ಫಲಿತಾಂಶಗಳನ್ನು ಫಿಲ್ಟರ್ ಮಾಡಿ
339 ಕಾರ್ಡ್ಗಳು
الموضوعات
الموضوعات (13)
التصنيف الشرعي
Filter ▾
حجم المحتوى4
ಉತ್ತರ- 1- ನೋವು ಅನುಭವವಾಗುವ ಸ್ಥಳದಲ್ಲಿ ಬಲಗೈಯನ್ನಿಟ್ಟು ಮೂರು ಬಾರಿ ಬಿಸ್ಮಿಲ್ಲಾ ಪಠಿಸುವುದು ನಂತರ ಏಳು ಬಾರಿ "ಅವೂದು ಬಿಇಜ್ಜತಿಲ್ಲಾಹಿ ವ ಖುದ್ರತಿಹಿ ಮಿನ್ ಶರ್ರಿ ಮಾ ಅಜಿದು ವ ಉಹಾದಿರು" ಎಂದು ಹೇಳುವುದು. ಅಂದರೆ "ನಾನು ಅನುಭವಿಸುವುದರಿಂದ ಮತ್ತು ಭಯಪಡುವುದರಿಂದ ಅಲ್ಲಾಹನ ಪ್ರತಾಪ ಮತ್ತು ಶಕ್ತಿಯಲ್ಲಿ ಅಭಯ ಯಾಚಿಸುತ್ತೇನೆ"
- ಅಲ್ಲಾಹನ ವಿಧಿಯಲ್ಲಿ ಸಂತೃಪ್ತನಾಗುವುದು ಮತ್ತು ತಾಳ್ಮೆ ವಹಿಸುವುದು.
ಉಮ್ಮುಲ್ ಅಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಸ್ವಸ್ಥಳಾಗಿದ್ದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ವಿಚಾರಿಸಲು ಬಂದರು. ಆಗ ಅವರು ಹೇಳಿದರು:
"ಓ ಉಮ್ಮುಲ್ ಅಲಾ, ನಿನಗೆ ಶುಭವಾರ್ತೆ! ನಿಶ್ಚಯವಾಗಿ, ಬೆಂಕಿಯು ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು ತೊಲಗಿಸುವಂತೆ, ಅಲ್ಲಾಹು ಮುಸಲ್ಮಾನನ ರೋಗದ ಮೂಲಕ ಅವನ ಪಾಪಗಳನ್ನು ತೊಲಗಿಸುತ್ತಾನೆ."
[ಅಬೂದಾವೂದ್].
- ಅನಾರೋಗ್ಯ ಪೀಡಿತ ಸಹೋದರನನ್ನು ಸಂದರ್ಶಿಸಲು ಆತುರಪಡುವುದು ಮತ್ತು ಅವನಿಗಾಗಿ ಪ್ರಾರ್ಥಿಸುವುದು. ನಂದರ್ಶನದ ವೇಳೆ ಬಹಳ ಹೊತ್ತು ಅಲ್ಲಿ ಕುಳಿತುಕೊಳ್ಳದಿರುವುದು.
- ಅವನು ವಿನಂತಿಸದಿದ್ದರೂ ಅವನಿಗಾಗಿ ಮಂತ್ರಿಸುವುದು.
- ಅವನಿಗೆ ತಾಳ್ಮೆಯಿಂದಿರಲು ಮತ್ತು ಪ್ರಾರ್ಥಿಸಲು, ನಮಾಝ್ ನಿರ್ವಹಿಸಲು ಮತ್ತು ಸಾಧ್ಯವಾದಷ್ಟು ಶುದ್ದಿಯಲ್ಲಿರಲು ಸಲಹೆ ನೀಡುವುದು.
- ರೋಗಿಗಳಿಗಾಗಿ ಹೀಗೆ ಪ್ರಾರ್ಥಿಸುವುದು:
"ಅಸ್ಅಲುಲ್ಲಾಹಲ್ ಅದೀಮ್ ರಬ್ಬಲ್ ಅರ್ಶಿಲ್ ಅದೀಮ್ ಅಯ್ ಯಶ್ಫಿಯಕ್" ಅಂದರೆ "ನಿಮ್ಮನ್ನು ಗುಣಪಡಿಸಲೆಂದು ಸರ್ವಶಕ್ತನಾದ ಅಲ್ಲಾಹನಲ್ಲಿ, ಮಹಾ ಅರ್ಶಿನ ಒಡೆಯನಲ್ಲಿ ಬೇಡುತ್ತೇನೆ." (ಏಳು ಬಾರಿ).
ಉತ್ತರ: 1- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು.
- ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.
- ಶಿಕ್ಷಕರನ್ನು ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಗೌರವಿಸುವುದು.
- ಅವರ ಮುಂದೆ ವಿನಯದಿಂದ ಕುಳಿತುಕೊಳ್ಳುವುದು.
- ಅವರ ಮಾತನ್ನು ಕಿವಿಗೊಟ್ಟು ಕೇಳುವುದು ಮತ್ತು ಪಾಠದ ಮಧ್ಯೆ ಅಡ್ಡಿಪಡಿಸದಿರುವುದು.
- ಸಭ್ಯವಾಗಿ ಪ್ರಶ್ನೆಗಳನ್ನು ಕೇಳುವುದು.
- ಅವರನ್ನು ಹೆಸರಿನಿಂದ ಕರೆಯದಿರುವುದು.
ಹದೀಸ್ನಲ್ಲಿ ಹೀಗಿದೆ:
"ಯಾರು ಜ್ಞಾನವನ್ನು ವಿದ್ವಾಂಸರ ನಡುವೆ ಮೆರೆಯಲು, ಅವಿವೇಕಿಗಳೊಡನೆ ತರ್ಕಿಸಲು ಮತ್ತು ಜನರ ಗಮನವನ್ನು ತನ್ನತ್ತ ಸೆಳೆಯಲು ಕಲಿಯುತ್ತಾನೋ, ಅಲ್ಲಾಹನು ಅವನನ್ನು ನರಕಕ್ಕೆ ಸೇರಿಸುತ್ತಾನೆ."
ವರದಿ ಇಬ್ನು ಮಾಜ.
"ಪುನರುತ್ಥಾನ ದಿನದಂದು ದಾಸನೊಂದಿಗೆ ನಾಲ್ಕು ವಿಷಯಗಳ ಬಗ್ಗೆ ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ - ಅವುಗಳಲ್ಲಿ ಒಂದು: ಅವನ ಜ್ಞಾನದ ಬಗ್ಗೆ, ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು."
[ತಿರ್ಮಿದಿ ಮತ್ತು ದಾರಮಿ].
“ಖಂಡಿತವಾಗಿಯೂ, ವಯೋವೃದ್ಧ ಮುಸಲ್ಮಾನನನ್ನು ಮತ್ತು ಕುರ್ಆನ್ ಪಠಿಸುವವನನ್ನು ಗೌರವಿಸುವುದು ಅಲ್ಲಾಹನನ್ನು ಗೌರವಿಸುವುದರ ಭಾಗವಾಗಿದೆ.”
[ಅಬೂದಾವೂದ್].
ಉತ್ತರ: 1- ಸಭೆಯಲ್ಲಿರುವವರಿಗೆ ಸಲಾಂ ಹೇಳುವುದು.
- ಸಭೆಯ ಕೊನೆಯಲ್ಲಿ ಖಾಲಿ ಸ್ಥಳದಲ್ಲಿ ಕುಳಿತುಕೊಳ್ಳುವುದು. ಯಾರನ್ನೂ ಅವರ ಸ್ಥಳದಿಂದ ಎಬ್ಬಿಸದಿರುವುದು ಅಥವಾ ಇಬ್ಬರ ನಡುವೆ ಅವರ ಅನುಮತಿಯಿಲ್ಲದೆ ಕುಳಿತುಕೊಳ್ಳದಿರುವುದು.
- ಇತರರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡುವುದು.
- ಇತರರ ಮಾತಿಗೆ ಅಡ್ಡಿಪಡಿಸದಿರುವುದು.
- ಸಭೆಯಿಂದ ಹೊರಡುವಾಗ ಸಲಾಂ ಹೇಳಿ ಅನುಮತಿ ಪಡೆಯುವುದು.
- ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
«ಯಾರನ್ನೂ ಅವರ ಸ್ಥಳದಿಂದ ಎಬ್ಬಿಸಿ, ಅಲ್ಲಿ ಇನ್ನೊಬ್ಬರು ಕುಳಿತುಕೊಳ್ಳಬಾರದು; ಬದಲಿಗೆ, ಸ್ಥಳಾವಕಾಶ ಮಾಡಿಕೊಡಿರಿ ಮತ್ತು ಸ್ಥಳವನ್ನು ವಿಶಾಲಗೊಳಿಸಿರಿ».
[ಬುಖಾರಿ].
ಹದೀಸ್ನಲ್ಲಿ ಹೀಗಿದೆ:
"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
[ತಿರ್ಮಿದಿ ಮತ್ತು ಅಬೂದಾವೂದ್].
- ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು. ಅದು ಹೀಗಿದೆ:
'ಸುಬ್ಹಾನಕಲ್ಲಾಹುಮ್ಮ ವಿ ಬಿಹಮ್ದಿಕ ಅಶ್ಹದು ಅಲ್ಲಾ ಇಲಾಹ ಇಲ್ಲಾ ಅಂತ ಅಸ್ತಘ್ಫಿರುಕ ವಿ ಅತೂಬು ಇಲೈಕ್" ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ."
- ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು.
ಉತ್ತರ: ಬೇಗನೇ ಮಲಗುವುದು.
ಹದೀಸ್:
«ಅಬೂ ಬರ್ಝ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಶಾ ನಮಾಝ್ಗಿಂತ ಮೊದಲು ಮಲಗುವುದನ್ನು, ಮತ್ತು ಅದರ ನಂತರ ಮಾತನಾಡುವುದನ್ನು ಇಷ್ಟಪಡುತ್ತಿರಲಿಲ್ಲ»
[ಬುಖಾರಿ].
- ವುದೂ ಇರುವ ಸ್ಥಿತಿಯಲ್ಲಿ ಮಲಗುವುದು.
- ಹೊಟ್ಟೆಯ ಮೇಲೆ ಮಲಗದಿರುವುದು.
- ಬಲಭಾಗಕ್ಕೆ ಸರಿದು ಬಲಗೈಯನ್ನು ಬಲಗೆನ್ನೆಯ ಕೆಳಗಿರಿಸಿ ಮಲಗುವುದು.
- ಮಲಗುವ ಮೊದಲು ಹಾಸಿಗೆಯನ್ನು ಝಾಡಿಸುವುದು.
ಹದೀಸ್ನಲ್ಲಿ ಹೀಗಿದೆ:
ಬರಾಅ್ ಬಿನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರು ಹೇಳಿದರು:
"ನೀವು ನಿಮ್ಮ ಮಲಗುವ ಸ್ಥಳಕ್ಕೆ ಹೋದಾಗ, ನಮಾಝಿಗಾಗಿ ಮಾಡುವಂತೆ ವುದೂ ನಿರ್ವಹಿಸಿ, ನಂತರ ನಿಮ್ಮ ಬಲ ಪಾರ್ಶ್ವದ ಮೇಲೆ ಮಲಗಿಕೊಳ್ಳಿ"
- ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಟ್ಟೆಯ ಮೇಲೆ ಮಲಗಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಹೇಳಿದರು:
“ಖಂಡಿತವಾಗಿಯೂ, ಈ ಮಲಗುವ ಭಂಗಿಯನ್ನು ಅಲ್ಲಾಹು ಇಷ್ಟಪಡಲಾರನು.”
[ತಿರ್ಮಿದಿ, ಅಹ್ಮದ್]
- ಪ್ರವಾದಿ (ಸ) ರವರು ಹೇಳಿದರು:
"ನಿಮ್ಮಲ್ಲೊಬ್ಬರು ತನ್ನ ಹಾಸಿಗೆಗೆ ತೆರಳಿದರೆ, ಅವನು ತನ್ನ ಕೆಳವಸ್ತ್ರದ ಒಳಭಾಗದಿಂದ ತನ್ನ ಹಾಸಿಗೆಯನ್ನು ಝಾಡಿಸಲಿ. ಏಕೆಂದರೆ, ಅವನ ನಂತರ ಅದರ ಮೇಲೆ ಏನು ಬಂದಿದೆ ಎಂದು ಅವನಿಗೆ ತಿಳಿದಿರುವುದಿಲ್ಲ."
- ಅಯತುಲ್-ಕುರ್ಸಿ, ಸೂರ ಅಲ್-ಇಖ್ಲಾಸ್ ಮತ್ತು ಅಲ್-ಮಉವ್ವಿಝತೈನ್ (ಮೂರು ಬಾರಿ) ಮುಂತಾದ ಮಲಗುವಾಗ ಹೇಳುವ ದಿಕ್ರ್ಗಳನ್ನು ಪಠಿಸುವುದು. ನಂತರ ಹೀಗೆ ಹೇಳುವುದು:
ಬಿಸ್ಮಿಕಲ್ಲಾಹುಮ್ಮ ಅಮೂತು ವ ಅಹ್ಯ "ಓ ಅಲ್ಲಾಹನೇ, ನಿನ್ನ ಹೆಸರಿನಲ್ಲಿ ನಾನು ಸಾಯುತ್ತೇನೆ ಮತ್ತು ಬದುಕುತ್ತೇನೆ."
- ಫಜ್ರ್ ನಮಾಝಿಗಾಗಿ ಏಳುವುದು.
- ನಿದ್ದೆಯಿಂದ ಏಳುವಾಗ ಹೀಗೆ ಪಠಿಸುವುದು:
ಅಲ್ ಹಯ್ದು ಲಿಲ್ಲಾಹಿಲ್ಲದೀ ಅಹ್ಯಾನ ಬ'ಅದ ಮಾ ಅಮಾತನ ವ ಇಲೈಹಿನ್ನುಶೂರ್" " ನಮ್ಮ ಮರಣದ ನಂತರ ನಮ್ಮನ್ನು ಬದುಕಿಸಿದ ಅಲ್ಲಾಹನಿಗೆ ಸರ್ವಸ್ತುತಿ ಮತ್ತು ಪುನರುತ್ಥಾನವು ಅವನ ಕಡೆಗೇ ಆಗಿದೆ."
ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಶಕ್ತಿಯನ್ನು ಪಡೆಯುವುದಕ್ಕಾಗಿ ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂದು ನಿಯ್ಯತ್ ಮಾಡುವುದು.
- ಆಹಾರ ಸೇವನೆಯ ಮೊದಲು ಕೈಗಳನ್ನು ತೊಳೆಯುವುದು.
- ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಹದೀಸಿನ ಪ್ರಕಾರ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ):
«ಆಹಾರ ಸೇವಿಸಲು ಮತ್ತು ಕುಡಿಯಲು ಬಯಸಿದರೆ, ಕೈಗಳನ್ನು ತೊಳೆದು ನಂತರ ಆಹಾರ ಸೇವಿಸುತ್ತಾನೆ ಮತ್ತು ಕುಡಿಯುತ್ತಾನೆ»
[ಅಹ್ಮದ್].
- ಬಿಸ್ಮಿಲಾ ಎಂದು ಹೇಳುವುದು, ಬಲಗೈಯಿಂದ ಆಹಾರ ಸೇವಿಸುವುದು ಮತ್ತು ಹತ್ತಿರದಲ್ಲಿರುವಲ್ಲಿಂದಲೇ ಸೇವಿಸುವುದು. ತಟ್ಟೆಯ ಮಧ್ಯದಿಂದ ಅಥವಾ ಇತರರ ಮುಂಭಾಗದಲ್ಲಿರುವುದರಿಂದ ಸೇವಿಸದಿರುವುದು.
ಹದೀಸ್:
«ಪುಟ್ಟಾ, ಅಲ್ಲಾಹನ ಹೆಸರನ್ನು ಹೇಳು, ನಿನ್ನ ಬಲಗೈಯಿಂದ ತಿನ್ನು ಮತ್ತು ನಿನ್ನ ಮುಂದಿರುವುದನ್ನು ತಿನ್ನು»
[ಬುಖಾರಿ ಮತ್ತು ಮುಸ್ಲಿಮ್].
- ಬಿಸ್ಮಿಲ್ಲಾ ಹೇಳಲು ಮರೆತರೆ, ಬಿಸ್ಮಿಲ್ಲಾಹಿ ಅವ್ವಲಿಹಿ ವ ಆಖಿರಿಹಿ" "ಇದರ ಪ್ರಾರಂಭ ಮತ್ತು ಅಂತ್ಯ ಅಲ್ಲಾಹನ ಹೆಸರಿನಲ್ಲಿ” ಎಂದು ಹೇಳುವುದು.
- ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನಿಮ್ಮಲ್ಲೊಬ್ಬನು ಆಹಾರವನ್ನು ಸೇವಿಸಿದಾಗ, ಅವನು 'ಬಿಸ್ಮಿಲ್ಲಾಹ್' ಎಂದು ಹೇಳಲಿ. ಒಂದು ವೇಳೆ ಅವನು ಆರಂಭದಲ್ಲಿ ಮರೆತರೆ, ಅವನು 'ಬಿಸ್ಮಿಲ್ಲಾಹಿ ಅವ್ವಲಹು ವ ಆಖಿರಹು' ಎಂದು ಹೇಳಲಿ”
[ತಿರ್ಮಿದಿ, ಅಹ್ಮದ್]
- ಇರುವ ಆಹಾರದಲ್ಲಿ ಸಂತೃಪ್ತನಾಗುವುದು. ಆಹಾರವನ್ನು ದೂಷಿಸದಿರುವುದು. ಇಷ್ಟವಾದರೆ ತಿನ್ನುವುದು, ಇಷ್ಟವಿಲ್ಲದಿದ್ದರೆ ಬಿಟ್ಟುಬಿಡುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವತ್ತೂ ಯಾವುದೇ ಆಹಾರವನ್ನು ದೂಷಿಸುತ್ತಿರಲಿಲ್ಲ. ಇಷ್ಟಪಟ್ಟರೆ ತಿನ್ನುತ್ತಿದ್ದರು, ಇಲ್ಲದಿದ್ದರೆ ಅದನ್ನು ಬಿಡುತ್ತಿದ್ದರು."
- ಕೆಲವು ತುತ್ತುಗಳನ್ನು ಸೇವಿಸುವುದು, ಅತಿಯಾಗಿ ಸೇವಿಸದಿರುವುದು.
ಹದೀಸ್ನಲ್ಲಿ ಹೀಗಿದೆ:
«ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ ಅವನ ಮನಸ್ಸು ಅವನನ್ನು ಮೀರಿದರೆ, ಮೂರನೇ ಒಂದು ಭಾಗವು ಆಹಾರಕ್ಕಾಗಿ, ಮೂರನೇ ಒಂದು ಭಾಗವು ಪಾನೀಯಕ್ಕಾಗಿ ಮತ್ತು ಮೂರನೇ ಒಂದು ಭಾಗವು ಉಸಿರಾಟಕ್ಕಾಗಿ (ಇರಲಿ)»
[ತಿರ್ಮಿದಿ ಮತ್ತು ಇಬ್ನ್ ಮಾಜ].
- ಆಹಾರ ಅಥವಾ ಪಾನೀಯಕ್ಕೆ ಊದದಿರುವುದು. ಅದನ್ನು ತಣ್ಣಗಾಗಲು ಹಾಗೆಯೇ ಬಿಟ್ಟುಬಿಡುವುದು.
«ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಹಾರ ಮತ್ತು ಪಾನೀಯದಲ್ಲಿ ಊದುವುದನ್ನು ವಿರೋಧಿಸಿದ್ದಾರೆ»
[ಅಹ್ಮದ್ ಮತ್ತು ಇಬ್ನ್ ಮಾಜ].
- ಕುಟುಂಬಿಕರು ಅಥವಾ ಅತಿಥಿಗಳೊಂದಿಗೆ ಆಹಾರ ಸೇವಿಸುವುದು.
- ಒಬ್ಬ ವ್ಯಕ್ತಿ ಪ್ರವಾದಿಯವರಲ್ಲಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಹೇಳಿದರು: "ಖಂಡಿತವಾಗಿಯೂ ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ". ಅವರು (ಪ್ರವಾದಿ) ಹೇಳಿದರು:
"ಬಹುಶಃ ನೀವು ಬೇರೆ ಬೇರೆಯಾಗಿ ತಿನ್ನುತ್ತೀರಿ. ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ, ಆಗ ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು."
[ಅಬೂದಾವೂದ್ ಮತ್ತು ಇಬ್ನ್ ಮಾಜ].
- ಹಿರಿಯರಿಗಿಂತ ಮೊದಲು ಆಹಾರ ಸೇವಿಸದಿರುವುದು.
- ಪಾನೀಯ ಸೇವಿಸುವಾಗ ಬಿಸ್ಮಿಲ್ಲಾ ಹೇಳುವುದು, ಕುಳಿತುಕೊಂಡು ಮೂರು ಗುಟುಕುಗಳಲ್ಲಿ ಕುಡಿಯುವುದು ಮತ್ತು ಪಾತ್ರೆಗೆ ಉಸಿರು ಬಿಡದಿರುವುದು.
"ನಿಮ್ಮಲ್ಲೊಬ್ಬರು ಕುಡಿಯುವಾಗ ಪಾತ್ರೆಯೊಳಗೆ ಶ್ವಾಸ ಬಿಡಬಾರದು"
- ಮತ್ತು ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ವರದಿಯಂತೆ,
"ಪ್ರವಾದಿ (ಸ) ರವರು ನಿಂತುಕೊಂಡು ಕುಡಿಯುವುದನ್ನು ನಿಷೇಧಿಸಿದ್ದಾರೆ."
[ಮುಸ್ಲಿಮ್].
- ಹಾಗೂ ಹದೀಸ್:
«ಅಲ್ಲಾಹುವಿನ ಸಂದೇಶವಾಹಕರು (ಸ) ಪಾನೀಯವನ್ನು ಕುಡಿಯುವಾಗ ಮೂರು ಬಾರಿ ಉಸಿರಾಡುತ್ತಿದ್ದರು»
- ಆಹಾರ ಅಥವಾ ಪಾನೀಯ ಸೇವಿಸಿದ ಬಳಿಕ ಅಲ್ಲಾಹುವಿಗೆ ಧನ್ಯವಾದ ಹೇಳುವುದು.
"ಆಹಾರವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಪಾನೀಯವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಾಸನನ್ನು ಅಲ್ಲಾಹು ಪ್ರೀತಿಸುತ್ತಾನೆ."
ಉತ್ತರ:
- ಅಲ್ಲಾಹನನ್ನು ಅನುಸರಿಸಲು ಶಕ್ತಿಯನ್ನು ಪಡೆಯುವುದಕ್ಕಾಗಿ ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂದು ನಿಯ್ಯತ್ ಮಾಡುವುದು.
- ಪಾನೀಯ ಸೇವಿಸುವಾಗ ಬಿಸ್ಮಿಲ್ಲಾ ಹೇಳುವುದು ಮತ್ತು ಕುಳಿತುಕೊಂಡು ಮೂರು ಗುಟುಕುಗಳಲ್ಲಿ ಕುಡಿಯುವುದು.
- ಆಹಾರ ಸೇವಿಸಿದ ಬಳಿಕ ಅಲ್ಲಾಹುವಿಗೆ ಧನ್ಯವಾದ ಹೇಳುವುದು.
ಉತ್ತರ: 1- ಬಲಭಾಗದಿಂದ ಉಡುಪು ಧರಿಸುವುದು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಹೇಳುವುದು.
- ಉಡುಪನ್ನು ಹರಡುಗಂಟುಗಳಿಗಿಂತ ಕೆಳಗಿಳಿಸದಿರುವುದು.
- ಹುಡುಗರು ಹುಡುಗಿಯರ ಉಡುಪುಗಳನ್ನು ಧರಿಸದಿರುವುದು ಮತ್ತು ಹುಡುಗಿಯರು ಹುಡುಗರ ಉಡುಪುಗಳನ್ನು ಧರಿಸದಿರುವುದು.
- ಸತ್ಯನಿಷೇಧಿಗಳು ಅಥವಾ ದುಷ್ಟರು ಧರಿಸುವ ಉಡುಪುಗಳನ್ನು ಧರಿಸದಿರುವುದು.
- ಉಡುಪು ಕಳಚುವಾಗ ಬಿಸ್ಮಿಲ್ಲಾ ಹೇಳುವುದು.
- ಪಾದರಕ್ಷೆ ಧರಿಸುವಾಗ ಮೊದಲು ಬಲಗಾಲಿಗೆ ಧರಿಸುವುದು ಮತ್ತು ಕಳಚುವಾಗ ಮೊದಲು ಎಡಗಾಲಿನಿಂದ ಕಳಚುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ವಸ್ತ್ರ ಧರಿಸುವಾಗ ಮತ್ತು ವುದೂ ನಿರ್ವಹಿಸುವಾಗ, ನಿಮ್ಮ ಬಲಭಾಗಗಳಿಂದ ಆರಂಭಿಸಿರಿ."
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
ಹದೀಸ್ನಲ್ಲಿ ಹೀಗಿದೆ:
"ಇಝಾರ್ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು."
[ಬುಖಾರಿ].
ಹರಡುಗಂಟುಗಳು ಎಂದರೆ ಪಾದದ ಎರಡೂ ಬದಿಗಳಲ್ಲಿರುವ ಉಬ್ಬಿಕೊಂಡಿರುವ ಮೂಳೆಗಳು.
"ಸ್ತ್ರೀಯರ ಉಡುಪನ್ನು ಧರಿಸುವ ಪುರುಷನನ್ನು ಮತ್ತು ಪುರುಷರ ಉಡುಪನ್ನು ಧರಿಸುವ ಸ್ತ್ರೀಯನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ."
ಹದೀಸ್:
"ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ."
[ಅಬೂದಾವೂದ್].
«ಆದಮ್ ಸಂತತಿಯವರ ಔರತ್ಗಳಿಗೂ ಜಿನ್ನ್ಗಳ ಕಣ್ಣುಗಳಿಗೂ ನಡುವಿನ ಪರದೆಯೆಂದರೆ, ನಿಮ್ಮಲ್ಲೊಬ್ಬರು ತನ್ನ ವಸ್ತ್ರವನ್ನು ಕಳಚುವಾಗ ‘ಬಿಸ್ಮಿಲ್ಲಾಹ್’ ಎಂದು ಹೇಳುವುದೇ ಆಗಿದೆ.»
ಇದನ್ನು ತಬರಾನಿ ಮತ್ತು ಇಬ್ನ್ ಅಬೀ ಶೈಬಾ ಅವರು ರಿವಾಯತ್ ಮಾಡಿದ್ದಾರೆ.
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಹೇಳಿದರು:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
ಉತ್ತರ: 1- ಬಿಸ್ಮಿಲ್ಲಾ, ಅಲ್-ಹಮ್ದುಲಿಲ್ಲಾಹ್ ಎಂದು ಹೇಳುವುದು.
{ನಮಗೋಸ್ಕರ ಇದನ್ನು ವಿಧೇಯಗೊಳಿಸಿಕೊಟ್ಟವನು ಪರಮಪಾವನನು. ಇದನ್ನು ಪಳಗಿಸಲು ನಮಗೆ ಸಾಧ್ಯವಿರಲಿಲ್ಲ.
ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗುವವರಾಗಿದ್ದೇವೆ.” 14
[ಅಝ್ಝುಖ್ರುಫ್: 13-14].
- ಮುಸ್ಲಿಂ ವ್ಯಕ್ತಿಯ ಮೂಲಕ ಹಾದುಹೋಗವಾಗ ಅವನಿಗೆ ಸಲಾಂ ಹೇಳುವುದು.
ಉತ್ತರ: 1- ಹದವಾಗಿ ಮತ್ತು ವಿನಯವಾಗಿ ನಡೆಯುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಭೂಮಿಯಲ್ಲಿ ದರ್ಪದಿಂದ ನಡೆಯಬೇಡಿ. ಭೂಮಿಯನ್ನು ಸೀಳಲು ಅಥವಾ ಎತ್ತರದಲ್ಲಿ ಪರ್ವತವನ್ನು ತಲುಪಲು ನಿಮಗೆ ಖಂಡಿತ ಸಾಧ್ಯವಿಲ್ಲ.
[ಅಲ್-ಇಸ್ರಾ:57]
- ರಸ್ತೆಯಲ್ಲಿ ಭೇಟಿಯಾಗುವವರಿಗೆ ಸಲಾಂ ಹೇಳುವುದು.
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಹೇಳಿದರು:
"ಆಹಾರವನ್ನು ಉಣಿಸುವುದು ಮತ್ತು ನಿನಗೆ ಪರಿಚಯವಿರುವವರಿಗೂ ಪರಿಚಯವಿಲ್ಲದವರಿಗೂ ಸಲಾಮ್ ಹೇಳುವುದು"
[ಬುಖಾರಿ ಮತ್ತು ಮುಸ್ಲಿಮ್].
- ದೃಷ್ಟಿಯನ್ನು ತಗ್ಗಿಸುವುದು ಮತ್ತು ಯಾರಿಗೂ ಹಾನಿ ಮಾಡದಿರುವುದು.
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು.
ಹದೀಸ್ನಲ್ಲಿರುವಂತೆ ಪ್ರವಾದಿ (ﷺ) ರವರ ಮಾತು:
“ಹಾಗಾದರೆ, ರಸ್ತೆಗೆ ಅದರ ಹಕ್ಕನ್ನು ನೀಡಿರಿ.” ಅವರು ಕೇಳಿದರು: “ರಸ್ತೆಯ ಹಕ್ಕು ಯಾವುದು?” ಅವರು ಹೇಳಿದರು: “ದೃಷ್ಟಿಯನ್ನು ತಗ್ಗಿಸುವುದು, ಯಾರಿಗೂ ತೊಂದರೆ ನೀಡದಿರುವುದು, ಸಲಾಂ ಹೇಳಿದರೆ ಉತ್ತರಿಸುವುದು, ಒಳಿತನ್ನು ಆಜ್ಞಾಪಿಸುವುದು ಮತ್ತು ಕೆಡುಕಿನಿಂದ ತಡೆಯುವುದು.”
- ರಸ್ತೆಯಿಂದ ಅಡೆತಡೆಗಳನ್ನು ನಿವಾರಿಸುವುದು.
ಹದೀಸ್ನಲ್ಲಿ ಹೀಗಿದೆ:
"ದಾರಿಯಿಂದ ಅಡ್ಡಿಯನ್ನು ನಿವಾರಿಸುವುದು ದಾನವಾಗಿದೆ."
ಉತ್ತರ: 1- ಎಡಗಾಲಿಟ್ಟು ಮನೆಯಿಂದ ಹೊರಬರುವುದು. ಹೊರಬರುವಾಗ ಹೀಗೆ ಹೇಳುವುದು:
ಬಿಸ್ಮಿಲ್ಲಾಹಿ,ತವಕ್ಕಲ್ತು ಅಲಲ್ಲಾಹಿ ಲಾ ಹವ್ಲಾ ವಲಾ ಖುವ್ವತ ಇಲ್ಲಾ ಬಿಲ್ಲಾ ಅಲ್ಲಾಹುಮ್ಮ ಇನ್ನಿ ಅವೂದುಬಿಕ ಅನ್ ಅದಲ್ಲ ಅವ್ ಉದಲ್ಲ,ಅವ್ ಅದಲ್ಲ ಅವ್ ಉದಲ್ಲ ಅವ್ ಅದ್ಲಿಮ ಅವ್ ಉದ್ಲಮ ಅವ್ ಅಜ್ಹಲ ಅವ್ ಯುಜ್ಹಲ ಅಲಯ್.“ಅಲ್ಲಾಹನ ಹೆಸರಿನಿಂದ, ನಾನು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ, ಅಲ್ಲಾಹನಲ್ಲಿಯೇ ಹೊರತು ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಓ ಅಲ್ಲಾಹನೇ, ನಾನು ದಾರಿ ತಪ್ಪದಿರಲು ಅಥವಾ ಇತರರು ನನ್ನನ್ನು ದಾರಿ ತಪ್ಪಿಸದಿರಲು, ಅಥವಾ ನಾನು ಜಾರದಿರಲು ಅಥವಾ ಇತರರು ನನ್ನನ್ನು ಜಾರುವಂತೆ ಮಾಡದಿರಲು, ಅಥವಾ ನಾನು ಅನ್ಯಾಯವೆಸಗಿದಂತೆ ಅಥವಾ ನನಗೆ ಅನ್ಯಾಯವಾಗದಂತೆ, ನಾನು ತಿಳಿಗೇಡಿಯಂತೆ ವರ್ತಿಸದಿರಲು ಅಥವಾ ಇತರರು ನನ್ನನ್ನು ತಿಳಿಗೇಡಿಯಂತೆ ಮಾಡದಿರಲು ನಾನು ನಿನ್ನಲ್ಲಿ ಅಭಯಕೋರುತ್ತೇನೆ."
- ಬಲಗಾಲಿಟ್ಟು ಮನೆಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು:
ಬಿಸ್ಮಿಲ್ಲಾಹಿ ವಲಜ್ನಾ ವಬಿಸ್ಮಿಲ್ಲಾಹಿ ಖರಜ್ನಾ ವಅಲ ರಬ್ಬಿನಾ ತವಕ್ಕಲ್ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”
- ಮೊದಲು ಮಿಸ್ವಾಕಿನಿಂದ ಹಲ್ಲುಜ್ಜುವುದು, ನಂತರ ಮನೆಯವರಿಗೆ ಸಲಾಮ್ ಹೇಳುವುದು.
ಹದೀಸ್ನಲ್ಲಿ ಹೀಗಿದೆ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಮಿಸ್ವಾಕ್ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು.
ವರದಿ ಇಬ್ನು ಮಾಜ.
ಬಿಸ್ಮಿಲ್ಲಾಹಿ ವಲಜ್ನಾ ವಬಿಸ್ಮಿಲ್ಲಾಹಿ ಖರಜ್ನಾ ವಅಲಲ್ಲಾಹಿ ರಬ್ಬಿನಾ ತವಕ್ಕಲ್ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”
ಉತ್ತರ: 1- ಎಡಗಾಲಿನಿಂದ ಶೌಚಾಲಯವನ್ನು ಪ್ರವೇಶಿಸುವುದು.
- ಪ್ರವೇಶಿಸುವ ಮೊದಲು ಹೀಗೆ ಹೇಳುವುದು:
"ಅಲ್ಲಾಹನ ನಾಮದಿಂದ , ಓ ಅಲ್ಲಾಹನೇ, ನಾನು ಗಂಡು ಮತ್ತು ಹೆಣ್ಣು ಶೈತಾನರಿಂದ ನಿನ್ನಲ್ಲಿ ಅಭಯ ಯಾಚಿಸುತ್ತೇನೆ."
- ಅಲ್ಲಾಹನ ಹೆಸರನ್ನು ಹೊಂದಿರುವ ಯಾವುದನ್ನೂ ಶೌಚಾಲಯದ ಒಳಗೆ ಒಯ್ಯದಿರುವುದು.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ ತಮ್ಮ ಉಂಗುರವನ್ನು ಕಳಚಿಡುತ್ತಿದ್ದರು.
[ಅಬೂದಾವೂದ್ ಮತ್ತು ಇಬ್ನ್ ಮಾಜ].
- ವಿಸರ್ಜನೆಯ ಸಮಯದಲ್ಲಿ ಗುಹ್ಯಭಾಗವನ್ನು ಮರೆಮಾಚುವುದು.
ಹದೀಸ್ನಲ್ಲಿ ಹೀಗಿದೆ:
«ಅಲ್ಲಾಹರ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಗತ್ಯಕ್ಕಾಗಿ ಮರೆಯಾಗಲು ದಿಣ್ಣೆ ಅಥವಾ ಖರ್ಜೂರದ ಮರಗಳ ಗುಂಪನ್ನು ಅತಿ ಹೆಚ್ಚು ಇಷ್ಟಪಡುತ್ತಿದ್ದರು.»
[ಮುಸ್ಲಿಮ್].
- ವಿಸರ್ಜನೆ ಮಾಡುವ ಸ್ಥಳದಲ್ಲಿ ಮಾತನಾಡದಿರುವುದು.
- ಮಲ ಮೂತ್ರ ವಿಸರ್ಜನೆ ಮಾಡುವಾಗ ಕಿಬ್ಲಾದೆಡೆಗೆ ಮುಖ ಮಾಡದಿರುವುದು ಅಥವಾ ಬೆನ್ನು ತೋರಿಸದಿರುವುದು.
ಕಾರಣ ಪ್ರವಾದಿ ﷺ ರವರ ಹೇಳಿಕೆಯಾಗಿದೆ-
«ಮಲ ಅಥವಾ ಮೂತ್ರ ವಿಸರ್ಜಿಸುವಾಗ ಕಿಬ್ಲಾದೆಡೆಗೆ ಮುಖ ಮಾಡಬೇಡಿ, ಬದಲಾಗಿ ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿರಿ.»
[ಬುಖಾರಿ ಮತ್ತು ಮುಸ್ಲಿಮ್].
- ಕಲ್ಮಶವನ್ನು ನಿವಾರಿಸಲು ಎಡಗೈಯನ್ನು ಬಳಸುವುದು. ಬಲಗೈಯನ್ನು ಬಳಸದಿರುವುದು.
ಹದೀಸ್:
«ಅವರು ನಮ್ಮನ್ನು… ಬಲಗೈಯಿಂದ ಶೌಚ ಮಾಡಲು ನಿಷೇಧಿಸಿದ್ದಾರೆ»
- ಜನರು ನಡೆದಾಡುವ ರಸ್ತೆಯಲ್ಲಿ ಅಥವಾ ಜನರು ಉಪಯೋಗಿಸುವ ನೆರಳಿನಲ್ಲಿ ವಿಸರ್ಜನೆ ಮಾಡದಿರುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
«ಶಾಪಕ್ಕೆ ಗುರಿಮಾಡುವ ಎರಡು ವಿಷಯಗಳಿಂದ ದೂರವಿರಿ.» ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಶಾಪಕ್ಕೆ ಗುರಿಮಾಡುವ ಆ ಎರಡು ವಿಷಯಗಳು ಯಾವುವು?" ಅವರು ಹೇಳಿದರು: «ಜನರು ಸಂಚರಿಸುವ ದಾರಿಯಲ್ಲಿ, ಅಥವಾ ಅವರು ವಿಶ್ರಾಂತಿ ಪಡೆಯುವ ನೆರಳಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು.»
- ವಿಸರ್ಜನೆಯ ನಂತರ ಕೈಗಳನ್ನು ತೊಳೆಯುವುದು.
ಜರೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದೆ. ಆಗ ಅವರು ಶೌಚಾಲಯಕ್ಕೆ ತೆರಳಿ, ತಮ್ಮ ಶೌಚಕಾರ್ಯವನ್ನು ಪೂರೈಸಿ, ನಂತರ ಹೇಳಿದರು:
"ಓ ಜರೀರ್, ಶುದ್ಧೀಕರಣಕ್ಕಾಗಿ ನೀರನ್ನು ತನ್ನಿ." ನಾನು ಅವರ ಬಳಿಗೆ ನೀರನ್ನು ತಂದೆ. ಅವರು ನೀರಿನಿಂದ ಶುದ್ಧೀಕರಿಸಿಕೊಂಡರು, ಮತ್ತು ತಮ್ಮ ಕೈಯನ್ನು ನೆಲದ ಮೇಲೆ ಉಜ್ಜಿದರು.
ಇದನ್ನು ನಸಾಈ ಅವರು ವರದಿಸಿದ್ದಾರೆ.
- ಎಡಗಾಲಿಟ್ಟು ಶೌಚಾಲಯದಿಂದ ಹೊರಬರುವುದು ಮತ್ತು ಗುಫ್ರಾನಕ್ ಎಂದು ಹೇಳುವುದು.
ಉತ್ತರ: 1- ಬಲಗಾಲಿಟ್ಟು ಮಸೀದಿಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು:
ಬಿಸ್ಮಿಲ್ಲಾಹಿ ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ್."ಅಲ್ಲಾಹನ ಹೆಸರಿನಿಂದ, ಓ ಅಲ್ಲಾಹನೇ, ನಿನ್ನ ಕರುಣೆಯ ಬಾಗಿಲುಗಳನ್ನು ನನಗೆ ತೆರೆದುಕೊಡು."
- ಕುಳಿತುಕೊಳ್ಳುವುದಕ್ಕೆ ಮುಂಚೆ ಎರಡು ರಕ್ಅತ್ ನಮಾಝ್ ನಿರ್ವಹಿಸುವುದು.
ಹದೀಸ್:
"ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಎರಡು ರಕಅತ್ ನಮಾಝ್ ಮಾಡುವವರೆಗೆ ಕುಳಿತುಕೊಳ್ಳಬಾರದು"
[ಬುಖಾರಿ ಮತ್ತು ಮುಸ್ಲಿಮ್].
- ನಮಾಝ್ ಮಾಡುವವರ ಮುಂದೆ ಹಾದುಹೋಗದಿರುವುದು, ಮಸೀದಿಯಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕದಿರುವುದು ಮತ್ತು ಮಸೀದಿಯಲ್ಲಿ ಮಾರಾಟ ಮತ್ತು ಖರೀದಿ ಮಾಡದಿರುವುದು.
ಪ್ರವಾದಿ ﷺ ರವರು ಹೇಳಿದರು
"ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು."
- ಮತ್ತು ಅಲ್ಲಾಹನ ಸಂದೇಶವಾಹಕರು ﷺ ರ ಮಾತು:
«ಯಾರಾದರೂ ಮಸೀದಿಯಲ್ಲಿ ಒಬ್ಬ ಮನುಷ್ಯನು ಕಳೆದುಹೋದ ವಸ್ತುವಿನ ಬಗ್ಗೆ ಘೋಷಿಸುವುದನ್ನು ಕೇಳಿದರೆ, ಅವನು ‘ಅಲ್ಲಾಹನು ಅದನ್ನು ನಿನಗೆ ಮರಳಿಸದಿರಲಿ’ ಎಂದು ಹೇಳಲಿ. ಏಕೆಂದರೆ, ಖಂಡಿತವಾಗಿಯೂ ಮಸೀದಿಗಳು ಇದಕ್ಕಾಗಿ ನಿರ್ಮಿಸಲ್ಪಟ್ಟಿಲ್ಲ.»
[ಮುಸ್ಲಿಮ್].
ಹದೀಸ್ನಲ್ಲಿ ಹೀಗಿದೆ:
“ಮಸೀದಿಯಲ್ಲಿ ಮಾರಾಟ ಮಾಡುವ ಅಥವಾ ಖರೀದಿಸುವವರನ್ನು ನೀವು ಕಂಡರೆ, ‘ಅಲ್ಲಾಹು ನಿಮ್ಮ ವ್ಯಾಪಾರವನ್ನು ಲಾಭದಾಯಕವಾಗಿಸದಿರಲಿ’ ಎಂದು ಹೇಳಿರಿ.”
[ತಿರ್ಮಿದಿ ಮತ್ತು ದಾರಮಿ].
- ಮಸೀದಿಯ ಶುಚಿತ್ವವನ್ನು ಕಾಪಾಡುವುದು.
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಡಾವಣೆಗಳಲ್ಲಿ ಮಸೀದಿಗಳನ್ನು ನಿರ್ಮಿಸಬೇಕೆಂದೂ, ಹಾಗೂ ಅವುಗಳನ್ನು ಸ್ವಚ್ಛವಾಗಿಟ್ಟು ಸುಗಂಧಭರಿತಗೊಳಿಸಬೇಕೆಂದೂ ಆದೇಶಿಸಿದ್ದಾರೆ.
ಈ ಹದೀಸನ್ನು ತಿರ್ಮಿದಿ, ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
- ಎಡಗಾಲಿಟ್ಟು ಮಸೀದಿಯಿಂದ ಹೊರಬರುವುದು ಮತ್ತು ಹೀಗೆ ಹೇಳುವುದು:
“ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಮಿನ್ ಫದ್ಲಿಕ” (ಓ ಅಲ್ಲಾಹ್! ನಾನು ನಿನ್ನ ಔದಾರ್ಯದೊಂದಿಗೆ ನಿನ್ನಲ್ಲಿ ಬೇಡುತ್ತಿದ್ದೇನೆ.)
ಉತ್ತರ: 1 - ಮುಸ್ಲಿಮನನ್ನು ಭೇಟಿಯಾದಾಗ ಮೊತ್ತಮೊದಲು ಸಲಾಮ್ ಹೇಳುವುದು: "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು". ಸಲಾಂ ಅಲ್ಲದ ಬೇರೆ ಯಾವುದನ್ನು ಮೊದಲು ಹೇಳದಿರುವುದು. ಸನ್ನೆಯ ಮೂಲಕ ಸಲಾಮ್ ಹೇಳಿದರೆ ಸಾಕಾಗುವುದಿಲ್ಲ.
- ಸಲಾಮ್ ಹೇಳುವ ವ್ಯಕ್ತಿಯ ಮುಖ ನೋಡಿ ಮುಗುಳು ನಗೆ ಬೀರುವುದು.
- ಬಲಗೈಯಿಂದ ಹಸ್ತಲಾಘವ ಮಾಡುವುದು.
- ಯಾರಾದರೂ ಸಲಾಮ್ ಹೇಳಿದರೆ, ಅದಕ್ಕಿಂತಲೂ ಉತ್ತಮವಾದುದರ ಮೂಲಕ ಉತ್ತರ ನೀಡುವುದು ಅಥವಾ ಕನಿಷ್ಠ ಅಷ್ಟನ್ನೇ ಹಿಂದಿರುಗಿಸುವುದು.
- ಸತ್ಯನಿಷೇಧಿಗೆ ಮೊದಲು ಸಲಾಮ್ ಹೇಳದಿರುವುದು. ಒಂದು ವೇಳೆ ಅವನೇ ಸಲಾಮ್ ಹೇಳಿದರೆ ಅದೇ ರೀತಿ ಉತ್ತರಿಸುವುದು.
- ಕಿರಿಯರು ಹಿರಿಯರಿಗೆ, ಸವಾರಿ ಮಾಡುವವರು ಪಾದಚಾರಿಗಳಿಗೆ, ಚಲಿಸುವವರು ಕುಳಿತವರಿಗೆ ಮತ್ತು ಚಿಕ್ಕ ಗುಂಪು ದೊಡ್ಡ ಗುಂಪಿಗೆ ಸಲಾಮ್ ಹೇಳುವುದು.
ಹದೀಸ್ನಲ್ಲಿ ಹೀಗಿದೆ:
“ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”
[ಮುಸ್ಲಿಮ್].
ಅಲ್ಲಾಹನ ಈ ವಚನದಂತೆ:
ನಿಮಗೆ ಅಭಿವಂದನೆ (ಸಲಾಂ) ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ ಅಭಿವಂದನೆ ಸಲ್ಲಿಸಿರಿ. ಅಥವಾ ಕನಿಷ್ಠ ಅದನ್ನು ಮರಳಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯವನ್ನೂ ವಿಚಾರಣೆ ಮಾಡುತ್ತಾನೆ.
[ಅನ್ನಿಸಾ: 80]
- ಸತ್ಯನಿಷೇಧಿಗೆ ಮೊದಲು ಸಲಾಮ್ ಹೇಳದಿರುವುದು. ಒಂದು ವೇಳೆ ಅವನೇ ಸಲಾಮ್ ಹೇಳಿದರೆ “ವಅಲೈಕುಂ” ಎಂದು ಉತ್ತರಿಸುವುದು.
ಹದೀಸ್:
"ಯಹೂದಿಗಳಿಗೆ ಅಥವಾ ಕ್ರೈಸ್ತರಿಗೆ ನೀವು ಮುಂದಾಗಿ ಸಲಾಂ ಹೇಳಬೇಡಿ."
ಪ್ರವಾದಿ صلي الله عليه وسلم ರವರು ಹೇಳಿದರು:
"ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು"
[ಬುಖಾರಿ ಮತ್ತು ಮುಸ್ಲಿಮ್].
- ಮಹ್ರಮ್ ಅಲ್ಲದ (ವಿವಾಹವಾಗಲು ಅನುಮತಿಯಿರುವ) ಮಹಿಳೆಯೊಂದಿಗೆ ಹಸ್ತಲಾಘವ ಮಾಡದಿರುವುದು.
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಲ್ಲಾಹುವಿನಾಣೆ, ಅಲ್ಲಾಹನ ಸಂದೇಶವಾಹಕರ (ಸ) ಕೈಯು ಯಾವುದೇ ಮಹಿಳೆಯ ಕೈಯನ್ನು ಎಂದಿಗೂ ಸ್ಪರ್ಶಿಸಲಿಲ್ಲ."
ಉತ್ತರ: 1- ಒಂದು ಸ್ಥಳಕ್ಕೆ ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
- ಮೂರು ಬಾರಿಗಿಂತ ಹೆಚ್ಚು ಅನುಮತಿ ಕೇಳದಿರುವುದು. ನಂತರ ಹೊರಟುಹೋಗುವುದು.
ಹದೀಸ್ನಲ್ಲಿ ಹೀಗಿದೆ:
«ನಿಮ್ಮಲ್ಲೊಬ್ಬನು ಮೂರು ಬಾರಿ ಅನುಮತಿ ಕೇಳಿಯೂ ಅನುಮತಿ ಸಿಗದಿದ್ದರೆ, ಅವನು ಹಿಂತಿರುಗಲಿ.»
[ಬುಖಾರಿ ಮತ್ತು ಮುಸ್ಲಿಮ್].
- ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು. ಮತ್ತು "ಅಸ್ಸಲಾಮು ಅಲೈಕುಂ" ಎಂದು ಹೇಳುವುದು.
ಹದೀಸ್:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರದ್ದಾದರೂ ಬಾಗಿಲಿಗೆ ಬಂದಾಗ, ನೇರವಾಗಿ ಬಾಗಿಲನ್ನು ಎದುರಿಸುತ್ತಿರಲಿಲ್ಲ. ಬದಲಾಗಿ, ಅದರ ಬಲ ಅಥವಾ ಎಡ ಭಾಗಕ್ಕೆ ಸರಿದು ನಿಂತು, 'ಅಸ್ಸಲಾಮು ಅಲೈಕುಮ್, ಅಸ್ಸಲಾಮು ಅಲೈಕುಮ್' ಎಂದು ಹೇಳುತ್ತಿದ್ದರು."
[ಅಬೂದಾವೂದ್].
- ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.
ಅಲ್ಲಾಹನ ಈ ವಚನದಂತೆ:
ಓ ಸತ್ಯವಿಶ್ವಾಸಿಗಳೇ! ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ನಿಮ್ಮಲ್ಲಿ ಪ್ರೌಢಾವಸ್ಥೆಗೆ ತಲುಪದವರು ಮೂರು ವೇಳೆಗಳಲ್ಲಿ ನಿಮ್ಮೊಂದಿಗೆ ಪ್ರವೇಶಾನುಮತಿಯನ್ನು ಕೇಳಲಿ. ಫಜ್ರ್ ನಮಾಝ್ಗೆ ಮೊದಲು, ಮಧ್ಯಾಹ್ನದ ವೇಳೆ (ವಿಶ್ರಾಂತಿಗಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಡುವಾಗ ಮತ್ತು ಇಶಾ ನಮಾಝ್ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಇವುಗಳ ಹೊರತಾದ ಸಮಯಗಳಲ್ಲಿ ನಿಮಗೆ ಅಥವಾ ಅವರಿಗೆ ದೋಷವಿಲ್ಲ. ನೀವು ಪರಸ್ಪರ ಒಬ್ಬರ ಬಳಿಗೆ ಇನ್ನೊಬ್ಬರು ಬರುತ್ತಲೂ ಹೋಗುತ್ತಲೂ ಇರುವವರಾಗಿದ್ದೀರಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
[ಅನ್ನೂರ್: 27].
- ಆಸ್ಪತ್ರೆ, ಅಂಗಡಿ ಮುಂತಾದ ಜನರು ವಾಸಿಸದ ಸ್ಥಳಗಳನ್ನು ಅನುಮತಿಯಿಲ್ಲದೆ ಪ್ರವೇಶಿಸಬಹುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಜನವಾಸವಿಲ್ಲದ ಮತ್ತು ನಿಮ್ಮ ಯಾವುದಾದರೂ ಬಳಕೆಗೆ ಇರುವಂತಹ ಮನೆಗಳನ್ನು (ಅನುಮತಿ ವಿನಾ) ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ನೀವು ಬಹಿರಂಗಪಡಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.
- ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು.
- ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.
ಉತ್ತರ: 1. ಪ್ರಾಣಿಗಳಿಗೆ ಆಹಾರ ಮತ್ತು ಪಾನೀಯವನ್ನು ನೀಡುವುದು.
ಹದೀಸ್ನಲ್ಲಿ ಹೀಗಿದೆ:
ಅವರು ಕೇಳಿದರು: "ಅಲ್ಲಾಹನ ಸಂದೇಶವಾಹಕರೇ, ಪ್ರಾಣಿಗಳ ವಿಷಯದಲ್ಲಿಯೂ ನಮಗೆ ಪುಣ್ಯ ಸಿಗುವುದೇ?" ಅವರು ಹೇಳಿದರು: "ಜೀವವಿರುವ ಪ್ರತಿಯೊಂದು ಜೀವಿಯಲ್ಲಿಯೂ ಪುಣ್ಯವಿದೆ."
[ಬುಖಾರಿ ಮತ್ತು ಮುಸ್ಲಿಮ್].
- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಟ್ಟೆ ಬೆನ್ನಿಗೆ ಅಂಟಿಹೋಗಿದ್ದ ಒಂದು ಒಂಟೆಯ ಬಳಿಯಿಂದ ಹಾದುಹೋದಾಗ ಹೇಳಿದರು:
"ಈ ಪ್ರಾಣಿಗಳ ವಿಷಯದಲ್ಲಿ ಅಲ್ಲಾಹುವನ್ನು ಭಯಪಡಿರಿ."
[ಅಬೂದಾವೂದ್].
- ದಯೆ ಮತ್ತು ಸೌಮ್ಯತೆ ತೋರುವುದು; ಮತ್ತು ಅದಕ್ಕೆ ಹೊರಲಾಗದ ಹೊರೆಯನ್ನು ಹೊರಿಸದಿರುವುದು.
- ಹದೀಸ್ನಲ್ಲಿ: ಪ್ರವಾದಿ ﷺ ರವರು ಹೇಳಿದರು:
"ಈ ಒಂಟೆಯ ಯಜಮಾನ ಯಾರು? ಈ ಒಂಟೆ ಯಾರಿಗೆ ಸೇರಿದ್ದು?" ಆಗ ಅನ್ಸಾರ್ಗಳ ಪೈಕಿ ಒಬ್ಬ ಯುವಕ ಬಂದು, "ಓ ಅಲ್ಲಾಹನ ಸಂದೇಶವಾಹಕರೇ! ಇದು ನನಗೆ ಸೇರಿದ್ದು" ಎಂದು ಹೇಳಿದರು. ಆಗ ಅವರು ಹೇಳಿದರು: "ಅಲ್ಲಾಹು ನಿನಗೆ ಒಡೆಯನನ್ನಾಗಿ ಮಾಡಿರುವ ಈ ಪ್ರಾಣಿಯ ವಿಷಯದಲ್ಲಿ ನೀನು ಅಲ್ಲಾಹನಿಗೆ ಭಯಪಡುವುದಿಲ್ಲವೇ? ಯಾಕೆಂದರೆ, ನೀನು ಅದನ್ನು ಹಸಿವಿನಿಂದಿಡುತ್ತೀ ಮತ್ತು ಅದರಿಂದ ನಿರಂತರವಾಗಿ ದುಡಿಸಿಕೊಳ್ಳುತ್ತೀ ಎಂದು ಅದು ನನ್ನೊಡನೆ ದೂರಿದೆ."
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
'ತುದ್ಇಬುಹು' ಎಂದರೆ 'ಅದು ಅವನನ್ನು ದಣಿಸುತ್ತದೆ' ಎಂದರ್ಥ.
- ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಹಿಂಸಿಸುವುದು ಅಥವಾ ತೊಂದರೆ ನೀಡುವುದರಿಂದ ದೂರವಿರುವುದು.
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಖದ ಮೇಲೆ ಬರೆ ಹಾಕಲಾಗಿದ್ದ ಒಂದು ಕತ್ತೆಯ ಬಳಿ ಹಾದುಹೋದರು, ಆಗ ಹೇಳಿದರು:
«ಪ್ರಾಣಿಯ ಮುಖದ ಮೇಲೆ ಬರೆ ಹಾಕುವವನನ್ನು ಅಥವಾ ಅದರ ಮುಖಕ್ಕೆ ಹೊಡೆಯುವವನನ್ನು ನಾನು ಶಪಿಸಿದ್ದೇನೆ ಎಂಬುದು ನಿಮಗೆ ತಲುಪಿಲ್ಲವೇ?» ಅವರು ಅದನ್ನು ನಿಷೇಧಿಸಿದರು.
ಈ ಹದೀಸನ್ನು ಮುಸ್ಲಿಂ ಮತ್ತು ಅಬೂ ದಾವೂದ್ ನಿರೂಪಿಸಿದ್ದಾರೆ, ಈಲ್ಲಿರುವ ಶಬ್ದಗಳು ಅಬೂ ದಾವೂದ್ ಅವರದ್ದಾಗಿವೆ.
ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಮತ್ತು ಅವನ ಸಂಪ್ರೀತಿಗೆ ಪಾತ್ರನಾಗಲು ಶಕ್ತಿಯನ್ನು ಪಡೆಯುವುದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತೇನೆಂದು ನಿಯ್ಯತ್ ಮಾಡುವುದು.
- ನಮಾಝಿನ ಸಮಯದಲ್ಲಿ ಆಡದಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ.
ಅವರು ಯಾರೆಂದರೆ ತಮ್ಮ ನಮಾಝ್ಗಳ ಬಗ್ಗೆ ಅಲಕ್ಷ್ಯರಾಗಿರುವವರು 5
[ಅಲ್ ಮಾವೂನ್:4-5].
- ಹುಡುಗರು ಮತ್ತು ಹುಡುಗಿಯರು ಜೊತೆಗೂಡಿ ಆಡದಿರುವುದು.
- ‘ಔರತ್’ (ದೇಹದ ನಗ್ನ ಭಾಗಗಳನ್ನು) ಮುಚ್ಚುವ ಕ್ರೀಡಾ ಉಡುಪುಗಳನ್ನು ಮಾತ್ರ ಧರಿಸುವುದು.
- ಮುಖಕ್ಕೆ ಹೊಡೆಯುವುದು ಅಥವಾ ‘ಔರತ್’ (ದೇಹದ ನಗ್ನ ಭಾಗಗಳನ್ನು) ಪ್ರದರ್ಶಿಸುವಂತಹ ನಿಷಿದ್ಧ ಕ್ರೀಡೆಗಳನ್ನು ಆಡದಿರುವುದು.
ಹದೀಸ್ನಲ್ಲಿ ಹೀಗಿದೆ:
“ನಿಮ್ಮಲ್ಲಿ ಯಾರಾದರೂ ತನ್ನ ಸಹೋದರನೊಂದಿಗೆ ಕಾದಾಡಿದರೆ, ಅವನು ಮುಖವನ್ನು ವರ್ಜಿಸಲಿ.”
[ಮುಸ್ಲಿಮ್].
ಉತ್ತರ: 1. ಹಾಸ್ಯ ಮಾಡುವಾಗ ಸತ್ಯ ಹೇಳುವುದು ಮತ್ತು ಸುಳ್ಳು ಹೇಳದಿರುವುದು.
ಹದೀಸ್ನಲ್ಲಿ ಹೀಗಿದೆ:
“ಜನರನ್ನು ನಗಿಸಲು ಸುಳ್ಳು ಹೇಳುವವನಿಗೆ ವೈಲ್, ಅವನಿಗೆ ವೈಲ್, ಅವನಿಗೆ ವೈಲ್”
ಈ ಹದೀಸನ್ನು ಇಮಾಮ್ ಅಬೂದಾವೂದ್, ಅಹ್ಮದ್ ಮತ್ತು ತಿರ್ಮಿದಿ ರವರು ವರದಿ ಮಾಡಿದ್ದಾರೆ
- ಹಾಸ್ಯವು ಅಪಹಾಸ್ಯ, ಮಾನಹಾನಿ ಮತ್ತು ಬೆದರಿಕೆಗಳಿಂದ ಮುಕ್ತವಾಗಿರುವುದು.
ಪ್ರವಾದಿ ﷺ ರವರು ಹೇಳಿದರು
"ಒಬ್ಬ ಮುಸ್ಲಿಮನು ಇನ್ನೊಬ್ಬ ಮುಸ್ಲಿಮನನ್ನು ಹೆದರಿಸುವುದು ಧರ್ಮಸಮ್ಮತವಲ್ಲ."
ಈ ಹದೀಸನ್ನು ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ
- ಹೆಚ್ಚು ಹೆಚ್ಚು ಹಾಸ್ಯ ಮಾಡದಿರುವುದು.
"ಅತಿಯಾಗಿ ನಗಬೇಡ; ಏಕೆಂದರೆ ಅತಿಯಾದ ನಗು ಹೃದಯವನ್ನು ಸಾಯಿಸುತ್ತದೆ"
[ತಿರ್ಮಿದಿ ಮತ್ತು ಇಬ್ನ್ ಮಾಜ].