7 : 31
۞ يَٰبَنِيٓ ءَادَمَ خُذُواْ زِينَتَكُمۡ عِندَ كُلِّ مَسۡجِدٖ وَكُلُواْ وَٱشۡرَبُواْ وَلَا تُسۡرِفُوٓاْۚ إِنَّهُۥ لَا يُحِبُّ ٱلۡمُسۡرِفِينَ
ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ. ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುರ್ವ್ಯಯ ಮಾಡಬೇಡಿ. ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
Explanation & meanings · 1
- ಮಕ್ಕಾದ ಬಹುದೇವಾರಾಧಕರು ನಗ್ನರಾಗಿ ಕಅಬಾಲಯಕ್ಕೆ ತವಾಫ್ (ಪ್ರದಕ್ಷಿಣೆ) ಮಾಡುತ್ತಿದ್ದರು. ನಾವು ಹುಟ್ಟಿದ ಸ್ಥಿತಿಯಲ್ಲೇ ತವಾಫ್ ಮಾಡುತ್ತೇವೆಂದು ಅವರು ಹೇಳುತ್ತಿದ್ದರು. ಅಲ್ಲಾಹನ ಆಜ್ಞೋಲ್ಲಂಘನೆ ಮಾಡಿದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡಿದರೆ ಸಿಂಧುವಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿತ್ತು. ಆದರೆ ಇಸ್ಲಾಂ ಇವೆಲ್ಲವನ್ನೂ ವಿರೋಧಿಸುತ್ತದೆ.