ಪ್ರಭಾತವು ಉದಯವಾದ ನಂತರ ಕೆಲವೇ ಕ್ಷಣಗಳಲ್ಲಿ ಮಹಿಳೆಯು ಮುಟ್ಟಿನಿಂದ ಶುದ್ಧಳಾದರೆ, ಅವಳು ಆ ದಿನ ಆಹಾರ-ಪಾನೀಯಗಳನ್ನು ತೊರೆದು ಉಪವಾಸ ಆಚರಿಸಬೇಕೇ? ಉಪವಾಸ ಆಚರಿಸಿದರೆ ಆ ಉಪವಾಸ ಸಿಂಧುವಾಗುವುದೇ? ಅಥವಾ ಆ ದಿನದ ಉಪವಾಸವನ್ನು ಪುನಃ ನಿರ್ವಹಿಸಬೇಕೇ?
السؤال
ಪ್ರಶ್ನೆ 1.
ಪ್ರಭಾತವು ಉದಯವಾದ ನಂತರ ಕೆಲವೇ ಕ್ಷಣಗಳಲ್ಲಿ ಮಹಿಳೆಯು ಮುಟ್ಟಿನಿಂದ ಶುದ್ಧಳಾದರೆ, ಅವಳು ಆ ದಿನ ಆಹಾರ-ಪಾನೀಯಗಳನ್ನು ತೊರೆದು ಉಪವಾಸ ಆಚರಿಸಬೇಕೇ? ಉಪವಾಸ ಆಚರಿಸಿದರೆ ಆ ಉಪವಾಸ ಸಿಂಧುವಾಗುವುದೇ? ಅಥವಾ ಆ ದಿನದ ಉಪವಾಸವನ್ನು ಪುನಃ ನಿರ್ವಹಿಸಬೇಕೇ?
س1: إذا طهرت الـمرأة بعد الفجر مباشرةً فهل تمسك وتصوم هذا اليوم، ويكون يومها لها، أو عليها قضاء ذلك اليوم؟
الجواب
ಉತ್ತರ 1.
ಪ್ರಭಾತವು ಉದಯವಾದ ನಂತರ ಮಹಿಳೆಯು ಶುದ್ಧಳಾದರೆ, ಅವಳು ಆ ದಿನ ಆಹಾರ-ಪಾನೀಯಗಳನ್ನು ತೊರೆಯಬೇಕೋ ಬೇಡವೋ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಎರಡು ಅಭಿಪ್ರಾಯಗಳಿವೆ:
ಮೊದಲನೆಯ ಅಭಿಪ್ರಾಯ ಏನೆಂದರೆ, ಅವಳು ಆ ದಿನದ ಉಳಿದ ಭಾಗದಲ್ಲಿ ಆಹಾರ-ಪಾನೀಯಗಳನ್ನು ಸೇವಿಸಬಾರದು. ಆದರೆ ಅದನ್ನು ಉಪವಾಸವೆಂದು ಎಣಿಸಲಾಗುವುದಿಲ್ಲ. ಅವಳು ಆ ದಿನದ ಉಪವಾಸವನ್ನು ನಂತರ ಪುನಃ ನಿರ್ವಹಿಸಬೇಕು. ಇದು ಇಮಾಂ ಅಹ್ಮದ್ರ ಪ್ರಸಿದ್ಧ ಅಭಿಪ್ರಾಯವಾಗಿದೆ. ಅವರ ಮೇಲೆ ಅಲ್ಲಾಹು ದಯೆ ತೋರಲಿ.
ಎರಡನೆಯ ಅಭಿಪ್ರಾಯವೇನೆಂದರೆ, ಅವಳು ಆ ದಿನದ ಉಳಿದ ಭಾಗದಲ್ಲಿ ಆಹಾರ-ಪಾನೀಯಗಳನ್ನು ತೊರೆಯಬೇಕಾಗಿಲ್ಲ. ಏಕೆಂದರೆ, ಆ ದಿನ ಅವಳು ಉಪವಾಸ ಆಚರಿಸಿದರೆ ಅದು ಸಿಂಧುವಾಗುವುದಿಲ್ಲ. ಕಾರಣ, ಅವಳು ಆ ದಿನದ ಆರಂಭದ ಭಾಗದಲ್ಲಿ ಮುಟ್ಟಿನಲ್ಲಿದ್ದು, ಅವಳಿಗೆ ಉಪವಾಸವು ಕಡ್ಡಾಯವಿರಲಿಲ್ಲ. ಆ ದಿನದ ಉಳಿದ ಭಾಗದಲ್ಲಿ ಅವಳು ಉಪವಾಸ ಆಚರಿಸಿಯೂ ಅದು ಸಿಂಧುವಾಗುವುದಿಲ್ಲವೆಂದಾದರೆ ಅವಳು ಆ ದಿನ ಉಪವಾಸ ಆಚರಿಸುವುದರಲ್ಲಿ ಅರ್ಥವಿಲ್ಲ. ಅವಳಿಗೆ ಸಂಬಂಧಿಸಿದಂತೆ ಆ ದಿನವು ಆಹಾರ-ಪಾನೀಯವನ್ನು ತೊರೆಯುವ ಮೂಲಕ ಗೌರವಿಸಬೇಕಾದ ದಿನವಲ್ಲ. ಏಕೆಂದರೆ, ಆ ದಿನದ ಮೊದಲ ಭಾಗದಲ್ಲಿ ಅವಳಿಗೆ ಆಹಾರ-ಪಾನೀಯ ಸೇವಿಸಲು ಆದೇಶಿಸಲಾಗಿತ್ತು. ಮಾತ್ರವಲ್ಲ, ಆ ಭಾಗದಲ್ಲಿ ಅವಳು ಉಪವಾಸ ಆಚರಿಸುವುದು ನಿಷಿದ್ಧವಾಗಿತ್ತು.
ಇಸ್ಲಾಮೀ ಕಾನೂನಿನ ಪ್ರಕಾರ ಉಪವಾಸವೆಂದರೆ, ಅಲ್ಲಾಹನಿಗೆ ಆರಾಧನೆ ಸಲ್ಲಿಸುವ ರೂಪದಲ್ಲಿ ಪ್ರಭಾತದಿಂದ ತೊಡಗಿ ಸೂರ್ಯಾಸ್ತದ ತನಕ ಉಪವಾಸವನ್ನು ಮುರಿಯುವ ವಿಷಯಗಳಿಂದ ದೂರವಿರುವುದು.
ಆಹಾರ-ಪಾನೀಯಗಳನ್ನು ಸೇವಿಸಬಾರದು ಎಂಬ ಮೊದಲನೇ ಅಭಿಪ್ರಾಯಕ್ಕಿಂತ ಎರಡನೇ ಅಭಿಪ್ರಾಯವು ಪ್ರಬಲವಾಗಿದೆ. ಆದರೆ ಎರಡು ಅಭಿಪ್ರಾಯಗಳ ಪ್ರಕಾರವೂ ಅವಳು ಆ ಉಪವಾಸವನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗಿದೆ.
ﺟ1: إذا طهرت المرأة بعد طلوع الفجر فللعلماء في إمساكها ذلك اليوم قولان:
القول الأول: أنه يلزمها الإمساك بقية ذلك اليوم، ولكنه لا يحسب لها، بل يجب عليها القضاء، وهذا هو المشهور من مذهب الإمام أحمد رحمه الله.
والقول الثاني: أنه لا يلزمها أن تمسك بقية ذلك اليوم؛ لأنه يومٌ لا يصحّ صومها فيه؛ لكونها في أوله حائضًا ليست من أهل الصّيام، وإذا لم يصح لم يبق للإمساك فائدةٌ، وهذا الزمن زمنٌ غير محترمٍ بالنّسبة لها؛ لأنها مأمورةٌ بفطره في أول النهار، بل محرمٌ عليها صومه في أول النهار،
والصوم الشرعيّ: هو الإمساك عن المفطّرات تعبّدًا لله عز وجل من طلوع الفجر إلى غروب الشمس.
وهذا القول -كما تراه- أرجح من القول بلزوم الإمساك، وعلى كلا القولين يلزمها قضاء هذا اليوم.