ಗರ್ಭಧಾರಣೆಯ ಪ್ರಾಥಮಿಕ ಹಂತದಲ್ಲಿದ್ದ ಮಹಿಳೆ ಅಪಘಾತದಿಂದ ಗಾಯಗೊಂಡಳು. ತೀವ್ರ ರಕ್ತಸ್ರಾವದಿಂದ ಅವಳಿಗೆ ಗರ್ಭಪಾತವಾಯಿತು. ಅವಳು ಉಪವಾಸ ಮುರಿಯಬೇಕೇ ಅಥವಾ ಮುಂದುವರಿಸಬೇಕೇ? ಮುರಿದರೆ ಅವಳು ತಪ್ಪಿತಸ್ಥಳಾಗುವಳೇ?
السؤال
ಪ್ರಶ್ನೆ 1.
ಗರ್ಭಧಾರಣೆಯ ಪ್ರಾಥಮಿಕ ಹಂತದಲ್ಲಿದ್ದ ಮಹಿಳೆ ಅಪಘಾತದಿಂದ ಗಾಯಗೊಂಡಳು. ತೀವ್ರ ರಕ್ತಸ್ರಾವದಿಂದ ಅವಳಿಗೆ ಗರ್ಭಪಾತವಾಯಿತು. ಅವಳು ಉಪವಾಸ ಮುರಿಯಬೇಕೇ ಅಥವಾ ಮುಂದುವರಿಸಬೇಕೇ? ಮುರಿದರೆ ಅವಳು ತಪ್ಪಿತಸ್ಥಳಾಗುವಳೇ?
س28: امرأةٌ أصيبت في حادثةٍ، وكانت في بداية الحمل، فأسقطت الجنين إثر نزيفٍ حادٍّ، فهل يجوز لها أن تفطر، أو تواصل الصّيام؟ وإذا أفطرت فهل عليها إثمٌ؟
الجواب
ಉತ್ತರ 1.
ನಾವು ಹೇಳುವುದೇನೆಂದರೆ, ಗರ್ಭಿಣಿಯರಿಗೆ ಮುಟ್ಟಾಗುವುದಿಲ್ಲ. ಇಮಾಂ ಅಹ್ಮದ್ ಹೇಳಿದಂತೆ, ಮಹಿಳೆಯರು ಮುಟ್ಟು ನಿಲ್ಲುವುದರಿಂದ ತಾವು ಗರ್ಭಿಣಿಯರೆಂದು ತಿಳಿದುಕೊಳ್ಳುತ್ತಾರೆ. ವಿದ್ವಾಂಸರು ಹೇಳುವಂತೆ, ಗರ್ಭದಲ್ಲಿರುವ ಶಿಶುವಿಗೆ ಆಹಾರ ತಲುಪಿಸಲು ಅಲ್ಲಾಹು ಮುಟ್ಟು ಎಂಬ ವ್ಯವಸ್ಥೆಯನ್ನು ಸೃಷ್ಟಿಸಿದ್ದಾನೆ. ಮಹಿಳೆ ಗರ್ಭ ಧರಿಸುವಾಗ ಮುಟ್ಟು ನಿಲ್ಲುತ್ತದೆ.
ಆದರೆ ಕೆಲವು ಮಹಿಳೆಯರಿಗೆ ಗರ್ಭಧಾರಣೆಯ ನಂತರವೂ ಮೊದಲಿನಂತೆ ಮುಟ್ಟು ಆಗುತ್ತಲೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಅದನ್ನು ನಿಜವಾದ ಮುಟ್ಟು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಗರ್ಭಧಾರಣೆಯಿಂದ ಯಾವುದೇ ಪರಿಣಾಮಕ್ಕೊಳಗಾಗದೆ ಮುಂದುವರಿದಿದೆ. ಆದ್ದರಿಂದ ಸಾಧಾರಣ ಮುಟ್ಟು ಯಾವುದರಿಂದೆಲ್ಲಾ ಮಹಿಳೆಯನ್ನು ತಡೆಯುತ್ತದೋ ಅವೆಲ್ಲದರಿಂದಲೂ ಇದು ಅವಳನ್ನು ತಡೆಯುತ್ತದೆ. ಅದು ಅವಳಿಗೆ ಕಡ್ಡಾಯಗೊಳಿಸುವುದೆಲ್ಲವನ್ನು ಇದು ಕೂಡ ಕಡ್ಡಾಯಗೊಳಿಸುತ್ತದೆ. ಅದು ಅಸಿಂಧುಗೊಳಿಸುವುದೆಲ್ಲವನ್ನು ಇದೂ ಕೂಡ ಅಸಿಂಧುಗೊಳಿಸುತ್ತದೆ.
ಒಟ್ಟಿನಲ್ಲಿ, ಗರ್ಭಿಣಿ ಮಹಿಳೆಯಿಂದ ಸ್ರವಿಸುವ ರಕ್ತವು ಎರಡು ವಿಧಗಳಲ್ಲಿವೆ:
ಮೊದಲನೆಯ ವಿಧವನ್ನು ಮುಟ್ಟು ಎಂದು ಪರಿಗಣಿಸಲಾಗುತ್ತದೆ. ಅದು ಗರ್ಭಧಾರಣೆಗೆ ಮೊದಲು ಇದ್ದಂತೆಯೇ ಈಗಲೂ ಮುಂದುವರಿದಿದೆ. ಅಂದರೆ, ಗರ್ಭಧಾರಣೆಯು ಅದರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದನ್ನು ಮುಟ್ಟು ಎಂದು ಪರಿಗಣಿಸಲಾಗುತ್ತದೆ.
ಎರಡನೆಯ ವಿಧವು, ಗರ್ಭಿಣಿಯಾಗಿರುವಾಗ ಯಾವುದೇ ಒಂದು ಅಪಘಾತದಿಂದ, ಭಾರವನ್ನು ಎತ್ತುವುದರಿಂದ, ಕೆಳಗೆ ಬೀಳುವುದರಿಂದ ಸಂಭವಿಸುವ ರಕ್ತವಾಗಿದೆ. ಇದು ಮುಟ್ಟಿನ ರಕ್ತವಲ್ಲ, ಬದಲಿಗೆ, ಇದು ರಕ್ತನಾಳದಿಂದ ಸ್ರವಿಸುವ ರಕ್ತವಾಗಿದೆ.
ಆದ್ದರಿಂದ ಇದು ಅವಳನ್ನು ನಮಾಝ್ ಮತ್ತು ಉಪವಾಸದಿಂದ ತಡೆಯುವುದಿಲ್ಲ. ಬದಲಿಗೆ, ಅವಳು ಶುದ್ಧಿಯ ಸ್ಥಿತಿಯಲ್ಲಿರುತ್ತಾಳೆ.
ಆದರೆ, ಈ ಘಟನೆಯಿಂದ ಗರ್ಭದಲ್ಲಿರುವ ಶಿಶು ಅಥವಾ ಭ್ರೂಣ ಹೊರಬಂದರೆ, ವಿದ್ವಾಂಸರು ಹೇಳುವ ಪ್ರಕಾರ, ಹೊರಬಂದ ಭ್ರೂಣದಲ್ಲಿ ಮಾನವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ಅದು ಹೊರಬಂದ ನಂತರ ಸ್ರವಿಸುವ ರಕ್ತವನ್ನು ಪ್ರಸವಾನಂತರದ ರಕ್ತವೆಂದು ಪರಿಗಣಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವಳು ಶುದ್ಧಳಾಗುವ ತನಕ ನಮಾಝ್, ಉಪವಾಸ ಮತ್ತು ಲೈಂಗಿಕ ಸಂಭೋಗಗಳನ್ನು ತೊರೆಯಬೇಕು.
ಆದರೆ ಹೊರಬಂದ ಭ್ರೂಣದಲ್ಲಿ ಮಾನವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸದಿದ್ದರೆ, ಅದನ್ನು ಪ್ರಸವಾನಂತರದ ರಕ್ತವೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ, ಅದು ರಕ್ತಸ್ರಾವವಾಗಿದೆ. ಅದು ಅವಳನ್ನು ನಮಾಝ್, ಉಪವಾಸ ಮುಂತಾದವುಗಳಿಂದ ತಡೆಯುವುದಿಲ್ಲ.
ವಿದ್ವಾಂಸರು ಹೇಳುವಂತೆ, ಮಾನವ ಲಕ್ಷಣಗಳು ಗೋಚರವಾಗಲು ಕನಿಷ್ಟ 81 ದಿನಗಳು ಬೇಕಾಗಿವೆ.
ಅಬ್ದುಲ್ಲಾ ಬಿನ್ ಮಸ್ಊದ್(ರ) ಹೇಳುತ್ತಾರೆ: ಸತ್ಯವಂತರು ಮತ್ತು ವಿಶ್ವಾಸಯೋಗ್ಯರಾದ ಪ್ರವಾದಿ(ಸ) ರವರು ಹೇಳಿದರು: "ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಅವರ ತಾಯಿಯ ಗರ್ಭದಲ್ಲಿ 40 ದಿನಗಳಲ್ಲಿ ಜೋಡಿಸಲಾಗುತ್ತದೆ. ನಂತರ ಅವರು ಅಷ್ಟೇ ದಿನಗಳ ಕಾಲ ಹೆಪ್ಪುಗಟ್ಟಿದ ರಕ್ತದ ರೂಪದಲ್ಲಿರುತ್ತಾರೆ. ನಂತರ ಅವರು ಅಷ್ಟೇ ದಿನಗಳ ಕಾಲ ಮಾಂಸ ಮುದ್ದೆಯ ರೂಪದಲ್ಲಿರುತ್ತಾರೆ. ನಂತರ ಅವರ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ಆ ದೇವದೂತರು ಅವರ ಉಪಜೀವನ, ಆಯುಷ್ಯ, ಕರ್ಮ ಮತ್ತು ಭಾಗ್ಯ-ನಿರ್ಭಾಗ್ಯಗಳನ್ನು ದಾಖಲಿಸುತ್ತಾರೆ."
ಇದಕ್ಕಿಂತ ಮೊದಲು ಮಾನವ ಲಕ್ಷಣಗಳು ಗೋಚರವಾಗಲು ಸಾಧ್ಯವಿಲ್ಲ. ವಿದ್ವಾಂಸರು ಹೇಳುವಂತೆ, ಹೆಚ್ಚಿನ ಸಂದರ್ಭಗಳಲ್ಲಿಯೂ 90 ದಿನಗಳ ಮೊದಲು ಮಾನವ ಲಕ್ಷಣಗಳು ಗೋಚರವಾಗುವುದಿಲ್ಲ.
ﺟ28: نقول: إن الحامل لا تحيض، كما قال الإمام أحمد:
"إنما تعرف النّساء الحمل بانقطاع الحيض".
والحيض -كما قال أهل العلم- خلقه الله تبارك وتعالى لحكمة غذاء الجنين في بطن أمّه، فإذا نشأ الحمل انقطع الحيض.
لكن بعض النّساء قد يستمرّ بها الحيض على عادته كما كان قبل الحمل، فهذه يحكم بأن حيضها حيضٌ صحيحٌ؛ لأنه استمر بها الحيض، ولم يتأثر بالحمل، فيكون هذا الحيض مانعًا لكلّ ما يمنعه حيض غير الحامل، وموجبًا لـما يوجبه، ومسقطًا لـما يسقطه.
والحاصل: أن الدم الّذي يخرج من الحامل على نوعين:
نوعٌ يحكم بأنه حيضٌ، وهو الّذي استمر بها كما كان قبل الحمل، فمعنى ذلك: أن الحمل لم يؤثّر عليه، فيكون حيضًا.
والنوع الثاني: دمٌ طرأ على الحمل طروءًا، إما بسببٍ حادثٍ، أو حمل شيءٍ، أو سقوطٍ من شيءٍ ونحوه، فهذه دمها ليس بحيضٍ، وإنما هو دم عرقٍ،
وعلى هذا فلا يمنعها من الصلاة، ولا من الصوم، بل هي في حكم الطاهرات.
ولكن إذا لزم من الحادث أن ينزل الولد أو الحمل الذي في بطنها فإنها على ما قال أهل العلم: إن خرج وقد تبين فيه خلق إنسانٍ فإن دمها بعد خروجه يعدّ نفاسًا، تترك فيه الصلاة والصوم، ويتجنبها زوجها حتى تطهر.
وإن خرج الجنين وهو غير مخلّقٍ فإنه لا يعتبر دم نفاسٍ، بل هو دم فسادٍ، لا يمنعها من الصلاة، ولا من الصّيام، ولا من غيرهما.
قال أهل العلم: وأقلّ زمنٍ يتبين فيه التخليق: واحدٌ وثمانون يومًا؛ لأن الجنين في بطن أمّه، كما قال عبد الله بن مسعودٍ رضي الله عنه: حدثنا رسول الله ﷺ وهو الصادق المصدوق، فقال:
«إِنَّ أَحَدَكُمْ يُجْمَعُ فِي بَطْنِ أُمِّهِ أَرْبَعِينَ يَوْمًا، ثُمَّ يَكُونُ عَلَقَةً مِثْلَ ذَلِكَ، ثُمَّ يَكُونُ مُضْغَةً مِثْلَ ذَلِكَ، ثُمَّ يُبْعَثُ إِلَيْهِ الْمَلَكُ، وَيُؤْمَرُ بِأَرْبَعِ كَلِمَاتٍ، فَيُكْتَبُ رِزْقُهُ، وَأَجَلُهُ، وَعَمَلُهُ، وَشَقِيٌّ أَوْ سَعِيدٌ» [1]،
ولا يمكن أن يخلق قبل ذلك، والغالب أن التخليق لا يتبين قبل تسعين يومًا، كما قال بعض أهل العلم.
[10] رواه البخاري، كتاب أحاديث الأنبياء، باب خلق آدم وذريته (3333)، ومسلم، كتاب القدر، باب كيفية خلق الآدمي في بطن أمه (1) (2643).