Skip to content

ಒಬ್ಬಳು ಮಹಿಳೆ ಹಜ್ಜ್ ಯಾತ್ರೆಗೆ ಹೊರಟಳು. ಅವಳು ಹೊರಟ ಐದೇ ದಿನಗಳಲ್ಲಿ ಅವಳಿಗೆ ಮುಟ್ಟು ಪ್ರಾರಂಭವಾಯಿತು. ಮೀಕಾತ್ ತಲುಪಿದೊಡನೆ ಅವಳು ಸ್ನಾನ ಮಾಡಿ ಇಹ್ರಾಮ್ ಪ್ರವೇಶಿಸಿದಳು. ಅವಳು ಇನ್ನೂ ಶುದ್ಧಳಾಗಿರಲಿಲ್ಲ. ಮಕ್ಕಾ ತಲುಪಿದ ನಂತರ ಅವಳು ಹರಮ್‌ನ ಹೊರಗೇ ಉಳಿದಳು. ಹಜ್ಜ್ ಮತ್ತು ಉಮ್ರಾದ ಯಾವುದೇ ಕ್ರಿಯೆಯನ್ನು ಅವಳು ಮಾಡಲಿಲ್ಲ. ಅವಳು ಎರಡು ದಿನ ಮಿನಾದಲ್ಲಿ ತಂಗಿದಳು. ನಂತರ ಅವಳು ಶುದ್ಧಳಾಗಿ, ಸ್ನಾನ ಮಾಡಿ, ಶುದ್ಧಳಾಗಿರುವ ಸ್ಥಿತಿಯಲ್ಲಿ ಉಮ್ರಾದ ಎಲ್ಲಾ ಕರ್ಮಗಳನ್ನು ನಿರ್ವಹಿಸಿದಳು. ನಂತರ ಅವಳು ತವಾಫುಲ್ ಇಫಾದ (ಹಜ್ಜಿನ ಕಡ್ಡಾಯ ತವಾಫ್) ನಿರ್ವಹಿಸುತ್ತಿರುವಾಗ ಅವಳಿಗೆ ರಕ್ತ ಸ್ರವಿಸಲು ತೊಡಗಿತು. ನಾಚಿಕೆಯಿಂದ ಅವಳು ಅದನ್ನು ಮುಚ್ಚಿಟ್ಟು ಹಜ್ಜ್‌ನ ಎಲ್ಲಾ ಕರ್ಮಗಳನ್ನು ನಿರ್ವಹಿಸಿದಳು. ಊರಿಗೆ ಮರಳಿದ ನಂತರ ಅವಳು ಅದನ್ನು ತನ್ನ ಪೋಷಕರಿಗೆ ತಿಳಿಸಿದಳು. ಅವಳ ವಿಧಿಯೇನು?

السؤال

ಪ್ರಶ್ನೆ 1.

س48: سافرت امرأةٌ إلى الحجّ، وجاءتها العادة الشهريّة منذ خمسة أيامٍ من تاريخ سفرها، وبعد وصولها إلى الميقات اغتسلت وعقدت الإحرام، وهي لم تطهر من العادة، وحين وصولها إلى مكة المكرمة ظلت خارج الحرم، ولم تفعل شيئًا من شعائر الحجّ أو العمرة، ومكثت يومين في منًى، ثم طهرت، واغتسلت، وأدت جميع مناسك العمرة وهي طاهرٌ، ثمّ عاد الدم إليها وهي في طواف الإفاضة للحجّ، إلا أنها استحت، وأكملت مناسك الحجّ، ولم تخبر وليها إلا بعد وصولها إلى بلدها، فما حكم ذلك؟

الجواب

ಉತ್ತರ 1.

ಇದರ ವಿಧಿಯೇನೆಂದರೆ, ತವಾಫುಲ್ ಇಫಾದ ನಿರ್ವಹಿಸುವಾಗ ಸ್ರವಿಸಿದ ರಕ್ತವು ಮುಟ್ಟಿನ ರಕ್ತವಾಗಿದ್ದರೆ, ಅಂದರೆ ನೋವು ಮುಂತಾದ ನೈಸರ್ಗಿಕ ವಿಧಾನಗಳಿಂದ ಅವಳಿಗೆ ಅದನ್ನು ಗುರುತಿಸಬಹುದಾಗಿದ್ದರೆ, ಅವಳು ನಿರ್ವಹಿಸಿದ ತವಾಫುಲ್ ಇಫಾದ ಸಿಂಧುವಲ್ಲ. ತವಾಫುಲ್ ಇಫಾದ ನಿರ್ವಹಿಸಲು ಅವಳು ಮಕ್ಕಾಗೆ ಮರಳುವುದು ಕಡ್ಡಾಯವಾಗಿದೆ. ಅವಳು ಮೀಕಾತಿನಲ್ಲಿ ಉಮ್ರಕ್ಕಾಗಿ ಇಹ್ರಾಮ್ ಪ್ರವೇಶಿಸಿ, ಉಮ್ರದ ತವಾಫ್ ಮತ್ತು ಸಈ ನಿರ್ವಹಿಸಿ, ತಲೆಗೂದಲು ಕತ್ತರಿಸಿ, ನಂತರ ತವಾಫುಲ್ ಇಫಾದ ನಿರ್ವಹಿಸಬೇಕು.

ಆದರೆ ಅದು ಮುಟ್ಟಿನ ರಕ್ತವಲ್ಲದಿದ್ದರೆ, ಅಂದರೆ ಜನಸಂದಣಿಯ ನೂಕು-ನುಗ್ಗಲು, ಭಯ ಮುಂತಾದ ಕಾರಣಗಳಿಂದ ಉಂಟಾದ ನೈಸರ್ಗಿಕ ರಕ್ತವಾಗಿದ್ದರೆ, ತವಾಫ್‌ಗೆ ಶುದ್ಧವಾಗಿರಬೇಕೆಂಬ ಷರತ್ತಿಲ್ಲ ಎಂದು ಹೇಳುವವರ ಪ್ರಕಾರ ಈ ತವಾಫ್ ಸಿಂಧುವಾಗುತ್ತದೆ.

ಅದು ಮುಟ್ಟಿನ ರಕ್ತವಾಗಿದ್ದು, ಪುನಃ ಮಕ್ಕಾಗೆ ಹಿಂದಿರುಗುವುದು ಅವಳಿಗೆ ಅಸಾಧ್ಯವಾಗಿದ್ದರೆ, ಅಂದರೆ ಅವಳು ಮಕ್ಕಾದಿಂದ ಬಹುದೂರ ವಾಸಿಸುತ್ತಿದ್ದರೆ, ಅವಳ ಹಜ್ಜ್ ಸಿಂಧುವಾಗಿದೆ. ಏಕೆಂದರೆ ಅವಳಿಗೆ ಸಾಧ್ಯವಾದುದನ್ನು ಅವಳು ಮಾಡಿದ್ದಾಳೆ.

ﺟ48: الحكم في هذا: أنّ الدم الّذي أصابها في طواف الإفاضة إذا كان هو دم الحيض الّذي تعرفه بطبيعته وأوجاعه فإن طواف الإفاضة لم يصح، ويلزمها أن تعود إلى مكة؛ لتطوف طواف الإفاضة، فتحرم بعمرةٍ من الميقات، وتؤدّي العمرة بطوافٍ وسعيٍ، وتقصّر، ثم تطوف طواف الإفاضة.

أما إذا كان هذا الدم ليس دم الحيض، الدم الطبيعيّ المعروف، وإنما نشأ من شدّة الزّحام أو الروعة أو ما شابه ذلك، فإن طوافها يصحّ عند من لا يشترط الطهارة للطواف.

فإن لم يمكنها الرّجوع في المسألة الأولى، بحيث تكون في بلادٍ بعيدةٍ، فحجّها صحيحٌ؛ لأنها لا تستطيع أكثر ممّا صنعت.