السؤال
س٢٦: ما آداب الدعاء؟
ಪ್ರಶ್ನೆ 26. ಪ್ರಾರ್ಥನೆಯ ಶಿಷ್ಟಾಚಾರ ಯಾವುದು?
الجواب
ج:١. البدء بحمد الله والثناء عليه.
- الصلاة على النبي صلى الله عليه وسلم.
- في الحديث عن النبي صلى الله عليه وسلم:
«إذا صليت، فقعدت، فاحمد الله بما هو أهله، وصل عليَّ ثم ادعه»
رواه الترمذي.
- رفع اليدين أثناء الدعاء.
- قال رسول الله صلى الله عليه وسلم:
«إن ربكم تبارك وتعالى حيي كريم يستحيي من عبده إذا رفع يديه إليه أن يردهما صفرًا»
رواه الترمذي وأبو داود.
- التوبة والاعتراف بالذنب.
- في دعاء موسى عليه السلام:
﴿قَالَ رَبِّ إِنِّي ظَلَمۡتُ نَفۡسِي فَٱغۡفِرۡ لِي فَغَفَرَ لَهُۥٓۚ إِنَّهُۥ هُوَ ٱلۡغَفُورُ ٱلرَّحِيمُ﴾
[القصص ١٦].
- الإلحاح في الدعاء، يعني إكثاره وتكراره.
- عدم استعجال الإجابة.
- لا تدع بإثم أو قطيعة رحم.
- في الحديث:
«لا يزال يستجاب للعبد ما لم يدع بإثم أو قطيعة رحم، ما لم يستعجل. قيل: يا رسول الله، ما الاستعجال؟ قال: يقول: قد دعوت، وقد دعوت، فلم أر يستجيب لي. فيستحسر عند ذلك، ويدع الدعاء»
رواه البخاري ومسلم.
- خفض الصوت في الدعاء.
- قال تعالى:
﴿ٱدۡعُواْ رَبَّكُمۡ تَضَرُّعٗا وَخُفۡيَةًۚ﴾
[الأعراف: ٥٥].
- حضور القلب أثناء الدعاء.
«ادعوا الله وأنتم موقنون بالإجابة، واعلموا أن الله لا يستجيب دعاء من قلب غافل لاه»
- الإخلاص لله تعالى، وسؤال الله وحده في الشدّة والرخاء.
﴿وَأَنَّ ٱلۡمَسَٰجِدَ لِلَّهِ فَلَا تَدۡعُواْ مَعَ ٱللَّهِ أَحَدٗا﴾
[الجن: ١٨].
- التوسّل إلى الله بأسمائه الحسنى وصفاته.
﴿وَلِلَّهِ ٱلۡأَسۡمَآءُ ٱلۡحُسۡنَىٰ فَٱدۡعُوهُ بِهَاۖ﴾
[الأعراف: ١٨٠].
- استقبال القبلة.
في الحديث:
«فما زال يهتف بربه مادًّا يديه مستقبل القبلة، حتى سقط رداؤه عن منكبيه»
رواه مسلم.
- إطابة المأكل والملبس.
«ثم ذكر الرجل يطيل السفر أشعث أغبر يمد يديه إلى السماء: يا رب يا رب، ومطعمه حرام، ومشربه حرام، وملبسه حرام، وغذي بالحرام، فأنى يستجاب لذلك»
ಉತ್ತರ: 1. ಅಲ್ಲಾಹನ ಸ್ತುತಿ ಮತ್ತು ಪ್ರಶಂಸೆಯೊಂದಿಗೆ ಪ್ರಾರಂಭಿಸುವುದು.
೨. ಪ್ರವಾದಿ ﷺ ರವರ ಮೇಲೆ ಸ್ವಲಾತ್ ಹೇಳುವುದು.
ಹದೀಸ್ನಲ್ಲಿರುವಂತೆ ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಹೇಳಿದರು:
"«ನೀವು ನಮಾಝ್ನಲ್ಲಿ ಕುಳಿತುಕೊಂಡಾಗ, ಅಲ್ಲಾಹುವನ್ನು ಅವನಿಗೆ ಯೋಗ್ಯವಾದ ರೀತಿಯಲ್ಲಿ ಸ್ತುತಿಸಿ, ನನ್ನ ಮೇಲೆ ಸ್ವಲಾತ್ ಹೇಳಿ, ನಂತರ ಅವನಲ್ಲಿ ಪ್ರಾರ್ಥಿಸಿ»"
[ತಿರ್ಮಿದಿ].
- ಪ್ರಾರ್ಥಿಸುವಾಗ ಕೈಗಳನ್ನು ಎತ್ತುವುದು.
ಪ್ರವಾದಿ صلي الله عليه وسلم ರವರು ಹೇಳಿದರು:
"ಖಂಡಿತವಾಗಿಯೂ ಅನುಗ್ರಹಪೂರ್ಣನಾಗಿರುವ ನಿಮ್ಮ ಪರಿಪಾಲಕನು ಬಹಳ ವಿನಯಶೀಲ ಹಾಗೂ ಉದಾರಿಯಾಗಿರುವನು. ದಾಸನು ತನ್ನ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದಾಗ ಅವುಗಳನ್ನು ಶೂನ್ಯವಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ."
[ತಿರ್ಮಿದಿ ಮತ್ತು ಅಬೂದಾವೂದ್].
೪. ತೌಬಾ ಮತ್ತು ಪಾಪವನ್ನು ಒಪ್ಪಿಕೊಳ್ಳುವುದು.
- ಮೂಸಾ عليه السلام ರವರ ಪ್ರಾರ್ಥನೆಯಲ್ಲಿ:
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ಆದ್ದರಿಂದ ನನ್ನನ್ನು ಕ್ಷಮಿಸು.” ಆಗ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[ಅಲ್-ಕಸಸ್: 16]
- ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವುದು ಎಂದರೆ, ಅದನ್ನು ಹೆಚ್ಚಿಸುವುದು ಮತ್ತು ಪುನರಾವರ್ತಿಸುವುದು.
- ಉತ್ತರಕ್ಕಾಗಿ ಆತುರಪಡದಿರುವುದು.
- ಪಾಪ ಮಾಡುವುದಕ್ಕಾಗಿ ಅಥವಾ ಕುಟುಂಬ ಸಂಬಂಧ ಕಡಿಯುವುದಕ್ಕಾಗಿ ಪ್ರಾರ್ಥಿಸಬಾರದು.
ಹದೀಸ್ನಲ್ಲಿ ಹೀಗಿದೆ:
«ದಾಸನೊಬ್ಬನು ಪಾಪಕ್ಕಾಗಿ ಅಥವಾ ರಕ್ತ ಸಂಬಂಧವನ್ನು ಮುರಿಯುವುದಕ್ಕಾಗಿ ಪ್ರಾರ್ಥಿಸದ ಮತ್ತು ಆತುರಪಡದ ತನಕ, ಅವನ ಪ್ರಾರ್ಥನೆಗೆ ಉತ್ತರ ದೊರೆಯುತ್ತಲೇ ಇರುತ್ತದೆ.» ಸಹಚರರು ಕೇಳಿದರು: «ಓ ಅಲ್ಲಾಹನ ಸಂದೇಶವಾಹಕರೇ, ಆತುರಪಡುವುದು ಎಂದರೇನು?» ಪ್ರವಾದಿಯವರು ಹೇಳಿದರು: «'ನಾನು ಪ್ರಾರ್ಥಿಸಿದೆನು, ಮತ್ತೆ ಪ್ರಾರ್ಥಿಸಿದೆನು. ಆದರೆ ನನಗೆ ಉತ್ತರ ದೊರೆಯುತ್ತಿರುವುದನ್ನು ನಾನು ಕಾಣಲಿಲ್ಲ' ಎಂದು ಅವನು ಹೇಳುವುದು. ಆಗ ಅವನು ಹತಾಶನಾಗಿ ಪ್ರಾರ್ಥಿಸುವುದನ್ನು ಬಿಟ್ಟುಬಿಡುತ್ತಾನೆ.»
[ಬುಖಾರಿ ಮತ್ತು ಮುಸ್ಲಿಮ್]
- ಪ್ರಾರ್ಥನೆಯಲ್ಲಿ ಧ್ವನಿಯನ್ನು ತಗ್ಗಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ವಿನಯದಿಂದ ಮತ್ತು ರಹಸ್ಯವಾಗಿ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ.
[ಅಲ್-ಅಅ್ರಾಫ್:31]
- ಪ್ರಾರ್ಥಿಸುವ ವೇಳೆ ಹೃದಯವನ್ನು ಸಾನಿಧ್ಯಕ್ಕೆ ತರಬೇಕು.
«ಉತ್ತರವು ಖಂಡಿತವಾಗಿಯೂ ಸಿಗುತ್ತದೆಂಬ ದೃಢ ವಿಶ್ವಾಸವಿಟ್ಟು ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ, ಮತ್ತು ಅಲ್ಲಾಹನು ಅಜಾಗರೂಕ, ಚಂಚಲ ಹೃದಯದಿಂದ ಬಂದ ಪ್ರಾರ್ಥನೆಗೆ ಉತ್ತರ ನೀಡುವುದಿಲ್ಲವೆಂದು ತಿಳಿದುಕೊಳ್ಳಿರಿ.»
- ಪರಮೋನ್ನತ ಅಲ್ಲಾಹನಿಗೆ ನಿಷ್ಕಳಂಕತೆ, ಹಾಗೂ ಕಷ್ಟ ಮತ್ತು ಅನುಕೂಲದ ಎರಡೂ ಸಮಯಗಳಲ್ಲಿ ಏಕೈಕ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುವುದು.
ಮಸೀದಿಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ.
[ಅಲ್-ಜಿನ್ನ್:18]
- ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಗುಣಲಕ್ಷಣಗಳ ಮೂಲಕ ಪ್ರಾರ್ಥಿಸುವುದು.
ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ.
- ಕಿಬ್ಲಾ ದೆಡೆಗೆ ತಿರುಗುವುದು.
«ಅವರು ಕಿಬ್ಲಾದ ಕಡೆಗೆ ಮುಖ ಮಾಡಿ, ಕೈಗಳನ್ನು ಚಾಚಿ, ತಮ್ಮ ಮೇಲುಹೊದಿಕೆಯು ಭುಜಗಳಿಂದ ಕೆಳಗೆ ಬೀಳುವವರೆಗೆ ತಮ್ಮ ಪ್ರಭುವಿಗೆ ಮೊರೆಯಿಡುತ್ತಲೇ ಇದ್ದರು.»
[ಮುಸ್ಲಿಮ್].
- ಆಹಾರ ಮತ್ತು ಬಟ್ಟೆ-ಬರೆ ಪರಿಶುದ್ಧವಾಗಿರುವುದು.
ನಂತರ ಅವರು ದೀರ್ಘ ಯಾತ್ರೆಯಲ್ಲಿರುವ, ಕೆದರಿದ ಕೂದಲಿನ ಮತ್ತು ಧೂಳು ಮೆತ್ತಿಕೊಂಡಿರುವ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸಿದರು. ಅವನು ಆಕಾಶಕ್ಕೆ ತನ್ನ ಕೈಗಳನ್ನು ಚಾಚುತ್ತಾ, “ಓ ನನ್ನ ಪ್ರಭುವೇ, ಓ ನನ್ನ ಪ್ರಭುವೇ!” ಎಂದು ಪ್ರಾರ್ಥಿಸುತ್ತಾನೆ. ಆದರೆ ಅವನ ಆಹಾರವು ನಿಷಿದ್ಧವಾಗಿದೆ, ಅವನ ಪಾನೀಯವು ನಿಷಿದ್ಧವಾಗಿದೆ, ಅವನ ಬಟ್ಟೆಬರೆಗಳು ನಿಷಿದ್ಧವಾಗಿವೆ ಮತ್ತು ಅವನು ನಿಷಿದ್ಧದಲ್ಲೇ ಬೆಳೆದಿದ್ದಾನೆ. ಹೀಗಿರುವಾಗ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಾದರೂ ಹೇಗೆ?