ಒಬ್ಬ ಮಹಿಳೆ ಹೇಳುತ್ತಾಳೆ: ಅವಳಿಗೆ ಉಪವಾಸವು ಕಡ್ಡಾಯವಾದಾಗಿನಿಂದ ಅವಳು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಿದ್ದಾಳೆ. ಆದರೆ ಮುಟ್ಟಿನಿಂದಾಗಿ ಬಿಟ್ಟುಹೋಗುವ ಉಪವಾಸಗಳನ್ನು ಅವಳು ಕಝಾ ನಿರ್ವಹಿಸಿಲ್ಲ. ಬಿಟ್ಟುಹೋದ ಉಪವಾಸಗಳ ಸಂಖ್ಯೆಯು ಅವಳಿಗೆ ತಿಳಿದಿಲ್ಲವಾದ್ದರಿಂದ ಆಕೆ ಏನು ಮಾಡಬೇಕೆಂದು ತಮ್ಮಲ್ಲಿ ಸಲಹೆ ಕೇಳುತ್ತಿದ್ದಾಳೆ.
- الموضوعات
- الصياممفسدات الصومالصياموقت القضاء وحكم تأخيرهالطهارةأحكام الحيض والنفاسالصلاةمبطلات الصلاة
السؤال
ಪ್ರಶ್ನೆ 1.
ಒಬ್ಬ ಮಹಿಳೆ ಹೇಳುತ್ತಾಳೆ: ಅವಳಿಗೆ ಉಪವಾಸವು ಕಡ್ಡಾಯವಾದಾಗಿನಿಂದ ಅವಳು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಿದ್ದಾಳೆ. ಆದರೆ ಮುಟ್ಟಿನಿಂದಾಗಿ ಬಿಟ್ಟುಹೋಗುವ ಉಪವಾಸಗಳನ್ನು ಅವಳು ಕಝಾ ನಿರ್ವಹಿಸಿಲ್ಲ. ಬಿಟ್ಟುಹೋದ ಉಪವಾಸಗಳ ಸಂಖ್ಯೆಯು ಅವಳಿಗೆ ತಿಳಿದಿಲ್ಲವಾದ್ದರಿಂದ ಆಕೆ ಏನು ಮಾಡಬೇಕೆಂದು ತಮ್ಮಲ್ಲಿ ಸಲಹೆ ಕೇಳುತ್ತಿದ್ದಾಳೆ.
س30: سائلةٌ تقول: إنها منذ وجب عليها الصّيام وهي تصوم رمضان، ولكنها لا تقضي صيام الأيام التي تفطرها بسبب الدورة الشهرية، ولجهلها بعدد الأيام التي أفطرتها، فهي تطلب إرشادها إلى ما يجب عليها فعله الآن.
الجواب
ಉತ್ತರ 1.
ಸತ್ಯವಿಶ್ವಾಸಿ ಮಹಿಳೆಯರಲ್ಲಿ ಹೀಗೆ ಸಂಭವಿಸುವುದು ಬಹಳ ವಿಷಾದನೀಯ ಸಂಗತಿ. ಈ ನಿರ್ಲಕ್ಷ್ಯವು—ಅಂದರೆ ಬಿಟ್ಟುಹೋದ ಉಪವಾಸಗಳನ್ನು ಕಝಾ ನಿರ್ವಹಿಸಬೇಕೆಂಬ ನಿರ್ಲಕ್ಷ್ಯವು—ಒಂದೋ ಅಜ್ಞಾನದಿಂದ ಅಥವಾ ಅಸಡ್ಡೆಯಿಂದ ಉಂಟಾಗುತ್ತದೆ. ಎರಡೂ ಕೂಡ ದುರದೃಷ್ಟಕರವಾಗಿದೆ. ಅಜ್ಞಾನಕ್ಕೆ ಮದ್ದು ಜ್ಞಾನವನ್ನು ಪಡೆಯುವುದು ಅಥವಾ ವಿದ್ವಾಂಸರಲ್ಲಿ ಕೇಳುವುದು.
ಅಸಡ್ಡೆಗೆ ಮದ್ದು ಅಲ್ಲಾಹನನ್ನು ಭಯಪಡುವುದು, ಅವನನ್ನು ಗಮನಿಸುವುದು, ಅವನ ಶಿಕ್ಷೆಯನ್ನು ಭಯಪಡುವುದು ಮತ್ತು ಅವನಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಲು ಆತುರಪಡುವುದು.
ಆದ್ದರಿಂದ, ಈ ಮಹಿಳೆ ತನ್ನ ತಪ್ಪಿಗಾಗಿ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲಿ. ಬಿಟ್ಟುಹೋದ ಉಪವಾಸಗಳು ಎಷ್ಟೆಂದು ತನಗೆ ಸಾಧ್ಯವಾದ ರೀತಿಯಲ್ಲಿ ಲೆಕ್ಕ ಮಾಡಿ ಅವುಗಳನ್ನು ಕಝಾ ನಿರ್ವಹಿಸಲಿ. ಇದರಿಂದ ಅವಳು ತನ್ನ ಕಡ್ಡಾಯ ಕರ್ತವ್ಯವನ್ನು ನೆರವೇರಿಸಿದಂತಾಗುವುದು. ಅವಳ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುವನೆಂದು ನಾವು ನಿರೀಕ್ಷಿಸುತ್ತೇವೆ.
ﺟ30: يؤسفنا أن يقع مثل هذا بين نساء المؤمنين، فإن هذا الترك -أعني: ترك قضاء ما يجب عليها من الصّيام- إما أن يكون جهلًا، وإما أن يكون تهاونًا، وكلاهما مصيبةٌ؛ لأن الجهل دواؤه العلم والسّؤال،
وأما التهاون فإن دواءه تقوى الله عز وجل، ومراقبته، والخوف من عقابه، والمبادرة إلى ما فيه رضاه.
فعلى هذه المرأة أن تتوب إلى الله مما صنعت، وأن تستغفر، وأن تتحرى الأيام التي تركتها بقدر استطاعتها فتقضيها، وبهذا تبرأ ذمتها، ونرجو أن يقبل الله توبتها.