Skip to content
المَسَد /

ಆಯತ್ 1

111 : 1

ಆಯತ್ 1 of المَسَد (111 : 1). This page carries the verse in the Uthmani script with a translation of its meaning, at a stable URL that can be cited on its own.

المَسَد ಆಯತ್‌ಗಳು 5
ಸೂರ · المَسَد
ಕನ್ನಡ · Hamza
111 : 1

تَبَّتۡ يَدَآ أَبِي لَهَبٖ وَتَبَّ

ಅಬೂಲಹಬನ ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು.

Explanation & meanings · 1
  1. ಅಬೂಲಹಬ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದೆಯ ಸಹೋದರ. ಆತ ಇಸ್ಲಾಮಿನ ಮತ್ತು ಮುಸ್ಲಿಮರ ಕಡು ವೈರಿಯಾಗಿದ್ದ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧರ್ಮಪ್ರಚಾರ ಮಾಡಲು ಹೋದಲ್ಲೆಲ್ಲಾ ಈತ ಅವರನ್ನು ಹಿಂಬಾಲಿಸಿ, ಅವನು ಸುಳ್ಳ ಅವನ ಮಾತನ್ನು ಕೇಳಬೇಡಿ ಎನ್ನುತ್ತಿದ್ದ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕುಟುಂಬದವನ್ನು ಕರೆದು ಅವರಿಗೆ ಏಕದೇವವಿಶ್ವಾಸವನ್ನು ಬೋಧಿಸಿದಾಗ ಈತ ಕೋಪದಿಂದ ಮಣ್ಣು ಬಾಚಿ ಎಸೆದು “ಓ ಮುಹಮ್ಮದ್, ನೀನು ನಾಶವಾಗಿ ಹೋಗು” ಎಂದಿದ್ದ. ಇದಕ್ಕೆ ಉತ್ತರವಾಗಿ ಈ ಅಧ್ಯಾಯವು ಅವತೀರ್ಣವಾಯಿತು.