Skip to content
البَقَرَة /

ಆಯತ್ 97

2 : 97

ಆಯತ್ 97 of البَقَرَة (2 : 97). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 97

قُلۡ مَن كَانَ عَدُوّٗا لِّـجِبۡرِيلَ فَإِنَّهُۥ نَزَّلَهُۥ عَلَىٰ قَلۡبِكَ بِإِذۡنِ ٱللَّهِ مُصَدِّقٗا لِّمَا بَيۡنَ يَدَيۡهِ وَهُدٗى وَبُشۡرَىٰ لِلۡمُؤۡمِنِينَ

ಹೇಳಿರಿ: “ಯಾರು ಜಿಬ್ರೀಲರಿಗೆ ವೈರಿಯೋ (ಅವನು ಅಲ್ಲಾಹನಿಗೂ ವೈರಿಯಾಗಿದ್ದಾನೆ).” (ಏಕೆಂದರೆ) ನಿಶ್ಚಯವಾಗಿಯೂ ಜಿಬ್ರೀಲ್ ಅದನ್ನು (ಕುರ್‌ಆನನ್ನು) ನಿಮ್ಮ ಹೃದಯದಲ್ಲಿ ಅವತೀರ್ಣಗೊಳಿಸಿದ್ದು ಅಲ್ಲಾಹನ ಆದೇಶದಂತೆ ಮಾತ್ರ. ಅದು ಪೂರ್ವಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ಸುವಾರ್ತೆಯಾಗಿದೆ.

Explanation & meanings · 1
  1. ಒಮ್ಮೆ ಕೆಲವು ಯಹೂದಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: “ನಾವು ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ನೀವು ಸರಿಯಾಗಿ ಉತ್ತರ ಕೊಟ್ಟರೆ ನಾವು ನಿಮ್ಮಲ್ಲಿ ವಿಶ್ವಾಸವಿಡುತ್ತೇವೆ. ಏಕೆಂದರೆ ಒಬ್ಬ ಪ್ರವಾದಿಯ ಹೊರತು ಬೇರೆ ಯಾರಿಗೂ ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಟ್ಟರು. ಆಗ ಯಹೂದಿಗಳು ಕೇಳಿದರು: “ನಿಮಗೆ ಇವುಗಳ ಉತ್ತರವನ್ನು ತಂದು ಕೊಡುವ ದೇವದೂತರು ಯಾರು?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ ಎಂದು ಉತ್ತರಿಸಿದರು. ಆಗ ಅವರು ಹೇಳಿದರು: “ಜಿಬ್ರೀಲರು ನಮ್ಮ ವೈರಿ. ಅವರು ಹೇಳಿದ ಮಾತಿನಲ್ಲಿ ನಾವು ವಿಶ್ವಾಸವಿಡುವುದಿಲ್ಲ.” ಹೀಗೆ ಅವರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದೆ ನುಣುಚಿಕೊಂಡರು.