Skip to content
البَقَرَة /

ಆಯತ್ 34

2 : 34

ಆಯತ್ 34 of البَقَرَة (2 : 34). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 34

وَإِذۡ قُلۡنَا لِلۡمَلَٰٓئِكَةِ ٱسۡجُدُواْ لِأٓدَمَ فَسَجَدُوٓاْ إِلَّآ إِبۡلِيسَ أَبَىٰ وَٱسۡتَكۡبَرَ وَكَانَ مِنَ ٱلۡكَٰفِرِينَ

ನಾವು ದೇವದೂತರೊಡನೆ ಹೇಳಿದ ಸಂದರ್ಭ: “ನೀವೆಲ್ಲರೂ ಆದಮರಿಗೆ ಸಾಷ್ಟಾಂಗ ಮಾಡಿರಿ.” ಅವರು ಸಾಷ್ಟಾಂಗ ಮಾಡಿದರು; ಇಬ್ಲೀಸನ ಹೊರತು. ಅವನು (ಸಾಷ್ಟಾಂಗ ಮಾಡಲು) ನಿರಾಕರಿಸಿದನು ಮತ್ತು ಅಹಂಕಾರ ತೋರಿದನು. ಅವನು ಸತ್ಯನಿಷೇಧಿಗಳಲ್ಲಿ ಸೇರಿದವನಾದನು.

Explanation & meanings · 2
  1. ಸುಜೂದ್ ಎಂದರೆ ವಿನಯ ಮತ್ತು ವಿನಮ್ರತೆಯನ್ನು ವ್ಯಕ್ತಪಡಿಸುವುದು. ನೆಲದ ಮೇಲೆ ಹಣೆಯಿಟ್ಟು ಸಾಷ್ಟಾಂಗ ಮಾಡುವುದು ಇದರ ಪರಮೋಚ್ಛ ರೂಪವಾಗಿದೆ. ಪ್ರವಾದಿ ಮುಹಮ್ಮದ್ (ಅವರ ಮೇಲೆ ಶಾಂತಿಯಿರಲಿ) ರವರ ಶರಿಯತ್ (ಧರ್ಮಸಂಹಿತೆ) ನ ಪ್ರಕಾರ ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಸಾಷ್ಟಾಂಗ ಮಾಡಬಾರದು.
  2. ಇಬ್ಲೀಸ್ ಜಿನ್ನ್ (ಯಕ್ಷ) ಗಳಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಶ್ರೇಷ್ಠತೆ ನೀಡಿ ದೇವದೂತರೊಡನೆ ಸೇರಿಸಿದ್ದನು. ಆದ್ದರಿಂದ ಅಲ್ಲಾಹನ ಆದೇಶ ಪ್ರಕಾರ ಸಾಷ್ಟಾಂಗ ಮಾಡುವುದು ಅವನಿಗೂ ಕಡ್ಡಾಯವಾಗಿತ್ತು. ಆದರೆ ಅವನು ಆದಮರ ಮೇಲಿದ್ದ ಅಸೂಯೆ ಮತ್ತು ಅಹಂಕಾರದಿಂದ ಸಾಷ್ಟಾಂಗ ಮಾಡಲು ನಿರಾಕರಿಸಿದನು.