“ಬಿಸ್ಮಿಲ್ಲಾಹಿಲ್ಲದೀ ಲಾ ಯದುರ್‍ರು ಮಅಸ್ಮಿಹೀ ಶೈಉನ್ ಫಿಲ್ ಅರ್ದಿ ವಲಾ ಫಿ ಸ್ಸಮಾಇ ವಹುವ ಸ್ಸಮೀಉಲ್ ಅಲೀಮ್.” (ಅರ್ಥ: ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಿಂದ.)(ಮೂರು ಬಾರಿ).
“ರದೀತು ಬಿಲ್ಲಾಹಿ ರಬ್ಬನ್, ವಬಿಲ್ ಇಸ್ಲಾಮಿ ದೀನನ್, ವಬಿಮುಹಮ್ಮದಿನ್ ಸ್ವಲಲ್ಲಾಹು ಅಲೈಹಿ ವಸ್ವಲ್ಲಮ ನಬಿಯ್ಯ.” (ಅರ್ಥ: ರಬ್ಬ್ ಆಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್(ಸ) ರಲ್ಲಿ ನನಗೆ ತೃಪ್ತಿಯಿದೆ.)(ಮೂರು ಬಾರಿ).
“ಅಸ್ಬಹ್‍ನಾ ವಅಸ್ಬಹಲ್ ಮುಲ್ಕು ಲಿಲ್ಲಾಹಿ, ವಲ್‍ಹಮ್ದು ಲಿಲ್ಲಾಹಿ, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ರಬ್ಬಿ ಅಸ್ಅಲುಕ ಖೈರ ಮಾ ಫೀ ಹಾದಲ್ ಯೌಮಿ ವಖೈರ ಮಾ ಬಅ್‌ದಹೂ, ವಅಊದು ಬಿಕ ಮಿನ್ ಶರ್‍ರಿ ಮಾ ಫೀ ಹಾದಲ್ ಯೌಮಿ ವಶರ್‍ರಿ ಮಾ ಬಅ್‌ದಹೂ, ರಬ್ಬಿ ಅಊದು ಬಿಕ ಮಿನಲ್ ಕಸಲಿ ವಲ್ ಹರಮಿ ವಸೂಇಲ್ ಕಿಬರಿ, ರಬ್ಬಿ ಅಊದು ಬಿಕ ಮಿನ್ ಅದಾಬಿನ್ನಾರಿ ವಅದಾಬಿಲ್ ಕಬ್ರ್.” (ಅರ್ಥ: ಅಲ್ಲಾಹನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಬೆಳಗನ್ನು ಪ್ರವೇಶಿಸಿದೆವು. ಅಲ್ಲಾಹನ ಆಧಿಪತ್ಯ ಕೂಡ ಬೆಳಗನ್ನು ಪ್ರವೇಶಿಸಿದೆ. ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಆಧಿಪತ್ಯ ಅವನದ್ದು ಮತ್ತು ಸರ್ವಸ್ತುತಿ ಅವನಿಗೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ಓ ನನ್ನ ರಬ್ಬೇ! ಈ ದಿನದಲ್ಲಿರುವ ಒಳಿತನ್ನು ಮತ್ತು ಈ ದಿನದ ನಂತರದ ದಿನಗಳಲ್ಲಿರುವ ಒಳಿತನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ಈ ದಿನದಲ್ಲಿರುವ ಕೆಡುಕಿನಿಂದ ಮತ್ತು ಈ ದಿನದ ನಂತರದ ದಿನಗಳಲ್ಲಿರುವ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ನನ್ನ ರಬ್ಬೇ! ಸೋಮಾರಿತನದಿಂದ ಮತ್ತು ವೃದ್ಧಾಪ್ಯದ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ನನ್ನ ರಬ್ಬೇ! ನರಕದ ಶಿಕ್ಷೆಯಿಂದ ಮತ್ತು ಸಮಾಧಿಯ ಶಿಕ್ಷೆಯಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.)ಸಂಜೆ ಹೀಗೆ ಹೇಳಬೇಕು:“ಅಮ್‌ಸೈನಾ ವಅಮ್ಸಲ್ ಮುಲ್ಕು ಲಿಲ್ಲಾಹ್...” (ಅರ್ಥ: ಅಲ್ಲಾಹನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಸಂಜೆಯನ್ನು ಪ್ರವೇಶಿಸಿದೆವು. ಅಲ್ಲಾಹನ ಆಧಿಪತ್ಯ ಕೂಡ ಸಂಜೆಯನ್ನು ಪ್ರವೇಶಿಸಿದೆ...)ಹೀಗೆ ಹೇಳಬೇಕು:“ರಬ್ಬಿ ಅಸ್ಅಲುಕ ಖೈರ ಮಾ ಫೀ ಹಾದಿಹಿ ಲ್ಲೈಲ...” (ಅರ್ಥ: ಓ ನನ್ನ ರಬ್ಬೇ! ಈ ರಾತ್ರಿಯಲ್ಲಿರುವ ಒಳಿತನ್ನು ನಾನು ನಿನ್ನಲ್ಲಿ ಬೇಡುತ್ತೇನೆ..)ಈ ವಾಕ್ಯಗಳಿಗೆ ಬದಲಾಗಿ: “ಅಸ್ಬಹ್‍ನಾ ವಅಸ್ಬಹಲ್” ಮತ್ತು “ಹಾದಲ್ ಯೌಮಿ.”
“ಅಲ್ಲಾಹುಮ್ಮ ಬಿಕ ಅಸ್ಬಹ್‍ನಾ ವಬಿಕ ಅಮ್ಸೈನಾ ವಬಿಕ ನಹ್ಯಾ ವಬಿಕ ನಮೂತು ವಇಲೈಕ ನ್ನುಶೂರ್.” (ಅರ್ಥ: ಓ ಅಲ್ಲಾಹ್! ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನ ಅಪ್ಪಣೆಯಿಂದಲೇ ನಾವು ಜೀವಂತವಿರುವುದು. ನಿನ್ನ ಅಪ್ಪಣೆಯಿಂದಲೇ ನಾವು ಮರಣಹೊಂದುವೆವು. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ.)ಸಂಜೆ ಹೀಗೆ ಹೇಳಬೇಕು:“ಅಲ್ಲಾಹುಮ್ಮ ಬಿಕ ಅಮ್ಸೈನಾ ವಬಿಕ ಅಸ್ಬಹ್‍ನಾ ವಬಿಕ ನಮೂತು ವಬಿಕ ನಹ್ಯಾ ವಇಲೈಕಲ್ ಮಸೀರ್.” (ಅರ್ಥ: ಓ ಅಲ್ಲಾಹ್! ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನ ಅಪ್ಪಣೆಯಿಂದಲೇ ನಾವು ಮರಣಹೊಂದುವೆವು. ನಿನ್ನ ಅಪ್ಪಣೆಯಿಂದಲೇ ನಾವು ಜೀವಂತವಿರುವೆವು. ಮರಳಿ ತಲುಪುವ ತಾಣವು ನಿನ್ನ ಕಡೆಗೇ ಆಗಿದೆ.)
“ಅಲ್ಲಾಹುಮ್ಮ ಮಾ ಅಸ್ಬಹ ಬೀ ಮಿನ್ ನಿಅ್‌ಮತಿನ್ ಅವ್ ಬಿಅಹದಿನ್ ಮಿನ್ ಖಲ್ಕಿಕ ಫಮಿನ್‌ಕ ವಹ್ದಕ ಲಾ ಶರೀಕ ಲಕ, ಫಲಕಲ್ ಹಮ್ದು ವಲಕ ಶ್ಶುಕ್ರ್.” (ಅರ್ಥ: ಓ ಅಲ್ಲಾಹ್! ಯಾವ ಅನುಗ್ರಹಗಳೊಂದಿಗೆ ನಾನು ಅಥವಾ ನಿನ್ನ ಯಾವುದೇ ಸೃಷ್ಟಿ ಬೆಳಗನ್ನು ಪ್ರವೇಶಿಸಿದೆಯೋ ಆ ಅನುಗ್ರಹಗಳೆಲ್ಲವೂ ನಿನ್ನದು ಮಾತ್ರ. ನೀನು ಏಕೈಕನು. ನಿನಗೆ ಯಾವುದೇ ಸಹಭಾಗಿಗಳಿಲ್ಲ.)ಸಂಜೆ ಹೀಗೆ ಹೇಳಬೇಕು:“ಮಾ ಅಮ್ಸಾ ಬೀ” (ಅರ್ಥ: ನಾವು ಸಂಜೆಯನ್ನು ಪ್ರವೇಶಿಸಿದೆವು).
(ಮೂರು ಬಾರಿ).
“ಅಲ್ಲಾಹುಮ್ಮ ಇನ್ನೀ ಅಸ್ಅಲುಕಲ್ ಆಫಿಯತ ಫಿದ್ದುನ್ಯಾ ವಲ್ ಆಖಿರ. ಅಲ್ಲಾಹುಮ್ಮ ಇನ್ನೀ ಅಸ್ಅಲುಕಲ್ ಅಫ್ವ ವಲ್ ಆಫಿಯತ ಫೀ ದೀನೀ ವದುನ್ಯಾಯ ವಅಹ್ಲೀ ವಮಾಲೀ, ಅಲ್ಲಾಹುಮ್ಮಸ್ತುರ್ ಔರಾತೀ ವಆಮಿನ್ ರೌಆತೀ, ಅಲ್ಲಾಹುಮ್ಮಹ್ಫಝ್‌ನೀ ಮಿನ್ ಬೈನಿ ಯದಯ್ಯ ವಮಿನ್ ಖಲ್ಫೀ ವಅನ್ ಯಮೀನೀ ವಅನ್ ಶಿಮಾಲೀ ವಮಿನ್ ಫೌಕೀ, ವಅಊದು ಬಿಅಝಮತಿಕ ಅನ್ ಉಗ್ತಾಲ ಮಿನ್ ತಹ್ತೀ.” (ಅರ್ಥ: ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಧರ್ಮದಲ್ಲಿ, ಇಹಲೋಕದಲ್ಲಿ, ಕುಟುಂಬದಲ್ಲಿ ಮತ್ತು ಸಂಪತ್ತಿನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ನ್ಯೂನತೆಗಳನ್ನು ಮರೆಮಾಚು. ನನ್ನ ಭಯವನ್ನು ನಿವಾರಿಸು. ಓ ಅಲ್ಲಾಹ್! ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ ನನ್ನನ್ನು ರಕ್ಷಿಸು. ಭೂಮಿ ನನ್ನನ್ನು ನುಂಗಿ ಬಿಡುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ.)
“ಅಲ್ಲಾಹುಮ್ಮ ಅನ್ತ ರಬ್ಬೀ ಲಾ ಇಲಾಹ ಇಲ್ಲಾ ಅನ್ತ ಖಲಕ್ತನೀ ವಅನ ಅಬ್ದುಕ, ವಅನ ಅಲಾ ಅಹ್ದಿಕ ವವಅ್‌ದಿಕ ಮಸ್ತತಅ್‌ತು, ಅಊದು ಬಿಕ ಮಿನ್ ಶರ್‍ರಿ ಮಾ ಸನಅ್‌ತು, ಅಬೂಉ ಲಕ ಬಿನಿಅ್‌ಮತಿಕ ಅಲಯ್ಯ, ವಅಬೂಉ ಬಿದಮ್ಬೀ ಫಗ್‍ಫಿರ್ ಲೀ ಫಇನ್ನಹೂ ಲಾ ಯಗ್‍ಫಿರು ದ್ದುನೂಬ ಇಲ್ಲಾ ಅನ್ತ್.” (ಅರ್ಥ: ಓ ಅಲ್ಲಾಹ್! ನೀನು ನನ್ನ ರಬ್ಬ್. ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ. ನಾನು ನಿನ್ನ ದಾಸ. ನನಗೆ ಸಾಧ್ಯವಾಗುವ ಮಟ್ಟಿಗೆ ನಾನು ನಿನ್ನ ಕರಾರು ಮತ್ತು ವಾಗ್ದಾನವನ್ನು ಪಾಲಿಸುತ್ತಿದ್ದೇನೆ. ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನೀನು ನನಗೆ ಅನುಗ್ರಹಿಸಿದ ಅನುಗ್ರಹಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಪಾಪವನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಆದುದರಿಂದ ನನ್ನನ್ನು ಕ್ಷಮಿಸು. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ.)
“ಅಲ್ಲಾಹುಮ್ಮ ಫಾತಿರ ಸ್ಸಮಾವಾತಿ ವಲ್ ಅರ್ದಿ, ಆಲಿಮಲ್ ಗೈಬಿ ವಶ್ಶಹಾದತಿ, ರಬ್ಬ ಕುಲ್ಲಿ ಶೈಇನ್ ವ ಮಲೀಕಹೂ, ಅಶ್‍ಹದು ಅನ್ ಲಾ ಇಲಾಹ ಇಲ್ಲಾ ಅನ್ತ, ಅಊದು ಬಿಕ ಮಿನ್ ಶರ್‍ರಿ ನಫ್ಸೀ ವ ಶರ್‍ರಿ ಶ್ಶೈತಾನಿ ವಶಿರ್ಕಿಹ್, ವಅನ್ ಅಕ್‍ತರಿಫ ಅಲಾ ನಫ್ಸೀ ಸೂಅನ್, ಅವ್ ಅಜುರ್‍ರಹು ಇಲಾ ಮುಸ್ಲಿಮ್.” (ಓ ಅಲ್ಲಾಹ್! ದೃಶ್ಯ ಮತ್ತು ಅದೃಶ್ಯಗಳನ್ನು ಅರಿಯುವವನೇ! ಭೂಮಿ ಆಕಾಶಗಳ ಸೃಷ್ಟಿಕರ್ತನೇ! ಎಲ್ಲ ವಸ್ತುಗಳ ರಬ್ಬ್ ಮತ್ತು ಅಧಿಪತಿಯೇ! ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲವೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಶೈತಾನನ ಹಾಗೂ ಅವನ ಸಹಭಾಗಿತ್ವದ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಸ್ವಯಂ ಪಾಪವೆಸಗುವುದರಿಂದ ಅಥವಾ ಅದನ್ನು ಒಬ್ಬ ಮುಸ್ಲಿಮನ ಕಡೆಗೆ ಎಳೆಯುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.)
“ಅಲ್ಲಾಹುಮ್ಮ ಇನ್ನೀ ಅಸ್ಬಹ್ತು, ಉಶ್‍ಹಿದುಕ ವಉಶ್‍ಹಿದು ಹಮಲತ ಅರ್ಶಿಕ, ವಮಲಾಇಕತಕ, ವಜಮೀಅ ಖಲ್ಕಿಕ, ಅನ್ನಕ ಅನ್ತಲ್ಲಾಹು ಲಾ ಇಲಾಹ ಇಲ್ಲಾ ಅನ್ತ ವಹ್ದಕ ಲಾ ಶರೀಕ ಲಕ, ವಅನ್ನ ಮುಹಮ್ಮದನ್ ಅಬ್ದುಕ ವರಸೂಲುಕ್.” (ಅರ್ಥ: ಓ ಅಲ್ಲಾಹ್! ನೀನೇ ಅಲ್ಲಾಹು, ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ನೀನು ಏಕೈಕನು, ನಿನಗೆ ಯಾವುದೇ ಸಹಭಾಗಿಗಳಿಲ್ಲ, ಮುಹಮ್ಮದ್(ಸ) ನಿನ್ನ ದಾಸ ಮತ್ತು ಸಂದೇಶವಾಹಕರು ಎಂಬುದಕ್ಕೆ ನಿನ್ನನ್ನು, ನಿನ್ನ ಅರ್ಶ್‌ನ ವಾಹಕರನ್ನು, ನಿನ್ನ ಮಲಕ್‌ಗಳನ್ನು ಮತ್ತು ನಿನ್ನ ಸಂಪೂರ್ಣ ಸೃಷ್ಟಿಗಳನ್ನು ಸಾಕ್ಷಿಯಾಗಿಸುತ್ತಾ, ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾನು ಬೆಳಗನ್ನು ಪ್ರವೇಶಿಸಿದ್ದೇನೆ.)ಸಂಜೆ ಹೀಗೆ ಹೇಳಬೇಕು:“ಅಲ್ಲಾಹುಮ್ಮ ಇನ್ನೀ ಅಮ್ಸೈತು...” (ಅರ್ಥ: ಓ ಅಲ್ಲಾಹ್! ನಾನು ಸಂಜೆಯನ್ನು ಪ್ರವೇಶಿಸಿದ್ದೇನೆ.”ಕೊನೆಯ ತನಕ. (ನಾಲ್ಕು ಬಾರಿ).
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. (ಅರ್ಥ: ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಆಧಿಪತ್ಯ ಅವನದ್ದು ಮತ್ತು ಸರ್ವಸ್ತುತಿ ಅವನಿಗೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು.)(ನೂರು ಬಾರಿ) ಬೆಳಗ್ಗೆ ಮತ್ತು ಸಂಜೆ.
“ಹಸ್ಬಿಯಲ್ಲಾಹು ಲಾಇಲಾಹ ಇಲ್ಲಾ ಹುವ ಅಲೈಹಿ ತವಕ್ಕಲ್ತು ವಹುವ ರಬ್ಬುಲ್ ಅರ್ಶಿಲ್ ಅಝೀಮ್.” (ಅರ್ಥ: ನನಗೆ ಅಲ್ಲಾಹು ಸಾಕು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ನಾನು ಅವನ ಮೇಲೆ ಭರವಸೆಯಿಟ್ಟಿರುವೆನು. ಅವನು ಮಹಾ ಸಿಂಹಾಸನದ (ಅರ್ಶ್) ಒಡೆಯನಾಗಿರುವನು.)(ಏಳು ಬಾರಿ)
“ಸುಬ್‌ಹಾನಲ್ಲಾಹಿ ವಬಿಹಮ್‌ದಿಹೀ.” (ಅರ್ಥ: ಅಲ್ಲಾಹು ಸಕಲ ನ್ಯೂನತೆಗಳಿಂದಲೂ ಪರಿಶುದ್ಧನು. ಅವನ ಸ್ತುತಿಯೊಂದಿಗೆ.)(ನೂರು ಬಾರಿ) ಬೆಳಗ್ಗೆ ಅಥವಾ ಸಂಜೆ. ಅಥವಾ ಎರಡೂ ಹೊತ್ತು.
“ಅಸ್ತಗ್‍ಫಿರುಲ್ಲಾಹ ವ ಅತೂಬು ಇಲೈಹಿ.” (ಅರ್ಥ: ನಾನು ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಾ ಅವನ ಕಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೇನೆ.)(ನೂರು ಬಾರಿ)
ಇವು ನನಗೆ ಈ ಬರೆಯಲು ಸಾಧ್ಯವಾದದ್ದು. ಇದರ ಮೂಲಕ ಪ್ರಯೋಜನ ನೀಡಬೇಕೆಂದು ನಾನು ಅಲ್ಲಾಹನಲ್ಲಿ ಬೇಡುತ್ತೇನೆ.
'ಪ್ರವಾದಿ ﷺ ರವರ ನಮಾಝ್ ವಿಧಾನ' ಎಂಬ ಈ ಪುಸ್ತಕದಲ್ಲಿ, ಗೌರವಾನ್ವಿತ ವಿದ್ವಾಂಸರಾದ ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರು ಪ್ರವಾದಿ ﷺ ರವರ ನಮಾಝಿನ ಸ್ವರೂಪವನ್ನು ಅಧಿಕೃತ ಆಧಾರಗಳನ್ನು ಅವಲಂಬಿಸಿ, ಮುಸ್ಲಿಮರಿಗೆ ಅವರ ನಮಾಝಿನಲ್ಲಿ ಮಾರ್ಗದರ್ಶಿಯಾಗುವುದಕ್ಕಾಗಿ ಸರಳ ಶೈಲಿ ಮತ್ತು ನಿಖರವಾದ ವಿಧಾನದೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದರಲ್ಲಿ ಅವರು ವುದೂವಿನಿಂದ ಹಿಡಿದು ಸಲಾಮ್ ಹೇಳುವವರೆಗಿನ ನಮಾಝಿನ ಸ್ತಂಭಗಳು (ಅರ್ಕಾನ್), ಸುನ್ನತ್ಗಳು ಮತ್ತು ಅದರ ಸಂಪೂರ್ಣ ಸ್ವರೂಪವನ್ನು ಪುರಾವೆ ಮತ್ತು ವಿವರಣೆಯೊಂದಿಗೆ ವಿವರಿಸಿದ್ದಾರೆ. ಈ ಮೂಲಕ, ಅತ್ಯಂತ ಶ್ರೇಷ್ಠವಾದ ಈ ಆರಾಧನೆಯಲ್ಲಿ ಪ್ರವಾದಿ ﷺ ರವರನ್ನು ಸಂಪೂರ್ಣವಾಗಿ ಅನುಸರಿಸಲು ಕರೆ ನೀಡಿದ್ದಾರೆ.
"ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ (ﷺ)" ಎಂಬ ಈ ಪುಸ್ತಕವು ಪ್ರವಾದಿ ಮುಹಮ್ಮದ್ (ﷺ) ರವರ ವಂಶಾವಳಿ, ಬಾಲ್ಯ ಮತ್ತು ಬೆಳವಣಿಗೆಯಿಂದ ಹಿಡಿದು, ಅವರ ಶುಭ ವಿವಾಹ, ದಿವ್ಯ ಸಂದೇಶದ (ವಹಿ) ಆರಂಭ ಮತ್ತು ಅವರ ಅಂತಿಮ ಪ್ರವಾದಿತ್ವದ ಪ್ರಾರಂಭದವರೆಗಿನ ಜೀವನಚರಿತ್ರೆಯನ್ನು ಪರಿಚಯಿಸುತ್ತದೆ. ಇದು ಅವರ ಪ್ರವಾದಿತ್ವದ ದೃಷ್ಟಾಂತಗಳನ್ನು ಮತ್ತು ಸತ್ಯಸಂಧತೆಯ ಪುರಾವೆಗಳನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ, ಅವರು ತಂದ ಧರ್ಮಶಾಸ್ತ್ರವನ್ನು (ಶರೀಅತ್) ಮತ್ತು ಅದು ಮಾನವ ಹಕ್ಕುಗಳು ಹಾಗೂ ಘನತೆಯನ್ನು ಸಂರಕ್ಷಿಸುವಲ್ಲಿ ವಹಿಸುವ ಪಾತ್ರವನ್ನು ವಿವರಿಸುತ್ತದೆ. ಹಾಗೆಯೇ, ಅವರ ವಿರೋಧಿಗಳ ನಿಲುವುಗಳನ್ನು ಮತ್ತು ಪ್ರವಾದಿಯ ಕುರಿತಾಗಿ ಅವರೇ ನೀಡಿದ ಸಾಕ್ಷ್ಯಗಳನ್ನು ಇದು ಎತ್ತಿ ತೋರಿಸುತ್ತದೆ. ಇದರೊಂದಿಗೆ, ಅವರನ್ನು ಜನರಿಗೆ ಮಾದರಿಯನ್ನಾಗಿಯೂ ಮತ್ತು…
ಶೇಖ್ ಅಬ್ದುರ್-ರಹಮಾನ್ ಇಬ್ನ್ ನಾಸಿರ್ ಅಸ್-ಸಾದಿ ರವರ 'ಸೌಭಾಗ್ಯ ಜೀವನಕ್ಕಾಗಿ ಉಪಯುಕ್ತ ಮಾರ್ಗಗಳು' ಎಂಬ ಪುಸ್ತಕವು, ಆಳವಾದ ಈಮಾನಿನ ದೃಷ್ಟಿಕೋನದಿಂದ ನಿಜವಾದ ಸಂತೋಷದ ಕಾರಣಗಳನ್ನು ವಿಶ್ಲೇಷಿಸುತ್ತದೆ. ಇದು ಈಮಾನ್ (ಸತ್ಯವಿಶ್ವಾಸ), ಸತ್ಕರ್ಮ, ಅಲ್ಲಾಹನ ಸ್ಮರಣೆ, ಸಂತೃಪ್ತಿ, ಅನುಗ್ರಹಗಳ ಕುರಿತು ಚಿಂತನೆ, ಪರೋಪಕಾರ, ಅಲ್ಲಾಹನಲ್ಲಿ ಭರವಸೆ (ತವಕ್ಕುಲ್), ಸಹನೆ, ಮತ್ತು ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡುವುದರ ಮೂಲಕ ಓದುಗರಿಗೆ ಹೃದಯದ ನೆಮ್ಮದಿಯೆಡೆಗೆ ದಾರಿ ತೋರಿಸುತ್ತದೆ. ಈ ಕೃತಿಯು ತನ್ನ ಸುಂದರವಾದ ಶೈಲಿಯ ಮೂಲಕ, ಜೀವನದ ಏರಿಳಿತಗಳ ನಡುವೆಯೂ ನೆಮ್ಮದಿಯ, ಸಮತೋಲಿತ ಮತ್ತು ಸಂತೋಷದ ಜೀವನಕ್ಕಾಗಿ ಒಂದು ಮಾರ್ಗಸೂಚಿಯನ್ನು ನಮ್ಮ ಮುಂದಿಡುತ್ತದೆ.