ನಾನು ಮತ್ತು ನನ್ನ ಪರಿವಾರ ಉಮ್ರಾಕ್ಕಾಗಿ ಯಂಬೂ ದಿಂದ ಹೊರಟೆವು. ಆದರೆ ಜಿದ್ದಾ ತಲುಪಿದಾಗ ನನ್ನ ಹೆಂಡತಿಗೆ ಮುಟ್ಟು ಪ್ರಾರಂಭವಾಯಿತು. ನಾನು ನನ್ನ ಹೆಂಡತಿಯನ್ನು ಬಿಟ್ಟು ಒಂಟಿಯಾಗಿ ಉಮ್ರಾ ಪೂರ್ಣಗೊಳಿಸಿದೆ. ನನ್ನ ಹೆಂಡತಿಯ ವಿಷಯದಲ್ಲಿ ವಿಧಿಯೇನು?
السؤال
ಪ್ರಶ್ನೆ 1.
ನಾನು ಮತ್ತು ನನ್ನ ಪರಿವಾರ ಉಮ್ರಾಕ್ಕಾಗಿ ಯಂಬೂ ದಿಂದ ಹೊರಟೆವು. ಆದರೆ ಜಿದ್ದಾ ತಲುಪಿದಾಗ ನನ್ನ ಹೆಂಡತಿಗೆ ಮುಟ್ಟು ಪ್ರಾರಂಭವಾಯಿತು. ನಾನು ನನ್ನ ಹೆಂಡತಿಯನ್ನು ಬಿಟ್ಟು ಒಂಟಿಯಾಗಿ ಉಮ್ರಾ ಪೂರ್ಣಗೊಳಿಸಿದೆ. ನನ್ನ ಹೆಂಡತಿಯ ವಿಷಯದಲ್ಲಿ ವಿಧಿಯೇನು?
س55: لقد قدمت من ينبع للعمرة أنا وأهلي، ولكن حين وصولي إلى جدة أصبحت زوجتي حائضًا، ولكنّي أكملت العمرة بمفردي دون زوجتي، فما الحكم بالنّسبة لزوجتي؟
الجواب
ಉತ್ತರ 1.
ನಿಮ್ಮ ಹೆಂಡತಿಗೆ ಸಂಬಂಧಿಸಿದಂತೆ ಅವಳು ಶುದ್ಧಳಾಗುವ ತನಕ ಕಾದು ನಂತರ ಉಮ್ರಾ ನಿರ್ವಹಿಸಬೇಕು.
ಸಫಿಯ್ಯ(ರ) ರಿಗೆ ಮುಟ್ಟಾದಾಗ ಪ್ರವಾದಿ(ಸ) ರವರು ಕೇಳಿದರು: "ಅವಳು ನಮ್ಮನ್ನು ನಿರ್ಗಮಿಸುವುದರಿಂದ ತಡೆಯುತ್ತಿದ್ದಾಳೆಯೇ?" ಅವರು ಉತ್ತರಿಸಿದರು: "ಅವಳು ತವಾಫುಲ್ ಇಫಾದ ನಿರ್ವಹಿಸಿದ್ದಾರೆ." ಆಗ ಪ್ರವಾದಿ(ಸ) ರವರು ಹೇಳಿದರು: “ಹಾಗಿದ್ದರೆ ಅವರು (ಸಫಿಯ್ಯ) ಇಲ್ಲಿಂದ ಹೊರಡಲಿ.”
"ಅವಳು ನಮ್ಮನ್ನು ನಿರ್ಗಮಿಸುವುದರಿಂದ ತಡೆಯುತ್ತಿದ್ದಾಳೆಯೇ?" ಎಂಬ ಪ್ರವಾದಿ(ಸ) ರವರ ಪ್ರಶ್ನೆಯು, ಮಹಿಳೆ ತವಾಫುಲ್-ಇಫಾದ ನಿರ್ವಹಿಸುವುದಕ್ಕೆ ಮೊದಲು ಮುಟ್ಟಾದರೆ, ಶುದ್ಧಳಾಗುವ ತನಕ ಕಾದು ನಂತರ ತವಾಫ್ ನಿರ್ವಹಿಸಬೇಕೆಂದು ಸೂಚಿಸುತ್ತದೆ.
ಉಮ್ರಾದ ತವಾಫ್ ಕೂಡ ತವಾಫುಲ್-ಇಫಾದಕ್ಕೆ ಸಮಾನವಾಗಿದೆ. ಏಕೆಂದರೆ ಅದು ಉಮ್ರಾದ ಒಂದು ಸ್ತಂಭವಾಗಿದೆ. ತವಾಫ್ ನಿರ್ವಹಿಸುವುದಕ್ಕೆ ಮೊದಲು ಮಹಿಳೆಯರಿಗೆ ಮುಟ್ಟು ಪ್ರಾರಂಭವಾದರೆ, ಶುದ್ಧಳಾಗುವ ತನಕ ಕಾದು ನಂತರ ತವಾಫ್ ನಿರ್ವಹಿಸಬೇಕು.
ﺟ55: الحكم بالنّسبة لزوجتك: أن تبقى حتى تطهر، ثم تقضي عمرتها؛ لأن النبي ﷺ لـما حاضت صفية رضي الله عنها قال:
«أَحَابِسَتُنَا هِيَ؟» قَالُوا: إِنَّهَا قَدْ أَفَاضَتْ. قَالَ: «فَلْتَنْفِرْ إِذًا» [1]،
فقوله ﷺ: «أحابستنا هي؟» دليلٌ على أنه يجب على المرأة أن تبقى -إذا حاضت قبل طواف الإفاضة- حتى تطهر، ثمّ تطوف.
[27] تقدم تخريجه.
وكذلك طواف العمرة مثل طواف الإفاضة؛ لأنه ركنٌ من العمرة، فإذا حاضت المعتمرة قبل الطواف انتظرت حتى تطهر، ثم تطوف.