ಸಈ ಮಾಡುವ ಸ್ಥಳ (ಮಸ್ಆ) ಮಸ್ಜಿದುಲ್ ಹರಾಂನ ಭಾಗವೇ? ಅಲ್ಲಿ ಮಹಿಳೆ ತಂಗಬಹುದೇ? ಸಈ ಮಾಡುವ ಸ್ಥಳದಿಂದ ಹರಂ ಪ್ರವೇಶಿಸುವವರು ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸಬೇಕೇ?
السؤال
ಪ್ರಶ್ನೆ 1.
ಸಈ ಮಾಡುವ ಸ್ಥಳ (ಮಸ್ಆ) ಮಸ್ಜಿದುಲ್ ಹರಾಂನ ಭಾಗವೇ? ಅಲ್ಲಿ ಮಹಿಳೆ ತಂಗಬಹುದೇ? ಸಈ ಮಾಡುವ ಸ್ಥಳದಿಂದ ಹರಂ ಪ್ರವೇಶಿಸುವವರು ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸಬೇಕೇ?
س56: هل المسعى من الحرم؟ وهل تقربه الحائض؟ وهل يجب على من دخل الحرم من المسعى أن يصلّي تحية المسجد؟
الجواب
ಉತ್ತರ 1.
ಸಈ ಮಾಡುವ ಸ್ಥಳ ಮಸ್ಜಿದುಲ್ ಹರಾಂನ ಭಾಗವಲ್ಲ ಎಂದು ತೋರುತ್ತದೆ. ಈ ಕಾರಣದಿಂದಲೇ ಅವೆರಡರ ಮಧ್ಯೆ ಒಂದು ಗೋಡೆಯನ್ನು ನಿರ್ಮಿಸಿದ್ದಾರೆ. ಆದರೆ ಆ ಗೋಡೆ ಗಿಡ್ಡವಾಗಿದೆ. ಒಟ್ಟಿನಲ್ಲಿ ಇದೊಂದು ಒಳಿತೆನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇದನ್ನು ಮಸೀದಿಗೆ ಸೇರಿಸಿ, ಅದರ ಭಾಗವೆಂದು ಪರಿಗಣಿಸಿದ್ದರೆ, ತವಾಫ್ ನಿರ್ವಹಿಸಿ ಸಈ ನಿರ್ವಹಿಸುವುದಕ್ಕೆ ಮೊದಲು ಮಹಿಳೆಯರಿಗೆ ಮುಟ್ಟು ಪ್ರಾರಂಭವಾದರೆ, ಅವರು ಸಈ ಮಾಡುವುದಕ್ಕೆ ಇದು ತಡೆಯಾಗುತ್ತಿತ್ತು.
ಈ ಬಗ್ಗೆ ನಾನು ನೀಡುವ ಫತ್ವಾ ಏನೆಂದರೆ, ತವಾಫ್ ನಿರ್ವಹಿಸಿ ಸಈ ನಿರ್ವಹಿಸುವ ಮೊದಲು ಮಹಿಳೆಗೆ ಮುಟ್ಟು ಪ್ರಾರಂಭವಾದರೆ, ಅವಳು ಸಈ ಮಾಡಬಹುದು. ಏಕೆಂದರೆ, ಸಈ ಮಾಡುವ ಸ್ಥಳವು ಮಸೀದಿಯ ಭಾಗವಲ್ಲ.
ತಹಿಯ್ಯತುಲ್-ಮಸ್ಜಿದ್ ನಮಾಝ್ನ ಬಗ್ಗೆ ಹೇಳುವುದಾದರೆ, ಒಬ್ಬ ವ್ಯಕ್ತಿ ತವಾಫ್ ನಿರ್ವಹಿಸಿದ ಬಳಿಕ ಸಈ ನಿರ್ವಹಿಸಿ, ನಂತರ ಮಸೀದಿಗೆ ಮರಳಿದರೆ, ಅವನು ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸಬೇಕು. ಅದನ್ನು ನಿರ್ವಹಿಸದಿದ್ದರೆ ಅದರಲ್ಲೇನೂ ದೋಷವಿಲ್ಲ.
ಆದರೆ, ಮಸ್ಜಿದುಲ್ ಹರಾಂನಲ್ಲಿ ನಮಾಝ್ ಮಾಡುವುದಕ್ಕೆ ಬಹಳ ಶ್ರೇಷ್ಠತೆಯಿರುವುದರಿಂದ ಆ ಸಂದರ್ಭವನ್ನು ಸದುಪಯೋಗಪಡಿಸಿ, ಅಲ್ಲಿ ಎರಡು ರಕಅತ್ ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸುವುದು ಉತ್ತಮ.
ﺟ56: الّذي يظهر أن المسعى ليس من المسجد، ولذلك جعلوا جدارًا فاصلًا بينهما، لكنه جدارٌ قصيرٌ، ولا شك أن هذا خيرٌ للناس؛ لأنه لو أدخل في المسجد وجعل منه، لكانت المرأة إذا حاضت بين الطواف والسعي امتنع عليها أن تسعى.
والّذي أفتي به: أنها إذا حاضت بعد الطواف وقبل السعي فإنها تسعى؛ لأن المسعى لا يعتبر من المسجد.
وأما تحية المسجد فقد يقال: إن الإنسان إذا سعى بعد الطواف، ثم عاد إلى المسجد، فإنه يصلّيها، ولو ترك تحية المسجد فلا شيء عليه،
والأفضل أن ينتهز الفرصة، ويصلّي ركعتين؛ لـما في الصلاة في هذا المكان من الفضل.