Skip to content
البَقَرَة /

ಆಯತ್ 189

2 : 189

ಆಯತ್ 189 of البَقَرَة (2 : 189). This page carries the verse in the Uthmani script with a translation of its meaning, at a stable URL that can be cited on its own.

البَقَرَة ಆಯತ್‌ಗಳು 286
ಸೂರ · البَقَرَة
ಕನ್ನಡ · Hamza
2 : 189

۞ يَسۡـَٔلُونَكَ عَنِ ٱلۡأَهِلَّةِۖ قُلۡ هِيَ مَوَٰقِيتُ لِلنَّاسِ وَٱلۡحَجِّۗ وَلَيۡسَ ٱلۡبِرُّ بِأَن تَأۡتُواْ ٱلۡبُيُوتَ مِن ظُهُورِهَا وَلَٰكِنَّ ٱلۡبِرَّ مَنِ ٱتَّقَىٰۗ وَأۡتُواْ ٱلۡبُيُوتَ مِنۡ أَبۡوَٰبِهَاۚ وَٱتَّقُواْ ٱللَّهَ لَعَلَّكُمۡ تُفۡلِحُونَ

ಅವರು ತಮ್ಮೊಂದಿಗೆ ಚಂದ್ರನ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅದು ಜನರಿಗೆ (ಅವರ ಆರಾಧನಾ ಸಮಯಗಳನ್ನು ತಿಳಿಯುವ) ಮತ್ತು ಹಜ್ಜ್‌ನ ಸಮಯವನ್ನು ತಿಳಿಯುವ ಸಾಧನವಾಗಿದೆ.” ನೀವು ಮನೆಗಳನ್ನು ಹಿಂಭಾಗದಿಂದ ಪ್ರವೇಶಿಸುವುದರಲ್ಲಿ ಒಳಿತಿಲ್ಲ. ಬದಲಿಗೆ, ದೇವಭಯವುಳ್ಳವನೇ ಒಳಿತಿನಲ್ಲಿರುವವನು. ನೀವು ಮನೆಗಳನ್ನು ಅವುಗಳ ಬಾಗಿಲುಗಳಿಂದ ಪ್ರವೇಶಿಸಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

Explanation & meanings · 1
  1. ಅಜ್ಞಾನಕಾಲದಲ್ಲಿ ಜನರು ಹಜ್ ಅಥವಾ ಉಮ್ರಕ್ಕೆ ಇಹ್ರಾಂ ಧರಿಸಿದ ನಂತರ ಯಾವುದಾದರೂ ಅಗತ್ಯಕ್ಕಾಗಿ ಮನೆಗೆ ಬರಬೇಕಾಗಿ ಬಂದರೆ ಬಾಗಿಲಿನ ಮೂಲಕ ಒಳ ಬರುತ್ತಿರಲಿಲ್ಲ; ಬದಲಿಗೆ ಗೋಡೆಯಲ್ಲಿ ಕನ್ನ ಕೊರೆದು ಅದರ ಮೂಲಕ ಒಳ ಬರುತ್ತಿದ್ದರು. ಅವರು ಇದನ್ನು ಪುಣ್ಯ ಕಾರ್ಯವೆಂದು ತಿಳಿದಿದ್ದರು.