Skip to content
البَقَرَة /

ಆಯತ್ 283

2 : 283

ಆಯತ್ 283 of البَقَرَة (2 : 283). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 283

۞ وَإِن كُنتُمۡ عَلَىٰ سَفَرٖ وَلَمۡ تَجِدُواْ كَاتِبٗا فَرِهَٰنٞ مَّقۡبُوضَةٞۖ فَإِنۡ أَمِنَ بَعۡضُكُم بَعۡضٗا فَلۡيُؤَدِّ ٱلَّذِي ٱؤۡتُمِنَ أَمَٰنَتَهُۥ وَلۡيَتَّقِ ٱللَّهَ رَبَّهُۥۗ وَلَا تَكۡتُمُواْ ٱلشَّهَٰدَةَۚ وَمَن يَكۡتُمۡهَا فَإِنَّهُۥٓ ءَاثِمٞ قَلۡبُهُۥۗ وَٱللَّهُ بِمَا تَعۡمَلُونَ عَلِيمٞ

ನೀವು ಪ್ರಯಾಣದಲ್ಲಿದ್ದು ನಿಮಗೆ ಬರಹಗಾರನು ಸಿಗದಿದ್ದರೆ, ಅಡಮಾನವನ್ನು ಸ್ವಾಧೀನದಲ್ಲಿರಿಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ವಿಶ್ವಾಸವಿಡಲಾದವನು (ಸಾಲ ಪಡೆದವನು) ತನ್ನ ವಿಶ್ವಸ್ತತೆಯನ್ನು ನೆರವೇರಿಸಲಿ ಮತ್ತು ತನ್ನ ಪರಿಪಾಲಕನಾದ ಅಲ್ಲಾಹನನ್ನು ಭಯಪಡಲಿ. ನೀವು ಸಾಕ್ಷ್ಯವನ್ನು ಬಚ್ಚಿಡಬೇಡಿ. ಯಾರು ಅದನ್ನು ಬಚ್ಚಿಡುತ್ತಾನೋ ಅವನು ಪಾಪಭರಿತ ಹೃದಯದವನಾಗಿದ್ದಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

Explanation & meanings · 1
  1. ಪ್ರಯಾಣದ ಸಮಯಲ್ಲಿ ಸಾಲ ವ್ಯವಹಾರ ಮಾಡಬೇಕಾಗಿ ಬಂದರೆ ಮತ್ತು ಅಲ್ಲಿ ಬರಹಗಾರನು ಅಥವಾ ಬರೆಯುವ ಸಾಧನಗಳು (ಕಾಗದ, ಲೇಖನಿ ಇತ್ಯಾದಿ) ಸಿಗದಿದ್ದರೆ ಸಾಲ ಪಡೆಯುವವನು ಏನಾದರೂ ವಸ್ತುವನ್ನು ಅಡವಿಟ್ಟು ಸಾಲ ಪಡೆಯಬೇಕು. ಆದರೆ ಸಾಲ ನೀಡುವವನು ಮತ್ತು ಪಡೆಯುವವನು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ಅಡಮಾನವಿಲ್ಲದೆಯೇ ಸಾಲ ನೀಡಬಹುದು. ಆದರೆ ಸಾಲ ಪಡೆದವನು ತನ್ನ ವಿಶ್ವಸ್ತತೆಯನ್ನು ಕಾಪಾಡಿಕೊಂಡು ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸಬೇಕು.