4 : 86
وَإِذَا حُيِّيتُم بِتَحِيَّةٖ فَحَيُّواْ بِأَحۡسَنَ مِنۡهَآ أَوۡ رُدُّوهَآۗ إِنَّ ٱللَّهَ كَانَ عَلَىٰ كُلِّ شَيۡءٍ حَسِيبًا
ನಿಮಗೆ ಅಭಿವಂದನೆ (ಸಲಾಂ) ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ ಅಭಿವಂದನೆ ಸಲ್ಲಿಸಿರಿ. ಅಥವಾ ಕನಿಷ್ಠ ಅದನ್ನು ಮರಳಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯವನ್ನೂ ವಿಚಾರಣೆ ಮಾಡುತ್ತಾನೆ.
Explanation & meanings · 1
- ಯಾರಾದರೂ “ಅಸ್ಸಲಾಂ ಅಲೈಕುಂ” ಎಂದು ಹೇಳಿದರೆ, “ವಅಲೈಕುಮುಸ್ಸಲಾಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಹೇಳಿ ಉತ್ತರಿಸಬೇಕು. ಇದು ಐಚ್ಛಿಕವಾಗಿದೆ. ಕನಿಷ್ಠ “ವಅಲೈಕುಮುಸ್ಸಲಾಂ” ಎಂದು ಹೇಳಿ ಉತ್ತರಿಸುವುದು ಕಡ್ಡಾಯವಾಗಿದೆ.