ನಾನು ಕಳೆದ ವರ್ಷ ಹಜ್ಜ್ ನಿರ್ವಹಿಸಿದ್ದೆ. ತವಾಫುಲ್-ಇಫಾದ ಮತ್ತು ವಿದಾಯದ ತವಾಫ್ ಹೊರತುಪಡಿಸಿ ಹಜ್ಜ್ನ ಎಲ್ಲಾ ಕರ್ಮಗಳನ್ನು ನಾನು ನಿರ್ವಹಿಸಿದ್ದೆ. ಕಾರಣಾಂತರಗಳಿಂದ ನನಗೆ ಇವುಗಳನ್ನು ನಿರ್ವಹಿಸಲಾಗಲಿಲ್ಲ. ಮುಂದೆ ಯಾವುದಾದರೂ ಒಂದು ದಿನ ಮಕ್ಕಾಗೆ ಮರಳಿ ಇವುಗಳನ್ನು ನಿರ್ವಹಿಸುವೆನು ಎಂಬ ಉದ್ದೇಶವನ್ನಿಟ್ಟುಕೊಂಡು ನಾನು ಮದೀನಾದ ನನ್ನ ಮನೆಗೆ ಮರಳಿದೆ. ಆದರೆ, ನನಗೆ ಧರ್ಮದ ನಿಯಮಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದ ಕಾರಣ ನಾನು ಇಹ್ರಾಮ್ನಿಂದ ಹೊರಬಂದು ಇಹ್ರಾಮ್ನಲ್ಲಿ ನಿಷಿದ್ಧವಾಗಿರುವ ಎಲ್ಲಾ ಕಾರ್ಯಗಳನ್ನು ಮಾಡಿದೆ. ನಾನು ತವಾಫ್ ಮಾಡಲು ಮರಳುವ ಬಗ್ಗೆ ವಿಚಾರಿಸಿದಾಗ, ನಿನ್ನ ತವಾಫ್ ಸಿಂಧುವಾಗುವುದಿಲ್ಲ. ನೀನು ನಿನ್ನ ಹಜ್ಜನ್ನು ಅಸಿಂಧುಗೊಳಿಸಿರುವೆ. ನೀನು ಪುನಃ ಹಜ್ಜ್ ನಿರ್ವಹಿಸಬೇಕಾಗಿದೆ ಎಂಬ ಉತ್ತರ ದೊರೆಯಿತು. ಅಂದರೆ ಒಂದು ಹಸು ಅಥವಾ ಒಂಟೆಯನ್ನು ಕೊಯ್ದು ನೀನು ಮುಂದಿನ ವರ್ಷ ಹಜ್ಜ್ ನಿರ್ವಹಿಸಬೇಕು. ಇದು ಸರಿಯೇ? ಇದರ ಹೊರತಾಗಿ ಬೇರೆ ಪರಿಹಾರವಿದೆಯೇ? ಇದ್ದರೆ ಅದೇನು? ನನ್ನ ಹಜ್ಜ್ ಅಸಿಂಧುವಾಗಿದೆಯೇ? ನಾನು ಪುನಃ ಹಜ್ಜ್ ನಿರ್ವಹಿಸಬೇಕೇ?ನಾನೇನು ಮಾಡಬೇಕೆಂದು ದಯವಿಟ್ಟು ತಿಳಿಸಿ. ಅಲ್ಲಾಹು ನಿಮ್ಮನ್ನು ಅನುಗ್ರಹಿಸಲಿ.
السؤال
ಪ್ರಶ್ನೆ 1.

س51: لقد قمت بأداء فريضة الحجّ العام الماضي، وأديت جميع شعائر الحجّ ما عدا طواف الإفاضة وطواف الوداع، حيث منعني منهما عذرٌ شرعيٌّ، فرجعت إلى بيتي في الـمدينة على أن أعود في يومٍ من الأيام؛ لأطوف طواف الإفاضة وطواف الوداع، وبجهلٍ منّي بأمور الدّين فقد تحللت من كلّ شيءٍ، وفعلت كل شيءٍ يحرم أثناء الإحرام، وسألت عن رجوعي لأطوف، فقيل لي: لا يصحّ لك أن تطوفي، فقد أفسدتّه، وعليك الإعادة -أي: إعادة الحجّ مرةً أخرى- في العام المقبل، مع ذبح بقرةٍ أو ناقةٍ، فهل هذا صحيحٌ؟ وهل هناك حلٌّ آخر؟ وما هو؟ وهل فسد حجّي؟ وهل عليّ إعادته؟ أفيدوني عمّا يجب فعله، بارك الله فيكم.
الجواب
ಉತ್ತರ 1.
ಇದು ಜ್ಞಾನವಿಲ್ಲದವರು ನೀಡುವ ಫತ್ವಾಗಳಿಂದ ಉಂಟಾಗುವ ಆಪತ್ತುಗಳು. ನಿಮಗೆ ಕಡ್ಡಾಯವಾಗಿರುವುದು ಮಕ್ಕಾಗೆ ತೆರಳಿ ತವಾಫುಲ್-ಇಫಾದ ನಿರ್ವಹಿಸುವುದು ಮಾತ್ರ.
ನೀವು ವಿದಾಯದ ತವಾಫ್ ನಿರ್ವಹಿಸಬೇಕಾಗಿಲ್ಲ. ಏಕೆಂದರೆ ಮಕ್ಕಾದಿಂದ ಹೊರಡುವಾಗ ನೀವು ಮುಟ್ಟಿನಲ್ಲಿದ್ದಿರಿ. ಮುಟ್ಟಿನಲ್ಲಿರುವವರಿಗೆ ವಿದಾಯದ ತವಾಫ್ ಕಡ್ಡಾಯವಿಲ್ಲ.
ಇಬ್ನ್ ಅಬ್ಬಾಸ್(ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಹೇಳುತ್ತಾರೆ: “ಜನರ (ಹಾಜಿಗಳ) ಕಟ್ಟಕಡೆಯ ಕರ್ಮವು ಕಅಬಾಲಯದ ತವಾಫ್ (ವಿದಾಯದ ತವಾಫ್) ಆಗಿರಬೇಕೆಂದು ಪ್ರವಾದಿ(ಸ) ರವರು ಆದೇಶಿಸಿದ್ದಾರೆ. ಆದರೆ ಮುಟ್ಟಿನಲ್ಲಿರುವ ಮಹಿಳೆಗೆ ಇದರಿಂದ ವಿನಾಯಿತಿ ನೀಡಲಾಗಿದೆ.”
ಅಬೂದಾವೂದ್ ರ ವರದಿಯಲ್ಲಿ ಹೀಗಿದೆ: “ಜನರ (ಹಾಜಿಗಳ) ಕಟ್ಟಕಡೆಯ ಕರ್ಮವು ಕಅಬಾಲಯದ ತವಾಫ್ (ವಿದಾಯದ ತವಾಫ್) ಆಗಿರಬೇಕು."
ಸಫಿಯ್ಯ(ರ) ತವಾಫುಲ್ ಇಫಾದ ನಿರ್ವಹಿಸಿದ್ದಾರೆಂದು ತಿಳಿಸಲಾದಾಗ ಪ್ರವಾದಿ(ಸ) ರವರು ಹೇಳಿದರು: “ಹಾಗಿದ್ದರೆ ಅವರು (ಸಫಿಯ್ಯ) ಇಲ್ಲಿಂದ ಹೊರಡಲಿ.”
ಮುಟ್ಟಿನಲ್ಲಿರುವ ಮಹಿಳೆಯರು ವಿದಾಯದ ತವಾಫ್ ನಿರ್ವಹಿಸಬೇಕಾಗಿಲ್ಲ ಎಂದು ಇದು ಸೂಚಿಸುತ್ತದೆ.
ಆದರೆ ನೀವು ತವಾಫುಲ್ ಇಫಾದ ನಿರ್ವಹಿಸುವುದು ಕಡ್ಡಾಯವಾಗಿದೆ. ನೀವು ಅಜ್ಞಾನದ ಕಾರಣ ಇಹ್ರಾಮ್ನಿಂದ ಮುಕ್ತವಾಗಿರುವುದರಲ್ಲೇನೂ ದೋಷವಿಲ್ಲ. ಏಕೆಂದರೆ ಯಾರಾದರೂ ಅಜ್ಞಾನದ ಕಾರಣ ಇಹ್ರಾಮ್ನ ನಿಷಿದ್ಧಗಳಲ್ಲಿ ಏನಾದರೂ ಮಾಡಿದರೆ ಅವರು ದೋಷಿಗಳಲ್ಲ.
ಏಕೆಂದರೆ ಅಲ್ಲಾಹು ಹೇಳುತ್ತಾನೆ: "ಓ ನಮ್ಮ ಪರಿಪಾಲಕನೇ! ನಮಗೆ ಮರೆತುಹೋದರೆ ಅಥವಾ ನಾವು ತಪ್ಪು ಮಾಡಿದರೆ ನಮ್ಮನ್ನು ಶಿಕ್ಷಿಸಬೇಡ." [ಬಕರ: 286]
ಅಲ್ಲಾಹು ಹೇಳಿದನು: "ನಾನು ಹಾಗೆಯೇ ಮಾಡುತ್ತೇನೆ."
ಅಲ್ಲಾಹು ಹೇಳುತ್ತಾನೆ: "ನೀವು ಪ್ರಮಾದದಿಂದ ಏನಾದರೂ ತಪ್ಪುಗಳನ್ನು ಮಾಡಿದರೆ ಅದರಿಂದ ನಿಮಗೆ ದೋಷವಿಲ್ಲ. ಆದರೆ ನೀವು ಉದ್ದೇಶಪೂರ್ವಕ ಮಾಡುವ ತಪ್ಪುಗಳಿಗೆ ಶಿಕ್ಷೆಯಿದೆ." [ಅಹ್ಝಾಬ್: 5]
ಆದ್ದರಿಂದ ಇಹ್ರಾಮ್ನಲ್ಲಿರುವಾಗ ನಿಷಿದ್ಧವಾಗಿರುವ ಕೃತ್ಯಗಳನ್ನು ಯಾರಾದರೂ ಅಜ್ಞಾನದಿಂದ, ಅಥವಾ ಮರೆವಿನಿಂದ, ಅಥವಾ ಬಲವಂತಕ್ಕೊಳಗಾಗಿ ಮಾಡಿದರೆ, ಅವರು ದೋಷಿಗಳಲ್ಲ. ಆದರೆ ಅವರ ವಿನಾಯಿತಿಯು ಮುಗಿದಾಗ (ಅಂದರೆ ಅವರಿಗೆ ನಿಜಸ್ಥಿತಿಯ ಅರಿವಾದಾಗ) ಅವರು ತಮ್ಮ ತಪ್ಪನ್ನು ಸರಿಪಡಿಸಬೇಕು.
ﺟ51: هذا أيضًا من البلاء الّذي يحصل من الفتوى بغير علمٍ، وأنت في هذه الحال يجب عليك أن ترجعي إلى مكة، وتطوفي طواف الإفاضة فقط.
أما طواف الوداع فليس عليك طواف وداعٍ ما دمت كنت حائضًا عند الخروج من مكة، وذلك لأن الحائض لا يلزمها طواف الوداع؛ لحديث ابن عباسٍ رضي الله عنهما:
«أُمِرَ النَّاسُ أَنْ يَكُونَ آخِرُ عَهْدِهِمْ بِالْبَيْتِ، إِلَّا أَنَّهُ خُفِّفَ عَنِ الْحَائِضِ» [1]،
وفي روايةٍ لأبي داود:
«أَنْ يَكُونَ آخِرُ عَهْدِهِمْ بِالْبَيْتِ الطَّوَافُ» [2].
ولأن النبي ﷺ لـمّا أخبر أنّ صفيّة طافت طواف الإفاضة قال:
«فَلْتَنْفِرْ إِذًا» [3]،
فدلّ هذا على أن طواف الوداع يسقط عن الحائض.
[19] أخرجه البخاري، كتاب الحج، باب طواف الوداع (1755)، ومسلم، كتاب الحج، باب وجوب طواف الوداع وسقوطه عن الحائض (380) (1328).
[20] أخرجه أبو داود، كتاب المناسك، باب الوداع (2002).
[21] أخرجه البخاري، كتاب الحيض، باب المرأة تحيض بعد الإفاضة (328)، ومسلم، كتاب الحج، الباب السابق (382) (1211).
أما طواف الإفاضة فلابد لك منه، ولـما كنت تحللت من كلّ شيءٍ جاهلةً فإن هذا لا يضرّك؛ لأن الجاهل الذي يفعل شيئًا من محظورات الإحرام لا شيء عليه؛ لقوله تعالى:
﴿...رَبَّنَا لَا تُؤَاخِذۡنَآ إِن نَّسِينَآ أَوۡ أَخۡطَأۡنَاۚ...﴾
[البقرة:286]،
قال الله تعالى:
«قَدْ فَعَلْتُ» [4]،
وقوله:
﴿...وَلَيۡسَ عَلَيۡكُمۡ جُنَاحٞ فِيمَآ أَخۡطَأۡتُم بِهِۦ وَلَٰكِن مَّا تَعَمَّدَتۡ قُلُوبُكُمۡۚ...﴾
[الأحزاب:5]،
فجميع الـمحظورات الّتي منعها الله تعالى على المحرم إذا فعلها جاهلًا أو ناسيًا أو مكرهًا فلا شيء عليه، لكن متى زال عذره وجب عليه أن يقلع عما تلبس به.
[22] أخرجه مسلم، كتاب الإيمان، باب بيان تجاوز الله تعالى عن حديث النفس (200) (126).