2 : 224
وَلَا تَجۡعَلُواْ ٱللَّهَ عُرۡضَةٗ لِّأَيۡمَٰنِكُمۡ أَن تَبَرُّواْ وَتَتَّقُواْ وَتُصۡلِحُواْ بَيۡنَ ٱلنَّاسِۚ وَٱللَّهُ سَمِيعٌ عَلِيمٞ
ಒಳಿತು ಮಾಡುವುದನ್ನು, ದೇವಭಯದಿಂದ ಜೀವಿಸುವುದನ್ನು ಮತ್ತು ಜನರ ನಡುವೆ ಸುಧಾರಣೆ ಮಾಡುವುದನ್ನು ಬಿಟ್ಟುಬಿಡುವುದಕ್ಕಾಗಿ ನಿಮ್ಮ ಪ್ರತಿಜ್ಞೆಗಳಿಗೆ ಅಲ್ಲಾಹನನ್ನು ಗುರಿಯನ್ನಾಗಿ ಮಾಡಬೇಡಿ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Explanation & meanings · 1
- ಅಂದರೆ, ನಾನು ಇನ್ನು ಮುಂದೆ ಯಾವುದೇ ಒಳಿತು ಮಾಡುವುದಿಲ್ಲ, ನಾನು ಇನ್ನು ಮುಂದೆ ಇವನೊಡನೆ ಮಾತನಾಡುವುದೇ ಇಲ್ಲ, ನಾನು ಇನ್ನು ಮುಂದೆ ಇವರಿಬ್ಬರ ನಡುವೆ ರಾಜಿ ಮಾಡುವುದೇ ಇಲ್ಲ ಎಂಬಿತ್ಯಾದಿಯಾಗಿ ಕೋಪದಿಂದ ಪ್ರತಿಜ್ಞೆ ಮಾಡಬೇಡಿ. ಈ ರೀತಿ ಪ್ರತಿಜ್ಞೆ ಮಾಡಿದವರು ಪರಿಹಾರ ನೀಡಿ ಆ ಪ್ರತಿಜ್ಞೆಯನ್ನು ಹಿಂಪಡೆಯಬೇಕು.