Skip to content
الفَاتِحة /

ಆಯತ್ 5

1 : 5

ಆಯತ್ 5 of الفَاتِحة (1 : 5). This page carries the verse in the Uthmani script with a translation of its meaning, at a stable URL that can be cited on its own.

الفَاتِحة ಆಯತ್‌ಗಳು 7
ಸೂರ · الفَاتِحة
ಕನ್ನಡ · Hamza
1 : 5

إِيَّاكَ نَعۡبُدُ وَإِيَّاكَ نَسۡتَعِينُ

ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ; ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ.

Explanation & meanings · 2
  1. ಆರಾಧಿಸುವುದು ಎಂದರೆ ಒಬ್ಬರ ಸಂಪ್ರೀತಿಯನ್ನು ಪಡೆಯುವುದಕ್ಕಾಗಿ ಅವರ ಮುಂದೆ ಪರಮೋಚ್ಛ ವಿನಯವನ್ನು ಮತ್ತು ಸಂಪೂರ್ಣ ಶರಣಾಗತಿಯನ್ನು ವ್ಯಕ್ತಪಡಿಸುವುದು. ಅವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು. ಇದು ಅಲ್ಲಾಹನಿಗೆ ಮಾತ್ರ ಅರ್ಹವಾಗಿದ್ದು ಅವನನ್ನು ಮಾತ್ರ ಆರಾಧಿಸಬೇಕಾಗಿದೆ. ಅಲ್ಲಾಹು ಪ್ರೀತಿಸುವ ಮತ್ತು ಅವನ ಸಂಪ್ರೀತಿಗೆ ಕಾರಣವಾಗುವ ಎಲ್ಲಾ ಮಾತುಗಳು ಮತ್ತು ಬಾಹ್ಯ ಹಾಗೂ ಆಂತರಿಕ ಕ್ರಿಯೆಗಳು ಆರಾಧನೆಗಳಾಗಿವೆ.
  2. ಅಲ್ಲಾಹು ಅಲ್ಲದವರಿಗೆ ಆರಾಧನೆ ಮಾಡುವುದನ್ನು ನಿಷೇಧಿಸಲಾಗಿರುವಂತೆ ಅಲ್ಲಾಹು ಅಲ್ಲದವರಲ್ಲಿ ಅಭೌತಿಕ ಸಹಾಯ ಬೇಡುವುದನ್ನು ಕೂಡ ನಿಷೇಧಿಸಲಾಗಿದೆ.