Skip to content

ನಮಾಝ್‌ನ ಸ್ತಂಭಗಳು ಯಾವುವು?

الباب / الفصل
قسم الفقه

السؤال

س٢٢: ما أركان الصلاة؟

ಪ್ರಶ್ನೆ 22. ನಮಾಝ್‌ನ ಸ್ತಂಭಗಳು ಯಾವುವು?

الجواب

ج:هي أربعة عشر ركنًا، كما يلي:

  • أحدها: القيام في الفرض على القادر.

لحديث عمران بن حصين رضي الله عنه، عن النبي صلى الله عليه وسلم:

«صل قائمًا، فإن لم تستطع فقاعدًا، فإن لم تستطع فعلى جنب»

رواه البخاري.

  • تكبيرة الإحرام، وهي: "الله أكبر".

لقوله عليه الصلاة والسلام:

«إذا قمت إلى الصلاة فكبر»

متفق عليه.

  • قراءة الفاتحة.

«لا صلاة لمن لم يقرأ بفاتحة الكتاب»

  • الركوع، ويمد ظهره مستويًا ويجعل رأسه حياله.

الرفع منه.

  • الاعتدال قائمًا.

لقوله صلى الله عليه وسلم:

«ثم اركع حتى تطمئن راكعًا، ثم ارفع حتى تعتدل قائمًا»

  • السجود، وتمكين جبهته، وأنفه، وكفيه، وركبتيه، وأطراف أصابع قدميه من محل سجوده.
  • الرفع من السجود.
  • الجلوس بين السجدتين.

«ثم اسجد حتى تطمئن ساجدًا، ثم ارفع حتى تطمئن جالسًا»

والسُّنَّة: أن يجلس مفترشًا على رجله اليسرى، وينصب اليمنى، ويوجهها إلى القبلة.

لحديث أم المؤمنين عائشة رضي الله عنها:

«وكان يفرش رجله اليسرى، وينصب رجله اليمنى»

رواه مسلم.

  • الطمأنينة، وهي السكون في كل ركن فعلي.
  • التشهد الأخير.

لحديث ابن مسعود رضي الله عنه قال:

كنا نقول في الصلاة قبل أن يفرض التشهد.

رواه النسائي وأصله في الصحيحين.

  • الجلوس له.
  • التسليمتان، وهو أن يقول مرتين: "السَّلام عليكم ورحمة الله".

لحديث:

«أنه كان يسلم عن يمينه وعن يساره: السلام عليكم ورحمة الله، السلام عليكم ورحمة الله»

رواه الترمذي وغيره.

  • ترتيب الأركان -كما ذكرنا-، فلو سجد مثلًا قبل ركوعه عمدًا؛ بطلت صلاته، وسهوًا؛ لزمه الرجوع ليركع، ثم يسجد.

ಉತ್ತರ: ಹದಿನಾಲ್ಕು ಸ್ತಂಭಗಳು. ಅವು ಈ ಕೆಳಗಿನಂತಿವೆ:

ಒಂದು: ನಿಲ್ಲುವ ಸಾಮರ್ಥ್ಯವಿರುವವರು ಕಡ್ಡಾಯ ನಮಾಝನ್ನು ನಿಂತು ನಿರ್ವಹಿಸುವುದು.

ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಂದ:

ನಿಂತು ನಮಾಝ್ ಮಾಡಿರಿ, ನಿಮಗೆ ಸಾಧ್ಯವಾಗದಿದ್ದರೆ ಕುಳಿತುಕೊಂಡು, ಅದಕ್ಕೂ ಸಾಧ್ಯವಾಗದಿದ್ದರೆ ಪಾರ್ಶ್ವದಲ್ಲಿ ಮಲಗಿಕೊಂಡು.

[ಬುಖಾರಿ].

ಇಹ್ರಾಮ್‌ನ ತಕ್ಬೀರ್, ಅಂದರೆ: ಅಲ್ಲಾಹು ಅಕ್ಬರ್ ಎಂದು ಹೇಳುವುದು.

ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ:

"ನೀನು ನಮಾಝಿಗೆ ನಿಂತರೆ, ತಕ್ಬೀರ್ ಹೇಳು."

[ಬುಖಾರಿ ಮತ್ತು ಮುಸ್ಲಿಮ್].

ಸೂರಃ ಅಲ್-ಫಾತಿಹಾ ಪಠಿಸುವುದು.

"ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ."

ರುಕೂ ನಿರ್ವಹಿಸುವುದು. ಬೆನ್ನನ್ನು ನೇರವಾಗಿ ಬಗ್ಗಿಸುವುದು ಮತ್ತು ತಲೆಯನ್ನು ಅದಕ್ಕೆ ಸಮಾನಾಂತರದಲ್ಲಿಡುವುದು.

ರೂಕೂ ನಿಂದ ತಲೆಯೆತ್ತುವುದು.

ಶಾಂತವಾಗಿ ನಿಲ್ಲುವುದು.

ಪ್ರವಾದಿ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿರುವಂತೆ:

""ನಂತರ, ರುಕೂಅ್‌ನಲ್ಲಿ ನೀವು ಶಾಂತವಾಗುವವರೆಗೆ ರುಕೂಅ್ ಮಾಡಿರಿ, ನಂತರ ನೀವು ನೇರವಾಗಿ ನಿಲ್ಲುವವರೆಗೆ ಎದ್ದು ನಿಲ್ಲಿರಿ""

ಸುಜೂಜ್ ಮಾಡುವುದು. ಹಣೆ, ಮೂಗು, ಕೈಗಳು, ಮೊಣಕಾಲುಗಳು ಮತ್ತು ಕಾಲ್ಬೆರಳುಗಳ ತುದಿಗಳನ್ನು ನೆಲದಲ್ಲಿ ಒತ್ತಿ ಹಿಡಿಯುವುದು.

ಸುಜೂದಿನಿಂದ ತಲೆಯೆತ್ತುವುದು.

ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವುದು.

"ನಂತರ ಸಂಪೂರ್ಣವಾಗಿ ಶಾಂತವಾಗುವವರೆಗೆ ಸುಜೂದ್ ಮಾಡಿರಿ, ನಂತರ ಸಂಪೂರ್ಣವಾಗಿ ಶಾಂತವಾಗುವವರೆಗೆ ಕುಳಿತುಕೊಳ್ಳಿರಿ."

ಸುನ್ನತ್ತಿನ ಪ್ರಕಾರ, ಎಡ ಕಾಲಿನ ಮೇಲೆ ಕುಳಿತುಕೊಂಡು, ಬಲ ಪಾದವನ್ನು ನೆಟ್ಟಗೆ ಮಾಡಿ, ಕಿಬ್ಲಾದ ಕಡೆಗಿರಿಸಬೇಕು.

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನ ಪ್ರಕಾರ:

ಅವರು ತಮ್ಮ ಎಡ ಪಾದವನ್ನು ಹಾಸಿ, ತಮ್ಮ ಬಲ ಪಾದವನ್ನು ನೆಟ್ಟಗೆ ಇಡುತ್ತಿದ್ದರು.

[ಮುಸ್ಲಿಮ್].

ಶಾಂತತೆಯನ್ನು ಪಾಲಿಸುವುದು. ಅಂದರೆ ಪ್ರತಿಯೊಂದು ಕ್ರಿಯೆಯಲ್ಲೂ ಶಾಂತತೆಯನ್ನು ಪಾಲಿಸುವುದು.

ಕೊನೆಯ ತಶಹ್ಹುದ್.

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್‌ನ ವರದಿ. ಅವರು ಹೇಳಿದರು:

ತಶಹ್ಹುದ್ ಕಡ್ಡಾಯಗೊಳಿಸಲ್ಪಡುವುದಕ್ಕೆ ಮೊದಲು ನಾವು ನಮಾಝಿನಲ್ಲಿ ಹೇಳುತ್ತಿದ್ದೆವು.

ಇದನ್ನು ನಸಾಈ ಅವರು ವರದಿಸಿದ್ದಾರೆ ಮತ್ತು ಇದರ ಮೂಲವು ಅಸ್-ಸಹೀಹೈನ್‌ನಲ್ಲಿದೆ.

ಅದಕ್ಕಾಗಿ ಕುಳಿತುಕೊಳ್ಳುವುದು.

ಎರಡು ಸಲಾಂಗಳು. ಅಂದರೆ ಎರಡು ಬಾರಿ "السَّلام عليكم ورحمة الله". "ನಿಮ್ಮ ಮೇಲೆ ಶಾಂತಿ ಮತ್ತು ಅಲ್ಲಾಹನ ಕರುಣೆ ಇರಲಿ” ಎಂದು ಹೇಳುವುದು.

ಹದೀಸ್:

ಅವರು ತಮ್ಮ ಬಲಕ್ಕೆ ಮತ್ತು ಎಡಕ್ಕೆ ಸಲಾಮ್ ಹೇಳುತ್ತಿದ್ದರು: “ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್, ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್”.

[ತಿರ್ಮಿದಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].

ನಾವು ಈಗಾಗಲೇ ಹೇಳಿದಂತೆ ಸ್ತಂಭಗಳನ್ನು ಅನುಕ್ರಮವಾಗಿ ನಿರ್ವಹಿಸಬೇಕು. ಉದಾಹರಣೆಗೆ, ರುಕೂ ನಿರ್ವಹಿಸುವುದಕ್ಕೆ ಮುನ್ನ ಉದ್ದೇಶಪೂರ್ವಕ ಸುಜೂದ್ ನಿರ್ವಹಿಸಿದರೆ ಅವನ ನಮಾಝ್ ಅಸಿಂಧುವಾಗುತ್ತದೆ. ಮರೆತು ನಿರ್ವಹಿಸಿದರೆ, ರಕೂ ಮಾಡಲು ಮರಳಬೇಕು ಮತ್ತು ನಂತರ ಸುಜೂದ್ ನಿರ್ವಹಿಸಬೇಕು.