ನಾನು ನಮಾಝ್ ಮಾಡುತ್ತಿರುವಾಗ ನನ್ನ ಮುಟ್ಟು ಪ್ರಾರಂಭವಾಯಿತು. ನಾನೇನು ಮಾಡಬೇಕು? ಮುಟ್ಟಿನ ಸಮಯದ ನಮಾಝನ್ನು ನಾನು ಕಝಾ ನಿರ್ವಹಿಸಬೇಕೇ?
السؤال
ಪ್ರಶ್ನೆ 1.
ನಾನು ನಮಾಝ್ ಮಾಡುತ್ತಿರುವಾಗ ನನ್ನ ಮುಟ್ಟು ಪ್ರಾರಂಭವಾಯಿತು. ನಾನೇನು ಮಾಡಬೇಕು? ಮುಟ್ಟಿನ ಸಮಯದ ನಮಾಝನ್ನು ನಾನು ಕಝಾ ನಿರ್ವಹಿಸಬೇಕೇ?
س32: دخلت عليّ العادة الشهرية أثناء الصلاة، ماذا أفعل؟ وهل أقضي الصلاة عن مدة الحيض؟
الجواب
ಉತ್ತರ 1.
ನಮಾಝಿನ ಸಮಯವು ಆರಂಭವಾದ ನಂತರ ಮುಟ್ಟು ಉಂಟಾದರೆ—ಅಂದರೆ ಉದಾಹರಣೆಗೆ, ಮಧ್ಯಾಹ್ನ ಅರ್ಧ ಗಂಟೆಯ ನಂತರ ಉಂಟಾದರೆ—ಶುದ್ಧಳಾದ ನಂತರ ಈ ನಮಾಝನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಮುಟ್ಟಾಗುವುದಕ್ಕೆ ಮೊದಲೇ ಈ ನಮಾಝಿನ ಸಮಯವು ಆರಂಭವಾಗಿದೆ.
ಅಲ್ಲಾಹನು ಹೇಳುತ್ತಾನೆ: "ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ." [ನಿಸಾಅ್: 103]
ಮುಟ್ಟಿನ ಸಮಯದಲ್ಲಿ ಬಿಟ್ಟುಹೋದ ನಮಾಝ್ಗಳನ್ನು ಕಝಾ ನಿರ್ವಹಿಸಬೇಕಾಗಿಲ್ಲ. ಏಕೆಂದರೆ, ಒಂದು ದೀರ್ಘ ಹದೀಸಿನಲ್ಲಿ ಪ್ರವಾದಿ(ಸ) ರವರು ಹೇಳುತ್ತಾರೆ:
“ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?”
ಮುಟ್ಟಿನ ಸಮಯದಲ್ಲಿ ಬಿಟ್ಟುಹೋದ ನಮಾಝ್ಗಳನ್ನು ಕಝಾ ನಿರ್ವಹಿಸಬೇಕಾಗಿಲ್ಲ ಎಂದು ವಿದ್ವಾಂಸರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಅವಳು ಶುದ್ಧಳಾದ ನಂತರ ಆ ಸಮಯದ ನಮಾಝ್ನ ಒಂದು ರಕಅತ್ ಅಥವಾ ಅದಕ್ಕಿಂತ ಹೆಚ್ಚು ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ ಅವಳು ಆ ಸಮಯದ ನಮಾಝನ್ನು ನಿರ್ವಹಿಸಬೇಕು. ಏಕೆಂದರೆ, ಪ್ರವಾದಿ(ಸ) ರವರು ಹೇಳುತ್ತಾರೆ:
“ಯಾರಿಗೆ ಸೂರ್ಯೋದಯವಾಗುವುದಕ್ಕೆ ಮೊದಲು ಅಸರ್ ನಮಾಝಿನ ಒಂದು ರಕಅತ್ ದೊರಕುತ್ತದೋ ಅವನಿಗೆ ಅಸರ್ ನಮಾಝ್ ದೊರಕುತ್ತದೆ.”
ಅವಳು ಅಸರ್ ನಮಾಝಿನ ಸಮಯದಲ್ಲಿ ಶುದ್ಧಳಾಗಿ ಸೂರ್ಯಾಸ್ತವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ, ಅವಳು ಅಸರ್ ನಮಾಝ್ ನಿರ್ವಹಿಸಬೇಕು. ಅದೇ ರೀತಿ, ಅವಳು ಸೂರ್ಯೋದಯಕ್ಕೆ ಮೊದಲು ಶುದ್ಧಳಾಗಿ ಸೂರ್ಯೋದಯವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ, ಅವಳು ಫಜ್ರ್ ನಮಾಝ್ ನಿರ್ವಹಿಸಬೇಕು.
ﺟ32: إذا حدث الحيض بعد دخول وقت الصلاة -كأن حاضت بعد الزوال بنصف ساعةٍ مثلًا- فإنها بعد أن تطهر من الحيض تقضي هذه الصلاة التي دخل وقتها وهي طاهرٌ؛ لقوله تعالى:
﴿...إِنَّ ٱلصَّلَوٰةَ كَانَتۡ عَلَى ٱلۡمُؤۡمِنِينَ كِتَٰبٗا مَّوۡقُوتٗا﴾
[النساء:103].
ولا تقضي الصلاة عن وقت الحيض؛ لقوله ﷺ في الحديث الطويل:
«أَلَيْسَتْ إِذَا حَاضَتْ لَمْ تُصَلِّ، وَلَمْ تَصُمْ؟» [1]،
وأجمع أهل العلم أنها لا تقضي الصلاة التي فاتتها أثناء مدة الحيض.
[12] تقدم تخريجه.
أما إذا طهرت، وكان باقيًا من الوقت مقدار ركعةٍ فأكثر، فإنها تصلّي ذلك الوقت الذي طهرت فيه؛ لقوله ﷺ:
«مَنْ أَدْرَكَ رَكْعَةً مِنَ الْعَصْرِ قَبْلَ أَنْ تَغْرُبَ الشَّمْسُ، فَقَدْ أَدْرَكَ الْعَصْرَ» [2]،
فإذا طهرت وقت العصر، أو قبل طلوع الشمس، وكان باقيًا على غروب الشمس أو طلوعها مقدار ركعةٍ، فإنها تصلّي العصر في المسألة الأولى، والفجر في المسألة الثانية.
[13] تقدم تخريجه.