بِسۡمِ ٱللَّهِ ٱلرَّحۡمَٰنِ ٱلرَّحِيمِ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
- ಅಲ್ಲಾಹನ ಹೆಸರಿನ ಮೂಲಕ ಸಹಾಯವನ್ನು ಬೇಡುತ್ತಾ ನಾನು ಪವಿತ್ರ ಕುರ್‌ಆನ್ ಪಠಣವನ್ನು ಆರಂಭಿಸುತ್ತೇನೆ. 'ಅಲ್ಲಾಹು' ಎಂಬುದು ಅಲ್ಲಾಹನ ವಿಶೇಷ ಹೆಸರು. ಈ ಹೆಸರು ಅಲ್ಲಾಹನಿಗೆ ಮಾತ್ರ ಸೀಮಿತವಾಗಿದ್ದು, ಇತರ ಯಾರನ್ನೂ ಈ ಹೆಸರಿನಿಂದ ಕರೆಯುವ ಹಾಗಿಲ್ಲ. ಅಲ್ಲಾಹು ಎಂದರೆ ಏಕೈಕ ಸತ್ಯದೇವ ಅಥವಾ ಏಕೈಕ ಪರಮೋಚ್ಛ ದೇವ.