Skip to content
البَقَرَة /

ಆಯತ್ 228

2 : 228

ಆಯತ್ 228 of البَقَرَة (2 : 228). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 228

وَٱلۡمُطَلَّقَٰتُ يَتَرَبَّصۡنَ بِأَنفُسِهِنَّ ثَلَٰثَةَ قُرُوٓءٖۚ وَلَا يَحِلُّ لَهُنَّ أَن يَكۡتُمۡنَ مَا خَلَقَ ٱللَّهُ فِيٓ أَرۡحَامِهِنَّ إِن كُنَّ يُؤۡمِنَّ بِٱللَّهِ وَٱلۡيَوۡمِ ٱلۡأٓخِرِۚ وَبُعُولَتُهُنَّ أَحَقُّ بِرَدِّهِنَّ فِي ذَٰلِكَ إِنۡ أَرَادُوٓاْ إِصۡلَٰحٗاۚ وَلَهُنَّ مِثۡلُ ٱلَّذِي عَلَيۡهِنَّ بِٱلۡمَعۡرُوفِۚ وَلِلرِّجَالِ عَلَيۡهِنَّ دَرَجَةٞۗ وَٱللَّهُ عَزِيزٌ حَكِيمٌ

ವಿಚ್ಛೇದಿತ ಮಹಿಳೆಯರು ಸ್ವಯಂ ಮೂರು ಋತುಸ್ರಾವಗಳ ತನಕ ಕಾಯಬೇಕು. ಅವರಿಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ ಅವರ ಗರ್ಭಗಳಲ್ಲಿ ಅಲ್ಲಾಹು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರನ್ನು ಆ ಅವಧಿಯೊಳಗೆ ಮರಳಿ ಸ್ವೀಕರಿಸಲು ಪೂರ್ಣ ಹಕ್ಕುಳ್ಳವರಾಗಿದ್ದಾರೆ—ಅವರ (ಗಂಡಂದಿರ) ಉದ್ದೇಶವು ರಾಜಿ ಮಾಡುವುದಾಗಿದ್ದರೆ. ಪುರುಷರಿಗೆ ಮಹಿಳೆಯರ ಮೇಲೆ ಹಕ್ಕುಗಳಿರುವಂತೆ ಮಹಿಳೆಯರಿಗೂ ಪುರುಷರ ಮೇಲೆ ಸ್ವೀಕಾರಾರ್ಹ ರೀತಿಯಲ್ಲಿರುವ ಹಕ್ಕುಗಳಿವೆ. ಆದರೆ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

Explanation & meanings · 1
  1. ಪತ್ನಿಯನ್ನು ಮರಳಿ ಸ್ವೀಕರಿಸುವುದು ಒಳಿತಿನ ಉದ್ದೇಶದಿಂದಾಗಿದ್ದರೆ, ದೀಕ್ಷಾಕಾಲ (ಇದ್ದ) ಮುಗಿಯುವುದಕ್ಕೆ ಮೊದಲು ಪತ್ನಿಯನ್ನು ಮರಳಿ ಸ್ವೀಕರಿಸುವ ಪೂರ್ಣ ಹಕ್ಕು ಗಂಡನಿಗಿದೆ. ಅದನ್ನು ತಡೆಯುವ ಹಕ್ಕು ಹೆಂಡತಿಯ ಕಡೆಯವರಿಗಿಲ್ಲ.