Skip to content
ಸೂರಗಳ ಪಟ್ಟಿ /

البَقَرَة

البَقَرَة is chapter 2 of the Quran and has 286 verses. This page presents it in full in the Uthmani script, with a verse-by-verse translation of its meaning.

286 ಆಯತ್‌ಗಳು ಸೂರ ಸಂಖ್ಯೆ 2
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

الٓمٓ

ಅಲಿಫ್-ಲಾಮ್-ಮೀಮ್.

Explanation & meanings · 1
  1. ಇವುಗಳನ್ನು ‘ಹುರೂಫ್ ಮುಕತ್ತಆತ್’ (ಬಿಡಿ ಅಕ್ಷರಗಳು) ಎಂದು ಕರೆಯಲಾಗುತ್ತದೆ. ಇವುಗಳಿಗೆ ವಿಶೇಷವಾದ ಅರ್ಥವಿದೆಯೆಂದು ಹೇಳುವ ಯಾವುದೇ ವರದಿಗಳಿಲ್ಲ. ಇವುಗಳ ಉದ್ದೇಶವೇನೆಂದು ಸರ್ವಶಕ್ತನಾದ ಅಲ್ಲಾಹು ಮಾತ್ರ ಬಲ್ಲ.

ذَٰلِكَ ٱلۡكِتَٰبُ لَا رَيۡبَۛ فِيهِۛ هُدٗى لِّلۡمُتَّقِينَ

ಈ ಗ್ರಂಥದಲ್ಲಿ ಯಾವುದೇ ಸಂದೇಹವಿಲ್ಲ; ಇದು ದೇವಭಯವುಳ್ಳವರಿಗೆ ಸನ್ಮಾರ್ಗವನ್ನು ತೋರಿಸುತ್ತದೆ.

ٱلَّذِينَ يُؤۡمِنُونَ بِٱلۡغَيۡبِ وَيُقِيمُونَ ٱلصَّلَوٰةَ وَمِمَّا رَزَقۡنَٰهُمۡ يُنفِقُونَ

ಅವರು (ದೇವಭಯವುಳ್ಳವರು) ಯಾರೆಂದರೆ, ಅದೃಶ್ಯ ವಿಷಯಗಳಲ್ಲಿ ವಿಶ್ವಾಸವಿಡುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ಒದಗಿಸಿದ (ಧನದಿಂದ) ಖರ್ಚು ಮಾಡುವವರು.

Explanation & meanings · 1
  1. ಅದೃಶ್ಯ ವಿಷಯಗಳು ಎಂದರೆ ಇಂದ್ರಿಯಗಳಿಗೆ ಗ್ರಹಿಸಲಾಗದ, ನಮ್ಮಿಂದ ಸಂಪೂರ್ಣ ಮರೆಯಾಗಿರುವ ಸಂಗತಿಗಳು. ಉದಾಹರಣೆಗೆ, ಪರಲೋಕ, ಸಮಾಧಿಯ ಶಿಕ್ಷೆ, ಸ್ವರ್ಗ, ನರಕ ಇತ್ಯಾದಿ.

وَٱلَّذِينَ يُؤۡمِنُونَ بِمَآ أُنزِلَ إِلَيۡكَ وَمَآ أُنزِلَ مِن قَبۡلِكَ وَبِٱلۡأٓخِرَةِ هُمۡ يُوقِنُونَ

ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ಅವರು ವಿಶ್ವಾಸವಿಡುತ್ತಾರೆ. ಪರಲೋಕದಲ್ಲಿ ಅವರು ದೃಢವಾಗಿ ವಿಶ್ವಾಸವಿಡುತ್ತಾರೆ.

أُوْلَٰٓئِكَ عَلَىٰ هُدٗى مِّن رَّبِّهِمۡۖ وَأُوْلَٰٓئِكَ هُمُ ٱلۡمُفۡلِحُونَ

ಅವರು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸನ್ಮಾರ್ಗದಲ್ಲಿದ್ದಾರೆ. ಅವರೇ ಯಶಸ್ವಿಯಾದವರು.