Skip to content

ಅನುಮತಿ ಕೇಳುವ ಶಿಷ್ಟಾಚಾರಗಳನ್ನು ತಿಳಿಸಿ?

الباب / الفصل
قسم الآداب الإسلامية

السؤال

س20: ما آداب الاستئذان؟

ಪ್ರಶ್ನೆ 20. ಅನುಮತಿ ಕೇಳುವ ಶಿಷ್ಟಾಚಾರಗಳನ್ನು ತಿಳಿಸಿ?

الجواب

ج:1. أستأذن قبل الدخول إلى المكان.

  1. أستأذن ثلاث مرات ولا أزيد، وبعدها أنصرف.

في الحديث:

«إذا استأذن أحدكم ثلاثا فلم يؤذن له، فليرجع»

متفق عليه.

  1. أطرق الباب برفق، ولا أقف في مواجهة الباب، بل على يمينه أو يساره. وأقول: السلام عليكم.

لحديث:

«كان رسول الله صلى الله عليه وسلم إذا أتى باب قوم لم يستقبل الباب من تلقاء وجهه، ولكن من ركنه الأيمن أو الأيسر ويقول: السلام عليكم، السلام عليكم»

رواه أبو داود.

  1. لا أدخل على أبي وأمي أو أحد الغرف قبل الاستئذان، وخصوصًا قبل الفجر، ووقت القيلولة من الظهر، وبعد صلاة العشاء.
  • لقوله تعالى:

﴿يَٰٓأَيُّهَا ٱلَّذِينَ ءَامَنُواْ لِيَسۡتَـٔۡذِنكُمُ ٱلَّذِينَ مَلَكَتۡ أَيۡمَٰنُكُمۡ وَٱلَّذِينَ لَمۡ يَبۡلُغُواْ ٱلۡحُلُمَ مِنكُمۡ ثَلَٰثَ مَرَّٰتٖۚ مِّن قَبۡلِ صَلَوٰةِ ٱلۡفَجۡرِ وَحِينَ تَضَعُونَ ثِيَابَكُم مِّنَ ٱلظَّهِيرَةِ وَمِنۢ بَعۡدِ صَلَوٰةِ ٱلۡعِشَآءِۚ ثَلَٰثُ عَوۡرَٰتٖ لَّكُمۡۚ لَيۡسَ عَلَيۡكُمۡ وَلَا عَلَيۡهِمۡ جُنَاحُۢ بَعۡدَهُنَّۚ طَوَّٰفُونَ عَلَيۡكُم بَعۡضُكُمۡ عَلَىٰ بَعۡضٖۚ كَذَٰلِكَ يُبَيِّنُ ٱللَّهُ لَكُمُ ٱلۡأٓيَٰتِۗ وَٱللَّهُ عَلِيمٌ حَكِيمٞ﴾

[النور: ٥٨].

  1. يمكن أن أدخل الأماكن غير المسكونة، مثل: المشفى أو المتجر بدون استئذان.
  • قال تعالى:

﴿لَّيۡسَ عَلَيۡكُمۡ جُنَاحٌ أَن تَدۡخُلُواْ بُيُوتًا غَيۡرَ مَسۡكُونَةٖ فِيهَا مَتَٰعٞ لَّكُمۡۚ وَٱللَّهُ يَعۡلَمُ مَا تُبۡدُونَ وَمَا تَكۡتُمُونَ﴾

[النور: ٢٩].

ಉತ್ತರ: 1- ಒಂದು ಸ್ಥಳಕ್ಕೆ ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.

  1. ಮೂರು ಬಾರಿಗಿಂತ ಹೆಚ್ಚು ಅನುಮತಿ ಕೇಳದಿರುವುದು. ನಂತರ ಹೊರಟುಹೋಗುವುದು.
  2. ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು.
  3. ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.
  4. ಆಸ್ಪತ್ರೆ, ಅಂಗಡಿ ಮುಂತಾದ ಜನರು ವಾಸಿಸದ ಸ್ಥಳಗಳನ್ನು ಅನುಮತಿಯಿಲ್ಲದೆ ಪ್ರವೇಶಿಸಬಹುದು.

ಹದೀಸ್‌ನಲ್ಲಿ ಹೀಗಿದೆ:

«ನಿಮ್ಮಲ್ಲೊಬ್ಬನು ಮೂರು ಬಾರಿ ಅನುಮತಿ ಕೇಳಿಯೂ ಅನುಮತಿ ಸಿಗದಿದ್ದರೆ, ಅವನು ಹಿಂತಿರುಗಲಿ.»

[ಬುಖಾರಿ ಮತ್ತು ಮುಸ್ಲಿಮ್].

  1. ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು. ಮತ್ತು "ಅಸ್ಸಲಾಮು ಅಲೈಕುಂ" ಎಂದು ಹೇಳುವುದು.

ಹದೀಸ್:

"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರದ್ದಾದರೂ ಬಾಗಿಲಿಗೆ ಬಂದಾಗ, ನೇರವಾಗಿ ಬಾಗಿಲನ್ನು ಎದುರಿಸುತ್ತಿರಲಿಲ್ಲ. ಬದಲಾಗಿ, ಅದರ ಬಲ ಅಥವಾ ಎಡ ಭಾಗಕ್ಕೆ ಸರಿದು ನಿಂತು, 'ಅಸ್ಸಲಾಮು ಅಲೈಕುಮ್, ಅಸ್ಸಲಾಮು ಅಲೈಕುಮ್' ಎಂದು ಹೇಳುತ್ತಿದ್ದರು."

[ಅಬೂದಾವೂದ್].

  1. ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.

ಅಲ್ಲಾಹನ ಈ ವಚನದಂತೆ:

ಓ ಸತ್ಯವಿಶ್ವಾಸಿಗಳೇ! ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ನಿಮ್ಮಲ್ಲಿ ಪ್ರೌಢಾವಸ್ಥೆಗೆ ತಲುಪದವರು ಮೂರು ವೇಳೆಗಳಲ್ಲಿ ನಿಮ್ಮೊಂದಿಗೆ ಪ್ರವೇಶಾನುಮತಿಯನ್ನು ಕೇಳಲಿ. ಫಜ್ರ್ ನಮಾಝ್‍ಗೆ ಮೊದಲು, ಮಧ್ಯಾಹ್ನದ ವೇಳೆ (ವಿಶ್ರಾಂತಿಗಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಡುವಾಗ ಮತ್ತು ಇಶಾ ನಮಾಝ್‍ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಇವುಗಳ ಹೊರತಾದ ಸಮಯಗಳಲ್ಲಿ ನಿಮಗೆ ಅಥವಾ ಅವರಿಗೆ ದೋಷವಿಲ್ಲ. ನೀವು ಪರಸ್ಪರ ಒಬ್ಬರ ಬಳಿಗೆ ಇನ್ನೊಬ್ಬರು ಬರುತ್ತಲೂ ಹೋಗುತ್ತಲೂ ಇರುವವರಾಗಿದ್ದೀರಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

[ಅನ್ನೂರ್: 27].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಜನವಾಸವಿಲ್ಲದ ಮತ್ತು ನಿಮ್ಮ ಯಾವುದಾದರೂ ಬಳಕೆಗೆ ಇರುವಂತಹ ಮನೆಗಳನ್ನು (ಅನುಮತಿ ವಿನಾ) ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ನೀವು ಬಹಿರಂಗಪಡಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.