Skip to content
البَقَرَة /

ಆಯತ್ 173

2 : 173

ಆಯತ್ 173 of البَقَرَة (2 : 173). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 173

إِنَّمَا حَرَّمَ عَلَيۡكُمُ ٱلۡمَيۡتَةَ وَٱلدَّمَ وَلَحۡمَ ٱلۡخِنزِيرِ وَمَآ أُهِلَّ بِهِۦ لِغَيۡرِ ٱللَّهِۖ فَمَنِ ٱضۡطُرَّ غَيۡرَ بَاغٖ وَلَا عَادٖ فَلَآ إِثۡمَ عَلَيۡهِۚ إِنَّ ٱللَّهَ غَفُورٞ رَّحِيمٌ

ಅವನು ನಿಮಗೆ ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರನ್ನು ಘೋಷಿಸಲಾದ ವಸ್ತುಗಳನ್ನು ಮಾತ್ರ ನಿಷೇಧಿಸಿದ್ದಾನೆ. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

Explanation & meanings · 1
  1. ಇಲ್ಲಿ ನಾಲ್ಕು ನಿಷೇಧಿತ ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ವಚನದಲ್ಲಿ "ಇನ್ನಮಾ" (ಮಾತ್ರ) ಎಂಬ ಪದ ಬಳಸಿರುವುದರಿಂದ ನಿಷೇಧಿತ ವಸ್ತುಗಳು ನಾಲ್ಕಕ್ಕೆ ಮಾತ್ರ ಸೀಮಿತ ಎಂದು ಅರ್ಥ ಮಾಡಿಕೊಳ್ಳಬಾರದು. ನಿಷೇಧಿತ ವಸ್ತುಗಳು ಈ ನಾಲ್ಕಕ್ಕೆ ಸೀಮಿತವಲ್ಲ. ಇದು ಸಂದರ್ಭಕ್ಕೆ ಅನುಗುಣವಾಗಿ ಅವತೀರ್ಣವಾದ ವಚನವಾಗಿರುವುದರಿಂದ ಇದರಲ್ಲಿ ನಾಲ್ಕು ವಸ್ತುಗಳನ್ನು ಮಾತ್ರ ನಿಷಿದ್ಧವೆಂದು ಹೇಳಲಾಗಿದೆ.