Skip to content

ಮಸೀದಿಯ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س18: ما آداب المسجد؟

ಪ್ರಶ್ನೆ 18. ಮಸೀದಿಯ ಶಿಷ್ಟಾಚಾರಗಳು ಯಾವುವು?

الجواب

ج:1. أدخل المسجد بقدمي اليمنى وأقول:

«بسم الله، اللهم افتح لي أبواب رحمتك».

  1. لا أجلس حتى أصلي ركعتين.
  • لحديث:

«إذا دخل أحدكم المسجد فلا يجلس حتى يصلي ركعتين»

متفق عليه.

  1. لا أمرُّ بين يدي المصلين، أو أنشد الضالة في المسجد، أو أبيع وأشتري في المسجد.

قال عليه الصلاة والسلام:

«لو يعلم المار بين يدي المصلي ماذا عليه لكان أن يقف أربعين خيرا له من أن يمر بين يديه»

  • وقول الرسول الله صلى الله عليه وسلم:

«من سمع رجلا ينشد ضالة في المسجد فليقل لا ردها الله عليك، فإن المساجد لم تبن لهذا»

رواه مسلم.

  • وفي الحديث:

«إذا رأيتم من يبيع، أو يبتاع في المسجد فقولوا: لا أربح الله تجارتك»

رواه الترمذي والدارمي.

  1. أحرص على نظافة المسجد.
  • في الحديث عن أم المؤمنين عائشة رضي الله عنها قالت:

«أمر رسول الله صلى الله عليه وسلم ببناء المساجد في الدور، وأن تنظف وتطيب»

رواه الترمذي وأبو داود وأحمد.

  1. أخرج من المسجد بقدمي اليسرى، وأقول:

«اللهم إني أسألك من فضلك».

ಉತ್ತರ: 1- ಬಲಗಾಲಿಟ್ಟು ಮಸೀದಿಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು:

ಬಿಸ್ಮಿಲ್ಲಾಹಿ ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ್."ಅಲ್ಲಾಹನ ಹೆಸರಿನಿಂದ, ಓ ಅಲ್ಲಾಹನೇ, ನಿನ್ನ ಕರುಣೆಯ ಬಾಗಿಲುಗಳನ್ನು ನನಗೆ ತೆರೆದುಕೊಡು."

  1. ಕುಳಿತುಕೊಳ್ಳುವುದಕ್ಕೆ ಮುಂಚೆ ಎರಡು ರಕ್ಅತ್‌ ನಮಾಝ್ ನಿರ್ವಹಿಸುವುದು.

ಹದೀಸ್:

"ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಎರಡು ರಕಅತ್ ನಮಾಝ್ ಮಾಡುವವರೆಗೆ ಕುಳಿತುಕೊಳ್ಳಬಾರದು"

[ಬುಖಾರಿ ಮತ್ತು ಮುಸ್ಲಿಮ್].

  1. ನಮಾಝ್ ಮಾಡುವವರ ಮುಂದೆ ಹಾದುಹೋಗದಿರುವುದು, ಮಸೀದಿಯಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕದಿರುವುದು ಮತ್ತು ಮಸೀದಿಯಲ್ಲಿ ಮಾರಾಟ ಮತ್ತು ಖರೀದಿ ಮಾಡದಿರುವುದು.

ಪ್ರವಾದಿ ﷺ ರವರು ಹೇಳಿದರು

"ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು."

  • ಮತ್ತು ಅಲ್ಲಾಹನ ಸಂದೇಶವಾಹಕರು ﷺ ರ ಮಾತು:

«ಯಾರಾದರೂ ಮಸೀದಿಯಲ್ಲಿ ಒಬ್ಬ ಮನುಷ್ಯನು ಕಳೆದುಹೋದ ವಸ್ತುವಿನ ಬಗ್ಗೆ ಘೋಷಿಸುವುದನ್ನು ಕೇಳಿದರೆ, ಅವನು ‘ಅಲ್ಲಾಹನು ಅದನ್ನು ನಿನಗೆ ಮರಳಿಸದಿರಲಿ’ ಎಂದು ಹೇಳಲಿ. ಏಕೆಂದರೆ, ಖಂಡಿತವಾಗಿಯೂ ಮಸೀದಿಗಳು ಇದಕ್ಕಾಗಿ ನಿರ್ಮಿಸಲ್ಪಟ್ಟಿಲ್ಲ.»

[ಮುಸ್ಲಿಮ್].

ಹದೀಸ್‌ನಲ್ಲಿ ಹೀಗಿದೆ:

“ಮಸೀದಿಯಲ್ಲಿ ಮಾರಾಟ ಮಾಡುವ ಅಥವಾ ಖರೀದಿಸುವವರನ್ನು ನೀವು ಕಂಡರೆ, ‘ಅಲ್ಲಾಹು ನಿಮ್ಮ ವ್ಯಾಪಾರವನ್ನು ಲಾಭದಾಯಕವಾಗಿಸದಿರಲಿ’ ಎಂದು ಹೇಳಿರಿ.”

[ತಿರ್ಮಿದಿ ಮತ್ತು ದಾರಮಿ].

  1. ಮಸೀದಿಯ ಶುಚಿತ್ವವನ್ನು ಕಾಪಾಡುವುದು.

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಡಾವಣೆಗಳಲ್ಲಿ ಮಸೀದಿಗಳನ್ನು ನಿರ್ಮಿಸಬೇಕೆಂದೂ, ಹಾಗೂ ಅವುಗಳನ್ನು ಸ್ವಚ್ಛವಾಗಿಟ್ಟು ಸುಗಂಧಭರಿತಗೊಳಿಸಬೇಕೆಂದೂ ಆದೇಶಿಸಿದ್ದಾರೆ.

ಈ ಹದೀಸನ್ನು ತಿರ್ಮಿದಿ, ಇಮಾಮ್ ಅಬೂದಾವೂದ್ ಮತ್ತು ಅಹ್ಮದ್ ರವರು ವರದಿ ಮಾಡಿದ್ದಾರೆ

  1. ಎಡಗಾಲಿಟ್ಟು ಮಸೀದಿಯಿಂದ ಹೊರಬರುವುದು ಮತ್ತು ಹೀಗೆ ಹೇಳುವುದು:

“ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್‌ಲಿಕ” (ಓ ಅಲ್ಲಾಹ್! ನಾನು ನಿನ್ನ ಔದಾರ್ಯದೊಂದಿಗೆ ನಿನ್ನಲ್ಲಿ ಬೇಡುತ್ತಿದ್ದೇನೆ.)