ತಪ್ಪುದಾರಿಗೆಳೆಯುವ ಪರೀಕ್ಷೆಗಳಿಂದ ರಕ್ಷಿಸು." ಈ ಹದೀಸನ್ನು ಇಮಾಮ್ ಇಬ್ನು ಅಸಾಕೀರ್ ಆಯಿಷಾ (ರ) ರಿಂದ ತಮ್ಮ ಸನದ್ನೊಂದಿಗೆ ಅಲ್ಅರ್ಬವೂನ ಫಿ ಮನಾಕಿಬಿ ಉಮ್ಮಹಾತಿಲ್ ಮೂಮಿನೀನ್ನಲ್ಲಿ ವರದಿ ಮಾಡಿದ್ದಾರೆ (ಪುಟ 85). ಇಬ್ನು ಅಸಾಕೀರ್ ಹೇಳಿದರು: ಈ ಹದೀಸ್ ಬಖಿಯ್ಯಾ ಇಬ್ನು ವಲೀದ್ ರವರ ಹದೀಸ್ಗಿಂತ ಹಸನ್ ಹಾಗೂ ಸಹೀಹ್ ಆಗಿದೆ. ಅವರಂತೆಯೇ ಇಬ್ನುಸ್ಸುನ್ನಿ ಅಮಲುಲ್ ಯೌಮಿ ವಲ್ಲೈಲಾ ದಲ್ಲಿ (ಹದೀಸ್ ಸಂಖ್ಯೆ 457) ವರದಿ ಮಾಡಿದ್ದಾರೆ. ಇಬ್ನುಸ್ಸುನ್ನಿಯವರ ಇನ್ನೊಂದು ಆವೃತ್ತಿಯಲ್ಲಿ ಹೀಗಿದೆ: ತಪ್ಪುದಾರಿಗೆಳೆಯುವ ಪರೀಕ್ಷೆಗಳಿಂದ ಪದದ ಬದಲಾಗಿ ಸೈತಾನನಿಂದ ನನ್ನನ್ನು ರಕ್ಷಿಸು ಎಂದಿದೆ. ಅದ್ದಈಫದಲ್ಲಿ ಇಮಾಮ್ ಅಲ್ಬಾನಿ ಯವರ ತಖ್ರೀಜ್ ಅನ್ನು ನೋಡಿರಿ (ಹದೀಸ್ ಸಂಖ್ಯೆ 4207). ಉಮ್ಮು ಸಲಮಾರಿಂದ ಈ ವರದಿಗೆ ಇಮಾಮ್ ಅಹ್ಮದ್ ರವರ ಬಳಿ ಸಾಕ್ಷಿ ಇದೆ (2/44 ಹದೀಸ್ ಸಂಖ್ಯೆ 26576). ಅವರ ವರದಿಯ ಪದಗಳು ಹೀಗಿವೆ: "ಹೇಳು, ಓ ಅಲ್ಲಾಹ್! ಮುಹಮ್ಮದ್ (ﷺ) ರವರ ಪ್ರಭುವೇ, ನನ್ನ ಪಾಪಗಳನ್ನು ಕ್ಷಮಿಸು, ನನ್ನ ಮನಸ್ಸಿನ ಕ್ರೋಧವನ್ನು ನಿವಾರಿಸು ಮತ್ತು ನಮ್ಮನ್ನು ಜೀವಂತವಿರಿಸುವವರೆಗೆ ತಪ್ಪುದಾರಿಗೆಳೆಯುವ ಪರೀಕ್ಷೆಗಳಿಂದ ರಕ್ಷಿಸು." ಈ ಹದೀಸನ್ನು ಇಮಾಮ್ ಅಲ್ ಹೈಸಮೀ ಮಜ್ಮಉ ಝ್ಝವಾಇದ್ನಲ್ಲಿ (10/27) ಹಸನ್ ಎಂದು ಘೋಷಿಸಿದ್ದಾರೆ. ಈ ಹದೀಸನ್ನು ಇಮಾಮ್ ತಬ್ರಾನಿ ಅಲ್ ಮುಅಜಮುಲ್ ಕಬೀರ್ನಲ್ಲಿ (23/338 ಹದೀಸ್ ಸಂಖ್ಯೆ 785) ವರದಿ ಮಾಡಿದ್ದಾರೆ. ಆದರೆ ಆ ವರದಿಯಲ್ಲಿ (ಮಾ ಅಹ್ಯಯ್ತನಾ) ಎಂಬ ಪದವಿಲ್ಲ. ಉಮ್ಮು ಹಾನಿಯರಿಂದ ಈ ವರದಿಗೆ ಸಾಕ್ಷಿ ಇದೆ. "ಓ ಪ್ರವಾದಿಯವರೇ! ಅಲ್ಲಾಹನ ಬಳಿ ಪ್ರಾರ್ಥಿಸಲು ನನಗೊಂದು ಪ್ರಾರ್ಥನೆಯನ್ನು ಕಲಿಸಿಕೊಡಿ." ಆಗ ಪ್ರವಾದಿ(ಸ) ರವರು ಹೇಳಿದರು: "ಓ ಅಲ್ಲಾಹ್! ನನ್ನ ಪಾಪಗಳನ್ನು ಕ್ಷಮಿಸು ಎಂದು ನೀನು ಹೇಳು...." ಹದೀಸ್ ಕೊನೆಯವರೆಗೆ. ಈ ವರದಿಯನ್ನು ಅಲ್-ಖರಾಇತೀ ಇಅ್ತಿಲಾಲುಲ್ ಖುಲೂಬ್ (ಹದೀಸ್ ಸಂಖ್ಯೆ 52), ಮತ್ತು ಮಸಾವಿಉಲ್ ಅಖ್ಲಾಕ್ನಲ್ಲಿ (ಹದೀಸ್ ಸಂಖ್ಯೆ 323) ವರದಿ ಮಾಡಿದ್ದಾರೆ.
148. "ಓ ಅಲ್ಲಾಹ್! ನಿನ್ನ ಪ್ರವಾದಿ (ﷺ) ರವರ ಚರ್ಯೆಯಲ್ಲಿ ನನ್ನನ್ನು ಜೀವಂತವಿರಿಸು ಮತ್ತು ಅವರ ಮಾರ್ಗದಲ್ಲಿಯೇ ನನ್ನನ್ನು ಮೃತಪಡಿಸು. ನೇರ ಮಾರ್ಗದಿಂದ ದಾರಿಗೆಡಿಸುವ ಪರೀಕ್ಷೆಗಳಿಂದ ನನ್ನನ್ನು ರಕ್ಷಿಸು"[112]. [112] ಈ ಹದೀಸನ್ನು ಇಮಾಮ್ ಬೈಹಕಿ ಅಲ್ ಕುಬ್ರಾದಲ್ಲಿ (5/95) ಇಬ್ನು ಉಮರ್ರವರ ಪ್ರಾರ್ಥನೆಯಿಂದ ಮೌಖೂಫ್ ಆಗಿ ವರದಿ ಮಾಡಿದ್ದಾರೆ. ಅದೇ ರೀತಿ ಇಬ್ನುಲ್ ಮುಲಖ್ಖಿನ್ ರವರು ಈ ವರದಿಯನ್ನು ಅಲ್ ಬದ್ರುಲ್ ಮುನೀರ್ (6/309) ನಲ್ಲಿ ವರದಿ ಮಾಡಿದ್ದಾರೆ ಮತ್ತು ಝಿಯಾರಿಂದ ನಕಲು ಮಾಡುತ್ತಾ ಈ ವರದಿಯ ಸನದ್ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇಬ್ನು ಮಸ್ಊದ್ (ರ)ರವರು ಹೇಳಿದರು: ನಿಮ್ಮಲ್ಲಿ ಯಾವುದೇ ವ್ಯಕ್ತಿ ಈ ಪ್ರಾರ್ಥನೆ ಹೇಳದೇ ಇರಲಾರ: ಓ ಅಲ್ಲಾಹ್! ನಾನು ನಿನ್ನೊಂದಿಗೆ ಪರೀಕ್ಷೆಗಳಿಂದ ರಕ್ಷೆ ಬೇಡುತ್ತೇನೆ. ಏಕೆಂದರೆ ನಿಮ್ಮಲ್ಲಿ ಪ್ರತಿಯೊಬ್ಬ ವ್ಯಕ್ತಿ ಪರೀಕ್ಷೆಗಳಿಗೆ ಬಲಿಯಾಗಿದ್ದಾನೆ. ಅಲ್ಲಾಹನು ಹೇಳುತ್ತಾನೆ "ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಒಂದು ಪರೀಕ್ಷೆ ಮಾತ್ರವಾಗಿದೆ". [ಅತ್ತಗಾಬುನ್ :15] ಆದುದರಿಂದ ನಿಮ್ಮಲ್ಲಿ ಯಾರಾದರೂ ರಕ್ಷೆ ಬೇಡುವುದಾದರೆ ಅವನು ಸನ್ಮಾರ್ಗದಿಂದ ದಾರಿಗೆಡಿಸುವ ಪರೀಕ್ಷೆಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ಈ ಹದೀಸನ್ನು ಇಬ್ನು ಜರೀರ್ ತಮ್ಮ ತಫ್ಸೀರ್ನಲ್ಲಿ (13/475 ಹದೀಸ್ ಸಂಖ್ಯೆ 15912) ವರದಿ ಮಾಡಿದ್ದಾರೆ. ಅದೇ ರೀತಿ ಇಬ್ನು ಬತ್ತಾಲ್ ತಮ್ಮ ಸಹೀಹ್ ಬುಖಾರಿಯ ವ್ಯಾಖ್ಯಾನದಲ್ಲಿ (4/13) ಈ ಹದೀಸನ್ನು ಪ್ರಸ್ತಾಪಿಸಿದ್ದಾರೆ.
149. "ಓ ಅಲ್ಲಾಹ್! ನೀನು ಇಬ್ರಾಹೀಮ್ರವರ ಕುಟುಂಬದ ಮೇಲೆ ಕೃಪೆ ವರ್ಷಸಿದಂತೆ ಮುಹಮ್ಮದ್(ಸ) ರವರ ಮೇಲೆ ಮತ್ತು ಅವರ ಪತ್ನಿಯರ ಹಾಗೂ ಅವರ ಸಂತಾನದ ಮೇಲೆ ಕೃಪೆ ವರ್ಷಿಸು. ನೀನು ಇಬ್ರಾಹೀಮ್ರವರ ಕುಟುಂಬದ ಮೇಲೆ ಬರ್ಕತ್ ಸುರಿಸಿದಂತೆ ಮುಹಮ್ಮದ್(ಸ) ರವರ ಮೇಲೆ ಮತ್ತು ಅವರ ಪತ್ನಿಯರ ಹಾಗೂ ಸಂತಾನದ ಮೇಲೆ ಬರ್ಕತ್ ಸುರಿಸು. ಖಂಡಿತವಾಗಿಯು ನೀನು ಸ್ತುತ್ಯರ್ಹನೂ ಪ್ರಶಂಸನೀಯನೂ ಆಗಿರುವೆ"[113]. [113] ಅಲ್ ಬುಖಾರಿ (ಹದೀಸ್ ಸಂಖ್ಯೆ 3370). ಆವರಣದಲ್ಲಿರುವ ಪದಗಳು ಅಬೂ ಹುರೈರಾ (ರ) ರವರ ಹದೀಸ್ನಿಂದಾಗಿದೆ. ಮುಸ್ಲಿಮ್ (ಹದೀಸ್ ಸಂಖ್ಯೆ 405).
ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಅವನ ಮಹಿಮೆ ಮತ್ತು ಅಧಿಕಾರದ ಹಿರಿಮೆಗೆ ಹೊಂದಿಕೊಳ್ಳುವಂತಿರುವ ಸ್ತುತಿಗಳು. ಓ ಅಲ್ಲಾಹ್! ನಮ್ಮ ಪ್ರವಾದಿ ಮುಹಮ್ಮದ್ (ﷺ) ರವರ ಮೇಲೆ, ಅವರ ಪತ್ನಿಯರ ಮೇಲೆ, ಅವರ ಸಹಾಬಾಗಳ ಮೇಲೆ ಮತ್ತು ಪ್ರತಿಫಲದ ದಿನದವರೆಗೆ ಸುಕೃತ್ಯವನ್ನು ಮಾಡುತ್ತಾ ಅವರನ್ನು ಅನುಸರಿಸುವವರ ಮೇಲೆ ನಿನ್ನ ಶಾಂತಿ ಮತ್ತು ಕೃಪೆಯನ್ನು ವರ್ಷಿಸು.
ಕುರ್ಆನ್ ಮತ್ತು ಸುನ್ನತ್ತಿನಿಂದ
ಅಲ್ಲಾಹನ ಅತ್ಯಂತ ಅಗತ್ಯವನ್ನು ಹೊಂದಿರುವ
ಶೈಖ್ ಸಈದ್ ಇಬ್ನ್ ಅಲೀ ಇಬ್ನ್ ವಹ್ಫ್ ಅಲ್ ಕಹ್ತಾನೀ
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
ಸೂರ ಅಲ್-ಅನ್ಕಬೂತ್ :51.
ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿರುವಂತೆ:
ಅಲ್ಲಾಹನ ಅತ್ಯಂತ ಅಗತ್ಯವನ್ನು ಹೊಂದಿರುವ
ಶೈಖ್ ಸಈದ್ ಇಬ್ನ್ ಅಲೀ ಇಬ್ನ್ ವಹ್ಫ್ ಅಲ್ ಕಹ್ತಾನೀ
“ಹೇಳಿರಿ: ಅವನು ಅಲ್ಲಾಹು; ಏಕೈಕನು." [14] ಬುಖಾರಿ, 4/95,(ಹದೀಸ್ ಸಂಖ್ಯೆ 3293) ಮುಸ್ಲಿಮ್ 4/2071 (ಹದೀಸ್ ಸಂಖ್ಯೆ 2691).
[18] ಮುಸ್ಲಿಮ್ 3/1618 (ಹದೀಸ್ ಸಂಖ್ಯೆ 2047).
ಶಪಿಸಲ್ಪಟ್ಟ ಸೈತಾನನಿಂದ ನಾನು ಅಲ್ಲಾಹನಲ್ಲಿ ಅಭಯವನ್ನು ಯಾಚಿಸುತ್ತೇನೆ. "ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ." [ಸೂರ ಅಲ್- ಬಕರಃ - ಸೂಕ್ತಿ: 255]
[ಸೂರಾ ಅಲ್-ಅಅ್ರಾಫ್ : ಸೂಕ್ತಿ 117-122].
[ಸೂರ ಯೂನುಸ್ - ಸೂಕ್ತಿ: 79-82].
[ಸೂರ ತ್ವಾಹಾ 65-70].
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ "ಹೇಳಿರಿ: ಓ ಸತ್ಯನಿಷೇಧಿಗಳೇ, ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ. ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ಮತ್ತು ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ."
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ "(ಓ ಪ್ರವಾದಿಯವರೇ!) ಹೇಳಿರಿ: ಅವನು ಅಲ್ಲಾಹು! ಏಕಮೇವನಾಗಿರುವನು. ಅಲ್ಲಾಹು ನಿರಪೇಕ್ಷಕನಾಗಿರುವನು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. ಮತ್ತು ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ."
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ ಹೇಳಿರಿ: ‘ಪ್ರಭಾತದ ಪ್ರಭುವಿನೊಂದಿಗೆ ನಾನು ಅಭಯವನ್ನು ಯಾಚಿಸುತ್ತಿರುವೆನು. ಅವನು ಸೃಷ್ಟಿಸಿದವುಗಳ ಕೆಡುಕಿನಿಂದ, ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ. ಗಂಟುಗಳ ಮೇಲೆ ಊದುವವರ (ಸ್ತ್ರೀಯರ) ಕೇಡಿನಿಂದ. ಮತ್ತು ಅಸೂಯೆಪಡುವವನ ಕೆಡುಕಿನಿಂದ ಅವನು ಅಸೂಯೆಪಡುವಾಗ (ನಾನು ಅಭಯ ಯಾಚಿಸುತ್ತೇನೆ)."
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ ಹೇಳಿರಿ: ನಾನು ಮಾನವರ ಪ್ರಭುವಿನಲ್ಲಿ ಅಭಯ ಯಾಚಿಸುತ್ತೇನೆ. ಮಾನವರ ಸಾಮ್ರಾಟನಲ್ಲಿ, ಮಾನವರ ನೈಜ ಆರಾಧ್ಯನಲ್ಲಿ, ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ, ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ, ಅವನು ಜಿನ್ನ್ಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ."
[24] ಮುಸ್ಲಿಮ್ 4/1728 (ಹದೀಸ್ ಸಂಖ್ಯೆ 2202).
1. ಅಸ್ಅಲುಲ್ಲಾಹಲ್ ಅದೀಮ್ ರಬ್ಬಲ್ ಅರ್ಶಿಲ್ ಅದೀಮ್ ಅಯ್ ಯಶ್ಫಿಯಕ್. ಅಂದರೆ "ನಿಮ್ಮನ್ನು ಗುಣಪಡಿಸಲೆಂದು ಸರ್ವಶಕ್ತನಾದ ಅಲ್ಲಾಹನಲ್ಲಿ, ಮಹಾ ಅರ್ಶಿನ ಒಡೆಯನಲ್ಲಿ ಬೇಡುತ್ತೇನೆ." (ಏಳು ಬಾರಿ)[23].
[27] ಮುಸ್ಲಿಮ್ 4/1728 (ಹದೀಸ್ ಸಂಖ್ಯೆ 2709).
“ಓ ಅಲ್ಲಾಹ್! ಏಳಾಕಾಶಗಳ ಒಡೆಯನೇ, ಭೂಮಿಯ ಒಡೆಯನೇ, ಮಹೋನ್ನತವಾದ ಅರ್ಶ್ನ ಒಡೆಯನೇ, ನಮ್ಮ ಒಡೆಯನೇ ಮತ್ತು ಎಲ್ಲಾ ವಸ್ತುಗಳ ಒಡೆಯನೇ, ದವಸಧಾನ್ಯಗಳನ್ನು ಸೀಳುವವನೇ, ತೌರಾತ್, ಇಂಜೀಲ್ ಮತ್ತು ಪುರ್ಕಾನನ್ನು ಅವತೀರ್ಣಗೊಳಿಸಿದವನೇ, ನೀನು ಅದರ ಮುಂಗುರಳನ್ನು ಹಿಡಿದುಕೊಂಡಿರುವ ಪ್ರತಿಯೊಂದು ವಸ್ತುವಿನ ಕೇಡಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನೀನು ಆದಿಯಾಗಿರುವೆ, ನಿನಗಿಂತ ಮೊದಲು ಏನೂ ಇಲ್ಲ. ನೀನು ಅಂತ್ಯನಾಗಿರುವೆ, ನಿನ್ನ ನಂತರ ಏನೂ ಇಲ್ಲ. ನೀನು ಬಹಿರಂಗನಾಗಿರುವೆ, ನಿನ್ನ ಮೇಲೆ ಏನೂ ಇಲ್ಲ. ನೀನು ಅಂತರಂಗವಾಗಿರುವೆ, ನಿನ್ನ ಸಮೀಪ ಏನೂ ಇಲ್ಲ”[30].
ಬಿಸ್ಮಿಲ್ಲಾಹಿ ಅರ್ಖೀಕ್ ಮಿನ್ ಕುಲ್ಲಿ ಶೈಇನ್ ಯುಅ್ಝೀಕ್ ವ ಮಿನ್ ಕುಲ್ಲಿ ನಫ್ಸಿನ್ ಅವ್ ಐನಿನ್ ಹಾಸಿದಿನ್ ಅಲ್ಲಾಹು ಯಶ್ಫೀಕ್ ಬಿಸ್ಮಿಲ್ಲಾಹಿ ಅರ್ಖೀಕ್ . "ಅಲ್ಲಾಹನ ಹೆಸರಿನಿಂದ ನಾನು ನಿನಗೆ ಮಂತ್ರಿಸುತ್ತೇನೆ, ನಿನಗೆ ತೊಂದರೆ ಕೊಡುವ ಎಲ್ಲ ವಸ್ತುಗಳಿಂದ, ಮತ್ತು ಪ್ರತಿಯೊಂದು ಆತ್ಮದ ಕೆಡುಕಿನಿಂದ ಅಥವಾ ಹೊಟ್ಟೆಕಿಚ್ಚಿನ ಕಣ್ಣಿನಿಂದ (ಕೆಡುಕಿನ ದೃಷ್ಟಿಯಿಂದ). ಅಲ್ಲಾಹನು ನಿನ್ನನ್ನು ಗುಣಪಡಿಸಲಿ, ಅಲ್ಲಾಹನ ಹೆಸರಿನಿಂದ ನಾನು ನಿನಗೆ ಮಂತ್ರಿಸುತ್ತೇನೆ."[31].
"ಓ ಅಲ್ಲಾಹ್, ನನ್ನ ಕೆಲಸ-ಕಾರ್ಯಗಳ ಸಂರಕ್ಷಣೆಯಾಗಿರುವ ನನ್ನ ಧರ್ಮವನ್ನು ನನಗೆ ಉತ್ತಮಗೊಳಿಸು, ನಾನು ಜೀವಿಸಬೇಕಾದ ನನ್ನ ಇಹಲೋಕವನ್ನು ನನಗೆ ಉತ್ತಮಗೊಳಿಸು, ನನ್ನ ಮರಳಿ ಹೋಗಬೇಕಾದ ನನ್ನ ಪರಲೋಕವನ್ನು ನನಗೆ ಉತ್ತಮಗೊಳಿಸು. ಜೀವನವನ್ನು ಎಲ್ಲಾ ರೀತಿಯ ಒಳಿತುಗಳಲ್ಲಿ ನನಗೆ ಹೆಚ್ಚಿಸಿಕೊಡು ಮತ್ತು ಮರಣವನ್ನು ಎಲ್ಲ ರೀತಿಯ ಕೆಡುಕುಗಳಿಂದ ನೆಮ್ಮದಿಯಾಗಿ ಮಾಡು" [64]. "ಓ ಅಲ್ಲಾಹ್, ನಿನ್ನ ಕರುಣೆಯನ್ನೇ ನಾನು ನಿರೀಕ್ಷಿಸುತ್ತೇನೆ. ಆದ್ದರಿಂದ ಕಣ್ಣು ಮಿಟುಕಿಸುವಷ್ಟೂ ಕಾಲ ಕೂಡ ನನ್ನನ್ನು ನನ್ನ ಪಾಡಿಗೆ ಬಿಡಬೇಡ. ನನ್ನ ಎಲ್ಲಾ ಕೆಲಸ-ಕಾರ್ಯಗಳನ್ನು ನನಗಾಗಿ ಸರಿಪಡಿಸು. ನಿನ್ನ ಹೊರತು ಬೇರೆ ಯಾರೂ ಆರಾಧ್ಯನಿಲ್ಲ" [65].
“ಪರೀಕ್ಷೆಯ ಗಾತ್ರಕ್ಕೆ ಅನುಗುಣವಾಗಿ ಪ್ರತಿಫಲ ಇರುತ್ತದೆ. ಅಲ್ಲಾಹು ಒಂದು ಜನತೆಯನ್ನು ಪ್ರೀತಿಸಿದರೆ, ಅವರನ್ನು ಪರೀಕ್ಷಿಸುತ್ತಾನೆ. ಯಾರು ಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಸಂತೃಪ್ತಿಯಿದೆ. ಯಾರು ಅಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಅಸಂತೃಪ್ತಿಯಿದೆ"[82].
"ಓ ಅಲ್ಲಾಹ್! ನಾನು ನಿನ್ನೊಂದಿಗೆ ದುಃಖ, ವ್ಯಥೆ, ಅಸಹಾಯಕತೆ, ಸೋಮಾರಿತನ, ಜಿಪುಣತೆ, ಅಂಜುಬುರುಕುತನ, ಋಣ ಬಾಧೆ ಮತ್ತು ಜನರ ಆಕ್ರಮಣದಿಂದ ರಕ್ಷೆ ಬೇಡುತ್ತೇನೆ"[87].
"ಓ ಅಲ್ಲಾಹ್, ನಿನ್ನ ಕರುಣೆಯನ್ನೇ ನಾನು ನಿರೀಕ್ಷಿಸುತ್ತೇನೆ. ಆದ್ದರಿಂದ ಕಣ್ಣು ಮಿಟುಕಿಸುವಷ್ಟೂ ಕಾಲ ಕೂಡ ನನ್ನನ್ನು ನನ್ನ ಪಾಡಿಗೆ ಬಿಡಬೇಡ. ನನ್ನ ಎಲ್ಲಾ ಕೆಲಸ-ಕಾರ್ಯಗಳನ್ನು ನನಗಾಗಿ ಸರಿಪಡಿಸು. ನಿನ್ನ ಹೊರತು ಬೇರೆ ಆರಾಧ್ಯನಿಲ್ಲ" [89].
"ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ಪರಮ ಪಾವನನು! ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದವನಾಗಿರುವೆನು" [90].
"ನೋವಿರುವ ಸ್ಥಳದಲ್ಲಿ ಕೈಯಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' (ಅಲ್ಲಾಹನ ನಾಮದಲ್ಲಿ) ಎಂದು ಹೇಳು. ನಂತರ ಏಳು ಬಾರಿ ಹೀಗೆ ಹೇಳು: ನಾನು ಅನುಭವಿಸುತ್ತಿರುವ ಮತ್ತು ಭಯಪಡುತ್ತಿರುವ ಈ ಕೆಡುಕಿನಿಂದ ನಾನು ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ರಕ್ಷೆ ಬೇಡುತ್ತೇನೆ" [92].
"ಕುಲ್ ಯಾ ಅಯ್ಯುಹಲ್ ಕಾಫಿರೂನ್"
ವುದೂ (ಅಂಗಸ್ನಾನ)
ಪ್ರವಾದಿ(ಸ) ರವರು ಹೇಳಿದರು:
"ಆ ದಿನ ಸಂಪತ್ತಾಗಲಿ, ಸಂತತಿಯಾಗಲಿ ಪ್ರಯೋಜನ ನೀಡುವುದಿಲ್ಲ." (88). "ಪಾಪರಹಿತವಾದ ಹೃದಯದೊಂದಿಗೆ ಅಲ್ಲಾಹನ ಬಳಿ ಬಂದವನಿಗೆ ಹೊರತು”.
Related books
All books
ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳು57 ಭಾಷೆಗಳುಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳು
ಈ ಪುಸ್ತಕವು ಕುರ್ಆನ್ ಮತ್ತು ಸುನ್ನತ್ತಿನಿಂದ ಆರಿಸಲಾದ ಝಿಕ್ರ್ಗಳ (ಸ್ಮರಣೆಗಳ) ಸಂಗ್ರಹವಾಗಿದ್ದು, ಇದರ ಸಹಾಯದಿಂದ ವಿವಿಧ ಸಮಯಗಳಲ್ಲಿ ಮತ್ತು ಸಂದರ್ಭಗಳಲ್ಲಿ ಝಿಕ್ರ್ಗಳನ್ನು ಸುಲಭವಾಗಿ ಪಠಿಸಬಹುದು. ಇದರಲ್ಲಿ ನಿದ್ದೆಯಿಂದ ಏಳುವಾಗಿನ, ವುಝೂವಿನ, ನಮಾಝ್ನ, ಪ್ರಯಾಣದ ಮತ್ತು ಇತರ ಪ್ರಾರ್ಥನೆಗಳಿವೆ. ಇದು ಅಲ್ಲಾಹನ ರಕ್ಷಣೆ ಮತ್ತು ಪಾಲನೆಯಲ್ಲಿರುವ ರೀತಿಯಲ್ಲಿ ತನ್ನನ್ನು ತಾನು ಭದ್ರಪಡಿಸಿಕೊಳ್ಳಲು ಮುಸಲ್ಮಾನನಿಗೆ ಸಹಾಯ ಮಾಡುತ್ತದೆ.
ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು85 ಭಾಷೆಗಳುಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು
ಶೇಖ್ ಅಬ್ದುರ್-ರಹಮಾನ್ ಇಬ್ನ್ ನಾಸಿರ್ ಅಸ್-ಸಾದಿ ರವರ 'ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು' ಎಂಬ ಪುಸ್ತಕವು, ಆಳವಾದ ಈಮಾನಿನ ದೃಷ್ಟಿಕೋನದಿಂದ ನಿಜವಾದ ಸಂತೋಷದ ಕಾರಣಗಳನ್ನು ವಿಶ್ಲೇಷಿಸುತ್ತದೆ. ಇದು ಈಮಾನ್ (ಸತ್ಯವಿಶ್ವಾಸ), ಸತ್ಕರ್ಮ, ಅಲ್ಲಾಹನ ಸ್ಮರಣೆ, ಸಂತೃಪ್ತಿ, ಅನುಗ್ರಹಗಳ ಕುರಿತು ಚಿಂತನೆ, ಪರೋಪಕಾರ, ಅಲ್ಲಾಹನಲ್ಲಿ ಭರವಸೆ (ತವಕ್ಕುಲ್), ಸಹನೆ, ಮತ್ತು ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡುವುದರ ಮೂಲಕ ಓದುಗರಿಗೆ ಹೃದಯದ ನೆಮ್ಮದಿಯೆಡೆಗೆ ದಾರಿ ತೋರಿಸುತ್ತದೆ. ಈ ಕೃತಿಯು ತನ್ನ ಸುಂದರವಾದ ಶೈಲಿಯ ಮೂಲಕ, ಜೀವನದ ಏರಿಳಿತಗಳ ನಡುವೆಯೂ ನೆಮ್ಮದಿಯ, ಸಮತೋಲಿತ ಮತ್ತು ಸಂತೋಷದ ಜೀವನಕ್ಕಾಗಿ ಒಂದು ಮಾರ್ಗಸೂಚಿಯನ್ನು ನಮ್ಮ ಮುಂದಿಡುತ್ತದೆ.
أخطاء يرتكبها بعض الحجاج21 ಭಾಷೆಗಳುأخطاء يرتكبها بعض الحجاج
رسالة لطيفة لتسليط الضوء على الأخطاء الشائعة التي يقع فيها بعض الحجاج أثناء أداء مناسك الحج. من إحرام وطواف وسعي ووقوف بعرفة ورمي للجمرات وغيرها، مع تصحيحها بما ورد في القرآن والسنة، مع الضرورة على اتباع هدي النبي صلى الله عليه وسلم في كل الشعائر لتحقيق القبول عند الله والصحة في عبادته.
ಇಸ್ಲಾಮ್ ಧರ್ಮದ ಸಂಕ್ಷಿಪ್ತ ಸಂದೇಶ — ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ61 ಭಾಷೆಗಳುಇಸ್ಲಾಮ್ ಧರ್ಮದ ಸಂಕ್ಷಿಪ್ತ ಸಂದೇಶ — ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಇಸ್ಲಾಮ್ (ಪುರಾವೆ ಸಾಕ್ಷ್ಯಾಧಾರಗಳಿಲ್ಲದ ಪ್ರತಿ)[1] [1] ಇದರಲ್ಲಿರುವ ಪ್ರತಿಯೊಂದು ವಿಷಯಕ್ಕೂ ಪವಿತ್ರ ಕುರ್ಆನ್ ಮತ್ತು ಪ್ರವಾದಿಯವರ ಸುನ್ನತ್ ನಿಂದ ಪುರಾವೆಗಳನ್ನು ಒಳಗೊಂಡಿರುವ ಈ ಪುಸ್ತಿಕೆಯ ಇನ್ನೊಂದು ಪ್ರತಿಯನ್ನು ಈ ಲಿಂಕ್ ಮೂಲಕ ಓದಬಹುದು: https://islamhouse.com/ar/books/2830071. ಇದು ಇಸ್ಲಾಮ್ ಧರ್ಮದ ಸಂಕ್ಷಿಪ್ತ ಪರಿಚಯವನ್ನು ಹೊಂದಿರುವ ಪ್ರಮುಖ ಸಂದೇಶವಾಗಿದೆ. ಇದು ಇಸ್ಲಾಮ್ ಧರ್ಮದ ಪ್ರಮುಖ ಮೂಲಾಧಾರಗಳು, ಬೋಧನೆಗಳು ಮತ್ತು ಸದ್ಗುಣಗಳನ್ನು ಅದರ ಮೂಲ ಆಧಾರ ಗ್ರಂಥಗಳಾದ ಪವಿತ್ರ ಕುರ್ಆನ್ ಮತ್ತು ಸುನ್ನತ್ (ಪ್ರವಾದಿಚರ್ಯೆ) ನಿಂದ ವಿವರಿಸುತ್ತದೆ. ಧರ್ಮವನ್ನು ಅನುಸರಿಸಿ ಜೀವಿಸಲು ಬದ್ಧರಾಗಿರುವ ಎಲ್ಲಾ ಮುಸ್ಲಿಮರು ಮತ್ತು ಮುಸ್ಲಿಮೇತರರಿಗೆ ಅವರದ್ದೇ…