Skip to content

ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು

ಬುರೈದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು."

«إِنَّ الْعَهْدَ الَّذِي بَيْنَنَا وَبَيْنَهُمُ الصَّلَاةُ، فَمَنْ تَرَكَهَا فَقَدْ كَفَرَ».

ಇದನ್ನು ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಮುಸ್ಲಿಮರ ಮತ್ತು ಮುಸ್ಲಿಮೇತರರ (ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳು) ನಡುವಿನ ಒಪ್ಪಂದ ಮತ್ತು ಕರಾರು ನಮಾಝ್ ಆಗಿದ್ದು, ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾಗುತ್ತಾರೆಂದು ಪ್ರವಾದಿಯವರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ.

ಪದಗಳ ಅರ್ಥ

...:

ಹದೀಸಿನ ಪ್ರಯೋಜನಗಳು

ನಮಾಝಿನ ಶ್ರೇಷ್ಠ ಸ್ಥಾನಮಾನವನ್ನು ಮತ್ತು ಅದು ಸತ್ಯವಿಶ್ವಾಸಿ ಮತ್ತು ಸತ್ಯನಿಷೇಧಿಗಳನ್ನು ಬೇರ್ಪಡಿಸುತ್ತದೆಂದು ತಿಳಿಸಲಾಗಿದೆ.

ಇಸ್ಲಾಮೀ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಮನುಷ್ಯನ ಬಾಹ್ಯ ಸ್ಥಿತಿಯನ್ನು ನೋಡಿಯೇ ಹೊರತು ಅವನ ಅಂತರಂಗವನ್ನು ನೋಡಿ ಅಲ್ಲ.

ಉಲ್ಲೇಖಗಳು

ಸುನನು ನ್ನಸಾಈ. (1/ 231) (463).

ಸುನನು ತ್ತಿರ್ಮಿದಿ. (4/ 365) (2621).

ಸುನನ್ ಇಬ್ನ್ ಮಾಜ. (2/ 181) (1079).

ಮುಸ್ನದ್ ಅಹ್ಮದ್. (38/ 20) (22937).

ಇನ್ನಷ್ಟು (2)

فيض القدير (4/ 395).

ذخيرة العقبى في شرح المجتبى (6/ 192) (6/ 193).