ನೆರೆಹೊರೆಯವರೊಂದಿಗಿನ ಶಿಷ್ಟಾಚಾರಗಳು ಯಾವುವು?
- الباب / الفصل
- قسم الآداب الإسلامية
السؤال
س6: ما هي آداب الجار؟
ಪ್ರಶ್ನೆ 6. ನೆರೆಹೊರೆಯವರೊಂದಿಗಿನ ಶಿಷ್ಟಾಚಾರಗಳು ಯಾವುವು?
الجواب
ج:1. أحسن للجار بالقول والفعل، وأساعده إذا احتاج مساعدتي.
- أهنئه إذا فرح بالعيد أو الزواج أو غيرهما.
- أعوده إذا مرض وأعزيه إذا أصيب.
- أقدم له ما أصنع من الطعام ما أمكن.
- لا ألحق به أذى بقول أو فعل.
- لا أزعجه بصوت مرتفع أو أتجسس عليه، وأصبر عليه.
- قال تعالى:
﴿۞ وَٱعۡبُدُواْ ٱللَّهَ وَلَا تُشۡرِكُواْ بِهِۦ شَيۡـٔٗاۖ وَبِٱلۡوَٰلِدَيۡنِ إِحۡسَٰنٗا وَبِذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَٱلۡجَارِ ذِي ٱلۡقُرۡبَىٰ وَٱلۡجَارِ ٱلۡجُنُبِ وَٱلصَّاحِبِ بِٱلۡجَنۢبِ وَٱبۡنِ ٱلسَّبِيلِ وَمَا مَلَكَتۡ أَيۡمَٰنُكُمۡۗ إِنَّ ٱللَّهَ لَا يُحِبُّ مَن كَانَ مُخۡتَالٗا فَخُورًا﴾
[النساء: ٣٦].
- وقال رسول الله صلى الله عليه وسلم:
«يا أبا ذر، إذا طبخت مرقة فأكثر ماءها وتعاهد جيرانك»
رواه مسلم.
- في الحديث عن النبي صلى الله عليه وسلم:
«من كان يؤمن بالله واليوم الآخر فلا يؤذي جاره»
متفق عليه.
ಉತ್ತರ: 1- ಮಾತು ಮತ್ತು ಕ್ರಿಯೆಯ ಮೂಲಕ ನೆರೆಹೊರೆಯವರಿಗೆ ಒಳಿತನ್ನು ಮಾಡುವುದು ಮತ್ತು ಅವರಿಗೆ ಸಹಾಯ ಬೇಕಾದರೆ ಸಹಾಯ ಮಾಡುವುದು.
- ಹಬ್ಬ, ಮದುವೆ ಅಥವಾ ಇನ್ನೇನಾದರೂ ಸಂತೋಷದಲ್ಲಿದ್ದರೆ ಅವರನ್ನು ಅಭಿನಂದಿಸುವುದು.
- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರಿಗೆ ನೋವುಂಟಾದರೆ ಸಾಂತ್ವನ ಹೇಳುವುದು.
- ಮನೆಯಲ್ಲಿ ಆಹಾರ ತಯಾರಿಸುವಾಗ ಸಾಧ್ಯವಾದರೆ ಅವರಿಗೂ ಆಹಾರ ನೀಡುವುದು.
- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು.
- ದೊಡ್ಡ ಧ್ವನಿಯಿಂದ ಅವನಿಗೆ ತೊಂದರೆ ಕೊಡದಿರುವುದು, ಅಥವಾ ಅವನ ಮೇಲೆ ಬೇಹುಗಾರಿಕೆ ಮಾಡದಿರುವುದು, ಮತ್ತು ಅವನ ಬಗ್ಗೆ ತಾಳ್ಮೆ ವಹಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ಮಾತಾಪಿತರಿಗೆ ಒಳಿತು ಮಾಡಿರಿ. ಸಂಬಂಧಿಕರು, ಅನಾಥರು, ಬಡವರು, ಕುಟುಂಬ ಸಂಬಂಧವಿರುವ ನೆರೆಹೊರೆಯವರು, ಇತರ ನೆರೆಹೊರೆಯವರು, ಸಂಗಡಿಗರು, ಪ್ರಯಾಣಿಕರು ಮತ್ತು ನಿಮ್ಮ ಅಧೀನದಲ್ಲಿರುವ ಗುಲಾಮರು ಮುಂತಾದವರೊಡನೆ ಉತ್ತಮವಾಗಿ ವರ್ತಿಸಿರಿ. ಅಹಂಕಾರ ಮತ್ತು ದರ್ಪವಿರುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.
[ಅನ್ನಿಸಾ: 80]
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಓ ಅಬೂ ದರ್! ನೀನು ಸಾರು ತಯಾರಿಸಿದರೆ, ಅದರ ನೀರನ್ನು ಹೆಚ್ಚಿಸು, ಮತ್ತು ನಿನ್ನ ನೆರೆಯವರನ್ನು ಪರಿಗಣಿಸು (ಅವರಿಗೂ ಅದರಿಂದ ಸ್ವಲ್ಪ ಕೊಡು)"
[ಮುಸ್ಲಿಮ್].
ಹದೀಸ್ನಲ್ಲಿರುವಂತೆ ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಹೇಳಿದರು:
“ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವವನು ತನ್ನ ನೆರೆಹೊರೆಯವರಿಗೆ ತೊಂದರೆ ಕೊಡದಿರಲಿ.”
[ಬುಖಾರಿ ಮತ್ತು ಮುಸ್ಲಿಮ್].