Skip to content
البَقَرَة /

ಆಯತ್ 235

2 : 235

ಆಯತ್ 235 of البَقَرَة (2 : 235). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 235

وَلَا جُنَاحَ عَلَيۡكُمۡ فِيمَا عَرَّضۡتُم بِهِۦ مِنۡ خِطۡبَةِ ٱلنِّسَآءِ أَوۡ أَكۡنَنتُمۡ فِيٓ أَنفُسِكُمۡۚ عَلِمَ ٱللَّهُ أَنَّكُمۡ سَتَذۡكُرُونَهُنَّ وَلَٰكِن لَّا تُوَاعِدُوهُنَّ سِرًّا إِلَّآ أَن تَقُولُواْ قَوۡلٗا مَّعۡرُوفٗاۚ وَلَا تَعۡزِمُواْ عُقۡدَةَ ٱلنِّكَاحِ حَتَّىٰ يَبۡلُغَ ٱلۡكِتَٰبُ أَجَلَهُۥۚ وَٱعۡلَمُوٓاْ أَنَّ ٱللَّهَ يَعۡلَمُ مَا فِيٓ أَنفُسِكُمۡ فَٱحۡذَرُوهُۚ وَٱعۡلَمُوٓاْ أَنَّ ٱللَّهَ غَفُورٌ حَلِيمٞ

ನೀವು ಆ ಮಹಿಳೆಯರನ್ನು ವಿವಾಹವಾಗಲು ಬಯಸುತ್ತೀರೆಂದು ಸೂಚ್ಯವಾಗಿ ತಿಳಿಸಿದರೆ ಅಥವಾ ಅದನ್ನು ಮನಸ್ಸಿನೊಳಗೆ ಬಚ್ಚಿಟ್ಟರೆ ಅದರಲ್ಲಿ ನಿಮಗೇನೂ ದೋಷವಿಲ್ಲ. ನೀವು ಅವರ ಬಗ್ಗೆ ಯೋಚಿಸುತ್ತೀರೆಂದು ಅಲ್ಲಾಹನಿಗೆ ತಿಳಿದಿದೆ. ಆದರೆ ರಹಸ್ಯವಾಗಿ ಅವರಿಗೆ ಯಾವುದೇ ಭರವಸೆ ನೀಡಬೇಡಿ. ನೀವು ಅವರೊಡನೆ ಉತ್ತಮ ಮಾತುಗಳನ್ನಾಡಬಹುದು. ಅವರ (ದೀಕ್ಷಾಕಾಲದ) ಅವಧಿ ಪೂರ್ಣವಾಗುವ ತನಕ ವಿವಾಹ ಕರಾರು ಮಾಡಿಕೊಳ್ಳಲು ದೃಢನಿರ್ಧಾರ ತೆಗೆದುಕೊಳ್ಳಬೇಡಿ. ತಿಳಿಯಿರಿ! ನಿಮ್ಮ ಮನಸ್ಸಿನಲ್ಲಿರುವುದನ್ನು ಅಲ್ಲಾಹು ತಿಳಿಯುತ್ತಾನೆ. ಆದ್ದರಿಂದ ಅವನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.

Explanation & meanings · 1
  1. ಇಲ್ಲಿ ಉದ್ದೇಶಿಸಿರುವುದು ಮೂರು ವಿಚ್ಛೇದನಗಳನ್ನು (ತಲಾಕ್) ಪಡೆದ ಮಹಿಳೆಯ ಬಗ್ಗೆ. ಅವರೊಡನೆ ಸೂಚ್ಯವಾಗಿ, ಅಂದರೆ ನನಗೆ ಒಬ್ಬ ಮಹಿಳೆಯನ್ನು ವಿವಾಹವಾಗುವ ಇರಾದೆಯಿದೆ, ಅಥವಾ ನಾನು ಒಬ್ಬ ಉತ್ತಮ ಮಹಿಳೆಯನ್ನು ಹುಡುಕುತ್ತಿದ್ದೇನೆ ಎಂದು ಹೇಳಬಹುದು. ಆದರೆ ಇದ್ದ (ದೀಕ್ಷಾಕಾಲ) ಮುಗಿಯುವ ತನಕ ರಹಸ್ಯ ಭರವಸೆಗಳನ್ನು ಅಥವಾ ವಿವಾಹ ಒಪ್ಪಂದವನ್ನು ಮಾಡಿಕೊಳ್ಳಬಾರದು. ಇನ್ನು ಒಂದು ಅಥವಾ ಎರಡು ವಿಚ್ಛೇದನ (ತಲಾಕ್) ಪಡೆದ ಮಹಿಳೆಯೊಡನೆ ಸೂಚ್ಯವಾಗಿಯೂ ವಿವಾಹದ ಬಗ್ಗೆ ಪ್ರಸ್ತಾಪವೆತ್ತಬಾರದು. ಏಕೆಂದರೆ ಆ ಅವಧಿಯಲ್ಲಿ ಆಕೆಯ ಗಂಡ ಆಕೆಯನ್ನು ಮರಳಿ ಸ್ವೀಕರಿಸುವ ಸಾಧ್ಯತೆಯಿದೆ.