Skip to content

ಪ್ರಭಾತವು ಉದಯವಾಗುವ ಮೊದಲು ಮಹಿಳೆಯು ಮುಟ್ಟಿನಿಂದ ಶುದ್ಧಳಾಗಿ, ಪ್ರಭಾತದ ನಂತರ ಸ್ನಾನ ಮಾಡಿ, ನಮಾಝ್ ನಿರ್ವಹಿಸಿ, ಆ ದಿನದ ಉಪವಾಸವನ್ನು ಪೂರ್ಣಗೊಳಿಸಿದರೆ, ಅವಳು ಆ ಉಪವಾಸವನ್ನು ಪುನಃ ನಿರ್ವಹಿಸಬೇಕೇ?

السؤال

ಪ್ರಶ್ನೆ 1.

ಪ್ರಭಾತವು ಉದಯವಾಗುವ ಮೊದಲು ಮಹಿಳೆಯು ಮುಟ್ಟಿನಿಂದ ಶುದ್ಧಳಾಗಿ, ಪ್ರಭಾತದ ನಂತರ ಸ್ನಾನ ಮಾಡಿ, ನಮಾಝ್ ನಿರ್ವಹಿಸಿ, ಆ ದಿನದ ಉಪವಾಸವನ್ನು ಪೂರ್ಣಗೊಳಿಸಿದರೆ, ಅವಳು ಆ ಉಪವಾಸವನ್ನು ಪುನಃ ನಿರ್ವಹಿಸಬೇಕೇ?

س2: إذا طهرت الحائض، واغتسلت بعد صلاة الفجر، وصلت، وكملت صوم يومها، فهل يجب عليها قضاؤه؟

الجواب

ಉತ್ತರ 1.

ಪ್ರಭಾತವು ಉದಯವಾಗುವ ಮೊದಲು ಮಹಿಳೆಯು ಶುದ್ಧಳಾದರೆ ಮತ್ತು ತಾನು ಶುದ್ಧಳಾಗಿದ್ದೇನೆಂದು ಅವಳಿಗೆ ಖಾತ್ರಿಯಾದರೆ—ಅದು ಒಂದು ನಿಮಿಷ ಮೊದಲಾದರೂ ಸಹ—ಅದು ರಮದಾನ್ ತಿಂಗಳಲ್ಲಾಗಿದ್ದರೆ ಅವಳು ಆ ದಿನ ಉಪವಾಸ ಆಚರಿಸಬೇಕು. ಆ ಉಪವಾಸವು ಸಿಂಧುವಾಗಿದ್ದು, ಅವಳು ಅದನ್ನು ಪುನಃ ನಿರ್ವಹಿಸಬೇಕಾಗಿಲ್ಲ. ಏಕೆಂದರೆ ಅವಳು ಶುದ್ಧಳಾಗಿರುವ ಸ್ಥಿತಿಯಲ್ಲೇ ಉಪವಾಸ ಆಚರಿಸಿದ್ದಾಳೆ. ಅವಳು ಪ್ರಭಾತವು ಉದಯವಾದ ನಂತರ ಸ್ನಾನ ಮಾಡುವುದರಲ್ಲಿ ತೊಂದರೆಯಿಲ್ಲ.

ಅದೇ ರೀತಿ, ಒಬ್ಬ ಪುರುಷನು ಸಂಭೋಗ ಅಥವಾ ಸ್ವಪ್ನಸ್ಖಲನದ ಕಾರಣದಿಂದ ದೊಡ್ಡ ಅಶುದ್ಧಿ (ಜನಾಬತ್) ಇರುವವನಾಗಿದ್ದು, ಸಹರಿಯ ಆಹಾರವನ್ನು ಸೇವಿಸಿ, ಪ್ರಭಾತವು ಉದಯವಾದ ನಂತರ ಸ್ನಾನ ಮಾಡಿದರೆ ಅವನ ಉಪವಾಸವು ಸಿಂಧುವಾಗಿದೆ.

ಮಹಿಳೆಯರಿಗೆ ಸಂಬಂಧಿಸಿದ ಇನ್ನೊಂದು ವಿಷಯವನ್ನು ಇಲ್ಲಿ ಸಾಂದರ್ಭಿಕವಾಗಿ ಸೂಚಿಸಲು ಬಯಸುತ್ತೇನೆ. ಅದೇನೆಂದರೆ, ಒಬ್ಬಳು ಮಹಿಳೆಗೆ ಉಪವಾಸವನ್ನು ಪೂರ್ತಿಗೊಳಿಸಿದ ನಂತರ ಮುಟ್ಟಾಗುವ ವಿಷಯ. ಇಂತಹ ಸಂದರ್ಭದಲ್ಲಿ, ಕೆಲವು ಮಹಿಳೆಯರು ಉಪವಾಸ ಪಾರಣೆ ಮಾಡಿದ ನಂತರ ಇಶಾ ನಮಾಝ್ ನಿರ್ವಹಿಸುವುದಕ್ಕೆ ಮೊದಲು (ಮಗ್ರಿಬ್ ಮತ್ತು ಇಶಾ ನಮಾಝ್‌ಗಳ ಮಧ್ಯೆ) ಮುಟ್ಟಾದರೆ ಆ ದಿನದ ಉಪವಾಸವು ಅಸಿಂಧುವಾಗಿದೆಯೆಂದು ಭಾವಿಸುತ್ತಾರೆ.

ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ವಾಸ್ತವವಾಗಿ, ಸೂರ್ಯಾಸ್ತದ ನಂತರ—ಅದು ಒಂದು ಕ್ಷಣದ ನಂತರವಾದರೂ ಸಹ—ಮುಟ್ಟಾದರೆ, ಆ ದಿನದ ಉಪವಾಸವು ಪೂರ್ಣವಾಗಿದೆ ಮತ್ತು ಸಿಂಧುವಾಗಿದೆ.

ﺟ2: إذا طهرت الحائض قبل طلوع الفجر ولو بدقيقةٍ واحدةٍ، ولكن تيقنت الطّهر، فإنه إذا كان في رمضان فإنه يلزمها الصوم، ويكون صومها ذلك اليوم صحيحًا، ولا يلزمها قضاؤه؛ لأنها صامت وهي طاهرٌ، وإن لم تغتسل إلا بعد طلوع الفجر فلا حرج،

كما أن الرجل لو كان جنبًا من جماعٍ أو احتلامٍ، وتسحر، ولم يغتسل إلا بعد طلوع الفجر، كان صومه صحيحًا.

وبهذه المناسبة أودّ أن أنبّه إلى أمرٍ آخر عند النّساء إذا أتاها الحيض وهي قد صامت ذلك اليوم، فإن بعض النّساء تظنّ أن الحيض إذا أتاها بعد فطرها قبل أن تصلّي العشاء فسد صوم ذلك اليوم،

وهذا لا أصل له، بل إن الحيض إذا أتاها بعد الغروب ولو بلحظةٍ فإن صومها تامٌّ وصحيحٌ.