ಕೆಲವು ಹಾಜಿಗಳಿಂದ ಸಂಭವಿಸುವ ಪ್ರಮಾದಗಳು
ಗೌರವಾನ್ವಿತ ಶೈಖ್, ಅಲ್ಲಾಮಾ ಅಲ್ಲಾಹು ಅವರಿಗೂ, ಅವರ ತಂದೆ-ತಾಯಿಗಳಿಗೂ ಎಲ್ಲಾ ಮುಸ್ಲಿಮರಿಗೂ ಕ್ಷಮಿಸಲಿ. ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ ಸರ್ವಲೋಕಗಳ ಒಡೆಯನಾದ ಅಲ್ಲಾಹುವಿಗೆ ಸರ್ವಸ್ತುತಿಗಳು. ಪ್ರವಾದಿಗಳ ಅಂತಿಮ ಮುದ್ರೆಯವರಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಅನುಚರರ ಮೇಲೆ ಮತ್ತು ಪುನರುತ್ಥಾನದ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಅಲ್ಲಾಹುವಿನ ಶಾಂತಿ ಮತ್ತು ಆಶೀರ್ವಾದಗಳು ಇರಲಿ. ಮುಂದುವರಿದು ಹೇಳುವುದೇನೆಂದರೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹುವಿನ ಸಂದೇಶವಾಹಕರಲ್ಲಿ ನಿಮಗೆ ಅತ್ಯುತ್ತಮ ಮಾದರಿಯಿದೆ, ಅಲ್ಲಾಹುವನ್ನು ಮತ್ತು ಅಂತಿಮ ದಿನವನ್ನು ನಿರೀಕ್ಷಿಸುವವರಿಗೆ ಮತ್ತು ಅಲ್ಲಾಹುವನ್ನು ಹೆಚ್ಚಾಗಿ…
These files are generated automatically from the book's text; their layout may differ from the printed edition.
ಕೆಲವು ಹಾಜಿಗಳಿಂದ ಸಂಭವಿಸುವ ಪ್ರಮಾದಗಳು
ಗೌರವಾನ್ವಿತ ಶೈಖ್, ಅಲ್ಲಾಮಾ
ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್
ಅಲ್ಲಾಹು ಅವರಿಗೂ, ಅವರ ತಂದೆ-ತಾಯಿಗಳಿಗೂ ಎಲ್ಲಾ ಮುಸ್ಲಿಮರಿಗೂ ಕ್ಷಮಿಸಲಿ.
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ ಸರ್ವಲೋಕಗಳ ಒಡೆಯನಾದ ಅಲ್ಲಾಹುವಿಗೆ ಸರ್ವಸ್ತುತಿಗಳು. ಪ್ರವಾದಿಗಳ ಅಂತಿಮ ಮುದ್ರೆಯವರಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಅನುಚರರ ಮೇಲೆ ಮತ್ತು ಪುನರುತ್ಥಾನದ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಅಲ್ಲಾಹುವಿನ ಶಾಂತಿ ಮತ್ತು ಆಶೀರ್ವಾದಗಳು ಇರಲಿ. ಮುಂದುವರಿದು ಹೇಳುವುದೇನೆಂದರೆ:
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹುವಿನ ಸಂದೇಶವಾಹಕರಲ್ಲಿ ನಿಮಗೆ ಅತ್ಯುತ್ತಮ ಮಾದರಿಯಿದೆ, ಅಲ್ಲಾಹುವನ್ನು ಮತ್ತು ಅಂತಿಮ ದಿನವನ್ನು ನಿರೀಕ್ಷಿಸುವವರಿಗೆ ಮತ್ತು ಅಲ್ಲಾಹುವನ್ನು ಹೆಚ್ಚಾಗಿ ಸ್ಮರಿಸುವವರಿಗೆ." [ಅಲ್-ಅಹ್ಝಾಬ್: 21], ಮತ್ತು ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಆದ್ದರಿಂದ ನೀವು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹುವಿನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಡಿರಿ, ಮತ್ತು ಅವನನ್ನು ಅನುಸರಿಸಿ. ನೀವು ಸನ್ಮಾರ್ಗವನ್ನು ಪಡೆಯಬಹುದು. [ಅಲ್-ಅಅ್ರಾಫ್:158] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಹೇಳಿರಿ: 'ನೀವು ಅಲ್ಲಾಹುವನ್ನು ಪ್ರೀತಿಸುವುದಾದರೆ, ನನ್ನನ್ನು ಅನುಸರಿಸಿ, ಅಲ್ಲಾಹು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಮತ್ತು ಅಲ್ಲಾಹು ಕ್ಷಮಿಸುವವನೂ, ಕರುಣೆ ತೋರುವವನೂ ಆಗಿದ್ದಾನೆ'." [ಆಲ್ ಇಮ್ರಾನ್: 31], ಮತ್ತು ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಆದ್ದರಿಂದ ಅಲ್ಲಾಹುವಿನ ಮೇಲೆ ಭರವಸೆ ಇಡಿರಿ. ಖಂಡಿತವಾಗಿಯೂ, ನೀವು ಸ್ಪಷ್ಟವಾದ ಸತ್ಯದ ಮೇಲೆ ಇದ್ದೀರಿ." [ಅನ್ನಮ್ಲ್: 79], ಮತ್ತು ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಸತ್ಯದ ನಂತರ ದುರ್ಮಾರ್ಗವಲ್ಲದೆ ಬೇರೇನಿದೆ? ಹಾಗಿದ್ದೂ ನೀವು (ಸತ್ಯದಿಂದ) ತಿರುಗಿಸಲ್ಪಡುತ್ತಿರುವುದು ಹೇಗೆ?" [ಯೂನುಸ್: 32].
ಆದ್ದರಿಂದ ಪ್ರವಾದಿ (ಸ) ರವರ ಚರ್ಯೆ ಮತ್ತು ಅವರ ಮಾರ್ಗಕ್ಕೆ ವಿರುದ್ಧವಾದ ಎಲ್ಲವೂ ಅಸಿಂಧು ಮತ್ತು ದುರ್ಮಾರ್ಗವಾಗಿವೆ. ಅದನ್ನು ಮಾಡುವವನಿಗೇ ಅದನ್ನು ಹಿಂತಿರುಗಿಸಲಾಗುತ್ತದೆ. ಪ್ರವಾದಿ (ಸ) ರವರು ಹೇಳುತ್ತಾರೆ: "ಯಾರು ನಮ್ಮ ಆದೇಶವಿಲ್ಲದ ಒಂದು ಕರ್ಮವನ್ನು ಮಾಡುತ್ತಾನೋ, ಅದು ತಿರಸ್ಕರಿಸಲ್ಪಡುತ್ತದೆ."[1] ಅಂದರೆ: ಅದರ ವಕ್ತಾರನ ಕಡೆಗೇ ಹಿಂತಿರುಗಿಸಲಾಗುತ್ತದೆ, ಅವರಿಂದ ಸ್ವೀಕರಿಸಲ್ಪಡುವುದಿಲ್ಲ. [1] ಇದನ್ನು ಮುಸ್ಲಿಂ 'ಕಿತಾಬುಲ್-ಅಖ್ದಿಯಾ', 'ಬಾಬ್ ನಖ್ದಿಲ್-ಅಹ್ಕಾಮಿಲ್-ಬಾತಿಲ' ದಲ್ಲಿ ವರದಿ ಮಾಡಿದ್ದಾರೆ, ಸಂಖ್ಯೆ (1718/18). ಬುಖಾರಿ 'ಕಿತಾಬು ಸ್ಸುಲ್ಹ್', 'ಬಾಬ್ ಇಧಾ ಇಸ್ತಲಹೂ ಅಲಾ ಸುಲ್ಹಿನ್ ಜೌರಿನ್ ಫ ಸ್ಸುಲ್ಹು ಮರ್ದೂದ್' ದಲ್ಲಿ ಆಯಿಷಾ (ರ) ರಿಂದ ಇದೇ ಅರ್ಥದ ಹದೀಸನ್ನು ವರದಿ ಮಾಡಿದ್ದಾರೆ, ಸಂಖ್ಯೆ (2697).
ಖಂಡಿತವಾಗಿಯೂ ಕೆಲವು ಮುಸ್ಲಿಮರು - ಅಲ್ಲಾಹು ಅವರಿಗೆ ಮಾರ್ಗದರ್ಶನ ನೀಡಲಿ ಮತ್ತು ಯಶಸ್ಸನ್ನು ನೀಡಲಿ - ಅನೇಕ ಆರಾಧನೆಗಳಲ್ಲಿ ಅಲ್ಲಾಹುವಿನ ಗ್ರಂಥ ಮತ್ತು ಅವನ ಪ್ರವಾದಿ (ಸ) ರವರ ಸುನ್ನತ್ತಿನ ಮೇಲೆ ಆಧಾರಿತವಲ್ಲದ ಕರ್ಮಗಳನ್ನು ಮಾಡುತ್ತಾರೆ. ವಿಶೇಷವಾಗಿ, ಜ್ಞಾನವಿಲ್ಲದೆ ಫತ್ವಾ ನೀಡಲು ಧಾವಿಸುವವರು ಹೆಚ್ಚಾಗಿರುವ ಈ ಹಜ್ನ ವಿಷಯದಲ್ಲಿ. ಅವರು ಈ ವಿಷಯದಲ್ಲಿ ಎಷ್ಟರಮಟ್ಟಿಗೆ ಮುಂದುವರಿದಿದ್ದಾರೆ ಎಂದರೆ ಫತ್ವಾದ ಸ್ಥಾನವು ಕೆಲವು ಜನರ ಮಟ್ಟಿಗೆ ಖ್ಯಾತಿ ಮತ್ತು ಪ್ರಸಿದ್ಧಿಗಾಗಿರುವ ವ್ಯಾಪಾರವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಎಷ್ಟೋ ದಾರಿತಪ್ಪುವ ಮತ್ತು ದಾರಿ ತಪ್ಪಿಸುವ ಘಟನೆಗಳು ಜರುಗಿವೆ. ಒಬ್ಬ ಮುಸ್ಲಿಮನ ಕರ್ತವ್ಯವೇನೆಂದರೆ, ಅವನ ಬಳಿ ಅಲ್ಲಾಹುವಿಗೆ ಅಭಿಮುಖವಾಗಿ ನಿಲ್ಲುವಂತಹ ಜ್ಞಾನವಿಲ್ಲದಿದ್ದರೆ ಅವನು ಫತ್ವಾ ನೀಡಲು ಮುಂದಾಗಬಾರದು. ಏಕೆಂದರೆ ಅವನು ಅಲ್ಲಾಹುವಿನ ಪರವಾಗಿ ತಲುಪಿಸಿಕೊಡುವವನ ಮತ್ತು ಮಾತನಾಡುವವನ ಸ್ಥಾನದಲ್ಲಿದ್ದಾನೆ. ಆದ್ದರಿಂದ ಅವನು ಫತ್ವಾ ನೀಡುವಾಗ, ಪ್ರವಾದಿ (ಸ) ರವರ ಬಗ್ಗೆ ಅಲ್ಲಾಹು ಹೇಳಿದ ಮಾತನ್ನು ನೆನಪಿಸಿಕೊಳ್ಳಲಿ: "ಮತ್ತು ಅವರೇನಾದರೂ (ಪ್ರವಾದಿಯವರು) ನಮ್ಮ ಮೇಲೆ ಕೆಲವು ಮಾತುಗಳನ್ನು ರಚಿಸಿ ಹೇಳುತ್ತಿದ್ದರೆ, ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು, ನಂತರ ನಾವು ಅವರ ಜೀವನಾಳವನ್ನು ಕತ್ತರಿಸುತ್ತಿದ್ದೆವು, ಮತ್ತು ಅವರನ್ನು (ನಮ್ಮಿಂದ) ತಡೆಯುವವರು ನಿಮ್ಮಲ್ಲಿ ಯಾರೂ ಇರಲಾರರು." [ಅಲ್-ಹಾಕ್ಕ: 44-47], ಮತ್ತು ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ತಾವು ಹೇಳಿರಿ: 'ನನ್ನ ಪರಿಪಾಲಕ ರಬ್ ನಿಷೇಧಿಸಿರುವುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಅಶ್ಲೀಲಕೃತ್ಯಗಳು, ಪಾಪಗಳು, ಅನ್ಯಾಯವಾದ ದಬ್ಬಾಳಿಕೆಗಳು, ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಇಳಿಸಿಕೊಡದ ವಸ್ತುಗಳನ್ನು ಅವನಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ಅಲ್ಲಾಹುವಿನ ಬಗ್ಗೆ ನಿಮ್ಮ ತಿಳಿದಿಲ್ಲದ ವಿಷಯಗಳನ್ನು ಹೇಳುವುದು ಮಾತ್ರವಾಗಿವೆ.'" [ಅಲ್-ಅಅ್ರಾಫ್: 33].
ಹಜ್ ಯಾತ್ರಿಕರಿಂದ ಸಂಭವಿಸುವ ಹೆಚ್ಚಿನ ತಪ್ಪುಗಳು ಸಂಭವಿಸುವುದು ಈ ಕೆಳಗಿನ ಕಾರಣಗಳಿಂದ ಆಗಿವೆ - ಅಂದರೆ: ಜ್ಞಾನವಿಲ್ಲದೆ ಫತ್ವಾ ನೀಡುವುದರಿಂದಲೂ ಜನಸಾಮಾನ್ಯರು ಯಾವುದೇ ಪುರಾವೆಯಿಲ್ಲದೆ ಒಬ್ಬರನ್ನೊಬ್ಬರು ಅನುಕರಿಸುವುದರಿಂದಲೂ ಆಗಿವೆ.
ನಾವು - ಅಲ್ಲಾಹುವಿನ ಸಹಾಯದಿಂದ - ತಪ್ಪುಗಳು ಹೆಚ್ಚಾಗಿ ಕಂಡುಬರುವ ಕೆಲವು ವಿಷಯಗಳಲ್ಲಿ ಸುನ್ನತ್ ಏನೆಂದು ವಿವರಿಸಿಕೊಡುತ್ತೇವೆ. ಅದರೊಂದಿಗೆ ತಪ್ಪುಗಳ ಬಗ್ಗೆಯೂ ಎಚ್ಚರಿಸುತ್ತೇವೆ. ಅಲ್ಲಾಹುವಿನಲ್ಲಿ ನಾವು ಸಹಾಯವನ್ನು ಕೇಳುತ್ತೇವೆ ಮತ್ತು ಇದು ನಮ್ಮ ಮುಸ್ಲಿಂ ಸಹೋದರರಿಗೆ ಪ್ರಯೋಜನಕಾರಿಯಾಗಲಿ ಎಂದು ಬೇಡುತ್ತೇವೆ; ಖಂಡಿತವಾಗಿಯೂ ಅವನು ಉದಾರಿಯೂ ಗೌರವಾನ್ವಿತನೂ ಆಗಿದ್ದಾನೆ.
ಇಹ್ರಾಮ್ ಮತ್ತು ಅದರಲ್ಲಿನ ತಪ್ಪುಗಳು
ಬುಖಾರಿ, ಮುಸ್ಲಿಮ್ ಮತ್ತು ಇತರ ಗ್ರಂಥಗಳಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಪ್ರವಾದಿ (ಸ) ರವರು ಮದೀನಾದ ಜನರಿಗೆ 'ಧುಲ್-ಹುಲೈಫಾ', ಶಾಮ್ನ (ಸಿರಿಯಾ ಮತ್ತು ಆಸುಪಾಸಿನ) ಜನರಿಗೆ 'ಜುಹ್ಫಾ', ನಜ್ದ್ನ ಜನರಿಗೆ 'ಖರ್ನುಲ್-ಮನಾಝಿಲ್', ಮತ್ತು ಯಮನ್ನ ಜನರಿಗೆ 'ಯಲಮ್ಲಮ್' ಅನ್ನು ಮೀಖಾತ್ (ಇಹ್ರಾಮ್ಗೆ ಪ್ರವೇಶಿಸುವ ಸ್ಥಳ) ಆಗಿ ನಿಗದಿಪಡಿಸಿದರು. ಮತ್ತು ಹೇಳಿದರು: "ಇವು ಅವರಿಗೆ (ಆ ಸ್ಥಳಗಳ ನಿವಾಸಿಗಳಿಗೆ) ಮತ್ತು ಅವರ ಹೊರತಾದವರ ಪೈಕಿ ಹಜ್ ಮತ್ತು ಉಮ್ರಾ ಮಾಡಲು ಬಯಸುವವರು ಆ ದಾರಿಯಾಗಿ ಬಂದರೆ ಅವರಿಗೆ (ಮೀಖಾತ್ ಆಗಿರುತ್ತದೆ)."[2] [2] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮಹಲ್ಲು ಅಹ್ಲಿ ಶ್ಶಾಮ್, ಸಂಖ್ಯೆ (1526), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಮವಾಖೀತುಲ್-ಹಜ್, ಸಂಖ್ಯೆ (1181) ರಲ್ಲಿ ವರದಿ ಮಾಡಿದ್ದಾರೆ.
ಆಯಿಷಾ (ರ) ರಿಂದ ವರದಿ. ಪ್ರವಾದಿ (ಸ) ರವರು ಇರಾಕಿನ ಜನರಿಗೆ 'ಧಾತ್ ಇರ್ಖ್' ಅನ್ನು ಮೀಖಾತ್ ಆಗಿ ನಿಗದಿಪಡಿಸಿದರು. ಇದನ್ನು ಅಬೂ ದಾವೂದ್ ಮತ್ತು ನಸಾಯಿ[3] ವರದಿ ಮಾಡಿದ್ದಾರೆ. [3] ಇದನ್ನು ಅಬೂ ದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಫಿಲ್-ಮವಾಖೀತ್, ಸಂಖ್ಯೆ (1739), ಮತ್ತು ನಸಾಯಿ, ಕಿತಾಬುಲ್-ಮನಾಸಿಕ್, ಬಾಬ್ ಮೀಖಾತು ಅಹ್ಲಿಲ್-ಇರಾಕ್, ಸಂಖ್ಯೆ (2657) ರಲ್ಲಿ ವರದಿ ಮಾಡಿದ್ದಾರೆ.
ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಅಬ್ದುಲ್ಲಾ ಬಿನ್ ಉಮರ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು: "ಮದೀನಾದ ಜನರು ಧುಲ್-ಹುಲೈಫಾದಿಂದ ಇಹ್ಲಾಲ್ (ತಲ್ಬಿಯತ್ ಹೇಳುವುದು) ಮಾಡಬೇಕು, ಶಾಮ್ನ ಜನರು ಜುಹ್ಫಾದಿಂದ ಇಹ್ಲಾಲ್ ಮಾಡಬೇಕು, ಮತ್ತು ನಜ್ದ್ನ ಜನರು ಖರ್ನ್ನಿಂದ ಇಹ್ಲಾಲ್ ಮಾಡಬೇಕು." ಹದೀಸ್[4]. [4] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮೀಖಾತು ಅಹ್ಲಿಲ್-ಮದೀನಾ, ಸಂಖ್ಯೆ (1525), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಮವಾಖೀತುಲ್-ಹಜ್ ವಲ್-ಉಮ್ರಾ, ಸಂಖ್ಯೆ (1182/13) ರಲ್ಲಿ ವರದಿ ಮಾಡಿದ್ದಾರೆ.
ಇವು ಪ್ರವಾದಿ (ಸ) ನಿಗದಿಪಡಿಸಿದ ಮೀಖಾತ್ಗಳು, ಶಾಸನಕರ್ತರಿಂದ (ಅಲ್ಲಾಹು ಮತ್ತು ಅವನ ಸಂದೇಶವಾಹಕರಿಂದ) ಬಂದಿರುವ ದೈವಿಕವಾಗಿ ನಿಗದಿಪಡಿಸಿದ ಶಾಸನಬದ್ಧ ಗಡಿಗಳಾಗಿವೆ. ಇವುಗಳನ್ನು ಬದಲಾಯಿಸುವುದಾಗಲಿ, ಉಲ್ಲಂಘಿಸುವುದಾಗಲಿ, ಅಥವಾ ಹಜ್ ಅಥವಾ ಉಮ್ರಾ ಮಾಡಲು ಬಯಸುವವರು ಇಹ್ರಾಮ್ ಇಲ್ಲದೆ ಇವುಗಳನ್ನು ದಾಟುವುದಾಗಲಿ ಅನುಮತಿಸಲಾಗಿಲ್ಲ. ಏಕೆಂದರೆ ಇದು ಅಲ್ಲಾಹುವಿನ ಗಡಿಗಳನ್ನು ಮೀರುವುದಾಗಿದೆ.ಅಲ್ಲಾಹು ಹೇಳುತ್ತಾನೆ: "ಮತ್ತು ಯಾರು ಅಲ್ಲಾಹುವಿನ ಗಡಿಗಳನ್ನು ಮೀರುತ್ತಾರೋ, ಅವರೇ ಅಕ್ರಮಿಗಳು." [ಅಲ್-ಬಖರ: 229], ಮತ್ತು ಇಬ್ನ್ ಉಮರ್ (ರ) ರವರ ಹದೀಸ್ನಲ್ಲಿ ಪ್ರವಾದಿ (ಸ) ಹೇಳುತ್ತಾರೆ: "ಮದೀನಾದ ಜನರು ಇಹ್ಲಾಲ್ ಮಾಡಬೇಕು... ಶಾಮ್ನ ಜನರು ಇಹ್ಲಾಲ್ ಮಾಡಬೇಕು... ಮತ್ತು ನಜ್ದ್ನ ಜನರು ಇಹ್ಲಾಲ್ ಮಾಡಬೇಕು", ಇದು ಆದೇಶದ ರೂಪದಲ್ಲಿರುವ ವರದಿಯಾಗಿದೆ. ಇಹ್ಲಾಲ್ ಎಂದರೆ ತಲ್ಬಿಯವನ್ನು ಗಟ್ಟಿಯಾಗಿ ಹೇಳುವುದು. ಇದು ಇಹ್ರಾಮ್ಗೆ ಪ್ರವೇಶಿಸಿದ ನಂತರವೇ ಆಗಿರುತ್ತದೆ.
ಆದ್ದರಿಂದ, ಹಜ್ ಅಥವಾ ಉಮ್ರಾ ಮಾಡಲು ಬಯಸುವವರು ಈ ಮೀಖಾತ್ಗಳ ಮೂಲಕ ಹಾದು ಹೋದರೆ ಅಥವಾ ಅವುಗಳ ಸಮೀಪಕ್ಕೆ ಬಂದರೆ, ಅವರು ಅಲ್ಲಿಂದ ಇಹ್ರಾಮ್ಗೆ ಪ್ರವೇಶಿಸುವುದು ಕಡ್ಡಾಯವಾಗಿದೆ. ಅವರು ಭೂಮಾರ್ಗ, ಸಮುದ್ರ ಮಾರ್ಗ ಅಥವಾ ವಾಯು ಮಾರ್ಗದ ಮೂಲಕ ಬಂದರೂ ಸರಿ.
ಭೂಮಾರ್ಗದ ಮೂಲಕ ಬರುವವರು, ಆ ಸ್ಥಳದ ಮೂಲಕ ಸಾಗುವಾಗ ಅಲ್ಲಿ ಇಳಿಯಬೇಕು ಅಥವಾ ಅದರ ಮೂಲಕ ಸಾಗದಿದ್ದರೆ ಅದಕ್ಕೆ ಸಮಾನಾಂತರದಲ್ಲಿರುವ ಸ್ಥಳದಲ್ಲಿ ಇಳಿಯಬೇಕು. ಇಹ್ರಾಮ್ಗೆ ಪ್ರವೇಶಿಸುವಾಗ ಮಾಡಬೇಕಾದ ಕಾರ್ಯಗಳನ್ನು ಮಾಡಬೇಕು. ಉದಾಹರಣೆಗೆ ಸ್ನಾನ ಮಾಡುವುದು, ದೇಹಕ್ಕೆ ಸುಗಂಧ ಹಚ್ಚುವುದು, ಮತ್ತು ಇಹ್ರಾಮ್ನ ಬಟ್ಟೆಗಳನ್ನು ಧರಿಸುವುದು. ನಂತರ ಅಲ್ಲಿಂದ ಹೊರಡುವ ಮೊದಲು ಇಹ್ರಾಮ್ಗೆ ಪ್ರವೇಶಿಸಬೇಕು.
ಸಮುದ್ರ ಮಾರ್ಗದಿಂದ ಬರುವವರು, ಹಡಗು ಮೀಖಾತ್ನ ಸಮಾನಾಂತರದಲ್ಲಿ ನಿಂತರೆ, ಅದು ನಿಂತಿರುವಾಗ ಸ್ನಾನ ಮಾಡಿ, ಸುಗಂಧ ಹಚ್ಚಿ, ಇಹ್ರಾಮ್ನ ಬಟ್ಟೆಗಳನ್ನು ಧರಿಸಿ, ನಂತರ ಅದು ಚಲಿಸುವ ಮೊದಲು ಇಹ್ರಾಮ್ಗೆ ಪ್ರವೇಶಿಸಬೇಕು. ಒಂದು ವೇಳೆ ಅದು ಮೀಖಾತ್ನ ಸಮಾನಾಂತರದಲ್ಲಿ ನಿಲ್ಲದಿದ್ದರೆ, ಅದು ಅದರ ಸಮಾನಾಂತರಕ್ಕೆ ಬರುವ ಮೊದಲು ಸ್ನಾನ ಮಾಡಿ, ಸುಗಂಧ ಹಚ್ಚಿ, ಇಹ್ರಾಮ್ನ ಬಟ್ಟೆಗಳನ್ನು ಧರಿಸಿ, ನಂತರ ಅದು ಸಮಾನಾಂತರಕ್ಕೆ ಬಂದಾಗ ಇಹ್ರಾಮ್ಗೆ ಪ್ರವೇಶಿಸಬೇಕು.
ವಾಯು ಮಾರ್ಗದಿಂದ ಬರುವವರು, ವಿಮಾನ ಹತ್ತುವಾಗ ಸ್ನಾನ ಮಾಡಿ, ಸುಗಂಧ ಹಚ್ಚಿ, ಮತ್ತು ವಿಮಾನವು ಮೀಖಾತ್ನ ಸಮಾನಾಂತರಕ್ಕೆ ಬರುವ ಮೊದಲು ಇಹ್ರಾಮ್ನ ಬಟ್ಟೆಗಳನ್ನು ಧರಿಸಬೇಕು. ನಂತರ ಅದು ಸಮಾನಾಂತರಕ್ಕೆ ಬರುವ ಸ್ವಲ್ಪ ಮೊದಲು ಇಹ್ರಾಮ್ಗೆ ಪ್ರವೇಶಿಸಬೇಕು. ಅದು ಸಮಾನಾಂತರಕ್ಕೆ ಬರುವವರೆಗೆ ಕಾಯಬಾರದು. ಏಕೆಂದರೆ ವಿಮಾನವು ವೇಗವಾಗಿ ಸಾಗುತ್ತದೆ. ಅದು (ಇಹ್ರಾಮ್ಗೆ ಪ್ರವೇಶಿಸಲು) ಅವಕಾಶ ನೀಡುವುದಿಲ್ಲ. ಮುನ್ನೆಚ್ಚರಿಕೆಯಾಗಿ ಮೊದಲೇ ಇಹ್ರಾಮ್ಗೆ ಪ್ರವೇಶಿಸಿದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಯಾವುದೇ ಹಾನಿ ಮಾಡುವುದಿಲ್ಲ.
ಕೆಲವು ಜನರು ಮಾಡುವ ತಪ್ಪು ಏನೆಂದರೆ: ಅವರು ವಿಮಾನದಲ್ಲಿ ಮೀಖಾತ್ನ ಮೇಲಿಂದ ಅಥವಾ ಅದರ ಸಮಾನಾಂತರದ ಮೇಲಿಂದ ಸಾಗುತ್ತಾರೆ. ನಂತರ ಜಿದ್ದಾ ವಿಮಾನ ನಿಲ್ದಾಣದಲ್ಲಿ ಇಳಿಯುವವರೆಗೆ ಇಹ್ರಾಮ್ ಅನ್ನು ವಿಳಂಬಿಸುತ್ತಾರೆ. ಇದು ಪ್ರವಾದಿ (ಸ) ರವರ ಆದೇಶಕ್ಕೆ ವಿರುದ್ಧವಾಗಿದೆ ಮತ್ತು ಅಲ್ಲಾಹುವಿನ ಮೇರೆಗಳನ್ನು ಮೀರುವುದಾಗಿದೆ.
ಸಹೀಹ್ ಬುಖಾರಿಯಲ್ಲಿ ಅಬ್ದುಲ್ಲಾ ಬಿನ್ ಉಮರ್ (ರ) ರಿಂದ ವರದಿ. ಅವರು ಹೇಳಿದರು: ಈ ಎರಡು ನಗರಗಳನ್ನು (ಅಂದರೆ: ಬಸ್ರಾ ಮತ್ತು ಕೂಫಾ) ವಶಪಡಿಸಿಕೊಂಡಾಗ, ಅವರು ಉಮರ್ (ರ) ರವರ ಬಳಿಗೆ ಬಂದು ಹೇಳಿದರು: ಓ ವಿಶ್ವಾಸಿಗಳ ನಾಯಕರೇ, ಪ್ರವಾದಿ (ಸ) ರವರು ನಜ್ದ್ನ ಜನರಿಗೆ ಖರ್ನ್ ಅನ್ನು ನಿಗದಿಪಡಿಸಿದ್ದಾರೆ. ಅದು ನಮ್ಮ ಮಾರ್ಗದಿಂದ ದೂರದಲ್ಲಿದೆ. ನಾವು ಖರ್ನ್ಗೆ ಹೋಗಲು ಬಯಸಿದರೆ, ಅದು ನಮಗೆ ಕಷ್ಟವಾಗುತ್ತದೆ. ಅವರು (ಉಮರ್) ಹೇಳಿದರು: "ನಿಮ್ಮ ಮಾರ್ಗದಿಂದ ಅದಕ್ಕೆ ಸಮಾನಾಂತರವಾದ ಸ್ಥಳವನ್ನು ನೋಡಿ."[5] ಆದ್ದರಿಂದ ಸತ್ಯವಿಶ್ವಾಸಿಗಳ ನಾಯಕರಾದ, ಸನ್ಮಾರ್ಗದಲ್ಲಿ ನಡೆದ ಖಲೀಫರಲ್ಲಿ ಒಬ್ಬರಾದ ಉಮರ್ (ರ) ರವರು, ಮೀಖಾತ್ನ ಮೂಲಕ ಹಾದುಹೋಗದವರಿಗೆ, ಅದರ ಸಮಾನಾಂತರಕ್ಕೆ ಬಂದಾಗ (ಅದರ ಸಮಾನಾಂತರವಾದ ಸ್ಥಳವನ್ನು) ಮೀಖಾತ್ ಆಗಿ ನಿಗದಿಪಡಿಸಿದರು. ಯಾರು ವಾಯುಮಾರ್ಗವಾಗಿ ಅದರ ಸಮಾನಾಂತರಕ್ಕೆ ಬರುತ್ತಾರೋ ಅವರು ಭೂಮಾರ್ಗವಾಗಿ ಅದರ ಸಮಾನಾಂತರಕ್ಕೆ ಬಂದವರಂತೆಯೇ ಆಗಿದ್ದಾರೆ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. [5] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಧಾತು ಇರ್ಖಿ ಲಿ ಅಹ್ಲಿಲ್-ಇರಾಕ್, ಸಂಖ್ಯೆ (1531) ರಲ್ಲಿ ವರದಿ ಮಾಡಿದ್ದಾರೆ.
ಆದ್ದರಿಂದ, ಒಬ್ಬ ವ್ಯಕ್ತಿಯು ಈ ತಪ್ಪನ್ನು ಮಾಡಿ, ಇಹ್ರಾಮ್ಗೆ ಪ್ರವೇಶಿಸುವ ಮೊದಲು ಜಿದ್ದಾದಲ್ಲಿ ಇಳಿದರೆ, ಅವನು ವಿಮಾನದಲ್ಲಿ ಹಾದುಹೋದ ಮೀಖಾತ್ಗೆ ಹಿಂತಿರುಗಿ ಅಲ್ಲಿಂದ ಇಹ್ರಾಮ್ಗೆ ಪ್ರವೇಶಿಸಬೇಕು. ಅವನು ಹಾಗೆ ಮಾಡದಿದ್ದರೆ ಮತ್ತು ಜಿದ್ದಾದಿಂದ ಇಹ್ರಾಮ್ಗೆ ಪ್ರವೇಶಿಸಿದರೆ, ಹೆಚ್ಚಿನ ವಿದ್ವಾಂಸರ ಪ್ರಕಾರ, ಅವನು ಫಿದ್ಯಾ (ಪ್ರಾಯಶ್ಚಿತ್ತ) ವನ್ನು ನೀಡಬೇಕು. ಅದನ್ನು ಮಕ್ಕಾದಲ್ಲಿ ಬಲಿ ನೀಡಿ, ಅಲ್ಲಿನ ಬಡವರಿಗೆಲ್ಲಾ ಸಂಪೂರ್ಣವಾಗಿ ಹಂಚಬೇಕು. ಅದರಿಂದ ಅವನು ತಿನ್ನಬಾರದು, ಮತ್ತು ಅದರಿಂದ ಯಾವುದೇ ಶ್ರೀಮಂತನಿಗೆ ಉಡುಗೊರೆ ನೀಡಬಾರದು. ಏಕೆಂದರೆ ಅದು ಕಫ್ಫಾರಾ (ಪ್ರಾಯಶ್ಚಿತ್ತ) ದ ಸ್ಥಾನದಲ್ಲಿದೆ.
ತವಾಫ್ ಮತ್ತು ಅದರಲ್ಲಿನ ಕ್ರಿಯೆಗಳಿಗೆ ಸಂಬಂಧಿಸಿದ ತಪ್ಪುಗಳು
ಪ್ರವಾದಿ (ಸ) ರಿಂದ ದೃಢಪಟ್ಟಿರುವುದೇನೆಂದರೆ, ಅವರು ಕಅಬಾಲಯದ ಆಗ್ನೇಯ ದಿಕ್ಕಿನಲ್ಲಿರುವ ಯಮನಿ ಮೂಲೆಯ ಹತ್ತಿರದಲ್ಲಿರುವ ಹಜರುಲ್-ಅಸ್ವದ್ (ಕಪ್ಪು ಕಲ್ಲು)ನಿಂದ ತವಾಫ್ ಅನ್ನು ಪ್ರಾರಂಭಿಸಿದರು[6], ಅವರು ಹತೀಮ್ (ಹಿಜ್ರ್ )ನ ಹೊರಗಿನಿಂದ ಇಡೀ ಕಅಬಾಲಯದ ಸುತ್ತ ತವಾಫ್ ಮಾಡಿದರು[7], ಮಕ್ಕಾಗೆ ಆಗಮಿಸುವಾಗ ಮಾಡಿದ ತವಾಫ್ನ ಮೊದಲ ಮೂರು ಸುತ್ತುಗಳಲ್ಲಿ ಮಾತ್ರ ಅವರು ರಮ್ಲ್ (ವೇಗದ ನಡಿಗೆ) ಮಾಡಿದರು[8], ಅವರು ತಮ್ಮ ತವಾಫ್ನಲ್ಲಿ ಹಜರುಲ್-ಅಸ್ವದ್ ಅನ್ನು ಸ್ಪರ್ಶಿಸುತ್ತಿದ್ದರು ಮತ್ತು ಚುಂಬಿಸುತ್ತಿದ್ದರು[9], ಅದನ್ನು ತಮ್ಮ ಕೈಯಿಂದ ಸ್ಪರ್ಶಿಸಿ ತಮ್ಮ ಕೈಯನ್ನು ಚುಂಬಿಸಿದರು[10], ತಮ್ಮ ಒಂಟೆಯ ಮೇಲೆ ಸವಾರಿ ಮಾಡುತ್ತಿದ್ದಾಗ ತಮ್ಮ ಬಳಿಯಿದ್ದ ಮಿಹ್ಜನ್ನಿಂದ (ತುದಿಯಲ್ಲಿ ಬಾಗಿದ ಕೋಲು) ಅದನ್ನು ಸ್ಪರ್ಶಿಸಿ, ಮಿಹ್ಜನ್ ಅನ್ನು ಚುಂಬಿಸಿದರು[11], ತಮ್ಮ ಒಂಟೆಯ ಮೇಲೆ ತವಾಫ್ ಮಾಡಿದರು, ಮತ್ತು ಅವರು ಪ್ರತಿ ಬಾರಿ ಮೂಲೆಯ (ಅಂದರೆ: ಹಜರುಲ್-ಅಸ್ವದ್ನ ಮೂಲೆಯ) ಬಳಿ ಬಂದಾಗ ಅದಕ್ಕೆ ಬೊಟ್ಟು ಮಾಡುತ್ತಿದ್ದರು[12]. ಹಾಗೆಯೇ ಅವರು ಯಮನಿ ಮೂಲೆಯನ್ನು ಸ್ಪರ್ಶಿಸುತ್ತಿದ್ದರು ಎಂಬುದು ಕೂಡ ದೃಢಪಟ್ಟಿದೆ [13]. [6] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮನ್ ಸಾಖಲ್-ಬದನ ಮಅಹು, ಸಂಖ್ಯೆ (1691) (1692), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ದ್ದಮಿ ಅಲಲ್-ಮುತಮತ್ತಿಅ್, ಸಂಖ್ಯೆ (1227) (1228) ಇಬ್ನ್ ಉಮರ್ (ರ) ಮತ್ತು ಆಯಿಷಾ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹಜ್ಜತುನ್ನಬಿ ﷺ, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದಲೂ ವರದಿ ಮಾಡಿದ್ದಾರೆ. [7] ಇದನ್ನು ಬೈಹಖಿ ತಮ್ಮ 'ಅಸ್ಸುನನುಲ್-ಕುಬ್ರಾ' (5/90) ದಲ್ಲಿ ಇಬ್ನ್ ಅಬ್ಬಾಸ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [8] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಇಸ್ತಿಲಾಮುಲ್-ಹಜರಿಲ್-ಅಸ್ವದಿ ಹೀನ ಯಖ್ದುಮು ಮಕ್ಕಾ, ಸಂಖ್ಯೆ (1603), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ರ್ರಮ್ಲಿ ಫಿತ್ತವಾಫ್, ಸಂಖ್ಯೆ (1261) ಇಬ್ನ್ ಉಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹಜ್ಜತು ನ್ನಬಿ ﷺ, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದಲೂ ವರದಿ ಮಾಡಿದ್ದಾರೆ. [9] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ತಖ್ಬೀಲುಲ್-ಹಜರ್, ಸಂಖ್ಯೆ (1611) ಇಬ್ನ್ ಉಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [10] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಅರ್ರಮ್ಲು ಫಿಲ್-ಹಜ್ಜಿ ವಲ್-ಉಮ್ರಾ, ಸಂಖ್ಯೆ (1606), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ಇಸ್ತಿಲಾಮಿ ರ್ರುಕ್ನೈನಿಲ್-ಯಮಾನಿಯ್ಯೈನ್ ಫಿತ್ತವಾಫ್, ಸಂಖ್ಯೆ (1268/246) ಇಬ್ನ್ ಉಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [11] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಜವಾಝು ತ್ತವಾಫಿ ಅಲಾ ಬಈರ್, ಸಂಖ್ಯೆ (1275) ಅಬೂ ತುಫೈಲ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [12] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮನ್ ಅಶಾರ ಇಲ ರ್ರುಕ್ನಿ ಇಧಾ ಅತಾ ಅಲೈಹಿ, ಸಂಖ್ಯೆ (1612) ಇಬ್ನ್ ಅಬ್ಬಾಸ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [13] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮನ್ ಲಮ್ ಯಸ್ತಲಿಮ್ ಇಲ್ಲ ರ್ರುಕ್ನೈನಿಲ್-ಯಮಾನಿಯ್ಯೈನ್, ಸಂಖ್ಯೆ (1609), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ಇಸ್ತಿಲಾಮಿ ರ್ರುಕ್ನೈನಿಲ್-ಯಮಾನಿಯ್ಯೈನ್ ಫಿತ್ತವಾಫ್, ಸಂಖ್ಯೆ (1267) ಇಬ್ನ್ ಉಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಕಲ್ಲನ್ನು ಸ್ಪರ್ಶಿಸುವ ವಿವಿಧ ವಿಧಾನಗಳಲ್ಲಿನ ವ್ಯತ್ಯಾಸವು - ಅಲ್ಲಾಹು ಹೆಚ್ಚು ಬಲ್ಲವನು - (ಪ್ರವಾದಿಯವರ) ಸುಲಭತೆಗೆ ಅನುಗುಣವಾಗಿತ್ತು. ಅವುಗಳಲ್ಲಿ ಯಾವುದು ಅವರಿಗೆ ಸುಲಭವಾಗಿತ್ತೋ ಅದನ್ನು ಅವರು ಮಾಡಿದರು. ಅವರು ಮಾಡಿದ ಸ್ಪರ್ಶ, ಚುಂಬನ ಮತ್ತು ಬೊಟ್ಟು ಮಾಡುವಿಕೆ ಇತ್ಯಾದಿಯೆಲ್ಲವೂ ಅಲ್ಲಾಹುವಿಗೆ ಆರಾಧನೆ ಸಲ್ಲಿಸಲು ಮತ್ತು ಅವನನ್ನು ಗೌರವಿಸಲು ಮಾತ್ರವಾಗಿದ್ದವು. ಕಲ್ಲು ಸ್ವತಃ ಪ್ರಯೋಜನ ನೀಡುತ್ತದೆ ಅಥವಾ ಹಾನಿ ಮಾಡುತ್ತದೆ ಎಂಬ ನಂಬಿಕೆಯಿಂದಲ್ಲ.
ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಉಮರ್ (ರ) ರಿಂದ ವರದಿ. ಅವರು ಕಲ್ಲನ್ನು ಚುಂಬಿಸುತ್ತಿದ್ದರು ಮತ್ತು ಹೇಳುತ್ತಿದ್ದರು: "ಖಂಡಿತವಾಗಿಯೂ ನೀನೊಂದು ಕಲ್ಲು, ನೀನು ಹಾನಿ ಮಾಡಲಾರೆ ಮತ್ತು ಪ್ರಯೋಜನವನ್ನೂ ನೀಡಲಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಪ್ರವಾದಿ (ಸ) ರವರು ನಿನ್ನನ್ನು ಚುಂಬಿಸುವುದನ್ನು ನಾನು ನೋಡಿರದಿದ್ದರೆ, ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."[14] [14] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಮಾ ದುಕಿರ ಫಿಲ್-ಹಜರಿಲ್-ಅಸ್ವದ್, ಸಂಖ್ಯೆ (1597), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ತಖ್ಬೀಲಿಲ್-ಹಜರಿಲ್-ಅಸ್ವದ್, ಸಂಖ್ಯೆ (1270) ರಲ್ಲಿ ವರದಿ ಮಾಡಿದ್ದಾರೆ.
ಕೆಲವು ಹಾಜಿಗಳು ಮಾಡುವ ತಪ್ಪುಗಳು:
1. ಹಜರುಲ್-ಅಸ್ವದ್ಗಿಂತ ಮೊದಲು ತವಾಫ್ ಪ್ರಾರಂಭಿಸುವುದು. ಅಂದರೆ: ಅದರ ಮತ್ತು ಯಮನಿ ಮೂಲೆಯ ನಡುವಿನಿಂದ. ಇದು ಪ್ರವಾದಿ (ಸ) ನಿಷೇಧಿಸಿದ ಧರ್ಮದಲ್ಲಿನ ಅತಿರೇಕವಾಗಿದೆ.[15]. ಇದು ಕೆಲವು ರೀತಿಯಲ್ಲಿ ರಮದಾನ್ಗೆ ಒಂದು ಅಥವಾ ಎರಡು ದಿನಗಳ ಮುಂಚಿತವಾಗಿ ಉಪವಾಸ ಪ್ರಾರಂಭಿಸುವುದನ್ನು ಹೋಲುತ್ತದೆ. ಅದನ್ನು ನಿಷೇಧಿಸಲಾಗಿದೆ ಎಂಬುದು ದೃಢಪಟ್ಟಿದೆ[16]. [15] ಇದನ್ನು ನಸಾಯಿ, ಕಿತಾಬು ಮನಾಸಿಕಿಲ್-ಹಜ್, ಬಾಬ್ ಇಲ್ತಿಕಾತುಲ್-ಹಸಾ, ಸಂಖ್ಯೆ (3059), ಇಬ್ನ್ ಮಾಜ, ಕಿತಾಬುಲ್-ಮನಾಸಿಕ್, ಬಾಬ್ ಖದ್ರು ಹಸ ರ್ರಮಿ, ಸಂಖ್ಯೆ (3029), ಮತ್ತು ಅಹ್ಮದ್ (1/347) ಇಬ್ನ್ ಅಬ್ಬಾಸ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [16] ಇದನ್ನು ಬುಖಾರಿ, ಕಿತಾಬು ಸ್ಸೌಮ್, ಬಾಬ್ ಲಾ ಯತಖದ್ದಮು ರಮದಾನ ಬಿಸೌಮಿ ಯೌಮಿನ್ ವಲಾ ಯೌಮೈನ್, ಸಂಖ್ಯೆ (1914), ಮತ್ತು ಮುಸ್ಲಿಂ, ಕಿತಾಬು ಸ್ಸಿಯಾಮ್, ಬಾಬ್ ಲಾ ತುಖದ್ದಿಮೂ ರಮದಾನ್ ಬಿಸೌಮಿ ಯೌಮಿನ್ ವಲಾ ಯೌಮೈನ್, ಸಂಖ್ಯೆ (1082) ಅಬೂ ಹುರೈರಾ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಕೆಲವು ಹಾಜಿಗಳು ಇದನ್ನು ಮುನ್ನೆಚ್ಚರಿಕೆಗಾಗಿ ಮಾಡುವುದಾಗಿ ಹೇಳಿಕೊಳ್ಳುವುದು ಸ್ವೀಕಾರಾರ್ಹವಲ್ಲ. ನಿಜವಾದ ಮತ್ತು ಪ್ರಯೋಜನಕಾರಿ ಮುನ್ನೆಚ್ಚರಿಕೆಯೆಂದರೆ ಶರೀಅತ್ತನ್ನು ಅನುಸರಿಸುವುದು ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರನ್ನು ದಾಟಿ ಮುಂದೆ ಹೋಗದಿರುವುದು.
2. ಜನದಟ್ಟಣೆಯ ಸಮಯದಲ್ಲಿ ಕಅಬಾದ ಛಾವಣಿಯಿರುವ ಭಾಗದಲ್ಲಿ ಮಾತ್ರ ತವಾಫ್ ಮಾಡುವುದು. ಅಂದರೆ ಹತೀಮ್ನ (ಹಿಜ್ರ್ ಇಸ್ಮಾಈಲ್) ಒಂದು ಬಾಗಿಲಿನಿಂದ ಪ್ರವೇಶಿಸಿ ಎದುರಿನ ಬಾಗಿಲಿನಿಂದ ಹೊರಬರುವುದು, ಮತ್ತು ಹತೀಮ್ನ ಉಳಿದ ಭಾಗವನ್ನು ತಮ್ಮ ಬಲಭಾಗದಲ್ಲಿ ಬಿಡುವುದು. ಇದು ದೊಡ್ಡ ತಪ್ಪಾಗಿದ್ದು, ಹೀಗೆ ಮಾಡುವುದರಿಂದ ತವಾಫ್ ಸರಿಯಾಗುವುದಿಲ್ಲ. ಏಕೆಂದರೆ ವಾಸ್ತವವಾಗಿ ಅವರು ಕಅಬಾಲಯದ ಸುತ್ತ ತವಾಫ್ ಅನ್ನೇ ಮಾಡಿಲ್ಲ, ಬದಲಿಗೆ ಅದರ ಒಂದು ಭಾಗದ ಸುತ್ತ ಮಾತ್ರ ಮಾಡಿದ್ದಾರೆ.
3. ಎಲ್ಲಾ ಏಳು ಸುತ್ತುಗಳಲ್ಲಿಯೂ ರಮ್ಲ್ (ವೇಗದ ನಡಿಗೆ) ಮಾಡುವುದು.
4. ಹಜರುಲ್-ಅಸ್ವದ್ ಅನ್ನು ಚುಂಬಿಸಲು ತೀವ್ರವಾಗಿ ನೂಕುನುಗ್ಗಲು ಮಾಡುವುದು. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಅದು ಹೊಡೆದಾಟ ಮತ್ತು ಜಗಳಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಹೊಯ್ಕೈ ಹಾಗೂ ಕೆಟ್ಟ ಮಾತುಗಳು ಉಂಟಾಗುತ್ತವೆ. ಇದು ಈ ಕರ್ಮಕ್ಕೆ ಮತ್ತು ಅಲ್ಲಾಹುವಿನ ಪವಿತ್ರ ಮಸೀದಿಯಲ್ಲಿ, ಅವನ ಕಅಬಾಲಯದ ನೆರಳಿನಲ್ಲಿರುವ ಈ ಸ್ಥಳಕ್ಕೆ ಭೂಷಣವಲ್ಲ. ಇದರಿಂದ ತವಾಫ್ನ ಪುಣ್ಯ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇಡೀ ಹಜ್ನ ಪುಣ್ಯವೂ ಕಡಿಮೆಯಾಗುತ್ತದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ: "ಹಜ್ ನಿಗದಿತ ತಿಂಗಳುಗಳಲ್ಲಿದೆ. ಆದ್ದರಿಂದ ಯಾರು ಈ ತಿಂಗಳುಗಳಲ್ಲಿ ಹಜ್ ಅನ್ನು ಕಡ್ಡಾಯಗೊಳಿಸುತ್ತಾರೋ, ಅವರು ಹಜ್ನಲ್ಲಿ ಯಾವುದೇ ಅಶ್ಲೀಲ ಮಾತುಗಳನ್ನಾಡಬಾರದು, ಪಾಪಕೃತ್ಯಗಳನ್ನು ಮಾಡಬಾರದು ಮತ್ತು ಜಗಳವಾಡಬಾರದು." [ಅಲ್-ಬಖರ:197], ಈ ನೂಕುನುಗ್ಗಲು ವಿನಮ್ರತೆಯನ್ನು (ಖುಶೂಅ್) ಇಲ್ಲದಾಗಿಸುತ್ತದೆ ಮತ್ತು ಅಲ್ಲಾಹುವಿನ ನೆನಪನ್ನು ಮರೆಯುವಂತೆ ಮಾಡುತ್ತದೆ. ಇವೆರಡೂ (ಖುಶೂಅ್ ಮತ್ತು ಅಲ್ಲಾಹುವಿನ ಸ್ಮರಣೆ) ತವಾಫ್ನ ಮುಖ್ಯ ಉದ್ದೇಶಗಳಲ್ಲಿ ಒಳಪಟ್ಟಿವೆ.
5. ಹಜರುಲ್-ಅಸ್ವದ್ ಸ್ವತಃ ಪ್ರಯೋಜನ ನೀಡುತ್ತದೆ ಎಂದು ವಿಶ್ವಾಸವಿಡುವುದು. ಈ ಕಾರಣದಿಂದಲೇ ಅವರು ಅದನ್ನು ಸ್ಪರ್ಶಿಸಿದಾಗ, ತಮ್ಮ ಕೈಗಳಿಂದ ತಮ್ಮ ದೇಹದ ಉಳಿದ ಭಾಗಗಳನ್ನು ಸವರುತ್ತಾರೆ ಅಥವಾ ತಮ್ಮೊಂದಿಗೆ ಇರುವ ಮಕ್ಕಳ ಮೇಲೂ ಸವರುತ್ತಾರೆ. ಇದೆಲ್ಲವೂ ಅಜ್ಞಾನ ಮತ್ತು ದುರ್ಮಾರ್ಗಗಳಾಗಿವೆ. ಲಾಭ ಮತ್ತು ನಷ್ಟ ಕೇವಲ ಅಲ್ಲಾಹುವಿನಿಂದ ಮಾತ್ರ. ಸತ್ಯವಿಶ್ವಾಸಿಗಳ ನಾಯಕರಾದ ಉಮರ್ (ರ) ರವರ ಮಾತನ್ನು ಈ ಹಿಂದೆ ಉಲ್ಲೇಖಿಸಲಾಗಿದೆ: "ಖಂಡಿತವಾಗಿಯೂ ನೀನೊಂದು ಕಲ್ಲು, ನೀನು ಹಾನಿ ಮಾಡಲಾರೆ ಮತ್ತು ಪ್ರಯೋಜನವನ್ನೂ ನೀಡಲಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಪ್ರವಾದಿ (ಸ) ರವರು ನಿನ್ನನ್ನು ಚುಂಬಿಸುವುದನ್ನು ನಾನು ನೋಡಿರದಿದ್ದರೆ, ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."
6. ಕೆಲವು ಹಾಜಿಗಳು ಕಅಬಾದ ಎಲ್ಲಾ ಮೂಲೆಗಳನ್ನು ಸ್ಪರ್ಶಿಸುತ್ತಾರೆ. ಕೆಲವೊಮ್ಮೆ ಕಅಬಾದ ಎಲ್ಲಾ ಗೋಡೆಗಳನ್ನೂ ಸ್ಪರ್ಶಿಸುತ್ತಾರೆ ಮತ್ತು ಅವುಗಳಿಗೆ ಮೈ ಉಜ್ಜಿಕೊಳ್ಳುತ್ತಾರೆ. ಇದು ಅಜ್ಞಾನ ಮತ್ತು ದುರ್ಮಾರ್ಗವಾಗಿದೆ. ಏಕೆಂದರೆ ಸ್ಪರ್ಶಿಸುವುದು (ಇಸ್ತಿಲಾಮ್) ಒಂದು ಆರಾಧನೆಯಾಗಿದೆ ಮತ್ತು ಅಲ್ಲಾಹನಿಗೆ ಗೌರವ ಸಲ್ಲಿಸುವುದಾಗಿದೆ. ಆದ್ದರಿಂದ, ಪ್ರವಾದಿ (ಸ) ರವರಿಂದ ವರದಿಯಾದಂತೆ ಮಾತ್ರ ಅದನ್ನು ನಿರ್ವಹಿಸಬೇಕು. ಪ್ರವಾದಿ (ಸ) ರವರು ಕಅಬಾದ ಎರಡು ಯಮನಿ ಮೂಲೆಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಸ್ಪರ್ಶಿಸಲಿಲ್ಲ. ಆ ಎರಡು ಮೂಲೆಗಳೆಂದರೆ, ಹಜರುಲ್-ಅಸ್ವದ್ - ಇದು ಕಅಬಾದ ಉತ್ತರ ದಿಕ್ಕಿನ ಯಮನಿ ಮೂಲೆಯಲ್ಲಿದೆ - ಮತ್ತು ಪಶ್ಚಿಮದ ಯಮನಿ ಮೂಲೆ.
ಇಮಾಮ್ ಅಹ್ಮದ್ರ ಮುಸ್ನದ್ನಲ್ಲಿ ಮುಜಾಹಿದ್ರಿಂದ, ಅವರು ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಅವರು ಮುಆವಿಯಾ (ರ) ರೊಂದಿಗೆ ತವಾಫ್ ಮಾಡಿದರು. ಆಗ ಮುಆವಿಯಾ (ಕಅಬಾದ) ಎಲ್ಲಾ ಮೂಲೆಗಳನ್ನು ಸ್ಪರ್ಶಿಸಲು ಪ್ರಾರಂಭಿಸಿದರು. ಆಗ ಇಬ್ನ್ ಅಬ್ಬಾಸ್ ಹೇಳಿದರು: "ಅಲ್ಲಾಹುವಿನ ಸಂದೇಶವಾಹಕರು (ಸ) ಸ್ಪರ್ಶಿಸದ ಈ ಎರಡು ಮೂಲೆಗಳನ್ನು ನೀವೇಕೆ ಸ್ಪರ್ಶಿಸುತ್ತಿದ್ದೀರಿ?" ಅದಕ್ಕೆ ಮುಆವಿಯಾ ಹೇಳಿದರು: "ಕಅಬಾಲಯದ ಯಾವ ಭಾಗವೂ ಬಿಟ್ಟುಬಿಡುವಂತದ್ದಲ್ಲ." ಆಗ ಇಬ್ನ್ ಅಬ್ಬಾಸ್ ಹೇಳಿದರು: "ಖಂಡಿತವಾಗಿಯೂ ಅಲ್ಲಾಹುವಿನ ಸಂದೇಶವಾಹಕರಲ್ಲಿ ನಿಮಗೆ ಉತ್ತಮ ಮಾದರಿಯಿದೆ." ಆಗ ಮುಆವಿಯಾ ಹೇಳಿದರು: "ನೀವು ಸತ್ಯವನ್ನೇ ಹೇಳಿದಿರಿ[17]." [17] ಇದನ್ನು ತಿರ್ಮಿಧಿ, ಕಿತಾಬುಲ್-ಹಜ್, ಬಾಬ್ ಮಾ ಜಾಅ ಫಿಸ್ತಿಲಾಮಿಲ್-ಹಜರ್, ಸಂಖ್ಯೆ (858), ಮತ್ತು ಅಹ್ಮದ್ (1/332) ರಲ್ಲಿ ವರದಿ ಮಾಡಿದ್ದಾರೆ.
ತವಾಫ್ ಮತ್ತು ಅದರಲ್ಲಿನ ಮಾತುಗಳಿಗೆ ಸಂಬಂಧಿಸಿದ ತಪ್ಪುಗಳು
ಪ್ರವಾದಿ (ಸ) ರವರಿಂದ ದೃಢಪಟ್ಟಿರುವುದೇನೆಂದರೆ, ಅವರು ಪ್ರತಿ ಬಾರಿ ಹಜರುಲ್-ಅಸ್ವದ್ ಬಳಿ ಬಂದಾಗ ಅಲ್ಲಾಹುವಿಗೆ ತಕ್ಬೀರ್ (ಅಲ್ಲಾಹು ಅಕ್ಬರ್) ಹೇಳುತ್ತಿದ್ದರು[18], ಮತ್ತು ಅವರು ಯಮನಿ ಮೂಲೆ ಹಾಗೂ ಹಜರುಲ್-ಅಸ್ವದ್ ನಡುವೆ ಹೀಗೆ ಹೇಳುತ್ತಿದ್ದರು: "ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್, ವಫಿಲ್ ಆಖಿರತಿ ಹಸನತನ್ ವಕಿನಾ ಅಧಾಬನ್ನಾರ್." (ಓ ನಮ್ಮ ರಬ್, ನಮಗೆ ಇಹಲೋಕದಲ್ಲೂ ಒಳಿತನ್ನು ನೀಡು ಮತ್ತು ಪರಲೋಕದಲ್ಲೂ ಒಳಿತನ್ನು ನೀಡು, ಮತ್ತು ನಮ್ಮನ್ನು ನರಕದ ಶಿಕ್ಷೆಯಿಂದ ರಕ್ಷಿಸು." [19] [ಅಲ್-ಬಖರ: 201], ಪ್ರವಾದಿ(ಸ) ರವರು ಹೇಳುತ್ತಾರೆ: "ಕಅಬಾದ ಸುತ್ತ ತವಾಫ್ ಮಾಡುವುದು, ಸಫಾ ಮತ್ತು ಮರ್ವಾದ ನಡುವೆ (ಸಈ ಮಾಡುವುದು) ಮತ್ತು ಜಮಾರಾತ್ಗೆ ಕಲ್ಲು ಎಸೆಯುವುದು ಅಲ್ಲಾಹುವಿನ ಸ್ಮರಣೆಯನ್ನು ಸ್ಥಾಪಿಸಲು ಮಾತ್ರ ನಿಶ್ಚಯಿಸಲಾಗಿದೆ."[20] [18] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಅತ್ತಕ್ಬೀರು ಇಂದ ರ್ರುಕ್ನ್, ಸಂಖ್ಯೆ (1613) ಇಬ್ನ್ ಅಬ್ಬಾಸ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [19] ಇದನ್ನು ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಅದ್ದುಆ ಫಿತ್ತವಾಫ್, ಸಂಖ್ಯೆ (1892), ಮತ್ತು ಅಹ್ಮದ್ (3/411) ಅಬ್ದುಲ್ಲಾ ಬಿನ್ ಅಸ್ಸಾಯಿಬ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [20] ಇದನ್ನು ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಫಿರ್ರಮ್ಲ್, ಸಂಖ್ಯೆ (1888), ತಿರ್ಮಿಧಿ, ಕಿತಾಬುಲ್-ಹಜ್, ಬಾಬ್ ಮಾ ಜಾಅ ಕೈಫ ತುರ್ಮಲ್-ಜಿಮಾರ್?, ಸಂಖ್ಯೆ (902), ಮತ್ತು ಅಹ್ಮದ್ (6/64) ಆಯಿಷಾ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಈ ವಿಷಯದಲ್ಲಿ ತವಾಫ್ ಮಾಡುವ ಕೆಲವರು ಮಾಡುವ ತಪ್ಪು ಏನೆಂದರೆ: ಪ್ರತಿ ಸುತ್ತಿಗೂ ಒಂದು ನಿರ್ದಿಷ್ಟ ಪ್ರಾರ್ಥನೆಯನ್ನು ನಿಗದಿಪಡಿಸುವುದು ಮತ್ತು ಅದರಲ್ಲಿ ಅದರ ಹೊರತು ಏನನ್ನೂ ಪ್ರಾರ್ಥಿಸದಿರುವುದು. ಎಷ್ಟರಮಟ್ಟಿಗೆ ಎಂದರೆ, ಪ್ರಾರ್ಥನೆ ಮುಗಿಯುವ ಮೊದಲು ಸುತ್ತು ಮುಗಿದರೂ, ಕೊನೆಯ ಒಂದು ಪದ ಉಳಿದಿದ್ದರೂ ಸಹ ಅದನ್ನು ಪಠಿಸುವುದಕ್ಕಾಗಿ, ಮತ್ತು ಮುಂದಿನ ಸುತ್ತಿನ ಹೊಸ ಪ್ರಾರ್ಥನೆಯನ್ನು ಪ್ರಾರಂಭಿಸುವುದಕ್ಕಾಗಿ ಅವರು ಅಲ್ಲೇ ನಿಂತುಬಿಡುತ್ತಾರೆ. ಸುತ್ತು ಮುಗಿಯುವ ಮೊದಲೇ ಪ್ರಾರ್ಥನೆ ಮುಗಿದರೆ, ಅವರು (ಬೇರೆ ಏನೂ ಹೇಳದೆ) ಮೌನವಾಗಿರುತ್ತಾರೆ. ಪ್ರವಾದಿ (ಸ) ರವರಿಂದ ಪ್ರತಿ ಸುತ್ತಿಗೂ ನಿರ್ದಿಷ್ಟವಾದ ಪ್ರಾರ್ಥನೆ ವರದಿಯಾಗಿಲ್ಲ. ಶೈಖುಲ್-ಇಸ್ಲಾಮ್ ಇಬ್ನ್ ತೈಮಿಯಾ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಅದರಲ್ಲಿ - ಅಂದರೆ: ತವಾಫ್ ಮಾಡುವಾಗ - ಪ್ರವಾದಿ (ಸ) ರವರು ಅವರ ಆದೇಶದಿಂದಾಗಲೀ, ಅವರ ಮಾತಿನಿಂದಾಗಲೀ, ಅಥವಾ ಅವರ ಬೋಧನೆಯಿಂದಾಗಲೀ ಕಲಿಸಿಕೊಟ್ಟ ಯಾವುದೇ ನಿಗದಿತ ಸ್ಮರಣೆ (ಧಿಕ್ರ್) ಇಲ್ಲ. ಬದಲಿಗೆ, ಅದರಲ್ಲಿ ಶರೀಅತ್ ಸಮ್ಮತಿಸಿರುವ ಎಲ್ಲಾ ಪ್ರಾರ್ಥನೆಗಳನ್ನು ಪ್ರಾರ್ಥಿಸಬಹುದು. ಅನೇಕ ಜನರು ಮೀಝಾಬ್ನ (ಕಅಬಾದ ಮಳೆನೀರಿನ ಕೊಳವೆ) ಕೆಳಗೆ ನಿರ್ದಿಷ್ಟ ಪ್ರಾರ್ಥನೆಗಳನ್ನು ಪ್ರಾರ್ಥಿಸುವುದು ಮುಂತಾದವುಗಳಿಗೆ ಯಾವುದೇ ಆಧಾರವಿಲ್ಲ"[21]. [21] ಮಜ್ಮೂಉಲ್-ಫತಾವಾ (26/122).
ಇದರ ಆಧಾರದ ಮೇಲೆ, ತವಾಫ್ ಮಾಡುವವರು ಇಹಲೋಕ ಮತ್ತು ಪರಲೋಕದ ಒಳಿತಿಗಾಗಿರುವ ತಾವು ಬಯಸುವ ಯಾವುದೇ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು, ಮತ್ತು ಯಾವುದೇ ಶರೀಅತ್ ಸಮ್ಮತವಾದ ಧಿಕ್ರ್ನೊಂದಿಗೆ ಅಲ್ಲಾಹುವನ್ನು ಸ್ಮರಿಸಬಹುದು. ಉದಾಹರಣೆಗೆ ತಸ್ಬೀಹ್ (ಸುಬ್ಹಾನಲ್ಲಾಹ್), ತಹ್ಮೀದ್ (ಅಲ್-ಹಮ್ದುಲಿಲ್ಲಾಹ್), ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್), ತಕ್ಬೀರ್ (ಅಲ್ಲಾಹು ಅಕ್ಬರ್) ಅಥವಾ ಖುರ್ʼಆನ್ ಪಠಣ ಮಾಡಬಹುದು.
ತವಾಫ್ ಮಾಡುವ ಕೆಲವರು ಮಾಡುವ ಇನ್ನೊಂದು ತಪ್ಪು ಏನೆಂದರೆ: ಲಿಖಿತ ಪ್ರಾರ್ಥನೆಗಳ ಪುಸ್ತಕಗಳನ್ನು ಹಿಡಿದುಕೊಂಡು, ಅವುಗಳನ್ನು ಓದಿ ಪ್ರಾರ್ಥಿಸುತ್ತಾರೆ. ಆದರೆ ಅವರಿಗೆ ಅದರ ಅರ್ಥವು ತಿಳಿದಿರುವುದಿಲ್ಲ. ಬಹುಶಃ ಅದರಲ್ಲಿ ಮುದ್ರಣ ಅಥವಾ ಕಾಗುಣಿತ ದೋಷಗಳಿದ್ದು, ಅದು ಅದರ ಅರ್ಥವನ್ನು ತಲೆಕೆಳಗಾಗಿಸಬಹುದು ಮತ್ತು ಆ ಪ್ರಾರ್ಥನೆಯನ್ನು ಪ್ರಾರ್ಥಿಸುವವನಿಗೆ ವಿರುದ್ಧವಾಗಿರುವಂತೆ ಮಾಡಬಹುದು. ಆಗ ಅವನು ಅರಿಯದೆಯೇ ಸ್ವತಃ ತನಗೇ ಶಾಪ ಹಾಕಿಕೊಳ್ಳುವಂತಾಗಬಹುದು. ಈ ಬಗ್ಗೆ ನಾವು ಅತ್ಯಂತ ಅಚ್ಚರಿಯ ಘಟನೆಗಳನ್ನು ಕೇಳಿದ್ದೇವೆ.
ತವಾಫ್ ಮಾಡುವವನು ತನ್ನ ಪರಿಪಾಲಕನೊಂದಿಗೆ (ಅಲ್ಲಾಹುವಿನೊಂದಿಗೆ) ತಾನು ಬಯಸುವ ಮತ್ತು ತಿಳಿದಿರುವ ವಿಷಯಗಳಿಗಾಗಿ ಪ್ರಾರ್ಥಿಸಿದರೆ, ಅದರ ಅರ್ಥವನ್ನು ತಿಳಿದು ಪ್ರಾರ್ಥಿಸಿದರೆ, ಅದು ಅವನಿಗೆ ಶ್ರೇಷ್ಠವೂ ಹೆಚ್ಚು ಪ್ರಯೋಜನಕಾರಿಯೂ ಆಗಿರುತ್ತದೆ. ಅಷ್ಟೇ ಅಲ್ಲದೆ, ಅವನು ಅಲ್ಲಾಹುವಿನ ಸಂದೇಶವಾಹಕರನ್ನು (ಸ) ಹೆಚ್ಚು ಅನುಕರಿಸುವವನೂ ಅನುಸರಿಸುವವನೂ ಆಗುತ್ತಾನೆ.
ತವಾಫ್ ಮಾಡುವ ಕೆಲವರು ಮಾಡುವ ಇನ್ನೊಂದು ತಪ್ಪು ಏನೆಂದರೆ: ಒಂದು ಗುಂಪು ಜನರು ಒಬ್ಬ ಮುಖಂಡನ ನೇತೃತ್ವದಲ್ಲಿ ಸೇರಿ ತವಾಫ್ ಮಾಡುವುದು. ಅವನು ಗಟ್ಟಿಯಾದ ಧ್ವನಿಯಲ್ಲಿ ಅವರಿಗೆ ಪ್ರಾರ್ಥನೆಯನ್ನು ಹೇಳಿಕೊಡುತ್ತಾನೆ, ಮತ್ತು ಗುಂಪಿನಲ್ಲಿರುವ ಜನರು ಒಂದೇ ಧ್ವನಿಯಲ್ಲಿ ಅವನನ್ನು ಅನುಸರಿಸುತ್ತಾರೆ. ಇದರಿಂದಾಗಿ ಧ್ವನಿಗಳು ಏರಿ ಗದ್ದಲ ಉಂಟಾಗುತ್ತದೆ, ಮತ್ತು ತವಾಫ್ ಮಾಡುವ ಇತರರಿಗೆ ತೊಂದರೆಯಾಗುತ್ತದೆ. ಅವರಿಗೆ ತಾವು ಏನು ಹೇಳುತ್ತಿದ್ದೇವೆಂಬುದು ತಿಳಿಯದಾಗುತ್ತದೆ. ಹೀಗೆ ಮಾಡುವುದರಿಂದ ವಿನಮ್ರತೆ (ಖುಶೂಅ್) ಇಲ್ಲವಾಗುತ್ತದೆ ಮತ್ತು ಈ ಸುರಕ್ಷಿತ ಸ್ಥಳದಲ್ಲಿ ಅಲ್ಲಾಹುವಿನ ದಾಸರಿಗೆ ತೊಂದರೆ ಕೊಟ್ಟಂತಾಗುತ್ತದೆ. ಪ್ರವಾದಿ (ಸ) ರವರು ಗಟ್ಟಿಯಾಗಿ ಖುರ್ಆನ್ ಪಠಿಸುತ್ತಾ ನಮಾಝ್ ಮಾಡುತ್ತಿರುವ ಜನರ ಬಳಿ ಬಂದು ಹೇಳಿದರು: "ನೀವೆಲ್ಲರೂ ನಿಮ್ಮ ಪರಿಪಾಲಕನೊಂದಿಗೆ ರಹಸ್ಯವಾಗಿ ಮಾತನಾಡುತ್ತಿರುವಿರಿ. ಆದ್ದರಿಂದ ಖುರ್ಆನ್ ಪಠಿಸುವಾಗ ನಿಮ್ಮಲ್ಲಿ ಕೆಲವರು ಇತರ ಕೆಲವರಿಗಿಂತ ಧ್ವನಿಯನ್ನು ಏರಿಸಬೇಡಿರಿ." ಇದನ್ನು ಮಾಲಿಕ್ 'ಅಲ್-ಮುವತ್ತಾ' ದಲ್ಲಿ ವರದಿ ಮಾಡಿದ್ದಾರೆ[22]. ಇಬ್ನ್ ಅಬ್ದುಲ್-ಬರ್ರ್ ಹೇಳುತ್ತಾರೆ: "ಇದು ಸಹೀಹ್ ಹದೀಸ್ ಆಗಿದೆ"[23]. [22] ಇದನ್ನು ಮಾಲಿಕ್ ರವರು ಕಿತಾಬ್ ವುಖೂತಿ ಸ್ಸಲಾತ್, ಬಾಬ್ ಅಲ್-ಅಮಲು ಫಿಸ್ಸಲಾತ್, ಸಂಖ್ಯೆ (213) ವರದಿ ಮಾಡಿದ್ದಾರೆ. ಇದು ಯಹ್ಯಾ ಇಬ್ನ್ ಯಹ್ಯಾ ರವರ ರಿವಾಯತ್ ಇರುವ ಬಶ್ಶಾರ್ ಅವ್ವಾದ್ ರವರ ಪರಿಶೀಲನೆಯಿರುವ ಗ್ರಂಥ. [23] ಅತ್ತಮ್ಹೀದ್ (23/319).
ಆ ಮುಖಂಡನು ಕಅಬಾದ ಬಳಿ ಬಂದಾಗ ಅವರ ಮುಂದೆ ನಿಂತು, "ಹೀಗೆ ಮಾಡಿ, ಹೀಗೆ ಹೇಳಿ, ನಿಮಗೆ ಬೇಕಾದುದನ್ನು ಪ್ರಾರ್ಥಿಸಿ" ಎಂದು ಅವರಿಗೆ ಹೇಳಿ, ನಂತರ ಅವರೊಂದಿಗೆ ತವಾಫ್ ಮಾಡುವ ಸ್ಥಳದಲ್ಲಿ ನಡೆಯುತ್ತಾ, ಅವರಲ್ಲಿ ಯಾರೂ ತಪ್ಪು ಮಾಡುತ್ತಿಲ್ಲ ಎಂದು ಖಾತ್ರಿಪಡಿಸುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಆಗ ಅವರು ವಿನಮ್ರತೆ ಮತ್ತು ಶಾಂತಿಯಿಂದ ತವಾಫ್ ಮಾಡುತ್ತಿದ್ದರು, ತಮ್ಮ ರಬ್ʼನೊಂದಿಗೆ (ಅಲ್ಲಾಹುವಿನೊಂದಿಗೆ) - ಭಯ ಮತ್ತು ನಿರೀಕ್ಷೆಯಿಂದ - ತಮಗೆ ಇಷ್ಟವಾದ ಮತ್ತು ಅರ್ಥ ತಿಳಿದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು ಹಾಗೂ ಇತರ ಜನರು ಅವರ ತೊಂದರೆಯಿಂದ ಸುರಕ್ಷಿತವಾಗಿರುತ್ತಿದ್ದರು.
ತವಾಫ್ ನಂತರದ ಎರಡು ರಕಅತ್ಗಳು ಮತ್ತು ಅದರಲ್ಲಿನ ಪ್ರಮಾದಗಳು
ಪ್ರವಾದಿ (ಸ) ರಿಂದ ದೃಢಪಟ್ಟಿರುವುದೇನೆಂದರೆ, ಅವರು ತವಾಫ್ ಮುಗಿಸಿದ ನಂತರ, ಮಕಾಮ್ ಇಬ್ರಾಹೀಮ್ ಬಳಿಗೆ ಹೋಗಿ ಪಠಿಸಿದರು: "ವತ್ತಖಿಧೂ ಮಿಮ್ಮಕಾಮಿ ಇಬ್ರಾಹೀಮ ಮುಸಲ್ಲಾ" (ಮತ್ತು ಇಬ್ರಾಹೀಮರ ಸ್ಥಾನವನ್ನು ನಮಾಝ್ ಮಾಡುವ ಸ್ಥಳವನ್ನಾಗಿ ಮಾಡಿಕೊಳ್ಳಿರಿ." [ಅಲ್-ಬಖರ: 125], ನಂತರ ಅವರು ಎರಡು ರಕಅತ್ ನಮಾಝ್ ಮಾಡಿದರು, ಆಗ ಮಕಾಮ್ ಇಬ್ರಾಹೀಮ್ ಅವರ ಮತ್ತು ಕಅಬಾದ ನಡುವೆ ಇತ್ತು[24], ಮತ್ತು ಅವರು ಮೊದಲ ರಕಅತ್ನಲ್ಲಿ ಸೂರಾ ಅಲ್-ಫಾತಿಹಾ ಮತ್ತು "ಖುಲ್ ಯಾ ಅಯ್ಯುಹಲ್ ಕಾಫಿರೂನ್" ಪಠಿಸಿದರು, ಮತ್ತು ಎರಡನೆಯದರಲ್ಲಿ ಸೂರಾ ಅಲ್-ಫಾತಿಹಾ ಮತ್ತು "ಖುಲ್ ಹುವಲ್ಲಾಹು ಅಹದ್" ಪಠಿಸಿದರು[25]. [24] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹುಜ್ಜತು ನ್ನಬಿ ﷺ, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. [25] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹುಜ್ಜತು ನ್ನಬಿ ﷺ, ಸಂಖ್ಯೆ (1218) ಮುರ್ಸಲ್ ಆಗಿ ವರದಿ ಮಾಡಿದ್ದಾರೆ.
ಇಲ್ಲಿ ಕೆಲವು ಜನರು ಮಾಡುವ ತಪ್ಪು ಏನೆಂದರೆ: ಎರಡು ರಕಅತ್ಗಳ ನಮಾಝ್ ಅನ್ನು ಮಕಾಮ್ನ ಹತ್ತಿರವೇ ನಿರ್ವಹಿಸಬೇಕು ಎಂದು ಅವರು ಭಾವಿಸುವುದು. ಇದಕ್ಕಾಗಿ ಅವರು ನೂಕುನುಗ್ಗಲು ಮಾಡುತ್ತಾರೆ ಮತ್ತು ಹಜ್ನ ಋತುವಿನಲ್ಲಿ ಕೂಡ ತವಾಫ್ ಮಾಡುವವರಿಗೆ ತೊಂದರೆ ಕೊಡುತ್ತಾರೆ, ಹಾಗೂ ಅವರ ತವಾಫ್ನ ಸಂಚಲನಕ್ಕೆ ಅಡ್ಡಿಪಡಿಸುತ್ತಾರೆ. ಈ ಭಾವನೆಯು ತಪ್ಪಾಗಿದೆ.
ತವಾಫ್ ನಂತರದ ಎರಡು ರಕಅತ್ಗಳು ಮಸೀದಿಯ ಯಾವುದೇ ಸ್ಥಳದಲ್ಲಿ ಮಾಡಿದರೂ ಸಿಂಧುವಾಗುತ್ತದೆ. ನಮಾಝ್ ಮಾಡುವವರು ಮಕಾಮ್ನಿಂದ ದೂರವಿದ್ದರೂ ಸಹ ಅದನ್ನು ತಮ್ಮ ಮತ್ತು ಕಅಬಾದ ನಡುವೆ ಇರುವಂತೆ ಮಾಡಿಕೊಳ್ಳಬಹುದು, ಕಅಬಾದ ಅಂಗಳದಲ್ಲಿ ಅಥವಾ ಮಸೀದಿಯ ಮೊಗಸಾಲೆಯಲ್ಲಿ ನಮಾಝ್ ಮಾಡಬಹುದು. ಇದರಿಂದ ಅವರು ತೊಂದರೆಯಿಂದ ಪಾರಾಗುತ್ತಾರೆ. ತಾವೂ ತೊಂದರೆ ಕೊಡುವುದಿಲ್ಲ ಮತ್ತು ತೊಂದರೆಗೊಳಗಾಗುವುದೂ ಇಲ್ಲ. ಇದರಿಂದ ಅವರಿಗೆ ವಿನಮ್ರತೆ ಮತ್ತು ನೆಮ್ಮದಿಯಿಂದ ನಮಾಝ್ ಮಾಡಲು ಸಾಧ್ಯವಾಗುತ್ತದೆ.
ಮಸ್ಜಿದುಲ್-ಹರಾಮ್ನ ಉಸ್ತುವಾರಿ ನೋಡಿಕೊಳ್ಳುವವರು ಮಕಾಮ್ನ ಹತ್ತಿರ ಅದರ ಹಿಂದೆ ನಮಾಝ್ ಮಾಡುವ ಮೂಲಕ ತವಾಫ್ ಮಾಡುವವರಿಗೆ ತೊಂದರೆ ಕೊಡುವವರನ್ನು ತಡೆದರೆ ಮತ್ತು ತವಾಫ್ ನಂತರದ ಎರಡು ರಕಅತ್ಗಳಿಗೆ ಇಂತಹ ಒಂದು ಷರತ್ತಿಲ್ಲ (ಇಲ್ಲೇ ನಮಾಝ್ ನಿರ್ವಹಿಸಬೇಕೆಂಬ ಷರತ್ತಿಲ್ಲ) ಎಂದು ಅವರಿಗೆ ಸ್ಪಷ್ಟಪಡಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು.
ಇನ್ನೊಂದು ತಪ್ಪು ಏನೆಂದರೆ: ಮಕಾಮ್ನ ಹಿಂದೆ ನಮಾಝ್ ಮಾಡುವವರಲ್ಲಿ ಕೆಲವರು, ಇತರ ಜನರಿಗೆ ಆ ಸ್ಥಳದ ಆವಶ್ಯಕತೆ ಇದೆಯೆಂದು ತಿಳಿದಿದ್ದರೂ, ಯಾವುದೇ ಕಾರಣವಿಲ್ಲದೆ ಅನೇಕ ರಕಅತ್ ನಮಾಝ್ ಮಾಡುತ್ತಾರೆ.
ಇನ್ನೊಂದು ತಪ್ಪು ಏನೆಂದರೆ: ಕೆಲವು ತವಾಫ್ ಮಾಡುವವರು ಎರಡು ರಕಅತ್ಗಳನ್ನು ಮುಗಿಸಿದ ನಂತರ, ಅವರ ಮುಖಂಡನು ಅವರೊಂದಿಗೆ ನಿಂತು ಗಟ್ಟಿಯಾದ ಧ್ವನಿಯಲ್ಲಿ ಪ್ರಾರ್ಥಿಸುತ್ತಾನೆ. ಇದರಿಂದ ಅವರು ಮಕಾಮ್ನ ಹಿಂದೆ ನಮಾಝ್ ಮಾಡುವವರಿಗೆ ತೊಂದರೆ ಕೊಡುವುದು ಮಾತ್ರವಲ್ಲದೆ, ಅವರ ಮೇಲೆ ಅತಿರೇಕವೆಸಗಿದಂತೆಯೂ ಆಗುತ್ತದೆ. ಅಲ್ಲಾಹು ಹೇಳುತ್ತಾನೆ: "ನಿಮ್ಮ ರಬ್ʼ (ಅಲ್ಲಾಹು)ವನ್ನು ವಿನಮ್ರತೆಯಿಂದ ಮತ್ತು ರಹಸ್ಯವಾಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ, ಅವನು ಅತಿರೇಕವೆಸಗುವವರನ್ನು ಇಷ್ಟಪಡುವುದಿಲ್ಲ." [ಅಲ್-ಅಅ್ರಾಫ್: 55].
ಸಫಾ ಮತ್ತು ಮರ್ವಾವನ್ನು ಹತ್ತುವುದು, ಅವುಗಳ ಮೇಲೆ ಪ್ರಾರ್ಥಿಸುವುದು, ಎರಡು ಹಸಿರು ಗುರುತುಗಳ ನಡುವೆ ಓಡುವುದು (ಸಈ), ಮತ್ತು ಅದರಲ್ಲಿನ ತಪ್ಪುಗಳು
ಪ್ರವಾದಿ (ಸ) ರವರಿಂದ ದೃಢಪಟ್ಟಿರುವುದೇನೆಂದರೆ, ಅವರು ಸಫಾದ ಹತ್ತಿರ ಬಂದಾಗ ಹೀಗೆ ಪಠಿಸುತ್ತಿದ್ದರು: "ಇನ್ನಸ್ಸಫಾ ವಲ್ ಮರ್ವತ ಮಿನ್ ಶಆಇರಿಲ್ಲಾಹ್" (ಖಂಡಿತವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹುವಿನ ಚಿಹ್ನೆಗಳಲ್ಲಿ ಸೇರಿವೆ." [ಅಲ್-ಬಖರ: 158], ನಂತರ ಅವರು ಅದರ ಮೇಲೆ ಕಅಬಾ ಕಾಣುವ ತನಕ ಹತ್ತಿದರು. ನಂತರ ಕಿಬ್ಲಾದ ಕಡೆಗೆ ಮುಖ ಮಾಡಿ, ತಮ್ಮ ಕೈಗಳನ್ನು ಎತ್ತಿ, ಅಲ್ಲಾಹುವನ್ನು ಸ್ತುತಿಸಲು ಪ್ರಾರಂಭಿಸಿದರು, ಹಾಗೂ ತಮಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ನಂತರ ಅವರು ಅಲ್ಲಾಹುವಿನ ಏಕತೆಯನ್ನು ಘೋಷಿಸಿದರು (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳಿದರು) ಮತ್ತು ಅವನ ಹಿರಿಮೆಯನ್ನು ಸಾರಿದರು (ತಕ್ಬೀರ್ - ಅಲ್ಲಾಹು ಅಕ್ಬರ್ - ಹೇಳಿದರು), ನಂತರ ಇದನ್ನು ಪಠಿಸಿದರು: "ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು, ಲಹುಲ್ ಮುಲ್ಕು ವ ಲಹುಲ್ ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್, ಲಾ ಇಲಾಹ ಇಲ್ಲಲ್ಲಾಹು ವಹ್ದಹು, ಅಂಜಝ ವಅ್ದಹು, ವ ನಸರ ಅಬ್ದಹು, ವ ಹಝಮಲ್ ಅಹ್ಝಾಬ ವಹ್ದಹು." (ಅಲ್ಲಾಹುವಿನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಸಾರ್ವಭೌಮತ್ವವು ಅವನಿಗೇ ಸೇರಿದ್ದು, ಸ್ತುತಿಯು ಅವನಿಗೇ ಮೀಸಲು. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ಅಲ್ಲಾಹುವಿನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಅವನು ಏಕೈಕನು. ಅವನು ತನ್ನ ವಾಗ್ದಾನವನ್ನು ಈಡೇರಿಸಿದನು, ತನ್ನ ದಾಸನಿಗೆ ಸಹಾಯ ಮಾಡಿದನು, ಮತ್ತು (ಶತ್ರು) ಗುಂಪುಗಳನ್ನು ಅವನೊಬ್ಬನೇ ಸೋಲಿಸಿದನು.) ಅವರು ಈ ಪ್ರಾರ್ಥನೆಯನ್ನು ಮೂರು ಬಾರಿ ಪಠಿಸಿದರು ಮತ್ತು ಅವುಗಳ ನಡುವೆ ಬೇರೆ ಪ್ರಾರ್ಥನೆಯನ್ನು ಪಠಿಸುತ್ತಿದ್ದರು. ನಂತರ (ಸಫಾದಿಂದ) ನಡೆಯುತ್ತಾ ಇಳಿದರು. ಅವರ ಕಾಲುಗಳು ಕಣಿವೆಯ ತಳಭಾಗವನ್ನು ತಲುಪಿದಾಗ - ಅದು ಎರಡು ಹಸಿರು ಗುರುತುಗಳ ನಡುವಿನ ಪ್ರದೇಶವಾಗಿದೆ - ಅವರು ಓಡಿದರು (ಸಈ ಮಾಡಿದರು). ಆ ಎರಡು ಗುರುತುಗಳ ಪ್ರದೇಶವನ್ನು ದಾಟಿದ ನಂತರ, ಅವರು ಮರ್ವಾ ತಲುಪುವವರೆಗೆ ನಡೆದರು. ನಂತರ ಅವರು ಮರ್ವಾದ ಮೇಲೆ ಸಫಾದಲ್ಲಿ ಮಾಡಿದಂತೆಯೇ ಮಾಡಿದರು[26]. [26] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹಜ್ಜತು ನ್ನಬಿ ﷺ, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಸಈ ಮಾಡುವ ಕೆಲವರು ಇಲ್ಲಿ ಮಾಡುವ ತಪ್ಪು ಏನೆಂದರೆ: ಅವರು ಸಫಾ ಮತ್ತು ಮರ್ವಾ ಹತ್ತಿದಾಗ, ಕಅಬಾದ ಕಡೆಗೆ ಮುಖಮಾಡಿ, ಮೂರು ಬಾರಿ ತಕ್ಬೀರ್ ಹೇಳುತ್ತಾ ನಮಾಝ್ನಲ್ಲಿ ಮಾಡುವಂತೆ ತಮ್ಮ ಕೈಗಳನ್ನು ಎತ್ತಿ ಕಅಬಾದ ಕಡೆಗೆ ಬೊಟ್ಟು ಮಾಡುತ್ತಾರೆ. ನಂತರ ಇಳಿದು ಬರುತ್ತಾರೆ. ಇದು ಪ್ರವಾದಿ (ಸ) ರವರು ಕಲಿಸಿಕೊಟ್ಟಿರುವುದಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಅವರಿಗೆ ಸಾಧ್ಯವಾದರೆ, ಒಂದೋ ಅವರು ಸುನ್ನತ್ತನ್ನು ಅದರಂತೆಯೇ ನಿರ್ವಹಿಸಬೇಕು, ಅಥವಾ ಅದನ್ನು ಬಿಟ್ಟುಬಿಡಬೇಕು. ಪ್ರವಾದಿ (ಸ) ರವರು ಮಾಡದ ಒಂದು ಕಾರ್ಯವನ್ನು ಹೊಸದಾಗಿ ಪ್ರಾರಂಭಿಸಬಾರದು.
ಸಈ ಮಾಡುವ ಕೆಲವರು ಇಲ್ಲಿ ಮಾಡುವ ಇನ್ನೊಂದು ತಪ್ಪು ಏನೆಂದರೆ: ಅವರು ಸಫಾದಿಂದ ಮರ್ವಾದವರೆಗೆ ಸಈ ಮಾಡುತ್ತಾರೆ. ಅಂದರೆ: ಅವರು ಸಫಾ ಮತ್ತು ಮರ್ವಾದ ನಡುವಿನ ಸಂಪೂರ್ಣ ದೂರದಲ್ಲಿ ವೇಗವಾಗಿ ನಡೆಯುತ್ತಾರೆ. ಇದು ಸುನ್ನತ್ತಿಗೆ ವಿರುದ್ಧವಾಗಿದೆ. ಏಕೆಂದರೆ ಸಈ ಮಾಡಬೇಕಾದುದು ಕೇವಲ ಎರಡು ಹಸಿರು ಗುರುತುಗಳ ನಡುವೆ ಮಾತ್ರ. ಮಸ್ಆದ ಉಳಿದ ಸ್ಥಳದಲ್ಲಿ ನಡೆಯುತ್ತಾ ಸಾಗಬೇಕು. ಇದು ಹೆಚ್ಚಾಗಿ ಸಂಭವಿಸುವುದು ಒಂದೋ ಅವರ ಅಜ್ಞಾನದಿಂದ, ಅಥವಾ ಅನೇಕ ಜನರು ಆತುರದಿಂದ ಸಈ ನಿರ್ವಹಿಸಿ ಅದರಿಂದ ಬೇಗನೆ ಮುಕ್ತರಾಗಲು ಬಯಸುವುದರಿಂದಾಗಿದೆ. ಸಹಾಯ ಯಾಚಿಸಲು ಅಲ್ಲಾಹು ಮಾತ್ರ ಅರ್ಹನು!
ಇನ್ನೊಂದು ತಪ್ಪು ಏನೆಂದರೆ: ಕೆಲವು ಮಹಿಳೆಯರು ಎರಡು ಹಸಿರು ಗುರುತುಗಳ ನಡುವೆ ಸಈ ಮಾಡುತ್ತಾರೆ. ಅಂದರೆ: ಪುರುಷರು ಮಾಡುವಂತೆ ಅವುಗಳ ನಡುವೆ ವೇಗವಾಗಿ ನಡೆಯುತ್ತಾರೆ. ಆದರೆ ಮಹಿಳೆ ಸಈ ಮಾಡಬಾರದು. ಅವಳು ಸಾಮಾನ್ಯ ನಡಿಗೆಯಲ್ಲಿ ಸಾಗಬೇಕು. ಏಕೆಂದರೆ ಇಬ್ನ್ ಉಮರ್ (ರ) ರವರು ಹೇಳುತ್ತಾರೆ: "ಮಹಿಳೆಯರಿಗೆ ಕಅಬಾದ ಸುತ್ತ ರಮ್ಲ್ (ವೇಗವಾಗಿ ನಡೆಯುವುದು) ಇಲ್ಲ. ಸಫಾ ಮತ್ತು ಮರ್ವಾದ ನಡುವೆಯೂ ಇಲ್ಲ."[27] [27] ಇದನ್ನು ಇಬ್ನ್ ಅಬೀ ಶೈಬಾ 'ಅಲ್-ಮುಸನ್ನಫ್' (5/164), ಸಂಖ್ಯೆ (13097) ರಲ್ಲಿ ವರದಿ ಮಾಡಿದ್ದಾರೆ, ಮುದ್ರಣ: ಅರ್ರುಶ್ದ್.
ಇನ್ನೊಂದು ತಪ್ಪು ಏನೆಂದರೆ: ಸಈ ಮಾಡುವಾಗ ಕೆಲವರು ಅಲ್ಲಾಹುವಿನ ಈ ವಚನವನ್ನು: "ಇನ್ನಸ್ಸಫಾ ವಲ್ ಮರ್ವತ ಮಿನ್ ಶಆಇರಿಲ್ಲಾಹ್". [ಅಲ್-ಬಖರ:158] ಪ್ರತಿ ಬಾರಿ ಸಫಾ ಅಥವಾ ಮರ್ವಾದ ಹತ್ತಿರ ಬಂದಾಗ ಪಠಿಸುತ್ತಾರೆ. ಆದರೆ ಸುನ್ನತ್ ಏನೆಂದರೆ: ಮೊದಲ ಸುತ್ತಿನಲ್ಲಿ ಸಫಾದ ಹತ್ತಿರ ಬಂದಾಗ ಮಾತ್ರ ಇದನ್ನು ಪಠಿಸುವುದು.
ಇನ್ನೊಂದು ತಪ್ಪು ಏನೆಂದರೆ: ಸಈ ಮಾಡುವಾಗ ಕೆಲವರು ಪ್ರತಿ ಸುತ್ತಿಗೂ ಒಂದು ನಿರ್ದಿಷ್ಟ ಪ್ರಾರ್ಥನೆಯನ್ನು ಪಠಿಸುತ್ತಾರೆ. ಇದಕ್ಕೆ ಯಾವುದೇ ಆಧಾರವಿಲ್ಲ.
ಅರಫದಲ್ಲಿ ನಿಲ್ಲುವುದು (ವುಕೂಫ್) ಮತ್ತು ಅದರಲ್ಲಿನ ತಪ್ಪುಗಳು
ಪ್ರವಾದಿ (ಸ) ರವರಿಂದ ದೃಢಪಟ್ಟಿರುವುದೇನೆಂದರೆ, ಅವರು ಅರಫ ದಿನದಂದು ಸೂರ್ಯನು ಮಧ್ಯಾಹ್ನ ದಾಟುವವರೆಗೆ ನಮಿರಾದಲ್ಲಿ ತಂಗಿದ್ದರು. ನಂತರ ಸವಾರಿ ಮಾಡಿದರು. ಬಳಿಕ ಇಳಿದು ಬಂದರು. ನಂತರ ಝುಹ್ರ್ ಮತ್ತು ಅಸ್ರ್ ನಮಾಝ್ಗಳನ್ನು ಎರಡು-ಎರಡು ರಕಅತ್ಗಳಾಗಿ ಜಮ್ಅ ತಖ್ದೀಮ್ ಆಗಿ ಒಂದು ಅಧಾನ್ ಮತ್ತು ಎರಡು ಇಖಾಮತ್ಗಳೊಂದಿಗೆ ನಮಾಝ್ ಮಾಡಿದರು. ನಂತರ ಸವಾರಿ ಮಾಡಿ ತಮ್ಮ ನಿಲ್ಲುವ ಸ್ಥಳ(ಮೌಖಿಫ್)ಕ್ಕೆ ಬಂದರು. ಅಲ್ಲಿ ನಿಂತರು, ಮತ್ತು ಹೇಳಿದರು: "ನಾನು ಇಲ್ಲಿ ನಿಂತಿದ್ದೇನೆ, ಮತ್ತು ಅರಫ ಪೂರ್ತಿಯಾಗಿ ನಿಲ್ಲುವ ಸ್ಥಳವಾಗಿದೆ." ಅವರು ಸೂರ್ಯಾಸ್ತವಾಗುವವರೆಗೆ ಮತ್ತು ಸೂರ್ಯನ ಬಿಲ್ಲೆ ಸಂಪೂರ್ಣವಾಗಿ ಕಣ್ಮರೆಯಾಗುವವರೆಗೆ ಕಿಬ್ಲಾದ ಕಡೆಗೆ ಮುಖ ಮಾಡಿ, ಕೈಗಳನ್ನು ಎತ್ತಿ, ಅಲ್ಲಾಹುವನ್ನು ಸ್ಮರಿಸುತ್ತಾ ಮತ್ತು ಪ್ರಾರ್ಥಿಸುತ್ತಾ ನಿಂತಿದ್ದರು. ನಂತರ ಅವರು ಮುಝ್ದಲಿಫಾದ ಕಡೆಗೆ ಹೊರಟರು[28]. [28] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹಜ್ಜತು ನ್ನಬಿ ﷺ, ಮತ್ತು ಬಾಬ್ ಮಾ ಜಾಅ ಅನ್ನ ಅರಫತ ಕುಲ್ಲಹಾ ಮೌಖಿಫ್, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಕೆಲವು ಹಾಜಿಗಳು ಮಾಡುವ ತಪ್ಪುಗಳು:
1. ಕೆಲವು ಹಾಜಿಗಳು ಅರಫದ ಗಡಿಯ ಹೊರಗೆ ಇಳಿಯುತ್ತಾರೆ, ಮತ್ತು ಸೂರ್ಯಾಸ್ತವಾಗುವವರೆಗೆ ಆ ಸ್ಥಳಗಳಲ್ಲಿಯೇ ತಂಗುತ್ತಾರೆ. ನಂತರ ಅರಫದಲ್ಲಿ ನಿಲ್ಲದೆ ಅಲ್ಲಿಂದ ಮುಝ್ದಲಿಫಾದ ಕಡೆಗೆ ಹೊರಡುತ್ತಾರೆ. ಇದು ಹಜ್ ಅನ್ನು ಅಸಿಂಧುಗೊಳಿಸುವ ಗಂಭೀರ ತಪ್ಪಾಗಿದೆ. ಏಕೆಂದರೆ ಅರಫದಲ್ಲಿ ನಿಲ್ಲುವುದು ಹಜ್ನ ಒಂದು ರುಕ್ನ್ (ಅವಿಭಾಜ್ಯ ಅಂಗ) ಆಗಿದ್ದು, ಅದು ಇಲ್ಲದೆ ಹಜ್ ಸಿಂಧುವಾಗುವುದಿಲ್ಲ. ಆದ್ದರಿಂದ, ಯಾರು ವುಖೂಫ್ನ ಸಮಯದಲ್ಲಿ ಅರಫದಲ್ಲಿ ನಿಲ್ಲುವುದಿಲ್ಲವೋ, ಅವರ ಹಜ್ ಸಿಂಧುವಾಗುವುದಿಲ್ಲ. ಏಕೆಂದರೆ ಪ್ರವಾದಿ (ಸ) ರವರು ಹೇಳುತ್ತಾರೆ: "ಹಜ್ ಎಂದರೆ ಅರಫ. ಯಾರು ಜಮ್ಅ್ʼದ ರಾತ್ರಿಯಲ್ಲಿ ಫಜ್ರ್ ಉದಯಿಸುವ ಮೊದಲು (ಅರಫಗೆ) ಬರುತ್ತಾರೋ, ಅವರು ಹಜ್ ಅನ್ನು ಪಡೆದುಕೊಂಡರು."[29] [29] ಇದನ್ನು ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಮನ್ ಲಮ್ ಯುದ್ರಿಕ್ ಅರಫ, ಸಂಖ್ಯೆ (1949), ತಿರ್ಮಿಧಿ, ಕಿತಾಬುಲ್-ಹಜ್, ಬಾಬ್ ಮಾ ಜಾಅ ಫೀಮನ್ ಅದ್ರಕಲ್-ಇಮಾಮ ಬಿಜಮ್ಇನ್, ಸಂಖ್ಯೆ (889), ನಸಾಯಿ, ಕಿತಾಬುಲ್-ಮನಾಸಿಕ್, ಬಾಬ್ ಫರ್ದುಲ್-ವುಖೂಫಿ ಬಿಅರಫಃ, ಸಂಖ್ಯೆ (3019), ಇಬ್ನ್ ಮಾಜ, ಕಿತಾಬುಲ್-ಹಜ್, ಬಾಬ್ ಮನ್ ಅತಾ ಅರಫತ ಖಬ್ಲಲ್-ಫಜ್ರಿ ಲೈಲತ ಜಮ್ಇನ್, ಸಂಖ್ಯೆ (3015), ಮತ್ತು ಅಹ್ಮದ್ (4/309) ಅಬ್ದುರ್ರಹ್ಮಾನ್ ಇಬ್ನ್ ಯಅ್ಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಈ ಗಂಭೀರ ತಪ್ಪಿಗೆ ಕಾರಣ: ಜನರು ಒಬ್ಬರನ್ನೊಬ್ಬರು ನೋಡಿ ಮೋಸ ಹೋಗುವುದು. ಏಕೆಂದರೆ ಕೆಲವರು ಅದನ್ನು (ಅರಫ) ತಲುಪುವ ಮೊದಲೇ ಇಳಿಯುತ್ತಾರೆ. ಅವರು ಅದರ ಗಡಿ ಗುರುತುಗಳನ್ನು ಪರಿಶೀಲಿಸುವುದಿಲ್ಲ. ಹೀಗೆ ಅವರು ತಮ್ಮ ಹಜ್ ಅನ್ನು ಕಳೆದುಕೊಳ್ಳುತ್ತಾರೆ ಮತ್ತು ಇತರರನ್ನೂ ಮೋಸಗೊಳಿಸುತ್ತಾರೆ.
ಹಜ್ನ ಉಸ್ತುವಾರಿ ನೋಡಿಕೊಳ್ಳುವವರು ಎಲ್ಲರಿಗೂ ತಲುಪುವ ಮಾಧ್ಯಮದ ಮೂಲಕ, ಬಹು ಭಾಷೆಗಳಲ್ಲಿ ಜನರಿಗೆ ಇದನ್ನು ಘೋಷಿಸಿದರೆ ಮತ್ತು ಮುತವ್ವಿಫ್ಗಳಿಗೆ (ಹಜ್ ಮಾರ್ಗದರ್ಶಕರು) ಹಜ್ ಯಾತ್ರಿಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಲು ಸೂಚಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು. ಇದರಿಂದ ಜನರು ತಮ್ಮ ವಿಷಯದಲ್ಲಿ ಸ್ಪಷ್ಟತೆಯನ್ನು ಹೊಂದಿರುತ್ತಿದ್ದರು ಮತ್ತು ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸುವ ರೀತಿಯಲ್ಲಿ ತಮ್ಮ ಹಜ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು.
2. ಕೆಲವರು ಸೂರ್ಯಾಸ್ತಕ್ಕೆ ಮುಂಚೆಯೇ ಅರಫದಿಂದ ಹೊರಡುತ್ತಾರೆ. ಇದು ಹರಾಮ್ (ನಿಷಿದ್ಧ) ಆಗಿದೆ. ಏಕೆಂದರೆ ಇದು ಪ್ರವಾದಿ (ಸ) ರವರ ಸುನ್ನತ್ತಿಗೆ ವಿರುದ್ಧವಾಗಿದೆ. ಅವರು ಸೂರ್ಯಾಸ್ತವಾಗಿ ಸೂರ್ಯನ ಬಿಲ್ಲೆ ಕಣ್ಮರೆಯಾಗುವವರೆಗೆ (ಅರಫದಲ್ಲಿ) ನಿಂತಿದ್ದರು. ಸೂರ್ಯಾಸ್ತಕ್ಕೆ ಮುಂಚೆ ಅರಫದಿಂದ ಹೊರಡುವುದು ಜಾಹಿಲಿಯ್ಯತ್ (ಅಜ್ಞಾನದ ಕಾಲ) ದವರ ಪದ್ಧತಿಯಾಗಿತ್ತು.
3. ಕೆಲವರು ಪ್ರಾರ್ಥಿಸುವಾಗ ಜಬಲ್ ಅರಾಫತ್ (ಅರಾಫತ್ ಪರ್ವತ) ದ ಕಡೆಗೆ ಮುಖ ಮಾಡುತ್ತಾರೆ. ಕಿಬ್ಲಾ ಅವರ ಬೆನ್ನ ಹಿಂದೆ ಅಥವಾ ಬಲಕ್ಕೆ ಅಥವಾ ಎಡಕ್ಕೆ ಇದ್ದರೂ ಸಹ. ಇದು ಸುನ್ನತ್ತಿಗೆ ವಿರುದ್ಧವಾಗಿದೆ. ಏಕೆಂದರೆ ಪ್ರವಾದಿ (ಸ) ಮಾಡಿದಂತೆ ಕಿಬ್ಲಾದ ಕಡೆಗೆ ಮುಖ ಮಾಡುವುದು ಸುನ್ನತ್ ಆಗಿದೆ.
ಜಮಾರಾತ್ಗೆ ಕಲ್ಲು ಎಸೆಯುವುದು ಮತ್ತು ಅದರಲ್ಲಿನ ತಪ್ಪುಗಳು
ಪ್ರವಾದಿ (ಸ) ರವರಿಂದ ದೃಢಪಟ್ಟಿರುವುದೇನೆಂದರೆ, ಅವರು ನಹ್ರ್ (ಬಲಿ) ದಿನದ ದುಹಾ ಸಮಯದಲ್ಲಿ ಜಮ್ರತುಲ್-ಅಖಬಾ - ಇದು ಮಕ್ಕಾದ ಸಮೀಪವಿರುವ ಕೊನೆಯ ಜಮ್ರಾ - ಗೆ ಏಳು ಕಲ್ಲುಗಳನ್ನು ಎಸೆದರು. ಪ್ರತಿ ಕಲ್ಲಿನೊಂದಿಗೆ ತಕ್ಬೀರ್ ಹೇಳುತ್ತಿದ್ದರು[30]. ಪ್ರತಿಯೊಂದು ಕಲ್ಲು ಹಸಲ್-ಖಧ್ಫ್ (ಕಡಲೆಕಾಳಿಗಿಂತ ಸ್ವಲ್ಪ ದೊಡ್ಡ) ಗಾತ್ರದಲ್ಲಿತ್ತು. [30] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಇಧಾ ರಮಲ್-ಜಮ್ರತೈನಿ ಯಖೂಮು ವ ಯುಸ್ಹಿಲು ಮುಸ್ತಖ್ಬಿಲಲ್-ಖಿಬ್ಲಾ, ಸಂಖ್ಯೆ (1751) ಇಬ್ನ್ ಉಮರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ. ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಹಜ್ಜತು ನ್ನಬಿ ﷺ, ಸಂಖ್ಯೆ (1218) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಸುನನ್ ನಸಾಯಿಯಲ್ಲಿ ಫದ್ಲ್ ಬಿನ್ ಅಬ್ಬಾಸ್ (ರ) ರಿಂದ ವರದಿ - ಅವರು ಮುಝ್ದಲಿಫಾದಿಂದ ಮಿನಾಕ್ಕೆ ಪ್ರವಾದಿ (ಸ) ರವರ ಹಿಂದೆ ಸವಾರಿ ಮಾಡುತ್ತಿದ್ದರು - ಅವರು ಹೇಳಿದರು: ಪ್ರವಾದಿ (ಸ) ರವರು ಮುಹಸ್ಸಿರ್ನಲ್ಲಿ ಇಳಿದರು, ಮತ್ತು ಹೇಳಿದರು: "ಜಮರಾಕ್ಕೆ ಎಸೆಯಲು ಹಸಲ್-ಖಧ್ಫ್ನಂತಹ (ಕಡಲೆಕಾಳಿಗಿಂತ ಸ್ವಲ್ಪ ದೊಡ್ಡದಾದ) ಕಲ್ಲುಗಳನ್ನು ಬಳಸಿರಿ." ವರದಿಗಾರರು ಹೇಳುತ್ತಾರೆ: ಪ್ರವಾದಿ (ಸ) ರವರು ಒಬ್ಬ ಮನುಷ್ಯನು ಕಲ್ಲನ್ನು ಚಿಮ್ಮಿಸುವಂತೆ ತಮ್ಮ ಕೈಯಿಂದ ಬೊಟ್ಟು ಮಾಡುತ್ತಿದ್ದರು[31]. [31] ಇದನ್ನು ನಸಾಯಿ, ಕಿತಾಬ್ ಮನಾಸಿಕುಲ್-ಹಜ್, ಬಾಬ್ ಮಿನ್ ಐನ ಯುಲ್ತಖತುಲ್-ಹಸಾ?, ಸಂಖ್ಯೆ (3060) ರಲ್ಲಿ ವರದಿ ಮಾಡಿದ್ದಾರೆ. ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ಇದಾಮತಿಲ್-ಹಾಜ್ಜಿ ತ್ತಲ್ಬಿಯತ ಹತ್ತಾ ಯಶ್ರಅ ಫೀ ರಮ್ಯಿ ಜಮ್ರತಿಲ್-ಅಖಬಾ, ಸಂಖ್ಯೆ (1282) ರಲ್ಲಿಯೂ ವರದಿ ಮಾಡಿದ್ದಾರೆ.
ಮುಸ್ನದ್ ಇಮಾಮ್ ಅಹ್ಮದ್ ನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಯಹ್ಯಾ ಹೇಳಿದರು: ಅದು ಅಬ್ದುಲ್ಲಾ ಆಗಿದ್ದಾರೋ ಅಥವಾ ಫದ್ಲ್ ಆಗಿದ್ದಾರೋ ಎಂದು ಔಫ್ ರಿಗೆ ತಿಳಿದಿಲ್ಲವೇ? ಅವರು ಹೇಳಿದರು: ಅಖಬಾದ ಮುಂಜಾನೆ ಅಲ್ಲಾಹುವಿನ ಸಂದೇಶವಾಹಕರು (ಸ) ತಮ್ಮ ವಾಹನದ ಮೇಲೆ ನಿಂತಿದ್ದಾಗ ನನಗೆ ಹೇಳಿದರು: "ನನಗಾಗಿ ಕಲ್ಲುಗಳನ್ನು ಹೆಕ್ಕಿಕೊಂಡು ಬಾ." ಆಗ ನಾನು ಅವರಿಗಾಗಿ ಹಸಲ್-ಖಧ್ಫ್ನಂತಹ ಕಲ್ಲುಗಳನ್ನು ಹೆಕ್ಕಿದೆನು. ಅವರು ಅವುಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು, "ಇಂತಹ ಕಲ್ಲುಗಳನ್ನು" ಎಂದು ಎರಡು ಬಾರಿ ತಮ್ಮ ಕೈಯಿಂದ ಬೊಟ್ಟು ಮಾಡುತ್ತಾ ಹೇಳಿದರು. ಅವರು ಅದನ್ನು ಎತ್ತಿ ಹಿಡಿದಿದ್ದರು ಎಂದು ಯಹ್ಯಾ (ತಮ್ಮ ಕೈಯ ಮೂಲಕ) ಸೂಚಿಸಿದರು. ನಂತರ ಪ್ರವಾದಿ(ಸ) ರವರು ಹೇಳಿದರು: "ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ನಿಮಗಿಂತ ಹಿಂದಿನವರು ಧರ್ಮದಲ್ಲಿ ಮಿತಿಮೀರಿದ್ದರಿಂದಲೇ ನಾಶವಾದರು."[32] [32] ಇದನ್ನು ಇಮಾಮ್ ಅಹ್ಮದ್ 'ಅಲ್-ಮುಸ್ನದ್' (1/347) ರಲ್ಲಿ ವರದಿ ಮಾಡಿದ್ದಾರೆ. ಇದನ್ನು ನಸಾಯಿ, ಕಿತಾಬ್ ಮನಾಸಿಕುಲ್-ಹಜ್, ಬಾಬ್ ಇಲ್ತಿಕಾತುಲ್-ಹಸಾ, ಸಂಖ್ಯೆ (3059), ಮತ್ತು ಇಬ್ನ್ ಮಾಜ, ಕಿತಾಬುಲ್-ಮನಾಸಿಕ್, ಬಾಬ್ ಖದ್ರು ಹಸ ರ್ರಮ್ಯ್, ಸಂಖ್ಯೆ (3029) ರಲ್ಲಿಯೂ ವರದಿ ಮಾಡಿದ್ದಾರೆ.
ಉಮ್ಮು ಸುಲೈಮಾನ್ ಬಿಂತ್ ಅಮ್ರ್ ಬಿನ್ ಅಲ್-ಅಹ್ವಸ್ (ರ) ರಿಂದ ವರದಿ, ಅವರು ಹೇಳಿದರು: ನಾನು ನಹ್ರ್ (ಬಲಿ) ದಿನದಂದು ಪ್ರವಾದಿ (ಸ) ರವರು ಕಣಿವೆಯ ತಳದಿಂದ ಜಮ್ರತುಲ್-ಅಖಬಾಕ್ಕೆ ಕಲ್ಲು ಎಸೆಯುವುದನ್ನು ನೋಡಿದೆನು, ಅವರು ಹೇಳುತ್ತಿದ್ದರು: "ಓ ಜನರೇ, ನೀವು ಒಬ್ಬರನ್ನೊಬ್ಬರು ಕೊಲ್ಲಬೇಡಿರಿ! ನೀವು ಜಮ್ರಾಕ್ಕೆ ಕಲ್ಲು ಎಸೆಯುವಾಗ, ಹಸಲ್-ಖಧ್ಫ್ನಂತಹ ಕಲ್ಲುಗಳನ್ನು ಎಸೆಯಿರಿ." ಇದನ್ನು ಅಹ್ಮದ್[33] ವರದಿ ಮಾಡಿದ್ದಾರೆ. [33] ಇದನ್ನು ಇಮಾಮ್ ಅಹ್ಮದ್ 'ಅಲ್-ಮುಸ್ನದ್' (3/503) ರಲ್ಲಿ ವರದಿ ಮಾಡಿದ್ದಾರೆ. ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಫೀ ರಮ್ಯಿಲ್-ಜಿಮಾರ್, ಸಂಖ್ಯೆ (1966) ರಲ್ಲಿಯೂ ವರದಿ ಮಾಡಿದ್ದಾರೆ.
ಸಹೀಹ್ ಬುಖಾರಿ ಯಲ್ಲಿ ಇಬ್ನ್ ಉಮರ್ (ರ) ರಿಂದ ವರದಿ. ಅವರು ಮೊದಲನೇ ಜಮ್ರಾಕ್ಕೆ ಏಳು ಕಲ್ಲುಗಳನ್ನು ಎಸೆಯುತ್ತಿದ್ದರು, ಪ್ರತಿ ಕಲ್ಲಿನ ನಂತರ ತಕ್ಬೀರ್ ಹೇಳುತ್ತಿದ್ದರು. ನಂತರ ಮುಂದೆ ಸಾಗಿ ವಿಶಾಲವಾದ ಸ್ಥಳಕ್ಕೆ ಹೋಗಿ, ಕಿಬ್ಲಾಕ್ಕೆ ಮುಖ ಮಾಡಿ ದೀರ್ಘಕಾಲ ನಿಲ್ಲುತ್ತಿದ್ದರು, ಮತ್ತು ಪ್ರಾರ್ಥಿಸುತ್ತಿದ್ದರು. (ಪ್ರಾರ್ಥಿಸುವಾಗ) ಕೈಗಳನ್ನು ಎತ್ತುತ್ತಿದ್ದರು. ನಂತರ ಮಧ್ಯದ ಜಮ್ರಾಕ್ಕೆ ಎಸೆಯುತ್ತಿದ್ದರು. ನಂತರ ಎಡಕ್ಕೆ ಸಾಗಿ, ವಿಶಾಲವಾದ ಸ್ಥಳಕ್ಕೆ ಹೋಗಿ, ಕಿಬ್ಲಾಕ್ಕೆ ಮುಖ ಮಾಡಿ ದೀರ್ಘಕಾಲ ನಿಲ್ಲುತ್ತಿದ್ದರು, ಮತ್ತು ಪ್ರಾರ್ಥಿಸುತ್ತಿದ್ದರು. (ಪ್ರಾರ್ಥಿಸುವಾಗ) ಕೈಗಳನ್ನು ಎತ್ತುತ್ತಿದ್ದರು. ನಂತರ ಜಮ್ರತುಲ್-ಅಖಬಾಕ್ಕೆ ಕಣಿವೆಯ ತಳದಿಂದ ಎಸೆಯುತ್ತಿದ್ದರು, ಮತ್ತು ಅದರ ಬಳಿ ನಿಲ್ಲುತ್ತಿರಲಿಲ್ಲ. ನಂತರ ಹೊರಟು ಹೋಗುತ್ತಿದ್ದರು, ಮತ್ತು ಹೇಳುತ್ತಿದ್ದರು: ಪ್ರವಾದಿ (ಸ) ರವರು ಹೀಗೆ ಮಾಡುವುದನ್ನು ನಾನು ನೋಡಿದ್ದೇನೆ[34]. [34] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಇಧಾ ರಮಲ್-ಜಮ್ರತೈನಿ ಯಖೂಮು ವ ಯುಸ್ಹಿಲು ಮುಸ್ತಖ್ಬಿಲಲ್-ಖಿಬ್ಲಾ, ಸಂಖ್ಯೆ (1751) ರಲ್ಲಿ ವರದಿ ಮಾಡಿದ್ದಾರೆ.
ಅಹ್ಮದ್ ಮತ್ತು ಅಬೂದಾವೂದ್ ರವರು ಆಯಿಷಾ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು: "ಕಅಬಾದ ಸುತ್ತ ತವಾಫ್ ಮಾಡುವುದು, ಸಫಾ ಮತ್ತು ಮರ್ವಾದ ನಡುವೆ (ಸಈ ಮಾಡುವುದು) ಮತ್ತು ಜಮರಾತ್ಗೆ ಕಲ್ಲು ಎಸೆಯುವುದು ಅಲ್ಲಾಹುವಿನ ಸ್ಮರಣೆಯನ್ನು ಸ್ಥಾಪಿಸಲು ಮಾತ್ರ ನಿಶ್ಚಯಿಸಲ್ಪಟ್ಟಿದೆ."[35] [35] ಇದನ್ನು ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಫಿರ್ರಮ್ಲ್, ಸಂಖ್ಯೆ (1888), ತಿರ್ಮಿಧಿ, ಕಿತಾಬುಲ್-ಹಜ್, ಬಾಬ್ ಮಾ ಜಾಅ ಕೈಫ ತುರ್ಮಲ್-ಜಿಮಾರ್?, ಸಂಖ್ಯೆ (902), ಮತ್ತು ಅಹ್ಮದ್ (6/64) ರಲ್ಲಿ ವರದಿ ಮಾಡಿದ್ದಾರೆ.
ಕೆಲವು ಹಾಜಿಗಳು ಮಾಡುವ ತಪ್ಪುಗಳು:
1. ಕೆಲವರು ಕಲ್ಲುಗಳನ್ನು ಮುಝ್ದಲಿಫಾದಿಂದಲೇ ತೆಗೆದುಕೊಳ್ಳಬೇಕು ಎಂದು ನಂಬುತ್ತಾರೆ. ಇದರಿಂದ ಅವರು ರಾತ್ರಿ ಕಲ್ಲುಗಳನ್ನು ಹೆಕ್ಕುವುದರಲ್ಲಿ ಮತ್ತು ಮಿನಾದಲ್ಲಿ ತಂಗುವ ದಿನಗಳಲ್ಲಿ ಅವುಗಳನ್ನು ಒಯ್ಯುವುದರಲ್ಲಿ ತಮ್ಮನ್ನು ತಾವು ಕಷ್ಟಪಡಿಸುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಅವರಲ್ಲಿ ಒಬ್ಬನ ಕಲ್ಲುಗಳು ಕಳೆದುಹೋದರೆ, ಅವನು ಬಹಳ ದುಃಖಿತನಾಗುತ್ತಾನೆ ಮತ್ತು ತನ್ನ ಸಂಗಡಿಗರಲ್ಲಿ ಮುಝ್ದಲಿಫಾದಲ್ಲಿ ಹೆಕ್ಕಿದ ಕಲ್ಲುಗಳು ಹೆಚ್ಚಿದ್ದರೆ ತನಗೆ ದಾನವಾಗಿ ನೀಡಲು ಕೇಳಿಕೊಳ್ಳುತ್ತಾನೆ.
ಈ ಹಿಂದೆ ಹೇಳಿದ್ದರಿಂದ ತಿಳಿದುಬರುವುದೇನೆಂದರೆ, ಇದಕ್ಕೆ ಪ್ರವಾದಿ (ಸ) ರವರಿಂದ ಯಾವುದೇ ಆಧಾರವಿಲ್ಲ. ಅವರು ತಮ್ಮ ವಾಹನದ ಮೇಲೆ ನಿಂತಿದ್ದಾಗ ಇಬ್ನ್ ಅಬ್ಬಾಸ್ (ರ) ರವರಿಗೆ ಕಲ್ಲುಗಳನ್ನು ಹೆಕ್ಕಿ ತರಲು ಆದೇಶಿಸಿದರು. ಅವರು ನಿಂತದ್ದು ಜಮ್ರಾದ ಬಳಿ ಆಗಿತ್ತು ಎಂಬುದು ಸ್ಪಷ್ಟ. ಏಕೆಂದರೆ ಮುಝ್ದಲಿಫಾದಿಂದ ಹೊರಟ ನಂತರ ಅದಕ್ಕೂ ಮೊದಲು ಅವರು ನಿಂತಿದ್ದರು ಎಂಬುದು ವರದಿಯಾಗಿಲ್ಲ. ಇದು ಅದರ (ಕಲ್ಲುಗಳ) ಅಗತ್ಯವಿರುವ ಸಮಯವಾಗಿತ್ತು. ಆದ್ದರಿಂದ ಅದಕ್ಕೂ ಮೊದಲು ಅದನ್ನು ಹೆಕ್ಕಲು ಅವರು ಆದೇಶಿಸುತ್ತಿರಲಿಲ್ಲ. ಏಕೆಂದರೆ ಮೊದಲೇ ಹೆಕ್ಕುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಮತ್ತು ಅದನ್ನು ಒಯ್ಯುವುದು ಕೂಡ ಸ್ವತಃ ತಮ್ಮನ್ನು ತಾವೇ ಕಷ್ಟಕ್ಕೊಳಪಡಿಸುವುದಾಗಿದೆ.
2. ಕೆಲವರು ಜಮರಾತ್ಗೆ ಕಲ್ಲು ಎಸೆಯುವ ಮೂಲಕ ಶೈತಾನರಿಗೆ ಕಲ್ಲು ಹೊಡೆಯುತ್ತಿದ್ದೇವೆ ಎಂದು ನಂಬುತ್ತಾರೆ. ಇದಕ್ಕಾಗಿಯೇ ಅವರು ಜಮರಾತ್ಗಳಿಗೆ ಶೈತಾನರ ಹೆಸರನ್ನು ಇಡುತ್ತಾರೆ. ಅವರು ಹೇಳುತ್ತಾರೆ: ನಾವು ದೊಡ್ಡ ಶೈತಾನನಿಗೆ ಅಥವಾ ಚಿಕ್ಕ ಶೈತಾನನಿಗೆ ಕಲ್ಲು ಹೊಡೆದೆವು. ಅಥವಾ ನಾವು ಶೈತಾನರ ತಂದೆಗೆ ಕಲ್ಲು ಹೊಡೆದೆವು. ಇದರಿಂದ ಅವರು ದೊಡ್ಡ ಜಮ್ರಾ, ಜಮ್ರತುಲ್-ಅಖಬಾವನ್ನು ಉದ್ದೇಶಿಸುತ್ತಾರೆ. ಈ ಪವಿತ್ರ ಸ್ಥಳಗಳಿಗೆ ಯೋಗ್ಯವಲ್ಲದ ಇಂತಹ ಮಾತುಗಳನ್ನು ಹೇಳುತ್ತಾರೆ.
ನೀವು ಅವರನ್ನು ನೋಡಿದರೆ, ಅವರು ಈ ಶೈತಾನರಿಗೆ ಉಗ್ರವಾಗಿ, ಹಿಂಸಾತ್ಮಕವಾಗಿ, ಕೂಗಾಡುತ್ತಾ, ನಿಂದನೆ ಮತ್ತು ಬೈಗುಳಗಳೊಂದಿಗೆ ಕಲ್ಲುಗಳನ್ನು ಎಸೆಯುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಕೆಲವರು ಅದರ ಮೇಲೆ ಹತ್ತಿ ಕೋಪ ಮತ್ತು ಆವೇಶದಿಂದ ಚಪ್ಪಲಿಗಳು ಮತ್ತು ದೊಡ್ಡ ಕಲ್ಲುಗಳನ್ನು ಎಸೆಯುವುದನ್ನು ನೋಡಿದ್ದೇವೆ. ಇತರ ಜನರು ಎಸೆಯುವ ಕಲ್ಲುಗಳು ಅವನಿಗೆ ತಾಗುತ್ತಿದ್ದರೂ, ಅದು ಅವನಿಗೆ ಕಲ್ಲು ಎಸೆಯಲು ಕೋಪ ಮತ್ತು ಹಿಂಸೆಯನ್ನು ಹೆಚ್ಚಿಸುತ್ತದೆಯೇ ಹೊರತು ಕಡಿಮೆ ಮಾಡುವುದಿಲ್ಲ. ಅದೊಂದು ನಾಟಕವೋ ಎಂಬಂತೆ ಅವನ ಸುತ್ತಲಿನ ಜನರು ಗಟ್ಟಿಯಾಗಿ ನಗುತ್ತಲೂ, ಗಹಗಹಿಸುತ್ತಲೂ ಇರುತ್ತಾರೆ. ಸೇತುವೆಗಳನ್ನು ನಿರ್ಮಿಸುವ ಮೊದಲು ಮತ್ತು ಜಮರಾತ್ನ ಕಂಬಗಳನ್ನು ಎತ್ತರಿಸುವ ಮೊದಲು ಇವು ಸಾಮಾನ್ಯ ದೃಶ್ಯಗಳಾಗಿದ್ದವು.
ಇದೆಲ್ಲವೂ ಹಾಜಿಗಳು ಶೈತಾನರಿಗೆ ಕಲ್ಲು ಹೊಡೆಯುತ್ತಾರೆ ಎಂಬ ನಂಬಿಕೆಯ ಮೇಲೆ ಆಧಾರಿತವಾಗಿದೆ. ಇದಕ್ಕೆ ಯಾವುದೇ ಸರಿಯಾದ, ಅವಲಂಬಿಸಬಹುದಾದ ಯಾವುದೇ ಆಧಾರವಿಲ್ಲ. ಜಮರಾತ್ಗೆ ಕಲ್ಲು ಎಸೆಯುವ ನಿಯಮದ ಹಿಂದಿನ ವಿವೇಕವನ್ನು ನೀವು ಈ ಹಿಂದೆ ತಿಳಿದುಕೊಂಡಿದ್ದೀರಿ. ಅದೇನೆಂದರೆ, ಅದು ಅಲ್ಲಾಹುವಿನ ಸ್ಮರಣೆಯನ್ನು ಸ್ಥಾಪಿಸಲು ಮಾತ್ರ ನಿಯಮಗೊಳಿಸಲಾಗಿದೆ. ಈ ಕಾರಣದಿಂದಲೇ, ಪ್ರವಾದಿ (ಸ) ರವರು ಪ್ರತಿ ಕಲ್ಲಿನೊಂದಿಗೆ ತಕ್ಬೀರ್ ಹೇಳುತ್ತಿದ್ದರು.
3. ದೊಡ್ಡ ಕಲ್ಲುಗಳನ್ನು, ಚಪ್ಪಲಿಗಳನ್ನು, ಪಾದರಕ್ಷೆಗಳನ್ನು (ಬೂಟುಗಳು) ಮತ್ತು ಮರದ ತುಂಡುಗಳನ್ನು ಜಮಾರಾತ್ಗೆ ಎಸೆಯುವುದು ದೊಡ್ಡ ತಪ್ಪು. ಇದು ಪ್ರವಾದಿ (ಸ) ರವರು ತಮ್ಮ ಕ್ರಿಯೆ ಮತ್ತು ಆದೇಶದ ಮೂಲಕ ತಮ್ಮ ಸಮುದಾಯಕ್ಕೆ ನಿಯಮಗೊಳಿಸಿದ್ದಕ್ಕೆ ವಿರುದ್ಧವಾಗಿದೆ. ಪ್ರವಾದಿ (ಸ) ರವರು ಹಸಲ್-ಖಧ್ಫ್ (ಕಡಲೆಕಾಳಿಗಿಂತ ಸ್ವಲ್ಪ ದೊಡ್ಡದು) ನಂತಹ ಕಲ್ಲುಗಳನ್ನು ಎಸೆದರು, ಮತ್ತು ಅಂತಹ ಕಲ್ಲುಗಳನ್ನೇ ಎಸೆಯಬೇಕೆಂದು ತಮ್ಮ ಸಮುದಾಯಕ್ಕೆ ಆದೇಶಿಸಿದರು. ಹಾಗೆಯೇ ಅವರು ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಎಚ್ಚರಿಸಿದರು. ಈ ದೊಡ್ಡ ತಪ್ಪಿಗೆ ಕಾರಣ ಅವರು ಶೈತಾನರಿಗೆ ಕಲ್ಲು ಹೊಡೆಯುತ್ತಿದ್ದಾರೆ ಎಂಬ ಅವರ ನಂಬಿಕೆಯಾಗಿದೆ.
4. ಕೆಲವರು ಅಲ್ಲಾಹುವಿಗೆ ವಿನಮ್ರತೆ ತೋರದೆ ಮತ್ತು ಅಲ್ಲಾಹುವಿನ ದಾಸರ ಮೇಲೆ ಕರುಣೆ ತೋರದೆ ಹಿಂಸೆ ಮತ್ತು ಕಠೋರತೆಯೊಂದಿಗೆ ಜಮರಾತ್ಗಳ ಕಡೆಗೆ ಮುನ್ನುಗ್ಗುತ್ತಾರೆ. ಅವರ ಈ ಕೃತ್ಯದಿಂದ ಇತರ ಮುಸ್ಲಿಮರಿಗೆ ತೊಂದರೆ ಮತ್ತು ಹಾನಿಯಾಗುತ್ತದೆ. ಅವರ ನಡುವೆ ನಿಂದನೆ ಹಾಗೂ ಜಗಳಗಳು ಸಂಭವಿಸುತ್ತವೆ. ಅದು ಈ ಆರಾಧನೆಯನ್ನು ಮತ್ತು ಈ ಪವಿತ್ರ ಸ್ಥಳವನ್ನು ನಿಂದನೆ ಮತ್ತು ಜಗಳದ ಸ್ಥಳವಾಗಿ ಪರಿವರ್ತಿಸುವ ಮೂಲಕ, ಅದನ್ನು ಯಾವ ಉದ್ದೇಶಕ್ಕಾಗಿ ನಿಯಮ ಮಾಡಲಾಯಿತೋ ಅದರಿಂದ ಮತ್ತು ಪ್ರವಾದಿ (ಸ) ರವರ ಮಾರ್ಗದಿಂದ ಹೊರಗಿಡುತ್ತದೆ. ಮುಸ್ನದ್ ನಲ್ಲಿ ಖುದಾಮ ಬಿನ್ ಅಬ್ದುಲ್ಲಾ ಬಿನ್ ಅಮ್ಮಾರ್ ರಿಂದ ವರದಿ. ಅವರು ಹೇಳಿದರು: ನಹ್ರ್ (ಬಲಿ) ದಿನದಂದು ಪ್ರವಾದಿ (ಸ) ರವರು ತಮ್ಮ ಕೆಂಪು-ಕಂದು ಬಣ್ಣದ ಒಂಟೆಯ ಮೇಲೆ ಜಮ್ರತುಲ್-ಅಖಬಾಕ್ಕೆ ಕಲ್ಲು ಎಸೆಯುವುದನ್ನು ನೋಡಿದೆನು. ಅಲ್ಲಿ ಯಾವುದೇ ಹೊಡೆದಾಟವಿರಲಿಲ್ಲ, ಅಟ್ಟಿಸಿಕೊಂಡು ಹೋಗುವುದಿರಲಿಲ್ಲ, ಮತ್ತು "ದಾರಿ ಬಿಡಿ, ದಾರಿ ಬಿಡಿ" ಎಂದು ಹೇಳುವುದೂ ಇರಲಿಲ್ಲ. ಇದನ್ನು ತಿರ್ಮಿಧಿ ವರದಿ ಮಾಡಿದ್ದಾರೆ ಮತ್ತು ಹಸನ್ ಸಹೀಹ್ ಎಂದು ಹೇಳಿದ್ದಾರೆ[36]. [36] ಇದನ್ನು ತಿರ್ಮಿಧಿ, ಕಿತಾಬುಲ್-ಹಜ್, ಬಾಬ್ ಮಾ ಜಾಅ ಫೀ ಕರಾಹಿಯತಿ ತ್ವರ್ದಿನ್ನಾಸಿ ಇಂದ ರಮ್ಯಿಲ್-ಜಿಮಾರ್, ಸಂಖ್ಯೆ (903), ನಸಾಯಿ, ಕಿತಾಬುಲ್-ಮನಾಸಿಕ್, ಬಾಬ್ ಅರ್ರುಕೂಬು ಇಲಲ್-ಜಿಮಾರ್, ಸಂಖ್ಯೆ (3063), ಇಬ್ನ್ ಮಾಜ, ಕಿತಾಬುಲ್-ಮನಾಸಿಕ್, ಬಾಬ್ ರಮ್ಯುಲ್-ಜಿಮಾರಿ ರಾಕಿಬನ್, ಸಂಖ್ಯೆ (3035), ಮತ್ತು ಅಹ್ಮದ್ (3/413) ರಲ್ಲಿ ವರದಿ ಮಾಡಿದ್ದಾರೆ.
5. ಕೆಲವರು ತಶ್ರೀಖ್ನ ದಿನಗಳಲ್ಲಿ (ಬಲಿದಿನದ ನಂತರದ ಮೂರು ದಿನಗಳು) ಮೊದಲನೇ ಮತ್ತು ಎರಡನೇ ಜಮ್ರಾಕ್ಕೆ ಕಲ್ಲು ಎಸೆದ ನಂತರ ಪ್ರಾರ್ಥನೆಗಾಗಿ ನಿಲ್ಲುವುದಿಲ್ಲ. ಈಗಾಗಲೇ ನೀವು ತಿಳಿದಂತೆ, ಪ್ರವಾದಿ (ಸ) ರವರು ಅವೆರಡಕ್ಕೂ ಕಲ್ಲು ಎಸೆದ ನಂತರ ಕಿಬ್ಲಾಕ್ಕೆ ಮುಖ ಮಾಡಿ, ಕೈಗಳನ್ನು ಎತ್ತಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು.
ಜನರು ನಿಲ್ಲದಿರಲು ಕಾರಣ ಸುನ್ನತ್ತಿನ ಕುರಿತಾದ ಅಜ್ಞಾನ, ಅಥವಾ ಹೆಚ್ಚಿನ ಜನರ ಆತುರ ಮತ್ತು ಆರಾಧನೆಯಿಂದ (ಕಲ್ಲು ಎಸೆಯುವುದರಿಂದ) ಮುಕ್ತರಾಗುವ ಬಯಕೆಯಾಗಿದೆ.
ಹಜ್ ಯಾತ್ರಿಕನು ಹಜ್ ಮಾಡುವ ಮೊದಲೇ ಹಜ್ನ ನಿಯಮಗಳನ್ನು ಕಲಿತಿದ್ದರೆ ಎಷ್ಟು ಚೆನ್ನಾಗಿತ್ತು. ಇದರಿಂದ ಅವನಿಗೆ ಅಲ್ಲಾಹುವನ್ನು ಜ್ಞಾನದೊಂದಿಗೆ ಆರಾಧಿಸಲು ಮತ್ತು ಪ್ರವಾದಿ (ಸ) ರವರನ್ನು ಅನುಸರಿಸಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಒಬ್ಬ ವ್ಯಕ್ತಿಯು ಒಂದು ದೇಶಕ್ಕೆ ಪ್ರಯಾಣಿಸಲು ಬಯಸಿದರೆ, ಅವನು ಅದನ್ನು ತಲುಪಲು ಅದರ ಮಾರ್ಗದ ಬಗ್ಗೆ ಕೇಳುವುದನ್ನು ನೀವು ನೋಡುತ್ತೀರಿ. ಹಾಗಿರುವಾಗ, ಅಲ್ಲಾಹುವಿನ ಕಡೆಗೆ ಮತ್ತು ಅವನ ಸ್ವರ್ಗಕ್ಕೆ ಕೊಂಡೊಯ್ಯುವ ಮಾರ್ಗದಲ್ಲಿ ನಡೆಯಲು ಬಯಸುವವನ ಬಗ್ಗೆ ಏನು ಹೇಳುತ್ತೀರಿ? ಅವನು ತನ್ನ ಉದ್ದೇಶವನ್ನು ಪೂರ್ತಿಗೊಳಿಸಲು ಆ ಮಾರ್ಗದಲ್ಲಿ ನಡೆಯುವ ಮೊದಲು ಅದರ ಬಗ್ಗೆ ವಿಚಾರಿಸುವುದು ಹೆಚ್ಚು ಯೋಗ್ಯವಲ್ಲವೇ?
6. ಕೆಲವರು ಎಲ್ಲಾ ಕಲ್ಲುಗಳನ್ನು ಒಂದೇ ಕೈಯಲ್ಲಿ ಒಟ್ಟಿಗೆ ಎಸೆಯುತ್ತಾರೆ. ಇದು ಗಂಭೀರವಾದ ತಪ್ಪು. ವಿದ್ವಾಂಸರು ಹೇಳುತ್ತಾರೆ: ಒಬ್ಬನು ಒಂದಕ್ಕಿಂತ ಹೆಚ್ಚು ಕಲ್ಲುಗಳನ್ನು ಒಂದೇ ಕೈಯಿಂದ ಎಸೆದರೆ, ಅವನು ಕೇವಲ ಒಂದು ಕಲ್ಲು ಮಾತ್ರ ಎಸೆದಂತೆ ಪರಿಗಣಿಸಲಾಗುತ್ತದೆ. ಕಲ್ಲುಗಳನ್ನು ಒಂದೊಂದಾಗಿ ಎಸೆಯುವುದು ಕಡ್ಡಾಯವಾಗಿದೆ. ಪ್ರವಾದಿ (ಸ) ರವರು ಮಾಡಿದಂತೆ.
7. ಕೆಲವರು ಕಲ್ಲು ಹೊಡೆಯುವಾಗ ಪ್ರವಾದಿ (ಸ) ರಿಂದ ವರದಿಯಾಗದ ಪ್ರಾರ್ಥನೆಗಳನ್ನು ಸೇರಿಸಿ ಪ್ರಾರ್ಥಿಸುತ್ತಾರೆ. ಉದಾಹರಣೆಗೆ ಅವರ ಹೇಳುತ್ತಾರೆ: "ಅಲ್ಲಾಹುಮ್ಮ ಇಜ್ಅಲ್ಹಾ ರಿದನ್ ಲಿರ್ರಹ್ಮಾನ್, ವ ಗದಬನ್ ಲಿಶ್ಶೈತಾನ್" (ಓ ಅಲ್ಲಾಹ್, ಇದನ್ನು ಪರಮ ದಯಾಮಯನಿಗೆ ಸಂತೃಪ್ತಿಕರವಾಗಿಸು ಮತ್ತು ಶೈತಾನನಿಗೆ ಕೋಪ ತರಿಸುವಂತೆ ಮಾಡು). ಕೆಲವೊಮ್ಮೆ ಅವರು ಇದನ್ನು ಹೇಳುವಾಗ ಪ್ರವಾದಿ (ಸ) ರವರಿಂದ ವರದಿಯಾದ ತಕ್ಬೀರ್ ಹೇಳುವುದನ್ನು ಮರೆತು ಬಿಡುತ್ತಾರೆ. ಆದರೆ ಶ್ರೇಷ್ಠವಾದ ರೂಪವೇನೆಂದರೆ, ಯಾವುದೇ ಸೇರ್ಪಡೆ ಅಥವಾ ಕಡಿತ ಮಾಡದೆ, ಪ್ರವಾದಿ (ಸ) ರವರಿಂದ ವರದಿಯಾದದ್ದಕ್ಕೆ ಸೀಮಿತಗೊಳಿಸುವುದು.
8. ಕೆಲವರು ಸ್ವತಃ ಜಮರಾತ್ಗೆ ಹೋಗಿ ಕಲ್ಲು ಎಸೆಯಲು ಅಸಡ್ಡೆ ತೋರುತ್ತಾರೆ. ಅವರು ಕಲ್ಲು ಎಸೆಯಲು ಸಾಮರ್ಥ್ಯವುಳ್ಳವರಾಗಿದ್ದರೂ ಸಹ, ಜನದಟ್ಟಣೆಯ ಕಷ್ಟ ಮತ್ತು ಕೆಲಸದ ಶ್ರಮದಿಂದ ತಪ್ಪಿಸಿಕೊಳ್ಳಲು ಬೇರೆಯವರನ್ನು ನಿಯೋಜಿಸುತ್ತಾರೆ. ಇದು ಅಲ್ಲಾಹು ಹಜ್ ಅನ್ನು ಪೂರ್ಣಗೊಳಿಸಲು ಆದೇಶಿಸಿದ್ದಕ್ಕೆ ವಿರುದ್ಧವಾಗಿದೆ. ಅಲ್ಲಾಹು ಹೇಳುತ್ತಾನೆ: "ಮತ್ತು ಅಲ್ಲಾಹನಿಗಾಗಿ ಹಜ್ ಮತ್ತು ಉಮ್ರಾವನ್ನು ಪೂರ್ಣಗೊಳಿಸಿರಿ." [ಅಲ್-ಬಖರ: 196].
ಆದ್ದರಿಂದ, ಕಲ್ಲು ಎಸೆಯಲು ಸಾಮರ್ಥ್ಯವಿರುವವನು ಅದನ್ನು ತಾನೇ ಮಾಡುವುದು, ಮತ್ತು ಕಷ್ಟ ಹಾಗೂ ಶ್ರಮವನ್ನು ಸಹಿಸಿಕೊಳ್ಳುವುದು ಕಡ್ಡಾಯವಾಗಿದೆ. ಏಕೆಂದರೆ ಹಜ್ ಒಂದು ರೀತಿಯ ಜಿಹಾದ್ ಆಗಿದ್ದು, ಅದರಲ್ಲಿ ಕಷ್ಟ ಮತ್ತು ಶ್ರಮ ಅನಿವಾರ್ಯ. ಆದ್ದರಿಂದ ಹಾಜಿ ತನ್ನ ರಬ್ʼ(ಅಲ್ಲಾಹು) ಅನ್ನು ಭಯಪಡಲಿ ಮತ್ತು ಸಾಧ್ಯವಾದಷ್ಟು ಅಲ್ಲಾಹು ಆದೇಶಿಸಿದಂತೆ ತನ್ನ ಹಜ್ ಕರ್ಮಗಳನ್ನು ಪೂರ್ಣಗೊಳಿಸಲಿ.
ವಿದಾಯದ ತವಾಫ್ ಮತ್ತು ಅದರಲ್ಲಿನ ತಪ್ಪುಗಳು
ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಅವರು ಹೇಳಿದರು: "ಜನರಿಗೆ ಅವರ ಕೊನೆಯ ಕರ್ಮವು ಕಅಬಾದಲ್ಲಿ ಇರಬೇಕೆಂದು ಆದೇಶಿಸಲಾಯಿತು. ಆದರೆ ಋತುಮತಿಯಾದ ಮಹಿಳೆಗೆ (ಇದರಲ್ಲಿ) ವಿನಾಯಿತಿ ನೀಡಲಾಯಿತು."[37] [37] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ತವಾಫುಲ್-ವಿದಾಅ್, ಸಂಖ್ಯೆ (1755), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ತವಾಫಿಲ್-ವಿದಾಅ್, ಸಂಖ್ಯೆ (1328/380) ರಲ್ಲಿ ವರದಿ ಮಾಡಿದ್ದಾರೆ.
ಮುಸ್ಲಿಂನಲ್ಲಿರುವ ಇನ್ನೊಂದು ವರದಿಯಲ್ಲಿ ಹೀಗಿದೆ. ಅವರು ಹೇಳಿದರು: ಜನರು ಎಲ್ಲಾ ದಿಕ್ಕುಗಳಲ್ಲಿಯೂ ಹೊರಟು ಹೋಗುತ್ತಿದ್ದರು. ಆಗ ಪ್ರವಾದಿ (ಸ) ಹೇಳಿದರು: "ಯಾರೊಬ್ಬರೂ ತನ್ನ ಕೊನೆಯ ಕರ್ಮವು ಕಅಬಾದಲ್ಲಿ ಆಗುವವರೆಗೆ ಹೊರಡಬಾರದು."[38] [38] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ತವಾಫಿಲ್-ವಿದಾಅ್, ಸಂಖ್ಯೆ (1327) ರಲ್ಲಿ ವರದಿ ಮಾಡಿದ್ದಾರೆ.
ಅಬೂದಾವೂದ್ ಇದನ್ನು ಈ ಪದಗಳೊಂದಿಗೆ ವರದಿ ಮಾಡಿದ್ದಾರೆ: "ಅವರ ಕೊನೆಯ ಕರ್ಮವು ಕಅಬಾದ ಸುತ್ತ ತವಾಫ್ ಆಗುವವರೆಗೆ."[39] [39] ಇದನ್ನು ಅಬೂದಾವೂದ್, ಕಿತಾಬುಲ್-ಮನಾಸಿಕ್, ಬಾಬ್ ಅಲ್-ವಿದಾಅ್, ಸಂಖ್ಯೆ (2002) ರಲ್ಲಿ ವರದಿ ಮಾಡಿದ್ದಾರೆ.
ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಉಮ್ಮು ಸಲಮಾ (ರ) ರಿಂದ ವರದಿ. ಅವರು ಹೇಳಿದರು: ನಾನು ಅಸ್ವಸ್ಥಳಾಗಿದ್ದೇನೆ ಎಂದು ನಾನು ಪ್ರವಾದಿ (ಸ) ರವರೊಂದಿಗೆ ಹೇಳಿದೆನು. ಆಗ ಅವರು ಹೇಳಿದರು: "ನೀನು ಜನರ ಹಿಂದಿನಿಂದ ಸವಾರಿ ಮಾಡುತ್ತಾ ತವಾಫ್ ಮಾಡು." ಆಗ ನಾನು ತವಾಫ್ ಮಾಡಿದೆನು ಮತ್ತು ಅಲ್ಲಾಹುವಿನ ಸಂದೇಶವಾಹಕರು (ಸ) ಕಅಬಾದ ಪಕ್ಕದಲ್ಲಿ ನಮಾಝ್ ಮಾಡುತ್ತಿದ್ದರು. ಅವರು "ವತ್ತೂರ್, ವ ಕಿತಾಬಿಮ್ ಮಸ್ತೂರ್" (ಸೂರಾ ಅತ್ತೂರ್) ಅನ್ನು ಪಠಿಸುತ್ತಿದ್ದರು[40]. [40] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಅಲ್-ಮರೀದ್ ಯುತೂಫು ರಾಕಿಬನ್, ಸಂಖ್ಯೆ (1633), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಜವಾಝು ತ್ತವಾಫಿ ಅಲಾ ಬಈರಿನ್ ವ ಗೈರಿಹಿ, ಸಂಖ್ಯೆ (1276) ರಲ್ಲಿ ವರದಿ ಮಾಡಿದ್ದಾರೆ.
ನಸಾಯಿಯಲ್ಲಿರುವ ವರದಿಯಲ್ಲಿ ಹೀಗಿದೆ. ಅವರು ಹೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಅಲ್ಲಾಹುವಿನಾಣೆ, ನಾನು ವಿದಾಯದ ತವಾಫ್ ಮಾಡಿಲ್ಲ. ಆಗ ಪ್ರವಾದಿ (ಸ) ಹೇಳಿದರು: "ನಮಾಝ್ ಸಂಸ್ಥಾಪಿಸಲಾದಾಗ, ನಿನ್ನ ಒಂಟೆಯ ಮೇಲೆ ಕುಳಿತುಕೊಂಡು ಜನರ ಹಿಂದಿನಿಂದ ತವಾಫ್ ಮಾಡು."[41] [41] ಇದನ್ನು ನಸಾಯಿ, ಕಿತಾಬ್ ಮನಾಸಿಕುಲ್-ಹಜ್, ಬಾಬ್ ತವಾಫು ರ್ರಿಜಾಲಿ ಮಅ ನ್ನಿಸಾ, ಸಂಖ್ಯೆ (2929) ರಲ್ಲಿ ವರದಿ ಮಾಡಿದ್ದಾರೆ.
ಸಹೀಹ್ ಬುಖಾರಿ ಯಲ್ಲಿ ಅನಸ್ ಬಿನ್ ಮಾಲಿಕ್ (ರ) ರಿಂದ ವರದಿ. ಪ್ರವಾದಿ (ಸ) ರವರು ಝುಹ್ರ್, ಅಸ್ರ್, ಮಗ್ರಿಬ್ ಮತ್ತು ಇಶಾ ನಮಾಝ್ ಮಾಡಿದರು. ನಂತರ ಮುಹಸ್ಸಬ್ನಲ್ಲಿ ಸ್ವಲ್ಪ ಹೊತ್ತು ನಿದ್ರಿಸಿದರು. ನಂತರ ಕಅಬಾದತ್ತ ಸವಾರಿ ಮಾಡಿ, ಅದರ ಸುತ್ತ ತವಾಫ್ ಮಾಡಿದರು[42]. [42] ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ತವಾಫುಲ್-ವಿದಾಅ್, ಸಂಖ್ಯೆ (1756) ರಲ್ಲಿ ವರದಿ ಮಾಡಿದ್ದಾರೆ.
ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಆಯಿಷಾ (ರ) ರಿಂದ ವರದಿ. ಸಫಿಯಾ (ರ) ರವರು ತವಾಫುಲ್-ಇಫಾದದ ನಂತರ ಋತುಮತಿಯಾದರು. ಆಗ ಪ್ರವಾದಿ (ಸ) ಹೇಳಿದರು: "ಅವಳು ನಮ್ಮನ್ನು ತಡೆಯುತ್ತಿದ್ದಾಳೆಯೇ?" ಆಗ ಅವರು (ಸಹಾಬಿಗಳು) ಹೇಳಿದರು: ಅವರು ಈಗಾಗಲೇ ಕಅಬಾದ ಸುತ್ತ ತವಾಫುಲ್ ಇಫಾದ ಮಾಡಿದ್ದಾರೆ. ಆಗ (ಪ್ರವಾದಿ) ಹೇಳಿದರು: "ಹಾಗಾದರೆ ಅವಳು ಹೊರಡಲಿ."[43] [43] ಇದನ್ನು ಬುಖಾರಿ, ಕಿತಾಬುಲ್-ಮಗಾಝಿ, ಬಾಬ್ ಹಜ್ಜತುಲ್-ವಿದಾಅ್, ಸಂಖ್ಯೆ (4401), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ತವಾಫಿಲ್-ವಿದಾಅ್, ಸಂಖ್ಯೆ (1211/382) ರಲ್ಲಿ ವರದಿ ಮಾಡಿದ್ದಾರೆ.
ಮುವತ್ತಾ ದಲ್ಲಿ ಅಬ್ದುಲ್ಲಾ ಬಿನ್ ಉಮರ್ ಬಿನ್ ಖತ್ತಾಬ್ (ರ) ರಿಂದ ವರದಿ. ಉಮರ್ (ರ) ಹೇಳಿದರು: "ಯಾವುದೇ ಹಾಜಿ ಕಅಬಾದ ಸುತ್ತ ತವಾಫ್ ಮಾಡುವವರೆಗೆ ಹೊರಡಬಾರದು. ಏಕೆಂದರೆ ಹಜ್ ಕರ್ಮಗಳ ಕೊನೆಯದು ಕಅಬಾದ ಸುತ್ತ ತವಾಫ್ ಆಗಿದೆ."[44] [44] ಇದನ್ನು ಮಾಲಿಕ್, ಕಿತಾಬುಲ್-ಹಜ್, ಬಾಬ್ ವಿದಾಉಲ್-ಬೈತ್, ಸಂಖ್ಯೆ (1079) ವರದಿ ಮಾಡಿದ್ದಾರೆ. ಇದು ಯಹ್ಯಾ ಇಬ್ನ್ ಯಹ್ಯಾ ರವರ ರಿವಾಯತ್ ಇರುವ ಬಶ್ಶಾರ್ ಅವ್ವಾದ್ ರವರ ಪರಿಶೀಲನೆಯಿರುವ ಗ್ರಂಥ.
ಅದರಲ್ಲಿ (ಮುವತ್ತಾದಲ್ಲಿ) ಯಹ್ಯಾ ಬಿನ್ ಸಈದ್ ರಿಂದ ವರದಿ. ಉಮರ್ (ರ) ರವರು ಮರ್ರು ಝ್ಝಹ್ರಾನ್ನಿಂದ ಒಬ್ಬ ವ್ಯಕ್ತಿಯನ್ನು, ಅವನು ಕಅಬಾದ ವಿದಾಯ ತವಾಫ್ ಮಾಡದಿದ್ದ ಕಾರಣ, ಅವನು ಅದನ್ನು ಮಾಡುವುದಕ್ಕಾಗಿ ಮರಳಿ ಕಳುಹಿಸಿದರು[45]. [45] ಇದನ್ನು ಮಾಲಿಕ್, ಕಿತಾಬುಲ್-ಹಜ್, ಬಾಬ್ ವಿದಾಉಲ್-ಬೈತ್, ಸಂಖ್ಯೆ (1081) ವರದಿ ಮಾಡಿದ್ದಾರೆ. ಇದು ಯಹ್ಯಾ ಇಬ್ನ್ ಯಹ್ಯಾ ರವರ ರಿವಾಯತ್ ಇರುವ ಬಶ್ಶಾರ್ ಅವ್ವಾದ್ ರವರ ಪರಿಶೀಲನೆಯಿರುವ ಗ್ರಂಥ.
ಇಲ್ಲಿ ಕೆಲವು ಜನರು ಮಾಡುವ ತಪ್ಪುಗಳು:
1. ಕೆಲವರು (ಮಿನಾದಿಂದ) ಹೊರಡುವ ದಿನದಂದು ಜಮರಾತ್ಗೆ ಕಲ್ಲು ಎಸೆಯುವ ಮೊದಲೇ ಮಿನಾದಿಂದ ಹೊರಡುತ್ತಾರೆ. ಅವರು ವಿದಾಯದ ತವಾಫ್ ಮಾಡುತ್ತಾರೆ, ನಂತರ ಮಿನಾಕ್ಕೆ ಹಿಂತಿರುಗಿ ಜಮರಾತ್ಗೆ ಕಲ್ಲು ಎಸೆಯುತ್ತಾರೆ. ನಂತರ ಅಲ್ಲಿಂದ ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಇದು ಅನುಮತಿಸಲಾಗುವುದಿಲ್ಲ. ಏಕೆಂದರೆ ಇದು ಹಾಜಿಗಳ ಕೊನೆಯ ಕರ್ಮವು ಕಅಬಾದಲ್ಲಿ ಇರಬೇಕೆಂಬ ಪ್ರವಾದಿ (ಸ) ರವರ ಆದೇಶಕ್ಕೆ ವಿರುದ್ಧವಾಗಿದೆ. ಏಕೆಂದರೆ ವಿದಾಯದ ತವಾಫ್ ನಿರ್ವಹಿಸಿದ ನಂತರ ಕಲ್ಲು ಎಸೆದರೆ ತನ್ನ ಕೊನೆಯ ಕರ್ಮವನ್ನು ಜಮರಾತ್ನಲ್ಲಿ ಮಾಡಿದಂತಾಗುತ್ತದೆ, ಕಅಬಾದಲ್ಲಿ ಅಲ್ಲ. ಪ್ರವಾದಿ (ಸ) ರವರು ಎಲ್ಲಾ ಹಜ್ ಕರ್ಮಗಳನ್ನು ಪೂರ್ಣಗೊಳಿಸಿದ ನಂತರ ಹೊರಡುವಾಗ ಮಾತ್ರ ವಿದಾಯದ ತವಾಫ್ ಮಾಡಿದರು. ಅವರು ಹೇಳಿದರು: "ನಿಮ್ಮ ಹಜ್ ಕರ್ಮಗಳನ್ನು ನನ್ನಿಂದ ಸ್ವೀಕರಿಸಿಕೊಳ್ಳಿರಿ."[46] ಉಮರ್ ಬಿನ್ ಖತ್ತಾಬ್ (ರ) ರವರ ಮಾತು ಕಅಬಾದ ಸುತ್ತ ತವಾಫ್ ಮಾಡುವುದೇ ಹಜ್ ಕರ್ಮಗಳಲ್ಲಿ ಕೊನೆಯದು ಎಂದು ಸ್ಪಷ್ಟಪಡಿಸುತ್ತದೆ. [46] ಇದನ್ನು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಇಸ್ತಿಹ್ಬಾಬು ರಮ್ಯಿಲ್ ಜಮ್ರತಿಲ್-ಅಖಬತಿ ಯೌಮಲ್-ಈದಿ ರಾಕಿಬನ್, ಸಂಖ್ಯೆ (1297) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಆದ್ದರಿಂದ, ಯಾರು ವಿದಾಯದ ತವಾಫ್ ಮಾಡಿದ ನಂತರ ಕಲ್ಲು ಎಸೆಯುತ್ತಾರೋ, ಅವರ ತವಾಫ್ ಸ್ವೀಕಾರಾರ್ಹವಲ್ಲ. ಏಕೆಂದರೆ ಅದು ಅದರ ಸರಿಯಾದ ಸ್ಥಳದಲ್ಲಿ ನಡೆದಿಲ್ಲ. ಆದ್ದರಿಂದ ಕಲ್ಲು ಎಸೆದ ನಂತರ ಅವರು ಪುನಃ ವಿದಾಯದ ತವಾಫ್ ನಿರ್ವಹಿಸುವುದು ಕಡ್ಡಾಯವಾಗಿದೆ. ಅವರು ಪುನಃ ನಿರ್ವಹಿಸದಿದ್ದರೆ, ಅವರ ಸ್ಥಿತಿಯು ಅದನ್ನು ತೊರೆದವನ ಸ್ಥಿತಿಯಂತಿರುತ್ತದೆ.
2. ಕೆಲವರು ವಿದಾಯ ತವಾಫ್ ನಿರ್ವಹಿಸಿದ ನಂತರ ಮಕ್ಕಾದಲ್ಲಿಯೇ ತಂಗುತ್ತಾರೆ. ಇದರಿಂದ ಅವರ ಕೊನೆಯ ಕರ್ಮವು ಕಅಬಾದಲ್ಲಿ ಆಗುವುದಿಲ್ಲ. ಇದು ಪ್ರವಾದಿ (ಸ) ರವರು ಆದೇಶಿಸಿದ್ದಕ್ಕೆ ಮತ್ತು ತಮ್ಮ ಕ್ರಿಯೆಯ ಮೂಲಕ ತಮ್ಮ ಸಮುದಾಯಕ್ಕೆ ಸ್ಪಷ್ಟಪಡಿಸಿ ಕೊಟ್ಟದ್ದಕ್ಕೆ ವಿರುದ್ಧವಾಗಿದೆ. ಏಕೆಂದರೆ ಪ್ರವಾದಿ (ಸ) ರವರು ಹಾಜಿಗಳ ಕೊನೆಯ ಕರ್ಮವು ಕಅಬಾದಲ್ಲಿ ಇರಬೇಕೆಂದು ಆದೇಶಿಸಿದರು. ಅವರು ಅಲ್ಲಿಂದ ಹೊರಡುವಾಗ ಮಾತ್ರ ವಿದಾಯದ ತವಾಫ್ ಮಾಡಿದರು. ಅವರ ಸಹಾಬಿಗಳು ಸಹ ಹೀಗೆಯೇ ಮಾಡಿದರು.
ಆದರೆ, ವಿದ್ವಾಂಸರು ವಿದಾಯದ ತವಾಫ್ ನಿರ್ವಹಿಸಿದ ನಂತರ ಅಗತ್ಯವಿದ್ದಲ್ಲಿ ಸ್ವಲ್ಪ ಕಾಲ ತಂಗಲು ರಿಯಾಯಿತಿ ನೀಡಿದ್ದಾರೆ. ಉದಾಹರಣೆಗೆ ವಿದಾಯದ ತವಾಫ್ ನಿರ್ವಹಿಸಿದ ನಂತರ ನಮಾಝ್ಗೆ ಇಕಾಮತ್ ನೀಡಲಾದರೆ, ಆ ನಮಾಝ್ ನಿರ್ವಹಿಸುವುದು, ಅಥವಾ ಜನಾಝಾ (ಮೃತದೇಹ) ಹಾಜರಾದರೆ, ಅದರ ನಮಾಝ್ ನಿರ್ವಹಿಸುವುದು, ಅಥವಾ ಪ್ರಯಾಣಕ್ಕೆ ಸಂಬಂಧಿಸಿದ ಅಗತ್ಯವಿದ್ದರೆ, ಉದಾಹರಣೆಗೆ ಸಾಮಾನುಗಳನ್ನು ಖರೀದಿಸುವುದು, ಸಂಗಡಿಗರನ್ನು ಕಾಯುವುದು, ಇತ್ಯಾದಿ. ಆದರೆ ಇಂತಹ ಯಾವುದೇ ಕಾರಣಗಳಿಲ್ಲದಿದ್ದರೆ ವಿದಾಯದ ತವಾಫ್ ನಿರ್ವಹಿಸಿದ ನಂತರ ಮಕ್ಕಾದಲ್ಲಿ ತಂಗುವವರು ಅದನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗಿದೆ.
3. ಕೆಲವರು ವಿದಾಯದ ತವಾಫ್ ನಿರ್ವಹಿಸಿದ ನಂತರ ಮಸೀದಿಯಿಂದ ಹಿಂದಕ್ಕೆ ಹೆಜ್ಜೆಯಿಟ್ಟುಕೊಂಡು ನಡೆಯುತ್ತಾ ಹೊರಬರುತ್ತಾರೆ. ಇದರಿಂದ ಕಅಬಾವನ್ನು ಗೌರವಿಸುತ್ತಿದ್ದೇವೆಂದು ಅವರು ಭಾವಿಸುತ್ತಾರೆ. ಇದು ಸುನ್ನತ್ತಿಗೆ ವಿರುದ್ಧವಾಗಿದೆ. ಪ್ರತ್ಯುತಃ ಇದು ಬಿದ್ಅತ್ಗಳಲ್ಲಿ ಒಂದಾಗಿದೆ. ಇಂತಹ ಬಿದ್ಅತ್ಗಳ ಬಗ್ಗೆ ಅಲ್ಲಾಹುವಿನ ಸಂದೇಶವಾಹಕರು (ಸ) ನಮ್ಮನ್ನು ಎಚ್ಚರಿಸಿದ್ದಾರೆ ಮತ್ತು ಹೀಗೆ ಹೇಳಿದ್ದಾರೆ: "ಪ್ರತಿಯೊಂದು ಬಿದ್ಅತ್ ದುರ್ಮಾರ್ಗವಾಗಿದೆ."[47] ಬಿದ್ಅತ್ ಎಂದರೆ: ಅಲ್ಲಾಹುವಿನ ಸಂದೇಶವಾಹಕರ (ಸ) ಮತ್ತು ಸನ್ಮಾರ್ಗ ಪಡೆದ ಖಲೀಫರ ಮಾರ್ಗಕ್ಕೆ ವಿರುದ್ಧವಾಗಿ ವಿಶ್ವಾಸ ಅಥವಾ ಆರಾಧನೆಯಲ್ಲಿ ಹೊಸದಾಗಿ ಸೇರಿಸಲಾಗುವ ವಿಷಯ. ಕಅಬಾವನ್ನು ಗೌರವಿಸಲು ಹಿಂದಕ್ಕೆ ಹೆಜ್ಜೆಯಿಡುತ್ತಾ ನಡೆಯುವ ಈ ವ್ಯಕ್ತಿಯು ತಾನು ಅಲ್ಲಾಹುವಿನ ಸಂದೇಶವಾಹಕರಿಗಿಂತ (ಸ) ಹೆಚ್ಚು ಕಅಬಾವನ್ನು ಗೌರವಿಸುತ್ತಿದ್ದೇನೆ ಎಂದು ಭಾವಿಸುತ್ತಾನೆಯೇ?! ಅಥವಾ ಹೀಗೆ ಮಾಡುವುದರಲ್ಲಿ ಕಅಬಾಕ್ಕೆ ಗೌರವ ತೋರುವುದು ಇದೆ ಎಂದು ಪ್ರವಾದಿ (ಸ) ರವರಿಗೆ ತಿಳಿದಿರಲಿಲ್ಲ, ಅವರ ಸನ್ಮಾರ್ಗ ಪಡೆದ ಖಲೀಫರಿಗೂ ತಿಳಿದಿರಲಿಲ್ಲ ಎಂದು ಅವನು ಭಾವಿಸುತ್ತಾನೆಯೇ?! [47] ಇದನ್ನು ಮುಸ್ಲಿಂ, ಕಿತಾಬುಲ್-ಜುಮುಅ, ಬಾಬ್ ತಖ್ಫೀಫು ಸ್ಸಲಾತಿ ವಲ್-ಖುತ್ಬಾ, ಸಂಖ್ಯೆ (867) ಜಾಬಿರ್ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
4. ಕೆಲವರು ವಿದಾಯದ ತವಾಫ್ ಮುಗಿಸಿದ ನಂತರ ಮಸೀದಿಯ ಬಾಗಿಲ ಬಳಿ ಕಅಬಾದ ಕಡೆಗೆ ತಿರುಗುತ್ತಾರೆ ಮತ್ತು ಕಅಬಾಕ್ಕೆ ವಿದಾಯ ಹೇಳುವವರಂತೆ ಅಲ್ಲಿ ಪ್ರಾರ್ಥಿಸುತ್ತಾರೆ. ಇದು ಬಿದ್ಅತ್ಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಪ್ರವಾದಿ (ಸ) ರವರಿಂದಾಗಲೀ, ಸನ್ಮಾರ್ಗ ಪಡೆದ ಅವರ ಖಲೀಫರಿಂದಾಗಲೀ ವರದಿಯಾಗಿಲ್ಲ. ಅಲ್ಲಾಹುವಿಗೆ ಆರಾಧನೆಯನ್ನು ಉದ್ದೇಶಿಸಿ ಮಾಡುವ ಪ್ರತಿಯೊಂದು ಕಾರ್ಯವು, ಅದು ಶರೀಅತ್ನಲ್ಲಿ ವರದಿಯಾಗದಿದ್ದರೆ, ಅದು ಅಸಿಂಧುವಾಗಿದೆ ಮತ್ತು ಅದನ್ನು ಮಾಡುವವನತ್ತ ಹಿಂತಿರುಗಿಸಲಾಗುತ್ತದೆ. ಪ್ರವಾದಿ (ಸ) ರವರು ಹೇಳುತ್ತಾರೆ: "ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾನೋ, ಅದು ತಿರಸ್ಕರಿಸಲ್ಪಡುತ್ತದೆ."[48] ಅಂದರೆ: ಅದನ್ನು ಮಾಡಿದವನ ಕಡೆಗೇ ಹಿಂತಿರುಗಿಸಲಾಗುತ್ತದೆ. [48] ಇದನ್ನು ಬುಖಾರಿ, ಕಿತಾಬ್ ಅಸ್ಸುಲ್ಹ್, ಬಾಬ್ ಇಧಸ್ತಲಹೂ ಅಲಾ ಸುಲ್ಹಿನ್ ಜೌರ್, ಸಂಖ್ಯೆ (2697), ಮತ್ತು ಮುಸ್ಲಿಂ, ಕಿತಾಬುಲ್-ಅಖ್ದಿಯಾ, ಬಾಬ್ ನಖ್ದುಲ್-ಅಹ್ಕಾಮಿಲ್-ಬಾತಿಲ, ಸಂಖ್ಯೆ (1718/17) ಆಯಿಷಾ (ರ) ರವರ ಹದೀಸ್ನಿಂದ ವರದಿ ಮಾಡಿದ್ದಾರೆ.
ಆದ್ದರಿಂದ, ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವನಿಗೆ ಕಡ್ಡಾಯವಾಗಿರುವುದು ಏನೆಂದರೆ: ಅವನು ತನ್ನ ಆರಾಧನೆಗಳಲ್ಲಿ ಅಲ್ಲಾಹುವಿನ ಸಂದೇಶವಾಹಕರಿಂದ (ಸ) ಬಂದಿರುವ ಮಾರ್ಗದರ್ಶನವನ್ನು ಅನುಸರಿಸಬೇಕು. ಇದರಿಂದ ಅವನು ಅಲ್ಲಾಹುವಿನ ಪ್ರೀತಿ ಮತ್ತು ಕ್ಷಮೆಯನ್ನು ಪಡೆಯುತ್ತಾನೆ. ಅಲ್ಲಾಹು ಹೇಳುತ್ತಾನೆ: "ಹೇಳಿರಿ: 'ನೀವು ಅಲ್ಲಾಹುವನ್ನು ಪ್ರೀತಿಸುವುದಾದರೆ, ನನ್ನನ್ನು ಅನುಸರಿಸಿ, ಅಲ್ಲಾಹು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಮತ್ತು ಅಲ್ಲಾಹು ಕ್ಷಮಿಸುವವನೂ, ಕರುಣೆ ತೋರುವವನೂ ಆಗಿದ್ದಾನೆ'." [ಆಲ್ ಇಮ್ರಾನ್: 31], ಮತ್ತು ಪ್ರವಾದಿ (ಸ) ರವರನ್ನು ಅವರು ಹೇಗೆ ಕರ್ಮಗಳನ್ನು ನಿರ್ವಹಿಸಿದರೋ ಹಾಗೆಯೇ ಅವರನ್ನು ಅನುಸರಿಸಬೇಕು. ಹಾಗೆಯೇ ಅವರು ನಿರ್ವಹಿಸದೆ ಬಿಟ್ಟ ಕರ್ಮಗಳನ್ನು ಬಿಡಬೇಕು. ಒಂದು ಕರ್ಮವನ್ನು ಮಾಡಲು ಅವರ ಕಾಲದಲ್ಲಿ ಸಾಧ್ಯವಿದ್ದೂ ಸಹ ಅವರು ಅದನ್ನು ಮಾಡದಿದ್ದರೆ, ಅದನ್ನು ಮಾಡದಿರುವುದೇ ಸುನ್ನತ್ ಮತ್ತು ಶರೀಅತ್ ಎಂಬುದಕ್ಕೆ ಪುರಾವೆಯಾಗಿದೆ. ಆದ್ದರಿಂದ ಅದನ್ನು ಅಲ್ಲಾಹುವಿನ ಧರ್ಮದಲ್ಲಿ ಹೊಸದಾಗಿ ಸೇರಿಸಲು ಯಾರಿಗೂ ಅನುಮತಿಯಿಲ್ಲ, ಮನುಷ್ಯನು ಅದನ್ನು ಇಷ್ಟಪಟ್ಟರೂ ಅಥವಾ ಹಂಬಲಿಸಿದರೂ ಸಹ. ಅಲ್ಲಾಹು ಹೇಳುತ್ತಾನೆ: "ಒಂದು ವೇಳೆ ಸತ್ಯವು ಅವರ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದರೆ, ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳಲ್ಲಿರುವವರೆಲ್ಲರೂ ನಾಶವಾಗುತ್ತಿದ್ದರು. ಬದಲಿಗೆ, ನಾವು ಅವರಿಗೆ ಅವರ ಸ್ಮರಣೆಯನ್ನು ತಂದಿದ್ದೇವೆ." [ಅಲ್-ಮುಅ್ಮಿನೂನ್: 71], ಪ್ರವಾದಿ (ಸ) ಹೇಳಿದರು: "ನಿಮ್ಮಲ್ಲಿ ಯಾರೊಬ್ಬರೂ ಸತ್ಯವಿಶ್ವಾಸಿಯಾಗುವುದಿಲ್ಲ, ಅವನ ಇಷ್ಟವು ನಾನು ತಂದಿರುವುದಕ್ಕೆ ಪೂರಕವಾಗಿರುವ ತನಕ."[49] [49] ಇದನ್ನು ಇಬ್ನ್ ಅಬೀ ಆಸಿಮ್ ರವರು 'ಅಸ್ಸುನ್ನಾ' (ಪು. 12), ಸಂಖ್ಯೆ (15) ರಲ್ಲಿ ವರದಿ ಮಾಡಿದ್ದಾರೆ. ಇದನ್ನು ಖತೀಬ್ ಅಲ್-ಬಗ್ದಾದಿ 'ತಾರೀಖ್ ಬಗ್ದಾದ್' (6/21) ರಲ್ಲಿ, ಮತ್ತು ಅಲ್-ಬಗವಿ 'ಶರ್ಹುಸ್ಸುನ್ನ' (1/212), ಸಂಖ್ಯೆ (104) ರಲ್ಲಿ ವರದಿ ಮಾಡಿದ್ದಾರೆ. ಇಬ್ನ್ ರಜಬ್ (ರ) ರವರ 'ಜಾಮಿಉಲ್-ಉಲೂಮಿ ವಲ್-ಹಿಕಮ್' ನಲ್ಲಿ 'ಅಲ್-ಅರ್ಬಈನು ನ್ನವವಿಯ್ಯ' ದ ನಲವತ್ತೊಂದನೇ ಹದೀಸ್ನ ವಿವರಣೆಯನ್ನು ನೋಡಿ.
ಅಲ್ಲಾಹು ನಮಗೆ ಅವನ ನೇರ ಮಾರ್ಗಕ್ಕೆ ಮಾರ್ಗದರ್ಶನ ನೀಡಲಿ, ನಮಗೆ ಮಾರ್ಗದರ್ಶನ ನೀಡಿದ ನಂತರ ನಮ್ಮ ಹೃದಯಗಳನ್ನು ತಪ್ಪಿಸದಿರಲಿ, ಮತ್ತು ನಮಗೆ ಅವನ ಕಡೆಯಿಂದ ಕರುಣೆಯನ್ನು ನೀಡಲಿ ಎಂದು ನಾವು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ. ಖಂಡಿತವಾಗಿಯೂ ಅವನು ಮಹಾದಾನಿಯಾಗಿದ್ದಾನೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹುವಿಗೆ ಸರ್ವ ಸ್ತುತಿಗಳು. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹು ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸುತ್ತಿರಲಿ.
19 ಶಅಬಾನ್ 1398 ಹಿ. ರಂದು ಇದು ಪೂರ್ತಿಯಾಯಿತು.
ಇದನ್ನು ಬರೆದಿರುವುದು ಅಲ್ಲಾಹುವಿನ ಅತ್ಯಂತ ಅಗತ್ಯವನ್ನು ಹೊಂದಿರುವ ಲೇಖಕ.
ಮುಹಮ್ಮದ್ ಸಾಲಿಹ್ ಅಲ್-ಉಸೈಮೀನ್
ಅಲ್ಲಾಹು ಅವರಿಗೆ, ಅವರ ತಂದೆ-ತಾಯಿಗಳಿಗೆ ಮತ್ತು ಎಲ್ಲಾ ಮುಸ್ಲಿಮರಿಗೆ ಕ್ಷಮಿಸಲಿ.
Related books
All books
ಪ್ರವಾದಿ ﷺ ರವರ ನಮಾಝ್ ವಿಧಾನ82 ಭಾಷೆಗಳುಪ್ರವಾದಿ ﷺ ರವರ ನಮಾಝ್ ವಿಧಾನ
'ಪ್ರವಾದಿ ﷺ ರವರ ನಮಾಝ್ ವಿಧಾನ' ಎಂಬ ಈ ಪುಸ್ತಕದಲ್ಲಿ, ಗೌರವಾನ್ವಿತ ವಿದ್ವಾಂಸರಾದ ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರು ಪ್ರವಾದಿ ﷺ ರವರ ನಮಾಝಿನ ಸ್ವರೂಪವನ್ನು ಅಧಿಕೃತ ಆಧಾರಗಳನ್ನು ಅವಲಂಬಿಸಿ, ಮುಸ್ಲಿಮರಿಗೆ ಅವರ ನಮಾಝಿನಲ್ಲಿ ಮಾರ್ಗದರ್ಶಿಯಾಗುವುದಕ್ಕಾಗಿ ಸರಳ ಶೈಲಿ ಮತ್ತು ನಿಖರವಾದ ವಿಧಾನದೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದರಲ್ಲಿ ಅವರು ವುದೂವಿನಿಂದ ಹಿಡಿದು ಸಲಾಮ್ ಹೇಳುವವರೆಗಿನ ನಮಾಝಿನ ಸ್ತಂಭಗಳು (ಅರ್ಕಾನ್), ಸುನ್ನತ್ಗಳು ಮತ್ತು ಅದರ ಸಂಪೂರ್ಣ ಸ್ವರೂಪವನ್ನು ಪುರಾವೆ ಮತ್ತು ವಿವರಣೆಯೊಂದಿಗೆ ವಿವರಿಸಿದ್ದಾರೆ. ಈ ಮೂಲಕ, ಅತ್ಯಂತ ಶ್ರೇಷ್ಠವಾದ ಈ ಆರಾಧನೆಯಲ್ಲಿ ಪ್ರವಾದಿ ﷺ ರವರನ್ನು ಸಂಪೂರ್ಣವಾಗಿ ಅನುಸರಿಸಲು ಕರೆ ನೀಡಿದ್ದಾರೆ.
ಹದೀ, ಉದ್ಹಿಯ್ಯ ಮತ್ತು ತದ್ಕಿಯಾದ ನಿಯಮಗಳು26 ಭಾಷೆಗಳುಹದೀ, ಉದ್ಹಿಯ್ಯ ಮತ್ತು ತದ್ಕಿಯಾದ ನಿಯಮಗಳು
ಇದು ಹದೀ (ಬಲಿಮೃಗ), ಉದ್ಹಿಯ್ಯ (ಕುರ್ಬಾನಿ) ಮತ್ತು ತದ್ಕಿಯಾದ (ಇಸ್ಲಾಮೀ ವಧೆ) ನಿಯಮಗಳ ಒಂದು ಸಂಕ್ಷಿಪ್ತ ಕೈಪಿಡಿಯಾಗಿದ್ದು, ಇದು ಈ ವಿಷಯಗಳ ಬಗ್ಗೆ ಮುಸ್ಲಿಮನಿಗೆ ಅಗತ್ಯವಿರುವ ಪ್ರಮುಖ ನಿಯಮಗಳನ್ನು ಒಳಗೊಂಡಿದೆ. ಇದರಿಂದ ಮುಸ್ಲಿಮನು ತನ್ನ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಲು ಸಾಧ್ಯವಾಗುತ್ತದೆ.
رسول الإسلام محمد صلى الله عليه وسلم81 ಭಾಷೆಗಳುصلىوسلمرسول الإسلام محمد صلى الله عليه وسلم
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم [1] ರವರ ಸಂಕ್ಷಿಪ್ತ ಪರಿಚಯ. ಇದರಲ್ಲಿ ನಾನು ಅವರ ಹೆಸರು, ಅವರ ವಂಶ, ಅವರ ಊರು, ಅವರ ಮದುವೆ, ಅವರ ಸಂದೇಶ, ಅವರ ಧರ್ಮಪ್ರಚಾರ, ಅವರ ಪ್ರವಾದಿತ್ವದ ಚಿಹ್ನೆಗಳು, ಮತ್ತು ಧರ್ಮಶಾಸ್ತ್ರ ಮತ್ತು ಅವರ ಬಗ್ಗೆ ಅವರ ವಿರೋಧಿಗಳ ನಿಲುವನ್ನು ವಿವರಿಸುವೆನು. [1] ಅನುವಾದವನ್ನು ಗಣನೆಗೆ ತೆಗೆದುಕೊಂಡು ಪ್ರವಾದಿ ಮುಹಮ್ಮದ್ ಎಂಬ ಎರಡು ಪದಗಳು ಯಾವಾಗಲೂ ಜೊತೆಯಾಗಿರಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ಅದರ ಬಗ್ಗೆ ಗಮನವಿರಲಿ. 1- ಅವರ ಹೆಸರು, ವಂಶ ಮತ್ತು ಹುಟ್ಟಿ ಬೆಳೆದ ಊರು ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್ ಇಸ್ಲಾಂ ಧರ್ಮದ…
ಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು78 ಭಾಷೆಗಳುಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು
ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರ 'ಮುಸ್ಲಿಮ್ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು' ಎಂಬ ಪುಸ್ತಕವು, ಸಾಮಾನ್ಯ ಮುಸ್ಲಿಮರಿಗೆ ಒಂದು ಜ್ಞಾನದ ಭಂಡಾರವಾಗಲೆಂದು ಇಮಾಮರು ರಚಿಸಿದ, ಮಹತ್ತರ ಪ್ರಯೋಜನವುಳ್ಳ ಒಂದು ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ, ಪ್ರತಿಯೊಬ್ಬ ಮುಸ್ಲಿಮನಿಗೂ ಸರಿಯಾದ ವಿಶ್ವಾಸ (ಅಖೀದಾ) ಮತ್ತು ಆರಾಧನೆಯನ್ನು ಸುಲಭವಾಗಿ ತಲುಪಿಸುವ ಸಲುವಾಗಿ, ಕುರ್ಆನ್ ಮತ್ತು ಸುನ್ನತ್ತನ್ನು ಆಧಾರವಾಗಿಟ್ಟುಕೊಂಡು, ಸರಳ ಮತ್ತು ಸ್ಪಷ್ಟವಾದ ಶೈಲಿಯಲ್ಲಿ, ದೀನಿನ ಮೂಲ ತತ್ವಗಳು ಮತ್ತು ಸ್ತಂಭಗಳಾದ ತೌಹೀದ್, ಈಮಾನ್ ಮತ್ತು ಇಸ್ಲಾಂನಿಂದ ಹಿಡಿದು, ಸ್ವಚ್ಛತೆ (ತಹಾರತ್) ಮತ್ತು ನಮಾಝಿನ ನಿಯಮಗಳು, ಇಸ್ಲಾಮಿನ ಶಿಷ್ಟಾಚಾರಗಳು, ಹಾಗೂ ಶಿರ್ಕ್ ಮತ್ತು ಪಾಪಗಳ ಅಪಾಯಗಳ ಬಗ್ಗೆ ವಿವರಿಸಲಾಗಿದೆ.