2 : 58
وَإِذۡ قُلۡنَا ٱدۡخُلُواْ هَٰذِهِ ٱلۡقَرۡيَةَ فَكُلُواْ مِنۡهَا حَيۡثُ شِئۡتُمۡ رَغَدٗا وَٱدۡخُلُواْ ٱلۡبَابَ سُجَّدٗا وَقُولُواْ حِطَّةٞ نَّغۡفِرۡ لَكُمۡ خَطَٰيَٰكُمۡۚ وَسَنَزِيدُ ٱلۡمُحۡسِنِينَ
ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಈ ಊರನ್ನು ಪ್ರವೇಶಿಸಿರಿ. ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು ‘ಹಿತ್ತ’ ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ ಪ್ರತಿಫಲವನ್ನು ಹೆಚ್ಚಿಸುವೆವು.”
Explanation & meanings · 3
- ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಆ ಊರು ಬೈತುಲ್ ಮುಕದ್ದಸ್.
- ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದರೆ ತಲೆಬಾಗುತ್ತಾ ಪ್ರವೇಶಿಸಿರಿ ಎಂದು ಕೆಲವರು ಅರ್ಥ ನೀಡಿದ್ದಾರೆ. ಕೆಲವರು ಇದನ್ನು ಅಕ್ಷರಾರ್ಥದಲ್ಲಿ ಗೌರವದ ರೂಪದಲ್ಲಿ ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದು ಅರ್ಥ ನೀಡಿದ್ದಾರೆ.
- ಹಿತ್ತ ಎಂದರೆ ನಮ್ಮ ಪಾಪಗಳನ್ನು ಮನ್ನಿಸು ಎಂದರ್ಥ.