Skip to content
البَقَرَة /

ಆಯತ್ 54

2 : 54

ಆಯತ್ 54 of البَقَرَة (2 : 54). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 54

وَإِذۡ قَالَ مُوسَىٰ لِقَوۡمِهِۦ يَٰقَوۡمِ إِنَّكُمۡ ظَلَمۡتُمۡ أَنفُسَكُم بِٱتِّخَاذِكُمُ ٱلۡعِجۡلَ فَتُوبُوٓاْ إِلَىٰ بَارِئِكُمۡ فَٱقۡتُلُوٓاْ أَنفُسَكُمۡ ذَٰلِكُمۡ خَيۡرٞ لَّكُمۡ عِندَ بَارِئِكُمۡ فَتَابَ عَلَيۡكُمۡۚ إِنَّهُۥ هُوَ ٱلتَّوَّابُ ٱلرَّحِيمُ

ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ನನ್ನ ಜನರೇ! ಕರುವನ್ನು ದೇವರಾಗಿ ಮಾಡಿಕೊಳ್ಳುವ ಮೂಲಕ ನಿಶ್ಚಯವಾಗಿಯೂ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಿದ್ದೀರಿ. ಆದ್ದರಿಂದ, ನೀವು ಪಶ್ಚಾತ್ತಾಪಪಟ್ಟು ನಿಮ್ಮ ಸೃಷ್ಟಿಕರ್ತನ ಕಡೆಗೆ ಮರಳಿರಿ; ನಿಮ್ಮನ್ನು ನೀವೇ ಕೊಲ್ಲಿರಿ. ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಅದೇ ನಿಮಗೆ ಶ್ರೇಷ್ಠವಾಗಿದೆ.” ಆಗ ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

Explanation & meanings · 1
  1. ಇಸ್ರಾಯೇಲ್ ಮಕ್ಕಳು ಮಾಡಿದ ಬಹುದೇವಾರಾಧನೆಗಾಗಿ ಮೂಸಾ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಛೀಮಾರಿ ಹಾಕಿದಾಗ ಅವರು ವಿಷಾದಿಸಿ ಪಶ್ಚಾತ್ತಾಪಪಡಲು ಮುಂದಾದರು. ಅವರು ಮಾಡಿದ ಪಾಪಕ್ಕೆ ಪರಿಹಾರವು ಅವರನ್ನೇ ಅವರು ಕೊಲ್ಲುವುದಾಗಿತ್ತು. ಇದನ್ನು ಎರಡು ರೀತಿಯಲ್ಲಿ ವಿವರಿಸಲಾಗಿದೆ: ಒಂದು, ಅವರನ್ನು ಎರಡು ಸಾಲುಗಳಾಗಿ ನಿಲ್ಲಿಸಿ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂದು ಆದೇಶಿಸಲಾಯಿತು. ಎರಡು, ಅವರಲ್ಲಿ ಈ ಪಾಪ ಮಾಡಿದವರನ್ನು ಪಾಪ ಮಾಡದವರು ಕೊಲ್ಲಬೇಕೆಂದು ಆದೇಶಿಸಲಾಯಿತು.