ಫಲಿತಾಂಶಗಳನ್ನು ಫಿಲ್ಟರ್ ಮಾಡಿ
339 ಕಾರ್ಡ್ಗಳು
الموضوعات
الموضوعات (13)
التصنيف الشرعي
Filter ▾
حجم المحتوى4
ಉತ್ತರ: ನಮಾಝ್ಗೆ ಎಂಟು ಕಡ್ಡಾಯ ಕಾರ್ಯಗಳಿವೆ. ಅವು:
- ತಕ್ಬೀರ್ ಇಹ್ರಾಮಿನ ಹೊರತು ಪಡಿಸಿ ಉಳಿದ ತಕ್ಬೀರ್ಗಳು.
- ಇಮಾಮ್ ಮತ್ತು ಮುನ್ಫರಿದ್ "ಸಮಿಅಲ್ಲಾಹು ಲಿಮನ್ ಹಮಿದ" ಹೇಳುವುದು.
- "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವುದು.
- ರುಕೂನಲ್ಲಿ ಒಮ್ಮೆ ಸುಬ್ಹಾನ ರಬ್ಬಿಯಲ್ ಅಝೀಮ್ ಹೇಳುವುದು.
- ಸುಜೂದಿನಲ್ಲಿ ಒಮ್ಮೆ ಸುಬ್ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
- ಎರಡು ಸುಜೂದ್ಗಳ ನಡುವೆ “ರಬ್ಬಿಗ್ಫಿರ್ ಲೀ” ಹೇಳುವುದು.
- ಮೊದಲ ತಶಹ್ಹುದ್.
- ಮೊದಲ ತಶಹ್ಹುದ್ಗಾಗಿ ಕುಳಿತುಕೊಳ್ಳುವುದು.
ಉತ್ತರ: ಹದಿನಾಲ್ಕು ಸುನ್ನತ್ಗಳು. ಅವು:
- ಪ್ರಾರಂಭದ ತಕ್ಬೀರ್ ನಂತರ “ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ ವತಬಾರಕಸ್ಮುಕ ವತಆಲಾ ಜದ್ದುಕ ವಲಾ ಇಲಾಹ ಗೈರುಕ” ಹೇಳುವುದು. ಇದನ್ನು ದುಆ ಅಲ್-ಇಸ್ತಿಫ್ತಾಹ್ (ಪ್ರಾರಂಭದ ಪ್ರಾರ್ಥನೆ) ಎಂದು ಕರೆಯಲಾಗುತ್ತದೆ.
- ಅಭಯ ಯಾಚಿಸುವುದು.
- ಬಿಸ್ಮಿಲ್ಲಾ ಹೇಳುವುದು.
- ಆಮೀನ್ ಹೇಳುವುದು.
- ಸೂರಃ ಅಲ್-ಫಾತಿಹಾ ನಂತರ ಬೇರೆ ಸೂರಾವನ್ನು ಓದುವುದು.
- ಇಮಾಮ್ ಜೋರಾಗಿ ಪಠಿಸುವುದು.
- ಸಮಿಅಲ್ಲಾಹು ಲಿಮನ್ ಹಮಿದ ಹೇಳಿದ ಬಳಿಕ: "ಮಿಲ್ಅ ಸ್ಸಮಾವಾತಿ ವಮಿಲ್ಅಲ್ ಅರ್ದಿ ವಮಿಲ್ಅ ಮಾ ಶಿಅ್ತ ಮಿನ್ ಶೈಇನ್ ಬಅ್ದ್” ಹೇಳುವುದು.
- ರುಕೂನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಂದರೆ: ಎರಡನೆಯ ಮತ್ತು ಮೂರನೆಯ ಬಾರಿ ಮತ್ತು ಅದಕ್ಕಿಂತ ಹೆಚ್ಚು ಸುಬ್ಹಾನ ರಬ್ಬಿಯಲ್ ಅಝೀಮ್ ಹೇಳುವುದು.
- ಸುಜೂದ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸುಬ್ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
- ಎರಡು ಸುಜೂದ್ಗಳ ನಡುವೆ ಕುಳಿತುಕೊಳ್ಳುವಾಗ ಒಂದಕ್ಕಿಂತ ಹೆಚ್ಚು ಬಾರಿ “ರಬ್ಬಿಗ್ಫಿರ್ ಲೀ” ಹೇಳುವುದು.
- ಕೊನೆಯ ತಶಹ್ಹುದ್ನಲ್ಲಿ ಪ್ರವಾದಿ(ಸ) ರವರ ಮೇಲೆ ಸಲಾತ್ (ದುರೂದ್) ಹೇಳುವುದು ನಂತರ ಪ್ರಾರ್ಥಿಸುವುದು.
ನಾಲ್ಕನೆಯದು: ಕ್ರಿಯೆಗಳಲ್ಲಿರುವ ಸುನ್ನತ್ಗಳು. ಅವುಗಳನ್ನು ಹೈಆತ್ ಎಂದು ಕರೆಯಲಾಗುತ್ತದೆ:
- ತಕ್ಬೀರ್ -ಎ- ಇಹ್ರಾಮ್ನೊಂದಿಗೆ ಕೈಗಳನ್ನು ಎತ್ತುವುದು.
- ರುಕೂ ಮಾಡುವಾಗ ಕೈಗಳನ್ನು ಎತ್ತುವುದು.
- ರುಕೂನಿಂದ ತಲೆಯೆತ್ತುವಾಗ ಕೈಗಳನ್ನು ಎತ್ತುವುದು.
- ಅದರ ನಂತರ ಅವುಗಳನ್ನು ಕೆಳಗೆ ಇರಿಸುವುದು.
- ಬಲಗೈಯನ್ನು ಎಡಕೈ ಮೇಲೆ ಹಿಡಿಯುವುದು.
- ಸುಜೂದ್ ಮಾಡುವ ಸ್ಥಳವನ್ನು ನೋಡುವುದು.
- ನಿಂತಿರುವಾಗ ಪಾದಗಳನ್ನು ಪರಸ್ಪರ ದೂರವಿಡುವುದು.
- ರುಕೂ ಮಾಡುವಾಗ, ಕೈ ಬೆರಳುಗಳನ್ನು ಹರಡಿಸಿಕೊಂಡು ಮೊಣಕಾಲುಗಳನ್ನು ಬಿಗಿಹಿಡಿಯುವುದು, ಬೆನ್ನನ್ನು ನೇರಕ್ಕೆ ಚಾಚುವುದು ಮತ್ತು ತಲೆಯನ್ನು ಅದರ ಸಮಾನಾಂತರದಲ್ಲಿ ಇರಿಸುವುದು.
- ಸುಜೂದ್ ಮಾಡುವಾಗ ಸುಜೂದಿನ ಅಂಗಾಂಗಗಳು ನೆಲಕ್ಕೆ ತಾಗಿಕೊಂಡು ಸುಜೂದಿನ ಸ್ಥಳವನ್ನು ಸ್ಪರ್ಶಿಸುವುದು.
- ಸುಜೂದ್ ಮಾಡುವಾಗ ಕೈಗಳನ್ನು ಪಾರ್ಶ್ವಗಳಿಂದ, ಹೊಟ್ಟೆ ಮತ್ತು ತೊಡೆಗಳಿಂದ ದೂರವಿಡುವುದು. ತೊಡೆಗಳನ್ನು ಕಣಕಾಲುಗಳಿಂದ ಬೇರ್ಪಡಿಸುವುದು, ಮೊಣಕಾಲುಗಳನ್ನು ಪರಸ್ಪರ ಬೇರ್ಪಡಿಸುವುದು, ಪಾದಗಳನ್ನು ನೇರಗೊಳಿಸುವುದು, ಅವರ ಕಾಲ್ಬೆರಳುಗಳ ಅಡಿಭಾಗವನ್ನು ನೆಲಕ್ಕೆ ತಾಗಿಸುವುದು ಮತ್ತು ಕೈಗಳನ್ನು ಭುಜಕ್ಕೆ ಸಮಾನಾಂತರದಲ್ಲಿ ಬೆರಳುಗಳನ್ನು ಜೋಡಿಸಿಕೊಂಡು ಇಡುವುದು.
- ಎರಡು ಸಾಷ್ಟಾಂಗಗಳ ನಡುವೆ ಮತ್ತು ಮೊದಲ ತಶಹ್ಹುದ್ನಲ್ಲಿ ಕುಳಿತುಕೊಳ್ಳುವಾಗ ಇಫ್ತಿರಾಶ್ (ಕಾಲನ್ನು ಹಾಸಬೇಕು) ಮಾಡಬೇಕು, ಮತ್ತು ಎರಡನೆಯ ತಶಹ್ಹುದ್ನಲ್ಲಿ ತವರ್ರುಕ್ ಮಾಡಬೇಕು.
- ಎರಡು ಸಾಷ್ಟಾಂಗಗಳ ನಡುವೆ ಎರಡು ಕೈಗಳನ್ನು ಚಾಚಿಕೊಂಡು, ಬೆರಳುಗಳನ್ನು ಮಡಚಿ ತೊಡೆಯ ಮೇಲೆ ಇಡುವುದು. ತಶಹ್ಹುದ್ನಲ್ಲೂ ಹೀಗೆಯೇ ಮಾಡಬೇಕು. ಆದರೆ ಅದರಲ್ಲಿ ಕಿರುಬೆರಳನ್ನು ಮತ್ತು ಉಂಗುರದ ಬೆರಳನ್ನು ಮಡಚಬೇಕು ಮತ್ತು ಹೆಬ್ಬೆರಳನ್ನು ಮಧ್ಯ ಬೆರಳಿನೊಂದಿಗೆ ವೃತ್ತಾಕಾರ ಮಾಡಿ, ಅಲ್ಲಾಹನನ್ನು ಸ್ಮರಿಸುವಾಗ ತೋರುಬೆರಳಿನಿಂದ ಸಂಜ್ಞೆ ಮಾಡಬೇಕು.
- ಸಲಾಂ ಹೇಳುವಾಗ ಬಲ ಮತ್ತು ಎಡಕ್ಕೆ ತಿರುಗುವುದು.
- ಕೊನೆಯ ತಶಹ್ಹುದ್ನಲ್ಲಿ ಪ್ರವಾದಿ (ﷺ) ರವರ ಮೇಲೆ ಮತ್ತು ಅವರ ಆಲ್(ಕುಟುಂಬ)ರ ಮೇಲೆ ಸ್ವಲಾತ್ ಹೇಳುವುದು, ನಂತರ ಪ್ರಾರ್ಥಿಸುವುದು.
ಕ್ರಿಯೆಗಳಲ್ಲಿರುವ ಸುನ್ನತ್ಗಳು. ಅವುಗಳನ್ನು ಹೈಆತ್ ಎಂದು ಕರೆಯಲಾಗುತ್ತದೆ:
ಉತ್ತರ: ನಮಾಝ್ನ ವಿಧಾನ ಹೀಗಿರಬೇಕು:
- ಸಂಪೂರ್ಣ ದೇಹವನ್ನು ಯಾವುದೇ ವಿಚಲನೆ ಮಾಡದೆ ಅಥವಾ ತಿರುಗದೆ, ಕಿಬ್ಲಾಗೆ ಮುಖಮಾಡಬೇಕು.
- ನಂತರ ನಿರ್ವಹಿಸಲು ಬಯಸುವ ನಮಾಝಿನ ನಿಯ್ಯತ್ತನ್ನು(ಸಂಕಲ್ಪ) ನಾಲಗೆಯಿಂದ ಹೇಳದೆ ಹೃದಯದಲ್ಲಿ ನಿಯ್ಯತ್ ಮಾಡಬೇಕು.
- ನಂತರ ತಕ್ಬೀರ್-ಎ- ಇಹ್ರಾಮ್, ಅಂದರೆ ಅಲ್ಲಾಹು ಅಕ್ಬರ್ ಎಂದು ಹೇಳಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
- ನಂತರ ಬಲಗೈಯ ಅಂಗೈಯನ್ನು ಎಡಗೈಯ ಹೊರಬಾಗದಲ್ಲಿಟ್ಟು ಎದೆಯ ಮೇಲಿಡಬೇಕು.
- ನಂತರ ಪ್ರಾರಂಭದ ಪ್ರಾರ್ಥನೆ ಹೇಳಬೇಕು:
ಅಲ್ಲಾಹುಮ್ಮ ಬಾಯಿದ್ ಬೈನೀ ವ ಬೈನ ಖತಾಯಾಯಾ ಕಮಾ ಬಾಅತ್ತ ಬೈನಲ್ ಮಷ್ರಿಖಿ ವಲ್ ಮಗ್ರಿಬ್ ಅಲ್ಲಾಹುಮ್ಮ ನಖ್ಖಿನಿ ಮಿನ್ ಖತಾಯಾಯಾ ಕಮಾ ಯುನಖ್ಖಸ್ಸ್ ಸವ್ ಬುಲ್ ಅಬ್ಯದು ಮಿನದ್ದನಸ್ ಅಲ್ಲಾಹುಮ್ಮಘ್ಸಿಲ್ನಿ ಮಿನ್ ಖತಾಯಾಯಾ ಬಿಲ್ ಮಾಯಿ ವಸ್ಸಲ್ಜಿ ವಲ್ ಬರ್ದ್.“ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮ(ದಿಕ್ಕು)ಗಳ ಮಧ್ಯೆ ಅಂತರವಿರಿಸಿದಂತೆ ನನ್ನ ಮತ್ತು ನನ್ನ ಪಾಪಗಳ ಮಧ್ಯೆ ಅಂತರವಿರಿಸು. ಓ ಅಲ್ಲಾಹ್! ಬಿಳಿ ಉಡುಪನ್ನು ಕೊಳೆಯಿಂದ ಶುದ್ಧೀಕರಿಸುವಂತೆ ನನ್ನನ್ನು ನನ್ನ ಪಾಪಗಳಿಂದ ಶುದ್ಧೀಕರಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮಗಳಿಂದ ನನ್ನನ್ನು ನನ್ನ ಪಾಪಗಳಿಂದ ತೊಳೆದುಬಿಡು.”
ಅಥವಾ ಹೀಗೆ ಹೇಳಬೇಕು:
“ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ, ವತಬಾರಕಸ್ಮುಕ, ವತಆಲಾ ಜದ್ದುಕ, ವಲಾ ಇಲಾಹ ಗೈರುಕ” (ಅರ್ಥ: ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ಕೊಂಡಾಡುತ್ತಾ ನಿನ್ನನ್ನು ಸ್ತುತಿಸುತ್ತೇನೆ. ನಿನ್ನ ನಾಮವು ಅನುಗ್ರಹೀತವಾಗಿದೆ. ನಿನ್ನ ಮಹಿಮೆಯು ಅತ್ಯುನ್ನತವಾಗಿದೆ. ನೀನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ.)
- ನಂತರ ಅಭಯಯಾಚನೆ ಮಾಡುತ್ತಾ ಹೀಗೆ ಹೇಳಬೇಕು:
ಅಊದು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್“ಶಾಪಗ್ರಸ್ತ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯ ಪಡೆಯುತ್ತೇನೆ.”
- ನಂತರ ಬಿಸ್ಮಿಲ್ಲಾ ಹೇಳಿ ಸೂರ ಫಾತಿಹ ಪಠಿಸಬೇಕು:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
ಪರಮ ದಯಾಮಯ, ಕರುಣಾನಿಧಿ, 3
ಪ್ರತಿಫಲದ ದಿನದ ಒಡೆಯ 4
“ಇಯ್ಯಾಕ ನಅ್ಬುದು ವಇಯ್ಯಾಕ ನಸ್ತಈನ್” ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೊಂದಿಗೆ ಮಾತ್ರ ಸಹಾಯ ಬೇಡುತ್ತೇವೆ.)
ನಮಗೆ ನೇರ ಮಾರ್ಗವನ್ನು ತೋರಿಸು 6
ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ.
[ಅಲ್-ಫಾತಿಹ:2].
ನಂತರ “ಆಮೀನ್” ಎಂದು ಹೇಳಬೇಕು. ಅರ್ಥ: “ಓ ಅಲ್ಲಾಹ್! ನನ್ನಿಂದ ಸ್ವೀಕರಿಸು.”
- ನಂತರ ಕುರ್ಆನಿನಲ್ಲಿ ತನಗೆ ಕಂಠಪಾಠವಿರುವುದನ್ನು ಪಠಿಸಬೇಕು. ಫಜ್ರ್ ನಮಾಝ್ನಲ್ಲಿ ಕುರ್ಆನ್ ಪಠಣವನ್ನು ದೀರ್ಘಿಸಬೇಕು.
9-ನಂತರ ರುಕೂ ಮಾಡಬೇಕು ಅಂದರೆ: ಅಲ್ಲಾಹನ ಗೌರವಕ್ಕಾಗಿ ತನ್ನ ಬೆನ್ನನ್ನು ಬಾಗಿಸಬೇಕು, ಮತ್ತು ರುಕೂ ಮಾಡುವಾಗ ಅಲ್ಲಾಹು ಅಕ್ಬರ್ ಎಂದು ಹೇಳಬೇಕು ಮತ್ತು ತನ್ನ ಕೈಗಳನ್ನು ತನ್ನ ಭುಜದ ಮಟ್ಟಕ್ಕೆ ಎತ್ತಬೇಕು. ಬೆನ್ನನ್ನು ಚಾಚಿ ತಲೆಯನ್ನು ಕಡೆಗೆ ಇಡುವುದು.ಮತ್ತು ಮೊಣಕಾಲುಗಳ ಮೇಲೆ ತನ್ನ ಕೈಗಳನ್ನು ತೆರೆದ ಬೆರಳುಗಳಿಂದ ಇರಿಸುವುದು ಸುನ್ನತ್ ಆಗಿರುತ್ತದೆ.
- ರುಕೂನಲ್ಲಿ ಮೂರು ಬಾರಿ “ಸುಬ್ಹಾನ ರಬ್ಬಿಯಲ್ ಅದೀಮ್” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
- ನಂತರ “ಸಮಿಅಲ್ಲಾಹು ಲಿಮನ್ ಹಮಿದ” (ಸ್ತುತಿಸಿದವನ ಮಾತನ್ನು ಅಲ್ಲಾಹು ಆಲಿಸಲಿ) ಎಂದು ಹೇಳುತ್ತಾ ರುಕೂವಿನಿಂದ ತಲೆ ಮೇಲೆತ್ತಬೇಕು ಮತ್ತು ಭುಜಗಳ ವರೆಗೆ ಕೈಗಳನ್ನು ಸಮವನ್ನಾಗಿಸಬೇಕು. ಇಮಾಮರ ಹಿಂದೆ ಇರುವವರು ಸಮಿಅಲ್ಲಾಹು ಲಿಮನ್ ಹಮಿದ ಹೇಳಬಾರದು. ಬದಲಾಗಿ, “ರಬ್ಬನಾ ವಲಕಲ್ ಹಮ್ದು” (ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ) ಎಂದು ಹೇಳಬೇಕು.
- ರುಕೂವಿನಿಂದ ಎದ್ದ ನಂತರ: “ರಬ್ಬನಾ ವಲಕಲ್ ಹಮ್ದು ಮಿಲ್ಅ ಸ್ಸಮಾವಾತಿ ವಮಿಲ್ಅಲ್ ಅರ್ದಿ, ವಮಾ ಬೈನಹುಮಾ, ವಮಿಲ್ಅ ಮಾ ಶಿಅತ ಮಿನ್ ಶೈಇನ್ ಬಅದು” (ನಮ್ಮ ರಬ್ಬೇ! ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ, ಆಕಾಶಗಳು ತುಂಬುವಷ್ಟು, ಭೂಮಿ ತುಂಬುವಷ್ಟು ಮತ್ತು ನೀನು ಇಚ್ಛಿಸುವ ಪ್ರತಿಯೊಂದು ವಸ್ತು ತುಂಬುವಷ್ಟು ನಿನಗೆ ಸ್ತುತಿ) ಎಂದು ಹೇಳಬೇಕು.
- ನಂತರ ಮೊದಲನೆಯ ಸುಜೂದ್ ನಿರ್ವಹಿಸಬೇಕು. ಸುಜೂದ್ ಮಾಡುವಾಗ, “ಅಲ್ಲಾಹು ಅಕ್ಬರ್” ಎಂದು ಹೇಳಬೇಕು. ಹಣೆ, ಮೂಗು, ಎರಡು ಅಂಗೈಗಳು, ಎರಡು ಮಂಡಿಗಳು, ಎರಡು ಪಾದಗಳ ತುದಿಗಳು ಮುಂತಾದ ಏಳು ಅಂಗಗಳ ಮೇಲೆ ಸುಜೂದ್ ಮಾಡಬೇಕು. ತೋಳುಗಳನ್ನು ಪಾರ್ಶ್ವಗಳಿಂದ ದೂರವಿಡಬೇಕು. ಕೈಗಳನ್ನು ನೆಲದ ಮೇಲೆ ಹರಡಬಾರದು. ಬೆರಳುಗಳ ತುದಿಗಳು ಕಿಬ್ಲಕ್ಕೆ ಮುಖಮಾಡಬೇಕು.
- ಸುಜೂದಿನಲ್ಲಿ ಮೂರು ಬಾರಿ “ಸುಬ್ಹಾನ ರಬ್ಬಿಯಲ್ ಅಅಲಾ” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
- ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಸುಜೂದ್ನಿಂದ ತಲೆ ಎತ್ತಬೇಕು.
- ನಂತರ ಎರಡು ಸಜ್ದಗಳ ಮಧ್ಯೆ ಎಡಪಾದದ ಮೇಲೆ ಕುಳಿತುಕೊಳ್ಳಬೇಕು. ಬಲಪಾದವನ್ನು ನಾಟಿ ನಿಲ್ಲಿಸಬೇಕು. ಕೈಗಳನ್ನು ತೊಡೆಗಳು ಮತ್ತು ಮೊಣಕಾಲುಗಳ ಮೇಲೆ ಇಡಬೇಕು.
- ಎರಡು ಸುಜೂದ್ಗಳ ನಡುವೆ ಕುಳಿತುಕೊಳ್ಳುವಾಗ ಹೀಗೆ ಹೇಳಬೇಕು:
“ರಬ್ಬಿಗ್ಫಿರ್ ಲೀ, ವರ್ಹಮ್ನೀ ವಹ್ದಿನೀ ವರ್ಝುಕ್ನೀ ವಜ್ಬುರ್ನೀ ವಆಫಿನೀ” (ನನ್ನ ರಬ್ಬೇ! ನನ್ನನ್ನು ಕ್ಷಮಿಸು, ನನಗೆ ಕರುಣೆತೋರು, ನನಗೆ ಮಾರ್ಗದರ್ಶನಮಾಡು,ನನ್ನ ನಷ್ಟವನ್ನು ಸರಿದೂಗಿಸು, ನನಗೆ ಅನ್ನಾಧಾರವನ್ನು ನೀಡು, ನನಗೆ ಸೌಖ್ಯನೀಡು.”
- ನಂತರ ಮೊದಲನೇ ಸುಜೂದ್ ಮಾಡಿದಂತೆ ಎರಡನೇ ಸುಜೂದ್ ಮಾಡಬೇಕು. ಸುಜೂದ್ ಮಾಡುವಾಗ ಅಲ್ಲಾಹು ಅಕ್ಬರ್ ಹೇಳಬೇಕು.
- ನಂತರ ಎರಡನೇ ಸುಜೂದ್ ನಿರ್ವಹಿಸಿದ ಬಳಿಕ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ಮೊದಲನೆಯ ರಕ್ಅತ್ ನಿರ್ವಹಿಸಿದಂತೆ ಎರಡನೇ ರಕ್ಅತ್ತನ್ನು ನಿರ್ವಹಿಸಬೇಕು. ಆದರೆ ಅದರಲ್ಲಿ ಪ್ರಾರಂಭದ ಪ್ರಾರ್ಥನೆಯಿಲ್ಲ.
- ಎರಡನೇ ರಕ್ಅತ್ ನಿರ್ವಹಿಸಿದ ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ, ಎರಡು ಸುಜೂದ್ಗಳ ಮಧ್ಯೆ ಕುಳಿತಂತೆ ಕುಳಿತುಕೊಳ್ಳಬೇಕು.
- ಈ ಕೂರವಿಕೆಯಲ್ಲಿ ಈ ರೀತಿ ತಶಹ್ಹುದ್ ಪಠಿಸಬೇಕು:
“ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹ ನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ, ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹ್” (ಅಭಿವಂದನೆಗಳು, ಪ್ರಾರ್ಥನೆಗಳು ಮತ್ತು ಸತ್ಕರ್ಮಗಳೆಲ್ಲವೂ ಅಲ್ಲಾಹನಿಗೆ. ಓ ಪ್ರವಾದಿಯವರೇ! ತಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳು ಸದಾ ಇರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನರಾದ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸನೂ ಸಂದೇಶವಾಹಕನೂ ಆಗಿರುವರೆಂದು ನಾನು ಸಾಕ್ಷ್ಯವಹಿಸುತ್ತೇನೆ).
ನಂತರ ಇಹಲೋಕ ಮತ್ತು ಪರಲೋಕದ ಒಳಿತಿಗಾಗಿ ತಾನು ಇಷ್ಟಪಡುವ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು.
- ನಂತರ ಬಲಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾ ಎಂದು ಹೇಳಬೇಕು. ನಂತರ ಎಡಕ್ಕೆ ತಿರುಗಿ ಹಾಗೆಯೇ ಹೇಳಬೇಕು.
- ನಮಾಝ್ ಮೂರು ಅಥವಾ ನಾಲ್ಕು ರಕ್ಅತ್ತಿನದ್ದಾಗಿದ್ದರೆ, ಮೊದಲ ತಶಹ್ಹುದ್ನಲ್ಲಿ "ಅಶ್ಹದು ಅನ್ ಲಾಇಲಾಹ ಇಲ್ಲಲ್ಲಾಹ್ ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು” ಎಂಬಲ್ಲಿಯ ತನಕ ಪಠಿಸಬೇಕು.
- ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
- ನಂತರ ಉಳಿದ ರಕ್ಅತ್ಗಳನ್ನು ಎರಡನೇ ರಕ್ಅತ್ತಿನಂತೆ ನಿರ್ವಹಿಸಬೇಕು. ಆದರೆ ಸೂರ ಫಾತಿಹದ ನಂತರ ಬೇರೆ ಸೂರ ಓದಬೇಕಾಗಿಲ್ಲ.
- ನಂತರ ತವರ್ರುಕ್ನಲ್ಲಿ ಕುಳಿತುಕೊಳ್ಳಬೇಕು. ಅಂದರೆ ಬಲಪಾದವನ್ನು ನಾಟಿ ನಿಲ್ಲಿಸಬೇಕು. ಎಡಪಾದವು ಬಲಗಾಲಿನ ಅಡಿಯಿಂದ ಹೊರಬರಬೇಕು. ನೆಲದ ಮೇಲೆ ಕುಳಿತುಕೊಳ್ಳಬೇಕು. ಮೊದಲ ತಶಹ್ಹುದ್ನಲ್ಲಿ ವಿವರಿಸಿದಂತೆ ಕೈಗಳನ್ನು ತೊಡೆಗಳ ಮೇಲಿಡಬೇಕು.
- ಈ ಕೂರವಿಕೆಯಲ್ಲಿ ಸಂಪೂರ್ಣ ತಶಹ್ಹುದ್ ಪಠಿಸಬೇಕು.
ಅಥವಾ ಹೀಗೆ ಹೇಳಬೇಕು:"ಸುಬ್ ಹಾನಕಲ್ಲಾಹುಮ್ಮ ವಬಿಹಮ್ದಿಕ ವತಬಾರಕಸ್ಮುಕ ವತಆಲಾ ಜದ್ದುಕ ವಲಾ ಇಲಾಹ ಗೈರುಕ" “ಓ ಅಲ್ಲಾಹ್! ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತಾ ನಿನ್ನ ಸ್ತುತಿಯೊಂದಿಗೆ, ನಿನ್ನ ನಾಮವು ಅನುಗ್ರಹೀತವಾಗಿದೆ, ನಿನ್ನ ಔನ್ನತ್ಯವು ಅತ್ಯುನ್ನತವಾಗಿದೆ ಮತ್ತು ನೀನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ.”
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
“ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ.”
ಅರ್ರಹ್ಮಾ ನಿರ್ರಹೀಮ್ ಪರಮ ದಯಾಮಯನೂ, ಕರುಣಾನಿಧಿಯೂ,
“ಮಾಲಿಕಿ ಯೌಮಿ ದ್ದೀನ್” ಪ್ರತಿಫಲ ದಿನದ ಒಡೆಯನಾದ)
“ಇಹ್ದಿನ ಸ್ಸಿರಾತಲ್ ಮುಸ್ತಕೀಮ್” ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು.)
“ಸಿರಾತಲ್ಲದೀನ ಅನ್ಅಮ್ತ ಅಲೈಹಿಂ ಗೈರಿಲ್ ಮಗ್ದೂಬಿ ಅಲೈಹಿಂ ವಲದ್ದಾಲ್ಲೀನ್” ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.)
[ಸೂರ ಅಲ್-ಫಾತಿಹ:2].
9-ನಂತರ ರಕೂ ಮಾಡಬೇಕು ಅಂದರೆ: ಅಲ್ಲಾಹನ ಗೌರವಕ್ಕಾಗಿ ತನ್ನ ಬೆನ್ನನ್ನು ಬಾಗಿಸಬೇಕು, ಮತ್ತು ರುಕೂ ಮಾಡುವಾಗ ಅಲ್ಲಾಹು ಅಕ್ಬರ್ ಎಂದು ಹೇಳಬೇಕು ಮತ್ತು ತನ್ನ ಕೈಗಳನ್ನು ತನ್ನ ಭುಜದ ಮಟ್ಟಕ್ಕೆ ಎತ್ತಬೇಕು. ಬೆನ್ನನ್ನು ಚಾಚಿ ತಲೆಯನ್ನು ಕಡೆಗೆ ಇಡುವುದು.ಮತ್ತು ಮೊಣಕಾಲುಗಳ ಮೇಲೆ ತನ್ನ ಕೈಗಳನ್ನು ತೆರೆದ ಬೆರಳುಗಳಿಂದ ಇರಿಸುವುದು ಸುನ್ನತ್ ಆಗಿರುತ್ತದೆ.
- ನಂತರ ಎರಡು ಸಜ್ದಗಳ ಮಧ್ಯೆ ಎಡಪಾದದ ಮೇಲೆ ಕುಳಿತುಕೊಳ್ಳಬೇಕು. ಬಲಪಾದವನ್ನು ನೆಲಕ್ಕೆ ನಾಟಿ ನಿಲ್ಲಿಸಬೇಕು. ಬಲಗೈಯನ್ನು ಬಲ ತೊಡೆಯ ಮೇಲಿಡಬೇಕು. ಕಿರುಬೆರಳು ಮತ್ತು ಉಂಗುರದ ಬೆರಳನ್ನು ಮಡಚಬೇಕು. ತೋರುಬೆರಳನ್ನು ಎತ್ತಿ ಹಿಡಿಯಬೇಕು ಮತ್ತು ಪ್ರಾರ್ಥಿಸುವಾಗ ಅಲುಗಾಡಿಸುತ್ತಿರಬೇಕು. ಹೆಬ್ಬೆರಳ ತುದಿಯನ್ನು ಮಧ್ಯದ ಬೆರಳಿನ ತುದಿಗೆ ತಾಗಿಸಿ ವೃತ್ತಾಕಾರ ಮಾಡಿಕೊಳ್ಳಬೇಕು. ಎಡಗೈಯ ಬೆರಳುಗಳನ್ನು ಹರಡಿಕೊಂಡು ಎಡ ತೊಡೆಯ ಮೇಲಿಡಬೇಕು.
ಉತ್ತರ: ಮೂರು ಸಲ “ಅಸ್ತಗ್ಫಿರುಲ್ಲಾಹ್” ಎಂದು ಹೇಳುವುದು.ಅಲ್ಲಾಹನೊಂದಿಗೆ ನಾನು ಕ್ಷಮೆಯನ್ನು ಬೇಡುತ್ತಿದ್ದೇನೆ,
“ಅಲ್ಲಾಹುಮ್ಮ ಅನ್ತ ಸ್ಸಲಾಮು ವಮಿನ್ಕ ಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಮ್” (ಓ ಅಲ್ಲಾಹ್! ನೀನು ಸಲಾಮ್ ಆಗಿರುವೆ, ಮತ್ತು ಸಲಾಮ್ ನಿನ್ನಿಂದಲೇ ಆಗಿದೆ, ಓ ಘನತೆ ಗೌರವಗಳ ಒಡೆಯನೇ ನೀನು ಅನುಗ್ರಹೀತನಾಗಿರುವೆ.)
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಆ'ತಯ್ತ ವಲಾ ಮು'ಅತಿಯ ಲಿಮಾ ಮನ'ಅತ, ವಲಾ ಯನ್ಫಉ ದಲ್ ಜದ್ದಿ ಮಿನ್ಕಲ್ ಜದ್ದ್” (ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಓ ಅಲ್ಲಾಹ್! ನೀನು ನೀಡಿದ್ದನ್ನು ತಡೆಯುವವನಿಲ್ಲ ಮತ್ತು ನೀನು ತಡೆದುದನ್ನು ನೀಡುವವನಿಲ್ಲ, ಮತ್ತು ಸಿರಿವಂತನ ಸಂಪತ್ತು ನಿನಗೆ ವಿರುದ್ಧವಾಗಿ ಯಾವುದೇ ಪ್ರಯೋಜನವನ್ನೂ ನೀಡದು.)
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹಿ, ಲಾ ಇಲಾಹ ಇಲ್ಲಲ್ಲಾಹು, ವಲಾ ನಅಬುದು ಇಲ್ಲಾ ಇಯ್ಯಾಹು, ಲಹು ನ್ನಿಅಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್.” (ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ. ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದಾಗಿದೆ, ಔದಾರ್ಯವು ಅವನದಾಗಿದೆ ಮತ್ತು ಉತ್ತಮವಾದ ಪ್ರಶಂಸೆಯು ಅವನಿಗಾಗಿದೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ.)
“ಸುಬ್ಹಾನಲ್ಲಾಹ್” (ಮೂವತ್ತಮೂರು ಬಾರಿ) (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ).
“ಅಲ್ಹಮ್ದುಲಿಲ್ಲಾಹ್” (ಮೂವತ್ತಮೂರು ಬಾರಿ) (ಸ್ತುತಿ ಅಲ್ಲಾಹನಿಗೆ).
“ಅಲ್ಲಾಹು ಅಕ್ಬರ್” (ಮೂವತ್ತಮೂರು ಬಾರಿ) (ಅಲ್ಲಾಹು ಮಹಾನನಾಗಿದ್ದಾನೆ).
ನಂತರ ನೂರನ್ನು ಪೂರ್ತಿ ಮಾಡಲು ಹೀಗೆ ಹೇಳಬೇಕು:
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್.” (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ, ಸ್ತುತಿ ಅಲ್ಲಾಹನಿಗೆ, ಅಲ್ಲಾಹು ಮಹಾನನಾಗಿದ್ದಾನೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.)
- ಫಜ್ರ್ ಮತ್ತು ಮಗ್ರಿಬ್ ನಮಾಝಿನ ನಂತರ ಮೂರು ಬಾರಿ ಹಾಗೂ ಉಳಿದ ನಮಾಝ್ಗಳ ನಂತರ ಒಂದು ಬಾರಿ ಸೂರ ಇಖ್ಲಾಸ್, ಸೂರಃ ಫಲಕ್ ಮತ್ತು ಸೂರಃ ನಾಸ್ ಪಠಿಸಬೇಕು.
- ಆಯತುಲ್-ಕುರ್ಸಿಯನ್ನು ಒಮ್ಮೆ ಪಠಿಸಬೇಕು.
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹಿ, ಲಾ ಇಲಾಹ ಇಲ್ಲಲ್ಲಾಹು, ವಲಾ ನಅïಬುದು ಇಲ್ಲಾ ಇಯ್ಯಾಹು, ಲಹು ನ್ನಿಅïಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್.” (ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ. ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದಾಗಿದೆ, ಔದಾರ್ಯವು ಅವನದಾಗಿದೆ ಮತ್ತು ಉತ್ತಮವಾದ ಪ್ರಶಂಸೆಯು ಅವನಿಗಾಗಿದೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ.)
- “ಸುಬ್ಹಾನಲ್ಲಾಹ್” (ಮೂವತ್ತಮೂರು ಬಾರಿ) (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ).
ಉತ್ತರ: ಫಜ್ರ್ ನಮಾಜಿನ ಮುಂಚೆ ಎರಡು ರಕ್ಅತ್ಗಳು.
ಝುಹರ್ ನಮಾಜಿನ ಮುಂಚೆ ನಾಲ್ಕು ರಕ್ಅತ್ಗಳು.
ಝುಹರ್ ನಮಾಜಿನ ನಂತರ ಎರಡು ರಕ್ಅತ್ಗಳು.
ಮಗ್ರಿಬ್ ನಮಾಜಿನ ನಂತರ ಎರಡು ರಕ್ಅತ್ಗಳು.
ಇಶಾ ನಮಾಜಿನ ನಂತರ ಎರಡು ರಕ್ಅತ್ಗಳು.
ಅದರ ಶ್ರೇಷ್ಠತೆಗಳು ಹೀಗಿವೆ: ಪ್ರವಾದಿ ﷺ ರವರು ಹೇಳಿದರು:
"ಯಾರು ಹಗಲು ರಾತ್ರಿ ಸ್ವಯಂಪ್ರೇರಣೆಯಿಂದ ಹನ್ನೆರಡು ರಕ್ಅತ್ ನಮಾಝ್ ನಿರ್ವಹಿಸುತ್ತಾರೋ, ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಮನೆಯನ್ನು ನಿರ್ಮಿಸುತ್ತಾನೆ."
(ಮುಸ್ಲಿಂ, ಅಹ್ಮದ್ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ)
ಅದರ ಶ್ರೇಷ್ಠತೆಗಳು ಹೀಗಿವೆ: ಪ್ರವಾದಿ ﷺ ಹೇಳಿದರು:
ಉತ್ತರ: ಜುಮುಅ ದಿನ (ಶುಕ್ರವಾರ). ಪ್ರವಾದಿﷺ ಹೇಳಿದರು:
"ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಜುಮುಅ ದಿನವಾಗಿದೆ. ಆ ದಿನದಲ್ಲಿ ಆದಮರನ್ನು ಸೃಷ್ಟಿಸಲಾಯಿತು. ಅದರಲ್ಲಿಯೇ ಅವರು ಮರಣಹೊಂದಿದರು. ಅದರಲ್ಲಿಯೇ ಕಹಳೆ ಊದಲಾಗುವುದು. ಅದರಲ್ಲಿಯೇ ದಿಗ್ಭ್ರಮೆಗೊಳಿಸುವ ಶಬ್ದ ಬರುವುದು. ಆದ್ದರಿಂದ ನೀವು ಜುಮುಅ ದಿನ ನನ್ನ ಮೇಲೆ ಸ್ವಲಾತ್ ಹೆಚ್ಚಿಸಿ, ಏಕೆಂದರೆ ನಿಮ್ಮ ಸ್ವಲಾತ್ ನನ್ನ ಮುಂದೆ ಹಾಜರುಪಡಿಸಲಾಗುತ್ತದೆ."
ಶಿಷ್ಯರು ಪ್ರಶ್ನಿಸಿದರು: ಓ ಅಲ್ಲಾಹನ ಸಂದೇಶವಾಹಕರೇ, ನೀವು ಅಗಲಿರುವಾಗ ನಮ್ಮ ಸ್ವಲಾತ್ ನಿಮಗೆ ಹೇಗೆ ಹಾಜರುಪಡಿಸಲಾಗುತ್ತದೆ? ಅವರು ಉತ್ತರಿಸಿದರು:
"ಅಲ್ಲಾಹನು ಪ್ರವಾದಿಗಳ ದೇಹಗಳನ್ನು ಮಣ್ಣಿಗೆ ನಿಷಿದ್ಧಗೊಳಿಸಿದ್ದಾನೆ."
[ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].
ಶಿಷ್ಯರು ಪ್ರಶ್ನಿಸಿದರು: ಓ ಅಲ್ಲಾಹನ ಸಂದೇಶವಾಹಕರೇ, ನೀವು ಅಗಲಿರುವಾಗ ನಮ್ಮ ಸ್ವಲಾತ್ ನಿಮಗೆ ಹೇಗೆ ಹಾಜರುಪಡಿಸಲಾಗುತ್ತದೆ? ಅವರು ಉತ್ತರಿಸಿದರು:
ಉತ್ತರ: ಅದು ಪ್ರತಿಯೊಬ್ಬ ಪ್ರೌಢ, ಬುದ್ಧಿಯಿರುವ, ನಿವಾಸಿಯಾಗಿರುವ ಮುಸ್ಲಿಂ ಪುರುಷರಿಗೆ ವೈಯುಕ್ತಿಕ ಕಡ್ಡಾಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ! ಶುಕ್ರವಾರ ನಮಾಝ್ಗಾಗಿ ಕರೆಯಲಾದರೆ (ಅಝಾನ್ ನೀಡಲಾದರೆ) ಅಲ್ಲಾಹನ ಸ್ಮರಣೆಯ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ-ವ್ಯವಹಾರಗಳನ್ನು ಬಿಟ್ಟುಬಿಡಿ. ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ.
[ಅಲ್-ಜುಮುಆ:9].
“ಓ ಸತ್ಯವಿಶ್ವಾಸಿಗಳೇ! ಶುಕ್ರವಾರದಂದು ನಮಾಝ್ಗಾಗಿ ಕರೆಯಲಾದರೆ ಅಲ್ಲಾಹನ ಸ್ಮರಣೆಯೆಡೆಗೆ ವೇಗವಾಗಿ ಧಾವಿಸಿರಿ ಮತ್ತು ವ್ಯಾಪಾರವನ್ನು ವರ್ಜಿಸಿರಿ. ಅದು ನಿಮಗೆ ಉತ್ತಮವಾಗಿದೆ. ನೀವು ಅರಿತವರಾಗಿದ್ದರೆ.”
[ಸೂರ ಅಲ್- ಜುಮುಅ: 9].
ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.
ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.
ಉತ್ತರ: 1. ಸ್ನಾನ ಮಾಡುವುದು.
ಏಕೆಂದರೆ ಇದು ಪ್ರವಾದಿ(ಸ) ರ ಈ ಹೇಳಿಕೆಯಿಂದಾಗಿ:
"ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು ಕಡ್ಡಾಯವಾಗಿದೆ."
[ಬುಖಾರಿ].
2-ಸುಗಂಧಗಳನ್ನು ಬಳಸುವುದು.
ಹದೀಸ್:
""ಶುಕ್ರವಾರ ಸ್ನಾನ ಮಾಡುವುದು ಮುಸಲ್ಮಾನರ ಕರ್ತವ್ಯವಾಗಿದ್ದು, ಅವರು ತಮ್ಮ ಮನೆಯ ಸುಗಂಧವನ್ನು ಹಚ್ಚಿಕೊಳ್ಳಲಿ.""
[ಅಹ್ಮದ್ ಮತ್ತು ತಿರ್ಮಿದಿ].
- ಅತ್ಯುತ್ತಮ ಬಟ್ಟೆಗಳನ್ಧಗಳನ್ನು
"ನಿಮ್ಮಲ್ಲಿ ಸಾಮರ್ಥ್ಯವಿದ್ದವರು ತಮ್ಮ ವೃತ್ತಿಯ ವಸ್ತ್ರಗಳಲ್ಲದೆ, ಜುಮುಅಃಗಾಗಿ ಎರಡು ವಸ್ತ್ರಗಳನ್ನು ಹೊಂದುವುದರಲ್ಲಿ ತಪ್ಪೇನಿಲ್ಲ."
[ಇಬ್ನ್ ಮಾಜ ಮತ್ತು ಮಾಲಿಕ್ (ಮುವತ್ತಾ)]
4-ಮಸೀದಿಗೆ ಬೇಗ ಹೋಗುವುದು.
- ನಡೆದುಕೊಂಡು ಮಸೀದಿಗೆ ಹೋಗುವುದು.
«ಯಾರು ಶುಕ್ರವಾರ ಸ್ನಾನ ಮಾಡಿ, (ತನ್ನ ದೇಹವನ್ನು) ಚೆನ್ನಾಗಿ ತೊಳೆದು, ಆದಷ್ಟು ಬೇಗನೆ (ಮಸೀದಿಗೆ) ಹೊರಟು, (ಇಮಾಮರಿಗೆ) ಹತ್ತಿರವಾಗಿ ಕುಳಿತು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ ಮೌನವಾಗಿರುತ್ತಾನೋ, ಅವನಿಗೆ ಅವನು ಇಡುವ ಪ್ರತಿಯೊಂದು ಹೆಜ್ಜೆಗೂ ಒಂದು ವರ್ಷದ ಉಪವಾಸ ಮತ್ತು ರಾತ್ರಿ ನಮಾಝಿನ ಪ್ರತಿಫಲವಿದೆ.»
ಈ ಹದೀಸನ್ನು ಇಮಾಮ್ ತಿರ್ಮಿದಿ ಮತ್ತು ನಸಯಿ ರವರು ವರದಿ ಮಾಡಿದ್ದಾರೆ
- ಪ್ರವಾದಿ ﷺ ರವರ ಮೇಲೆ ಹೆಚ್ಚು ಹೆಚ್ಚು ಸ್ವಲಾತ್ ಹೇಳುವುದು.
ಪ್ರವಾದಿ ﷺ ರವರು ಹೇಳಿದರು
"ಜುಮುಅ ದಿನ ನನ್ನ ಮೇಲೆ ಸ್ವಲಾತ್ ಹೆಚ್ಚಿಸಿ. ಏಕೆಂದರೆ ಆ ದಿನಕ್ಕೆ ಮಲಕ್ಗಳು ಹಾಜರಾಗುತ್ತಾರೆ. ಮತ್ತು ಯಾರೇ ನನ್ನ ಮೇಲೆ ಸ್ವಲಾತ್ ಕಳುಹಿಸಿದರೂ, ಅವರು ಅದನ್ನು ಪೂರ್ಣಗೊಳಿಸುವಷ್ಟರಲ್ಲಿ ಅವರ ಸ್ವಲಾತ್ ನನ್ನ ಮುಂದೆ ಹಾಜರುಪಡಿಸಲಾಗುತ್ತದೆ."
ವರದಿ ಇಬ್ನು ಮಾಜ.
- ಸೂರಃ ಅಲ್-ಕಹಫ್ ಪಠಿಸುವುದು.
"ಯಾರು ಶುಕ್ರವಾರ ಸೂರ ಅಲ್-ಕಹಫ್ ಅನ್ನು ಪಠಿಸುತ್ತಾರೋ, ಅವರಿಗೆ ಎರಡು ಶುಕ್ರವಾರಗಳ ನಡುವೆ ಒಂದು ಬೆಳಕು ಪ್ರಕಾಶಿಸುತ್ತದೆ."
[ಹಾಕಿಂ ಮತ್ತಿತರರು].
- ಪ್ರಾರ್ಥನೆ ಸ್ವೀಕಾರಗೊಳ್ಳುವ ಸಮಯದಲ್ಲಿ ಪ್ರಾರ್ಥಿಸುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಕ್ರವಾರದ ದಿನವನ್ನು ಪ್ರಸ್ತಾಪಿಸಿ, ಹೇಳಿದರು:
"ಅದರಲ್ಲಿ ಒಂದು ಘಳಿಗೆಯಿದೆ. ಆ ಸಮಯದಲ್ಲಿ ಓರ್ವ ಮುಸ್ಲಿಂ ದಾಸನು ನಮಾಝ್ನಲ್ಲಿ ನಿಂತು ಅಲ್ಲಾಹನ ಬಳಿ ಏನನ್ನಾದರೂ ಕೇಳಿದರೆ, ಅಲ್ಲಾಹು ಅವನಿಗೆ ಅದನ್ನು ನೀಡದೇ ಇರುವುದಿಲ್ಲ."
[ಬುಖಾರಿ ಮತ್ತು ಮುಸ್ಲಿಮ್].
ಉತ್ತರ:
- ಸ್ನಾನ ಮಾಡುವುದು.
- ಪ್ರವಾದಿ ﷺ ರವರ ಮೇಲೆ ಹೆಚ್ಚು ಹೆಚ್ಚು ಸ್ವಲಾತ್ ಹೇಳುವುದು.
- ನಡೆದುಕೊಂಡು ಮಸೀದಿಗೆ ಹೋಗುವುದು.
ಉತ್ತರ: ಹೃದಯ ಸಾನಿಧ್ಯ ಮತ್ತು ಅಂಗಾಂಗಗಳ ನಿಶ್ಚಲನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಸತ್ಯವಿಶ್ವಾಸಿಗಳು ಯಶಸ್ವಿಯಾದರು.
ಅವರು ಯಾರೆಂದರೆ, ತಮ್ಮ ನಮಾಝ್ನಲ್ಲಿ ವಿನಮ್ರತೆಯಿರುವವರು.
[ಅಲ್-ಮುಅ್ಮಿನೂನ್:1-2].
ನಿಸ್ಸಂದೇಹವಾಗಿ ಸತ್ಯವಿಶ್ವಾಸಿಗಳು ಯಶಸ್ವಿಯಾಗಿದ್ದಾರೆ.
ಅಂದರೆ ತಮ್ಮ ಪ್ರಾರ್ಥನೆಯಲ್ಲಿ ವಿನಮ್ರರಾಗಿರುವವರು.
[ಸೂರ ಅಲ್-ಮೂಮಿನೂನ್:1,2]
ಉತ್ತರ: ಝಕಾತ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಜನರಿಗೆ ಅವರಲ್ಲಿರುವ ನಿರ್ದಿಷ್ಟ ಸಂಪತ್ತಿನಲ್ಲಿರುವ ಕಡ್ಡಾಯ ಹಕ್ಕು.
ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಅದು ಕಡ್ಡಾಯ ದಾನವಾಗಿದ್ದು ಶ್ರೀಮಂತರಿಂದ ತೆಗೆದು ಬಡವರಿಗೆ ನೀಡಲಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಝಕಾತ್ ನೀಡಿರಿ.”
[ಸೂರ ಅಲ್-ಬಕರ:24].
ಝಕಾತ್ ನೀಡಿರಿ
[ಅಲ್-ಬಖರ:50]
ಉತ್ತರ: ಇದು ನಿಯ್ಯತ್ನೊಂದಿಗೆ ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಮುರಿಯುವ ವಸ್ತುಗಳಿಂದ ದೂರವಿರುವ ಮೂಲಕ ಅಲ್ಲಾಹನನ್ನು ಆರಾಧಿಸುವುದು. ಇದರಲ್ಲಿ ಎರಡು ವಿಧಗಳಿವೆ:
ಕಡ್ಡಾಯ ಉಪವಾಸ: ಉದಾಹರಣೆಗೆ ರಮದಾನ್ ತಿಂಗಳ ಉಪವಾಸ. ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರಿಗೆ ಕಡ್ಡಾಯಗೊಳಿಸಲಾದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.
[ಅಲ್-ಬಖರ:50]
ಕಡ್ಡಾಯವಲ್ಲದ ಉಪವಾಸ: ಉದಾಹರಣೆಗೆ, ಪ್ರತಿ ಸೋಮವಾರ ಮತ್ತು ಗುರುವಾರದ ಉಪವಾಸ, ಪ್ರತಿ ತಿಂಗಳ ಮೂರು ದಿನಗಳ ಉಪವಾಸ, ಅದು ಪ್ರತಿ ಚಂದ್ರಮಾನ ತಿಂಗಳ 13, 14, 15 ನೇ ದಿನಗಳಾಗಿರುವುದು ಉತ್ತಮ.
“ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ.”
[ಸೂರ ಅಲ್-ಬಕರ:24].