Skip to content
ಸೂರಗಳ ಪಟ್ಟಿ /

الانشِقَاق

الانشِقَاق is chapter 84 of the Quran and has 25 verses. This page presents it in full in the Uthmani script, with a verse-by-verse translation of its meaning.

25 ಆಯತ್‌ಗಳು ಸೂರ ಸಂಖ್ಯೆ 84
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

إِذَا ٱلسَّمَآءُ ٱنشَقَّتۡ

ಆಕಾಶವು ಒಡೆದು ಸೀಳುವಾಗ.

وَأَذِنَتۡ لِرَبِّهَا وَحُقَّتۡ

ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.

Explanation & meanings · 1
  1. ಅಂದರೆ ಒಡೆದು ಸೀಳಾಗಬೇಕೆಂಬ ಆಜ್ಞೆ ಸಿಕ್ಕಿದ ಕೂಡಲೆ ಆಕಾಶವು ಆ ಆಜ್ಞೆಯನ್ನು ಅನುಸರಿಸುತ್ತದೆ. ಅಲ್ಲಾಹನ ಆಜ್ಞೆಗಳನ್ನು ಅನುಸರಿಸುವುದು ಅದಕ್ಕೆ ಅರ್ಹವಾಗಿದೆ. ಏಕೆಂದರೆ ಅದು ಅಲ್ಲಾಹನಿಗೆ ಸಂಪೂರ್ಣ ವಿಧೇಯವಾಗಿದೆ.

وَإِذَا ٱلۡأَرۡضُ مُدَّتۡ

ಭೂಮಿಯು ವಿಸ್ತರಿಸಲಾಗುವಾಗ.

وَأَلۡقَتۡ مَا فِيهَا وَتَخَلَّتۡ

ಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ.

وَأَذِنَتۡ لِرَبِّهَا وَحُقَّتۡ

ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.