Skip to content
البَقَرَة /

ಆಯತ್ 237

2 : 237

ಆಯತ್ 237 of البَقَرَة (2 : 237). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 237

وَإِن طَلَّقۡتُمُوهُنَّ مِن قَبۡلِ أَن تَمَسُّوهُنَّ وَقَدۡ فَرَضۡتُمۡ لَهُنَّ فَرِيضَةٗ فَنِصۡفُ مَا فَرَضۡتُمۡ إِلَّآ أَن يَعۡفُونَ أَوۡ يَعۡفُوَاْ ٱلَّذِي بِيَدِهِۦ عُقۡدَةُ ٱلنِّكَاحِۚ وَأَن تَعۡفُوٓاْ أَقۡرَبُ لِلتَّقۡوَىٰۚ وَلَا تَنسَوُاْ ٱلۡفَضۡلَ بَيۡنَكُمۡۚ إِنَّ ٱللَّهَ بِمَا تَعۡمَلُونَ بَصِيرٌ

ನೀವು ನಿಮ್ಮ ಪತ್ನಿಯರನ್ನು ಸೇರುವುದಕ್ಕೆ ಮೊದಲು ಅವರಿಗೆ ವಿಚ್ಛೇದನ ನೀಡಿದರೆ, ಮತ್ತು ಈಗಾಗಲೇ ನೀವು ಅವರಿಗೆ ವಧುದಕ್ಷಿಣೆಯನ್ನು ನಿಶ್ಚಯಿಸಿದ್ದರೆ, ನಿಶ್ಚಯಿಸಿದ ವಧುದಕ್ಷಿಣೆಯ ಅರ್ಧವನ್ನು ಅವರಿಗೆ ಕೊಟ್ಟುಬಿಡಿ. ಆದರೆ, ಅವರು ಮಾಫಿ ಮಾಡಿದರೆ ಹೊರತು. ಅಥವಾ ವಿವಾಹ ಕರಾರು ಯಾರ ಕೈಯಲ್ಲಿದೆಯೋ ಅವನು ಮಾಫಿ ಮಾಡಿದರೆ ಹೊರತು. ನೀವು ಮಾಫಿ ಮಾಡುವುದು ದೇವಭಯಕ್ಕೆ ಹೆಚ್ಚು ನಿಕಟವಾಗಿದೆ. ನೀವು ನಿಮ್ಮ ನಡುವಿನ ಸೌಜನ್ಯವನ್ನು ಮರೆಯಬೇಡಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

Explanation & meanings · 2
  1. ಅಂದರೆ ಪತ್ನಿ ವಧುದಕ್ಷಿಣೆಯ ಅರ್ಧ ಹಕ್ಕು ತನಗೆ ಬೇಡವೆಂದು ಹೇಳಿ ವಧುದಕ್ಷಿಣೆಯನ್ನು ಪೂರ್ಣವಾಗಿ ಹಿಂದಿರುಗಿಸುವುದು.
  2. ವಿವಾಹ ಕರಾರು ಕೈಯಲ್ಲಿರುವವನು ಎಂದರೆ ಗಂಡ. ಅಂದರೆ, ಅವನು ವಧುದಕ್ಷಿಣೆಯ ಅರ್ಧ ಭಾಗವನ್ನು ಪಡೆಯುವ ತನ್ನ ಹಕ್ಕನ್ನು ಮಾಫಿ ಮಾಡಿ ವಧುದಕ್ಷಿಣೆಯನ್ನು ಸಂಪೂರ್ಣವಾಗಿ ಹೆಂಡತಿಗೆ ಬಿಟ್ಟುಕೊಡುವುದು.