Skip to content
البَقَرَة /

ಆಯತ್ 255

2 : 255

ಆಯತ್ 255 of البَقَرَة (2 : 255). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 255

ٱللَّهُ لَآ إِلَٰهَ إِلَّا هُوَ ٱلۡحَيُّ ٱلۡقَيُّومُۚ لَا تَأۡخُذُهُۥ سِنَةٞ وَلَا نَوۡمٞۚ لَّهُۥ مَا فِي ٱلسَّمَٰوَٰتِ وَمَا فِي ٱلۡأَرۡضِۗ مَن ذَا ٱلَّذِي يَشۡفَعُ عِندَهُۥٓ إِلَّا بِإِذۡنِهِۦۚ يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡۖ وَلَا يُحِيطُونَ بِشَيۡءٖ مِّنۡ عِلۡمِهِۦٓ إِلَّا بِمَا شَآءَۚ وَسِعَ كُرۡسِيُّهُ ٱلسَّمَٰوَٰتِ وَٱلۡأَرۡضَۖ وَلَا يَـُٔودُهُۥ حِفۡظُهُمَاۚ وَهُوَ ٱلۡعَلِيُّ ٱلۡعَظِيمُ

ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ .

Explanation & meanings · 1
  1. ಇದು ಆಯತುಲ್ ಕುರ್ಸಿ ಆಗಿದ್ದು ಹದೀಸ್ ಗಳಲ್ಲಿ ಇದರ ಅನೇಕ ಶ್ರೇಷ್ಠತೆಗಳ ಬಗ್ಗೆ ಉಲ್ಲೇಖಗಳಿವೆ.