ನಾನು ಹಜ್ಜ್ಗೆ ಹೋದಾಗ ನನಗೆ ಮುಟ್ಟು ಪ್ರಾರಂಭವಾಯಿತು. ಸಂಕೋಚದಿಂದಾಗಿ ನಾನು ಅದನ್ನು ಯಾರಿಗೂ ಹೇಳದೆ ಮುಚ್ಚಿಟ್ಟೆ. ನಾನು ಹರಮ್ ಪ್ರವೇಶಿಸಿ ನಮಾಝ್ ಮಾಡಿದೆ, ತವಾಫ್ ಮಾಡಿದೆ, ಸಈ ಮಾಡಿದೆ. ನನಗೆ ಮುಟ್ಟು ಉಂಟಾದದ್ದು ಪ್ರಸವಾನಂತರವಾಗಿದೆ. ಹೀಗಿರುವಾಗ ನನ್ನ ವಿಧಿಯೇನು?
السؤال
ಪ್ರಶ್ನೆ 1.
ನಾನು ಹಜ್ಜ್ಗೆ ಹೋದಾಗ ನನಗೆ ಮುಟ್ಟು ಪ್ರಾರಂಭವಾಯಿತು. ಸಂಕೋಚದಿಂದಾಗಿ ನಾನು ಅದನ್ನು ಯಾರಿಗೂ ಹೇಳದೆ ಮುಚ್ಚಿಟ್ಟೆ. ನಾನು ಹರಮ್ ಪ್ರವೇಶಿಸಿ ನಮಾಝ್ ಮಾಡಿದೆ, ತವಾಫ್ ಮಾಡಿದೆ, ಸಈ ಮಾಡಿದೆ. ನನಗೆ ಮುಟ್ಟು ಉಂಟಾದದ್ದು ಪ್ರಸವಾನಂತರವಾಗಿದೆ. ಹೀಗಿರುವಾಗ ನನ್ನ ವಿಧಿಯೇನು?
س57: حججت، وجاءتني الدورة الشهرية، فاستحييت أن أخبر أحدًا، ودخلت الحرم، فصليت، وطفت، وسعيت، فماذا علي، علمًا بأنها جاءت بعد النّفاس؟
الجواب
ಉತ್ತರ 1.
ಮುಟ್ಟು ಮತ್ತು ಪ್ರಸವಾನಂತರದ ರಕ್ತಸ್ರಾವವನ್ನು ಹೊಂದಿರುವ ಮಹಿಳೆ ನಮಾಝ್ ಮಾಡುವುದು ನಿಷಿದ್ಧವಾಗಿದೆ. ಅದು ಮಕ್ಕಾದಲ್ಲಿ, ಊರಿನಲ್ಲಿ ಅಥವಾ ಇತರ ಯಾವುದೇ ಸ್ಥಳದಲ್ಲಾದರೂ ಸಹ.
ಏಕೆಂದರೆ, ಮಹಿಳೆಯರ ವಿಷಯದಲ್ಲಿ ಪ್ರವಾದಿ(ಸ) ರವರು ಹೇಳುತ್ತಾರೆ: “ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?”
ಮುಟ್ಟಿನಲ್ಲಿರುವ ಮಹಿಳೆ ಉಪವಾಸ ಆಚರಿಸಬಾರದು ಮತ್ತು ನಮಾಝ್ ಮಾಡಬಾರದು ಎಂದು ವಿದ್ವಾಂಸರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಈ ಕೃತ್ಯವನ್ನು ಮಾಡಿದ ಮಹಿಳೆ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಟ್ಟು ಮಾಡಿದ ಕೃತ್ಯಕ್ಕಾಗಿ ಕ್ಷಮೆಯಾಚಿಸಬೇಕು.
ಮುಟ್ಟಿನ ಸಂದರ್ಭದಲ್ಲಿ ಅವಳು ನಿರ್ವಹಿಸಿದ ತವಾಫ್ ಸಿಂಧುವಲ್ಲ. ಆದರೆ ಸಈ ಸಿಂಧುವಾಗಿದೆ. ಪ್ರಬಲ ಅಭಿಪ್ರಾಯದ ಪ್ರಕಾರ ತವಾಫ್ ಮೊದಲು ಸಈ ಮಾಡಬಹುದು. ಆದ್ದರಿಂದ ಅವಳು ಪುನಃ ತವಾಫ್ ನಿರ್ವಹಿಸಬೇಕು. ಏಕೆಂದರೆ ತವಾಫುಲ್ ಇಫಾದ ಹಜ್ಜ್ನ ಒಂದು ಸ್ತಂಭವಾಗಿದೆ. ಅದು ನಿರ್ವಹಿಸದಿದ್ದರೆ ಎರಡನೇ ತಹಲ್ಲುಲ್ (ಇಹ್ರಾಮ್ನಿಂದ ಹೊರಬರುವುದು) ಸಾಧ್ಯವಿಲ್ಲ.
ಆದ್ದರಿಂದ, ಈ ಮಹಿಳೆ ವಿವಾಹಿತೆಯಾಗಿದ್ದರೆ, ಅವಳು ತವಾಫ್ ನಿರ್ವಹಿಸುವ ತನಕ ಅವಳ ಗಂಡ ಅವಳೊಡನೆ ಸಂಭೋಗ ಮಾಡಬಾರದು. ಅವಳು ಅವಿವಾಹಿತೆಯಾಗಿದ್ದರೆ ಅವಳು ತವಾಫ್ ನಿರ್ವಹಿಸುವ ತನಕ ಅವಳು ಮದುವೆಯಾಗಬಾರದು. ಹೆಚ್ಚು ಬಲ್ಲವನು ಅಲ್ಲಾಹು.
ﺟ57: لا يحلّ للمرأة إذا كانت حائضًا أو نفساء أن تصلّي، سواء في مكة أو في بلدها أو في أيّ مكانٍ؛ لقول النبيّ ﷺ في المرأة:
«أَلَيْسَ إِذَا حَاضَتْ لَمْ تُصَلِّ، وَلَمْ تَصُمْ؟» [1]،
وقد أجمع المسلمون على أنه لا يحلّ لحائضٍ أن تصوم، ولا يحلّ لها أن تصلّي.
[28] تقدم تخريجه.
وعلى هذه المرأة التي فعلت ذلك، عليها أن تتوب إلى الله، وأن تستغفر ممّا وقع منها.
وأما طوافها حال الحيض فهو غير صحيحٍ، وأما سعيها فصحيحٌ؛ لأن القول الراجح جواز تقديم السعي على الطواف في الحجّ، وعلى هذا فيجب عليها أن تعيد الطواف؛ لأن طواف الإفاضة ركنٌ من أركان الحجّ، ولا يتمّ التحلّل الثاني إلا به.
وبناءً عليه فإن هذه المرأة لا يباشرها زوجها -إن كانت متزوّجةً- حتى تطوف، ولا يعقد عليها النّكاح -إن كانت غير متزوّجةٍ- حتى تطوف، والله تعالى أعلم.