ستون سؤالا في أحكام الحيض والنفاس
*
These files are generated automatically from the book's text; their layout may differ from the printed edition.
*
*
ಪ್ರಶ್ನೆ 1.
ಉತ್ತರ 1.
ಪ್ರಶ್ನೆ 2.
ಉತ್ತರ 2.
ಪ್ರಶ್ನೆ 3.
ಉತ್ತರ 3.
ಪ್ರಶ್ನೆ 4.
ಉತ್ತರ 4.
ಪ್ರಶ್ನೆ 5.
ಉತ್ತರ 5.
ಪ್ರಶ್ನೆ 6.
ಉತ್ತರ 6.
ಪ್ರಶ್ನೆ 7.
ಉತ್ತರ 7.
ಪ್ರಶ್ನೆ 8.
ಉತ್ತರ 8.
ಪ್ರಶ್ನೆ 9.
ಉತ್ತರ 9.
ಪ್ರಶ್ನೆ 10.
ಉತ್ತರ 10.
ಪ್ರಶ್ನೆ 11.
ಉತ್ತರ 11.
ಪ್ರಶ್ನೆ 12.
ಉತ್ತರ 12.
ಪ್ರಶ್ನೆ 13.
ಉತ್ತರ 13.
ಪ್ರಶ್ನೆ 14.
ಉತ್ತರ 14.
ಪ್ರಶ್ನೆ 15.
ಉತ್ತರ 15.
ಪ್ರಶ್ನೆ 16.
ಉತ್ತರ 16.
ಪ್ರಶ್ನೆ 17.
ಉತ್ತರ 17.
ಪ್ರಶ್ನೆ 18.
ಉತ್ತರ 18.
ಪ್ರಶ್ನೆ 19.
ಉತ್ತರ 19.
ಪ್ರಶ್ನೆ 20.
ಉತ್ತರ 20.
ಪ್ರಶ್ನೆ 21.
ಉತ್ತರ 21.
ಪ್ರಶ್ನೆ 22.
ಉತ್ತರ 22.
ಪ್ರಶ್ನೆ 23.
ಉತ್ತರ 23.
ಪ್ರಶ್ನೆ 24.
ಉತ್ತರ 24.
ಪ್ರಶ್ನೆ 25.
ಉತ್ತರ 25.
ಪ್ರಶ್ನೆ 26.
ಉತ್ತರ 26.
ಪ್ರಶ್ನೆ 27.
ಉತ್ತರ 27.
ಪ್ರಶ್ನೆ 28.
ಉತ್ತರ 28.
ಪ್ರಶ್ನೆ 29.
ಉತ್ತರ 29.
ಪ್ರಶ್ನೆ 30.
ಉತ್ತರ 30.
ಪ್ರಶ್ನೆ 31.
ಉತ್ತರ 31.
ಪ್ರಶ್ನೆ 32 .
ಉತ್ತರ 32.
ಪ್ರಶ್ನೆ 33.
ಉತ್ತರ 33.
ಪ್ರಶ್ನೆ 34.
ಉತ್ತರ 34.
ಪ್ರಶ್ನೆ 35.
ಉತ್ತರ 35.
ಪ್ರಶ್ನೆ 36.
ಉತ್ತರ 36.
ಪ್ರಶ್ನೆ 37.
ಉತ್ತರ 37.
ಪ್ರಶ್ನೆ 38.
ಉತ್ತರ 38.
ಪ್ರಶ್ನೆ 39.
ಉತ್ತರ 39.
ಪ್ರಶ್ನೆ 40.
ಉತ್ತರ 40.
ಪ್ರಶ್ನೆ 41.
ಉತ್ತರ 41.
ಪ್ರಶ್ನೆ 42.
ಉತ್ತರ 42.
ಪ್ರಶ್ನೆ 43.
ಉತ್ತರ 43.
ಪ್ರಶ್ನೆ 44.
ಉತ್ತರ 44.
ಪ್ರಶ್ನೆ 45.
ಉತ್ತರ 45.
ಪ್ರಶ್ನೆ 46.
ಉತ್ತರ 46.
ಪ್ರಶ್ನೆ 47.
ಉತ್ತರ 47.
ಏಕೆಂದರೆ, ಅಬೂಬಕರ್(ರ) ರವರ ಪತ್ನಿ ಅಸ್ಮಾ ಬಿಂತ್ ಉಮೈಸ್(ರ) ರಿಗೆ ದುಲ್ ಹುಲೈಫಾ ಎಂಬ ಸ್ಥಳದಲ್ಲಿ ಹೆರಿಗೆ ಸ್ರಾವ ಉಂಟಾದಾಗ, ಪ್ರವಾದಿ(ಸ) ರವರು ಅವರೊಂದಿಗೆ ಸ್ನಾನ ಮಾಡಿ, ಬಟ್ಟೆಯನ್ನು ಕಟ್ಟಿ, ಇಹ್ರಾಮ್ಗೆ ಪ್ರವೇಶಿಸಲು ಆದೇಶಿಸಿದರು. ಈ ವಿಧಿ ಮುಟ್ಟಾದವರಿಗೂ ಅನ್ವಯಿಸುತ್ತದೆ. ಅವರು ಶುದ್ಧರಾಗುವ ತನಕ ಇಹ್ರಾಮ್ನಲ್ಲೇ ಇರಬೇಕು. ನಂತರ ತವಾಫ್ ಮತ್ತು ಸಈ ನಿರ್ವಹಿಸಬಹುದು.
ಪ್ರಶ್ನೆ 48.
ಉತ್ತರ 48.
ಪ್ರಶ್ನೆ 49.
ಉತ್ತರ 49.
ಪ್ರಶ್ನೆ 50.
ಉತ್ತರ 50.
ಪ್ರಶ್ನೆ 51.
ಉತ್ತರ 51.
ಪ್ರಶ್ನೆ 52.
ಉತ್ತರ 52.
ಪ್ರಶ್ನೆ 53.
ಉತ್ತರ 53.
ಪ್ರಶ್ನೆ 54.
ಉತ್ತರ 54.
ಪ್ರಶ್ನೆ 55.
ಉತ್ತರ 55.
ಪ್ರಶ್ನೆ 56.
ಉತ್ತರ 56.
ಪ್ರಶ್ನೆ 57.
ಉತ್ತರ 57.
ಪ್ರಶ್ನೆ 58.
ಉತ್ತರ 58.
ಪ್ರಶ್ನೆ 59.
ಉತ್ತರ 59.
ಪ್ರಶ್ನೆ 60.
ಉತ್ತರ 60.
ಏಕೆಂದರೆ, ಮುಟ್ಟಿನಲ್ಲಿರುವವರು ತವಾಫ್ ಮಾಡುವುದನ್ನು ಪ್ರವಾದಿ(ಸ) ರವರು ವಿರೋಧಿಸಿದ್ದಾರೆ. ಇದು ಪ್ರಸವಾನಂತರದ ರಕ್ತಸ್ರಾವಕ್ಕೂ ಅನ್ವಯಿಸುತ್ತದೆ.
[1] ಖಮಿರ ಎಂದರೆ ನಮಾಝ್ ಮಾಡುವ ಚಾಪೆ. ಇದು ಮುಖವನ್ನು ಮುಚ್ಚುವುದರಿಂದ ಇದಕ್ಕೆ ಖಮಿರ ಎಂಬ ಹೆಸರು ಬಂದಿದೆ.
ಮುಟ್ಟು ಮತ್ತು ಪ್ರಸವಾನಂತರ ಸ್ರಾವದ ನಿಯಮಗಳ ಬಗ್ಗೆ 60 ಪ್ರಶ್ನೆಗಳು
*
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಮುನ್ನುಡಿ
ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಅವನ ಕೃಪೆ ಮತ್ತು ಶಾಂತಿಯು ಅಂತಿಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಅಂತ್ಯದಿನದವರೆಗೂ ಅವರನ್ನು ಅನುಸರಿಸುವವರ ಮೇಲೆ ಇರಲಿ!
ಮುಸ್ಲಿಂ ಸಹೋದರಿಯರೇ!
ಆರಾಧನಾ ಕರ್ಮಗಳಲ್ಲಿ ಮುಟ್ಟಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಮಹಿಳೆಯರು ವಿದ್ವಾಂಸರೊಡನೆ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಪದೇ ಪದೇ ಕೇಳಲಾಗುವ ಆ ಎಲ್ಲಾ ಪ್ರಶ್ನೆಗಳನ್ನು ಸಂಗ್ರಹಿಸಿ, ಆಳವಾಗಿ ಉತ್ತರಿಸುವ ಗೋಜಿಗೆ ಹೋಗದೆ, ಸಂಕ್ಷಿಪ್ತವಾಗಿ ವಿವರಿಸಲು ನಿರ್ಧರಿಸಿದ್ದೇನೆ.
ಮುಸ್ಲಿಂ ಸಹೋದರಿಯರೇ!
ಅಲ್ಲಾಹನ ಕಾನೂನುಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖವಾಗಿರುವುದರಿಂದ, ಮತ್ತು ನೀವು ಅಲ್ಲಾಹನನ್ನು ಸರಿಯಾದ ಜ್ಞಾನ ಮತ್ತು ಒಳದೃಷ್ಟಿಯಿಂದ ಆರಾಧಿಸಬೇಕೆಂಬ ಉದ್ದೇಶದಿಂದ, ಈ ಎಲ್ಲಾ ವಿಷಯಗಳು ನಿಮ್ಮ ಕೈಗೆಟಕುವ ವ್ಯಾಪ್ತಿಯಲ್ಲಿರಲು ನಾವು ಈ ಎಲ್ಲಾ ಪ್ರಶ್ನೆಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ರಚಿಸಲು ಆಸಕ್ತಿ ತೋರಿದ್ದೇವೆ.
ಸೂಚನೆ: ಈ ಪುಸ್ತಕವನ್ನು ಮೊದಲ ಬಾರಿ ಓದುವವರಿಗೆ ಇದರಲ್ಲಿ ಕೆಲವು ಪ್ರಶ್ನೆಗಳನ್ನು ಪುನರಾವರ್ತಿಸಲಾಗಿದೆಯೆಂದು ಭಾಸವಾಗಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ, ಒಂದು ಉತ್ತರದಲ್ಲಿ ಇನ್ನೊಂದು ಉತ್ತರದಲ್ಲಿಲ್ಲದ ಕೆಲವು ಹೆಚ್ಚುವರಿ ಮಾಹಿತಿಗಳಿರುವುದನ್ನು ಕಾಣಬಹುದು. ಆ ಮಾಹಿತಿಗಳನ್ನು ಕಡೆಗಣಿಸಬಾರದೆಂಬ ಉದ್ದೇಶದಿಂದ ನಾವು ಅವುಗಳನ್ನು ಪುನರಾವರ್ತಿಸಿದ್ದೇವೆ.
ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
ನಮಾಝ್ ಮತ್ತು ಉಪವಾಸಕ್ಕೆ ಸಂಬಂಧಿಸಿದ ಮುಟ್ಟಿನ ನಿಯಮಗಳು
ಪ್ರಭಾತವು ಉದಯವಾದ ನಂತರ ಕೆಲವೇ ಕ್ಷಣಗಳಲ್ಲಿ ಮಹಿಳೆಯು ಮುಟ್ಟಿನಿಂದ ಶುದ್ಧಳಾದರೆ, ಅವಳು ಆ ದಿನ ಆಹಾರ-ಪಾನೀಯಗಳನ್ನು ತೊರೆದು ಉಪವಾಸ ಆಚರಿಸಬೇಕೇ? ಉಪವಾಸ ಆಚರಿಸಿದರೆ ಆ ಉಪವಾಸ ಸಿಂಧುವಾಗುವುದೇ? ಅಥವಾ ಆ ದಿನದ ಉಪವಾಸವನ್ನು ಪುನಃ ನಿರ್ವಹಿಸಬೇಕೇ?
ಪ್ರಭಾತವು ಉದಯವಾದ ನಂತರ ಮಹಿಳೆಯು ಶುದ್ಧಳಾದರೆ, ಅವಳು ಆ ದಿನ ಆಹಾರ-ಪಾನೀಯಗಳನ್ನು ತೊರೆಯಬೇಕೋ ಬೇಡವೋ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಎರಡು ಅಭಿಪ್ರಾಯಗಳಿವೆ:
ಮೊದಲನೆಯ ಅಭಿಪ್ರಾಯ ಏನೆಂದರೆ, ಅವಳು ಆ ದಿನದ ಉಳಿದ ಭಾಗದಲ್ಲಿ ಆಹಾರ-ಪಾನೀಯಗಳನ್ನು ಸೇವಿಸಬಾರದು. ಆದರೆ ಅದನ್ನು ಉಪವಾಸವೆಂದು ಎಣಿಸಲಾಗುವುದಿಲ್ಲ. ಅವಳು ಆ ದಿನದ ಉಪವಾಸವನ್ನು ನಂತರ ಪುನಃ ನಿರ್ವಹಿಸಬೇಕು. ಇದು ಇಮಾಂ ಅಹ್ಮದ್ರ ಪ್ರಸಿದ್ಧ ಅಭಿಪ್ರಾಯವಾಗಿದೆ. ಅವರ ಮೇಲೆ ಅಲ್ಲಾಹು ದಯೆ ತೋರಲಿ.
ಎರಡನೆಯ ಅಭಿಪ್ರಾಯವೇನೆಂದರೆ, ಅವಳು ಆ ದಿನದ ಉಳಿದ ಭಾಗದಲ್ಲಿ ಆಹಾರ-ಪಾನೀಯಗಳನ್ನು ತೊರೆಯಬೇಕಾಗಿಲ್ಲ. ಏಕೆಂದರೆ, ಆ ದಿನ ಅವಳು ಉಪವಾಸ ಆಚರಿಸಿದರೆ ಅದು ಸಿಂಧುವಾಗುವುದಿಲ್ಲ. ಕಾರಣ, ಅವಳು ಆ ದಿನದ ಆರಂಭದ ಭಾಗದಲ್ಲಿ ಮುಟ್ಟಿನಲ್ಲಿದ್ದು, ಅವಳಿಗೆ ಉಪವಾಸವು ಕಡ್ಡಾಯವಿರಲಿಲ್ಲ. ಆ ದಿನದ ಉಳಿದ ಭಾಗದಲ್ಲಿ ಅವಳು ಉಪವಾಸ ಆಚರಿಸಿಯೂ ಅದು ಸಿಂಧುವಾಗುವುದಿಲ್ಲವೆಂದಾದರೆ ಅವಳು ಆ ದಿನ ಉಪವಾಸ ಆಚರಿಸುವುದರಲ್ಲಿ ಅರ್ಥವಿಲ್ಲ. ಅವಳಿಗೆ ಸಂಬಂಧಿಸಿದಂತೆ ಆ ದಿನವು ಆಹಾರ-ಪಾನೀಯವನ್ನು ತೊರೆಯುವ ಮೂಲಕ ಗೌರವಿಸಬೇಕಾದ ದಿನವಲ್ಲ. ಏಕೆಂದರೆ, ಆ ದಿನದ ಮೊದಲ ಭಾಗದಲ್ಲಿ ಅವಳಿಗೆ ಆಹಾರ-ಪಾನೀಯ ಸೇವಿಸಲು ಆದೇಶಿಸಲಾಗಿತ್ತು. ಮಾತ್ರವಲ್ಲ, ಆ ಭಾಗದಲ್ಲಿ ಅವಳು ಉಪವಾಸ ಆಚರಿಸುವುದು ನಿಷಿದ್ಧವಾಗಿತ್ತು. ಇಸ್ಲಾಮೀ ಕಾನೂನಿನ ಪ್ರಕಾರ ಉಪವಾಸವೆಂದರೆ, ಅಲ್ಲಾಹನಿಗೆ ಆರಾಧನೆ ಸಲ್ಲಿಸುವ ರೂಪದಲ್ಲಿ ಪ್ರಭಾತದಿಂದ ತೊಡಗಿ ಸೂರ್ಯಾಸ್ತದ ತನಕ ಉಪವಾಸವನ್ನು ಮುರಿಯುವ ವಿಷಯಗಳಿಂದ ದೂರವಿರುವುದು.
ಆಹಾರ-ಪಾನೀಯಗಳನ್ನು ಸೇವಿಸಬಾರದು ಎಂಬ ಮೊದಲನೇ ಅಭಿಪ್ರಾಯಕ್ಕಿಂತ ಎರಡನೇ ಅಭಿಪ್ರಾಯವು ಪ್ರಬಲವಾಗಿದೆ. ಆದರೆ ಎರಡು ಅಭಿಪ್ರಾಯಗಳ ಪ್ರಕಾರವೂ ಅವಳು ಆ ಉಪವಾಸವನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗಿದೆ.
ಪ್ರಭಾತವು ಉದಯವಾಗುವ ಮೊದಲು ಮಹಿಳೆಯು ಮುಟ್ಟಿನಿಂದ ಶುದ್ಧಳಾಗಿ, ಪ್ರಭಾತದ ನಂತರ ಸ್ನಾನ ಮಾಡಿ, ನಮಾಝ್ ನಿರ್ವಹಿಸಿ, ಆ ದಿನದ ಉಪವಾಸವನ್ನು ಪೂರ್ಣಗೊಳಿಸಿದರೆ, ಅವಳು ಆ ಉಪವಾಸವನ್ನು ಪುನಃ ನಿರ್ವಹಿಸಬೇಕೇ?
ಪ್ರಭಾತವು ಉದಯವಾಗುವ ಮೊದಲು ಮಹಿಳೆಯು ಶುದ್ಧಳಾದರೆ ಮತ್ತು ತಾನು ಶುದ್ಧಳಾಗಿದ್ದೇನೆಂದು ಅವಳಿಗೆ ಖಾತ್ರಿಯಾದರೆ—ಅದು ಒಂದು ನಿಮಿಷ ಮೊದಲಾದರೂ ಸಹ—ಅದು ರಮದಾನ್ ತಿಂಗಳಲ್ಲಾಗಿದ್ದರೆ ಅವಳು ಆ ದಿನ ಉಪವಾಸ ಆಚರಿಸಬೇಕು. ಆ ಉಪವಾಸವು ಸಿಂಧುವಾಗಿದ್ದು, ಅವಳು ಅದನ್ನು ಪುನಃ ನಿರ್ವಹಿಸಬೇಕಾಗಿಲ್ಲ. ಏಕೆಂದರೆ ಅವಳು ಶುದ್ಧಳಾಗಿರುವ ಸ್ಥಿತಿಯಲ್ಲೇ ಉಪವಾಸ ಆಚರಿಸಿದ್ದಾಳೆ. ಅವಳು ಪ್ರಭಾತವು ಉದಯವಾದ ನಂತರ ಸ್ನಾನ ಮಾಡುವುದರಲ್ಲಿ ತೊಂದರೆಯಿಲ್ಲ. ಅದೇ ರೀತಿ, ಒಬ್ಬ ಪುರುಷನು ಸಂಭೋಗ ಅಥವಾ ಸ್ವಪ್ನಸ್ಖಲನದ ಕಾರಣದಿಂದ ದೊಡ್ಡ ಅಶುದ್ಧಿ (ಜನಾಬತ್) ಇರುವವನಾಗಿದ್ದು, ಸಹರಿಯ ಆಹಾರವನ್ನು ಸೇವಿಸಿ, ಪ್ರಭಾತವು ಉದಯವಾದ ನಂತರ ಸ್ನಾನ ಮಾಡಿದರೆ ಅವನ ಉಪವಾಸವು ಸಿಂಧುವಾಗಿದೆ.
ಮಹಿಳೆಯರಿಗೆ ಸಂಬಂಧಿಸಿದ ಇನ್ನೊಂದು ವಿಷಯವನ್ನು ಇಲ್ಲಿ ಸಾಂದರ್ಭಿಕವಾಗಿ ಸೂಚಿಸಲು ಬಯಸುತ್ತೇನೆ. ಅದೇನೆಂದರೆ, ಒಬ್ಬಳು ಮಹಿಳೆಗೆ ಉಪವಾಸವನ್ನು ಪೂರ್ತಿಗೊಳಿಸಿದ ನಂತರ ಮುಟ್ಟಾಗುವ ವಿಷಯ. ಇಂತಹ ಸಂದರ್ಭದಲ್ಲಿ, ಕೆಲವು ಮಹಿಳೆಯರು ಉಪವಾಸ ಪಾರಣೆ ಮಾಡಿದ ನಂತರ ಇಶಾ ನಮಾಝ್ ನಿರ್ವಹಿಸುವುದಕ್ಕೆ ಮೊದಲು (ಮಗ್ರಿಬ್ ಮತ್ತು ಇಶಾ ನಮಾಝ್ಗಳ ಮಧ್ಯೆ) ಮುಟ್ಟಾದರೆ ಆ ದಿನದ ಉಪವಾಸವು ಅಸಿಂಧುವಾಗಿದೆಯೆಂದು ಭಾವಿಸುತ್ತಾರೆ. ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ವಾಸ್ತವವಾಗಿ, ಸೂರ್ಯಾಸ್ತದ ನಂತರ—ಅದು ಒಂದು ಕ್ಷಣದ ನಂತರವಾದರೂ ಸಹ—ಮುಟ್ಟಾದರೆ, ಆ ದಿನದ ಉಪವಾಸವು ಪೂರ್ಣವಾಗಿದೆ ಮತ್ತು ಸಿಂಧುವಾಗಿದೆ.
ಹೆರಿಗೆಯಾದ ಮಹಿಳೆಯರು 40 ದಿನಗಳು ಪೂರ್ತಿಯಾಗುವುದಕ್ಕೆ ಮೊದಲೇ ಉಪವಾಸ ಮತ್ತು ನಮಾಝ್ ಆರಂಭಿಸಬಹುದೇ?
ಹೌದು, ಒಬ್ಬಳು ಮಹಿಳೆ ಹೆರಿಗೆಯಾಗಿ 40 ದಿನಗಳು ಪೂರ್ತಿಯಾಗುವುದಕ್ಕೆ ಮೊದಲೇ ಪ್ರಸವಾನಂತರದ ಸ್ರಾವದಿಂದ ಶುದ್ಧಳಾದರೆ—ಅದು ರಮದಾನ್ ತಿಂಗಳಲ್ಲಾಗಿದ್ದರೆ—ಅವಳು ಉಪವಾಸ ಆಚರಿಸುವುದು ಕಡ್ಡಾಯವಾಗಿದೆ. ನಮಾಝ್ ಮಾಡುವುದು ಕೂಡ ಕಡ್ಡಾಯವಾಗಿದೆ. ಅವಳ ಗಂಡನಿಗೆ ಅವಳೊಡನೆ ಲೈಂಗಿಕ ಸಂಭೋಗವನ್ನೂ ಮಾಡಬಹುದು. ಏಕೆಂದರೆ, ಅವಳು ಶುದ್ಧಳಾಗಿದ್ದು ಅವಳನ್ನು ಉಪವಾಸ, ನಮಾಝ್ ಮತ್ತು ಲೈಂಗಿಕ ಸಂಭೋಗದಿಂದ ತಡೆಯುವಂತಹ ಯಾವುದೂ ಇಲ್ಲ.
ಒಬ್ಬಳು ಮಹಿಳೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಏಳು ಅಥವಾ ಎಂಟು ದಿನಗಳಾಗಿದ್ದು, ಒಮ್ಮೊಮ್ಮೆ ಅದು ಅದಕ್ಕಿಂತಲೂ ಹೆಚ್ಚು ದಿನಗಳಿಗೆ ಮುಂದುವರಿದರೆ ಅದರ ವಿಧಿಯೇನು?
ಒಬ್ಬಳು ಮಹಿಳೆಯ ಮುಟ್ಟಿನ ಅವಧಿಯು ಸಾಮಾನ್ಯವಾಗಿ ಆರು ಅಥವಾ ಏಳು ದಿನಗಳಾಗಿದ್ದು, ಒಮ್ಮೊಮ್ಮೆ ಅದು ಎಂಟು, ಒಂಬತ್ತು, ಹತ್ತು ಅಥವಾ ಹನ್ನೊಂದು ದಿನಗಳಿಗೆ ಮುಂದುವರಿದರೆ, ಶುದ್ಧಳಾಗುವ ತನಕ ಅವಳು ನಮಾಝ್ ನಿರ್ವಹಿಸಬಾರದು. ಏಕೆಂದರೆ ಪ್ರವಾದಿ(ಸ) ರವರು ಮುಟ್ಟಿಗೆ ಒಂದು ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಿಲ್ಲ. ಅಲ್ಲಾಹು ಹೇಳುತ್ತಾನೆ: “ಅವರು ನಿಮ್ಮೊಂದಿಗೆ ಮುಟ್ಟಿನ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಮಲಿನವಾಗಿದೆ.” [ಬಕರ:222] ಆದ್ದರಿಂದ, ಮುಟ್ಟಿನ ರಕ್ತವು ಅಸ್ತಿತ್ವದಲ್ಲಿರುವ ತನಕ ಅವಳು ಮುಟ್ಟಿನಲ್ಲಿರುತ್ತಾಳೆ. ಮುಟ್ಟು ನಿಂತು ಅವಳು ಶುದ್ಧಳಾದರೆ, ಸ್ನಾನ ಮಾಡಿ ನಮಾಝ್ ನಿರ್ವಹಿಸಬಹುದು. ಮುಂದಿನ ತಿಂಗಳ ಮುಟ್ಟಿನ ಅವಧಿಯು ಇದಕ್ಕಿಂತ ಕಡಿಮೆಯಾದರೂ, ಶುದ್ಧಳಾದ ನಂತರ ಅವಳು ಸ್ನಾನ ಮಾಡಬೇಕು. ಅದು ಹಿಂದಿನ ಅವಧಿಗೆ ಸಮಾನವಾಗಿರದಿದ್ದರೂ ಸಹ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಮಹಿಳೆಯು ಮುಟ್ಟಿನ ಅವಧಿಯಲ್ಲಿರುವ ತನಕ ಅವಳು ನಮಾಝ್ ನಿರ್ವಹಿಸಬಾರದು. ಆ ಅವಧಿಯು ಅವಳ ಹಿಂದಿನ ಅವಧಿಗೆ ಸಮವಾಗಿದ್ದರೂ, ಅಥವಾ ಅದಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿದ್ದರೂ ಸಹ. ಅವಳು ಯಾವಾಗ ಶುದ್ಧಳಾಗುತ್ತಾಳೋ ಆವಾಗ ನಮಾಝ್ ನಿರ್ವಹಿಸಬೇಕು.
ಮಹಿಳೆಯು ಹೆರಿಗೆಯಾದ ನಂತರ ನಮಾಝ್ ಮತ್ತು ಉಪವಾಸ ಆಚರಿಸದೆ ನಲ್ವತ್ತು ದಿನ ಕಾಯಬೇಕೇ? ಅಥವಾ ಪ್ರಸವಾನಂತರದ ರಕ್ತವು ನಿಲ್ಲುವವರೆಗೆ ಕಾಯಬೇಕೇ? ಅವಳು ಶುದ್ಧಳಾಗಲು ಕನಿಷ್ಟ ಎಷ್ಟು ದಿನಗಳವರೆಗೆ ಕಾಯಬೇಕು?
ಹೆರಿಗೆಯಾದ ಮಹಿಳೆಗೆ ಶುದ್ಧಳಾಗಲು ನಿರ್ದಿಷ್ಟ ಅವಧಿಯಿಲ್ಲ. ರಕ್ತವು ಸ್ರವಿಸುತ್ತಿರುವ ತನಕ ಅವಳು ನಮಾಝ್, ಉಪವಾಸ ಮತ್ತು ಲೈಂಗಿಕ ಸಂಭೋಗವನ್ನು ತೊರೆಯಬೇಕು.
ಅವಳು ಶುದ್ಧಳಾದರೆ—ಅದು ನಲ್ವತ್ತು ದಿನಗಳಿಗಿಂತ ಮೊದಲಾಗಿದ್ದರೂ, ಅಥವಾ ಹತ್ತು ಅಥವಾ ಐದು ದಿನಗಳ ಅವಧಿಯವರೆಗಾಗಿದ್ದರೂ—ಅವಳು ನಮಾಝ್ ಮತ್ತು ಉಪವಾಸವನ್ನು ಆರಂಭಿಸಬೇಕು ಮತ್ತು ಅವಳ ಗಂಡನಿಗೆ ಅವಳೊಡನೆ ಲೈಂಗಿಕ ಸಂಭೋಗ ಮಾಡಬಹುದು. ಅದರಲ್ಲಿ ತೊಂದರೆಯಿಲ್ಲ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಪ್ರಸವಾನಂತರದ ರಕ್ತವು ಒಂದು ದೈಹಿಕ ಏರುಪೇರಾಗಿದ್ದು, ಅದಕ್ಕೆ ಸಂಬಂಧಿಸಿದ ನಿಯಮಗಳು ಅದರ ಅಸ್ತಿತ್ವ ಮತ್ತು ಅನಾಸ್ತಿತ್ವವನ್ನು ಅವಲಂಬಿಸಿಕೊಂಡಿವೆ. ರಕ್ತವು ಅಸ್ತಿತ್ವದಲ್ಲಿರುವಾಗ ನಿಯಮಗಳು ಊರ್ಜಿತವಾಗುತ್ತವೆ ಮತ್ತು ಮಹಿಳೆ ಶುದ್ಧಳಾದರೆ ನಿಯಮಗಳು ಅನೂರ್ಜಿತವಾಗುತ್ತವೆ.
ಆದರೆ ರಕ್ತವು 60 ದಿನಗಳ ನಂತರವೂ ಸ್ರವಿಸುತ್ತಿದ್ದರೆ, ಅವಳನ್ನು ರಕ್ತಸ್ರಾವವಿರುವ ಮಹಿಳೆಯೆಂದು ಪರಿಗಣಿಸಲಾಗುವುದು. ಇಂತಹ ಸ್ಥಿತಿಯಲ್ಲಿ ಅವಳು ತನ್ನ ಸಾಮಾನ್ಯ ಮುಟ್ಟಿನ ಅವಧಿಯನ್ನು ನೋಡಿ ನಿರ್ಣಯಿಸಬೇಕು. ನಂತರ ಸ್ನಾನ ಮಾಡಿ ನಮಾಝ್ ನಿರ್ವಹಿಸಬೇಕು.
ಒಬ್ಬ ಮಹಿಳೆಗೆ ರಮದಾನ್ ತಿಂಗಳಲ್ಲಿ ಒಂದೆರಡು ಹನಿ ಸ್ರಾವವಾಗಿ, ನಂತರ ಇದು ರಮದಾನ್ ತಿಂಗಳಿಡೀ ಮುಂದುವರಿದರೆ ಮತ್ತು ಅವಳು ಆ ತಿಂಗಳಲ್ಲಿ ಉಪವಾಸ ಆಚರಿಸಿದರೆ ಅದು ಸಿಂಧುವಾಗುವುದೇ?
ಹೌದು, ಅವಳ ಉಪವಾಸವು ಸಿಂಧುವಾಗುತ್ತದೆ. ಇವು ರಕ್ತನಾಳಗಳಿಂದ ಸ್ರವಿಸುವ ಹನಿಗಳಾಗಿದ್ದು ಇವುಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಅಲಿ ಬಿನ್ ಅಬೂತಾಲಿಬ್(ರ) ಹೀಗೆ ಹೇಳಿದ್ದು ವರದಿಯಾಗಿದೆ: “ಮೂಗಿನಿಂದ ಸ್ರವಿಸುವ ರಕ್ತದಂತಿರುವ ಈ ಹನಿಗಳು ಮುಟ್ಟಿನ ರಕ್ತವಲ್ಲ.” ಈ ರೀತಿಯಾಗಿ ಅವರಿಂದ ವರದಿಯಾಗಿದೆ.
ಮುಟ್ಟು ಅಥವಾ ಪ್ರಸವಾನಂತರದ ಸ್ಥಿತಿಯಲ್ಲಿರುವ ಮಹಿಳೆಯು ಪ್ರಭಾತಕ್ಕೆ ಮೊದಲು ಶುದ್ಧಳಾಗಿ, ಪ್ರಭಾತದ ನಂತರವಷ್ಟೇ ಸ್ನಾನ ಮಾಡಿದರೆ ಅವಳ ಉಪವಾಸ ಸಿಂಧುವಾಗುವುದೇ?
ಹೌದು, ಮುಟ್ಟು ಅಥವಾ ಪ್ರಸವಾನಂತರದ ಸ್ಥಿತಿಯಲ್ಲಿರುವ ಮಹಿಳೆಯು ಪ್ರಭಾತಕ್ಕೆ ಮೊದಲು ಶುದ್ಧಳಾಗಿ, ಪ್ರಭಾತದ ನಂತರವಷ್ಟೇ ಸ್ನಾನ ಮಾಡಿದರೆ ಅವಳ ಉಪವಾಸವು ಸಿಂಧುವಾಗುತ್ತದೆ. ಏಕೆಂದರೆ ಆಗ ಅವಳು ಉಪವಾಸ ಕಡ್ಡಾಯವಿರುವ ಮಹಿಳೆಯಾಗಿದ್ದಾಳೆ. ದೊಡ್ಡ ಅಶುದ್ಧಿಯಲ್ಲಿರುವ ವ್ಯಕ್ತಿಗೂ ಈ ನಿಯಮವು ಅನ್ವಯವಾಗುತ್ತದೆ. ಅವನು ಪ್ರಭಾತದ ನಂತರವೂ ಅಶುದ್ಧಿಯಲ್ಲಿದ್ದರೆ (ಸ್ನಾನ ಮಾಡಿರದಿದ್ದರೆ), ಅವನ ಉಪವಾಸವು ಸಿಂಧುವಾಗುತ್ತದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ: “ಈಗ ನೀವು ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಬಹುದು ಮತ್ತು ಅಲ್ಲಾಹು ನಿಮಗೆ ವಿಧಿಸಿದ್ದನ್ನು (ಮಕ್ಕಳನ್ನು) ಅರಸಬಹುದು. ಪ್ರಭಾತದ ಬಿಳಿಯ ನೂಲು ಕಪ್ಪು ನೂಲಿನಿಂದ ಸ್ಪಷ್ಟವಾಗಿ ಗೋಚರಿಸುವವರೆಗೆ ತಿನ್ನಿರಿ ಮತ್ತು ಕುಡಿಯಿರಿ.” [ಬಕರ:187] ಪ್ರಭಾತದ ತನಕ ಲೈಂಗಿಕ ಸಂಭೋಗ ಮಾಡಲು ಅಲ್ಲಾಹು ಅನುಮತಿ ನೀಡಿರುವುದರಿಂದ ಪ್ರಭಾತದ ನಂತರವೂ ಸ್ನಾನ ಮಾಡಬಹುದೆಂದು ಸ್ಪಷ್ಟವಾಗುತ್ತದೆ. ಅದೂ ಅಲ್ಲದೆ, ಆಯಿಶ(ರ) ರಿಂದ ವರದಿಯಾದ ಹದೀಸಿನಲ್ಲಿರುವಂತೆ ಪ್ರವಾದಿ(ಸ) ರವರು ತಮ್ಮ ಪತ್ನಿಯೊಡನೆ ಸಂಭೋಗ ಮಾಡಿ ಪ್ರಭಾತದಲ್ಲಿ ದೊಡ್ಡ ಅಶುದ್ಧಿಯ ಸ್ಥಿತಿಯಲ್ಲಿರುತ್ತಿದ್ದರು ಮತ್ತು ಉಪವಾಸ ಆಚರಿಸುತ್ತಿದ್ದರು. ಅಂದರೆ ಅವರು ಪ್ರಭಾತವಾದ ನಂತರ ಸ್ನಾನ ಮಾಡುತ್ತಿದ್ದರು.
ಮಹಿಳೆಗೆ ಸೂರ್ಯಾಸ್ತಕ್ಕೆ ಮೊದಲು ಮುಟ್ಟಿನ ನೋವು ಅನುಭವವಾಗಿಯೂ ಅವಳಿಗೆ ಮುಟ್ಟಾಗದಿದ್ದರೆ, ಅವಳ ಆ ದಿನದ ಉಪವಾಸ ಸಿಂಧುವಾಗುವುದೇ? ಅಥವಾ ಅವಳು ಅದನ್ನು ಪುನಃ ನಿರ್ವಹಿಸಬೇಕೇ?
ಉಪವಾಸದಲ್ಲಿರುವ ಮಹಿಳೆಗೆ ಮುಟ್ಟಾದಂತೆ ಅನುಭವವಾಗಿಯೂ ಸೂರ್ಯಾಸ್ತದ ತನಕ ರಕ್ತವು ಸ್ರವಿಸದಿದ್ದರೆ, ಅಥವಾ ಅವಳಿಗೆ ಮುಟ್ಟಿನ ನೋವು ಅನುಭವವಾಗಿಯೂ ಸೂರ್ಯಾಸ್ತದ ತನಕ ರಕ್ತವು ಸ್ರವಿಸದಿದ್ದರೆ, ಅವಳ ಆ ದಿನದ ಉಪವಾಸವು ಸಿಂಧುವಾಗುತ್ತದೆ. ಅದು ಕಡ್ಡಾಯ ಉಪವಾಸವಾಗಿದ್ದರೆ ಅವಳು ಅದನ್ನು ಪುನಃ ನಿರ್ವಹಿಸಬೇಕಾಗಿಲ್ಲ. ಇನ್ನು ಅದು ಐಚ್ಛಿಕ ಉಪವಾಸವಾಗಿದ್ದರೆ ಅವಳಿಗೆ ಸಿಗುವ ಪ್ರತಿಫಲವು ವ್ಯರ್ಥವಾಗುವುದಿಲ್ಲ.
ಒಬ್ಬ ಮಹಿಳೆಗೆ ರಕ್ತವು ಸ್ರವಿಸಿ ಅದು ಮುಟ್ಟಿನ ರಕ್ತವೆಂದು ಅವಳಿಗೆ ಖಾತ್ರಿಯಿಲ್ಲದಿದ್ದರೆ, ಅವಳ ಆ ದಿನದ ಉಪವಾಸದ ವಿಧಿಯೇನು?
ಅವಳ ಆ ದಿನದ ಉಪವಾಸವು ಸಿಂಧುವಾಗಿದೆ. ಏಕೆಂದರೆ, ಮೂಲಸ್ಥಿತಿಯ ಪ್ರಕಾರ ಯಾವುದೇ ರಕ್ತವು ಅದು ಮುಟ್ಟಿನ ರಕ್ತವೆಂದು ಸ್ಪಷ್ಟವಾಗುವ ತನಕ ಮುಟ್ಟಿನ ರಕ್ತವೆಂದು ಪರಿಗಣಿಸಲಾಗುವುದಿಲ್ಲ.
ಒಬ್ಬ ಮಹಿಳೆ ಕೆಲವೊಮ್ಮೆ ದಿನವಿಡೀ ರಕ್ತದ ಸಣ್ಣ ಸಣ್ಣ ಕುರುಹುಗಳನ್ನು, ಅಥವಾ ಅಲ್ಲಲ್ಲಿ ಹರಡಿಕೊಂಡಿರುವ ರಕ್ತದ ಹನಿಗಳನ್ನು ಕಾಣುತ್ತಾಳೆ. ಕೆಲವೊಮ್ಮೆ ಅವಳು ಅದನ್ನು ಸಾಮಾನ್ಯವಾಗಿ ಮುಟ್ಟಾಗುವ ದಿನಗಳಲ್ಲಿ ಕಂಡರೆ, ಕೆಲವೊಮ್ಮೆ ಸಾಮಾನ್ಯವಾಗಿ ಮುಟ್ಟಾಗದ ದಿನಗಳಲ್ಲಿ ಕಾಣುತ್ತಾಳೆ. ಈ ಎರಡೂ ಸ್ಥಿತಿಗಳಲ್ಲಿ ಅವಳು ಉಪವಾಸ ಆಚರಿಸುವುದರ ವಿಧಿಯೇನು?
ಇಂತಹುದೇ ಪ್ರಶ್ನೆಗೆ ಈಗಾಗಲೇ ಉತ್ತರಿಸಲಾಗಿದೆ. ಹೆಚ್ಚಿಗೆ ಹೇಳಲಿರುವುದೇನೆಂದರೆ, ಈ ಹನಿಗಳು ಸ್ರವಿಸುವುದು ಸಾಮಾನ್ಯವಾಗಿ ಅವಳಿಗೆ ಮುಟ್ಟಾಗುವ ಅವಧಿಯಲ್ಲಾಗಿದ್ದು, ಅವಳು ಅದನ್ನು ಮುಟ್ಟಿನ ರಕ್ತವೆಂದು ಪರಿಗಣಿಸುವುದಾದರೆ, ಅದು ಮುಟ್ಟಿನ ರಕ್ತವಾಗಿದೆ.
ಮುಟ್ಟಿನಲ್ಲಿರುವ ಮತ್ತು ಪ್ರಸವಾನಂತರ ಸ್ರಾವದಲ್ಲಿರುವ ಮಹಿಳೆ ರಮದಾನ್ ತಿಂಗಳಲ್ಲಿ ಆಹಾರ-ಪಾನೀಯ ಸೇವಿಸಬಹುದೇ?
ಹೌದು, ಅವಳು ರಮದಾನ್ ತಿಂಗಳಲ್ಲಿ ಆಹಾರ-ಪಾನೀಯ ಸೇವಿಸಬಹುದು. ಆದರೆ ಅದು ರಹಸ್ಯವಾಗಿರುವುದು ಒಳ್ಳೆಯದು. ವಿಶೇಷವಾಗಿ, ಮನೆಯಲ್ಲಿ ಮಕ್ಕಳಿರುವಾಗ. ಏಕೆಂದರೆ ಅದು ಅವರಲ್ಲಿ ಗೊಂದಲ ಮೂಡಿಸಬಹುದು.
ಮುಟ್ಟು ಅಥವಾ ಪ್ರಸವಾನಂತರ ಸ್ರಾವದಲ್ಲಿರುವ ಮಹಿಳೆ ಅಸರ್ ನಮಾಝಿನ ಸಮಯದಲ್ಲಿ ಶುದ್ಧಳಾದರೆ, ಅವಳು ಝುಹರ್ ಮತ್ತು ಅಸರ್ ನಮಾಝ್ಗಳನ್ನು ನಿರ್ವಹಿಸಬೇಕೇ? ಅಥವಾ ಅಸರ್ ನಮಾಝನ್ನು ಮಾತ್ರ ನಿರ್ವಹಿಸಿದರೆ ಸಾಕೇ?
ಪ್ರಬಲ ಅಭಿಪ್ರಾಯದ ಪ್ರಕಾರ ಅವಳು ಅಸರ್ ನಮಾಝ್ ಮಾತ್ರ ನಿರ್ವಹಿಸಿದರೆ ಸಾಕು. ಏಕೆಂದರೆ ಅವಳು ಝುಹರ್ ನಮಾಝ್ ನಿರ್ವಹಿಸಬೇಕೆಂದು ಹೇಳುವುದಕ್ಕೆ ಯಾವುದೇ ಪುರಾವೆಯಿಲ್ಲ. ಮೂಲ ನಿಯಮದ ಪ್ರಕಾರ ಯಾರಿಗೂ ಯಾವುದೇ ಹೊಣೆಗಾರಿಕೆಯಿಲ್ಲ. ಅದೂ ಅಲ್ಲದೆ, ಪ್ರವಾದಿ(ಸ) ರವರು ಹೇಳುತ್ತಾರೆ: “ಯಾರಿಗೆ ಸೂರ್ಯೋದಯವಾಗುವುದಕ್ಕೆ ಮೊದಲು ಅಸರ್ ನಮಾಝಿನ ಒಂದು ರಕಅತ್ ದೊರಕುತ್ತದೋ ಅವನಿಗೆ ಅಸರ್ ನಮಾಝ್ ದೊರಕುತ್ತದೆ.” ಅವನಿಗೆ ಝುಹರ್ ನಮಾಝ್ ದೊರಕುತ್ತದೆಂದು ಪ್ರವಾದಿ(ಸ) ರವರು ಹೇಳಲಿಲ್ಲ. ಅಸರ್ ನಮಾಝಿನೊಂದಿಗೆ ಝುಹರ್ ನಮಾಝ್ ನಿರ್ವಹಿಸುವುದು ಕಡ್ಡಾಯವಾಗಿದ್ದರೆ ಪ್ರವಾದಿ(ಸ) ರವರು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಅದೇ ರೀತಿ, ಒಬ್ಬಳಿಗೆ ಝುಹರ್ ನಮಾಝಿನ ಸಮಯವು ಆರಂಭವಾದ ನಂತರ ಮುಟ್ಟಾದರೆ ಅವಳಿಗೆ ಝುಹರ್ ನಮಾಝನ್ನು ಮಾತ್ರ ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆಯೇ ಹೊರತು ಅಸರ್ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಿಲ್ಲ. ಝುಹರ್ ನಮಾಝ್ ಅಸರ್ ನಮಾಝಿನೊಂದಿಗೆ ಜೋಡಿಸಿ ನಿರ್ವಹಿಸುವ ನಮಾಝ್ ಆಗಿದ್ದರೂ ಸಹ. ಈ ಸ್ಥಿತಿಗೂ ಪ್ರಶ್ನೆಯಲ್ಲಿ ಹೇಳಲಾದ ಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ.
ಆದ್ದರಿಂದ ಸರಿಯಾದ ಅಭಿಪ್ರಾಯವೇನೆಂದರೆ, ಅವಳಿಗೆ ಕಡ್ಡಾಯವಾಗಿರುವುದು ಅಸರ್ ನಮಾಝ್ ಮಾತ್ರ. ಹದೀಸಿನ ವಚನ ಮತ್ತು ಕಿಯಾಸ್ (ಹೋಲಿಕೆ) ಇದನ್ನೇ ಸೂಚಿಸುತ್ತದೆ. ಅದೇ ರೀತಿ, ಇಶಾ ನಮಾಝಿನ ಸಮಯವು ಮುಗಿಯುವ ಮೊದಲೇ ಅವಳು ಶುದ್ಧಳಾದರೆ, ಅವಳಿಗೆ ಇಶಾ ನಮಾಝ್ ಮಾತ್ರ ಕಡ್ಡಾಯವಾಗಿದೆಯೇ ಹೊರತು ಮಗ್ರಿಬ್ ನಮಾಝ್ ಕಡ್ಡಾಯವಿಲ್ಲ.
ಗರ್ಭಪಾತವಾಗುವ ಮಹಿಳೆಯರು ಎರಡು ಸ್ಥಿತಿಗಳಲ್ಲಿರುತ್ತಾರೆ: ಒಂದೋ ಭ್ರೂಣವು ರೂಪುಗೊಳ್ಳುವ ಮೊದಲೇ ಅವರಿಗೆ ಗರ್ಭಪಾತವಾಗುತ್ತದೆ. ಅಥವಾ ಭ್ರೂಣವು ರೂಪುಗೊಂಡು ಅದರ ಲಕ್ಷಣಗಳು ಗೋಚರವಾದ ನಂತರ ಗರ್ಭಪಾತವಾಗುತ್ತದೆ. ಹಾಗಾದರೆ, ಗರ್ಭಪಾತದ ದಿನದಂದು ಅವಳು ಉಪವಾಸ ಆಚರಿಸುವುದರ ವಿಧಿಯೇನು? ತದನಂತರ ರಕ್ತಸ್ರಾವವಾಗುವ ದಿನಗಳಲ್ಲಿ ಅವಳು ಉಪವಾಸ ಆಚರಿಸುವುದರ ವಿಧಿಯೇನು?
ಭ್ರೂಣವು ರೂಪುಗೊಳ್ಳದಿದ್ದರೆ, ಆ ರಕ್ತವನ್ನು ಪ್ರಸವಾನಂತರದ ರಕ್ತವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅವಳು ಉಪವಾಸ ಆಚರಿಸಬೇಕು ಮತ್ತು ನಮಾಝ್ ನಿರ್ವಹಿಸಬೇಕು. ಅವಳು ಆಚರಿಸವ ಉಪವಾಸ ಸಿಂಧುವಾಗುತ್ತದೆ.
ಆದರೆ ಭ್ರೂಣವು ರೂಪುಗೊಂಡಿದ್ದರೆ, ಆ ರಕ್ತವು ಪ್ರಸವಾನಂತರದ ರಕ್ತವಾಗಿದೆ. ಆ ಸ್ಥಿತಿಯಲ್ಲಿ ಅವಳು ನಮಾಝ್ ಮತ್ತು ಉಪವಾಸ ಆಚರಿಸಬಾರದು.
ಈ ವಿಷಯದಲ್ಲಿರುವ ಸಾಮಾನ್ಯ ನಿಯಮವೇನೆಂದರೆ, ಭ್ರೂಣವು ರೂಪುಗೊಂಡಿದ್ದರೆ ರಕ್ತವು ಪ್ರಸವಾನಂತರದ ರಕ್ತವಾಗಿದೆ. ಭ್ರೂಣವು ರೂಪಗೊಳ್ಳದಿದ್ದರೆ, ರಕ್ತವು ಪ್ರಸವಾನಂತರದ ರಕ್ತವಲ್ಲ. ರಕ್ತವು ಪ್ರಸವಾನಂತರದ ರಕ್ತವಾಗಿದ್ದರೆ, ಪ್ರಸವಾನಂತರ ಸ್ರಾವದ ಸ್ಥಿತಿಯಲ್ಲಿರುವ ಮಹಿಳೆಯರಿಗೆ ನಿಷಿದ್ಧವಾಗಿರುವುದೆಲ್ಲವೂ ಇವರಿಗೂ ನಿಷಿದ್ಧವಾಗಿದೆ. ಆದರೆ ರಕ್ತವು ಪ್ರಸವಾನಂತರದ ರಕ್ತವಲ್ಲದಿದ್ದರೆ, ಪ್ರಸವಾನಂತರ ಸ್ರಾವದ ಸ್ಥಿತಿಯಲ್ಲಿರುವ ಮಹಿಳೆಯರಿಗೆ ನಿಷಿದ್ಧವಾಗಿರುವುದು ಇವರಿಗೆ ನಿಷಿದ್ಧವಲ್ಲ.
ರಮದಾನ್ ತಿಂಗಳಲ್ಲಿ ಗರ್ಭಿಣಿಗೆ ರಕ್ತಸ್ರಾವವಾದರೆ, ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುತ್ತದೆಯೇ?
ಮಹಿಳೆ ಉಪವಾಸದಲ್ಲಿರುವಾಗ ಅವಳಿಗೆ ಮುಟ್ಟಿನ ರಕ್ತವು ಸ್ರವಿಸಿದರೆ, ಅವಳ ಉಪವಾಸವು ಅಸಿಂಧುವಾಗುತ್ತದೆ. ಏಕೆಂದರೆ, ಪ್ರವಾದಿ(ಸ) ರವರು ಹೇಳುತ್ತಾರೆ: “ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?” ಆದ್ದರಿಂದ ನಾವು ಆ ರಕ್ತವನ್ನು ಉಪವಾಸ ಅಸಿಂಧುಗೊಳಿಸುವ ವಿಷಯಗಳಲ್ಲಿ ಒಂದೆಂದು ಪರಿಗಣಿಸುತ್ತೇವೆ. ಪ್ರಸವಾನಂತರದ ರಕ್ತದ ಸ್ಥಿತಿಯೂ ಇದೇ. ಮುಟ್ಟಿನ ರಕ್ತ ಅಥವಾ ಪ್ರಸವಾನಂತರದ ರಕ್ತವು ಸ್ರವಿಸುವುದರಿಂದ ಉಪವಾಸವು ಅಸಿಂಧುವಾಗುತ್ತದೆ.
ರಮದಾನ್ ತಿಂಗಳಲ್ಲಿ ಗರ್ಭಿಣಿಯಿಂದ ಸ್ರವಿಸುವ ರಕ್ತವು ಮುಟ್ಟಿನ ರಕ್ತವಾಗಿದ್ದರೆ ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ಮುಟ್ಟಿನ ರಕ್ತವಲ್ಲದಿದ್ದರೆ ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ.
ಗರ್ಭಿಣಿಗೆ ಉಂಟಾಗಬಹುದಾದ ಮುಟ್ಟು, ಒಂದೋ ಗರ್ಭಧಾರಣೆಯಿಂದ ತೊಡಗಿ ಅವಳ ಮುಟ್ಟಿನ ಅವಧಿಗಳಲ್ಲಿ ನಿರಂತರ ಉಂಟಾಗುವ ಮುಟ್ಟಿನ ರಕ್ತವಾಗಿರಬಹುದು. ಪ್ರಬಲ ಅಭಿಪ್ರಾಯದ ಪ್ರಕಾರ ಇದು ಮುಟ್ಟಿನ ರಕ್ತವಾಗಿದ್ದು ಮುಟ್ಟಿಗೆ ಸಂಬಂಧಿಸಿದ ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ.
ಆದರೆ ಅವಳ ಮುಟ್ಟು ನಿಂತು, ನಂತರ ಅವಳು ಸಾಮಾನ್ಯವಾಗಿ ಸ್ರವಿಸುವ ರಕ್ತವಲ್ಲದ ಬೇರೆ ರಕ್ತವನ್ನು ಕಂಡರೆ, ಅದು ಅವಳ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅದು ಮುಟ್ಟಿನ ರಕ್ತವಲ್ಲ.
ಒಬ್ಬಳು ಮಹಿಳೆ ತನ್ನ ಮುಟ್ಟಿನ ಅವಧಿಯಲ್ಲಿ ಒಂದು ದಿನ ರಕ್ತವನ್ನು ಕಂಡು, ಅದರ ನಂತರದ ದಿನವಿಡೀ ರಕ್ತವನ್ನು ಕಾಣದಿದ್ದರೆ, ಅವಳು ಏನು ಮಾಡಬೇಕು?
ಬಾಹ್ಯವಾಗಿ ನೋಡುವಾಗ, ಮುಟ್ಟಿನ ಅವಧಿಯಲ್ಲಿ ರಕ್ತವು ಸ್ರವಿಸದ ಅಥವಾ ಅವಳು ಒಣಗುವಿಕೆಯನ್ನು ಅನುಭವಿಸುವ ಈ ಸಮಯವು ಮುಟ್ಟಿಗೆ ಸಂಬಂಧಿಸಿದ ಅವಧಿಯ ಭಾಗವಾಗಿದ್ದು, ಅದನ್ನು ಶುದ್ಧಿಯೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಮುಟ್ಟಿನಲ್ಲಿರುವ ಮಹಿಳೆಯು ದೂರವಿರುವ ಎಲ್ಲಾ ಸಂಗತಿಗಳಿಂದ ಇವಳೂ ದೂರವಿರಬೇಕು.
ಕೆಲವು ವಿದ್ವಾಂಸರು ಹೇಳುವ ಪ್ರಕಾರ, ಮಹಿಳೆ ಒಂದು ದಿನ ರಕ್ತವನ್ನು ಕಂಡು ಮರುದಿನ ರಕ್ತವನ್ನು ಕಾಣದಿದ್ದರೆ, ಅವಳು 15 ದಿನಗಳ ತನಕ ರಕ್ತವು ಕಾಣುವ ದಿನವನ್ನು ಮುಟ್ಟಿನ ಅವಧಿಯೆಂದು ಮತ್ತು ರಕ್ತವು ಕಾಣದ ದಿನವನ್ನು ಶುದ್ಧಿಯ ಅವಧಿಯೆಂದು ಪರಿಗಣಿಸಬೇಕು. 15 ದಿನಗಳ ತನಕವೂ ಹೀಗೆಯೇ ಸಂಭವಿಸಿದರೆ, ಅದರ ನಂತರದ ದಿನಗಳಲ್ಲಿ ಕಾಣುವ ರಕ್ತವು ರಕ್ತಸ್ರಾವವಾಗಿದೆ. ಇದು ಇಮಾಂ ಅಹ್ಮದ್ ಬಿನ್ ಹಂಬಲ್ರ ಪ್ರಸಿದ್ಧ ಅಭಿಪ್ರಾಯವಾಗಿದೆ. ಅವರಿಗೆ ಅಲ್ಲಾಹು ದಯೆ ತೋರಲಿ.
ಮುಟ್ಟಿನ ಕೊನೆಯ ದಿನಗಳಲ್ಲಿ, ಶುದ್ಧವಾಗುವ ಮೊದಲು, ಮಹಿಳೆ ರಕ್ತದ ಯಾವುದೇ ಕುರುಹನ್ನು ಕಾಣುವುದಿಲ್ಲ. ಹಾಗಾದರೆ ಅವಳು ಬಿಳಿದ್ರವವನ್ನು ಕಾಣದಿದ್ದರೂ, ಆ ದಿನಗಳಲ್ಲಿ ಉಪವಾಸ ಆಚರಿಸಬಹುದೇ? ಅಥವಾ ಅವಳು ಏನು ಮಾಡಬೇಕು?
ಅವಳು ಸಾಮಾನ್ಯವಾಗಿ ಬಿಳಿದ್ರವವನ್ನು ಕಾಣದ ಮಹಿಳೆಯಾಗಿದ್ದರೆ—ಕೆಲವು ಮಹಿಳೆಯರಿಗೆ ಬಿಳಿದ್ರವವು ಸ್ರವಿಸುವುದಿಲ್ಲ—ಅವಳು ಉಪವಾಸ ಆಚರಿಸಬೇಕು. ಆದರೆ ಅವಳು ಸಾಮಾನ್ಯವಾಗಿ ಬಿಳಿದ್ರವವನ್ನು ಕಾಣುವ ಮಹಿಳೆಯಾಗಿದ್ದರೆ, ಬಿಳಿದ್ರವವನ್ನು ಕಾಣುವ ತನಕ ಅವಳು ಉಪವಾಸ ಆಚರಿಸಬಾರದು.
ಮುಟ್ಟು ಅಥವಾ ಪ್ರಸವಾನಂತರದ ಸ್ರಾವವಿರುವ ಮಹಿಳೆ, ಅನಿವಾರ್ಯ ಸಂದರ್ಭಗಳಲ್ಲಿ—ಅಂದರೆ ಅವಳು ವಿದ್ಯಾರ್ಥಿ ಅಥವಾ ಶಿಕ್ಷಕಿಯಾಗಿದ್ದರೆ—ಕುರ್ಆನನ್ನು ನೋಡಿ ಅಥವಾ ನೋಡದೆ ಕಂಠಪಾಠದಿಂದ ಪಠಿಸುವುದರ ವಿಧಿಯೇನು?
ಮುಟ್ಟು ಅಥವಾ ಪ್ರಸವಾನಂತರ ಸ್ರಾವವಿರುವ ಮಹಿಳೆ ಅಗತ್ಯ ಸಂದರ್ಭಗಳಲ್ಲಿ—ಅಂದರೆ ಅವಳು ಶಿಕ್ಷಕಿಯಾಗಿದ್ದರೆ, ಅಥವಾ ಹಗಲು ಅಥವಾ ರಾತ್ರಿ ತನಗೆ ನಿಶ್ಚಯಿಸಲಾದ ಭಾಗವನ್ನು ಪಠಿಸಬೇಕಾದ ವಿದ್ಯಾರ್ಥಿಯಾಗಿದ್ದರೆ—ಅವಳು ಕುರ್ಆನ್ ಪಠಿಸುವುದರಲ್ಲಿ ತೊಂದರೆಯಿಲ್ಲ.
ಆದರೆ ಪುಣ್ಯವನ್ನು ಸಂಪಾದಿಸುವ ಉದ್ದೇಶದಿಂದ ಮಾತ್ರ ಪಠಿಸುವುದಾದರೆ, ಹಾಗೆ ಪಠಿಸದಿರುವುದೇ ಉತ್ತಮ. ಏಕೆಂದರೆ, ಅನೇಕ ವಿದ್ವಾಂಸರ ಪ್ರಕಾರ, ಅಥವಾ ಹೆಚ್ಚಿನ ವಿದ್ವಾಂಸರ ಪ್ರಕಾರ ಮುಟ್ಟಿನಲ್ಲಿರುವ ಮಹಿಳೆಗೆ ಕುರ್ಆನ್ ಪಠಿಸಲು ಅನುಮತಿಸಲಾಗಿಲ್ಲ.
ಮುಟ್ಟಿರುವ ಮಹಿಳೆಯ ಬಟ್ಟೆಗಳಿಗೆ ರಕ್ತ ಅಥವಾ ಹೊಲಸು ತಾಗಿರದಿದ್ದರೂ ಸಹ, ಶುದ್ಧಳಾದ ನಂತರ ಅವಳು ತನ್ನ ಬಟ್ಟೆಗಳನ್ನು ಬದಲಾಯಿಸಬೇಕೇ?
ಬದಲಾಯಿಸಬೇಕಾಗಿಲ್ಲ. ಏಕೆಂದರೆ ಮುಟ್ಟು ದೇಹವನ್ನು ಮಲಿನಗೊಳಿಸುವುದಿಲ್ಲ. ಆದರೆ ಮುಟ್ಟಿನ ರಕ್ತವು ಅದು ತಾಗಿದ ಸ್ಥಳವನ್ನು ಮಲಿನಗೊಳಿಸುತ್ತದೆ. ಈ ಕಾರಣದಿಂದಲೇ ಪ್ರವಾದಿ(ಸ) ರವರು ಮಹಿಳೆಯರಿಗೆ, ಅವರ ಬಟ್ಟೆಗಳಿಗೆ ಮುಟ್ಟಿನ ರಕ್ತವು ತಾಗಿದ್ದರೆ ಅದನ್ನು ತೊಳೆದು ನಮಾಝ್ ಮಾಡುವಂತೆ ಆದೇಶಿಸಿದ್ದಾರೆ.
ಒಬ್ಬಳು ಮಹಿಳೆ ಪ್ರಸವಾನಂತರ ಸ್ರಾವದಿಂದ ರಮದಾನ್ ತಿಂಗಳಲ್ಲಿ ಏಳು ದಿನಗಳ ಕಾಲ ಉಪವಾಸ ಆಚರಿಸಲಿಲ್ಲ. ಮುಂದಿನ ರಮದಾನ್ ತಿಂಗಳು ಬರುವವರೆಗೆ ಅವಳು ಅದನ್ನು ಕಝಾ ನಿರ್ವಹಿಸಲಿಲ್ಲ. ಎರಡನೇ ರಮದಾನ್ನಲ್ಲಿ ಅವಳು ತನ್ನ ಮಗುವಿಗೆ ಹಾಲುಣಿಸುವ ಕಾರಣದಿಂದ ಏಳು ದಿನ ಉಪವಾಸ ಆಚರಿಸಲಿಲ್ಲ. ಅನಾರೋಗ್ಯದ ಕಾರಣ ಆ ಉಪವಾಸಗಳನ್ನೂ ಕಝಾ ನಿರ್ವಹಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಈಗ ಮೂರನೇ ರಮದಾನ್ ತಿಂಗಳು ಹತ್ತಿರವಾಗುತ್ತಿದೆ.ಅವಳೇನು ಮಾಡಬೇಕು? ದಯವಿಟ್ಟು ವಿವರಿಸಿ. ಅಲ್ಲಾಹು ನಿಮಗೆ ಪ್ರತಿಫಲ ನೀಡಲಿ.
ಈ ಮಹಿಳೆಯು ಮೇಲೆ ಹೇಳಿದಂತೆ ಅನಾರೋಗ್ಯದಿಂದಿದ್ದು ಉಪವಾಸವನ್ನು ಕಝಾ ನಿರ್ವಹಿಸಲು ಅವಳಿಗೆ ಸಾಧ್ಯವಾಗದಿದ್ದರೆ, ಅವಳಿಗೆ ಸಾಧ್ಯವಾಗುವಾಗ ಅದನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಅವಳಿಗೆ ವಿನಾಯಿತಿಯಿದೆ. ಅದು ಮುಂದಿನ ರಮದಾನ್ ತನಕ ತಡವಾದರೂ ಸರಿ.
ಆದರೆ, ಅವಳಿಗೆ ವಿನಾಯಿತಿಯಿಲ್ಲದೆ ಅವಳು ವಿನಾಕಾರಣ ತಡಮಾಡುವುದು ಮತ್ತು ಕಡೆಗಣಿಸುವುದನ್ನು ಮಾಡಿದ್ದರೆ, ಹಿಂದಿನ ರಮದಾನ್ನಲ್ಲಿ ಬಿಟ್ಟು ಹೋದ ಉಪವಾಸವನ್ನು ಮುಂದಿನ ರಮದಾನ್ ತಿಂಗಳಿಗಿಂತಲೂ ಹೆಚ್ಚು ತಡಮಾಡುವುದು ಅವಳಿಗೆ ಸಮ್ಮತವಲ್ಲ. ಆಯಿಶ(ರ) ಹೇಳುತ್ತಾರೆ: "ನನಗೆ (ರಮದಾನ್ ತಿಂಗಳ) ಉಪವಾಸಗಳು ಬಾಕಿಯಿರುತ್ತಿದ್ದವು, ನನಗೆ ಅವುಗಳನ್ನು ಶಅಬಾನ್ ತಿಂಗಳಲ್ಲಷ್ಟೇ ಕಝಾ ನಿರ್ವಹಿಸಲು ಸಾಧ್ಯವಾಗುತ್ತಿತ್ತು."
ಆದ್ದರಿಂದ ಈ ಮಹಿಳೆ ಸ್ವತಃ ತನ್ನ ಸ್ಥಿತಿಯನ್ನು ಪರಿಶೀಲಿಸಲಿ. ಅವಳಿಗೆ ಯಾವುದೇ ವಿನಾಯಿತಿಯಿಲ್ಲದಿದ್ದರೆ, ಅವಳು ದೋಷಿಯಾಗಿದ್ದು, ಅಲ್ಲಾಹನಲ್ಲಿ ಕ್ಷಮೆಯಾಚಿಸಿ ಬಿಟ್ಟುಹೋದ ಉಪವಾಸಗಳನ್ನು ಆದಷ್ಟು ಬೇಗ ನಿರ್ವಹಿಸಲಿ. ಅವಳಿಗೆ ವಿನಾಯಿತಿಯಿದ್ದರೆ ತಡಮಾಡುವುದರಲ್ಲಿ ತೊಂದರೆಯಿಲ್ಲ. ಅದು ಒಂದೆರಡು ವರ್ಷವಾದರೂ ಸಹ.
ಕೆಲವು ಮಹಿಳೆಯರು ಮುಂದಿನ ರಮದಾನ್ ತಿಂಗಳು ಬರುವ ತನಕ ಹಿಂದಿನ ರಮದಾನ್ ತಿಂಗಳಲ್ಲಿ ಬಿಟ್ಟು ಹೋದ ಉಪವಾಸಗಳನ್ನು ಪೂರ್ಣಗೊಳಿಸುವುದಿಲ್ಲ. ಆ ಮಹಿಳೆಯರು ಏನು ಮಾಡಬೇಕು?
ಅವರು ಈ ಕೃತ್ಯಕ್ಕಾಗಿ ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡುವುದು ಕಡ್ಡಾಯವಾಗಿದೆ. ಏಕೆಂದರೆ ಒಂದು ರಮದಾನ್ ತಿಂಗಳಲ್ಲಿ ಬಿಟ್ಟುಹೋದ ಉಪವಾಸವನ್ನು ಯಾವುದೇ ವಿನಾಯಿತಿಯಿಲ್ಲದೆ ಇನ್ನೊಂದು ರಮದಾನ್ ತಿಂಗಳು ಬರುವ ತನಕ ಮುಂದೂಡಲು ಯಾರಿಗೂ ಅನುಮತಿಯಿಲ್ಲ. ಏಕೆಂದರೆ ಆಯಿಶ(ರ) ಹೇಳುತ್ತಾರೆ: "ನನಗೆ (ರಮದಾನ್ ತಿಂಗಳ) ಉಪವಾಸಗಳು ಬಾಕಿಯಿರುತ್ತಿದ್ದವು, ನನಗೆ ಅವುಗಳನ್ನು ಶಅಬಾನ್ ತಿಂಗಳಲ್ಲಷ್ಟೇ ಕಝಾ ನಿರ್ವಹಿಸಲು ಸಾಧ್ಯವಾಗುತ್ತಿತ್ತು."
ಎರಡನೇ ರಮದಾನ್ ತಿಂಗಳಿಗಿಂತಲೂ ಹೆಚ್ಚು ತಡಮಾಡಬಾರದೆಂದು ಇದು ಸೂಚಿಸುತ್ತದೆ. ಆದ್ದರಿಂದ ಅವಳು ತನ್ನ ಕೃತ್ಯಕ್ಕಾಗಿ ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡಲಿ ಮತ್ತು ಬಿಟ್ಟುಹೋದ ಉಪವಾಸಗಳನ್ನು ಎರಡನೇ ರಮದಾನ್ ನಂತರ ಕಝಾ ನಿರ್ವಹಿಸಲಿ.
ಒಬ್ಬ ಮಹಿಳೆಗೆ, ಉದಾಹರಣೆಗೆ, ಮಧ್ಯಾಹ್ನ ಒಂದು ಗಂಟೆಗೆ ಮುಟ್ಟು ಪ್ರಾರಂಭವಾಗುತ್ತದೆ. ಅವಳು ಇನ್ನೂ ಝುಹರ್ ನಮಾಝ್ ನಿರ್ವಹಿಸಿಲ್ಲ. ಶುದ್ಧಳಾದ ನಂತರ ಅವರು ಆ ಝುಹರ್ ನಮಾಝನ್ನು ಕಝಾ ನಿರ್ವಹಿಸಬೇಕೇ?
ಈ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಾಭಿಪ್ರಾಯವಿದೆ. ಕೆಲವರ ಅಭಿಪ್ರಾಯ ಪ್ರಕಾರ, ಆ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಿಲ್ಲ. ಏಕೆಂದರೆ ಅವಳು ಆ ನಮಾಝನ್ನು ಕಡೆಗಣಿಸಿಲ್ಲ ಅಥವಾ ತಪ್ಪು ಮಾಡಿಲ್ಲ. ಏಕೆಂದರೆ ನಮಾಝನ್ನು ಅದರ ಕೊನೆಯ ಸಮಯದವರೆಗೆ ತಡಮಾಡಲು ಅವಳಿಗೆ ಅನುಮತಿಯಿದೆ.
ಕೆಲವರ ಅಭಿಪ್ರಾಯ ಪ್ರಕಾರ ಅವಳು ಅದನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಪ್ರವಾದಿ(ಸ) ರವರು ಹೇಳುತ್ತಾರೆ: “ಯಾರಿಗೆ ನಮಾಝಿನ (ಸಮಯವು ಮುಗಿಯುವುದಕ್ಕೆ ಮೊದಲು ಅದರ) ಒಂದು ರಕಅತ್ ದೊರಕುತ್ತದೋ ಅವನಿಗೆ ಆ ನಮಾಝ್ ದೊರಕುತ್ತದೆ.”
ಮುಂಜಾಗರೂಕತೆಗಾಗಿ ಅವಳು ಆ ನಮಾಝನ್ನು ಕಝಾ ನಿರ್ವಹಿಸುವುದು ಒಳ್ಳೆಯದು. ಏಕೆಂದರೆ ಅದು ಕೇವಲ ಒಂದು ಹೊತ್ತಿನ ನಮಾಝ್ ಆಗಿದ್ದು ಅದನ್ನು ನಿರ್ವಹಿಸಲು ಹೆಚ್ಚು ಕಷ್ಟವಾಗದು.
ಒಬ್ಬಳು ಮಹಿಳೆ ಹೆರಿಗೆಗೆ ಒಂದು ಅಥವಾ ಎರಡು ದಿನ ಮೊದಲು ರಕ್ತವನ್ನು ಕಂಡರೆ ಅವಳೇನು ಮಾಡಬೇಕು? ನಮಾಝ್ ಮತ್ತು ಉಪವಾಸವನ್ನು ತೊರೆಯಬೇಕೇ?
ಒಬ್ಬಳು ಮಹಿಳೆ ಹೆರಿಗೆಗೆ ಒಂದು ಅಥವಾ ಎರಡು ದಿನ ಮೊದಲು ಹೆರಿಗೆ ನೋವಿನೊಂದಿಗೆ ರಕ್ತವನ್ನು ಕಂಡರೆ ಅದು ಪ್ರಸವಾನಂತರ ಸ್ರಾವವಾಗಿದೆ. ಅವಳು ನಮಾಝ್ ಮತ್ತು ಉಪವಾಸ ಆಚರಿಸುವುದನ್ನು ತೊರೆಯಬೇಕು. ಆದರೆ ಅದರೊಂದಿಗೆ ಹೆರಿಗೆ ನೋವು ಇಲ್ಲದಿದ್ದರೆ ಅದು ಬರೀ ರಕ್ತಸ್ರಾವವಾಗಿದ್ದು ಅದರ ಬಗ್ಗೆ ಚಿಂತಿನಬೇಕಾಗಿಲ್ಲ. ಅದು ಅವಳನ್ನು ನಮಾಝ್ ಮತ್ತು ಉಪವಾಸದಿಂದ ತಡೆಯುವುದಿಲ್ಲ.
ಜನರೊಡನೆ ಉಪವಾಸ ಆಚರಿಸುವಂತಾಗಲು ಮುಟ್ಟು ನಿರೋಧಕ ಮಾತ್ರೆಗಳನ್ನು ಸೇವಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಅವುಗಳನ್ನು ಸೇವಿಸಬಾರದೆಂದು ಸಲಹೆ ನೀಡುತ್ತೇನೆ. ಏಕೆಂದರೆ ವೃತ್ತಿಪರ ವೈದ್ಯರಿಂದ ನಾನು ಕಲಿತುಕೊಂಡಂತೆ ಅವುಗಳಿಗೆ ಅನೇಕ ಅಡ್ಡಪರಿಣಾಮಗಳಿವೆ. ಮಹಿಳೆಯರೊಡನೆ ಹೀಗೆ ಹೇಳಬೇಕಾಗಿದೆ: "ಮುಟ್ಟು ಎನ್ನುವುದು ಅಲ್ಲಾಹು ಆದಮರ ಹೆಣ್ಣುಮಕ್ಕಳಿಗೆ ವಿಧಿಸಿದ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿರುವುದರಿಂದ, ಅಲ್ಲಾಹನ ವಿಧಿಯ ಬಗ್ಗೆ ಸಂತೃಪ್ತಿಯನ್ನು ಸೂಚಿಸಿರಿ. ಉಪವಾಸ ಆಚರಿಸಲು ಸಾಧ್ಯವಾಗುವ ತನಕ ಉಪವಾಸ ಆಚರಿಸಿರಿ. ಅಡ್ಡಿ ಉಂಟಾದರೆ ಉಪವಾಸವನ್ನು ತೊರೆಯಿರಿ. ಅಲ್ಲಾಹನ ವಿಧಿಯ ಬಗ್ಗೆ ಸಂತೃಪ್ತರಾಗಿರಿ."
ಒಬ್ಬಳು ಮಹಿಳೆ ಹೆರಿಗೆಯಾಗಿ ಎರಡು ತಿಂಗಳ ಬಳಿಕ ಶುದ್ಧಳಾದಳು. ನಂತರ ಅವಳು ರಕ್ತದ ಸಣ್ಣ ಸಣ್ಣ ಹನಿಗಳನ್ನು ಕಾಣತೊಡಗಿದಳು. ಅವಳೇನು ಮಾಡಬೇಕು? ಉಪವಾಸ ಮತ್ತು ನಮಾಝನ್ನು ತೊರೆಯಬೇಕೇ?
ಮುಟ್ಟು ಮತ್ತು ಹೆರಿಗೆಗೆ ಸಂಬಂಧಿಸಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ತೀರವಿಲ್ಲದ ಸಮುದ್ರದಂತೆ. ಇದಕ್ಕೆ ಗರ್ಭನಿರೋಧಕ ಮತ್ತು ಮುಟ್ಟು ನಿರೋಧಕ ಮಾತ್ರೆಗಳೂ ಒಂದು ಕಾರಣವಾಗಿದೆ. ಇಂತಹ ಸಮಸ್ಯೆಗಳನ್ನು ಜನರು ಹಿಂದೆ ಎದುರಿಸಿರಲಿಲ್ಲ. ಪ್ರವಾದಿ(ಸ) ರವರ ಕಾಲದಿಂದ ಮತ್ತು ಅದಕ್ಕಿಂತಲೂ ಹಿಂದಿನ ಕಾಲದಿಂದ, ವಾಸ್ತವವಾಗಿ ಮಹಿಳೆಯರು ಅಸ್ತಿತ್ವಕ್ಕೆ ಬಂದಂದಿನಿಂದ ಮಹಿಳೆಯರ ಸಮಸ್ಯೆಗಳು ಅಸ್ತಿತ್ವದಲ್ಲಿವೆ ಎಂಬುದು ಸರಿ. ಆದರೆ ಮನುಷ್ಯನಿಗೆ ಅವುಗಳನ್ನು ಪರಿಹರಿಸಲು ಸಾಧ್ಯವಾಗದ ರೀತಿಯಲ್ಲಿ ಅವು ಬೆಳೆಯುತ್ತಿರುವುದು ದುರದೃಷ್ಟಕರ.
ಆದರೆ ಸಾಮಾನ್ಯ ತತ್ವದ ಪ್ರಕಾರ, ಒಬ್ಬ ಮಹಿಳೆಗೆ ಮುಟ್ಟು ಅಥವಾ ಪ್ರಸವಾನಂತರ ಸ್ರಾವದಿಂದ ಶುದ್ಧಳಾಗಿದ್ದೇನೆಂದು ಖಾತ್ರಿಯಾದರೆ—ಅಂದರೆ ಅವಳು ಮಹಿಳೆಯರು ಗುರುತಿಸುವಂತಹ ಬಿಳಿದ್ರವವು ಸ್ರವಿಸುವುದನ್ನು ಕಂಡರೆ—ಅದರ ನಂತರ ಸ್ರವಿಸುವ ಕಂದು, ಹಳದಿ ಸ್ರಾವಗಳು ಅಥವಾ ರಕ್ತಕಲೆಗಳು ಅಥವಾ ತೇವಗಳ ಬಗ್ಗೆ ಅವಳು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇವು ಯಾವುದೂ ಮುಟ್ಟಿನ ರಕ್ತವಲ್ಲ. ಇವು ಅವಳನ್ನು ನಮಾಝ್. ಉಪವಾಸ ಅಥವಾ ಲೈಂಗಿಕ ಸಂಭೋಗದಿಂದ ತಡೆಯುವುದಿಲ್ಲ. ಏಕೆಂದರೆ ಅದು ಮುಟ್ಟಿನ ರಕ್ತವಲ್ಲ. ಉಮ್ಮು ಅತಿಯ್ಯ ಹೇಳುತ್ತಾರೆ: "ನಾವು ಹಳದಿ ಅಥವಾ ಕಂದು ರಕ್ತವನ್ನು ಕಂಡರೆ ಅದರ ಬಗ್ಗೆ ಚಿಂತಿಸುತ್ತಿರಲಿಲ್ಲ." (ಬುಖಾರಿ) ಅಬೂದಾವೂದ್ರ ವರದಿಯಲ್ಲಿ "ಶುದ್ಧಿಯಾದ ನಂತರ" ಎಂಬ ಹೆಚ್ಚಳವಿದೆ. ಇದರ ಸನದ್ ಸಹೀಹ್ ಆಗಿದೆ.
ಆದ್ದರಿಂದ, ಶುದ್ಧಿಯು ಖಾತ್ರಿಯಾದ ನಂತರ ಉಂಟಾಗುವ ಇಂತಹ ವಿಷಯಗಳು ಮಹಿಳೆಗೆ ತೊಂದರೆ ನೀಡುವುದಿಲ್ಲ. ಅವು ಅವಳನ್ನು ನಮಾಝ್, ಉಪವಾಸ ಮತ್ತು ಲೈಂಗಿಕ ಸಂಭೋಗದಿಂದ ತಡೆಯುವುದೂ ಇಲ್ಲ. ಆದರೆ ಶುದ್ಧಿಯನ್ನು ಕಾಣುವ ತನಕ ಅವಳು ಯಾವುದಕ್ಕೂ ಆತುರಪಡಬಾರದು. ಏಕೆಂದರೆ, ಕೆಲವು ಮಹಿಳೆಯರು ರಕ್ತವು ನಿಂತ ತಕ್ಷಣ ಬಿಳಿದ್ರವವನ್ನು ಕಾಣುವುದಕ್ಕೆ ಮೊದಲೇ ಆತುರದಿಂದ ಸ್ನಾನ ಮಾಡಿಬಿಡುತ್ತಾರೆ. ಈ ಕಾರಣದಿಂದಲೇ ಸಹಾಬಾ ಮಹಿಳೆಯರು ಆಯಿಶ(ರ) ರಿಗೆ ರಕ್ತವಿರುವ ಹತ್ತಿತುಂಡುಗಳನ್ನು ಕಳುಹಿಸಿಕೊಡುತ್ತಿದ್ದರು. ಆಗ ಅವರು, "ಬಿಳಿದ್ರವ ಕಾಣುವ ತನಕ ಆತುರಪಡಬೇಡಿ" ಎಂದು ಹೇಳುತ್ತಿದ್ದರು.
ಕೆಲವು ಮಹಿಳೆಯರಿಗೆ ನಿರಂತರ ರಕ್ತಸ್ರಾವವಾಗುತ್ತದೆ. ಕೆಲವೊಮ್ಮೆ ಅದು ಒಂದು ಅಥವಾ ಎರಡು ದಿನ ನಿಂತು ಪುನಃ ಮುಂದುವರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮಾಝ್, ಉಪವಾಸ ಮತ್ತು ಇತರ ಆರಾಧನೆಗಳನ್ನು ನಿರ್ವಹಿಸುವ ವಿಧಿಯೇನು?
ಅನೇಕ ವಿದ್ವಾಂಸರ ಅಭಿಪ್ರಾಯ ಪ್ರಕಾರ, ಮಹಿಳೆಗೆ ಒಂದು ನಿಶ್ಚಿತ ಮುಟ್ಟಿನ ಅವಧಿಯಿದ್ದು, ಆ ಅವಧಿಯು ಮುಗಿದರೆ ಅವಳು ಸ್ನಾನ ಮಾಡಿ ನಮಾಝ್ ಮತ್ತು ಉಪವಾಸ ಆಚರಿಸಬಹುದು. ಎರಡು ಅಥವಾ ಮೂರು ದಿನಗಳ ನಂತರ ಅವಳು ಕಾಣುವ ರಕ್ತವು ಮುಟ್ಟಿನ ರಕ್ತವಲ್ಲ. ಏಕೆಂದರೆ, ಈ ವಿದ್ವಾಂಸರ ಪ್ರಕಾರ ಶುದ್ಧಿಯ ಕನಿಷ್ಟ ಅವಧಿ 13 ದಿನಗಳು.
ಆದರೆ ಇತರ ಕೆಲವು ವಿದ್ವಾಂಸರ ಪ್ರಕಾರ, ಮಹಿಳೆ ರಕ್ತವನ್ನು ಕಾಣುವಾಗಲೆಲ್ಲಾ ಅವಳು ಮುಟ್ಟಿನಲ್ಲಿರುತ್ತಾಳೆ ಮತ್ತು ಅವಳು ಶುದ್ಧಿಯನ್ನು ಕಾಣುವಾಗಲೆಲ್ಲಾ ಶುದ್ಧಿಯಲ್ಲಿರುತ್ತಾಳೆ. ಎರಡು ಮುಟ್ಟಿನ ಅವಧಿಗಳ ನಡುವೆ 13 ದಿನಗಳ ಅಂತರವಿಲ್ಲದಿದ್ದರೂ ಸಹ.
ಮಹಿಳೆಯರಿಗೆ ಯಾವುದು ಶ್ರೇಷ್ಠ? ರಮದಾನ್ ತಿಂಗಳ ರಾತ್ರಿಗಳಲ್ಲಿ ಮನೆಯಲ್ಲಿ ನಮಾಝ್ ನಿರ್ವಹಿಸುವುದೋ ಅಥವಾ ಮಸೀದಿಯಲ್ಲಿ ನಮಾಝ್ ನಿರ್ವಹಿಸುವುದೋ? ವಿಶೇಷವಾಗಿ ಮಸೀದಿಯಲ್ಲಿ ಪ್ರವಚನಗಳು ಇರುವಾಗ? ಮಸೀದಿಯಲ್ಲಿ ನಮಾಝ್ ನಿರ್ವಹಿಸುವ ಮಹಿಳೆಯರಿಗೆ ನಿಮ್ಮ ಸಲಹೆಗಳೇನು?
ಮನೆಯಲ್ಲಿ ನಮಾಝ್ ನಿರ್ವಹಿಸುವುದೇ ಶ್ರೇಷ್ಠ. ಏಕೆಂದರೆ, ಪ್ರವಾದಿ(ಸ) ರವರ ಸಾರ್ವತ್ರಿಕ ವಚನವು ಇದನ್ನೇ ಸೂಚಿಸುತ್ತದೆ: "ಅವರಿಗೆ ಅವರ ಮನೆಯೇ ಶ್ರೇಷ್ಠ." ಏಕೆಂದರೆ ಮಹಿಳೆಯರು ಹೊರಗೆ ಹೋಗುವುದು ಹೆಚ್ಚಿನ ಸಂದರ್ಭಗಳಲ್ಲೂ ಅನೇಕ ಪರೀಕ್ಷೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಮಹಿಳೆ ನಮಾಝಿಗಾಗಿ ಮಸೀದಿಗೆ ಹೋಗುವುದರಿಂದ ಮನೆಯಲ್ಲೇ ಉಳಿಯುವುದು ಶ್ರೇಷ್ಠವಾಗಿದೆ. ಪ್ರವಚನಗಳನ್ನು ಧ್ವನಿಮುದ್ರಣಗಳ ಮೂಲಕವೂ ಆಲಿಸಬಹುದು.
ನಮಾಝ್ ನಿರ್ವಹಿಸಲು ಮಸೀದಿಗೆ ಹೋಗುವ ಮಹಿಳೆಯರಿಗೆ ನನ್ನ ಸಲಹೆ ಏನೆಂದರೆ, ಅವರು ತಮ್ಮ ಅಲಂಕಾರಗಳನ್ನು ಬಹಿರಂಗಪಡಿಸದೆ ಮತ್ತು ಸುಗಂಧದ್ರವ್ಯಗಳನ್ನು ಹಚ್ಚದೆ ಹೊರಡಬೇಕು.
ರಮದಾನ್ ತಿಂಗಳಲ್ಲಿ ಉಪವಾಸದಲ್ಲಿರುವ ಮಹಿಳೆ ಆಹಾರದ ರುಚಿ ನೋಡುವುದರ ವಿಧಿಯೇನು?
ಅದು ಅಗತ್ಯವಾಗಿರುವುದರಿಂದ ಅದರಲ್ಲಿ ತೊಂದರೆಯಿಲ್ಲ. ಆದರೆ ಅವಳು ರುಚಿ ನೋಡಿದ್ದನ್ನು ಉಗುಳಬೇಕು.
ಗರ್ಭಧಾರಣೆಯ ಪ್ರಾಥಮಿಕ ಹಂತದಲ್ಲಿದ್ದ ಮಹಿಳೆ ಅಪಘಾತದಿಂದ ಗಾಯಗೊಂಡಳು. ತೀವ್ರ ರಕ್ತಸ್ರಾವದಿಂದ ಅವಳಿಗೆ ಗರ್ಭಪಾತವಾಯಿತು. ಅವಳು ಉಪವಾಸ ಮುರಿಯಬೇಕೇ ಅಥವಾ ಮುಂದುವರಿಸಬೇಕೇ? ಮುರಿದರೆ ಅವಳು ತಪ್ಪಿತಸ್ಥಳಾಗುವಳೇ?
ನಾವು ಹೇಳುವುದೇನೆಂದರೆ, ಗರ್ಭಿಣಿಯರಿಗೆ ಮುಟ್ಟಾಗುವುದಿಲ್ಲ. ಇಮಾಂ ಅಹ್ಮದ್ ಹೇಳಿದಂತೆ, ಮಹಿಳೆಯರು ಮುಟ್ಟು ನಿಲ್ಲುವುದರಿಂದ ತಾವು ಗರ್ಭಿಣಿಯರೆಂದು ತಿಳಿದುಕೊಳ್ಳುತ್ತಾರೆ. ವಿದ್ವಾಂಸರು ಹೇಳುವಂತೆ, ಗರ್ಭದಲ್ಲಿರುವ ಶಿಶುವಿಗೆ ಆಹಾರ ತಲುಪಿಸಲು ಅಲ್ಲಾಹು ಮುಟ್ಟು ಎಂಬ ವ್ಯವಸ್ಥೆಯನ್ನು ಸೃಷ್ಟಿಸಿದ್ದಾನೆ. ಮಹಿಳೆ ಗರ್ಭ ಧರಿಸುವಾಗ ಮುಟ್ಟು ನಿಲ್ಲುತ್ತದೆ.
ಆದರೆ ಕೆಲವು ಮಹಿಳೆಯರಿಗೆ ಗರ್ಭಧಾರಣೆಯ ನಂತರವೂ ಮೊದಲಿನಂತೆ ಮುಟ್ಟು ಆಗುತ್ತಲೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಅದನ್ನು ನಿಜವಾದ ಮುಟ್ಟು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಗರ್ಭಧಾರಣೆಯಿಂದ ಯಾವುದೇ ಪರಿಣಾಮಕ್ಕೊಳಗಾಗದೆ ಮುಂದುವರಿದಿದೆ. ಆದ್ದರಿಂದ ಸಾಧಾರಣ ಮುಟ್ಟು ಯಾವುದರಿಂದೆಲ್ಲಾ ಮಹಿಳೆಯನ್ನು ತಡೆಯುತ್ತದೋ ಅವೆಲ್ಲದರಿಂದಲೂ ಇದು ಅವಳನ್ನು ತಡೆಯುತ್ತದೆ. ಅದು ಅವಳಿಗೆ ಕಡ್ಡಾಯಗೊಳಿಸುವುದೆಲ್ಲವನ್ನು ಇದು ಕೂಡ ಕಡ್ಡಾಯಗೊಳಿಸುತ್ತದೆ. ಅದು ಅಸಿಂಧುಗೊಳಿಸುವುದೆಲ್ಲವನ್ನು ಇದೂ ಕೂಡ ಅಸಿಂಧುಗೊಳಿಸುತ್ತದೆ.
ಒಟ್ಟಿನಲ್ಲಿ, ಗರ್ಭಿಣಿ ಮಹಿಳೆಯಿಂದ ಸ್ರವಿಸುವ ರಕ್ತವು ಎರಡು ವಿಧಗಳಲ್ಲಿವೆ:
ಮೊದಲನೆಯ ವಿಧವನ್ನು ಮುಟ್ಟು ಎಂದು ಪರಿಗಣಿಸಲಾಗುತ್ತದೆ. ಅದು ಗರ್ಭಧಾರಣೆಗೆ ಮೊದಲು ಇದ್ದಂತೆಯೇ ಈಗಲೂ ಮುಂದುವರಿದಿದೆ. ಅಂದರೆ, ಗರ್ಭಧಾರಣೆಯು ಅದರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದನ್ನು ಮುಟ್ಟು ಎಂದು ಪರಿಗಣಿಸಲಾಗುತ್ತದೆ.
ಎರಡನೆಯ ವಿಧವು, ಗರ್ಭಿಣಿಯಾಗಿರುವಾಗ ಯಾವುದೇ ಒಂದು ಅಪಘಾತದಿಂದ, ಭಾರವನ್ನು ಎತ್ತುವುದರಿಂದ, ಕೆಳಗೆ ಬೀಳುವುದರಿಂದ ಸಂಭವಿಸುವ ರಕ್ತವಾಗಿದೆ. ಇದು ಮುಟ್ಟಿನ ರಕ್ತವಲ್ಲ, ಬದಲಿಗೆ, ಇದು ರಕ್ತನಾಳದಿಂದ ಸ್ರವಿಸುವ ರಕ್ತವಾಗಿದೆ. ಆದ್ದರಿಂದ ಇದು ಅವಳನ್ನು ನಮಾಝ್ ಮತ್ತು ಉಪವಾಸದಿಂದ ತಡೆಯುವುದಿಲ್ಲ. ಬದಲಿಗೆ, ಅವಳು ಶುದ್ಧಿಯ ಸ್ಥಿತಿಯಲ್ಲಿರುತ್ತಾಳೆ.
ಆದರೆ, ಈ ಘಟನೆಯಿಂದ ಗರ್ಭದಲ್ಲಿರುವ ಶಿಶು ಅಥವಾ ಭ್ರೂಣ ಹೊರಬಂದರೆ, ವಿದ್ವಾಂಸರು ಹೇಳುವ ಪ್ರಕಾರ, ಹೊರಬಂದ ಭ್ರೂಣದಲ್ಲಿ ಮಾನವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ಅದು ಹೊರಬಂದ ನಂತರ ಸ್ರವಿಸುವ ರಕ್ತವನ್ನು ಪ್ರಸವಾನಂತರದ ರಕ್ತವೆಂದು ಪರಿಗಣಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವಳು ಶುದ್ಧಳಾಗುವ ತನಕ ನಮಾಝ್, ಉಪವಾಸ ಮತ್ತು ಲೈಂಗಿಕ ಸಂಭೋಗಗಳನ್ನು ತೊರೆಯಬೇಕು.
ಆದರೆ ಹೊರಬಂದ ಭ್ರೂಣದಲ್ಲಿ ಮಾನವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸದಿದ್ದರೆ, ಅದನ್ನು ಪ್ರಸವಾನಂತರದ ರಕ್ತವೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ, ಅದು ರಕ್ತಸ್ರಾವವಾಗಿದೆ. ಅದು ಅವಳನ್ನು ನಮಾಝ್, ಉಪವಾಸ ಮುಂತಾದವುಗಳಿಂದ ತಡೆಯುವುದಿಲ್ಲ.
ವಿದ್ವಾಂಸರು ಹೇಳುವಂತೆ, ಮಾನವ ಲಕ್ಷಣಗಳು ಗೋಚರವಾಗಲು ಕನಿಷ್ಟ 81 ದಿನಗಳು ಬೇಕಾಗಿವೆ. ಅಬ್ದುಲ್ಲಾ ಬಿನ್ ಮಸ್ಊದ್(ರ) ಹೇಳುತ್ತಾರೆ: ಸತ್ಯವಂತರು ಮತ್ತು ವಿಶ್ವಾಸಯೋಗ್ಯರಾದ ಪ್ರವಾದಿ(ಸ) ರವರು ಹೇಳಿದರು: "ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಅವರ ತಾಯಿಯ ಗರ್ಭದಲ್ಲಿ 40 ದಿನಗಳಲ್ಲಿ ಜೋಡಿಸಲಾಗುತ್ತದೆ. ನಂತರ ಅವರು ಅಷ್ಟೇ ದಿನಗಳ ಕಾಲ ಹೆಪ್ಪುಗಟ್ಟಿದ ರಕ್ತದ ರೂಪದಲ್ಲಿರುತ್ತಾರೆ. ನಂತರ ಅವರು ಅಷ್ಟೇ ದಿನಗಳ ಕಾಲ ಮಾಂಸ ಮುದ್ದೆಯ ರೂಪದಲ್ಲಿರುತ್ತಾರೆ. ನಂತರ ಅವರ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ಆ ದೇವದೂತರು ಅವರ ಉಪಜೀವನ, ಆಯುಷ್ಯ, ಕರ್ಮ ಮತ್ತು ಭಾಗ್ಯ-ನಿರ್ಭಾಗ್ಯಗಳನ್ನು ದಾಖಲಿಸುತ್ತಾರೆ." ಇದಕ್ಕಿಂತ ಮೊದಲು ಮಾನವ ಲಕ್ಷಣಗಳು ಗೋಚರವಾಗಲು ಸಾಧ್ಯವಿಲ್ಲ. ವಿದ್ವಾಂಸರು ಹೇಳುವಂತೆ, ಹೆಚ್ಚಿನ ಸಂದರ್ಭಗಳಲ್ಲಿಯೂ 90 ದಿನಗಳ ಮೊದಲು ಮಾನವ ಲಕ್ಷಣಗಳು ಗೋಚರವಾಗುವುದಿಲ್ಲ.
ನಾನೊಬ್ಬ ಮಹಿಳೆಯಾಗಿದ್ದು, ಕಳೆದ ವರ್ಷ ಮೂರು ತಿಂಗಳ ಗರ್ಭಿಣಿಯಾಗಿರುವಾಗ ನನಗೆ ಗರ್ಭಪಾತವಾಯಿತು. ಶುದ್ಧಿಯಾಗುವ ತನಕ ನಾನು ನಮಾಝ್ ಮಾಡಲಿಲ್ಲ. ನನ್ನೊಂದಿಗೆ ಕೆಲವರು ನಮಾಝ್ ಮಾಡಬೇಕೆಂದು ಹೇಳಿದ್ದರು. ನಾನೇನು ಮಾಡಲಿ? ಆ ದಿನಗಳ ಸಂಖ್ಯೆ ಕರಾರುವಾಕ್ಕಾಗಿ ನನಗೆ ತಿಳಿದಿಲ್ಲ.
ವಿದ್ವಾಂಸರ ಪ್ರಸಿದ್ಧ ಅಭಿಪ್ರಾಯ ಪ್ರಕಾರ, ಗರ್ಭಿಣಿಯಾಗಿ ಮೂರು ತಿಂಗಳ ಬಳಿಕ ಗರ್ಭಪಾತವಾದರೆ, ಅವಳು ನಮಾಝ್ ನಿರ್ವಹಿಸಬೇಕಾಗಿಲ್ಲ. ಏಕೆಂದರೆ, ಮಾನವ ಲಕ್ಷಣಗಳು ಸ್ಪಷ್ಟವಾಗಿರುವ ಭ್ರೂಣಕ್ಕೆ ಗರ್ಭಪಾತವಾದರೆ, ಅದರಿಂದ ಹೊರಬರುವ ರಕ್ತವು ಪ್ರಸವಾನಂತರದ ರಕ್ತವಾಗಿದ್ದು ಆ ಸಂದರ್ಭದಲ್ಲಿ ಅವಳು ನಮಾಝ್ ಮಾಡಬಾರದು.
ವಿದ್ವಾಂಸರು ಹೇಳುವಂತೆ, ಭ್ರೂಣಕ್ಕೆ 81 ದಿನಗಳು ತುಂಬಿದರೆ ಮಾನವ ಲಕ್ಷಣಗಳು ಗೋಚರವಾಗಬಹುದು. ಇದು ಮೂರು ತಿಂಗಳಿಗಿಂತಲೂ ಕಡಿಮೆ ಅವಧಿಯಾಗಿದೆ. ಆದ್ದರಿಂದ ಗರ್ಭಪಾತವಾದದ್ದು ಮೂರು ತಿಂಗಳೊಳಗೆ ಎಂದು ಖಾತ್ರಿಯಿದ್ದರೆ, ಅವಳಿಂದ ಹೊರಬರುವುದು ರಕ್ತಸ್ರಾವವಾಗಿದ್ದು, ಅದಕ್ಕಾಗಿ ಅವಳು ನಮಾಝ್ ತೊರೆಯಬಾರದು.
ಆದ್ದರಿಂದ ಈ ಮಹಿಳೆ ತನ್ನ ಸ್ಥಿತಿಯ ಬಗ್ಗೆ ಸ್ವಯಂ ನಿರ್ಧರಿಸಬೇಕು. ಅವಳಿಗೆ ಗರ್ಭಪಾತವಾದದ್ದು 80 ದಿನಗಳ ಮೊದಲಾಗಿದ್ದರೆ, ಅವಳ ನಮಾಝನ್ನು ಕಝಾ ನಿರ್ವಹಿಸಬೇಕು. ತಾನು ಎಷ್ಟು ನಮಾಝ್ಗಳನ್ನು ಬಿಟ್ಟಿದ್ದೇನೆಂದು ಅವಳಿಗೆ ಸರಿಯಾಗಿ ಖಾತ್ರಿಯಿಲ್ಲದಿದ್ದರೆ, ಅವಳು ಸರಿಯಾಗಿ ಪರಿಶೋಧಿಸಿ ಅಂದಾಜು ಮಾಡಿದಾಗ ಎಷ್ಟು ದಿನಗಳೆಂದು ತಿಳಿಯುತ್ತದೋ ಅಷ್ಟು ದಿನಗಳ ನಮಾಝನ್ನು ಕಝಾ ನಿರ್ವಹಿಸಬೇಕು.
ಒಬ್ಬ ಮಹಿಳೆ ಹೇಳುತ್ತಾಳೆ: ಅವಳಿಗೆ ಉಪವಾಸವು ಕಡ್ಡಾಯವಾದಾಗಿನಿಂದ ಅವಳು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಿದ್ದಾಳೆ. ಆದರೆ ಮುಟ್ಟಿನಿಂದಾಗಿ ಬಿಟ್ಟುಹೋಗುವ ಉಪವಾಸಗಳನ್ನು ಅವಳು ಕಝಾ ನಿರ್ವಹಿಸಿಲ್ಲ. ಬಿಟ್ಟುಹೋದ ಉಪವಾಸಗಳ ಸಂಖ್ಯೆಯು ಅವಳಿಗೆ ತಿಳಿದಿಲ್ಲವಾದ್ದರಿಂದ ಆಕೆ ಏನು ಮಾಡಬೇಕೆಂದು ತಮ್ಮಲ್ಲಿ ಸಲಹೆ ಕೇಳುತ್ತಿದ್ದಾಳೆ.
ಸತ್ಯವಿಶ್ವಾಸಿ ಮಹಿಳೆಯರಲ್ಲಿ ಹೀಗೆ ಸಂಭವಿಸುವುದು ಬಹಳ ವಿಷಾದನೀಯ ಸಂಗತಿ. ಈ ನಿರ್ಲಕ್ಷ್ಯವು—ಅಂದರೆ ಬಿಟ್ಟುಹೋದ ಉಪವಾಸಗಳನ್ನು ಕಝಾ ನಿರ್ವಹಿಸಬೇಕೆಂಬ ನಿರ್ಲಕ್ಷ್ಯವು—ಒಂದೋ ಅಜ್ಞಾನದಿಂದ ಅಥವಾ ಅಸಡ್ಡೆಯಿಂದ ಉಂಟಾಗುತ್ತದೆ. ಎರಡೂ ಕೂಡ ದುರದೃಷ್ಟಕರವಾಗಿದೆ. ಅಜ್ಞಾನಕ್ಕೆ ಮದ್ದು ಜ್ಞಾನವನ್ನು ಪಡೆಯುವುದು ಅಥವಾ ವಿದ್ವಾಂಸರಲ್ಲಿ ಕೇಳುವುದು. ಅಸಡ್ಡೆಗೆ ಮದ್ದು ಅಲ್ಲಾಹನನ್ನು ಭಯಪಡುವುದು, ಅವನನ್ನು ಗಮನಿಸುವುದು, ಅವನ ಶಿಕ್ಷೆಯನ್ನು ಭಯಪಡುವುದು ಮತ್ತು ಅವನಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಲು ಆತುರಪಡುವುದು.
ಆದ್ದರಿಂದ, ಈ ಮಹಿಳೆ ತನ್ನ ತಪ್ಪಿಗಾಗಿ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲಿ. ಬಿಟ್ಟುಹೋದ ಉಪವಾಸಗಳು ಎಷ್ಟೆಂದು ತನಗೆ ಸಾಧ್ಯವಾದ ರೀತಿಯಲ್ಲಿ ಲೆಕ್ಕ ಮಾಡಿ ಅವುಗಳನ್ನು ಕಝಾ ನಿರ್ವಹಿಸಲಿ. ಇದರಿಂದ ಅವಳು ತನ್ನ ಕಡ್ಡಾಯ ಕರ್ತವ್ಯವನ್ನು ನೆರವೇರಿಸಿದಂತಾಗುವುದು. ಅವಳ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುವನೆಂದು ನಾವು ನಿರೀಕ್ಷಿಸುತ್ತೇವೆ.
ಒಬ್ಬ ಮಹಿಳೆಗೆ ನಮಾಝಿನ ಸಮಯ ಆರಂಭವಾದ ಬಳಿಕ ಮುಟ್ಟಾದರೆ ಅದರ ವಿಧಿಯೇನು? ಶುದ್ಧಳಾದ ನಂತರ ಅವಳು ಅದನ್ನು ಕಝಾ ನಿರ್ವಹಿಸಬೇಕೇ? ಅದೇ ರೀತಿ ನಮಾಝಿನ ಸಮಯವು ಮುಗಿಯುವುದಕ್ಕೆ ಮೊದಲೇ ಅವಳು ಶುದ್ಧಳಾದರೆ ಅವಳೇನು ಮಾಡಬೇಕು?
ಮೊದಲನೆಯದಾಗಿ, ಒಬ್ಬ ಮಹಿಳೆಗೆ ನಮಾಝಿನ ಸಮಯವಾದ ನಂತರ ಮುಟ್ಟಾದರೆ, ಮುಟ್ಟಾಗುವುದಕ್ಕೆ ಮೊದಲೇ ಅವಳು ಆ ನಮಾಝನ್ನು ನಿರ್ವಹಿಸದಿದ್ದರೆ, ಶುದ್ಧಳಾದ ನಂತರ ಅದನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಏಕೆಂದರೆ ಪ್ರವಾದಿ(ಸ) ರವರು ಹೇಳುತ್ತಾರೆ: “ಯಾರಿಗೆ ನಮಾಝಿನ (ಸಮಯವು ಮುಗಿಯುವುದಕ್ಕೆ ಮೊದಲು ಅದರ) ಒಂದು ರಕಅತ್ ದೊರಕುತ್ತದೋ ಅವನಿಗೆ ಆ ನಮಾಝ್ ದೊರಕುತ್ತದೆ.” ಆದ್ದರಿಂದ ಒಬ್ಬ ಮಹಿಳೆಗೆ ನಮಾಝಿನ ಒಂದು ರಕಅತ್ ನಿರ್ವಹಿಸುವ ಸಮಯವು ದೊರಕಿ, ಅದನ್ನು ನಿರ್ವಹಿಸುವ ಮೊದಲೇ ಮುಟ್ಟಾದರೆ, ಶುದ್ಧಳಾದ ನಂತರ ಅದನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ.
ಎರಡನೆಯದಾಗಿ, ನಮಾಝಿನ ಸಮಯವು ಮುಗಿಯುವ ಮೊದಲೇ ಅವಳು ಶುದ್ಧಳಾದರೆ, ಆ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಉದಾಹರಣೆಗೆ, ಸೂರ್ಯೋದಯವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಬಾಕಿಯಿರುವಾಗ ಅವಳು ಶುದ್ಧಳಾದರೆ, ಅವಳು ಫಜ್ರ್ ನಮಾಝನ್ನು ಕಝಾ ನಿರ್ವಹಿಸಬೇಕಾಗಿದೆ. ಅದೇ ರೀತಿ, ಸೂರ್ಯಾಸ್ತವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಬಾಕಿಯಿರುವಾಗ ಅವಳು ಶುದ್ಧಳಾದರೆ, ಅವಳು ಅಸರ್ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಅದೇ ರೀತಿ, ಮಧ್ಯರಾತ್ರಿಯಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಬಾಕಿಯಿರುವಾಗ ಅವಳು ಶುದ್ಧಳಾದರೆ, ಅವಳು ಇಶಾ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಅವಳು ಮಧ್ಯರಾತ್ರಿಯ ನಂತರ ಶುದ್ಧಳಾದರೆ, ಅವಳು ಇಶಾ ನಮಾಝ್ ಕಝಾ ನಿರ್ವಹಿಸಬೇಕಾಗಿಲ್ಲ. ಫಜ್ರ್ ನಮಾಝಿನ ಸಮಯವಾದಾಗ ಅವಳು ಫಜ್ರ್ ನಮಾಝ್ ನಿರ್ವಹಿಸಿದರೆ ಸಾಕು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ನಿರ್ಭಯರಾಗಿರುವಾಗ, ನಮಾಝನ್ನು ಯಥಾಪ್ರಕಾರ ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ." [ನಿಸಾಅ್: 103] ಅಂದರೆ ನಮಾಝ್ ಸಮಯ ನಿಗದಿಪಡಿಸಲಾದ ಕಡ್ಡಾಯ ಆರಾಧನೆಯಾಗಿದೆ. ನಮಾಝನ್ನು ಅದರ ಸಮಯಕ್ಕಿಂತ ಹೆಚ್ಚು ತಡಮಾಡುವುದು ಮತ್ತು ಅದನ್ನು ಅದರ ಸಮಯಕ್ಕಿಂತ ಮೊದಲು ನಿರ್ವಹಿಸುವುದು ಸಮ್ಮತಾರ್ಹವಲ್ಲ.
ನಾನು ನಮಾಝ್ ಮಾಡುತ್ತಿರುವಾಗ ನನ್ನ ಮುಟ್ಟು ಪ್ರಾರಂಭವಾಯಿತು. ನಾನೇನು ಮಾಡಬೇಕು? ಮುಟ್ಟಿನ ಸಮಯದ ನಮಾಝನ್ನು ನಾನು ಕಝಾ ನಿರ್ವಹಿಸಬೇಕೇ?
ನಮಾಝಿನ ಸಮಯವು ಆರಂಭವಾದ ನಂತರ ಮುಟ್ಟು ಉಂಟಾದರೆ—ಅಂದರೆ ಉದಾಹರಣೆಗೆ, ಮಧ್ಯಾಹ್ನ ಅರ್ಧ ಗಂಟೆಯ ನಂತರ ಉಂಟಾದರೆ—ಶುದ್ಧಳಾದ ನಂತರ ಈ ನಮಾಝನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಮುಟ್ಟಾಗುವುದಕ್ಕೆ ಮೊದಲೇ ಈ ನಮಾಝಿನ ಸಮಯವು ಆರಂಭವಾಗಿದೆ. ಅಲ್ಲಾಹನು ಹೇಳುತ್ತಾನೆ: "ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ." [ನಿಸಾಅ್: 103]
ಮುಟ್ಟಿನ ಸಮಯದಲ್ಲಿ ಬಿಟ್ಟುಹೋದ ನಮಾಝ್ಗಳನ್ನು ಕಝಾ ನಿರ್ವಹಿಸಬೇಕಾಗಿಲ್ಲ. ಏಕೆಂದರೆ, ಒಂದು ದೀರ್ಘ ಹದೀಸಿನಲ್ಲಿ ಪ್ರವಾದಿ(ಸ) ರವರು ಹೇಳುತ್ತಾರೆ: “ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?” ಮುಟ್ಟಿನ ಸಮಯದಲ್ಲಿ ಬಿಟ್ಟುಹೋದ ನಮಾಝ್ಗಳನ್ನು ಕಝಾ ನಿರ್ವಹಿಸಬೇಕಾಗಿಲ್ಲ ಎಂದು ವಿದ್ವಾಂಸರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಅವಳು ಶುದ್ಧಳಾದ ನಂತರ ಆ ಸಮಯದ ನಮಾಝ್ನ ಒಂದು ರಕಅತ್ ಅಥವಾ ಅದಕ್ಕಿಂತ ಹೆಚ್ಚು ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ ಅವಳು ಆ ಸಮಯದ ನಮಾಝನ್ನು ನಿರ್ವಹಿಸಬೇಕು. ಏಕೆಂದರೆ, ಪ್ರವಾದಿ(ಸ) ರವರು ಹೇಳುತ್ತಾರೆ: “ಯಾರಿಗೆ ನಮಾಝಿನ (ಸಮಯವು ಮುಗಿಯುವುದಕ್ಕೆ ಮೊದಲು ಅದರ) ಒಂದು ರಕಅತ್ ದೊರಕುತ್ತದೋ ಅವನಿಗೆ ಆ ನಮಾಝ್ ದೊರಕುತ್ತದೆ.” ಅವಳು ಅಸರ್ ನಮಾಝಿನ ಸಮಯದಲ್ಲಿ ಶುದ್ಧಳಾಗಿ ಸೂರ್ಯಾಸ್ತವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ, ಅವಳು ಅಸರ್ ನಮಾಝ್ ನಿರ್ವಹಿಸಬೇಕು. ಅದೇ ರೀತಿ, ಅವಳು ಸೂರ್ಯೋದಯಕ್ಕೆ ಮೊದಲು ಶುದ್ಧಳಾಗಿ ಸೂರ್ಯೋದಯವಾಗಲು ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಉಳಿದಿದ್ದರೆ, ಅವಳು ಫಜ್ರ್ ನಮಾಝ್ ನಿರ್ವಹಿಸಬೇಕು.
ನನ್ನ ತಾಯಿಗೆ 65 ವರ್ಷ ಪ್ರಾಯವಾಗಿದೆ. 19 ವರ್ಷಗಳಿಂದ ಅವರಿಗೆ ಮಕ್ಕಳಾಗಿಲ್ಲ. ಇತ್ತೀಚೆಗೆ ಮೂರು ವರ್ಷಗಳಿಂದ ಅವರಿಗೆ ರಕ್ತಸ್ರಾವವಾಗುತ್ತಿದೆ. ಅದು ಕಾಯಿಲೆಯಿಂದ ಉಂಟಾದದ್ದೆಂದು ತೋರುತ್ತದೆ. ಉಪವಾಸದ ತಿಂಗಳು ಸಮೀಪಿಸುತ್ತಿರುವುದರಿಂದ ತಾವು ಅವಳಿಗೆ ಏನು ಸಲಹೆ ನೀಡುತ್ತೀರಿ? ಅವಳಂತಹ ಮಹಿಳೆಯರು ಏನು ಮಾಡಬೇಕು?
ರಕ್ತಸ್ರಾವವಿರುವ ಇವಳಂತಹ ಮಹಿಳೆಯರು ರಕ್ತಸ್ರಾವ ಆರಂಭವಾಗುವುದಕ್ಕೆ ಮೊದಲು ಅವರ ಮುಟ್ಟಿನ ಅವಧಿಗಳು ಹೇಗಿದ್ದವೋ ಅದನ್ನು ಅನುಸರಿಸಿ ನಮಾಝ್ ಮತ್ತು ಉಪವಾಸಗಳನ್ನು ತೊರೆಯಬೇಕು. ಉದಾಹರಣೆಗೆ, ಅವಳಿಗೆ ಎಲ್ಲಾ ತಿಂಗಳ ಪ್ರಾರಂಭದಲ್ಲಿ ಆರು ದಿನ ಮುಟ್ಟಾಗುತ್ತಿದ್ದರೆ, ಅವಳು ಎಲ್ಲಾ ತಿಂಗಳ ಪ್ರಾರಂಭದ ಆರು ದಿನ ನಮಾಝ್ ಮತ್ತು ಉಪವಾಸಗಳನ್ನು ತೊರೆಯಬೇಕು. ಆರು ದಿನಗಳು ಕಳೆದರೆ, ಸ್ನಾನ ಮಾಡಿ ನಮಾಝ್ ಮತ್ತು ಉಪವಾಸ ಆರಂಭಿಸಬೇಕು.
ಇಂತಹ ಮಹಿಳೆಯರು ನಮಾಝ್ ಮಾಡುವುದು ಹೇಗೆಂದರೆ, ಅವರು ತಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿ, ರಕ್ತ ಸೋರದಂತೆ ಹತ್ತಿಯನ್ನಿಟ್ಟು ವುದೂ ನಿರ್ವಹಿಸಬೇಕು. ಅವರು ಇದನ್ನು ಕಡ್ಡಾಯ ನಮಾಝಿನ ಸಮಯ ಆರಂಭವಾದ ಬಳಿಕ ಮಾಡಬೇಕು. ಅದೇ ರೀತಿ ಕಡ್ಡಾಯ ನಮಾಝಿನ ಸಮಯವಲ್ಲದ ಬೇರೆ ಸಮಯಗಳಲ್ಲಿ ಐಚ್ಚಿಕ ನಮಾಝ್ ನಿರ್ವಹಿಸಲು ಬಯಸಿದರೂ ಹೀಗೆಯೇ ಮಾಡಬೇಕು.
ಇಂತಹ ಸಂದರ್ಭಗಳಲ್ಲಿ ಅವರು ಕಷ್ಟ ಅನುಭವಿಸುವುದರಿಂದ, ಅವರು ಝುಹರ್ ಮತ್ತು ಅಸರ್ ನಮಾಝನ್ನು ಹಾಗೂ ಮಗ್ರಿಬ್ ಮತ್ತು ಇಶಾ ನಮಾಝನ್ನು ಜೊತೆಯಾಗಿ ನಿರ್ವಹಿಸಬಹುದು. ಇದರಿಂದ ಅವರಿಗೆ ಝುಹರ್ ಮತ್ತು ಅಸರ್ ನಮಾಝ್ ನಿರ್ವಹಿಸಲು ಒಮ್ಮೆ ಇದನ್ನು ಮಾಡಿದರೆ ಸಾಕಾಗುತ್ತದೆ. ಅದೇ ರೀತಿ, ಮಗ್ರಿಬ್ ಮತ್ತು ಇಶಾ ನಮಾಝ್ ನಿರ್ವಹಿಸಲು ಒಮ್ಮೆ ಮತ್ತು ಫಜ್ರ್ ನಮಾಝ್ ನಿರ್ವಹಿಸಲು ಒಮ್ಮೆ ಇದನ್ನು ಮಾಡಿದರೆ ಸಾಕಾಗುತ್ತದೆ. ಹೀಗೆ ಅವರು ದಿನಕ್ಕೆ ಐದು ಬಾರಿ ಮಾಡುವುದಕ್ಕೆ ಬದಲು ಮೂರು ಬಾರಿ ಮಾಡಿದರೆ ಸಾಕಾಗುತ್ತದೆ.
ನಾನು ಇದನ್ನು ಇನ್ನೊಮ್ಮೆ ವಿವರಿಸುತ್ತೇನೆ: ಅವಳು ಶುದ್ಧಳಾಗಲು ಬಯಸಿದರೆ ತನ್ನ ಖಾಸಗಿ ಭಾಗಗಳನ್ನು ತೊಳೆಯಬೇಕು. ನಂತರ ರಕ್ತಸ್ರಾವವನ್ನು ನಿಲ್ಲಿಸಲು ಹತ್ತಿ ಮುಂತಾದ ವಸ್ತುಗಳನ್ನಿಡಬೇಕು. ನಂತರ ವುದೂ ಮಾಡಿ ಝುಹರ್ ನಾಲ್ಕು ರಕಅತ್, ಅಸರ್ ನಾಲ್ಕು ರಕಅತ್, ಮಗ್ರಿಬ್ ಮೂರು ರಕಅತ್, ಇಶಾ ನಾಲ್ಕು ರಕಅತ್ ಮತ್ತು ಫಜ್ರ್ ಎರಡು ರಕಅತ್ ನಿರ್ವಹಿಸಬೇಕು. ಕೆಲವು ಜನರು ಭಾವಿಸುವಂತೆ ನಮಾಝ್ಗಳನ್ನು ಕಸ್ರ್ ಮಾಡಬಾರದು (ಕುಗ್ಗಿಸಬಾರದು). ಆದರೆ, ಝುಹರ್ ಮತ್ತು ಅಸರ್, ಹಾಗೂ ಮಗ್ರಿಬ್ ಮತ್ತು ಇಶಾ ನಮಾಝ್ಗಳನ್ನು ಜೋಡಿಸಬಹುದು. ಝುಹರ್ ಮತ್ತು ಅಸರ್ ನಮಾಝ್ಗಳನ್ನು ಝುಹರ್ನ ಸಮಯದಲ್ಲಿ ನಿರ್ವಹಿಸಬಹುದು ಅಥವಾ ಅಸರ್ನ ಸಮಯದಲ್ಲಿ ನಿರ್ವಹಿಸಬಹುದು. ಹಾಗೆಯೇ, ಮಗ್ರಿಬ್ ಮತ್ತು ಇಶಾ ನಮಾಝ್ಗಳನ್ನು ಮಗ್ರಿಬ್ನ ಸಮಯದಲ್ಲಿ ನಿರ್ವಹಿಸಬಹುದು ಅಥವಾ ಇಶಾದ ಸಮಯದಲ್ಲಿ ನಿರ್ವಹಿಸಬಹುದು.
ಮುಟ್ಟಾಗಿರುವ ಮಹಿಳೆ ಹದೀಸ್ ಅಥವಾ ಪ್ರವಚನಗಳನ್ನು ಆಲಿಸಲು ಮಸ್ಜಿದುಲ್ ಹರಾಂ (ಮಕ್ಕಾ ಮಸೀದಿ) ನಲ್ಲಿರಬಹುದೇ?
ಮುಟ್ಟಾಗಿರುವ ಮಹಿಳೆಯರು ಮಸ್ಜಿದುಲ್ ಹರಾಂ ಅಥವಾ ಇತರ ಯಾವುದೇ ಮಸೀದಿಗಳಲ್ಲಿ ತಂಗಬಾರದು. ಆದರೆ ಮಸೀದಿಯ ಮೂಲಕ ಹಾದುಹೋಗಲು, ಅಗತ್ಯ ಕೆಲಸಕ್ಕಾಗಿ ಮಸೀದಿಗೆ ಬರಲು ಮುಂತಾದವುಗಳಿಗೆ ಅನುಮತಿಯಿದೆ. ಉದಾಹರಣೆಗೆ ಪ್ರವಾದಿ(ಸ) ರವರು ಆಯಿಶ(ರ) ರೊಡನೆ ಮಸೀದಿಯಿಂದ ಖಮಿರ[1] ತರಲು ಆಜ್ಞಾಪಿಸಿದಾಗ ಅವರು ಹೇಳಿದರು: "ಅದು ಮಸೀದಿಯಲ್ಲಿದೆ ಮತ್ತು ನಾನು ಮುಟ್ಟಿನಲ್ಲಿದ್ದೇನೆ." ಆಗ ಅವರು ಹೇಳಿದರು: "ಮುಟ್ಟು ನಿನ್ನ ಕೈಯಲ್ಲಿಲ್ಲವಲ್ಲಾ." ರಕ್ತದ ಹನಿಗಳು ಮಸೀದಿಯಲ್ಲಿ ಬೀಳುವುದಿಲ್ಲ ಎಂದು ಖಾತ್ರಿಯಿರುವ ಮಹಿಳೆ ಮಸೀದಿಯ ಮೂಲಕ ಹಾದು ಹೋಗುವುದರಲ್ಲಿ ತಪ್ಪಿಲ್ಲ.
ಆದರೆ, ಅವಳಿಗೆ ಮಸೀದಿಯಲ್ಲಿ ಕುಳಿತುಕೊಳ್ಳಲು ಅನುಮತಿಯಿಲ್ಲ.
ಇದಕ್ಕಿರುವ ಪುರಾವೆ ಏನೆಂದರೆ, ಪ್ರವಾದಿ(ಸ) ರವರು ಅವಿವಾಹಿತೆಯರು, ಕನ್ಯೆಯರು ಮತ್ತು ಮುಟ್ಟಿನಲ್ಲಿರುವ ಮಹಿಳೆಯರಿಗೆ ಈದ್ ನಮಾಝ್ ನಿರ್ವಹಿಸಲು ಹೊರಡುವಂತೆ ಆಜ್ಞಾಪಿಸಿದರು. ಆದರೆ ಮುಟ್ಟಿನಲ್ಲಿರುವ ಮಹಿಳೆಯರು ನಮಾಝ್ ಮಾಡುವ ಸ್ಥಳದಿಂದ ದೂರವಿರಬೇಕೆಂದು ಆದೇಶಿಸಿದರು. ಮುಟ್ಟಿನಲ್ಲಿರುವ ಮಹಿಳೆಯರು ಪ್ರವಚನ ಆಲಿಸಲು, ತರಗತಿ ಅಥವಾ ಹದೀಸ್ಗಳನ್ನು ಆಲಿಸಲು ಮಸೀದಿಯಲ್ಲಿ ತಂಗಬಾರದು ಎನ್ನುವುದನ್ನು ಇದು ಸೂಚಿಸುತ್ತದೆ.
*
ನಮಾಝ್ಗೆ ಸಂಬಂಧಿಸಿದ ಶುದ್ಧೀಕರಣ ನಿಯಮಗಳು
ಮಹಿಳೆಯರಿಂದ ಸ್ರವಿಸುವ ದ್ರವ—ಬಿಳಿಯಾಗಿರಲಿ ಅಥವಾ ಹಳದಿಯಾಗಿರಲಿ—ಶುದ್ಧವೇ ಅಥವಾ ಅಶುದ್ಧವೇ? ಅದಕ್ಕಾಗಿ ವುದೂ ನಿರ್ವಹಿಸಬೇಕೇ?—ವಿಶೇಷವಾಗಿ ಅದು ನಿರಂತರ ಸ್ರವಿಸುತ್ತಿದ್ದರೆ. ಅದು ನಿಂತು ನಿಂತು ಸ್ರವಿಸಿದರೆ ಅದರ ವಿಧಿಯೇನು? ವಿಶೇಷವಾಗಿ ಹೆಚ್ಚಿನ ಮಹಿಳೆಯರು—ಅದರಲ್ಲೂ ವಿದ್ಯಾವಂತೆಯರು—ಅದು ನೈಸರ್ಗಿಕ ತೇವವಾಗಿದ್ದು ಅದಕ್ಕೆ ವುದೂ ಅಗತ್ಯವಿಲ್ಲ ಎನ್ನುತ್ತಾರೆ.
ಇದರ ಬಗ್ಗೆ ಸಂಶೋಧನೆ ಮಾಡಿದ ಬಳಿಕ ನನಗೆ ತಿಳಿದು ಬಂದದ್ದೇನೆಂದರೆ, ಅದು ಮೂತ್ರಕೋಶದಿಂದ ಸ್ರವಿಸುವ ದ್ರವವಾಗಿರದೆ, ಗರ್ಭಕೋಶದಿಂದ ಹೊರಬರುವ ದ್ರವವಾಗಿದ್ದರೆ ಅದು ಶುದ್ಧವಾಗಿದೆ. ಆದರೂ ಅದರಿಂದ ವುದೂ ಅಸಿಂಧುವಾಗುತ್ತದೆ. ಏಕೆಂದರೆ, ವುದೂ ಅಸಿಂಧುವಾಗಲು ಆ ವಸ್ತು ಅಶುದ್ಧವಾಗಿರಬೇಕೆಂದೇನಿಲ್ಲ. ಉದಾಹರಣೆಗೆ, ಗುದದ್ವಾರದಿಂದ ಹೊರಬರುವ ವಾಯು ಅಶುದ್ಧವಲ್ಲದಿದ್ದರೂ ಅದು ವುದೂವನ್ನು ಅಸಿಂಧುಗೊಳಿಸುತ್ತದೆ.
ಅದೇ ರೀತಿ, ಮಹಿಳೆಯು ವುದೂನಲ್ಲಿರುವಾಗ ಈ ದ್ರವವು ಸ್ರವಿಸಿದರೆ ವುದೂ ಅಸಿಂಧುವಾಗುತ್ತದೆ. ಅವಳು ಅದನ್ನು ಪುನಃ ನಿರ್ವಹಿಸಬೇಕು.
ಅದು ನಿರಂತರವಾಗಿ ಹೊರಬರುತ್ತಿದ್ದರೆ ಅದು ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ. ಆದರೆ ನಮಾಝಿನ ಸಮಯವಾದರೆ ಆ ನಮಾಝ್ಗಾಗಿ ವುದೂ ನಿರ್ವಹಿಸಬೇಕಾಗಿದೆ. ವುದೂ ನಿರ್ವಹಿಸಿದ ಆ ಸಮಯದಲ್ಲಿ ಕಡ್ಡಾಯ ನಮಾಝ್, ಐಚ್ಛಿಕ ನಮಾಝ್ಗಳು, ಕುರ್ಆನ್ ಪಠಣ ಮತ್ತಿತರ ಅನುಮತಿಸಲಾದ ಕಾರ್ಯಗಳನ್ನು ಮಾಡಬಹುದು. ಅನಿಯಂತ್ರಿತ ಮೂತ್ರ ವಿಸರ್ಜನೆಯ ಕಾಯಿಲೆಯಿರುವವರ ಬಗ್ಗೆಯೂ ವಿದ್ವಾಂಸರು ಹೀಗೆಯೇ ಹೇಳಿದ್ದಾರೆ. ಆದ್ದರಿಂದ ಶುದ್ದಿಗೆ ಸಂಬಂಧಿಸಿ ಹೇಳುವುದಾದರೆ ಅದು ಶುದ್ದಿಯಾಗಿದೆ. ಆದರೆ ವುದೂವಿಗೆ ಸಂಬಂಧಿಸಿ ಹೇಳುವುದಾದರೆ ಅದು ವುದೂ ಅನ್ನು ಅಸಿಂಧುಗೊಳಿಸುತ್ತದೆ. ಆದರೆ ಅದು ನಿರಂತರವಾಗಿ ಸ್ರವಿಸುವ ದ್ರವವಾಗಿದ್ದರೆ ಅದು ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ. ಆದರೆ ಆ ಮಹಿಳೆ ನಮಾಝಿನ ಸಮಯ ಆರಂಭವಾದ ಬಳಿಕ ನಮಾಝಿಗಾಗಿ ವುದೂ ನಿರ್ವಹಿಸಬೇಕಾಗಿದೆ ಮತ್ತು ಮುಂಜಾಗ್ರತೆ ವಹಿಸಬೇಕಾಗಿದೆ.
ಅದು ನಿಂತು ನಿಂತು ಸ್ರವಿಸುವ ದ್ರವವಾಗಿದ್ದು ಅದು ನಮಾಝಿನ ಸಮಯದಲ್ಲಿ ಸಾಮಾನ್ಯವಾಗಿ ನಿಲ್ಲುತ್ತದೆಯೆಂದಾದರೆ, ನಮಾಝನ್ನು ಆ ಸಮಯದ ತನಕ ತಡಮಾಡಬೇಕು. ಆದರೆ ನಮಾಝನ್ನು ತಡಮಾಡಿದರೆ ನಮಾಝಿನ ಸಮಯವು ಮುಗಿಯಬಹುದೆಂಬ ಆತಂಕವಿದ್ದರೆ, ವುದೂ ನಿರ್ವಹಿಸಿ ಪ್ಯಾಡ್ ಇತ್ಯಾದಿ ಕಟ್ಟಿ ನಮಾಝ್ ನಿರ್ವಹಿಸಬೇಕು.
ದ್ರವವು ಹೆಚ್ಚಿದ್ದರೂ ಕಡಿಮೆಯಿದ್ದರೂ ಅದರಲ್ಲೇನೂ ವ್ಯತ್ಯಾಸವಿಲ್ಲ. ಏಕೆಂದರೆ ಅದು ಗುಹ್ಯಭಾಗದಿಂದ ಸ್ರವಿಸುವ ದ್ರವವಾಗಿದೆ. ಅದು ಸ್ವಲ್ಪವಾದರೂ ಹೆಚ್ಚಾದರೂ ಅದು ವುದೂ ಅನ್ನು ಅಸಿಂಧುಗೊಳಿಸುತ್ತದೆ. ದೇಹದ ಇತರ ಭಾಗಗಳಿಂದ ಹೊರಬರುವ ದ್ರವ, ವಾಂತಿ ಇತ್ಯಾದಿಗಳು ಇದರಂತಲ್ಲ. ಅವು ಸ್ವಲ್ಪವಾದರೂ ಹೆಚ್ಚಾದರೂ ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ.
ಅದು ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ ಎಂಬ ಕೆಲವು ಮಹಿಳೆಯರ ನಂಬಿಕೆಯ ಬಗ್ಗೆ ಹೇಳುವುದಾದರೆ, ಈ ಮಾತಿಗೆ ಯಾವುದೇ ಆಧಾರವಿರುವುದನ್ನು ನಾನು ಕಂಡಿಲ್ಲ. ಇಬ್ನ್ ಹಝಮ್ ರವರ ಮಾತಿನ ಹೊರತು. ಈ ದ್ರವವು ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಅವರು ಅದಕ್ಕೆ ಪುರಾವೆಯನ್ನು ತೋರಿಸಿಲ್ಲ. ಅದಕ್ಕೆ ಕುರ್ಆನ್, ಹದೀಸ್ ಮತ್ತು ಸಹಾಬಿಗಳ ಮಾತುಗಳಲ್ಲಿ ಆಧಾರವಿದ್ದರೆ ಅದನ್ನು ಪರಿಗಣಿಸಬಹುದು.
ಮಹಿಳೆಯರು ಅಲ್ಲಾಹನನ್ನು ಭಯಪಡಬೇಕು ಮತ್ತು ಶುದ್ಧಿಯಲ್ಲಿರಲು ಉತ್ಸಾಹ ತೋರಬೇಕು. ಏಕೆಂದರೆ ಶುದ್ಧಿಯಿಲ್ಲದಿದ್ದರೆ ನಮಾಝ್ ಸ್ವೀಕಾರವಾಗುವುದಿಲ್ಲ. ಅದನ್ನು ನೂರು ಬಾರಿ ನಿರ್ವಹಿಸಿದರೂ ಸಹ. ಅದಲ್ಲದೆ ಕೆಲವು ವಿದ್ವಾಂಸರು ಹೇಳುತ್ತಾರೆ: "ಶುದ್ಧಿಯಿಲ್ಲದೆ ನಮಾಝ್ ಮಾಡುವುದು ಸತ್ಯನಿಷೇಧವಾಗಿದೆ. ಏಕೆಂದರೆ ಇದು ಅಲ್ಲಾಹನ ವಚನಗಳನ್ನು ಅಪಹಾಸ್ಯ ಮಾಡುವುದಾಗಿದೆ."
ನಿರಂತರ ದ್ರವ ವಿಸರ್ಜನೆಯನ್ನು ಹೊಂದಿರುವ ಮಹಿಳೆ ಒಂದು ಕಡ್ಡಾಯ ನಮಾಝ್ಗಾಗಿ ವುದೂ ಮಾಡಿದರೆ, ಮುಂದಿನ ಕಡ್ಡಾಯ ನಮಾಝಿನ ಸಮಯದವರೆಗೆ ಅದೇ ವುದೂವಿನಲ್ಲಿ ಐಚ್ಛಿಕ ನಮಾಝ್ ಮತ್ತು ಕುರ್ಆನ್ ಪಠಣ ಮಾಡಬಹುದೇ?
ಆ ಮಹಿಳೆ ಕಡ್ಡಾಯ ನಮಾಝಿಗೆ ಅದರ ಆರಂಭ ಸಮಯದಲ್ಲಿ ವುದೂ ಮಾಡಿದರೆ, ಮುಂದಿನ ಕಡ್ಡಾಯ ನಮಾಝಿನ ಸಮಯದವರೆಗೆ ಎಷ್ಟು ಬೇಕಾದರೂ ಕಡ್ಡಾಯ ಮತ್ತು ಐಚ್ಛಿಕ ನಮಾಝ್ ಮಾಡಬಹುದು ಹಾಗೂ ಕುರ್ಆನ್ ಪಠಿಸಬಹುದು.
ಆ ಮಹಿಳೆ ಫಜ್ರ್ ನಮಾಝಿಗಾಗಿ ನಿರ್ವಹಿಸಿದ ವುದೂವಿನಲ್ಲಿ ದುಹಾ ನಮಾಝ್ ನಿರ್ವಹಿಸಿದರೆ ಸಿಂಧುವಾಗುವುದೇ?
ಸಿಂಧುವಾಗುವುದಿಲ್ಲ. ಏಕೆಂದರೆ ದುಹಾ ನಮಾಝಿಗೆ ಪ್ರತ್ಯೇಕ ಸಮಯವಿದೆ. ಆ ಸಮಯವು ಆರಂಭವಾದ ನಂತರವೇ ವುದೂ ನಿರ್ವಹಿಸಬೇಕಾಗಿದೆ. ಈ ಮಹಿಳೆಯ ಸ್ಥಿತಿಯು ರಕ್ತಸ್ರಾವವಿರುವ ಮಹಿಳೆಯಂತೆ. ರಕ್ತಸ್ರಾವವಿರುವ ಮಹಿಳೆ ಎಲ್ಲಾ ನಮಾಝ್ಗಳಿಗೂ ವುದೂ ನಿರ್ವಹಿಸುವಂತೆ ಪ್ರವಾದಿ(ಸ) ರವರು ಆದೇಶಿಸಿದ್ದಾರೆ.
ಝುಹರ್ ನಮಾಝಿನ ಸಮಯವು ಮಧ್ಯಾಹ್ನದಿಂದ ಅಸರ್ ನಮಾಝ್ನ ಸಮಯದ ತನಕ.
ಅಸರ್ ನಮಾಝಿನ ಸಮಯವು ಝುಹರ್ ನಮಾಝಿನ ಸಮಯವು ಮುಗಿದಾಗ ಅರಂಭವಾಗಿ ಸೂರ್ಯ ಹಳದಿ ಬಣ್ಣವನ್ನು ಪಡೆಯುವ ತನಕ. ಅಗತ್ಯವಾದರೆ ಸೂರ್ಯಾಸ್ತದವರೆಗೆ.
ಮಗ್ರಿಬ್ ನಮಾಝಿನ ಸಮಯವು ಸೂರ್ಯಾಸ್ತದಿಂದ ತೊಡಗಿ ಆಕಾಶದಲ್ಲಿ ಕೆಂಪು ಬಣ್ಣ ಮರೆಯಾಗುವ ತನಕ.
ಇಶಾ ನಮಾಝಿನ ಸಮಯವು ಆಕಾಶದಲ್ಲಿ ಕೆಂಪು ಬಣ್ಣ ಮರೆಯಾಗುವಾಗ ಆರಂಭವಾಗಿ ಮಧ್ಯರಾತ್ರಿಯ ತನಕ.
ಆ ಮಹಿಳೆ ಇಶಾ ನಮಾಝಿಗಾಗಿ ಮಾಡಿದ ವುದೂವಿನಲ್ಲಿ ಮಧ್ಯರಾತ್ರಿಯ ನಂತರ ತಹಜ್ಜುದ್ ನಮಾಝ್ ನಿರ್ವಹಿಸಿದರೆ ಸಿಂಧುವಾಗುವುದೇ?
ಇಲ್ಲ. ಮಧ್ಯರಾತ್ರಿ ಕಳೆದರೆ ಅವಳು ಪುನಃ ವುದೂ ನಿರ್ವಹಿಸಬೇಕು. ಅವಳು ವುದೂ ನಿರ್ವಹಿಸಬೇಕಾಗಿಲ್ಲ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಇದು ಪ್ರಬಲ ಅಭಿಪ್ರಾಯವಾಗಿದೆ.
ಇಶಾ ನಮಾಝ್ ನಿರ್ವಹಿಸಬೇಕಾದ ಕೊನೆಯ ಸಮಯ ಯಾವುದು? ಅದನ್ನು ತಿಳಿಯುವುದು ಹೇಗೆ?
ಇಶಾ ನಮಾಝ್ ನಿರ್ವಹಿಸುವ ಕೊನೆಯ ಸಮಯವು ಮಧ್ಯರಾತ್ರಿಯಾಗಿದೆ. ಸೂರ್ಯಾಸ್ತ ಮತ್ತು ಪ್ರಭಾತದ ಉದಯದ ನಡುವಿನ ಸಮಯವನ್ನು ಎರಡಾಗಿ ಭಾಗಿಸಿದರೆ ಇದರ ಸಮಯವನ್ನು ತಿಳಿಯಬಹುದು. ಇವೆರಡರ ಮಧ್ಯದ ಭಾಗವು ಮಧ್ಯರಾತ್ರಿಯಾಗಿದೆ. ಇದರ ನಂತರದ ಸಮಯವು ಇಶಾ ನಮಾಝಿನ ಸಮಯವಲ್ಲ. ಅದು ಇಶಾ ಮತ್ತು ಫಜ್ರ್ನ ನಡುವಿನ ತಡೆಗೋಡೆಯಾಗಿದೆ.
ಬಿಟ್ಟು ಬಿಟ್ಟು ದ್ರವ ಸ್ರವಿಸುವ ಮಹಿಳೆ ವುದೂ ನಿರ್ವಹಿಸಿ ನಮಾಝ್ ಮಾಡುವುದಕ್ಕೆ ಮೊದಲೇ ಪುನಃ ಅದು ಸ್ರವಿಸಿದರೆ ಏನು ಮಾಡಬೇಕು?
ದ್ರವವು ಬಿಟ್ಟು ಬಿಟ್ಟು ಸ್ರವಿಸುತ್ತಿದ್ದರೆ ಅವಳು ಸ್ರಾವವು ನಿಲ್ಲುವ ಸಮಯಕ್ಕಾಗಿ ಕಾಯಬೇಕು. ಆದರೆ ಅದು ಸಮಯ ನಿಶ್ಚಿತವಾಗಿ ಸ್ರವಿಸದೆ ಬೇಕಾಬಿಟ್ಟಿ ಸ್ರವಿಸುತ್ತಿದ್ದರೆ, ನಮಾಝಿನ ಸಮಯವಾದಾಗ ವುದೂ ನಿರ್ವಹಿಸಿ ನಮಾಝ್ ನಿರ್ವಹಿಸಬೇಕು. ಅದರಿಂದೇನೂ ತೊಂದರೆಯಿಲ್ಲ.
ಆ ದ್ರವವು ದೇಹ ಮತ್ತು ಬಟ್ಟೆಗಳಿಗೆ ತಾಗಿದರೆ ಏನು ಮಾಡಬೇಕು?
ಅದು ಶುದ್ಧವಾಗಿದ್ದರೆ ಏನೂ ಮಾಡಬೇಕಾಗಿಲ್ಲ. ಆದರೆ ಅದು ಅಶುದ್ಧವಾಗಿದ್ದರೆ—ಅಂದರೆ ಮೂತ್ರಕೋಶದಿಂದ ಸ್ರವಿಸುತ್ತಿದ್ದರೆ—ಅದನ್ನು ತೊಳೆಯುವುದು ಕಡ್ಡಾಯವಾಗಿದೆ.
ಆ ದ್ರವ ಸ್ರವಿಸುವ ಮಹಿಳೆ ಕೇವಲ ವುದೂವಿನ ಅಂಗಾಂಗಗಳನ್ನು ತೊಳೆದು ವುದೂ ನಿರ್ವಹಿಸಿದರೆ ಸಾಕೇ?
ಅದು ಶುದ್ಧವಾಗಿದ್ದರೆ, ಅಂದರೆ ಅದು ಗರ್ಭಕೋಶದಿಂದ ಸ್ರವಿಸುವ ದ್ರವವಾಗಿದ್ದು, ಮೂತ್ರಕೋಶದಿಂದ ಸ್ರವಿಸುವ ದ್ರವವಲ್ಲದಿದ್ದರೆ—ಅಂಗಾಂಗ ತೊಳೆದು ವುದೂ ನಿರ್ವಹಿಸಿದರೆ ಸಾಕು.
ಈ ದ್ರವದಿಂದ ವುದೂ ಅಸಿಂಧುವಾಗುತ್ತದೆ ಎಂಬ ಬಗ್ಗೆ ಪ್ರವಾದಿ(ಸ) ರಿಂದ ಯಾವುದೇ ಹದೀಸ್ ವರದಿಯಾಗದಿರಲು ಕಾರಣವೇನು? ಅದೂ ಸಹಾಬಿ ವನಿತೆಯರು ಧಾರ್ಮಿಕ ವಿಷಯಗಳಲ್ಲಿ ಪ್ರಶ್ನೆ ಕೇಳಲು ಅತೀವ ಉತ್ಸಾಹ ತೋರುತ್ತಿದ್ದರೂ ಸಹ?
ಏಕೆಂದರೆ ಎಲ್ಲಾ ಮಹಿಳೆಯರಿಗೂ ಹೀಗೆ ದ್ರವವು ಸ್ರವಿಸುವುದಿಲ್ಲ.
ಈ ವಿಧಿಯ ಬಗ್ಗೆ ತಿಳಿಯದ ಕಾರಣ ವುದೂ ನಿರ್ವಹಿಸದಿರುತ್ತಿದ್ದ ಮಹಿಳೆಯರ ಸ್ಥಿತಿಯೇನು? ಅವರೇನು ಮಾಡಬೇಕು?
ಅವರು ಅಲ್ಲಾಹನಲ್ಲಿ ಪಶ್ಚಾತ್ತಾಪ ಪಡಬೇಕು ಮತ್ತು ಈ ವಿಷಯದಲ್ಲಿ ವಿದ್ವಾಂಸರನ್ನು ಸಂಪರ್ಕಿಸಬೇಕು.
ಈ ದ್ರವವು ಸ್ರವಿಸಿದರೆ ವುದೂ ನಿರ್ವಹಿಸಬೇಕಾಗಿಲ್ಲ ಎಂದು ನೀವು ಹೇಳುತ್ತಿದ್ದೀರೆಂದು ಕೆಲವರು ವಾದಿಸುತ್ತಿದ್ದಾರೆ. ಅದರ ಬಗ್ಗೆ ನೀವೇನು ಹೇಳುತ್ತೀರಿ?
ನಾನು ಹೀಗೆ ಹೇಳಿದ್ದೇನೆಂದು ವಾದಿಸುವವರು ಸುಳ್ಳು ಹೇಳುತ್ತಿದ್ದಾರೆ. ಅದು ಬಹುಶಃ ನಾನು "ದ್ರವವು ಶುದ್ಧವಾಗಿದ್ದರೆ ಅದು ವುದೂ ಅನ್ನು ಅಸಿಂಧುಗೊಳಿಸುವುದಿಲ್ಲ" ಎಂದು ಹೇಳಿದ್ದನ್ನು ಅವರು ಅಪಾರ್ಥ ಮಾಡಿಕೊಂಡಿರಬಹುದು.
ಮಹಿಳೆಯರಿಗೆ ಮುಟ್ಟಾಗುವುದಕ್ಕೆ ಹೆಚ್ಚು-ಕಡಿಮೆ ಒಂದು ದಿನ ಮೊದಲು ಸ್ರವಿಸುವ ಸ್ರಾವದ ಬಗ್ಗೆ ವಿಧಿಯೇನು? ಅದು ಕೆಲವೊಮ್ಮೆ ಕಪ್ಪು, ಕಂದು ಅಥವಾ ಇತರ ಬಣ್ಣದ ಸಪೂರ ನೂಲಿನಂತೆ ಇರುತ್ತದೆ. ಮುಟ್ಟಾದ ನಂತರ ಇದು ಸ್ರವಿಸಿದರೆ ಇದರ ವಿಧಿಯೇನು?
ಈ ದ್ರವವು ಮುಟ್ಟಿನ ಆರಂಭದಲ್ಲಿ ಸ್ರವಿಸಿದರೆ ಅದು ಮುಟ್ಟಿನ ರಕ್ತವಾಗಿದೆ. ಮಹಿಳೆಯರಿಗೆ ಸಾಮಾನ್ಯವಾಗಿ ಉಂಟಾಗುವ ನೋವು, ಸೆಳೆತ ಮುಂತಾದವುಗಳ ಮೂಲಕ ಅದನ್ನು ಗುರುತಿಸಬಹುದು.
ಅದು ಮುಟ್ಟಿನ ನಂತರ ಸ್ರವಿಸಿದರೆ, ಅದು ನಿಲ್ಲುವವರೆಗೆ ಕಾಯಬೇಕು. ಏಕೆಂದರೆ ಅದು ಮುಟ್ಟಿನೊಂದಿಗೆ ಸ್ರವಿಸುವುದಾದರೆ ಅದು ಮುಟ್ಟಿನ ರಕ್ತವಾಗಿದೆ. ಆಯಿಶಾ(ರ) ಹೇಳುತ್ತಾರೆ: “ಬಿಳಿದ್ರವವನ್ನು ಕಾಣುವವರೆಗೆ ನೀವು ಆತುರಪಡಬೇಡಿ.” ಹೆಚ್ಚು ಬಲ್ಲವನು ಅಲ್ಲಾಹು.
*
ಹಜ್ಜ್ ಮತ್ತು ಉಮ್ರಾಗಳಿಗೆ ಸಂಬಂಧಿಸಿದ ಮುಟ್ಟಿನ ನಿಯಮಗಳು
ಮುಟ್ಟಾದ ಮಹಿಳೆಯು ಇಹ್ರಾಮ್ನ ಎರಡು ರಕ್ಅತ್ಗಳನ್ನು ಹೇಗೆ ನಿರ್ವಹಿಸಬೇಕು? ಮುಟ್ಟಾದ ಮಹಿಳೆ ಮನಸ್ಸಿನಲ್ಲೇ ಕುರ್ಆನ್ ವಚನಗಳನ್ನು ಪಠಿಸಬಹುದೇ?
ಮೊದಲನೆಯಾಗಿ ನಾವು ತಿಳಿದುಕೊಳ್ಳಬೇಕಾದುದೇನೆಂದರೆ, ಇಹ್ರಾಮ್ಗೆ ಸುನ್ನತ್ ನಮಾಝ್ ಇಲ್ಲ. ಇಹ್ರಾಮ್ಗೆ ಪ್ರವೇಶಿಸುವಾಗ ನಮಾಝ್ ನಿರ್ವಹಿಸಬೇಕೆಂದು ಪ್ರವಾದಿ(ಸ) ರವರು ತಮ್ಮ ಸಮುದಾಯಕ್ಕೆ ಮಾತಿನ ಮೂಲಕ, ಕ್ರಿಯೆಯ ಮೂಲಕ ಅಥವಾ ಒಪ್ಪಿಗೆಯ ಮೂಲಕ ಹೇಳಿಲ್ಲ.
ಎರಡನೆಯದಾಗಿ, ಮಹಿಳೆಯರಿಗೆ ಇಹ್ರಾಮ್ ಪ್ರವೇಶಿಸುವುದಕ್ಕೆ ಮೊದಲು ಮುಟ್ಟಾದರೆ ಮುಟ್ಟಾದ ಸ್ಥಿತಿಯಲ್ಲೇ ಇಹ್ರಾಮ್ ಪ್ರವೇಶಿಸಬಹುದು.
ಅವಳು ಕುರ್ಆನ್ ಪಠಿಸಬಹುದೇ ಎಂಬ ಪ್ರಶ್ನೆಯ ಉತ್ತರ: ಹೌದು, ಅಗತ್ಯದ ಮತ್ತು ಉಪಯೋಗಕಾರಿ ಸಂದರ್ಭಗಳಲ್ಲಿ ಮುಟ್ಟಾದ ಮಹಿಳೆಯರಿಗೆ ಕುರ್ಆನ್ ಪಠಿಸುವ ಹಕ್ಕಿದೆ. ಆದರೆ ಕೇವಲ ಆರಾಧನೆಗಾಗಿ ಮತ್ತು ಅಲ್ಲಾಹನ ಸಾಮೀಪ್ಯಕ್ಕಾಗಿ ಪಠಿಸುವುದಾದರೆ, ಪಠಿಸದಿರುವುದೇ ಉತ್ತಮ.
ಒಬ್ಬಳು ಮಹಿಳೆ ಹಜ್ಜ್ ಯಾತ್ರೆಗೆ ಹೊರಟಳು. ಅವಳು ಹೊರಟ ಐದೇ ದಿನಗಳಲ್ಲಿ ಅವಳಿಗೆ ಮುಟ್ಟು ಪ್ರಾರಂಭವಾಯಿತು. ಮೀಕಾತ್ ತಲುಪಿದೊಡನೆ ಅವಳು ಸ್ನಾನ ಮಾಡಿ ಇಹ್ರಾಮ್ ಪ್ರವೇಶಿಸಿದಳು. ಅವಳು ಇನ್ನೂ ಶುದ್ಧಳಾಗಿರಲಿಲ್ಲ. ಮಕ್ಕಾ ತಲುಪಿದ ನಂತರ ಅವಳು ಹರಮ್ನ ಹೊರಗೇ ಉಳಿದಳು. ಹಜ್ಜ್ ಮತ್ತು ಉಮ್ರಾದ ಯಾವುದೇ ಕ್ರಿಯೆಯನ್ನು ಅವಳು ಮಾಡಲಿಲ್ಲ. ಅವಳು ಎರಡು ದಿನ ಮಿನಾದಲ್ಲಿ ತಂಗಿದಳು. ನಂತರ ಅವಳು ಶುದ್ಧಳಾಗಿ, ಸ್ನಾನ ಮಾಡಿ, ಶುದ್ಧಳಾಗಿರುವ ಸ್ಥಿತಿಯಲ್ಲಿ ಉಮ್ರಾದ ಎಲ್ಲಾ ಕರ್ಮಗಳನ್ನು ನಿರ್ವಹಿಸಿದಳು. ನಂತರ ಅವಳು ತವಾಫುಲ್ ಇಫಾದ (ಹಜ್ಜಿನ ಕಡ್ಡಾಯ ತವಾಫ್) ನಿರ್ವಹಿಸುತ್ತಿರುವಾಗ ಅವಳಿಗೆ ರಕ್ತ ಸ್ರವಿಸಲು ತೊಡಗಿತು. ನಾಚಿಕೆಯಿಂದ ಅವಳು ಅದನ್ನು ಮುಚ್ಚಿಟ್ಟು ಹಜ್ಜ್ನ ಎಲ್ಲಾ ಕರ್ಮಗಳನ್ನು ನಿರ್ವಹಿಸಿದಳು. ಊರಿಗೆ ಮರಳಿದ ನಂತರ ಅವಳು ಅದನ್ನು ತನ್ನ ಪೋಷಕರಿಗೆ ತಿಳಿಸಿದಳು. ಅವಳ ವಿಧಿಯೇನು?
ಇದರ ವಿಧಿಯೇನೆಂದರೆ, ತವಾಫುಲ್ ಇಫಾದ ನಿರ್ವಹಿಸುವಾಗ ಸ್ರವಿಸಿದ ರಕ್ತವು ಮುಟ್ಟಿನ ರಕ್ತವಾಗಿದ್ದರೆ, ಅಂದರೆ ನೋವು ಮುಂತಾದ ನೈಸರ್ಗಿಕ ವಿಧಾನಗಳಿಂದ ಅವಳಿಗೆ ಅದನ್ನು ಗುರುತಿಸಬಹುದಾಗಿದ್ದರೆ, ಅವಳು ನಿರ್ವಹಿಸಿದ ತವಾಫುಲ್ ಇಫಾದ ಸಿಂಧುವಲ್ಲ. ತವಾಫುಲ್ ಇಫಾದ ನಿರ್ವಹಿಸಲು ಅವಳು ಮಕ್ಕಾಗೆ ಮರಳುವುದು ಕಡ್ಡಾಯವಾಗಿದೆ. ಅವಳು ಮೀಕಾತಿನಲ್ಲಿ ಉಮ್ರಕ್ಕಾಗಿ ಇಹ್ರಾಮ್ ಪ್ರವೇಶಿಸಿ, ಉಮ್ರದ ತವಾಫ್ ಮತ್ತು ಸಈ ನಿರ್ವಹಿಸಿ, ತಲೆಗೂದಲು ಕತ್ತರಿಸಿ, ನಂತರ ತವಾಫುಲ್ ಇಫಾದ ನಿರ್ವಹಿಸಬೇಕು.
ಆದರೆ ಅದು ಮುಟ್ಟಿನ ರಕ್ತವಲ್ಲದಿದ್ದರೆ, ಅಂದರೆ ಜನಸಂದಣಿಯ ನೂಕು-ನುಗ್ಗಲು, ಭಯ ಮುಂತಾದ ಕಾರಣಗಳಿಂದ ಉಂಟಾದ ನೈಸರ್ಗಿಕ ರಕ್ತವಾಗಿದ್ದರೆ, ತವಾಫ್ಗೆ ಶುದ್ಧವಾಗಿರಬೇಕೆಂಬ ಷರತ್ತಿಲ್ಲ ಎಂದು ಹೇಳುವವರ ಪ್ರಕಾರ ಈ ತವಾಫ್ ಸಿಂಧುವಾಗುತ್ತದೆ.
ಅದು ಮುಟ್ಟಿನ ರಕ್ತವಾಗಿದ್ದು, ಪುನಃ ಮಕ್ಕಾಗೆ ಹಿಂದಿರುಗುವುದು ಅವಳಿಗೆ ಅಸಾಧ್ಯವಾಗಿದ್ದರೆ, ಅಂದರೆ ಅವಳು ಮಕ್ಕಾದಿಂದ ಬಹುದೂರ ವಾಸಿಸುತ್ತಿದ್ದರೆ, ಅವಳ ಹಜ್ಜ್ ಸಿಂಧುವಾಗಿದೆ. ಏಕೆಂದರೆ ಅವಳಿಗೆ ಸಾಧ್ಯವಾದುದನ್ನು ಅವಳು ಮಾಡಿದ್ದಾಳೆ.
ಒಬ್ಬಳು ಮಹಿಳೆ ಉಮ್ರಾಗೆ ಇಹ್ರಾಮ್ ಪ್ರವೇಶಿಸಿದಳು. ಮಕ್ಕಾ ತಲುಪಿದ ನಂತರ ಅವಳಿಗೆ ಮುಟ್ಟು ಆರಂಭವಾಯಿತು. ಅವಳ ಜೊತೆಗಿದ್ದ ಮಹ್ರಮ್ (ಗಂಡ, ತಂದೆ, ಸಹೋದರ ಮುಂತಾದವರು) ತುರ್ತಾಗಿ ಅಲ್ಲಿಂದ ಪ್ರಯಾಣ ಮಾಡಬೇಕಾಯಿತು. ಮಕ್ಕಾದಲ್ಲಿ ಅವಳು ಒಬ್ಬಳೇ ಉಳಿದಳು. ಅವಳ ವಿಧಿಯೇನು?
ಆ ಮಹಿಳೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದರೆ ಅವನೊಂದಿಗೆ ಹೊರಟು, ಶುದ್ಧಳಾದ ನಂತರ ಮರಳಬೇಕು. ಆಕೆಗೆ ಅದು ಕಷ್ಟವಲ್ಲ, ಅದಕ್ಕೆ ವೀಸಾ ಪಾಸ್ಪೋರ್ಟ್ಗಳ ಅಗತ್ಯವಿಲ್ಲ.
ಆದರೆ ಅವಳು ವಿದೇಶಿಯಾಗಿದ್ದರೆ ಮತ್ತು ಮರಳಿ ಬರುವುದು ಕಷ್ಟವಾಗಿದ್ದರೆ, ಅವಳು ಮುಂಜಾಗರೂಕತೆ ವಹಿಸಿ, ತವಾಫ್, ಸಈ, ಕೂದಲು ಕತ್ತರಿಸುವುದು ಮುಂತಾದವುಗಳನ್ನು ನಿರ್ವಹಿಸಿ ಉಮ್ರಾ ಕರ್ಮಗಳನ್ನು ಮುಗಿಸಬೇಕು. ಇದು ಅನಿವಾರ್ಯ ಸಂದರ್ಭವಾಗಿರುವುದರಿಂದ ಅವಳಿಗೆ ತವಾಫ್ ನಿರ್ವಹಿಸುವ ಅನುಮತಿಯಿದೆ. ಅನಿವಾರ್ಯ ಸಂದರ್ಭವು ನಿಷೇಧವನ್ನು ಅನುಮತಿಸುತ್ತದೆ.
ಹಜ್ಜ್ ಕರ್ಮಗಳನ್ನು ನಿರ್ವಹಿಸುತ್ತಿರುವಾಗ ಮುಟ್ಟಾಗುವ ಮಹಿಳೆಯರ ವಿಧಿಯೇನು? ಅವರ ಆ ಹಜ್ಜ್ ಸಿಂಧುವಾಗುತ್ತದೆಯೇ?
ಅವಳಿಗೆ ಮುಟ್ಟಾದುದು ಯಾವಾಗ ಎಂದು ತಿಳಿಯದೆ ಇದಕ್ಕೆ ಉತ್ತರಿಸಲಾಗುವುದಿಲ್ಲ. ಏಕೆಂದರೆ, ಹಜ್ಜ್ನ ಕೆಲವು ಕರ್ಮಗಳಿಗೆ ಮುಟ್ಟು ತಡೆಯಾಗುವುದಿಲ್ಲ. ಕೆಲವು ಕರ್ಮಗಳಿಗೆ ತಡೆಯಾಗುತ್ತದೆ. ತವಾಫ್ ಮಾಡುವಾಗ ಶುದ್ಧಳಾಗಿರುವುದು ಕಡ್ಡಾಯ. ಆದರೆ ಹಜ್ಜ್ನ ಇತರ ಕರ್ಮಗಳನ್ನು ಮುಟ್ಟಾಗಿಯೂ ನಿರ್ವಹಿಸಬಹುದು.
ನಾನು ಕಳೆದ ವರ್ಷ ಹಜ್ಜ್ ನಿರ್ವಹಿಸಿದ್ದೆ. ತವಾಫುಲ್-ಇಫಾದ ಮತ್ತು ವಿದಾಯದ ತವಾಫ್ ಹೊರತುಪಡಿಸಿ ಹಜ್ಜ್ನ ಎಲ್ಲಾ ಕರ್ಮಗಳನ್ನು ನಾನು ನಿರ್ವಹಿಸಿದ್ದೆ. ಕಾರಣಾಂತರಗಳಿಂದ ನನಗೆ ಇವುಗಳನ್ನು ನಿರ್ವಹಿಸಲಾಗಲಿಲ್ಲ. ಮುಂದೆ ಯಾವುದಾದರೂ ಒಂದು ದಿನ ಮಕ್ಕಾಗೆ ಮರಳಿ ಇವುಗಳನ್ನು ನಿರ್ವಹಿಸುವೆನು ಎಂಬ ಉದ್ದೇಶವನ್ನಿಟ್ಟುಕೊಂಡು ನಾನು ಮದೀನಾದ ನನ್ನ ಮನೆಗೆ ಮರಳಿದೆ. ಆದರೆ, ನನಗೆ ಧರ್ಮದ ನಿಯಮಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದ ಕಾರಣ ನಾನು ಇಹ್ರಾಮ್ನಿಂದ ಹೊರಬಂದು ಇಹ್ರಾಮ್ನಲ್ಲಿ ನಿಷಿದ್ಧವಾಗಿರುವ ಎಲ್ಲಾ ಕಾರ್ಯಗಳನ್ನು ಮಾಡಿದೆ. ನಾನು ತವಾಫ್ ಮಾಡಲು ಮರಳುವ ಬಗ್ಗೆ ವಿಚಾರಿಸಿದಾಗ, ನಿನ್ನ ತವಾಫ್ ಸಿಂಧುವಾಗುವುದಿಲ್ಲ. ನೀನು ನಿನ್ನ ಹಜ್ಜನ್ನು ಅಸಿಂಧುಗೊಳಿಸಿರುವೆ. ನೀನು ಪುನಃ ಹಜ್ಜ್ ನಿರ್ವಹಿಸಬೇಕಾಗಿದೆ ಎಂಬ ಉತ್ತರ ದೊರೆಯಿತು. ಅಂದರೆ ಒಂದು ಹಸು ಅಥವಾ ಒಂಟೆಯನ್ನು ಕೊಯ್ದು ನೀನು ಮುಂದಿನ ವರ್ಷ ಹಜ್ಜ್ ನಿರ್ವಹಿಸಬೇಕು. ಇದು ಸರಿಯೇ? ಇದರ ಹೊರತಾಗಿ ಬೇರೆ ಪರಿಹಾರವಿದೆಯೇ? ಇದ್ದರೆ ಅದೇನು? ನನ್ನ ಹಜ್ಜ್ ಅಸಿಂಧುವಾಗಿದೆಯೇ? ನಾನು ಪುನಃ ಹಜ್ಜ್ ನಿರ್ವಹಿಸಬೇಕೇ?ನಾನೇನು ಮಾಡಬೇಕೆಂದು ದಯವಿಟ್ಟು ತಿಳಿಸಿ. ಅಲ್ಲಾಹು ನಿಮ್ಮನ್ನು ಅನುಗ್ರಹಿಸಲಿ.
ಇದು ಜ್ಞಾನವಿಲ್ಲದವರು ನೀಡುವ ಫತ್ವಾಗಳಿಂದ ಉಂಟಾಗುವ ಆಪತ್ತುಗಳು. ನಿಮಗೆ ಕಡ್ಡಾಯವಾಗಿರುವುದು ಮಕ್ಕಾಗೆ ತೆರಳಿ ತವಾಫುಲ್-ಇಫಾದ ನಿರ್ವಹಿಸುವುದು ಮಾತ್ರ.
ನೀವು ವಿದಾಯದ ತವಾಫ್ ನಿರ್ವಹಿಸಬೇಕಾಗಿಲ್ಲ. ಏಕೆಂದರೆ ಮಕ್ಕಾದಿಂದ ಹೊರಡುವಾಗ ನೀವು ಮುಟ್ಟಿನಲ್ಲಿದ್ದಿರಿ. ಮುಟ್ಟಿನಲ್ಲಿರುವವರಿಗೆ ವಿದಾಯದ ತವಾಫ್ ಕಡ್ಡಾಯವಿಲ್ಲ. ಇಬ್ನ್ ಅಬ್ಬಾಸ್(ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಹೇಳುತ್ತಾರೆ: “ಜನರ (ಹಾಜಿಗಳ) ಕಟ್ಟಕಡೆಯ ಕರ್ಮವು ಕಅಬಾಲಯದ ತವಾಫ್ (ವಿದಾಯದ ತವಾಫ್) ಆಗಿರಬೇಕೆಂದು ಪ್ರವಾದಿ(ಸ) ರವರು ಆದೇಶಿಸಿದ್ದಾರೆ. ಆದರೆ ಮುಟ್ಟಿನಲ್ಲಿರುವ ಮಹಿಳೆಗೆ ಇದರಿಂದ ವಿನಾಯಿತಿ ನೀಡಲಾಗಿದೆ.” ಅಬೂದಾವೂದ್ ರ ವರದಿಯಲ್ಲಿ ಹೀಗಿದೆ: “ಜನರ (ಹಾಜಿಗಳ) ಕಟ್ಟಕಡೆಯ ಕರ್ಮವು ಕಅಬಾಲಯದ ತವಾಫ್ (ವಿದಾಯದ ತವಾಫ್) ಆಗಿರಬೇಕು." ಸಫಿಯ್ಯ(ರ) ತವಾಫುಲ್ ಇಫಾದ ನಿರ್ವಹಿಸಿದ್ದಾರೆಂದು ತಿಳಿಸಲಾದಾಗ ಪ್ರವಾದಿ(ಸ) ರವರು ಹೇಳಿದರು: “ಹಾಗಿದ್ದರೆ ಅವರು (ಸಫಿಯ್ಯ) ಇಲ್ಲಿಂದ ಹೊರಡಲಿ.” ಮುಟ್ಟಿನಲ್ಲಿರುವ ಮಹಿಳೆಯರು ವಿದಾಯದ ತವಾಫ್ ನಿರ್ವಹಿಸಬೇಕಾಗಿಲ್ಲ ಎಂದು ಇದು ಸೂಚಿಸುತ್ತದೆ.
ಆದರೆ ನೀವು ತವಾಫುಲ್ ಇಫಾದ ನಿರ್ವಹಿಸುವುದು ಕಡ್ಡಾಯವಾಗಿದೆ. ನೀವು ಅಜ್ಞಾನದ ಕಾರಣ ಇಹ್ರಾಮ್ನಿಂದ ಮುಕ್ತವಾಗಿರುವುದರಲ್ಲೇನೂ ದೋಷವಿಲ್ಲ. ಏಕೆಂದರೆ ಯಾರಾದರೂ ಅಜ್ಞಾನದ ಕಾರಣ ಇಹ್ರಾಮ್ನ ನಿಷಿದ್ಧಗಳಲ್ಲಿ ಏನಾದರೂ ಮಾಡಿದರೆ ಅವರು ದೋಷಿಗಳಲ್ಲ. ಏಕೆಂದರೆ ಅಲ್ಲಾಹು ಹೇಳುತ್ತಾನೆ: "ಓ ನಮ್ಮ ಪರಿಪಾಲಕನೇ! ನಮಗೆ ಮರೆತುಹೋದರೆ ಅಥವಾ ನಾವು ತಪ್ಪು ಮಾಡಿದರೆ ನಮ್ಮನ್ನು ಶಿಕ್ಷಿಸಬೇಡ." [ಬಕರ: 286] ಅಲ್ಲಾಹು ಹೇಳಿದನು: "ನಾನು ಹಾಗೆಯೇ ಮಾಡುತ್ತೇನೆ." ಅಲ್ಲಾಹು ಹೇಳುತ್ತಾನೆ: "ನೀವು ಪ್ರಮಾದದಿಂದ ಏನಾದರೂ ತಪ್ಪುಗಳನ್ನು ಮಾಡಿದರೆ ಅದರಿಂದ ನಿಮಗೆ ದೋಷವಿಲ್ಲ. ಆದರೆ ನೀವು ಉದ್ದೇಶಪೂರ್ವಕ ಮಾಡುವ ತಪ್ಪುಗಳಿಗೆ ಶಿಕ್ಷೆಯಿದೆ." [ಅಹ್ಝಾಬ್: 5] ಆದ್ದರಿಂದ ಇಹ್ರಾಮ್ನಲ್ಲಿರುವಾಗ ನಿಷಿದ್ಧವಾಗಿರುವ ಕೃತ್ಯಗಳನ್ನು ಯಾರಾದರೂ ಅಜ್ಞಾನದಿಂದ, ಅಥವಾ ಮರೆವಿನಿಂದ, ಅಥವಾ ಬಲವಂತಕ್ಕೊಳಗಾಗಿ ಮಾಡಿದರೆ, ಅವರು ದೋಷಿಗಳಲ್ಲ. ಆದರೆ ಅವರ ವಿನಾಯಿತಿಯು ಮುಗಿದಾಗ (ಅಂದರೆ ಅವರಿಗೆ ನಿಜಸ್ಥಿತಿಯ ಅರಿವಾದಾಗ) ಅವರು ತಮ್ಮ ತಪ್ಪನ್ನು ಸರಿಪಡಿಸಬೇಕು.
ಒಬ್ಬ ಮಹಿಳೆಯ ಪ್ರಸವಾನಂತರದ ರಕ್ತಸ್ರಾವವು ಯೌಮು-ತ್ತರ್ವಿಯ (ದುಲ್-ಹಿಜ್ಜ 8ನೇ ದಿನ) ಆರಂಭವಾಗುತ್ತದೆ. ಅವಳು ತವಾಫ್ ಮತ್ತು ಸಈ ಹೊರತುಪಡಿಸಿ ಹಜ್ಜ್ನ ಎಲ್ಲಾ ಕರ್ಮಗಳನ್ನು ಪೂರ್ಣಗೊಳಿಸುತ್ತಾಳೆ. ನಂತರ ಹತ್ತು ದಿನಗಳ ಬಳಿಕ ಅವಳು ಶುದ್ಧಳಾಗುತ್ತಾಳೆ. ಆಗ ಅವಳು ಸ್ನಾನ ಮಾಡಿ ತವಾಫ್ ಮುಂತಾದ ಹಜ್ಜ್ನ ಸ್ತಂಭಗಳನ್ನು ನಿರ್ವಹಿಸಬಹುದೇ?
ಅವಳಿಗೆ ತಾನು ಶುದ್ಧಳಾಗಿದ್ದೇನೆಂದು ಖಾತ್ರಿಯಾಗುವ ತನಕ ಅವಳು ಸ್ನಾನ ಮಾಡಬಾರದು ಮತ್ತು ತವಾಫ್ ಮಾಡಬಾರದು. ಪ್ರಶ್ನೆಯನ್ನು ನೋಡುವಾಗ ಅವಳು ಪೂರ್ಣವಾಗಿ ಶುದ್ಧಳಾಗಿಲ್ಲ ಎಂದು ತೋರುತ್ತದೆ. ಅವಳು ಪೂರ್ಣವಾಗಿ ಶುದ್ಧಳಾಗುವುದು ಕಡ್ಡಾಯವಾಗಿದೆ. ಶುದ್ಧಳಾದ ನಂತರ ಅವಳು ಸ್ನಾನ ಮಾಡಿ, ತವಾಫ್ ಮತ್ತು ಸಈ ನಿರ್ವಹಿಸಲಿ.
ತವಾಫ್ ಮಾಡುವುದಕ್ಕೆ ಮೊದಲು ಸಈ ಮಾಡಿದರೆ ತೊಂದರೆಯಿಲ್ಲ. ಹಜ್ಜ್ನಲ್ಲಿ ತವಾಫ್ ಮಾಡುವುದಕ್ಕೆ ಮೊದಲು ಸಈ ಮಾಡಿದವರ ಬಗ್ಗೆ ಪ್ರವಾದಿ(ಸ) ರೊಡನೆ ಕೇಳಲಾದಾಗ ಅವರು "ತೊಂದರೆಯಿಲ್ಲ" ಎಂದು ಉತ್ತರಿಸಿದ್ದಾರೆ.
ಒಬ್ಬಳು ಮಹಿಳೆ ಮುಟ್ಟಿನಲ್ಲಿರುತ್ತಲೇ ಸೈಲ್ ಮೀಕಾತ್ನಿಂದ ಇಹ್ರಾಮ್ ಪ್ರವೇಶಿಸಿದಳು. ಮಕ್ಕಾಗೆ ತಲುಪಿದ ನಂತರ ಯಾವುದೋ ಕೆಲಸಕ್ಕಾಗಿ ಜಿದ್ದಾಗೆ ಹೋದಳು. ಜಿದ್ದಾದಲ್ಲಿ ಅವಳು ಶುದ್ಧಳಾದಳು. ಸ್ನಾನ ಮಾಡಿ ತಲೆ ಬಾಚಿದಳು. ನಂತರ ತನ್ನ ಹಜ್ಜನ್ನು ಪೂರ್ಣಗೊಳಿಸಿದಳು. ಅವಳ ಹಜ್ಜ್ ಸಿಂಧುವಾಗಿದೆಯೇ? ಅವಳು ಏನಾದರೂ ಮಾಡಬೇಕೇ?
ಅವಳ ಹಜ್ಜ್ ಸಿಂಧುವಾಗಿದೆ. ಅವಳೇನೂ ಮಾಡಬೇಕಾಗಿಲ್ಲ.
ನಾನು ಉಮ್ರಾಗೆ ಹೊರಟಾಗ ಮದೀನಾದಲ್ಲಿ ನನಗೆ ಮುಟ್ಟಾಯಿತು. ನಾನು ಇಹ್ರಾಮ್ ಪ್ರವೇಶಿಸದೆ ಮಕ್ಕಾಗೆ ಹೋದೆ. ಅಲ್ಲಿ ನಾನು ಶುದ್ಧಳಾಗುವ ತನಕ ಕಾದು ನಂತರ ಇಹ್ರಾಮ್ ಪ್ರವೇಶಿಸಿದೆ. ಇದು ಸಮ್ಮತಾರ್ಹವೇ? ಅಲ್ಲದಿದ್ದರೆ ನಾನೇನು ಮಾಡಬೇಕು?
ಹೀಗೆ ಮಾಡುವುದು ಸಮ್ಮತಾರ್ಹವಲ್ಲ. ಉಮ್ರಾ ಮಾಡಲು ಬಯಸುವ ಮಹಿಳೆ ಇಹ್ರಾಮ್ ಪ್ರವೇಶಿಸದೆ ಮೀಕಾತ್ ದಾಟಿ ಹೋಗಬಾರದು. ಅವಳು ಮುಟ್ಟಿನಲ್ಲಿದ್ದರೂ ಸಹ. ಅವಳು ಮುಟ್ಟಿನಲ್ಲಿರುವ ಸ್ಥಿತಿಯಲ್ಲೇ ಇಹ್ರಾಮ್ ಪ್ರವೇಶಿಸಬೇಕು. ಅವಳ ಇಹ್ರಾಮ್ ಸಿಂಧುವಾಗುತ್ತದೆ. ಪ್ರವಾದಿ(ಸ) ರವರು ವಿದಾಯದ ಹಜ್ಜ್ ನಿರ್ವಹಿಸಲು ಹೊರಟು 'ದುಲ್ ಹುಲೈಫಾ' ಎಂಬ ಸ್ಥಳದಲ್ಲಿ ತಂಗಿದಾಗ, ಅಬೂಬಕರ್(ರ) ರವರ ಪತ್ನಿ ಅಸ್ಮಾ ಬಿಂತ್ ಉಮೈಸ್(ರ) ರಿಗೆ ಒಂದು ಮಗು ಹುಟ್ಟಿತು. ಆಗ ಅವರು ಪ್ರವಾದಿ(ಸ) ರವರ ಬಳಿಗೆ ಜನರನ್ನು ಕಳುಹಿಸಿ ಅವಳೇನು ಮಾಡಬೇಕೆಂದು ಕೇಳಿದರು. ಪ್ರವಾದಿ(ಸ) ರವರು ಉತ್ತರಿಸಿದರು: "ನೀವು ಸ್ನಾನ ಮಾಡಿ, ಗುಹ್ಯಭಾಗಕ್ಕೆ ಬಟ್ಟೆಯನ್ನು ಕಟ್ಟಿ, ಇಹ್ರಾಮ್ ಪ್ರವೇಶಿಸಿರಿ." ಮುಟ್ಟಿನ ರಕ್ತ ಮತ್ತು ಪ್ರಸವಾನಂತರದ ರಕ್ತಕ್ಕೆ ಒಂದೇ ನಿಯಮಗಳು ಅನ್ವಯವಾಗುತ್ತವೆ.
ಆದ್ದರಿಂದ, ಹಜ್ಜ್ ಅಥವಾ ಉಮ್ರಾ ನಿರ್ವಹಿಸುವ ಉದ್ದೇಶದಿಂದ ಹೊರಡುವ ಮುಟ್ಟಿನಲ್ಲಿರುವ ಮಹಿಳೆಯರಿಗೆ ನಾವು ನೀಡುವ ಸಲಹೆಯೇನೆಂದರೆ, "ನೀವು ಸ್ನಾನ ಮಾಡಿ, ಗುಹ್ಯಭಾಗಕ್ಕೆ ಬಟ್ಟೆಯನ್ನು ಕಟ್ಟಿ, ಇಹ್ರಾಮ್ ಪ್ರವೇಶಿಸಿರಿ." ಅವಳು ಹಜ್ಜ್ ನಿರ್ವಹಿಸುವುದಾದರೂ ಅಥವಾ ಉಮ್ರಾ ನಿರ್ವಹಿಸುವುದಾದರೂ ಇಹ್ರಾಮ್ ಪ್ರವೇಶಿಸಬೇಕು. ಆದರೆ ಇಹ್ರಾಮ್ನಲ್ಲಿದ್ದು ಮಕ್ಕಾ ಪ್ರವೇಶಿಸಿದರೆ ಶುದ್ಧವಾಗುವ ತನಕ ಕಅಬಾಲಯಕ್ಕೆ ತೆರಳಿ ತವಾಫ್ ಮಾಡಬಾರದು. ಈ ಕಾರಣದಿಂದಲೇ, ಆಯಿಶ(ರ) ರಿಗೆ ಉಮ್ರಾದ ನಡುವೆ ಮುಟ್ಟಾದಾಗ ಪ್ರವಾದಿ(ಸ) ರವರು ಹೇಳಿದರು: “ಹಾಜಿಗಳು ಮಾಡುವುದನ್ನೆಲ್ಲಾ ಮಾಡು. ಆದರೆ ಶುದ್ಧಳಾಗುವ ತನಕ ನೀನು ಕಅಬಾಲಯಕ್ಕೆ ತವಾಫ್ ಮಾಡಬೇಡ.” [ಬುಖಾರಿ ಮತ್ತು ಮುಸ್ಲಿಂ] ಬುಖಾರಿಯ ಇನ್ನೊಂದು ವರದಿಯಲ್ಲಿ ಹೀಗಿದೆ: "ಶುದ್ಧಳಾದ ನಂತರ ನಾನು ಕಅಬಾಲಯಕ್ಕೆ ತವಾಫ್ ಮತ್ತು ಸಫಾ-ಮರ್ವಾಗಳ ನಡುವೆ ಸಈ ಮಾಡಿದೆ" ಎಂದು ಆಯಿಶ(ರ) ಹೇಳಿದ್ದಾರೆ. ಆದ್ದರಿಂದ, ಹಜ್ಜ್ ಅಥವಾ ಉಮ್ರಕ್ಕಾಗಿ ಇಹ್ರಾಮ್ ಪ್ರವೇಶಿಸಿದ ಮಹಿಳೆಗೆ ತವಾಫ್ ಮಾಡುವುದಕ್ಕೆ ಮೊದಲು ಮುಟ್ಟಾದರೆ, ಅವಳು ಶುದ್ಧಳಾಗಿ, ಸ್ನಾನ ಮಾಡುವ ತನಕ ತವಾಫ್ ಮತ್ತು ಸಈ ನಿರ್ವಹಿಸಬಾರದೆಂದು ಈ ಹದೀಸ್ ಸೂಚಿಸುತ್ತದೆ.
ಆದರೆ ತವಾಫ್ ನಿರ್ವಹಿಸಿದ ಬಳಿಕ ಅವಳಿಗೆ ಮುಟ್ಟು ಪ್ರಾರಂಭವಾದರೆ, ಅವಳು ಮುಟ್ಟಿನ ಸ್ಥಿತಿಯಲ್ಲೇ ಸಈ ನಿರ್ವಹಿಸಿ, ತಲೆಗೂದಲನ್ನು ಗಿಡ್ಡ ಮಾಡಿ ಉಮ್ರಾವನ್ನು ಪೂರ್ಣಗೊಳಿಸಬಹುದು. ಏಕೆಂದರೆ, ಸಫಾ ಮತ್ತು ಉಮ್ರಾಗಳ ನಡುವೆ ಸಈ ಮಾಡಲು ಶುದ್ಧಳಾಗಿರಬೇಕೆಂಬ ಷರತ್ತಿಲ್ಲ.
ನಾನು ಮತ್ತು ನನ್ನ ಪರಿವಾರ ಉಮ್ರಾಕ್ಕಾಗಿ ಯಂಬೂ ದಿಂದ ಹೊರಟೆವು. ಆದರೆ ಜಿದ್ದಾ ತಲುಪಿದಾಗ ನನ್ನ ಹೆಂಡತಿಗೆ ಮುಟ್ಟು ಪ್ರಾರಂಭವಾಯಿತು. ನಾನು ನನ್ನ ಹೆಂಡತಿಯನ್ನು ಬಿಟ್ಟು ಒಂಟಿಯಾಗಿ ಉಮ್ರಾ ಪೂರ್ಣಗೊಳಿಸಿದೆ. ನನ್ನ ಹೆಂಡತಿಯ ವಿಷಯದಲ್ಲಿ ವಿಧಿಯೇನು?
ನಿಮ್ಮ ಹೆಂಡತಿಗೆ ಸಂಬಂಧಿಸಿದಂತೆ ಅವಳು ಶುದ್ಧಳಾಗುವ ತನಕ ಕಾದು ನಂತರ ಉಮ್ರಾ ನಿರ್ವಹಿಸಬೇಕು. ಸಫಿಯ್ಯ(ರ) ರಿಗೆ ಮುಟ್ಟಾದಾಗ ಪ್ರವಾದಿ(ಸ) ರವರು ಕೇಳಿದರು: "ಅವಳು ನಮ್ಮನ್ನು ನಿರ್ಗಮಿಸುವುದರಿಂದ ತಡೆಯುತ್ತಿದ್ದಾಳೆಯೇ?" ಅವರು ಉತ್ತರಿಸಿದರು: "ಅವಳು ತವಾಫುಲ್ ಇಫಾದ ನಿರ್ವಹಿಸಿದ್ದಾರೆ." ಆಗ ಪ್ರವಾದಿ(ಸ) ರವರು ಹೇಳಿದರು: “ಹಾಗಿದ್ದರೆ ಅವರು (ಸಫಿಯ್ಯ) ಇಲ್ಲಿಂದ ಹೊರಡಲಿ.” "ಅವಳು ನಮ್ಮನ್ನು ನಿರ್ಗಮಿಸುವುದರಿಂದ ತಡೆಯುತ್ತಿದ್ದಾಳೆಯೇ?" ಎಂಬ ಪ್ರವಾದಿ(ಸ) ರವರ ಪ್ರಶ್ನೆಯು, ಮಹಿಳೆ ತವಾಫುಲ್-ಇಫಾದ ನಿರ್ವಹಿಸುವುದಕ್ಕೆ ಮೊದಲು ಮುಟ್ಟಾದರೆ, ಶುದ್ಧಳಾಗುವ ತನಕ ಕಾದು ನಂತರ ತವಾಫ್ ನಿರ್ವಹಿಸಬೇಕೆಂದು ಸೂಚಿಸುತ್ತದೆ.
ಉಮ್ರಾದ ತವಾಫ್ ಕೂಡ ತವಾಫುಲ್-ಇಫಾದಕ್ಕೆ ಸಮಾನವಾಗಿದೆ. ಏಕೆಂದರೆ ಅದು ಉಮ್ರಾದ ಒಂದು ಸ್ತಂಭವಾಗಿದೆ. ತವಾಫ್ ನಿರ್ವಹಿಸುವುದಕ್ಕೆ ಮೊದಲು ಮಹಿಳೆಯರಿಗೆ ಮುಟ್ಟು ಪ್ರಾರಂಭವಾದರೆ, ಶುದ್ಧಳಾಗುವ ತನಕ ಕಾದು ನಂತರ ತವಾಫ್ ನಿರ್ವಹಿಸಬೇಕು.
ಸಈ ಮಾಡುವ ಸ್ಥಳ (ಮಸ್ಆ) ಮಸ್ಜಿದುಲ್ ಹರಾಂನ ಭಾಗವೇ? ಅಲ್ಲಿ ಮಹಿಳೆ ತಂಗಬಹುದೇ? ಸಈ ಮಾಡುವ ಸ್ಥಳದಿಂದ ಹರಂ ಪ್ರವೇಶಿಸುವವರು ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸಬೇಕೇ?
ಸಈ ಮಾಡುವ ಸ್ಥಳ ಮಸ್ಜಿದುಲ್ ಹರಾಂನ ಭಾಗವಲ್ಲ ಎಂದು ತೋರುತ್ತದೆ. ಈ ಕಾರಣದಿಂದಲೇ ಅವೆರಡರ ಮಧ್ಯೆ ಒಂದು ಗೋಡೆಯನ್ನು ನಿರ್ಮಿಸಿದ್ದಾರೆ. ಆದರೆ ಆ ಗೋಡೆ ಗಿಡ್ಡವಾಗಿದೆ. ಒಟ್ಟಿನಲ್ಲಿ ಇದೊಂದು ಒಳಿತೆನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇದನ್ನು ಮಸೀದಿಗೆ ಸೇರಿಸಿ, ಅದರ ಭಾಗವೆಂದು ಪರಿಗಣಿಸಿದ್ದರೆ, ತವಾಫ್ ನಿರ್ವಹಿಸಿ ಸಈ ನಿರ್ವಹಿಸುವುದಕ್ಕೆ ಮೊದಲು ಮಹಿಳೆಯರಿಗೆ ಮುಟ್ಟು ಪ್ರಾರಂಭವಾದರೆ, ಅವರು ಸಈ ಮಾಡುವುದಕ್ಕೆ ಇದು ತಡೆಯಾಗುತ್ತಿತ್ತು.
ಈ ಬಗ್ಗೆ ನಾನು ನೀಡುವ ಫತ್ವಾ ಏನೆಂದರೆ, ತವಾಫ್ ನಿರ್ವಹಿಸಿ ಸಈ ನಿರ್ವಹಿಸುವ ಮೊದಲು ಮಹಿಳೆಗೆ ಮುಟ್ಟು ಪ್ರಾರಂಭವಾದರೆ, ಅವಳು ಸಈ ಮಾಡಬಹುದು. ಏಕೆಂದರೆ, ಸಈ ಮಾಡುವ ಸ್ಥಳವು ಮಸೀದಿಯ ಭಾಗವಲ್ಲ.
ತಹಿಯ್ಯತುಲ್-ಮಸ್ಜಿದ್ ನಮಾಝ್ನ ಬಗ್ಗೆ ಹೇಳುವುದಾದರೆ, ಒಬ್ಬ ವ್ಯಕ್ತಿ ತವಾಫ್ ನಿರ್ವಹಿಸಿದ ಬಳಿಕ ಸಈ ನಿರ್ವಹಿಸಿ, ನಂತರ ಮಸೀದಿಗೆ ಮರಳಿದರೆ, ಅವನು ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸಬೇಕು. ಅದನ್ನು ನಿರ್ವಹಿಸದಿದ್ದರೆ ಅದರಲ್ಲೇನೂ ದೋಷವಿಲ್ಲ. ಆದರೆ, ಮಸ್ಜಿದುಲ್ ಹರಾಂನಲ್ಲಿ ನಮಾಝ್ ಮಾಡುವುದಕ್ಕೆ ಬಹಳ ಶ್ರೇಷ್ಠತೆಯಿರುವುದರಿಂದ ಆ ಸಂದರ್ಭವನ್ನು ಸದುಪಯೋಗಪಡಿಸಿ, ಅಲ್ಲಿ ಎರಡು ರಕಅತ್ ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸುವುದು ಉತ್ತಮ.
ನಾನು ಹಜ್ಜ್ಗೆ ಹೋದಾಗ ನನಗೆ ಮುಟ್ಟು ಪ್ರಾರಂಭವಾಯಿತು. ಸಂಕೋಚದಿಂದಾಗಿ ನಾನು ಅದನ್ನು ಯಾರಿಗೂ ಹೇಳದೆ ಮುಚ್ಚಿಟ್ಟೆ. ನಾನು ಹರಮ್ ಪ್ರವೇಶಿಸಿ ನಮಾಝ್ ಮಾಡಿದೆ, ತವಾಫ್ ಮಾಡಿದೆ, ಸಈ ಮಾಡಿದೆ. ನನಗೆ ಮುಟ್ಟು ಉಂಟಾದದ್ದು ಪ್ರಸವಾನಂತರವಾಗಿದೆ. ಹೀಗಿರುವಾಗ ನನ್ನ ವಿಧಿಯೇನು?
ಮುಟ್ಟು ಮತ್ತು ಪ್ರಸವಾನಂತರದ ರಕ್ತಸ್ರಾವವನ್ನು ಹೊಂದಿರುವ ಮಹಿಳೆ ನಮಾಝ್ ಮಾಡುವುದು ನಿಷಿದ್ಧವಾಗಿದೆ. ಅದು ಮಕ್ಕಾದಲ್ಲಿ, ಊರಿನಲ್ಲಿ ಅಥವಾ ಇತರ ಯಾವುದೇ ಸ್ಥಳದಲ್ಲಾದರೂ ಸಹ. ಏಕೆಂದರೆ, ಮಹಿಳೆಯರ ವಿಷಯದಲ್ಲಿ ಪ್ರವಾದಿ(ಸ) ರವರು ಹೇಳುತ್ತಾರೆ: “ಮಹಿಳೆಗೆ ಮುಟ್ಟಾದರೆ ಅವಳು ನಮಾಝ್ ಮತ್ತು ಉಪವಾಸ ತೊರೆಯುತ್ತಾಳಲ್ಲವೇ?” ಮುಟ್ಟಿನಲ್ಲಿರುವ ಮಹಿಳೆ ಉಪವಾಸ ಆಚರಿಸಬಾರದು ಮತ್ತು ನಮಾಝ್ ಮಾಡಬಾರದು ಎಂದು ವಿದ್ವಾಂಸರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಈ ಕೃತ್ಯವನ್ನು ಮಾಡಿದ ಮಹಿಳೆ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಟ್ಟು ಮಾಡಿದ ಕೃತ್ಯಕ್ಕಾಗಿ ಕ್ಷಮೆಯಾಚಿಸಬೇಕು.
ಮುಟ್ಟಿನ ಸಂದರ್ಭದಲ್ಲಿ ಅವಳು ನಿರ್ವಹಿಸಿದ ತವಾಫ್ ಸಿಂಧುವಲ್ಲ. ಆದರೆ ಸಈ ಸಿಂಧುವಾಗಿದೆ. ಪ್ರಬಲ ಅಭಿಪ್ರಾಯದ ಪ್ರಕಾರ ತವಾಫ್ ಮೊದಲು ಸಈ ಮಾಡಬಹುದು. ಆದ್ದರಿಂದ ಅವಳು ಪುನಃ ತವಾಫ್ ನಿರ್ವಹಿಸಬೇಕು. ಏಕೆಂದರೆ ತವಾಫುಲ್ ಇಫಾದ ಹಜ್ಜ್ನ ಒಂದು ಸ್ತಂಭವಾಗಿದೆ. ಅದು ನಿರ್ವಹಿಸದಿದ್ದರೆ ಎರಡನೇ ತಹಲ್ಲುಲ್ (ಇಹ್ರಾಮ್ನಿಂದ ಹೊರಬರುವುದು) ಸಾಧ್ಯವಿಲ್ಲ.
ಆದ್ದರಿಂದ, ಈ ಮಹಿಳೆ ವಿವಾಹಿತೆಯಾಗಿದ್ದರೆ, ಅವಳು ತವಾಫ್ ನಿರ್ವಹಿಸುವ ತನಕ ಅವಳ ಗಂಡ ಅವಳೊಡನೆ ಸಂಭೋಗ ಮಾಡಬಾರದು. ಅವಳು ಅವಿವಾಹಿತೆಯಾಗಿದ್ದರೆ ಅವಳು ತವಾಫ್ ನಿರ್ವಹಿಸುವ ತನಕ ಅವಳು ಮದುವೆಯಾಗಬಾರದು. ಹೆಚ್ಚು ಬಲ್ಲವನು ಅಲ್ಲಾಹು.
ಒಬ್ಬಳು ಮಹಿಳೆಗೆ ಅರಫಾ ದಿನದಂದು (ದುಲ್-ಹಿಜ್ಜ ತಿಂಗಳ 9 ನೇ ದಿನ) ಮುಟ್ಟಾದರೆ ಅವಳು ಏನು ಮಾಡಬೇಕು?
ಒಬ್ಬಳು ಮಹಿಳೆಗೆ ಅರಫಾ ದಿನದಂದು ಮುಟ್ಟಾದರೆ, ಅವಳು ಹಜ್ಜ್ ಕರ್ಮಗಳನ್ನು ಮುಂದುವರಿಸಬೇಕು ಮತ್ತು ಹಾಜಿಗಳು ಮಾಡುವುದೆಲ್ಲವನ್ನೂ ಮಾಡಬೇಕು. ಆದರೆ ಅವಳು ಶುದ್ಧಳಾಗುವ ತನಕ ತವಾಫ್ ಮಾಡಬಾರದು.
ಜಮ್ರತುಲ್ ಅಕಬಕ್ಕೆ ಕಲ್ಲೆಸೆದ ನಂತರ ತವಾಫುಲ್ ಇಫಾದ ನಿರ್ವಹಿಸುವುದಕ್ಕೆ ಮೊದಲು ಒಬ್ಬಳು ಮಹಿಳೆಗೆ ಮುಟ್ಟು ಪ್ರಾರಂಭವಾಯಿತು. ಅವಳು ತನ್ನ ಗಂಡ ಸೇರಿದಂತೆ ಒಂದು ಗುಂಪಿನೊಂದಿಗೆ ಹಜ್ಜ್ ನಿರ್ವಹಿಸಲು ಬಂದಿದ್ದಾಳೆ. ಊರಿಂದ ಪುನಃ ಹಿಂದಿರುಗಿ ಬರುವುದು ಅವಳಿಗೆ ಅಸಾಧ್ಯವಾಗಿದೆ. ಅವಳೇನು ಮಾಡಬೇಕು?
ಊರಿಂದ ಪುನಃ ಹಿಂದಿರುಗಲು ಸಾಧ್ಯವಿಲ್ಲದಿದ್ದರೆ ಅವಳು ಮುಂಜಾಗರೂಕತೆ ವಹಿಸಿ, ಅನಿವಾರ್ಯ ಸಂದರ್ಭದಲ್ಲಿ ನಿರ್ವಹಿಸುವ ತವಾಫ್ ನಿರ್ವಹಿಸಬೇಕು. ಅದರಿಂದ ಏನೂ ದೋಷವಿಲ್ಲ. ನಂತರ ಉಳಿದ ಹಜ್ಜ್ ಕರ್ಮಗಳನ್ನು ನಿರ್ವಹಿಸಬಹುದು.
ಪ್ರಸವಾನಂತರದ ಸ್ರಾವದಲ್ಲಿರುವ ಮಹಿಳೆ ನಲ್ವತ್ತು ದಿನಗಳಿಗೆ ಮೊದಲು ಶುದ್ಧಳಾದರೆ, ಅವಳ ಹಜ್ಜ್ ಸಿಂಧುವಾಗುವುದೇ? ಅವಳು ಶುದ್ಧಿಯನ್ನು ಕಾಣದಿದ್ದರೆ ಏನು ಮಾಡಬೇಕು? ವಿಶೇಷವಾಗಿ ಅವಳು ಹಜ್ಜ್ ನಿರ್ವಹಿಸುತ್ತೇನೆಂದು ನಿಯ್ಯತ್ ಮಾಡಿರುವಾಗ?
ಪ್ರಸವಾನಂತರದ ಸ್ರಾವದಲ್ಲಿರುವ ಮಹಿಳೆ ನಲ್ವತ್ತು ದಿನಗಳಿಗೆ ಮೊದಲು ಶುದ್ಧಳಾದರೆ, ಅವಳು ಸ್ನಾನ ಮಾಡುವುದು, ನಮಾಝ್ ನಿರ್ವಹಿಸುವುದು, ತವಾಫ್ ಮಾಡುವುದು ಮುಂತಾದವುಗಳು ಸೇರಿದಂತೆ ಶುದ್ಧಿಯಲ್ಲಿರುವ ಮಹಿಳೆಯರು ಮಾಡುವುದೆಲ್ಲವನ್ನೂ ಮಾಡಬಹುದು. ಏಕೆಂದರೆ ಪ್ರಸವಾನಂತರದ ರಕ್ತಸ್ರಾವಕ್ಕೆ ಇಂತಿಷ್ಟು ದಿನಗಳನ್ನು ನಿಗದಿಪಡಿಸಲಾಗಿಲ್ಲ.
ಆದರೆ ಅವಳು ಶುದ್ಧಳಾಗದಿದ್ದರೂ ಅವಳ ಹಜ್ಜ್ ಸಿಂಧುವಾಗಿದೆ. ಆದರೆ ಶುದ್ಧಳಾಗುವ ತನಕ ಅವಳು ತವಾಫ್ ಮಾಡಬಾರದು.
*
Related books
All books
من أحكام الصيام
ಹದೀ, ಉದ್ಹಿಯ್ಯ ಮತ್ತು ತದ್ಕಿಯಾದ ನಿಯಮಗಳು26 ಭಾಷೆಗಳುಹದೀ, ಉದ್ಹಿಯ್ಯ ಮತ್ತು ತದ್ಕಿಯಾದ ನಿಯಮಗಳು
ಇದು ಹದೀ (ಬಲಿಮೃಗ), ಉದ್ಹಿಯ್ಯ (ಕುರ್ಬಾನಿ) ಮತ್ತು ತದ್ಕಿಯಾದ (ಇಸ್ಲಾಮೀ ವಧೆ) ನಿಯಮಗಳ ಒಂದು ಸಂಕ್ಷಿಪ್ತ ಕೈಪಿಡಿಯಾಗಿದ್ದು, ಇದು ಈ ವಿಷಯಗಳ ಬಗ್ಗೆ ಮುಸ್ಲಿಮನಿಗೆ ಅಗತ್ಯವಿರುವ ಪ್ರಮುಖ ನಿಯಮಗಳನ್ನು ಒಳಗೊಂಡಿದೆ. ಇದರಿಂದ ಮುಸ್ಲಿಮನು ತನ್ನ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಲು ಸಾಧ್ಯವಾಗುತ್ತದೆ.
ನನ್ನನ್ನು ಯಾರು ಸೃಷ್ಟಿಸಿದರು? ಮತ್ತು ಏಕೆ?75 ಭಾಷೆಗಳುನನ್ನನ್ನು ಯಾರು ಸೃಷ್ಟಿಸಿದರು? ಮತ್ತು ಏಕೆ?
ಪ್ರತಿಯೊಂದು ವಸ್ತುವು ಸೃಷ್ಟಿಕರ್ತನ ಅಸ್ತಿತ್ವವನ್ನು ಸೂಚಿಸುತ್ತದೆ. ಯಾರು ಆಕಾಶ ಮತ್ತು ಭೂಮಿಯನ್ನು ಮತ್ತು ಅದರಲ್ಲಿರುವ ಎಲ್ಲಾ ದೊಡ್ಡ ಜೀವಿಗಳನ್ನು ಸೃಷ್ಟಿಸಿದರು? ಭೂಮಿ ಮತ್ತು ಆಕಾಶದಲ್ಲಿ ಸೂಕ್ಷ್ಮ ಹಾಗೂ ನಿಖರವಾದ ವ್ಯವಸ್ಥೆಯನ್ನು ರಚಿಸಿದವರಾರು? ಮನುಷ್ಯನನ್ನು ಸೃಷ್ಟಿಸಿದವರಾರು, ಅವನಿಗೆ ಶ್ರವಣ, ದೃಷ್ಟಿ ಮತ್ತು ಬುದ್ಧಿವಂತಿಕೆಯನ್ನು ನೀಡಿದವರಾರು ಮತ್ತು ಅವನಿಗೆ ಜ್ಞಾನವನ್ನು ಪಡೆಯಲು ಮತ್ತು ಸತ್ಯತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದವರಾರು? ನಿಮ್ಮ ದೇಹ ಮತ್ತು ಇತರ ಜೀವಿಗಳ ದೇಹದಲ್ಲಿರುವ ನಿಖರವಾದ ರಚನೆಗಳನ್ನು ನೀವು ಹೇಗೆ ವಿವರಿಸುತ್ತೀರಿ? ಈ ರಚನೆಗಳನ್ನು ಯಾರು ಸೃಷ್ಟಿಸಿದರು? ಈ ಮಹಾನ್ ಪ್ರಪಂಚವು ನಿಖರವಾಗಿ ನಿಯಂತ್ರಿಸುವ ತನ್ನ ನಿಯಮಗಳೊಂದಿಗೆ ಇಷ್ಟು ವರ್ಷಗಳವರೆಗೆ ಕ್ರಮಬದ್ಧವಾಗಿ ಮತ್ತು ಸ್ಥಿರವಾಗಿ ಹೇಗೆ…
ಇಸ್ಲಾಮ್89 ಭಾಷೆಗಳುಇಸ್ಲಾಮ್
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ನೀವು ಸ್ವತಃ ನಿಮ್ಮನ್ನು ಪ್ರಶ್ನಿಸಿದ್ದೀರಾ: ಆಕಾಶಗಳು ಮತ್ತು ಭೂಮಿ ಹಾಗು ಅವುಗಳ ಮಧ್ಯೆ ಇರುವ ಮಹಾನ್ ಸೃಷ್ಟಗಳ ಸೃಷ್ಟಿಕರ್ತ ಯಾರು? ಮತ್ತು ಈ ನಿಖರವಾದ ವ್ಯವಸ್ಥೆಯನ್ನು ರಚಿಸಿದವರು ಯಾರು?