Skip to content
الإسرَاء /

ಆಯತ್ 57

17 : 57

ಆಯತ್ 57 of الإسرَاء (17 : 57). This page carries the verse in the Uthmani script with a translation of its meaning, at a stable URL that can be cited on its own.

الإسرَاء ಆಯತ್‌ಗಳು 111
ಸೂರ · الإسرَاء
ಕನ್ನಡ · Hamza
17 : 57

أُوْلَٰٓئِكَ ٱلَّذِينَ يَدۡعُونَ يَبۡتَغُونَ إِلَىٰ رَبِّهِمُ ٱلۡوَسِيلَةَ أَيُّهُمۡ أَقۡرَبُ وَيَرۡجُونَ رَحۡمَتَهُۥ وَيَخَافُونَ عَذَابَهُۥٓۚ إِنَّ عَذَابَ رَبِّكَ كَانَ مَحۡذُورٗا

ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ.

Explanation & meanings · 1
  1. ಅಂದರೆ ದೇವದೂತರುಗಳು, ಪ್ರವಾದಿಗಳು ಮತ್ತು ಮಹಾಪುರುಷರು. ಬಹುದೇವಾರಾಧಕರಲ್ಲಿ ಅನೇಕರು ದೇವದೂತರುಗಳನ್ನು ಆರಾಧಿಸುತ್ತಿದ್ದರು. ಯಹೂದಿಗಳು ಪ್ರವಾದಿ ಉಝೈರ್ (ಎಜ್ರಾ) ರನ್ನು ಮತ್ತು ಕ್ರೈಸ್ತರು ಪ್ರವಾದಿ ಈಸಾ (ಯೇಸು) ರನ್ನು ಅಲ್ಲಾಹನ ಪುತ್ರರೆಂದು ಕರೆದು ಆರಾಧಿಸುತ್ತಾರೆ. ಕೆಲವರು ಸಮಾಧಿಗಳಲ್ಲಿರುವ ಮಹಾಪುರುಷರನ್ನು ಆರಾಧಿಸುತ್ತಾರೆ. ವಾಸ್ತವವಾಗಿ ಇವರೆಲ್ಲರೂ ಅಲ್ಲಾಹನ ಇಷ್ಟದಾಸರಾಗಿದ್ದಾರೆ ಮತ್ತು ಅಲ್ಲಾಹನಿಗೆ ಸಮೀಪವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನೀವು ಅವರನ್ನು ಆರಾಧಿಸುತ್ತಿರುವ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.