Skip to content
البَقَرَة /

ಆಯತ್ 203

2 : 203

ಆಯತ್ 203 of البَقَرَة (2 : 203). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 203

۞ وَٱذۡكُرُواْ ٱللَّهَ فِيٓ أَيَّامٖ مَّعۡدُودَٰتٖۚ فَمَن تَعَجَّلَ فِي يَوۡمَيۡنِ فَلَآ إِثۡمَ عَلَيۡهِ وَمَن تَأَخَّرَ فَلَآ إِثۡمَ عَلَيۡهِۖ لِمَنِ ٱتَّقَىٰۗ وَٱتَّقُواْ ٱللَّهَ وَٱعۡلَمُوٓاْ أَنَّكُمۡ إِلَيۡهِ تُحۡشَرُونَ

ಬೆರಳೆಣಿಕೆಯ ಕೆಲವು ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಎರಡೇ ದಿನಗಳಲ್ಲಿ ತರಾತುರಿಯಿಂದ ಹೊರಟರೆ ಅವರಿಗೆ ದೋಷವಿಲ್ಲ. ಯಾರಾದರೂ ವಿಳಂಬ ಮಾಡಿದರೆ ಅವರಿಗೂ ದೋಷವಿಲ್ಲ. ಇದು ದೇವಭಯವುಳ್ಳವರಿಗಾಗಿದೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.

Explanation & meanings · 2
  1. ಬೆರಳೆಣಿಕೆಯ ದಿನಗಳು ಎಂದರೆ ಅಯ್ಯಾಮು ತ್ತಶ್ರೀಕ್ (ದುಲ್-ಹಿಜ್ಜ ತಿಂಗಳ 11, 12 ಮತ್ತು 13ನೇ ದಿನಗಳು).
  2. ಮಿನಾದಲ್ಲಿ ಮೂರು ದಿನ ತಂಗಿ ಜಮ್ರಗಳಿಗೆ ಕಲ್ಲೆಸೆಯುವುದು ಶ್ರೇಷ್ಠವಾಗಿದೆ. ಆದರೆ ಯಾರಾದರೂ ಎರಡೇ ದಿನಗಳಲ್ಲಿ ಮಿನಾದಿಂದ ಹೊರಟರೆ ಅದರಲ್ಲೇನೂ ತೊಂದರೆಯಿಲ್ಲ.