2 : 170
وَإِذَا قِيلَ لَهُمُ ٱتَّبِعُواْ مَآ أَنزَلَ ٱللَّهُ قَالُواْ بَلۡ نَتَّبِعُ مَآ أَلۡفَيۡنَا عَلَيۡهِ ءَابَآءَنَآۚ أَوَلَوۡ كَانَ ءَابَآؤُهُمۡ لَا يَعۡقِلُونَ شَيۡـٔٗا وَلَا يَهۡتَدُونَ
“ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅನುಸರಿಸಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ಇಲ್ಲ, ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡೆವೋ ಅದನ್ನೇ ನಾವು ಅನುಸರಿಸುತ್ತೇವೆ.” ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ.
Explanation & meanings · 1
- ಇಂತಹ ಜನರು ಇಂದು ಕೂಡ ಇದ್ದಾರೆ. ಧರ್ಮದಲ್ಲಿ ಯಾವುದೇ ಪುರಾವೆಯಿಲ್ಲದ ನವೀನಾಚಾರಗಳನ್ನು ತೊರೆಯಿರಿ ಎಂದು ಅವರೊಡನೆ ಹೇಳಿದರೆ, ಇವೆಲ್ಲವನ್ನೂ ನಮ್ಮ ಪೂರ್ವಜರು ಆಚರಿಸುತ್ತಿದ್ದರು; ನಾವು ಅವರನ್ನು ಹಿಂಬಾಲಿಸಿ ಅವರ ಮಾರ್ಗದಲ್ಲಿ ಚಲಿಸುತ್ತೇವೆ ಎಂದು ಅವರು ಹೇಳುತ್ತಾರೆ.