Skip to content
البَقَرَة /

ಆಯತ್ 104

2 : 104

ಆಯತ್ 104 of البَقَرَة (2 : 104). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 104

يَٰٓأَيُّهَا ٱلَّذِينَ ءَامَنُواْ لَا تَقُولُواْ رَٰعِنَا وَقُولُواْ ٱنظُرۡنَا وَٱسۡمَعُواْۗ وَلِلۡكَٰفِرِينَ عَذَابٌ أَلِيمٞ

ಓ ಸತ್ಯವಿಶ್ವಾಸಿಗಳೇ! ನೀವು (ಪ್ರವಾದಿಯೊಡನೆ) ‘ರಾಇನಾ’ ಎಂದು ಹೇಳಬೇಡಿ. ಬದಲಿಗೆ, ‘ಉನ್‍ಝುರ್‌ನಾ’ ಎಂದು ಹೇಳಿರಿ ಮತ್ತು ಕಿವಿಗೊಟ್ಟು ಕೇಳಿರಿ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ.

Explanation & meanings · 1
  1. ರಾಇನಾ ಎಂದರೆ ನಮ್ಮ ಕಡೆಗೆ ಗಮನಹರಿಸಿ ಎಂದರ್ಥ. ಶಿಷ್ಯರಿಗೆ ಮಾತು ಅರ್ಥವಾಗದಿದ್ದರೆ ಈ ಪದವನ್ನು ಹೇಳಿ ಅವರು ಗುರುವಿನ ಗಮನ ಸೆಳೆಯುತ್ತಿದ್ದರು. ಆದರೆ ಯಹೂದಿಗಳು ಈ ಪದವನ್ನು ದ್ವಂದ್ವಾರ್ಥದಲ್ಲಿ ಬಳಸುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಕುರಿಗಳನ್ನು ಕಾಯುವವನು ಎಂಬ ಅರ್ಥದಲ್ಲಿ "ರಾಈನಾ" ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಅವಿವೇಕಿ ಎಂಬರ್ಥದಲ್ಲಿ "ರಾಇನಾ" ಎಂಬ ಪದವನ್ನು ಬಳಸುತ್ತಿದ್ದರು. ಆದ್ದರಿಂದ ಅಲ್ಲಾಹು ಅದರ ಬದಲಿಗೆ "ಉನ್‌ಝುರ್‌ನಾ" ಎಂಬ ಪದವನ್ನು ಬಳಸಲು ಆದೇಶಿಸಿದನು. ಉನ್‌ಝುರ್‌ನಾ ಎಂದರೆ ನಮ್ಮ ಕಡೆಗೆ ಗಮನ ನೀಡಿರಿ ಎಂದರ್ಥ.